ಅಂಕಣ ಬರಹ ಕಣ್ಣು-ಕಣ್ಕಟ್ಟು ರೋಣ ತಾಲೂಕಿನ ಗಜೇಂದ್ರಗಡಕ್ಕೆ ಗೆಳೆಯರ ಭೇಟಿಗೆಂದು ಹೊರಟಿದ್ದೆ. ಹಾದಿಯಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟಹಳ್ಳಿ ನೆಲಜೇರಿ ಎಡತಾಕಿತು. ಗೋಧಿ ಉಳ್ಳಾಗಡ್ಡೆ ಸುರೇಪಾನ ಮೆಣಸು ಮೊದಲಾಗಿ ಮಳೆಯಾಶ್ರಯದ ಪೀಕು ತೆಗೆಯುವ ಎರೆಸೀಮೆಯಿದು. ಹೆಚ್ಚಿನ ತರುಣರು ಕೊಪ್ಪಳದ ಬಗಲಲ್ಲಿ ಬೀಡುಬಿಟ್ಟಿರುವ ಉಕ್ಕಿನ ಕಾರ್ಖಾನೆಗಳಿಗೆ ದಿನಗೂಲಿಗಳಾಗಿ ಹೋಗುತ್ತಾರೆ. ನೆಲಜೇರಿ ಆರ್ಥಿಕವಾಗಿ ಬಡಕಲಾದರೂ ಸಾಂಸ್ಕøತಿಕವಾಗಿ ಸಮೃದ್ಧ ಹಳ್ಳಿ. ಈ ವೈರುಧ್ಯ ಉತ್ತರ ಕರ್ನಾಟಕದ ಬಹಳಷ್ಟು ಹಳ್ಳಿಗಳ ಲಕ್ಷಣ. ನೆಲಜೇರಿಯ ತಟ್ಟಿ ಹೋಟೆಲಿನಲ್ಲಿ ಚಹಾಪಾನ ಮಾಡುತ್ತ ಇಲ್ಲಿ ಯಾರಾದರೂ ಜನಪದ ಗಾಯಕರು ಇದ್ದಾರೆಯೇ ಎಂದು ಕೇಳಿದೆ. ಅಲ್ಲೊಬ್ಬ ಮೂಲೆಯಲ್ಲಿ ಟೀಯನ್ನೂ ಬೀಡಿಯನ್ನೂ ಒಟ್ಟಿಗೆ ಸವಿಯುತ್ತ ಕಾಲುಚಾಚಿ ಕುಳಿತವನು ಅವಸರವಿಲ್ಲದ ದನಿಯಲ್ಲಿ `ಅದಾನಲ್ಲ ಅಂದಾನಪ್ಪ. ರಿವಾಯತ್ ಪದ ಜಗ್ಗಿ ಹಾಡ್ತಾನ’ ಎಂದನು. ಅಂದಾನಪ್ಪನವರನ್ನು ನೋಡೋಣವೆಂದು ಮನೆಗೆ ಹೋದರೆ ಹೊಲಕ್ಕೆ ಹೋಗಿದ್ದರು. ಅವರು ಬರುವವರೆಗೆ ಜಗುಲಿಯಲ್ಲೇ ಬೀಡುಬಿಟ್ಟೆ. ಒಕ್ಕಲುತನದ ಹಳೇ ಮಾಳಿಗೆಮನೆ. ಹೊರಬಾಗಿಲ ಆಜುಬಾಜು ದೊಡ್ಡದಾದ ಎರಡು ಜಗುಲಿ. ಅವುಗಳ ಮೇಲೆ ಚೀಲಗಳಲ್ಲಿ ದವಸ. ಅವುಗಳ ಬದಿಗೆ ಕೌದಿಹಾಸಿ ದಿಂಬಿಟ್ಟು ಯಜಮಾನ ಕೂರಲು ಸಿದ್ಧಗೊಳಿಸಿದ ಆಸನ. ಗೋಡೆಯ ಮೇಲೆ ದಿವಂಗತರಾದ ಕುಟುಂಬದ ಹಿರಿಯರ ಪಟಗಳು. ಅವಕ್ಕೆ ಹುಲಿಯು ಪಂಜದಿಂದ ಗೆಬರಿದಂತೆ ಎಳೆದಿರುವ ವಿಭೂತಿ ಪಟ್ಟೆ. ಮನೆಯೊಳಗೆ ಇಣುಕಿದರೆ, ಸಿನುಗು ವಾಸನೆಯ ದನದ ಕೊಟ್ಟಿಗೆ. ತಾಯಿ ಮೇಯಲು ಹೋಗಿರುವುದರಿಂದ ಒಂಟಿಯಾಗಿದ್ದು ಅಂಬಾ ಎನ್ನುತ್ತಿರುವ ಎಳೆಗರು. ಅಟ್ಟಕ್ಕೆ ಕಟ್ಟಿರುವ ಉಳ್ಳಾಗಡ್ಡಿ ಬೆಳ್ಳುಳ್ಳಿ ಸಿವುಡು; ಒಣಗಿದ ಹೀರೇಕಾಯಿ ಗೊಂಚಲು. ಕೊಟ್ಟಿಗೆಯ ಬಳಿಕ ತುಸು ಎತ್ತರದಲ್ಲಿ ಮಬ್ಬು ಬೆಳಕಿನಲ್ಲಿ ಕಾಣುವ ಉಣ್ಣುವ ಜಗುಲಿ. ನಂತರ ಹೊಗೆಯಿಂದ ಕಪ್ಪಗಾಗಿ ಇದ್ದಬದ್ದ ಬೆಳಕನೆಲ್ಲ ಕುಡಿದು ಮತ್ತಷ್ಟು ಕತ್ತಲಾಗಿರುವ ಅಡುಗೆಕೋಣೆ. ಹೀಗೆ ಪಂಚೇಂದ್ರಿಯಗಳಿಗೆ ಕೆಲಸ ಹಚ್ಚಿ ಆರಾಮಾಗಿ ಕೂತಿರುವಾಗ ಅಂದಾನಪ್ಪನವರ ಸವಾರಿ ಬಂತು. ಆರಡಿ ಎತ್ತರದ 75 ವರ್ಷದ ಹಿರಿಯ. ದಪ್ಪನೆಯ ಬಿಳಿಪಟಗ ಎದ್ದು ಕಾಣುತ್ತಿತ್ತು. ಕೈಬೆರಳು ಕುಷ್ಠದಿಂದ ಕರಗಿಹೋಗಿದ್ದರೂ ಮೋಟು ಬೆರಳಲ್ಲಿ ಸೈಕಲ್ ಹ್ಯಾಂಡಲನ್ನು ಹಿಡಿದು, ಬೀದಿಗೆ ಬೈತಲೆ ತೆಗೆದಂತೆ ಹರಿದ ಬಚ್ಚಲು ನೀರಿನ ಅಂಕುಡೊಂಕುಗಳಲ್ಲಿ ಬೀಳದಂತೆ ಸವಾರಿಸುತ್ತ ಬಂದರು. ಅಂಗಳದಲ್ಲಿ ನಿಂತ ಕಾರು ಅವರಿಗೆ ಗಲಿಬಿಲಿ ತಂದಂತಿತ್ತು. ನಮಸ್ಕಾರ ಮಾಡಿ ಭೇಟಿಯ ಉದ್ದೇಶ ತಿಳಿಸಿದೆ. ತನ್ನ ಹಾಡುಪ್ರತಿಭೆಗೆ ಪರಸ್ಥಳದ ಜನ ಬಂದಿರುವುದು ಅರಿತು ಮುಖದಲ್ಲಿ ಅಭಿಮಾನ ಮೂಡಿದಂತೆ ತೋರಿತು. ಲಗುಬಗೆಯಿಂದ ಅಡುಗೆ ಮನೆಯೊಳಗೆ ನುಗ್ಗಿ ಬಿಸಿರೊಟ್ಟಿ ಮಾಡಲು ಹೇಳಿದರು. ದೊಡ್ಡ ಚರಿಗೆಯಲ್ಲಿ ಮುಂಜಾನೆಯಷ್ಟೆ ಕಡೆದ ಮಜ್ಜಿಗೆ ತಂದುಕೊಟ್ಟರು. ಹಳತಾದ ನೋಟುಬುಕ್ಕನ್ನು ನಾಗಂದಿಯ ಮೇಲಿಂದ ತೆಗೆದು, ಧೂಳು ಝಾಡಿಸಿ, ಅದರಲ್ಲಿದ್ದ ರಿವಾಯತ್ ಪದವನ್ನು ಹಾಡಲು ಶುರುಮಾಡಿದರು. ಅವರ ಭಾರಿಕಾಯದೊಳಗೆ ಈ ಹೆಣ್ದನಿ ಹೇಗಾದರೂ ಅಡಗಿಕೊಂಡಿದೆಯೊ ಎಂದು ಅಚ್ಚರಿಸುತ್ತಿದ್ದ ನನಗೆ ಪೈಲವಾನರಂತಿರುವ ಬಡೇಗುಲಾಮಲಿ ಖಾನರು ಜೇನಲ್ಲಿ ಅದ್ದಿತೆಗೆದಂತೆ ಹಾಡಿದ `ಕ್ಯಾಕರ್ಞೂ ಸಜನೀ ಸಾಜನ್ ನ ಆವೆ’ ಠುಮ್ರಿಯ ನೆನಪಾಯಿತು. ರಿವಾಯತ್ ಹಾಡಿಕೆಯಲ್ಲಿ ಹಿಮ್ಮೇಳವಿದ್ದರೇ ಚಂದ. ಒಂಟಿದನಿ ಬೇಗ ದಣಿಯುತ್ತದೆ. ಅಂದಾನಪ್ಪ ಎರಡು ಹಾಡಿಗೆ ನಿಲ್ಲಿಸಿದರು. ಕೆಲವೇ ತಿಂಗಳುಗಳಲ್ಲಿ ತಮ್ಮೂರಿನಲ್ಲಿ ರಾಜಪ್ಪಸ್ವಾಮಿಯ ಉರುಸು ನಡೆಯಲಿದೆಯೆಂದೂ, ಅಲ್ಲಿ ಕೊಪ್ಪಳ ಸೀಮೆಯ ಬಹುತೇಕ ಗಾಯಕರು ಸೇರುವರೆಂದೂ ಆಗ ಖಂಡಿತ ಬರಬೇಕೆಂದೂ ತಿಳಿಸಿದರು. ಇದಾದ ಐದಾರು ತಿಂಗಳಿಗೆ ಅಂದಾನಪ್ಪನವರ ಫೋನು ಬಂತು. ಉರುಸು ಫಲಾನೆ ದಿನವಿದೆಯೆಂದೂ ತಪ್ಪದೇ ಬರಬೇಕೆಂದೂ ಊಟ ವಸತಿಗೆ ಚಿಂತೆ ಮಾಡಬಾರದೆಂದೂ ತಿಳಿಸಿದರು. ಸ್ಕೂಟರಿನಲ್ಲಿ ಹೋದೆ. ಸಂಜೆಯಾಗಿತ್ತು. ಸುತ್ತಮುತ್ತಲ ಗ್ರಾಮದವರು ಓದಿಕೆ ಮಾಡಿಸಿಕೊಂಡು ಕೈಯಲ್ಲಿ ವಸ್ತ್ರಹೊದಿಸಿದ ಪ್ರಸಾದದ ತಟ್ಟೆ ಹಿಡಿದು ಗುಂಪಾಗಿ ಮನೆಗೆ ಮರಳುತ್ತಿದ್ದರು. ಅಂದಾನಪ್ಪ, ಹೆಸರಿಗೆ ತಕ್ಕಂತೆ ಅನ್ನದಾನಿ. ಶಿಷ್ಯನ ಮನೆಯಲ್ಲಿ ಬಿಸಿರೊಟ್ಟಿ ಮೊಸರು ಬದನೆಪಲ್ಯ ಮಾಲ್ದಿಯಿರುವ ಊಟ ಹಾಕಿಸಿದರು. ರಾತ್ರಿ ಹತ್ತಕ್ಕೆ ಮೆರವಣಿಗೆ ಕುರುಬರ ಮನೆಯಿಂದ ರಾಜಪ್ಪನ ದರ್ಗಾಕ್ಕೆ ಹೊರಟಿತು. ಅದರ ಮುಂದೆ ಮನೆಯ ಹಿರೀಕರೊಬ್ಬರು ಮೈದುಂಬಿದ್ದರು. ಅವರ ಜತೆ ಬೇಡ ಸಮುದಾಯಕ್ಕೆ ಸೇರಿದ ಹನುಮಂತದೇವರ ಗುಡಿಯ ಪೂಜಾರಿ ಜತೆಗೂಡಿದನು. ಮೆರವಣಿಗೆಯಲ್ಲಿ ಮುಸ್ಲಿಮರನ್ನೂ ಒಳಗೊಂಡಂತೆ ಊರಿನ ಎಲ್ಲ ಜಾತಿ ಸಮುದಾಯಗಳಿಗೆ ಸೇರಿದ್ದರು. ಅಂದಾನಪ್ಪನವರು ದೊಡ್ಡದೊಂದು ಕೋಲಿನ ತುದಿಗೆ ಹಾಡುಗಾರರಿಗೆ ಕೊಡುವ ಬಹುಮಾನದ ಬೆಳ್ಳಿಬಳೆಗಳನ್ನು ಸಿಕ್ಕಿಸಿಕೊಂಡು ಮುಂಚೂಣಿಯಲ್ಲಿದ್ದರು. ಮೆರವಣಿಗೆ ಹಿಂಭಾಗದಲ್ಲಿ `ಕಂದೂರಿ’ಗೆ ಬಲಿಯಾಗಲಿರುವ ಕುರಿಗಳನ್ನು ಹಿಡಿದುಕೊಂಡು ಬರುತ್ತಿದ್ದ ಭಕ್ತರ ಸೈನ್ಯವೇ ಇತ್ತು.ಊರಹೊರಗೆ ದೊಡ್ಡ ಬಯಲಿನಲ್ಲಿ ಮರಗಳ ಗುಂಪಿನ ನಡುವೆ ರಾಜಪ್ಪಜ್ಜನ ಸಮಾಧಿಯಿದೆ. ಅದು ಸೂಫೀ ಗೋರಿಯಂತೆ ಉತ್ತರ ದಕ್ಷಿಣಮುಖಿಯಾಗಿದೆ. ಒಬ್ಬ ಮುಜಾವರ್ ಅಲ್ಲಿ ಫಾತೆಹಾ ನೆರವೇರಿಸುತ್ತಿದ್ದನು. ರಾಜಪ್ಪಜ್ಜನ ಪುಣ್ಯತಿಥಿಗೆ `ಉರುಸು’ ಎಂದು ಕರೆಯುವುದರಿಂದ, ಇದು ಸೂಫಿಸಂತನಿಗೆ ಸಂಬಂಧಪಟ್ಟಿದ್ದು ಎಂದು ನನ್ನ ಊಹೆಯಾಗಿತ್ತು. ಆದರೆ ರಾಜಪ್ಪಜ್ಜ ಎಂಬತ್ತು ವರ್ಷಗಳ ಹಿಂದೆ ಬದುಕಿದ್ದ ಆರೂಢನಾಗಿದ್ದರು. ಹಿಂದುಳಿದ ಜಾತಿಗೆ ಸೇರಿದ್ದ ಆತನ ಶಿಷ್ಯರಲ್ಲಿ ಹೆಚ್ಚಿನವರು ದಲಿತರಾಗಿದ್ದು, ಅವರ ಸಮಾಧಿಗಳು ಆಸುಪಾಸಿನಲ್ಲಿದ್ದವು. ರಾಜಪ್ಪಜ್ಜನ ಸಮಾಧಿ ಪೌಳಿದ್ವಾರದಲ್ಲಿ ಮೊಹರಂ ಚಿಹ್ನೆಗಳಾದ ಹುಲಿ ಹಾಗೂ ಹಸ್ತದ ಚಿತ್ರಗಳೂ ಇವುಗಳ ಜತೆ ಗಣಪತಿ ಹಾಗೂ ಹನುಮಂತನ ಚಿತ್ರಗಳೂ ಬರೆಯಲ್ಪಟ್ಟಿದ್ದವು. ಅಂದು ನಡೆಯಲಿದ್ದ ರಿವಾಯತ್ ಪದಗಳ ಹಾಡಿಕೆ ಸಹ ಮೊಹರಂ ಸಂಪ್ರದಾಯಕ್ಕೆ ಸೇರಿತ್ತು. ರಾತ್ರಿ ಹತ್ತರ ಸುಮಾರಿಗೆ ಗಾಯಕರು ಕಲೆತರು. ಕಂಬಕ್ಕೆ ಕಟ್ಟಿದ ಮೈಕಿನ ಸುತ್ತ ಗಾಯಕರು ತಮ್ಮ ಮೇಳದ ಜತೆ ಪ್ರದಕ್ಷಿಣೆ ಹಾಕುತ್ತ ಹಾಡಿದರು. ಹಾಡಿಕೆ ಬೆಳಗಿನ ಜಾವಕ್ಕೆ ಮುಗಿಯಿತು. ಚೀಲ ಚಾಪೆ ಹಾಸಿಕೊಂಡು ಕೌದಿ ಹೊದ್ದು ಕುಳಿತ ಜನ ಕೇಳಿತು. ಗಾಯಕರನ್ನು ಹಾಡಲು ಕರೆಯುವುದು, ಚೆನ್ನಾಗಿ ಹಾಡಿದಾಗ ಉತ್ತೇಜಿಸುವುದು, ಗೆದ್ದವರಿಗೆ ಬೆಳ್ಳಿಯ ಬಳೆ ಬಹುಮಾನವಾಗಿ ಕೊಡುವುದು ಮುಂತಾದ ಕಾರ್ಯಗಳನ್ನು ಅಂದಾನಪ್ಪ ಹರೆಯದವರಂತೆ ಓಡಾಡುತ್ತ ಮಾಡಿದರು. ಉರುಸಿನ ವಿಶೇಷ `ಕಂದೂರಿ’ ಎನ್ನಲಾಗುವ ಮಾಂಸದೂಟ. ರಾತ್ರಿ ಹತ್ತರ ಸುಮಾರಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದ ಕುರಿಗಳನ್ನು ಮುಲ್ಲಾ ಹಲಾಲ್ ಮಾಡಿದನು. ಅವನ್ನು ಜನ ಬೀಡುಬಿಟ್ಟಲ್ಲೆ ದೊಂದಿಯ ಗ್ಯಾಸ್‍ಲೈಟಿನ ಬೆಳಕಲ್ಲಿ ಹಸಿಗೆ ಮಾಡಿದರು. ನಡುರಾತ್ರಿಯ ಹೊತ್ತಿಗೆ ಅಡುಗೆ ಶುರುವಾಯಿತು. ಇಡೀ ಬಯಲು ಒಲೆಗಳ ಬೆಂಕಿಯಿಂದ ಬೀಡುಬಿಟ್ಟ ಸೈನಿಕ ಶಿಬಿರವಾಯಿತು. ಬೆಳಗಿನ ಜಾವ ಪೂಜಾರಿ ಮೈದುಂಬಿ ವರ್ಷದ ಮಳೆಬೆಳೆಯ ಕಾರ್ಣೀಕ ಹೇಳಿದನು. ಇದಾದ ಬಳಿಕ ಊಟ ಶುರು. ಜಾತ್ರೆಗೆ ಬಂದವರನ್ನು ಎಲ್ಲರೂ ಕರೆದು ಉಣ್ಣಿಸುವವರೇ. ಮಾಡಿದ ಅಡುಗೆ ಬೆಳಕು ಕಣ್ಬಿಡುವ ಮೊದಲು ಖಾಲಿಯಾಗಬೇಕು. ಮನೆಗೆ ಒಯ್ಯುವಂತಿಲ್ಲ. ಊಟದ ಜತೆ ಉರುಸು ಮುಕ್ತಾಯ ಕಂಡಿತು. ಜನ ಟಂಟಂ, ಬಂಡಿಗಳಲ್ಲಿ ಊರುಗಳಿಗೆ ತೆರಳಿದರು. ಬಿಸಿಲೇರುವ ಹೊತ್ತಿಗೆ ದರ್ಗಾ ನಿರ್ಜನವಾಯಿತು. ನೇಲಜೇರಿಯಲ್ಲಿ ಉರಿಸಿದೆ, ಸೂಫಿ ಪರಂಪರೆಯಿಲ್ಲ; ರಿವಾಯತ್ ಹಾಡಿನ ಪರಂಪರೆಯಿದೆ, ಮೊಹರಂ ಅಲ್ಲ; ಮುಸ್ಲಿಮರ ಭಾಗವಹಿಸುವಿಕೆಯಿದೆ, ಸಾಂಪ್ರದಾಯಿಕ ಇಸ್ಲಾಮಲ್ಲ; ಹತ್ತಕ್ಕೆ ಒಂಬತ್ತರÀಷ್ಟು ಹಿಂದುಗಳ ಭಾಗವಹಿಸುವಿಕೆಯಿದೆ, ಜಾತ್ರೆಯಲ್ಲ; ಅವಧೂತ ಪರಂಪರೆಯ ಲಕ್ಷಣಗಳಿವೆ, ಗುರುದೀಕ್ಷೆ ಕೊಡುವ ಪದ್ಧತಿಯಿಲ್ಲ; ಹಾಗಾದರೆ ಇದನ್ನು ಯಾವ ಧರ್ಮ ಅಥವಾ ಪಂಥದ ಚೌಕಟ್ಟಿನಲ್ಲಿಟ್ಟು ನೋಡುವುದು? ನಿರ್ದಿಷ್ಟ ಚೌಕಟ್ಟಿನಲ್ಲಿಟ್ಟು ನೋಡುವ ಅಥವಾ ಅದಕ್ಕೆ ಹೆಸರು ಕೊಡುವ ತುರ್ತು ಉರುಸಿನಲ್ಲ್ಲಿ ಭಾಗವಹಿಸಿದ ಯಾರಲ್ಲೂ ಇರಲಿಲ್ಲ. ಅವರಿಗೆ ತಾವು ಮಾಡುವ ಉರುಸು, ಹಾಡುವ ಹಾಡು, ಉಣ್ಣುವ ಊಟ ಯಾವ ಧರ್ಮಕ್ಕೆ ಸಂಬಂಧಿಸಿದವು ಎಂಬುದು ಪ್ರಶ್ನೆಯಾಗಿ ಕಾಡದಿರುವಾಗ, ನನಗೇಕೆ ಚೌಕಟ್ಟಿನ ಪ್ರಶ್ನೆ ಕಾಡುತ್ತಿದೆ? ಯಾವುದೇ ಧಾರ್ಮಿಕ ಆಚರಣೆಯನ್ನು ಈಗಾಗಲೇ ನಿರ್ವಚನಗೊಂಡಿರುವ ಜಾತಿ ಧರ್ಮ ಇಲ್ಲವೇ ಪಂಥದ ಚೌಕಟ್ಟಿನಲ್ಲಿ ಇಟ್ಟುನೋಡಬೇಕು ಎಂಬುದು ನನ್ನ ಬೌದ್ಧಿಕ ತುರ್ತೇ? ನೆಲಜೇರಿಯ ಉರುಸು ತನಗೆ ತಾನೇ ಸ್ಥಳೀಯವಾಗಿ ರೂಪುಗೊಂಡಿರುವ ಜನತೆಯ ಧರ್ಮ. ಇದರಲ್ಲಿ ಸೂಫಿಗಳ ಅವಧೂತರ ಮೊಹರಮ್ಮಿನ ಇಸ್ಲಾಮಿನ ಚಹರೆಗಳೆಲ್ಲ ಸಹಜವಾಗಿ ಒಗ್ಗೂಡಿವೆ. ಇಂತಹ ಅನೇಕ ತಾಣ ಮತ್ತು ಸಮುದಾಯಗಳು ನಾಡಲ್ಲಿವೆ. ಈ ಲೋಕಗಳನ್ನು ಅರಿಯಲು ಸದ್ಯ ಚಾಲ್ತಿಯಲ್ಲಿರುವ ಚೌಕಟ್ಟು ಸಾಲುವುದಿಲ್ಲ. ರಾಜಕೀಯವಾಗಿ ಧರ್ಮವನ್ನು ನೋಡಲು ರೂಪುಗೊಂಡಿರುವ ಕಣ್ಕಟ್ಟುಗಳಂತೂ ಯಾತಕ್ಕೂ ಬಾರವು. ಈ ಲೋಕಗಳನ್ನು ನೋಡಲು ತೆರೆದಮನಸ್ಸಿನ ಕಣ್ಣನ್ನು ಪಡೆದುಕೊಳ್ಳುವ ಅಗತ್ಯವಿದೆ. ಹಿಂದೆ ಕಲಿತಿದ್ದನ್ನು ಮಾತ್ರ ನೋಡುವ ಕಣ್ಕಟ್ಟುಗಳನ್ನಲ್ಲ. ಹಂಪಿಗೆ ತೆರಳುವ ಮುನ್ನ ಅಂದಾನಪ್ಪನವರಿಗೆ ವಿದಾಯ ಹೇಳಲೆಂದು ಹುಡುಕಿದೆ. ಜಂಗುಳಿಯಲ್ಲಿ ಸಿಗಲಿಲ್ಲ. ಅವರ ಮನೆಗೆ ಬಂದು ಕೇಳಿದೆ. ಅಷ್ಟುಹೊತ್ತಿಗೆ ಅವರು ಸೈಕಲ್ ಹತ್ತಿ ಹೊಲಕ್ಕೆ ಹೋಗಿಬಿಟ್ಟಿದ್ದರು. **************************** ರಹಮತ್ ತರೀಕೆರೆ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಮರಳಿ ತವರಿಗೆ
ಸಣ್ಣ ಕಥೆ ಮರಳಿ ತವರಿಗೆ ನಾಗರಾಜ್ ಹರಪನಹಳ್ಳಿ ಕರೋನಾ ಕಾರಣವಾಗಿ ತವರು ಮನೆಗೆ ಕೊಲ್ಲಾಪುರ ದಿಂದ ಬಂದಿದ್ದ ರೋಶನಿ ತನ್ನೆರಡು ಮಕ್ಕಳೊಂದಿಗೆ ಹೈಸ್ಕೂಲ್ ಗೆಳತಿ ಶರ್ಮಿತಾಳನ್ನು ಕಾಣಲು ಹೊರಟಳು.ಮಲೆ ನಾಡಿನ ಒಂಟಿ ಮನೆಗಳು ಅಡಿಕೆ ತೆಂಗು ಹಾಗೂ ಕಾಡಿನ ಮರಗಳ ಮಧ್ಯೆ ಅಡಗಿರುವುದೇ ಹೆಚ್ಚು. ಶರ್ಮಿತಾಳ ತಾಯಿ ಮನೆ ಎದುರು ದನಗಳಿಗೆ ಕರಡ ಬೆಳೆಯಲು ಬಿಟ್ಟಿದ್ದ ಬಯಲು ಭೂಮಿ , ಜೂನ್ ತಿಂಗಳು ಎರಡು ವಾರ ಸುರಿದ ಮಳೆಯ ಕಾರಣ , ಅದಾಗಲೇ ಹಸಿರಾಗಿ ಇತ್ತು. ಮೊದಲ ಮಹಡಿಯ ಮೇಲಿನ ಕಾರಿಡಾರ್ ನಿಂದ ತನ್ನ ಮನೆಯತ್ತ ಹೆಣ್ಮಗಳೊಬ್ಬಳು ಮಕ್ಕಳೊಂದಿಗೆ ಬರುತ್ತಿರುವುದ ಗಮನಿಸಿ, ‘ ಆಯಿ , ಯಾರೋ ನೆಂಟರು ಬಂದ್ರೆ’ ಅಂತ ಕೂಗಿ ಸೂಚನೆ ಕೊಟ್ಟಳು. ಮನೆಯಿಂದ ಹೊರ ಬಂದ ಆಯಿ , ದೂರದಿಂದಲೇ ಭಟ್ಟರ ಮನೆ ಮಗು ಅಂಬಂಗೆ ಕಾಣ್ತದೆ. ಅವಳು ಈಚೆಗೆ ನಾಲ್ಕು ವರ್ಷ ಆಯಿತು ; ಈಕಡೆ ಬಂದಿರಲಿಲ್ಲ. ಈಗ ಬಂದಿರಬೇಕು ಎಂದ ಆಯಿ ,ಬಳ್ಳಿಯಲ್ಲಿ ಅರಳಿದ ಮಲ್ಲಿಗೆ ಹೂ ಬಿಡಿಸಿತೊಡಗಿದಳು. ಪುಟಾಣಿ ಮಕ್ಕಳೊಂದಿಗೆ ಮನೆ ಹತ್ತಿರ ಬಂದಂತೆ ಆಕೆ ರೋಶನಿ ! , ತನ್ನ ಹೈಸ್ಕೂಲ್ ಗೆಳತಿ ಎಂದು ಶರ್ಮಿತಾಳಿಗೆ ಮನದಟ್ಟಾಗುತ್ತಿದ್ದಂತೆ , ಕಣ್ಣುಗಳು ಅರಳಿದವು. ಮನೆಯಂಗಳಕ್ಕೆ ಬಂದದ್ದೇ ನಗುವಿನ ವಿನಿಮಯ, ಆತ್ಮೀಯ ಅಪ್ಪುಗೆಯ ನಂತರ ಇಬ್ಬರೂ ಮಾತಿಗಿಳಿದರು . ಗಂಟೆಗಟ್ಟಲೆ ಮಾತು. ಅಪರೂಪಕ್ಕೆ ಹತ್ತು ವರ್ಷಗಳ ನಂತರದ ಭೇಟಿ. ಕೇಳಬೇಕೆ? ಉತ್ಸಾಹ , ಕುತೂಹಲಗಳು ಮರದ ಕವಲುಗಳು ಮುಗಿಲ ಕಡೆ ಮುಖ ಮಾಡಿದಂತೆ , ಮನಸು ದೂರ ಕಾಣುವ ದಿಗಂತ ನೋಡುತ್ತಲೇ ಗೆಳತಿರ ಕಣ್ಣೋಟಗಳು ಬೆರೆತಿದ್ದವು. ಶರ್ಮಿತಾ ಈಗ ಕವಯಿತ್ರಿಯಾಗಿದ್ದಳು. ರೋಶನಿಯ ‘ಆಯಿ’ ಈ ಸುದ್ದಿಯನ್ನು ಕೊಲ್ಲಾಪುರದಿಂದ ಬಂದ ಮೊದಲ ದಿನವೇ ಶರ್ಮಿತಾಳ ಸುದ್ದಿ ಮಾತಾಡಿ ಕುತೂಹಲ ನೂರ್ಮಡಿಸಿದ್ದಳು . ಆ ಕುತೂಹಲ ತಣಿಸಿಕೊಳ್ಳಲು, ಅವಳ ಕವನ ಸಂಕಲನ ಪಡೆಯಲು ಹಾಗೂ ಗೆಳತಿಯ ಪ್ರಸಿದ್ಧಿ ಅರಿತು ಖುಷಿಪಡಲು ರೋಶನಿ ಬಂದದ್ದಾಗಿತ್ತು. ಅಂತೂ ಕವಯಿತ್ರಿಯ ಸುದ್ದಿ ಕೇಳಿದ ಮೇಲೆ ; ತನ್ನ ಲಂಡನ್ ಪ್ರವಾಸ, ಅಲ್ಲಿನ ಜನ ,ಜೀವನ, ಯುವ ಜನರ ಬದುಕು, ಪ್ರೀತಿ, ಮುಕ್ತವಾದ ಜೀವನೋತ್ಸಾಹ , ಪ್ರಾಜೆಕ್ಟ್ ವರ್ಕ ಬಗ್ಗೆ ಮಾತು ಹೊರಳಿ ಕೊಂಡವು ಹಾಗೂ ಕೊಲ್ಲಾಪುರದಿಂದ ಮರಳಿ ತವರಿಗೆ ಬಂದ ಕಾರಣದ ವಿವರಗಳು ಒಂದೊಂದೆ ಎಳೆ ಎಳೆಯಾಗಿ ಮಾತಲ್ಲಿ ನಡೆಯುತ್ತಾ ಹೋದವು. ಸಮಾಜಶಾಸ್ತ್ರ ಅಧ್ಯಯನ, ಪಿಎಚ್ಡಿ ಮಾಡಿದ್ದು …ಎಲ್ಲಾ ಹೇಳಿದ ನಂತರ ; ಗಂಡನ ಕಡೆ ಮಾತು ಹೊರಳಿತು. ‘ ಹೇಗೆ ನಿಮ್ಮ ಮನೆಯವರು ಅಂತ ‘ ಪ್ರಶ್ನೆ ಎಸೆದಳು ಶರ್ಮಿತಾ . ಹಾಗೆ ನೋಡಿದರೆ ಶರ್ಮಿತಾಳ ಊರಿನವನೇ ಆಗಿದ್ದ ವಿನಾಯಕ ಎಂಜಿನಿಯರಿಂಗ್ ಮಾಡಿ, ದೇಶ ಅಲೆದು, ಮುಂಬಯಿ, ಪುಣೆ ಸುತ್ತಿ ಕೊಲ್ಲಾಪುರದಲ್ಲಿ ನೆಲೆ ನಿಂತಿದ್ದ. ಕರೋನಾ ಕಾರಣವಾಗಿ ಅವನು ತನ್ನ ಮೂಲ ಮನೆಗೆ ಮರಳಿದ್ದ. ಪಕ್ಕದ ವಾಟಗಾರ ಗ್ರಾಮದ ಹೈಸ್ಕೂಲ್ ಸಹಪಾಠಿ ರೋಶನಿಯನ್ನೇ ಮದುವೆಯಾಗಿದ್ದ. ಸಹಜವಾಗಿ ಕೇಳಿದ ಪ್ರಶ್ನೆ ಅದಾಗಿತ್ತು. ಒಂದು ನಿಟ್ಟುಸಿರು ಬಿಟ್ಟ ರೋಶನಿ “ದೇಶ ವಿದೇಶ ಸುತ್ತಿದರೂ ಗಂಡಸರ ಅನುಮಾನ ಹೋಗಲ್ಲ ಬಿಡು.ಅದೇ ಮೊಬೈಲ್ ಹಿಡಿದರೆ ತಕರಾರು. ಕಾಣದ ಸಂಶಯಗಳು ಇದ್ದದ್ದೆ. ಗಂಡಸರಿಗೆ ಎಷ್ಟು ಪ್ರೀತಿ ಕೊಟ್ಟರೂ ,ಸಂಶಯಿಸುವುದ ಬಿಡಲ್ಲ ಎಂದು” ಮೌನವಾದಳು. ತನ್ನ ಸಮಸ್ಯೆಯೂ ಅದೇ ಎಂದು ಹೇಳಬೇಕೆಂದ ಶರ್ಮಿತಾಳ ತುಟಿತನಕ ಬಂದ ಮಾತು ತಡೆದು,ಮಾತು ಬದಲಿಸಿದಳು. ಹಾಗೂ ನೀನು ಬರೆ ಏನಾದ್ರೂ ಅಂದ್ಲು. “ಹು, ಇನ್ನು ಬರೆಯಬೇಕು. ನೀನು ನಮ್ಮೂರಿಗೆ ಹೆಸರು ತಂದಿದಿಯಾ” .ಅದೇ ಸಂಭ್ರಮ. ನೀ ಕೊಟ್ಟ ಕಾವ್ಯದ ಪುಸ್ತಕ ನನ್ನತ್ತೆ ಇಟ್ಟುಕೊಂಡರು. ಅವರ ಮಗಳಿಗೆ ಕೊಡಲು. ನನಗೆ ಮತ್ತೊಂದು ‘ಮಲ್ಲಿಗೆ ದಂಡೆ’ ಕೊಡು ಎಂದು ನಸುನಕ್ಕಳು….ರೋಶನಿ. ಅವಳ ಮಾತಿನ ಕಣ್ ಮಿಂಚು ಶರ್ಮಿತಾಳ ಎದೆಯೊಳಗೆ ಬೆಳಕು ಹಚ್ಚಿದಂತಾಯಿತು. *********************************
ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..!
ಪ್ರಸ್ತುತ ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..! ಕೆ.ಶಿವು.ಲಕ್ಕಣ್ಣವರ ಹೌದಾ.. ನಿಜಾನಾ.. ಇದು ಹೇಗೆ ಸಾಧ್ಯ..? ನಿಜಕ್ಕೂ ಕೊರೊನಾ ವೈರಸ್ ಹಿಂದಿರೋ ಕರಾಳ ಸತ್ಯ ಇದೇನಾ..? ಇಡೀ ಜಗತ್ತನ್ನೇ ಕಿರುಬೆರಳಲ್ಲಿ ಆಡಿಸ್ತಿರೋ ಕೊರೊನಾ ವೈರಸ್ ಹುಟ್ಟಿನ ಹಿಂದೆ ದೊಡ್ಡ ಷಡ್ಯಂತ್ರವೇ ಇದ್ಯಾ..? ಸೋಶಿಯಲ್ ಮೀಡಿಯಾದಲ್ಲಿ ಕಳೆದೊಂದು ವರ್ಷದಿಂದ ವೈರಲ್ ಆಗ್ತಿರೋ ಒಂದು ವಿಡಿಯೋನ ನೋಡಿದವರ ತಲೆಯಲ್ಲಿ ಇಷ್ಟೊಂದು ಪ್ರಶ್ನೆಗಳು ಹರಿಡಾದ್ತಿವೆ. ಕೊರೊನಾ ವೈರಸ್ ಕಾಣಿಸಿಕೊಂಡ ಆರಂಭದಲ್ಲಿ ಶುರುವಾಗಿದ್ದ ಚರ್ಚೆಯೊಂದಕ್ಕೆ ಈ ವಿಡಿಯೋದಿಂದ ಮತ್ತೆ ಪುಷ್ಟಿ ಪುಷ್ಟಿ ನೀಡುತ್ತಿದೆ. ಏನಿದು ವಿಡಿಯೋ..? ಜಗತ್ತು ತಲೆ ಕೆಡಿಸಿಕೊಂಡಿರೋದೇಕೆ..? ಇದು ಆ ಕುಸಲಾಳ ಮನದಾಳದಲ್ಲಿ ಹೀಗೆಯೇ ಆ ಒಂದು ರಾತ್ರಿಯಿಂದ ಪದೆಪದೇ ಮೇಲೇಳಿತ್ತಿರುವ ಪ್ರಶ್ನೆ. ಅದುವೇ ಎಪಿಸೋಡ್ 10. 2018ರಲ್ಲಿ ಪ್ರಸಾರವಾದ ವೆಬ್ ಸಿರೀಸ್ ಇದು. ಸದ್ಯ ಈ ಕಂಟೆಂಟ್ ಯುಎಸ್‌ಎ ಹಾಗೂ ಯುಕೆಗೆ ಮಾತ್ರ ಲಭ್ಯವಿದೆ. 10ನೇ ಎಪಿಸೋಡ್‌ನಲ್ಲಿ ಬರುವ ಕೆಲ ಸೀನ್‌ಗಳಲ್ಲಿ ಕೊರೊನಾ ವೈರಸ್‌ನ ಉಲ್ಲೇಖ ಇದೆ. ಈ ವೈರಸ್ ಬಗ್ಗೆ, ಅದ್ರ ಹುಟ್ಟಿನ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ಸಂಭಾಷಣೆ ಇದೆ. ಇದು ಕುಸಲಾಳನ್ನು ಕಂಗೆಡುಸುತ್ತಲೇ ಇದೆ. ಆ ಒಂದು ಕುಸಲಾಳ ಮನಸ್ಸಿನ ನಾಟಕದ ಪಾತ್ರದಾರಿಗಳ ಸಂಭಾಷಣೆ ಕುಸಲಾಳ ಮನಸ್ಸಿನ ಮೇಲೆ ಗಾಯ ಮಾಡಿದವು. ಆ ಪಾತ್ರಧಾರಿಗಳ ಸಂಭಾಷಣೆಗಳು ಹೀಗಿವೆ ನೋಡಿ… ಸೀನ್ ನಂಬರ್ 1: ಪಾತ್ರಧಾರಿ 1 -ನಾವು ಇದರ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡಬೇಕಿದೆ. ಪಾತ್ರಧಾರಿ 2 -ಆದ್ರೆ ಅದು ಕೊರೊನಾ ವೈರಸ್ ರೀತಿ ಕಾಣುತ್ತಿದೆ..! ಪಾತ್ರಧಾರಿ 1 -ಕೊರೊನಾ..? MERS? ಪಾತ್ರಧಾರಿ 2 -MERS, SARS ಇವು ಸಾಮಾನ್ಯ ಜ್ವರಗಳಾಗಿದ್ವು. ಅವೆಲ್ಲವೂ ಒಂದು ವಿಧಕ್ಕೆ ಸೇರಿದ ಜ್ವರಗಳು. ಅವುಗಳ ಜೀನ್ ಇನ್ಫರ್ಮೇಶನ್ ಕೂಡ ಒಂದೇ ಆಗಿತ್ತು. ಆದ್ರೆ ಕೊರೊನಾ ವೈರಸ್ ರೆಸ್ಪಿರೇಟರಿ ಸಿಸ್ಟಮ್( ಉಸಿರಾಟ)ಗೆ ಅಟ್ಯಾಕ್ ಮಾಡುತ್ತೆ. 2015ರಲ್ಲಿ MERS ಸಾಂಕ್ರಾಮಿಕ ಕಾಯಿಲೆ ಬಂದಾಗ ಅದರ ಮರಣ ಪ್ರಮಾಣ 20% ಇತ್ತು. ಪಾತ್ರಧಾರಿ 1 -ಆಯುಧವಾಗಿ ಬಳಸೋಕೆ ಅದು ಸಾಕಾಗ್ತಾ ಇರ್ಲಿಲ್ವಾ? ಪಾತ್ರಧಾರಿ 2 -ನಾನ್ ಹೇಳಿದ ಹಾಗೆ ಕೊರೊನಾ ರೂಪಾಂತರಗೊಂಡ ವೈರಸ್. ಸಾವಿನ ಪ್ರಮಾಣ ಹೆಚ್ಚಾಗುವಂತೆ ಯಾರೋ ಅದನ್ನ ತಿರುಚಿದ್ದಾರೆ. ಇದರ ಮರಣ ಪ್ರಮಾಣ 90%. ಪಾತ್ರಧಾರಿ 1 -90%..!!! ಪಾತ್ರಧಾರಿ 2 -ಕೊರೊನಾ ಬಗ್ಗೆ ಅದಕ್ಕಿಂತಲೂ ಗಂಭೀರ ವಿಚಾರ ಏನು ಅಂದ್ರೆ ಈ ಕೊರೊನಾ ವೈರಸ್ ಬೆಳೆಯೋದಕ್ಕೆ 2 ರಿಂದ 14 ದಿನಗಳ ಸಮಯ ತೆಗೆದುಕೊಳ್ಳುತ್ತೆ. ಈ ವೈರಸ್ ಕಾಣಿಸಿಕೊಂಡ 5 ನಿಮಿಷಗಳಲ್ಲಿ ನೇರ ಶ್ವಾಸಕೋಶಕ್ಕೆ ಅಟ್ಯಾಕ್ ಮಾಡುವಂತೆ ರೂಪಿಸಲಾಗಿದೆ. ಪಾತ್ರಧಾರಿ 1 -ಇದಕ್ಕೆ ಔಷಧ ಇಲ್ವಾ..? ಪಾತ್ರಧಾರಿ 2 -ಈ ಸಮಯದಲ್ಲಿ ಈ ವೈರಸ್‌ಗೆ ಯಾವುದೇ ರೀತಿಯ ವ್ಯಾಕ್ಸಿನ್ ಲಭ್ಯವಿಲ್ಲ. ಅದನ್ನ ಅಭಿವೃದ್ಧಿಪಡಿಸೋದು ಕೂಡ ತುಂಬಾ ಕಷ್ಟ. ಸೀನ್ ನಂಬರ್ 2: ಪಾತ್ರಧಾರಿ 3 -ಮನುಷ್ಯನೇ ರೂಪಿಸಿದ ವೈರಸ್..??? ಪಾತ್ರಧಾರಿ 4 -ಹೌದು. ಪಾತ್ರಧಾರಿ 3 -ಮರಣ ಪ್ರಮಾಣ..? ಪಾತ್ರಧಾರಿ 4 -90% ಪಾತ್ರಧಾರಿ 3 -ಅವ್ರು ಬಯೋಕೆಮಿಕಲ್ ಟೆರರಿಸ್ಟ್ ಅಟ್ಯಾಕ್‌ಗೆ ಪ್ಲ್ಯಾನ್ ಮಾಡ್ತಿದ್ದಾರೆ. ನಾವು ಸಮಯ ಮತ್ತು ಸ್ಥಳವನ್ನು ಫೈಂಡ್ ಔಟ್ ಮಾಡಬೇಕು. ಸೀನ್ ನಂಬರ್ 3: ಪಾತ್ರಧಾರಿ 5 -ನಾನು ಮನುಷ್ಯನ ದೇಹದ ಮೇಲಿನ ಟೆಸ್ಟ್‌ನ ಪೂರ್ತಿ ಮಾಡಿದ್ದೇನೆ. ಪಾತ್ರಧಾರಿ 6 -ಹೇಗಾಯ್ತು ಟೆಸ್ಟ್..? ಪಾತ್ರಧಾರಿ 5 -ನಾವು ಜೆನೆರಿಕ್ ಮೆಟೀರಿಯಲ್‌ನ ಯಶಸ್ವಿಯಾಗಿ ಆತನ ದೇಹಕ್ಕೆ ಇಂಜೆಕ್ಟ್ ಮಾಡಿದ್ವಿ. ಕೋರ್ಸ್ ಪ್ರಾಜೆಕ್ಟ್‌ನ ಸ್ಟಾರ್ಟ್ ಮಾಡೋಕೆ ಇದು ಸೂಕ್ತ ಸಮಯ. ಇವಿಷ್ಟು ಪಾತ್ರಧಾರಿಗಳ ನಡುವೆ ಬರುವ ಸಂಭಾಷಣೆ. ಸೌತ್ ಕೊರಿಯಾದ ಭದ್ರತಾ ಸಂಸ್ಥೆಯ (ಎನ್‌ಎಸ್‌ಎ – ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ) ಏಜೆಂಟ್ ಒಬ್ಬನ ಸ್ನೇಹಿತ ನಿಗೂಢವಾಗಿ ಸಾವನ್ನಪ್ಪಿರ್ತಾನೆ. ಈ ವಿಚಾರದ ಬಗ್ಗೆ ಎನ್‌ಎಸ್‌ಎ ತನಿಖೆ ಆರಂಭ ಮಾಡಿದಾಗ ಶತ್ರುಗಳು ಕೊರೊನಾ ವೈರಸ್‌ನ ಬಯೋಕೆಮಿಕಲ್ ವೆಪನ್ ಆಗಿ ಬಳಸಿದ್ದಾರೆ ಅನ್ನೋದು ಬೆಳಕಿಗೆ ಬರುತ್ತೆ. ಇದು ಒಂದು ಕುಸಲಾಳ ಮನಸ್ಸಿನ ವೆಬ್ ಸಿರೀಸ್‌ನ ಆ ಎಪಿಸೋಡ್‌ನಲ್ಲಿ ಬರುವ ಸ್ಟೋರಿ. ಅಚ್ಚರಿಯ ವಿಷಯ ಏನು ಅಂದ್ರೆ ಚೀನಾದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದ್ದು 2019ರ ನವೆಂಬರ್‌ನಲ್ಲಿ. ಆದ್ರೆ ಈ ವೆಬ್ ಸಿರೀಸ್ ಪ್ರಸಾರವಾಗಿದ್ದು 2018ರಲ್ಲಿ ಇದು ಹೇಗೆ ಸಾಧ್ಯ? ಕೊರೊನಾ ವೈರಸ್ ಬಗೆಗಿನ ಭವಿಷ್ಯವಾಣಿಗಳು ಈ ಹಿಂದೆಯೇ ಕೆಲವು ಬಂದಿದ್ರೂ ಕೂಡ ಈ ವೆಬ್ ಸಿರೀಸ್‌ನಲ್ಲಿ ಹೇಳಿರುವ ಡೈಲಾಗ್‌ಗಳು ಕರಾರುವಕ್ಕಾಗಿವೆ. ಇದು ಯಾರದ್ದೋ ಷಡ್ಯಂತ್ರದ ಫಲ ಅನ್ನೋದನ್ನ ಸಿನಿಮಾ ಡೈಲಾಗ್ ಅಂದ್ರೂ ಕೊರೊನಾದ ಬಗ್ಗೆ ಹೇಳಿರೋ ಲಕ್ಷಣಗಳು 100ಕ್ಕೆ 100ರಷ್ಟು ಸತ್ಯ. ಇದು ಹೇಗೆ ಸಾಧ್ಯ..? ‘ಕೊರೊನಾ’ ಸೃಷ್ಟಿಸಿದ್ದೇ ಚೀನಾ ಅಂದಿದ್ರು ಹಲವರು..! ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ಚೀನಾದವರೇ ಈ ವೈರಸ್‌ನ ತಮ್ಮ ಲ್ಯಾಬ್‌ನಲ್ಲಿ ರೂಪಿಸಿದ್ರು. ಜಗತ್ತಿನ ಮೇಲೆ ಇದ್ರ ಮೂಲಕ ದಾಳಿ ನಡೆಸೋಕೆ ಮುಂದಾಗಿದ್ರು. ಆದ್ರೆ ಬೈ ಮಿಸ್ಟೇಕ್ ಅಲ್ಲಿನ ಲ್ಯಾಬ್‌ನಿಂದಲೇ ವೈರಸ್ ಲೀಕ್ ಆಗಿದೆ ಅನ್ನೋ ವದಂತಿಗಳು ಹರಿದಾಡಿದ್ವು. ಅದ್ರ ಸತ್ಯಾಸತ್ಯತೆ ಯಾರಿಗೂ ಗೊತ್ತಿಲ್ಲ. ಆದ್ರೀಗ ವೆಬ್‌ಸಿರೀಸ್‌ನಲ್ಲಿ ತೋರಿಸಿರುವ ಷಡ್ಯಂತ್ರದ ಸೀನ್, ನಿಜಕ್ಕೂ ಹಾಗೆಯೇ ಆಗಿದ್ಯಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ಗೂ ಸೌತ್ ಕೊರಿಯಾದ ವೆಬ್ ಸಿರೀಸ್‌ಗೂ ಏನ್ ಸಂಬಂಧ..? ನೆಟ್‌ಫ್ಲಿಕ್ಸ್‌ನಲ್ಲಿ ಈ ಬಗ್ಗೆ ಸ್ಟೋರಿ ಬಂದಿದೆ ಅಂದ್ರೆ ಇದ್ರ ಬಗ್ಗೆ ಮೊದಲೇ ಅರಿವಿತ್ತು ಅಂತ ಅರ್ಥ. ಅದು ಗೊತ್ತಿದ್ದೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳೋಕೆ ತಡವಾಗಿದ್ದು ಏಕೆ? ಇಡೀ ಚೀನಾಗೆ ಹಬ್ಬುವವರೆಗೂ ಯಾಕೆ ತಲೆಕೆಡಿಸಿಕೊಂಡಿರಲಿಲ್ಲ. ಇಡೀ ಜಗತ್ತಿಗೇ ವೈರಸ್ ಈಗ ಹರಡಿಬಿಟ್ಟಿದೆ. ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ಇದ್ರ ಹಿಂದೆ ನಿಜಕ್ಕೂ ಷಡ್ಯಂತ್ರ ಇದ್ದಿದ್ದು ಹೌದಾ ಅನ್ನೋ ಬಗ್ಗೆ ನೆಟ್ಟಿಗರು ಈಗ ತಲೆಕೆಡಿಸಿಕೊಳ್ತಿದ್ದಾರೆ. ಹೀಗೆಯೇ ಆ ಕುಸಲಾಳ ಏಕಾಂತ ಮನಸ್ಸಿನ ಅಲೆಗಳು ಏಳುತ್ತಲೇ ಇದ್ದವು. ಆ ಏಕಾಂತ ಮನಸ್ಸಿನ ತಾಕಲಾಟ ತಾಳಲಾರದೇ ಅವಳು ದಿಗ್ಗನೇ ಆ ಒಂದು ಬೆಡ್ ರೂಮಿನಿಂದ ಎದ್ದು ಹೊರ ಬಂದು ದೇವಾಲಯಕ್ಕೆ ಹೊರಡಲು ಅಣಿಯಾದಳು. ದೇವಾಲಯಕ್ಕೆ ಹೋಗಿ ಆ ದೇವರ ದರ್ಶನ ಪಡೆದುಕೊಂಡು ಮನಸ್ಸಿನಲ್ಲೇ ಆ ದೇವರನ್ನು ಬೇಡಿಕೊಂಡಳು ಅಯ್ಯೋ ದೇವರೇ ಈ ಕರೋನ ಸಂದರ್ಭದಲ್ಲಿ ನೀನೇ ಗತಿ ಈಗ ನಮಗೆ. ನಮ್ಮನ್ನು ಅಂದರೆ ಮಾನವರನ್ನು ನೀನೇ ಕಾಪಾಡಪಾ ಈಗ. ಹೀಗೆಯೇ ಆ ದೇವರನ್ನು ಬೇಡಿಕೊಳ್ಳುತ್ತಲೇ ಮಕ್ಕಳು ಮತ್ತು ಗಂಡನು ಆಫೀಸಿನಿಂದ ಮನೆಗೆ ಬರುವುದು ಸಮಯವಾಗಿದೆ ಎಂದು ದೇವಸ್ಥಾನದಿಂದ ಮನೆಗೆ ವಾಪಾಸಾದಳು ಕುಸಲಾಳು… *************************************
ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..! Read Post »
ಗಜಲ್
ಗಜಲ್ ರವಿ.ವಿಠ್ಠಲ. ಆಲಬಾಳ. ತುಸು ಹೊತ್ತು ಕಳೆದೆ ,ತುಸು ದೂರ ನಡೆದೆ ,ಸಾಕಿಂದಿಗೆ ಈ ಪ್ರೀತಿಮೋಹಕ ನಗುವಿನಲಿ ಚೆಲುವೆಲ್ಲ ನೋಡಿದೆ ,ಸಾಕಿಂದಿಗೆ ಈ ಪ್ರೀತಿ. ಭಣಗುಡುವ ಎದೆಯಿಂದು ಉಲ್ಲಾಸವನು ತುಂಬಿ ತುಳುಕಿಸಿದೆತುಟಿಕೆಂಪಿನಲಿ ಹೊಸ ಮಿಂಚು ಕಾಣುತಿದೆ ,ಸಾಕಿಂದಿಗೆ ಈ ಪ್ರೀತಿ. ಕಳೆಕಟ್ಟಿಕೊಂಡು ಕಾಣುವ ಕನಸುಗಳಿಗೆ ಸಾವಿರದ ನೆನಕೆ ತಿಳಿಸುವೆಸವಿ ದಿನಗಳ ಕ್ಷಣವನು ತಿರುವಿ ಹಾಕುತಿದೆ ಸಾಕಿಂದಿಗೆ ಈ ಪ್ರೀತಿ . ಏನೆಲ್ಲ ಹೇಳಿದೆ,ಏನೆಲ್ಲ ಕೇಳಿದೆ ,ಬರೀ ಮಾತುಗಳಾಗೇ ಉಳಿದಿವೆದೂರವಿದ್ದರೂ ಸರಿಯೇ ,ನಿನ್ನ ಬಿಂಬ ಇಲ್ಲಿದೆ ಸಾಕಿಂದಿಗೆ ಈ ಪ್ರೀತಿ. ನೀ ಹೊರಟು ಹೋಗುವಾಗ ಕಣ್ಣೀರಲಿ ಎಷ್ಟೋ ಮಾತುಗಳಿದ್ದವುಧ್ವನಿಯಿಲ್ಲದ ಪದಗಳಲ್ಲಿ ಪ್ರೇಮವನೇ ಸುರಿದೆ ಸಾಕಿಂದಿಗೆ ಈ ಪ್ರೀತಿ. ಮರೆತುಬಿಡಲು ಹೃದಯವಿಲ್ಲದ ದೇಹ ನನ್ನದಲ್ಲ ಕೇಳು ಪ್ರಿಯತಮೆರವಿ ಹುಟ್ಟಿ ಮುಳುಗುವವರೆಗೆ ನಿನ್ನ ಗುಂಗಿದೆ ಸಾಕಿಂದಿಗೆ ಈ ಪ್ರೀತಿ. *********************
ದನ ಕಾಯೋದಂದ್ರ ಏನ ಮ್ಮ
ಕಿರುಗಥೆ ದನ ಕಾಯೋದಂದ್ರ ಏನಮ್ಮ ರಶ್ಮಿ .ಎಸ್. ಅರ್ನಿ, ಹೋಂವರ್ಕ್ ಮಾಡಿಲ್ಲ… ಇಲ್ಲಮ್ಮ… ಮಾಡಾಂಗಿಲ್ಲ? ಇಲ್ಲಮ್ಮ… ಆಯ್ತು ಹಂಗಾರ… ನಾಳೆಯಿಂದ ಸಾಲೀಗೆ ಹೋಗಬ್ಯಾಡ… ದನಾ ಕಾಯಾಕ ಹೋಗು… ದನಾ ಕಾಯೂದಂದ್ರೇನಮ್ಮ.. ದನಾ ಕಾಯೂದಂದ್ರ ಒಂದು ನಾಲ್ಕು ಎಮ್ಮಿ ಕೊಡಸ್ತೀನಿ. ಎಮ್ಮಿ ಎಲ್ಲೆಲ್ಲಿ ಅಡ್ಡಾಡ್ತಾವ ಅಲ್ಲೆಲ್ಲ ಅದರ ಹಿಂದ ಹಿಂದೇ ಅಡ್ಯಾಡಬೇಕು. ಶಗಣಿ ಹಾಕಿದ್ರೂ, ಸುಸು ಮಾಡಿದ್ರೂ ಅದರ ಜೊತಿಗೇ ಇರಬೇಕು. ಶಗಣಿ ಹಾಕೂದಂದ್ರ? ಎಮ್ಮಿ ಕಕ್ಕಾ ಮಾಡೂದು.. ಅವಾಗೂ ಬಿಟ್ಟು ಹೋಗೂಹಂಗಿಲ್ಲಾ? ಇಲ್ಲ… ಓಹ್… ಆಸಮ್…ನಾ ಎಮ್ಮೀ ಜೊತೀಗೆ ಇರಬೇಕು.. ಹೌದು… ಅಮ್ಮಾ.. ಹಂಗಾರ ನಾ ಎಮ್ಮೀ ಒಲ್ಲೆ… ಅಮ್ಮಾನ ಕಾಯ್ತೀನಿ. ನೀ ಎಲ್ಲಿ ಹೋದ್ರೂ ನಿನ್ನ ಹಿಂದ ಇರ್ತೀನಿ. ಆಫೀಸಿಗೆ ಬರ್ತೀನಿ. ಮನ್ಯಾಗೂ ನಿನ್ನ ಜೊತಿಗೆ ಇರ್ತೀನಿ. ಬಾತ್‌ರೂಮಿಗೂ ಬರ್ತೀನಿ… ಪ್ಲೀಸ್ ಅಮ್ಮಾ… ನಾ ಅಮ್ಮಾಗ ಕಾಯ್ತೀನಿ. ಬೇಕಂದ್ರ ಅಪ್ಪಾಗೂ ಕಾಯ್ತೀನಿ… ಸಾಲೀ ಒಲ್ಲೆ… ……
ದನ ಕಾಯೋದಂದ್ರ ಏನ ಮ್ಮ Read Post »
ಗಜಲ್
ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ನನ್ನ ಸಖಿ ಈ ಜಗದಿ ಅಪರೂಪ ಏನನೂ ಬೇಡಳುಕೊಡುವೆ ಅಂದಾಕ್ಷಣವೇ ಕೋಪದಿ ಕ್ಷಣ ಮುನಿವಳು ಏನು ಕೊಟ್ಟರು ಕಡಿಮೆ ಅವಳಿಗೆ ಅಂತಹ ಗುಣದವಳುಮುಳ್ಳು ತರಚುವ ಮೃದು ಮಧುರ ಗುಲಾಬಿ ಅಂಥವಳು ಬೇಡ ಕೊಟ್ಟಷ್ಟು ಆಸೆ ಬೆಳಿವವು ಅಂದು ಕೊಂಡಿಹಳುಆಸೆಯೇ ಇಲ್ಲದ ಅಪ್ಪಟ ಬಂಗಾರು! ನನಗೆ ಸಿಕ್ಕಿಹಳು ತಾ ಕೊಡುವದರಲು ಹೀಗೆ ಬಲೂ ಕಂಜೂಸಿ ಮನದವಳುಮಾತೇ ಮುತ್ತಾಗಿಸಿದವಳು ಬೇಗ ಮುತ್ತು! ಸಹ ನೀಡಳು ಅಭಿಮಾನದಿ ಪ್ರೀತಿ ಪ್ರೇಮದ ಹೊಳೆಯ ಹರಿಸುವಳುಹೊಟ್ಟೆ ಬಟ್ಟೆ ದೇಹ ಬದುಕು ಬರಹ ಚೆಂದ ಮಾಡಿಹಳು ನೋವುಗಳ ನುಂಗಿಬಿಟ್ಟು ಬರೀದೆ ನಗು ನಟಿಸುವಳುಆಗಾಗ ಸಿಟ್ಟು ಸೆಡವು ಹುಸಿ ಕೋಪವು ತೋರುವಳು ಬದುಕಲಾರೆ ಬಿಟ್ಟಿರಲಾರೆ ಈ ಜೀವದ ಜೀವವವಳುಎಲ್ಲಿಯದೋ ಈ ಬಂಧ ಅನುಬಂಧ ಆಗಿಸಿದವಳು ಇದ್ದಲ್ಲೆ ಕಡು ಒಲವಿನ ಮೋಹದ ಮಳೆ ಸುರಿಸುವಳುಹೊನ್ನಸಿರಿ’ಮನ ಸರೋವರದಿ ಶಾಂತ ಇರಿಸುವಳು *******************
ನಿರುತ್ತರ
ಕಥೆ ನಿರುತ್ತರ ಚಂದ್ರಿಕಾ ನಾಗರಾಜ್ ಹಿರಿಯಡಕ ಸೆರಗಿನಲ್ಲಿ ಹೆರಕಿ ತಂದಿದ್ದ ಹೂವುಗಳನ್ನು ಒಂದೊಂದಾಗಿಯೇ ತನ್ನ ಪಾಡಿಗೆ ತಾನು, ಹಮ್ಮು ಬಿಮ್ಮಿಲದೇ, ಪ್ರಫುಲ್ಲ ಮನಸ್ಥಿಯಲ್ಲಿ ಹರಿಯುತ್ತಿದ್ದ ತೊರೆಯಲ್ಲಿ ಹರಿಯ ಬಿಡುತ್ತಿದ್ದೆ. ಅದು ಹೂವ ಚಿತ್ತಾರದ ಸೀರೆಯುಟ್ಟ ನೀರೆಯಂತೆ ಬಳುಕುತ್ತಾ ಸಾಗುತ್ತಿತ್ತು. ನಾನೇಕೋ ಇಂದು ಅದನ್ನು ಆಸ್ವಾದಿಸುವ ಮನಸ್ಥಿತಿಯಲ್ಲಿ ಇಲ್ಲ. ಕೈಗಳು ಶಾಂತವಾಗಿ ತೊರೆಯ ಮೈ ಸವರುತ್ತಿತ್ತಷ್ಟೆ, ಮನವು ಪ್ರಕ್ಷುಬ್ಧ ಕಡಲಾಗಿತ್ತು. ದುಃಖ ಹೆಪ್ಪು ಗಟ್ಟಿತ್ತು. ಅದು ಒಡೆದು ಹೋಗಲು ಅವನೇ ಬರಬೇಕು. ಅವನ ಮೈಗಂಧವ ತಂಗಾಳಿ ನನ್ನ ನಾಸಿಕಗಳಿಗೆ ಸವರಿ ಹೋದರೆ ಸಾಕು ನಾನು ಅದಾಗಲೇ ನಿಟ್ಟುಸಿರಾಗಬಲ್ಲೆ…ಅವನ ಹೆಜ್ಜೆಯ ಸಪ್ಪಳವ ತರಗೆಲೆಗಳು ಮೆತ್ತಗೆ ಚೀರಿ ಕಿವಿಗೆರೆದು ಹಾರಿದರೆ ಸಾಕು ನಾನು ಚುರುಕಾಗಬಲ್ಲೆ ಇತರೆಡೆ ಗಮನವ ಹರಿಸದೆ ಪಂಚೇಂದ್ರೀಯಗಳು ಕೇವಲ ಆತನ ಹಾದಿಯತ್ತ ತಮ್ಮ ಚಿತ್ತ ಹರಿಸಿವೆ. ಬರಲಿ ಆತ, ಒಂದೊಮ್ಮೆ ಎದುರು ನಿಲಲಿ…ಇರುಳಲಿ ನಿಶಾಚರ ಪ್ರಾಣಿಯಂತಾಗಿದ್ದ ಮನವು ಆತನೆದೆಯಲಿ ನಿದ್ರಿಸಿಬಿಡುವುದೋ…ಮುಂಜಾವಿನಲಿ, ಹಕ್ಕಿಗಳಿಂಚರದಿ ಬೆರೆತು ತಾನು ಹಾಡಾಗದೆ ಉಳಿದ ದನಿ ಮಾತಾಗುವುದೋ…ಅಪರಾಹ್ನದಿ ಸೂರ್ಯದೇವನ ತಾಪದಲಿ ಮಿಂದು ಬೆಂದಿರುವ ಈ ಒಡಲು ಅವನ ಸುಕೋಮಲ ಸ್ಪರ್ಷಕೆ ತಣಿದು ಕಡಲಾಗುವುದೋ… ಮುಸ್ಸಂಜೆಯ ಈ ರಂಗು ಕೆನ್ನೆಗಂಟಿ ಲಜ್ಜೆಯ ಮಜ್ಜೆಯಾಗುವುದೋ…ಅಥವಾ ವಿರಹದ ಕುಪಿತತೆಯ ಕುರುಹಾಗುವುದೋ… ಹ್ಹ ಹ್ಹ! ನಿನ್ನ ಬಗೆಗೆ ನನಗೆ ಗೊತ್ತಿಲ್ಲವೇ!.. ಅವನು ಬರುತ್ತಾನೆ..ಒಂದೋ ನೀನವನನ್ನು ನೋಡಿ ಮುಖವ ಸಿಂಡರಿಸುತ್ತಿಯೇ…ಅವನು ಬಳಿ ಬಂದಂತೆ ಒಂದು ಮೋಡ ಮಗದೊಂದು ಮೋಡವ ಬೆಂಬತ್ತುವಂತೆ ನಿಮ್ಮಿಬ್ಬರ ಆಟ ನಡೆಯುತ್ತದೆ. ಮತ್ತೆ ಅವು ಸೇರಲೇ ಬೇಕಲ್ಲವೇ…ಇಲ್ಲವಾದಲ್ಲಿ, ಅವನು ಬರುತ್ತಿರುವಂತೆ ಪಂಜರದಿಂದ ಹೊರಬಿಟ್ಟ ಪಕ್ಷಿಯಂತೆ, ಬೇಡನಿಟ್ಟ ಬಲೆಗೆ ಸಿಲುಕಿದ ಜಿಂಕೆಯೊಂದ ಅದು ಯಾರೋ ಬಿಡಿಸಿದಾಗ ಛಂಗನೆ ನೆಗೆಯುತ್ತದೆ ನೋಡು ಹಾಗೆ ನೀನು ಓಡಿ ಹೋಗಿ ಆತನ ಯೋಗ ಕ್ಷೇಮ ವಿಚಾರಿಸುತ್ತೀಯೇ, ಸೂರ್ಯ ದೇವನು ತನ್ನೊಡಲ ಸೇರಲು ಕಡಲ ಮೈಬಣ್ಣ ರಂಗೇರುವಂತೆ, ಅವನ ಮೊಗದಲ್ಲರಳೋ ಕಿರುನಗೆ ನಿನ್ನ ಮೊಗದಲ್ಲಿ ನಸುಗೆಂಪ ಹಮ್ಮಿಸುತ್ತದೆ. ಅಲ್ಲವೇ…!? ಮನದ ಮಾತುಗಳು ಕಲ್ಪನಾ ರೂಪದಲ್ಲಿ ದೃಶ್ಯಗಳಾಗಿ ನಯನಗಳ ಮುಂದೆ ಚಲಿಸಿದಾಗ ನಾನು ಪಿಸು ನಕ್ಕು ತಣ್ಣಗೆ ಹರಿಯುತ್ತಿದ್ದ ತೊರೆಯೊಳಗೆ ಕಾಲ ಇಳಿಬಿಟ್ಟು ಹರ್ಷಿಸಲಾರಂಭಿಸಿದೆ. ಅಷ್ಟರಲ್ಲಾಗಲೆ ಮೀನುಗಳು ನನ್ನ ಪಾದೋಪಚಾರಕ್ಕೆ ತೊಡಗಿಕೊಂಡವು. ನನ್ನೊಳಗೆ ಕಚಗುಳಿಯ ಅನುಭೂತಿ…ಮೆಲ್ಲನೆ ಬಾಗಿ ನೀರ ಬೊಗಸೆಯಲಿ ಹಿಡಿದು ನೋಡಿದೆ ನನ್ನದೇ ಪ್ರತಿಬಿಂಬ…ಕಾಯುವಿಕೆಯಲಿ ನೋಟವ ನೆಟ್ಟು ಕಳೆಗುಂದಿರುವ ನೇತ್ರಗಳು…ಚಿಂತನೆಗಳಲಿ ಗಂಟು ಕಟ್ಟಿರುವ ಹುಬ್ಬು, ನೊಸಲು…ಒಲವ ಸುಗಂಧಕ್ಕೆ ಕಾದು ಸೋಲೊಪ್ಪಿಕೊಂಡಿರುವ ನಾಸಿಕ…ಸಾವಿರ ಮಾತುಗಳ ಆಡುವ ತವಕತೆ ಮರೆಯಾಗಿ ಮೌನಕ್ಕೆ ಶರಣಾಗಿರುವ ತುಟಿಗಳು…ನೀರುಣ್ಣದೆ ಬಾಡಿದ ನೈದಿಲೆಯಂತಾಗಿರುವ ಮುಗುಳ್ನಗೆಗೆ ಹಿಗ್ಗಬೇಕಾಗಿದ್ದ ಕೆನ್ನೆ ಗಲ್ಲಗಳು…ಹೌದು, ನಿರೀಕ್ಷೆಗಳು ಸುಡುತ್ತವೆ. ಚಿಂತೆ, ಚಿಂತನೆಗಳನ್ನು ಸೀಳಿ ಆ ಗಾನ ಹೊಮ್ಮಿತು…ಕೊಲ್ಮಿಂಚೊಂದು ಬಂದು ಅಂಧಕಾರದಿ ಬೆವಿತಿರೋ ಜಗವ ಒಮ್ಮೆಗೆ ಬೆಳಗಿ ಹೋದಂತೆ ನನ್ನೊಳಗೆ ಭಾಸವಾಯಿತು. ಮುರಳಿಯ ಗಾನ…ಇದೇ ರಾಗಕೆ ಕಾಯುತ್ತಿದ್ದ ಕರ್ಣಗಳು ನೆಟ್ಟಗಾದವು, ಕಂಗಳು ಮಿಂಚಿದವು, ನಾಸಿಕ ಕೆರಳಿದವು, ತುಟಿಗಳು ಅರಳಿದವು…ಅತ್ತ ಹೊರಟೆ…ಹೌದು, ಇದು ಅವನದೇ ವೇಣುವಿನ ನಾದ…ಇಷ್ಟು ಕಾಯಿಸಿ, ಸತಾಯಿಸಿ ಇದೀಗ ಬಂದನೇ…ಒಡತಿ ಹಾಕುವ ಕಾಳಿಗಾಗಿ ಹಸಿವಿನಿಂದ ಕಾದು ಕೂರುವ ಪಂಜರದ ಶುಕದಂತೆ ನಾನು ಚಡಪಡಿಸಿ ಬಿಟ್ಟೆನಲ್ಲಾ…ನಾನೇ ಬಳಿ ಸಾಗಿ ಬರಲೆಂದು ಅಲ್ಲೆಲ್ಲೋ ಕುಳಿತು ಸುನಾದ ನುಡಿಸುತ್ತಿದ್ದಾನಲ್ಲಾ ಎಂದು ಹುಸಿಗೋಪ ನಟಿಸುತ್ತಾ ನಡೆದೆ…ಇದೀಗಲೇ ಹೋಗಿ ಅವನ ಹೆಗಲಿಗೊರಗಿ ಜಗವ ಮರೆಯಬೇಕು! ಪಾದಗಳು ಅದ್ಯಾವುದೋ ಶಕ್ತಿ ಒಲಿದಿರುವಂತೆ ಹೆಜ್ಜೆ ಇಡುತ್ತಿದ್ದವು. ಆಗಲೇ ಆ ದೃಶ್ಯ ಕಾಲುಗಳಿಗೆ ವಿರಾಮ ನೀಡಿತು. ಎಂತಹ ತನ್ಮಯತೆ! ಜಗವ ಮರೆಯಿಸಿ, ತಾನೂ ಮರೆತಿರುವ ಜಗದ್ದೋದ್ಧಾರಕ..! ಇಳಿ ಸಂಜೆಯಲಿ ತಂಗಾಳಿಯ ಹಾಸುತ್ತಿರುವ ಹಸನ್ಮುಖಿ! ಜೊತೆಗೆ ಅವನ ಮಡಿಲಲಿ ತಲೆ ಇಟ್ಟು ಕಣ್ಣೆವೆಗಳ ಮುಚ್ಚಿ ಅದ್ಯಾವುದೋ ಅವ್ಯಾಹತ ಆನಂದದಿ ಮುಳುಗಿರುವ ದೇವಿ ರುಕ್ಮಿಣಿ. ಹೆಗಲು ಖಾಲಿ…! ಆದರೆ!? ಅವನ ಮನ ತುಂಬಿದೆಯಲ್ಲವೇ..? ಹಿಂತಿರುಗಿ ನಡೆದೆ… ನಾ ರಾಧೆ… ****************************
ನೋವೂ ಒಂದು ಹೃದ್ಯ ಕಾವ್ಯ
ಪುಸ್ತಕ ಸಂಗಾತಿ ನೋವೂ ಒಂದು ಹೃದ್ಯ ಕಾವ್ಯ ಕವಯತ್ರಿ ರಂಗಮ್ಮ ಹೊದೇಕಲ್ ತಮ್ಮ ಚೆಂದದ ಕೈ ಬರಹದ ಮೂಲಕ ಈಗಾಗಲೇ ನಾಡಿನಾದ್ಯಂತ ಚಿರಪರಿಚಿತ ಹೆಸರು. ಇವತ್ತು ಇಡೀ ಜಗತ್ತು ಕೀಲಿಮಣೆಯ ಮುಂದೆ ಪವಡಿಸಿಕೊಂಡು ಬೆರಳ ತುದಿಯಲ್ಲಿ ಕುಟು ಕುಟು ಕುಟ್ಟುತ್ತಾ ಅಕ್ಷರವ ಅರಳಿಸುತ್ತಿರುವಾಗ, ಗಣಕ ಯಂತ್ರ ಇಲ್ಲದಿದ್ದರೆ ನಾನು ಖಂಡಿತಾ ಇಷ್ಟೂ ಬರೆಯುತ್ತಿರಲಿಲ್ಲವೇನೋ ಅಂತ ಬಡಬಡಿಸುತ್ತಿರುವ ಹೊತ್ತಿನಲ್ಲಿ ಇದಕ್ಕೆಲ್ಲ ಉತ್ತರವೆಂಬಂತೆ ಹಲವಾರು ವರುಷಗಳಿಂದ ಬರಹಗಾರ್ತಿ ಶೈಲಾ ನಾಗರಾಜ್ ಅವರ ಸಂಪಾದಕತ್ವದಲ್ಲಿ ರಂಗಮ್ಮ ಹೊದೇಕಲ್ ರವರ ಕೈ ಬರಹದಲ್ಲಿಯೇ ಸ್ಫುಟ ಮತ್ತು ಸುಂದರವಾಗಿ ’ ಶೈನಾ’ ಎಂಬ ಕೈ ಬರಹದ ಪತ್ರಿಕೆ ಇವತ್ತೂ ತನ್ನ ಮಾನ್ಯತೆಯನ್ನು ಉಳಿಸಿಕೊಂಡಿದೆ. ಬೆರಳ ತುದಿಯಲ್ಲಿ ಹೂವಂತೆ ಅರಳಿಕೊಳ್ಳುವ ಅವರ ಅಕ್ಷರಗಳಿಗೆ ಮಾರು ಹೋದವರಿಲ್ಲ. ಅವರ ಕೈ ಬರಹವೇ ಒಂದು ಜೀವಂತ ಕವಿತೆ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ರಂಗಮ್ಮಹೊದೇಕಲ್ ಒಳ್ಳೆಯ ಕವಯತ್ರಿಯೂ. ಮಾರುದ್ದ ಕವಿತೆಗಳ ಖಾಲಿತನದ ಮುಂದೆ ರಂಗಮ್ಮನವರ ಮೂರೇ ಸಾಲು ಪದ್ಯಗಳು ಅದೆಷ್ಟೋ ಅರ್ಥಗಳನ್ನ ಸ್ಫುರಿಸಬಲ್ಲವು. ಬದುಕಿನ ಇಡೀ ಸಾರವನ್ನು ಪುಟ್ಟ ಕವಿತೆಯ ಹೃದಯದಲ್ಲಿ ತಂದಿಡಬಲ್ಲರು. ಸಣ್ಣ ಸಣ್ಣ ಸಾಲುಗಳಲ್ಲಿ ಬದುಕಿನ ಅಚ್ಚರಿಗಳನ್ನ ಹಿಡಿದಿಡಬಲ್ಲಂತಹ ಪ್ರತಿಭಾನ್ವಿತೆ ಈಕೆ. ಅವರೇ ಹೇಳುತ್ತಾರೆ ಬರೆಯದೇ ಉಳಿದ ಸಾಲುಗಳಲ್ಲಿದೆ ಬದುಕು ಅಂತ. ಎಷ್ಟು ಹೇಳಿದರೂ ಹೇಳದೇ ಉಳಿಯುತ್ತದೆ ಬದುಕಿನೊಳಗಿನ ಕವಿತೆ. ಈ ಅತೄಪ್ತಿಯೇ ಮತ್ತೊಂದು ಕವಿತೆಯ ಮರು ಹುಟ್ಟಿಗೆ ಕಾರಣವಾಗಿಬಿಡಲ್ಲದು. ಒಂದು ಮಾತಿದೆ, ’ಅಸುಖಿಯಾಗದವ ಕವಿಯಾಗಲಾರ ’ ಅಂತ. ಆದರೆ ಸಂಕಟವನ್ನೂ ಸೃಜನಶೀಲ ಕಲೆಯಾಗಿಸುವ ಛಾತಿ ನಮಗಿರ ಬೇಕು ಅಷ್ಟೆ. ರಂಗಮ್ಮ ಹೊದೇಕಲ್ ಅವರ ಪದ್ಯಗಳೂ ಕೂಡ ಅಷ್ಟೇ , ಇದೇ ಸತ್ಯವನ್ನು ಹೇಳುತ್ತವೆ. ಬದುಕಿನ ದು:ಖ,ದುಗುಡ, ದುಮ್ಮಾನ.. ಇವುಗಳ ಬಗ್ಗೆ ಕವಯತ್ರಿ ಯಾವುದೇ ತಕರಾರು ತೋರುವುದಿಲ್ಲ. ಎಲ್ಲಾ ನೋವುಗಳೂ ಹೃದ್ಯ ಕಾವ್ಯ ಅನ್ನುವ ಅವರ ಅಂತರಾಳದ ಮಾತುಗಳು ನಮ್ಮನ್ನು ತಟ್ಟದೇ ಇದ್ದೀತೇ? ಅಂತಹ ಕಾವ್ಯವೇ ಅವರ ಸಂಗಾತಿ ಆದ ಮೇಲೆ , ಕವಿತೆ ಎಲ್ಲ ನೋವುಗಳಿಗೂ ಸಾಂತ್ವಾನ ಒದಗಿಸುವಂತಹ, ಹೆಗಲು ಕೊಡುವಂತಹ ಆಪ್ತ ಸಖಿಯಂತೆ ಇಲ್ಲಿ ಗೋಚರಿಸುತ್ತದೆ. ನೋವೂ ಹೃದ್ಯ ಕಾವ್ಯ .. ಅಂತ ಹೇಳುವುದು ಅಷ್ಟು ಸಲೀಸಾ? ಪಕ್ವ , ಮಾಗಿದ ಮನಸ್ಥಿತಿಗಷ್ಟೇ ನೋವಲ್ಲೂ ಸುಸ್ವರ ಕೇಳಿಸ ಬಲ್ಲದು. ಇಂತಹ ಒಂದು ಪರಿಪಕ್ವ ಚಿಂತನೆಯನ್ನು ರಂಗಮ್ಮ ನವರ ಕವಿತೆಗಳಲ್ಲಿ ಕಾಣಬಹುದು. ಕವಯತ್ರಿ ಹೇಳುತ್ತಾರೆ, ಎಲ್ಲ ’ ಇಲ್ಲ ’ ಗಳ ನಡುವೆಯೂ ಬದುಕಿನ ಹಕ್ಕಿ ಹಾಡುತ್ತದೆ ಅಂತ. ಬದುಕಿನ ಎಲ್ಲಾ ಭಾವಗಳು ಹಾಡೇ ಅನ್ನುವ ಭಾವ ಮಾತ್ರ ನಮ್ಮ ಬದುಕನ್ನು ನಾದಮಯವಾಗಿಸಬಲ್ಲದು. ನೋವು, ಅವಮಾನ, ದ್ವೇಷ, ಇವುಗಳಿಗೆ ಅವೇ ಪ್ರತ್ತ್ಯುತ್ತರ ಅಲ್ಲ, ಖಡ್ಗಕ್ಕೆ ನೆತ್ತರೇ ಉತ್ತರವಾಗಿದ್ದರೆ ಈ ನೆಲದಲ್ಲಿ ಯಾವ ಹೂವೂ ಅರಳುತ್ತಿರಲಿಲ್ಲ.. ಅನ್ನುವ ಅವರ ಕವಿತೆಯ ಸಾಲುಗಳು ನೋವೇ ಇಲ್ಲದಿದ್ದರೆ ಕವಿತೆಗೆಲ್ಲಿ ಜಾಗ ಅಂತ ಹೇಳುವ ಮರುದನಿಯಂತಿದೆ. ಇನ್ನೂ ಮುಂದಕ್ಕೆ ಹೋಗಿ, ಬದುಕನ್ನು ಪ್ರೀತಿಸುವುದೆಂದರೆ ನೋವುಗಳನ್ನು ದಾಟುವುದಷ್ಟೇ .. ಅನ್ನುತ್ತಾರೆ. ಈ ಸಾಲುಗಳಿಗೆ ಬೇರಾವ ವ್ಯಾಖ್ಯಾನಗಳ ಭಾರ ಬೇಡ ಅನ್ನಿಸುತ್ತದೆ. ರಂಗಮ್ಮ ಅವರ ಕವಿತೆಗಳ ತುಂಬಾ ಅಲೆದಾಡುವುದು ನೋವು ಮತ್ತು ಅದನ್ನು ಮೀರುವ ಭಾವ. ನೋವು ಹಾಡಾಗುವುದು, ನೋವು ಕವಿತೆಯಾಗುವುದು , ಇಲ್ಲಿಯ ಕವಿತೆಗಳ ಮಾಂತ್ರಿಕ ಶಕ್ತಿ. ಪುಟ್ಟ ಪುಟ್ಟ ಕವಿತೆಗಳು ಇಡೀ ಬದುಕಿನ ಹೃದ್ಯ ಚಿತ್ರಣವನ್ನು ಬಿಡಿಸಿಡುವ ಪರಿಗೆ ಮನಸು ಮೂಕಾಗುತ್ತದೆ. ಯಾಕೆಂದರೆ ಎಲ್ಲರ ಎದೆಯೊಳಗಿನ ಭಾವಗಳು ಇಲ್ಲಿ ಕವಿತೆಯಾಗಿ ಅರಳಿಕೊಂಡಿವೆ. ಓದುತ್ತಾ ನಮ್ಮ ಮನಸೂ ಹಕ್ಕಿಯಂತಾಗಿ ಹಾರುತ್ತದೆ ಹೊಸ ಚಿಂತನೆಯ ದಿಕ್ಕಿನೆಡೆಗೆ. ಒಳ್ಳೆಯ ಕವಿತೆಯ ಉದ್ದೇಶ ಇದುವೇ ತಾನೇ? ಎಲ್ಲಾ ಸಂಕಟಗಳು ದಾಖಲಾಗುವುದಿಲ್ಲ ದಾಖಲೆಗಳೆಲ್ಲಾ ಮಾನ್ಯವಾಗುವುದಿಲ್ಲ.. ಅನ್ನುವ ಅವರ ಸಾಲುಗಳು ನಮ್ಮೆದೆಯ ಬಡಿತದ ಪ್ರತಿಧ್ವನಿಯಂತಿದೆ. ಎಲ್ಲಾ ಬೆಂದ ಹೃದಯಗಳಿಗೆ ಮುಲಾಮು ಆಗುವಂತಿದೆ ಇಲ್ಲಿಯ ಕವಿತೆಗಳು. ರಂಗಮ್ಮನವರ ಕವಿತೆಗಳೂ ಔಷಧವೇ. ನಮ ಪಾಲಿನ ಆಕಾಶದಲ್ಲಿ ನಾವು ಹಾಡುತ್ತಿರಬೇಕಷ್ಟೇ ಕೊರಳಿದ್ದಲ್ಲಿ ಹಾಡುಗಳು ಅರಳುತ್ತಿರುತ್ತವೆ.. ಎಂದು ಬರೆಯುವ ಕವಯತ್ರಿ, ಮಿತಿಯೊಳಗೇ ಮೀರಿ ಬೆಳೆಯುವುದು ಹೇಗೆ? ನಮ್ಮ ಕಣ್ಣಳತೆಗೆ ದಕ್ಕಿದ್ದನ್ನೇ ಆಕಾಶವಾಗಿಸುವುದು ಹೇಗೆ ಎನ್ನುವುದಕ್ಕೆ ಉತ್ತರದಂತಿದೆ. ಮಿತ ಪದಗಳಲ್ಲಿ ಅರ್ಥ ಅನಂತವಿದೆ. ಮನುಷ್ಯರೇ ಇರದೆಡೆ ದೇವರಿರಬಹುದಾ? ಎನ್ನುವ ಪ್ರಶ್ನೆ ನಮ್ಮೊಳಗೂ ತಡಕಾಡುವಂತೆ ಮಾಡಿ ಬಿಡುತ್ತದೆ. ಮಾನವೀಯತೆಯೇ ದೈವತ್ವ ಎನ್ನುವ ಕಲ್ಪನೆಯೇ ಎಷ್ಟು ಸುಂದರವಾದದ್ದು. ಗಾಯಗಳನ್ನು ಯಾವೊತ್ತೂ ತೋರಿಸಬಾರದು, ಗಾಯ ಎಷ್ಟೇ ಇರಲಿ ಬದುಕು ಕವಿತೆಯನ್ನು ದಯಪಾಲಿಸಿದರಷ್ಟೇ ಸಾಕು ಅನ್ನುವುದು ಅವರ ವಿನಮ್ರ ಪ್ರಾರ್ಥನೆ. ಕವಿತೆ ಮಾತ್ರ ನೋವು ಮೀರುವ ಹಾದಿಯಾಗಬಲ್ಲದು ಅನ್ನುವಂತದ್ದು ಇಲ್ಲಿಯ ಕವಿತೆಗಳ ಹೂರಣ. ನೋವೂ ಒಂದು ಹೃದ್ಯ ಕಾವ್ಯ ಅನ್ನುವ ರಂಗಮ್ಮ ಹೊದೇಕಲ್ ರವರ ಕವನ ಸಂಕಲನ ಅವರ ಸುಂದರ ಕೈಬರಹದಲ್ಲಿಯೇ ಪ್ರಕಟಗೊಂಡಿರುವ ಕಾರಣ, ಇಲ್ಲಿಯ ಕವಿತೆಗಳು ಮತ್ತಷ್ಟು ಆಪ್ತವಾಗುತ್ತವೆ. ಪುಟ್ಟ ಪುಟ್ಟ ಹನಿಯೊಳಗೆ ಇಡಿಯ ಬದುಕೇ ಅಡಕಗೊಂಡಿದೆ. ನೋವನ್ನೆಲ್ಲಾ ಹೃದ್ಯ ಕಾವ್ಯವಾಗಿಸುವ ಕಲೆಗಾರಿಕೆ ಎಲ್ಲರಿಗೂ ದಕ್ಕಲಿ. ಒಳ್ಳೆಯ ಸಂಕಲನಕ್ಕಾಗಿ ಕವಯತ್ರಿ ರಂಗಮ್ಮ ಹೊದೇಕಲ್ ರವರಿಗೆ ಅಭಿನಂದನೆಗಳು. *************************************** ಸ್ಮಿತಾ ಅಮೃತರಾಜ್. ಸಂಪಾಜೆ
ನೋವೂ ಒಂದು ಹೃದ್ಯ ಕಾವ್ಯ Read Post »
ಕಾರ್ಮಿಕ
ಕವಿತೆ ಕಾರ್ಮಿಕ ಆನಂದ ಆರ್ ಗೌಡ ತಾಳೇಬೈಲ್ ಹೊತ್ತಿನ ಹಸಿವು ನೀಗಿಸಲುಸವೆದ ಶ್ರಮ ಬೆಮರಾಗಿ ಮುತ್ತಿಡುತ್ತಿದೆವಾಸವಿಯ ಹಣೆಗೆ ನಿನ್ನ ಅಳುಕು ನಿನ್ನ ಫೋಟೋಜಗವೇ ತೆಗೆದು ತುರುಕಿದೆ ಗ್ಯಾಲರಿಗೆನೀನು ನೀನೆಂದು ಸಾರಲು ನೀ ಮಾತ್ರ ಕೋಲೆಬಸವಕೊಟ್ಟ ಬಟ್ಟೆಗೆ ಇಟ್ಟ ಕೂಲಿಗೆ ಬಸವಳಿದರೂಅವರ ಇನಾಮಿಗೆ ಸಲಾಮು ನಿನ್ನದು ಶ್ರಮದ ಫಲ ತಟ್ಟೆ ತುಂಬಲಿಲ್ಲಕೊಟ್ಟ ಪಂಚೆ ಮಾನ ಮುಚ್ಚುತ್ತಿಲ್ಲಕಾಯಕಕಂಟಿದ ಚಟ ಚಟ್ಟವೇರಲು ಕಾದಿದೆ ಈ ಜೀತ ಜೀವ ಹಿಂಡಿದರುಮುಕ್ತಿ ಪಡೆಯಲು ಪ್ರೇರಕವಾಗಿಲ್ಲಮೋಕ್ಷವೇ ಹಸಿವಾಗಿ ಪ್ರೇತವಾಗಿ ಕಾಡಿದೆ ಬೆವರ ಕೈಗಳು ತೊಳೆವ ಕೊಳೆಯುಸಿರಿಯ ನುಂಗಿ ಪುಂಗಿ ಊದುವಪುಢಾರಿ ಬಾಯಿ ಕಾಯಕವೇ ಕೈಲಾಸವೆಂದಿದೆ ಗಂಧದ ಪರಿಮಳ ಅರಿಯದ ಕಲ್ಲುತಾನು ತೇಯ್ಸಿಕೊಂಡು ಸವೆದರುಮೈಯೊಡ್ಡಿದ ಕೀರ್ತಿ ಬದುಕಿಸಿದೆ ವಲ್ಲಿಗೆ ಶುಭ್ರ ಅರಿವೆ ತೊಡಿಸುವಅವರ ರೆಟ್ಟೆಗಟ್ಟಿಗೊಳಲಿಬಯಕೆ ಜೇನಾಗಲಿ *****************









