ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರವಿ.ವಿಠ್ಠಲ.ಆಲಬಾಳ.

Diwali, Diya, Deepawali, Deepavali, Lamp

ಬರೀ ಬತ್ತಿ ಬೇಕಾಗುವುದಿಲ್ಲ ದೀಪ ಬೆಳಗಲು
ಬರೀ ನೇಹ ಸಾಕಾಗುವುದಿಲ್ಲ ದೀಪ ಬೆಳಗಲು.

ಕಡ್ಡಿ ಗೀರಿ ಸುಮ್ಮನಿರಬೇಡಿ ಒಂದು ದೀಪಕ್ಕೆ
ನಿಮ್ಮ ಕೈಗಳಷ್ಟೇ ಆಸರೆಯಲ್ಲ ದೀಪ ಬೆಳಗಲು.

ಉರಿಯುವ ದೀಪಕೂ ಗಾಳಿಯ ಅಗತ್ಯವಿದೆ
ಶ್ವಾಸಕೋಶ ಅದಕ್ಕೂಇದೆಯಲ್ಲ ದೀಪ ಬೆಳಗಲು

ಮನಸಿನ ಭಾವಗಳಲ್ಲಿ ತಮವೇ ತುಂಬದಿರಲಿ
ಸಂಬಂಧದ ಕೊಂಡಿ ಬೇಕೇಬೇಕಲ್ಲ ದೀಪ ಬೆಳಗಲು

ಸುಮ್ಮನೇ ದೀಪ ಹಚ್ಚಿ ದೀಪಾವಳಿ ಎಂದರಾಯಿತೆ?
ಮನೆಮನೆಯಲಿ ಸುಖ ಇರಬೇಕಲ್ಲ ದೀಪ ಬೆಳಗಲು.

ರವೀ, ಜೀವನದ ಹೆಜ್ಜೆಗುರುತನೆಂದೂ ಮರೆಯಬೇಡ
ಒಂದಿನವಾದರೂ ನಾವು ಗೆಲ್ಲಲೇಬೇಕಲ್ಲ ದೀಪ ಬೆಳಗಲು

*******************

About The Author

Leave a Reply

You cannot copy content of this page

Scroll to Top