ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯುವ ಗಜಲ್‌ ಕವಿ

ಶಿವಪ್ರಕಾಶ ರು ಕುಂಬಾರ

ಹೆಸರು: ಶಿವಪ್ರಕಾಶ ರು ಕುಂಬಾರ(ನಂರುಶಿ ಕಡೂರು)

ವಯಸ್ಸು: ೩೨

ಶಿಕ್ಷಣ: ಐಟಿಐ ,ಡಿಪ್ಲೋಮಾ

ವೃತ್ತಿ: ಬೆಂಗಳೂರು ಮೆಟ್ರೋ ರೈಲ್ವೆನಲ್ಲಿ ಕಿರಿಯ ಅಭಿಯಂತರ

ಪ್ರಕಟಿತ ಕೃತಿಗಳು : ೧) ಅಮೃತ ಸಿಂಚನವು ನಿಮಗಾಗಿ ( ಕವನ ಸಂಕಲನ)

೨) ಕಾಮನ ಬಿಲ್ಲು ಬಣ್ಣ ಬೇಡುತಿದೆ (ಗಜಲ್ ಸಂಕಲನ)

೩) ನೇರಿಶಾ (ಗಜಲ್ ಸಂಕಲನ)

ಸಂಗಾತಿಓದುಗರಿಗೆ ಇವರದೊಂದು ಗಜಲ್

ಸತ್ತವನ ಮನೆಯ ಗೋಳು ನನಗೂ ಕೇಳುತಿದೆ ಗಾಲಿಬ್
ಯಮ ಕಿಂಕರರ ನರ್ತನ ಎಲ್ಲೇ ಮೀರುತಿದೆ ಗಾಲಿಬ್

ಹಸಿದ ಹೆಬ್ಬುಲಿಯಂತೆ ರಣಕೇಕೆ ಹಾಕುವುದು ಏಕೆ
ಮಸಣವು ನರ ಜೀವಗಳ ತಾನೇ ಬೇಡುತಿದೆ ಗಾಲಿಬ್

ಅಂಗುಲಿಮಾಲನಂತೆ ಕೊರಳಲಿ ಅದೆಷ್ಟು ಬುರುಡೆಗಳೋ
ಜಗವನು ಸುತ್ತುತ ತಮಟೆ ಬಡಿದು ಸಾರುತಿದೆ ಗಾಲಿಬ್

ಮೊಗ್ಗುಗಳನೂ ಬಿಡದೆ ಚಿವುಟಿ ಊದುವುದು ನ್ಯಾಯವೇ
ರಾಶಿ ಹೆಣಗಳ ತೋರಿಸಿ ಎಚ್ಚರ‌ ನೀಡುತಿದೆ ಗಾಲಿಬ್

ಹೇಡಿಯಂತೆ ಹೆದರಿ ಇನ್ನೆಷ್ಟು ದಿನ ಉಸಿರ ಹಿಡಿದಿಡಲಿ
ನಂರುಶಿ ಜೀವ ಕೂಡ ಎಲ್ಲರಲಿ ಸೇರುತಿದೆ ಗಾಲಿಬ್.

**********************************

About The Author

Leave a Reply

You cannot copy content of this page

Scroll to Top