ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಬೆಳಕು

ಬಸವರಾಜ ಕಾಸೆ

1000+ Interesting Lights Photos · Pexels · Free Stock Photos

ಕತ್ತಲು ಎಲ್ಲೆಲ್ಲಿ ಇದೀಯೋ
ಅಲ್ಲಿ ಎಲ್ಲಾ ಒಮ್ಮೆಯಾದರೂ
ತೂಗಿ ಬಿಡಬೇಕು ಆಕಾಶಬುಟ್ಟಿ
ಮಮತೆಯ ತೊಟ್ಟಿಲಂತೆ
*

ನಾ ಬೆಳಕು ಬಯಸಿದೆ
ಕತ್ತಲೆಯಲ್ಲಿ ನಿಂತು
ಒಂದು ಹಣತೆ ಹಿಡಿದು
ಆದರೆ ಆ ಕತ್ತಲೆ
ತಾನೇ ಬೆಳಗಾಗ ಬಯಸಿತ್ತು
*

ಮನೆಯೊಳಗಿನ ಮನಗಳ ದೀಪ
ಹಪಾಹಪಿಸುತ್ತಿತ್ತು
ಹೊರಗೂ ಬೆಳಕಾಗಲು
ಅದಕ್ಕಾಗಿಯೇ ಹಚ್ಚಿದರು
ಹೆಚ್ಚು ಸಾಲುಗಳ ದೀಪ
*

ನಾವು ಹಚ್ಚಿದೆವೆಂದು ಹತ್ತು ದೀಪ
ಅಲ್ಲೊಬ್ಬ ಹಚ್ಚಿದ ಇಪ್ಪತ್ತು ದೀಪ

ಆದರೆ ಬೆಳಕು

ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ
ಸದ್ದಿಲ್ಲದೆ ಪ್ರಸಾರವಾಗಿ
ಪರಸ್ಪರ ವಿನಿಮಯವಾಗುತ್ತಿತ್ತು
*

ಅತ್ತಿತ್ತ ಓಲಾಡಿ ಕುಲುಕುವ ದೀಪ
ಕ್ಷಣ ಕ್ಷಣ ಚಂಚಲವಾಗಿ
ಮತ್ತೆ ಧೃಡವಾಗುವ
ಈ ಮನಸ್ಸಿನ ವಯ್ಯಾರದಷ್ಟೆ ಸಹಜ
*

ಕತ್ತಲೆಗೆ ತೋರಿಸಬೇಕು ಅಲ್ವಾ
ಬೆಳಕು ತನ್ನ ಆಂತರ್ಯದ ಬಗೆಯನ್ನು
ಅದಕ್ಕೆ ದೀಪಾವಳಿಯಾಯಿತು
ಅಮವಾಸೆಯ ದಿನದಂದೇ

***********************************

About The Author

1 thought on “ಬೆಳಕು”

Leave a Reply

You cannot copy content of this page

Scroll to Top