ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಬದುಕುವೆ ರಾಜಹಕ್ಕಿಯಾಗಿ

ರಾಘವೇಂದ್ರ ದೇಶಪಾಂಡೆ

Bird In Flight, Bird, Flight, Nature

ಈಡೇರುವವು ಆಸೆಗಳು ಸಾವಿರಾರು
ಈ ಭವದಲಿ…
ಗಟ್ಟಿತನದ ಅಪೇಕ್ಷೆಯ ಆಶಯದಲಿ
ನನ್ನೀ ಭಾವಪರವಶದಲಿ…

ಹೊರಹೊಮ್ಮಿದವು ನಿರೀಕ್ಷೆಗಳು
ಕಮ್ಮಿಯೆನಿಸಿತಾದರೂ…
ಪ್ರೀತಿಯ ಹುಟ್ಟು ಮತ್ತು ಸಾವಿನಲಿ
ಕಾಣಸಿಗದಿಲ್ಲಿ ವ್ಯತ್ಯಾಸ…

ಜೀವಿಸುತಿರುವೆ ಅಸದೃಶವಾಗಿ
ಕತ್ತಲ ಗರ್ಭದಲಿ…
ಕಟ್ಟಿಕೊಂಡ ಹಾಳೆಯ ಕೋಟೆ ಮಧ್ಯೆ
ತೂರಿಬರುವ ಪ್ರೇಮಗಾಳಿಯಲಿ…

ಇದೆ ಎನಗೆ ತಾಳ್ಮೆ ಕಾಯುವಲಿ
ಅದೇ ತೃಪ್ತಭಾವದಲಿ…
ಬದುಕುವೆ ಖಂಡಿತ ಆಸೆಗೂಡಿನಲಿ
ಸ್ವಚ್ಛಂದದ ರಾಜಹಕ್ಕಿಯಾಗಿ…

**************************************

About The Author

Leave a Reply

You cannot copy content of this page

Scroll to Top