ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ವಾರ್ಷಿಕ ವಿಶೇಷ

ಅವಳೇ ಕಾರಣ…

ಲಹರಿ ಅವಳೇ ಕಾರಣ… ಸ್ಮಿತಾ ಭಟ್ ಏನೇ ಹೇಳಿ ಮಕ್ಕಳನ್ನು ಸಂಭಾಳಿಸುವ ವಿಷಯದಲ್ಲಿ ತಾಯಿಗೇ ಹೆಚ್ಚಿನ ಪ್ರಶಸ್ತಿಗಳು ಸಲ್ಲಬೇಕು.ಎಲ್ಲದಕ್ಕೂ ಅಮ್ಮಾ ಎಂದೇ ಕೂಗುವ ಕಂದಮ್ಮಗಳನ್ನು ತೃಪ್ತಿ ಪಡಿಸುವುದು ಸುಲಭದ ವಿಷಯವಂತೂ ಅಲ್ಲ. ಏಕ ಕಾಲದಲ್ಲಿ ನೂರು ಮಕ್ಕಳನ್ನು ಗಾಂಧಾರಿ ಹೇಗೆ ಸಂಭಾಳಿಸಿದಳೋ ಎಂದು, ಒಂದೇ ಮಗುವಿನ ತಾಯಿಯಾದ ನನಗೆ ಸದಾ ಕಾಡುವ ಸಂಗತಿ. “ಅಯ್ಯೋ ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ” ಈಗಿನ ಕಾಲದ ಮಕ್ಳೇ ಹಾಗೋ, ಪಾಲಕರೇ ಹಾಗೋ ಅನ್ನುವ, ಅವಕಾಶ ವಂಚಿತರಾಗದಂತೆ ಹಿರಿಯರಾಡುವ ಮಾತುಗಳು ನೇರ ತಾಕುವುದು ತಾಯಿಯನ್ನೇ. “ತಾಯಿಯಂತೆ ಕರು ನೂಲಿನಂತೆ ಸೀರೆ”ಎಂದು ಗುಣಗಾನದಲ್ಲೋ,ಅವಹೇಳನದಲ್ಲೋ , ಅನಾವರಣ ವಾಗುವುದು ಒನ್ಸ್ ಅಗೇನ್ ತಾಯಿ. ಗಂಡನ ಮನೆಯಲ್ಲಿ ಕೆಲಸ ಕಾರ್ಯ, ಅಡುಗೆ, ಸೇವೆ,ಸಹಕಾರ, ಯಾವುದರಲ್ಲಿ ವ್ಯತ್ಯಾಸ ವಾದರೂ ಅಪ್ಪನ ಮನೇಲಿ ತಾಯಿ ಏನೂ ಕಲಿಸಿಲ್ವೆನೋ ಅಂತಲೇ ರಾಗ ತೆಗೆಯುವುದು. ಒಟ್ಟಿನಲ್ಲಿ ಕೆಟ್ಟದಕ್ಕೆಲ್ಲ ಶನೀಶ್ವರನೇ ಕಾರಣ ಎನ್ನುವಂತೆ ತಾಯಿ ಎನ್ನುವವಳು, ಮಕ್ಕಳ ವಿಷಯದಲ್ಲಿ ಚೌತಿ ಚಂದ್ರನ ನೋಡಿದವಳಂತೆ ಬದುಕುತ್ತಿರುತ್ತಾಳೆ. ಈ ಕರೋನಾ ಕಾಲದ ಕಾರಣದಿಂದ ನಿರಂತರವಾಗಿ ಮಕ್ಕಳು ಮನೆಯಲ್ಲೇ ಕಳೆಯುವುದರಿಂದ  ಸಂಭಾಳಿಸಿವುದಂತೂ ಅತೀವ  ಕಷ್ಟದ ಕೆಲಸ. ಮತ್ತದು ತಾಯಂದಿರ ಹೆಗಲಮೇಲೆ ಸದಾ ಹೊರುವ ಹೊರೆಯಾಗಿದೆ. ಚಿಕ್ಕ ಮಕ್ಕಳಿಗೆ ಗದರಿಯಾದರೂ ಮಾತು ಕೇಳಿಸಬಹುದು. ಆದರೆ ದೊಡ್ಡ ಮಕ್ಕಳು ಹಾಗಲ್ಲ, ಅವರು ನಿರಂತರವಾಗಿ ಮನೆಯೊಳಗೇ ಇರುವದರಿಂದ ಡಿಪ್ರೆಶನ್ ಗೂ ಕೂಡಾ ಒಳಗಾಗುತ್ತಾರೆ.ಪ್ರಪಂಚಕ್ಕೆ ತರೆದು ಕೊಳ್ಳುವ ವಯಸ್ಸಾದ್ದರಿಂದ ಯಾವ ಸಮಯವನ್ನೂ ಅವರು ನಾಲ್ಕು ಗೋಡೆಯ ಮಧ್ಯೆ ಕಳೆಯಲು ಬಯಸುವುದಿಲ್ಲ.ಶಾಲೆ ಸ್ನೇಹಿತರು.ಆಟ ಓಟ ಪಾಠ ಎನ್ನುತ್ತ ಸ್ವಚ್ಛಂದವಾಗಿ ಬೆಳಯಲು ಬಯಸುತ್ತಾರೆ. ಅದು ಸರಿ ಕೂಡಾ. ಆದರೆ ಈಗ ಅನಿವಾರ್ಯವಾಗಿ ಮನೆಯಲ್ಲೇ ನಿರಂತರವಾಗಿ ಕಾಲಕಳೆಯುಬೇಕಾಗಿದೆ ಆದ್ದರಿಂದ ಹಿರಿಯರ  “ಬೇಡ””ಬೇಡ”, ಗಳೇ ಹೆಚ್ಚು ಕಿವಿಗೆ ತಾಕಿ ಎಲ್ಲದಕ್ಕೂ  ತನ್ನ ಕಟ್ಟು ಪಾಡುಗಳಿಗೆ ಒಳಪಡಿಸುತ್ತಿದ್ದಾರೆ ಅನ್ನಿಸಲು ಶುರುವಾಗುತ್ತದೆ.ಅದೆಂತಹ ಪ್ರೀತಿಯೇ ಆದರೂ ಅವಡುಗಚ್ಚಿಕೊಂಡೇ ಇದ್ದರೆ ಉಸಿರುಗಟ್ಟುವುದು ನಿಜವಾದ್ದರಿಂದ ಬಿಡುಗಡೆಯನ್ನು ಬಯಸುವ ವಯಸ್ಸೂ ಜೊತೆ ಸೇರಿ ಮುಗಿಬೀಳಲು ಶುರು ಮಾಡುತ್ತಾರೆ. ಸ್ವಲ್ಪ ತಿದ್ದು ನೋಡುವಾ ಮಕ್ಕಳನ್ನು, ಏನಿದು ಸಂಸ್ಕಾರವೇ ಇಲ್ದಾಂಗೆ ಆಡ್ತಾರೆ. ನಿನ್ನ ಅತಿಯಾದ ಮುದ್ದೇ ಕಾರಣ ಇದ್ಕೆಲ್ಲ, ಎಂದು ಹೊರನಡೆಯುವ ಅಪ್ಪಂದಿರಿಗೆ ಅಮ್ಮಂದಿರ ಕಷ್ಟ ಎಂದೂ ಅರ್ಥವಾಗುವದಿಲ್ಲ. ಅಯ್ಯೋ,, ಬಯ್ಸ್ಕೊ ಬೇಡ್ವೊ, ಅಪ್ಪನ ಹತ್ರ ಸ್ವಲ್ಪ ಹೇಳಿದ ಮಾತು ಕೇಳೋ ಎಂದು ಪಿಸು ದನಿಯಲ್ಲಿ ಅಲವತ್ತು ಕೊಳ್ಳುತ್ತಾಳೆ ಅಮ್ಮ. ನನ್ನದೇ ಮಗ ಒಂದಿನ “ಈ ಶಾಲೆ ಆದ್ರೂ ಯಾವಾಗ ಶುರುವಾಗುತ್ತೋ ಏನೋ” ನಿಮ್ಗಳ ಹತ್ರ ಬೈಸ್ಕೊಂಡು ಬೈಸ್ಕೊಂಡು ಸಾಕಾಯ್ತು ಅಂತ ಗೊಣಗುತ್ತಿದ್ದ. ಹೌದು ಹೆಚ್ಚಿನ ಮಕ್ಕಳೊಳಗೆ ಇಂತಹದ್ದೊಂದು ಪ್ರಶ್ನೆ ಕಾಡಲಾರಂಭಿಸಿದೆ. ಏಕತಾನತೆಯಿಂದ ಕಂಗಾಲಾಗಿದ್ದಾರೆ. ಪಾಲಕರಿಗೆ ಮಕ್ಕಳು ಇಡೀದಿನ ಮೊಬೈಲ್ ನೊಳಗೇ ಇರುತ್ತಾರೆ ಎನ್ನುವುದು ದೊಡ್ಡ ಚಿಂತೆಯಾಗಿದೆ.ಷ್ಟ್ರಿಕ್ಟ್ ಆಗಿ ಮೊಬೈಲ್ ಕೊಡದೇ ಇರೋಣ ಅಂದ್ರೆ ಓನ್ ಲೈನ್ ಕ್ಲಾಸ್ ಗಳು, ಮಕ್ಕಳು ಏನು ಮಾಡ್ತಾರೆ ಅಂತ ಕಾಯುಬೇಕಾ?! ಕೆಲಸ ಮಾಡ್ಕೋಬೇಕಾ? ಅನ್ನುವ ಸಂದಿಗ್ಧ ಅಮ್ಮನದು, ಏಕೆಂದರೆ ಏನು ಮಾಡ್ತಿದ್ದಾರೆ ಮಕ್ಕಳು ಎಂದು ನೋಡೋಕಾಗಲ್ವಾ? ಎನ್ನುವ ಸಿದ್ಧ ಪ್ರಶ್ನೆಯೊಂದು ಇರುತ್ತಾದ್ದರಿಂದ. ಹಲವು ತಾಯಂದಿರು ಅಕ್ಷರಶಃ ಕಂಗಾಲಾಗಿದ್ದಾರೆ. ತನ್ನೆಲ್ಲ ಚಟುವಟಿಕೆಗಳನ್ನು ಕಟ್ಟಿಟ್ಟು ಹತಾಶಳಾಗಿದ್ದಾಳೆ. ಮೊನ್ನೆ ಗೆಳತಿಯೊಬ್ಬಳು ಸಿಕ್ಕಿದ್ದಳು ಈ ವರ್ಷ ಏನ್ ಕಥೆನೋ ಏನೋ ಶೂನ್ಯ ಅವಧಿ ಎಂದು ಘೋಷಣೆಯನ್ನೂ ಮಾಡುತ್ತಿಲ್ಲ, ಶಾಲೆನೂ ಶುರು ಮಾಡುತ್ತಿಲ್ಲ,ಬರೀ ಅಂತೆ ಕಂತೆಗಳು. ಈ ಓನ್ ಲೈನ್ ಕ್ಲಾಸ್ ಅನ್ನೋದು ಮಕ್ಕಳಿಗೆ ಮೊಬೈಲ್ ಹಿಡ್ಕೊಂಡು ಕೂತ್ಕೋಳೊಕೆ ಒಳ್ಳೆ ಕಾರಣ ಆಗ್ಬಿಟ್ಟಿದೆ ನೋಡು. ಈ ಅತಂತ್ರ ಪರಿಸ್ಥಿತಿಯಲ್ಲಿ ನಮ್ಮ ಮನೆ ರಣರಂಗವಾಗಿದೆ ಕಣೇ. ಮಗನಿಗೆ ನನ್ನ ಕಂಡರೇ ಅಗಲ್ಲ,ಕಾರಣ ನಾನು ಮೊಬೈಲ ಕೊಡಲ್ಲ. ಎಲ್ಕದಕ್ಕೂ ಸಿರ್ ಅಂತ ಸಿಡಿದು ಬೀಳ್ತಾನೆ.ಅವರಪ್ಪ ನೀನೇ ಮೊಬೈಲ್ ಕೊಟ್ಟು ಕೊಟ್ಟು ಹಾಳ್ಮಾಡಿದ್ದೀಯಾ ಅಂತ ನನ್ನೇ ಅಂತಾರೆ. ಕೊಡದೇ ಹೋದ್ರೆ ಸೂರೇ ಕಿತ್ತು ಹೋಗುವಂತೆ ಆಡ್ತಾನೆ. ಸಲೀಸಾಗಿ ಸಿಕ್ಕೋದು ಅಮ್ಮಂದೇ ಮೊಬೈಲ್ ಅಲ್ವಾ ಮಕ್ಕಳಿಗೆ. ನಾವೇನೂ ಮೊಬೈಲ್ ಹಿಡ್ಕೊಂಡೇ ಓಡಾಡೋಕೆ ಆಗುತ್ತಾ! ಕೆಲಸದ ಗಡಿಬಿಡಿಯಲ್ಲಿ ಎಲ್ಲೋ ಒಂದ್ಕಡೆ ಇಟ್ಟು ಬಿಡ್ತೀವಿ.ಅದ್ಯಾವ್ದೋ ಗ್ಯಾಪಲಿ ಎತ್ಕೊಂಡ್ಬಿಡ್ತಾರೆ. ಬೈಸ್ಕೊಳೋದು ಮಾತ್ರ ನಾವೇ. ಏನೇನೋ ನಡಿತಿದೆ ಮಾರಾಯ್ತಿ ಮನೆಲಿ, ನಡೆದಿದ್ದೆಲ್ಲ ಹೇಳೋಕಾಗುತ್ತಾ ಹೇಳು ಎಂದು ಪಿಸುಗುಟ್ಟಿದಳು. ನೀನೇ ಸರಿಯಾಗಿ ಕಲಿಸಿಲ್ಲ ಚಿಕ್ಕಂದಿನಿಂದ. ಅದ್ಕೆ ಹೀಗಾಡ್ತಾರೆ ಮಕ್ಕಳು, ಅನ್ನುವಲ್ಲಿಗೆ ಕೊನೆಯ ಮೊಳೆಯ ಸುತ್ತಿಗೆ ಪೆಟ್ಟು ನಮಗೇ ನೋಡು, ಎನ್ನುತ್ತ ಜೊತೆಗಿದ್ದ ಬರೋಬ್ಬರಿ ಮೂರು ಘಂಟೆ ಮಕ್ಕಳನ್ನು ಸಂಭಾಳಿಸುವ ಬಗ್ಗೆಯೇ ಅಲವತ್ತು ಕೊಂಡಳೆಂದರೆ, ಅವಳು ಸಂಪೂರ್ಣ ಕಂಗಾಲಾಗಿದ್ದು ನಿಚ್ಚಳವಾಗಿ ಗೋಚರಿಸುತ್ತಿತ್ತು. ಒಂದು ಮನೆಯಲ್ಲಿ ಏನೇ ಸಂಭವಿಸಿದರೂ ಕಷ್ಟ,ಸುಖ ನೋವು ನಲಿವು. ಮಕ್ಕಳ ನಡೆ ನುಡಿ ಪ್ರತಿಯೊಂದಕ್ಕೂ ಅವಳೇ ಕಾರಣವಾಗುತ್ತಾಳೆ. ಎನ್ನುವುದು ಅಕ್ಷರಶಃ ಸತ್ಯ. ಚಿಕ್ಕವರಿದ್ದಾಗ ಹೆಣ್ಣಿಗೆ ಸ್ವಲ್ಪವೂ ಬಾದಿಸದ ವಿಷಯ ಮದುವೆಯಾಗಿ ಬಲಗಾಲಿಟ್ಟು ಹೊಸ್ತಿಲೊಳಗೆ ಹೊಕ್ಕ ದಿನದಿಂದ ಒಳಿತು, ಕೆಡುಕು,ಆಗು,ಹೋಗುಗಳೆಲ್ಲ ಅವಳ ಕಾಲ್ಗುಣದಮೇಲೆ ನಿರ್ಧಾವಾಗತೊಡಗುತ್ತವೆ. ಮಕ್ಕಳು ಹುಟ್ಟುತ್ತಿದ್ದಂತೆ ಅದು ದುಪ್ಪಟ್ಟಾಗಿ ಸಂಪೂರ್ಣ ಧರಾಶಾಹಿ ಯಾಗಿ ಬಿಡುತ್ತಾಳವಳು, ಆರೋಗ್ಯ, ಆಟ ಪಾಟ, ಗಾಯ, ಗಲಾಟೆ,ಎಲ್ಲದಕ್ಕೂ ಅವಳಲ್ಲಿ ಉಪಸ್ಥಿತಳಿರಬೇಕು.ಮತ್ತವಳೇ ಅದರ ಜವಾಬ್ದಾರಿ ಹೊರಬೇಕು,of course ಅಮ್ಮನಾದವಳು ಇದೆಲ್ಲವನ್ನೂ ನಿಭಾಯಿಸಲೇ ಬೇಕು. ಅದು ಅವಳ ಜನ್ಮ ಸಿದ್ಧ ಹಕ್ಕು ಮತ್ತು ಅವಕಾಶ. ಆದರೆ ಮಕ್ಕಳ ಹೊಟ್ಟೆನೋವಿಗೂ,ಬಿದ್ದು ತರಚಿಕೊಂಡದ್ದಕ್ಕೂ, ತಾಯಿಯನ್ನೇ ಕಾರಣವಾಗಿಸಿ ಬೈಯುವುದರ ಬಗ್ಗೆ ತಕರಾರಿದೆ. ಆದರೂ ಅವಳು “ಅತ್ತರೆ ಅಳಲವ್ವ ಈ ಕೂಸು ನನಗಿರಲಿ ಕೆಟ್ಟರೆ ಕೆಡಲಿ ಮನೆಗೆಲಸ” ಎನ್ನುವ ಜಾನಪದ ನುಡಿಗಟ್ಟಿನಂತೆ ಎದೆಗವಚಿಕೊಂಡೇ ಪೊರೆಯುತ್ತಾಳೆ. ತಾಯಿತಂತೆ ಸಲಹುವ ಅಪ್ಪಂದಿರೂ ಇದ್ದಾರೆ ಆದರೆ ತೀರಾ ವಿರಳ. ಅವರ ಕಷ್ಟಗಳೂ ತೇಟ್ ಅಮ್ಮನಂತೆ ಬಿಡಿ. ಅಮ್ಮನಿಗಾದರೆ ದೈವದತ್ತ ವರವಾದರೂ ಇರುತ್ತದೆ.ಆದರೆ ಇಲ್ಲಿ ಅಪ್ಪನಾದವನ ಪಜೀತಿ ನಿಜಕ್ಕೂ ಶೋಚನೀಯವೇ.. ಇನ್ನು ದಾರ್ಶನಿಕರು, ಮನೆ ಮನೆಯಲ್ಲ, ಗೃಹಿಣಿಯೇ ನಿಜವಾದ ಮನೆ, ‘ ನ ಗೃಹಂ ಗೃಹಮಿತ್ಯಾಹು ಗೃಹಿಣೀ ಗೃಹ ಮುಚ್ಯತೇ”ಎಂದಿದ್ದಾರೆ ಹೆಣ್ಣಿಲ್ಲದೇ ಒಂದು ಮನೆ ರೂಪಗೊಳ್ಳಲು ಸಾಧ್ಯವೇ ಇಲ್ಲ. ಹೆಣ್ಣನ್ನು ಮಹಾಲಕ್ಷ್ಮಿ ಎಂದು ಮಡಿಲು ತುಂಬಿ ಮನೆ ಮನಗಳ ಒಳಗೆ ಬರಮಾಡಿಕೊಳ್ಳುತ್ತೇವೆ.ಒಳ್ಳೆಯ ಮನಸಿನಿಂದ ಸದಾ ಅವಳ ಪೊರೆಯ ಬೇಕು ಎನ್ನುತ್ತಾರೆ. ಹೆಣ್ಣು ಪ್ರೀತಿ, ಹೆಣ್ಣು ಸಹನಾ ಧರಿತ್ರಿ, ಎಂದೆಲ್ಲ ಹೆಣ್ಣನ್ನು ಹೊಗಳುತ್ತಾರೆ ಮತ್ತೆ ಹಲವರು ಹೇಳುತ್ತಾರೆ. ಹೆಣ್ಣಿನಿಂದಲೇ ಮಹಾ ಮಹಾ ಯುದ್ಧಗಳು ನಡೆದವು. ಹೆಣ್ಣಿನಿಂದ ಮಹಾಭಾರತವೇ ನಡೆಯಿತು. ಹೆಣ್ಣಿಂದ ರಾವಣ ಸತ್ತ. ರಾಮ ಕಾಡಿಗೆ ಹೋದ. ದಶರಥ ಜೀವವನ್ನೇ ತೊರೆದ ಅವಳು ಮಾಯೆ. ಅವಳು ಮೋಹನಾಂಗಿ, ಅವಳು ಮೋಸ,ಎಂದು. ಹೀಗೇ ಹಲವಾರು ರೀತಿಯಲ್ಲಿ ಆರಂಭದಿಂದ ಅಂತ್ಯದ ವರೆಗೂ ಲೋಕಕ್ಕೇ ಕಾರಣವಾಗಿ ನಿಲ್ಲುತ್ತಾಳೆ ಅವಳು. ಎಲ್ಲದಕ್ಕೂ ಅವಳನ್ನು ಬೊಟ್ಟುಮಾಡಿ ಹಳಹಳಿಸುವವರಿಗೆ ಹೇಳಬೇಕಿದೆ. ನಾರಿ ಪರರುಪಕಾರಿ ನಾರಿ ಸ್ವರ್ಗಕ್ಕೆ ದಾರಿ| ನಾರಿ ಸಕಲರಿಗೆ ಹಿತಕಾರಿ|ಮುನಿದರೆ ನಾರಿಯೇ ಮಾರಿ ಸರ್ವಜ್ಞ|| ಎಂದು. ಮಕ್ಕಳ ಆರೈಕೆ,ಪಾಲನೆ, ಪೋಷಣೆಗಳಲ್ಲಿ ಕೇವಲ ಅವಳು ಮಾತ್ರ ಕಾರಣಳಾಗುವುದಿಲ್ಲ.ಮಕ್ಕಳನ್ನು ಸಂಭಾಳಿಸುವುದು ಅತ್ಯಂತ ಸೂಕ್ಷ್ಮ ಸಂವೇದಿ ವಿಚಾರ.ಅಲ್ಲಿ ಇಡೀ ಕುಟುಂಬ,ಕುಟುಂಬದ ವಾತಾವರಣವೇ ಮುಖ್ಯ ಕಾರಣವಾಗಿ ನಿಲ್ಲುತ್ತದೆ. ಆದರೆ ತಾಯಿಯಾದವಳು “ತಾಯಿಯಂತೆ ಮಗಳು ನೂಲಿನಂತೆ ಸೀರೆ” ಎನ್ನುವ ವಿಚಾರವನ್ನೂ ಮರೆಯಬಾರದು.

ಅವಳೇ ಕಾರಣ… Read Post »

ಕಾವ್ಯಯಾನ

ಹನಿಗಳು

ಕವಿತೆ ಹನಿಗಳು ನಾಗರಾಜ. ಹರಪನಹಳ್ಳಿ -1-ಮೌನವಾಗಿ ಬಿದ್ದ ದಂಡೆಯಲ್ಲಿಒಂಟಿಯಾಗಿಧ್ಯಾನಿಸುತ್ತಿದೆ ದೋಣಿಬದುಕಿನ ಯಾತ್ರೆ ಮುಗಿಸಿ -2-ಕಡಲ ಅಲೆಗಳ ಸದ್ದುಕೇಳಿಯೂ ಕೇಳದಂತೆಬಿದ್ದಿರುವ ದಂಡೆಯ ಕಂಡುಆಗಸದಲ್ಲಿ ಚಂದ್ರನಗುತ್ತಿದ್ದ -3-ಸಂಜೆ ಗತ್ತಲುದಂಡೆಯಲ್ಲಿ ನಡೆದಾಡುತ್ತಿರುವಜೋಡಿ ನೆರಳುಗಳುನಕ್ಷತ್ರಗಳು ಹಾಡುತ್ತಿರೆಮಗುಮರಳಲ್ಲಿ ಗುಬ್ಬಚ್ಚಿಗಾಗಿಮನೆ ಮಾಡುತ್ತಿತ್ತು -4-ಗಾಳಿ ಸಿಳ್ಳೆಹಾಕುತ್ತಿತ್ತುಕಡಲಲ್ಲಿ ಯಾರೋದೀಪಸಾಲು ಹಚ್ಚಿಟ್ಟಂತೆದೋಣಿಗಳುಬದುಕಿಗಾಗಿಹುಡುಕಾಡುತ್ತಿದ್ದವು ********************************

ಹನಿಗಳು Read Post »

ಕಾವ್ಯಯಾನ

ನೆನಪು

ಕವಿತೆ ನೆನಪು ಡಾ. ರೇಣುಕಾ ಅರುಣ ಕಠಾರಿ ಮಾಸಿ ಹೋದ ಕಾಗದಅದರ ಮೇಲೆ ಅಪ್ಪ ಬರೆದಿದ್ದ ಅಕ್ಷರಮಡಿಕೆಗಳ ತವರೂರೆ ಆಗಿ ನಿಂತಿತ್ತು.ಏಷ್ಟೋ ಅಕ್ಷರಗಳು ಆ ಮಡಿಚಿಟ್ಟ ರೇಖೆಯೊಳಗೆಸೇರಿಕೊಂಡು ಕಾಣಲು ಕಾಡಿಸುತ್ತಿದ್ದವು.ಎನು ಬರೆದಿರಬಹುದು! ಇದರಲ್ಲಿ ಎಂಬಕುತೂಹಲ ಮತ್ತು ತವಕ ಹೆಚ್ಚಾದವು. ಉಬ್ಬಿದ ಕಾಗದ ಅಲ್ಲಿ ಅಲ್ಲಿ ಚಲ್ಲಿದ ಶಾಹಿಅದರ ಬಣ್ಣೋ ವಿಕಾರಕ್ಕೆ ತಿರುಗಿತ್ತುಅಕ್ಷರಗಳಿಗೆ ಸ್ವಲ್ಪವೂ ನಗು ಇರಲಿಲ್ಲಕೆಳಗಿಂದ ಮೇಲೆಕ್ಕೆಮತ್ತು ಮೇಲ್ಲಿಂದ ಕೆಳಕ್ಕೆಏನೋ ಸಣ್ಣ ಸಣ್ಣ ಸಂಕೇತಗಳುಅಯೋ! ಒಂದು ತಿಳಿತಿಲ್ವಾಲ್ಲ ?ಅಂತಹಿಂದೆ ಮುಂದೆ ಕಾಗದದ ಅಕ್ಕ ಪಕ್ಕನೋಡುತ್ತಿದ್ದಾಗ,.. ಜೋಪಾನವೇ ತುಂಡಾಗಿತುಎಂದು ಮೃದು ಮನಸಿನ ಮೆಲು ದನಿನನ್ನನ್ನು ಥಟ್ಟ ಅಂತ ಎಚ್ಚರ ಮಾಡಿತು.ನನ್ನ ಪಾಲಿಗೆ ನೆನಪಾಗಿ ಇವತ್ತಿನವರೆಗೂಉಳಿದಿರುವುದು ಅದೊಂದೆ!ಅಂದ್ಲೂ ಅಜ್ಜಿನೆನಪು ಹೀಗೆ ಅಲ್ವವೇ?ಯಾವಾಗಲಾದರೂ, ಎಲ್ಲಿಯಾದರೂಯಾರಲ್ಲಾದರೂಮತ್ತೆ ಮತ್ತೆಕಣ್ಮಂದೆ ಮಾಸದೆ ಬಂದು ನಿಲ್ಲುತ್ತವೆ.ಸರಿ ಅಜ್ಜಿ ಎಂದು ಉತ್ತರಿಸಿದೆ.ಆದರೆ,.ಆ ಕಾಗದದಲ್ಲಿ ಏನಿದೆಎಂಬ ವಿಚಾರ ಮಾತ್ರ ನನಗೆ ತಿಳಿಯಲಿಲ್ಲ?ನನ್ನ ಮನಸಿನ ಕಣ್ಣಿಗೆ ಮಾತ್ರ ಕಾಣಲಿಲ್ಲವೋ?ನನ್ನ ಅರಿವುಗೆ ಬರಲಿಲ್ಲವೋ?ಗೊತ್ತಾಗಲಿಲ್ಲ. ನಿನ್ನ ಅಪ್ಪನ ಕೊನೆಯ ಕಾಗದವಿದುನನಗೆ ಕಳಸುವ ಮುನ್ನವೇ ಅವನು ಹೊರಟ.ಯುಗ ಉರಳಿದರು ನನಗೆ ಇದುಇವತ್ತಿಗೂ ಹೊಸ ಕಾಗದ.ಅಕ್ಷರ ಮಾಸಿರಬಹುದು,ಶಾಹಿ ತನ್ನ ಬಣ್ಣ ಕಳದುಕೊಂಡಿರಬಹುದುಆದರೆ,ಅವನು ಬರೆದಿರುವ ಒಂದೊಂದು ಪದವುಚೈತನ್ಯ ನೀಡುತಿವೆ, ಮತ್ತೆ ಮತ್ತೆನನ್ನ ಮಡಿಲಲ್ಲ ಜೋಗುಳದ ಲಾಲಿಮರುಕಳಿಸುತ್ತೆನನ್ನ ಆ ತಾಯಿತನ ಜೀವಂತವಾಗುವುದುಆ ಪದಗಳ ಸ್ಪರ್ಶದಿಂದ ಆದರೆ,ನಾನ ಮಾತ್ರ ಅಮೃತಳಾಗಿಹೆನು ***************************************.

ನೆನಪು Read Post »

ಕಥಾಗುಚ್ಛ

ಹೇಮಾ

ಕಥೆ ಹೇಮಾ ಎಂ.ಆರ್.ಅನಸೂಯ ವಿಜಯಾ  ಸಂಜೆ ಕಾಫಿ ಕುಡಿದು ಕೂತಿದ್ದಾಗ ಪಕ್ಕದಲ್ಲೇ ಇದ್ದ ಮೊಬೈಲ್ ರಿಂಗಣಿಸಿತು. ನೋಡಿದರೆ  ಹೇಮಾ !  ” ನಮಸ್ತೆ ಮೇಡಂ “ ಹೇಮಾ, ಆರಾಮಾಗಿದೀಯಾ ,  ಹೇಗಿದಾನಮ್ಮ ನಿನ್ನ ಮಗ ? ಚೆನ್ನಾಗಿದ್ದಾನೆ  ಮಿಸ್.  ಮಿಸ್ ಮುಂದಿನ ಭಾನುವಾರ ನಾಮಕರಣ ಶಾಸ್ತ್ರವಿದೆ ಖಂಡಿತ ಬರಬೇಕು ಮೇಡಂ   ಹೌದಾ ಎಷ್ಟು ತಿಂಗಳು ಮಗುವಿಗೆ ಐದು ತಿಂಗಳು  ಮಿಸ್ ಹೇಮಾ , ನೀನು ಊರಿಗೆ ಬಂದಾಗ ತಿಳಿಸು. ಪಾಪುನ  ನೋಡಲು  ಬರುತ್ತೇನೆ. ಪಾಪುಗೆ ಏಳು ತಿಂಗಳಾದಾಗ  ಊರಿಗೆ ಬರ್ತಿನಿ ಮಿಸ್ ಅಜ್ಜಿಗೆ ಆಗುವುದಿಲ್ಲ. ಕಷ್ಟ ಆಗುತ್ತೆ. ಬೇಡ  ಅಂದ್ರು ಅತ್ತೆ ಹೌದಲ್ವಾ ನಿಮ್ಮತ್ತೆ ಹೇಳೋದು ಸರಿಯಾಗೇ ಇದೆ ಹೌದು  ಮಿಸ್  ನಮ್ಮತ್ತೆ ತುಂಬಾ ಒಳ್ಳೆಯವರು   ಹೇಮಾ ನೀನು ಊರಿಗೆ ಬಂದಾಗ  ಫೋನ್ ಮಾಡು ಆಯ್ತು ಮಿಸ್ . ಮಗು ಅಳುವ  ಧ್ವನಿ ಕೇಳಿಸಿತು. ಸರಿ  ಈಗ ಮಗುವನ್ನು ನೋಡು ಹೇಮಾ ಎಂದು ಹೇಳಿ ವಿಜಯಾ ಫೋನಿಟ್ಟರು. ಆದರೂ ಹೇಮಾಳ ಗುಂಗು ಮನದಲ್ಲಿ ಉಳಿಯಿತು.  ಹೇಮಾ  ವಿಜಯಾಳ  ಶಿಷ್ಯೆ. ಅವಳು ಪ್ರೌಢಶಾಲೆಯಲ್ಲಿ  ಓದುತ್ತಿದ್ದ ಕಾಲದಿಂದಲೂ  ಅವಳ ನಡೆನುಡಿಗಳು  ಇಷ್ಟ  ಮಧ್ಯಮ ವರ್ಗಕ್ಕೆ ಸೇರಿದ ಹೇಮಾ ಚುರುಕು ಹುಡುಗಿ ಹೆತ್ತತಾಯಿಯಿಲ್ಲದೆ ಅಜ್ಜಿ ತಾತನ ಆಶ್ರಯದಲ್ಲಿ ಬೆಳೆದ ಸಂಕೋಚ ಸ್ವಭಾವದ ಅವಳು ಓದಿನಲ್ಲಿ ಜಾಣೆ. ಒಮ್ಮೆ ಅವರ ಅಜ್ಜಿ ಪೋಷಕರ ಸಭೆಗೆ ಬಂದಾಗ ಅವರ ಆಜ್ಜಿ ಹೇಳಿದ್ದು ಅವರು ನೆನಪಿಗೆ ಬಂತು.  ಅವಳ ತಾಯಿಯು ಹೇಮಾಳ ತಮ್ಮನಿಗೆ ಜನ್ಟ ಕೊಟ್ಟ ನಂತರ  ತೀರಿಕೊಂಡ ದುರ್ದೈವಿ. ಹೆರಿಗೆಗಾಗಿ ತವರು ಮನೆಗೆ ಬಂದಿದ್ದರಿಂದ ಮಕ್ಕಳು ಇಲ್ಲೇ ಉಳಿದವು. ಹೇಮಾಳ ತಂದೆಯ ತಾಯಿ ತಂದೆಯರೂ ಇಲ್ಲದ ಕಾರಣ ಆ ಮಕ್ಕಳನ್ನು ಸಲಹಲು ಯಾರೂ ಮುಂದೆ ಬರಲಿಲ್ಲ. ಹೇಮಾಳ ತಾಯಿ ಒಬ್ಬಳೆ ಪ್ರೀತಿಯ ಮಗಳಾದ್ದರಿಂದ ಅವಳ ಮಕ್ಕಳಿಬ್ಬರು ಅನಾಥ ತಬ್ಬಲಿಗಳಂತೆ ಬೆಳೆಯುವುದು ಬೇಡವೆಂದು ಮಕ್ಕಳನ್ನು ತಾವೇ ಸಾಕಲು ನಿರ್ಧರಿಸಿದರು. ಹೇಮಾಳ ಇಬ್ಬರು  ಸೋದರ ಮಾವಂದಿರು ಸಹ ಒಪ್ಪಿದರು. ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿದ್ದರೂ ಸಹಾ ತಾವು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಹೇಮಾಳ ತಾತ ಚಿಕ್ಕ ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಮೊದಲಿಗೆ ಹೇಮಾಳ ತಂದೆಯು ತಿಂಗಳಿಗೊಮ್ಮೆ ಬರುತ್ತಿದ್ದವರು ಎರಡನೆ ಮದುವೆಯಾದ ನಂತರ ಆರು ತಿಂಗಳಿಗೊಮ್ಮೆ ಬಂದಾಗ  ಮಕ್ಕಳಿಗೆ ಒಂದಿಷ್ಟು ಬಟ್ಟೆಗಳನ್ನು ಕೊಡಿಸಿ ಅವರ ಕೈಯಲ್ಲಿಷ್ಟು ಹಣ ಕೊಟ್ಟರೆ ತನ್ನ ಜವಾಬ್ದಾರಿಯು ಮುಗಿಯಿತೆಂದು ಭಾವಿಸಿದ್ದ ಮಹಾನುಭಾವ. ತಾಯಿ  ಸತ್ತ ಮೇಲೆ ತಂದೆ ಚಿಕ್ಕಪ್ಪ ಎಂಬ ಗಾದೆಗೆ ತಕ್ಕಂತಿದ್ದರು. ಮಗಳ ಮಕ್ಕಳು ಓದಿನಲ್ಲಿ ಮುಂದಿರುವುದು ಹೇಮಾಳ ಅಜ್ಜಿ ತಾತನಿಗೆ ನೆಮ್ಮದಿ. ಹೇಮಾಳಂತೂ ಅವಳಮ್ಮನ ಪಡಿಯಚ್ಚು.  ಮಗಳ ಸಾವಿನ ಸಂಕಟವನ್ನು ಇಬ್ಬರು ಮೊಮ್ಮಕ್ಕಳ ಆಟ ಪಾಠಗಳು ಮರೆಸಿದ್ದವು‌. ಇಬ್ಬರೂ ಸೋದರ ಮಾವಂದಿರಿಗೂ ತಂಗಿಯ ಮಕ್ಕಳನ್ನು ಕಂಡರೆ ಬಲು ಅಕ್ಕರೆ. ತನ್ನ ಪ್ರೀತಿಯ ಅಜ್ಜಿಯನ್ನು ಬಿಟ್ಟು ಒಂದು ದಿನವೂ ಇರಲಾರಳು ಹೇಮಾ. ಶಾಲೆಗೆ ರಜೆ ಬಂದಾಗ ಮಾವಂದಿರು “ಬಾ ಪುಟ್ಟಿ ನಮ್ಮ ಮನೆಯಲ್ಲಿ ಒಂದೆರಡು ದಿನ ಇದ್ದು ಬರುವೆಯಂತೆ”ಎಂದು ಕರೆದರೆ ಅಜ್ಜಿ ಬಂದ್ರೆ ಮಾತ್ರ  ಬರ್ತಿನಿ’ ಎಂದು ಮುದ್ದಾಗಿ ಹೇಳಿದರೆ  ಅಜ್ಜಿಗೆ ಪ್ರೀತಿಯುಕ್ಕಿ ಬರಸೆಳೆದು ಮುತ್ತಿಡುತ್ತಿದ್ದರು.  ಹೇಮಾಳಿಗೆ ತಮ್ಮನನ್ನು ಕಂಡರೆ ಬಲು ಪ್ರೀತಿ.  ಯಾವುದನ್ನೇ ಆಗಲಿ ತಮ್ಮನೊಡನೆ ಹಂಚಿಕೊಂಡು ತಿಂದರೆ ಮಾತ್ರ  ಅವಳಿಗೆ ಸಮಾಧಾನ. ಹೇಮಾಳ ಅಜ್ಮಿ ಹೇಳಿದ ಒಂದು ಪ್ರಸಂಗ ನೆನಪಿಗೆ ಬಂತು. ಆ ಸಂಗತಿಯನ್ನು ಹೇಳುತ್ತಾ ಕಣ್ತುಂಬಿ ಕೊಂಡಿದ್ದರು. ಒಮ್ಮೆ ಅವರ ಮನೆಯಿದ್ದ ಬೀದಿಯ ಮನೆ ಒಂದರಲ್ಲಿ ನಡೆದಿದ್ದು. ಚಿಕ್ಕ ಮಗುವಿನ ತಾಯಿಯೊಬ್ಬಳು ಏನೋ ಖಾಯಿಲೆಯಿಂದ ತೀರಿಕೊಂಡಿದ್ದರು. ಅದನ್ನು ಕಂಡ ಜನರು ಆ ತಬ್ಬಲಿ ಮಗುವಿನ ಬಗ್ಗೆ ಅನುಕಂಪದ ಮಾತುಗಳನ್ನಾಡುವುದನ್ನು ಕೇಳಿದ ಹೇಮಾ ‘ಅಜ್ಜಿ ಆ ಪಾಪುಗೆ ಇನ್ಮುಂದೆ ಎಷ್ಟು ಕಷ್ಟ ಆಗುತ್ತಲ್ವ ‘ಎಂದು ಕೇಳಿ ಕಣ್ಣೀರು ಹಾಕಿದ್ದಳಂತೆ. ರಾತ್ರಿ ಮಲಗುವಾಗ ಅಜ್ಜಿಯನ್ನು ತಬ್ಬಿಕೊಂಡು ‘ಅಮ್ಮ ಇಲ್ಲದಿದ್ರೂ ನೀನು ನಮ್ಮನ್ನು ಸಾಕಿ ನೋಡಿಕೊಂಡಂಗೆ ಅವರಜ್ಜಿನೂ ಹಾಕ್ತಾರೆ ಅಲ್ವಾ ಅಜ್ಜಿ’ ಎಂದು ಕೇಳಿದ್ದನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದರು. ನಾವಿಲ್ಲದಿದ್ರೆ ಈ ಮಕ್ಕಳ ಗತಿ ಏನಾಗ್ತಿತ್ತೋ ಎನ್ನುತ್ತಾ ಸಂಕಟ ಪಟ್ಟಿದ್ದರು. ಅವರಿಬ್ಬರು  ಒಳ್ಳೆಯ ರೀತಿಯಲ್ಲಿ ಜೀವನದಲ್ಲಿ ನೆಲೆ ಕಂಡರೆ ಸಾಕೆಂಬ ಹಾರೈಕೆ ಅವರದು ಪ್ರೌಢ ಶಾಲಾ ವಿದ್ಯಾಭ್ಯಾಸದ ನಂತರವೂ ಸಹ  ಹೇಮಾ ಆಗಾಗ್ಗೆ ವಿಜಯಾ ಟೀಚರ್ ಗೆ ಫೋನ್ ಮಾಡುವುದು ಹಾಗೂ ಸಲಹೆಗಳನ್ನು ಕೇಳುತ್ತಾ ಸಂಪರ್ಕದಲ್ಲಿದ್ದಳು . ಹೇಮಾ ಈಗ ಎರಡನೆ ವರ್ಷದ  ಪದವಿ  ಓದುತ್ತಿದ್ದಳು. ಅವಳ ತಮ್ಮ ಹತ್ತನೆ ತರಗತಿಯಲ್ಲಿದ್ದ. ಅಕ್ಕತಮ್ಮಂದಿರು ವಿಜಯಾ ಟೀಚರ್  ಶಿಷ್ಯರೆ. ಇತ್ತೀಚೆಗೆ ಅವಳು ಫೋನ್ ಮಾಡಿ ಮಾತನಾಡುತ್ತ ಅವರ ಅಜ್ಜಿಗೆ ಮೊದಲಿನಂತೆ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ. ತಾನು ಅವರಿಗೆ ಈಗ ಮೊದಲಿಗಿಂತ ಹೆಚ್ಚು ಸಹಾಯ ಮಾಡುತ್ತಿರುವೆ ಎಂದು ಹೇಳಿ ತಮ್ಮನ ಓದಿನ ಬಗ್ಗೆ ವಿಚಾರಿಸುತ್ತಾ ತಾನೆ ಅವನಿಗೆ ಗಣಿತವನ್ನು ಹೇಳಿಕೊಡುತ್ತಿದ್ದೇನೆ ಎಂದಿದ್ದಳು. ವಾರದ ಹಿಂದೆ ಅವಳ ತಮ್ಮ ಎರಡು ದಿನ ಶಾಲೆಗೆ ಬಂದಿರಲಿಲ್ಲ. ಏಕೆ ಎಂದು ಕೇಳಲು ಅವರ ತಾತ ಜಾರಿ ಬಿದ್ದು ಫ್ರಾಕ್ಚರ್ ಆಗಿದ್ದು  ಹಾಸ್ಪಟಲ್ ಗೆ ಸೇರಿಸಿದ್ದರು. ಹಾಗಾಗಿ ಬರಲು ಆಗಲಿಲ್ಲ ಎಂದು ಹೇಳಿದ. ಹೇಮಾಳಿಗೆ ಫೋನ್ ಮಾಡಿ ಕೇಳಿದಾಗ  ಈಗ ಮನೆಗೆ  ಕರೆದುಕೊಂಡು ಬಂದಿದ್ದೇವೆ. ಮಾವಂದಿರೆ ಇಲ್ಲೇ ಇದ್ದು ಎಲ್ಲವನ್ನು ನೋಡುತ್ತಿದ್ದಾರೆ  ಎಂದಳು. ಆವರ  ತಾತ ಮನೆಯಿಂದ ಹೊರಗೆ  ಎಲ್ಲೂ ಹೋಗದೆ ಮನೆಯ ಮಟ್ಟಿಗೆ ಓಡಾಡಿಕೊಂಡಿದ್ದರು. ಗಿರಣಿಯ ಮೇಲ್ವಿಚಾರಣೆ ನಡೆಸುವುದು ಕಷ್ಟವಾದರೂ ವಿಧಿಯಿರಲಿಲ್ಲ. ಆದರೂ  ಅಜ್ಜಿಯ ಸಹಾಯದಿಂದ ಹೇಗೋ ನಿಭಾಯಿಸುತ್ತಿದ್ದರು. ಇತ್ತೀಚೆಗೆ  ಹೇಮಾಳ ಮದುವೆಯ ಮಾತನ್ನು ಪದೇಪದೇ ಪ್ರಸ್ತಾಪಿಸುತ್ತಿದ್ದರು.. ಇದರಿಂದ  ಓದುವ ಆಸೆ ಬಲವಾಗಿ ಇಟ್ಟುಕೊಂಡಿದ್ದ  ಹೇಮಳಿಗೆ ಆತಂಕವು ಶುರುವಾಯಿತು.  ಕಾಲೇಜ್ ನ್ನು  ಮುಗಿಸಿ ಮನೆಗೆ ಹೋಗುವಾಗ ವಿಜಯಾ  ಟೀಚರ್  ಮನೆಗೆ ಬಂದು ತಮ್ಮ ತಾತ ತನಗೆ ಮದುವೆ  ಮಾಡಲು  ಆತುರ ಮಾಡುತ್ತಿದ್ದಾರೆಂದು ಹೇಳಿದಳು. ಇರಲಿ ಬಿಡು ಮದುವೆ ಎಂದು ಹೇಳಿದಾಕ್ಷಣ ಆಗುತ್ತಾ .ನೀನು ಮಾತ್ರ ಚೆನ್ನಾಗಿ ಓದು ಎಂದು ಸಮಾಧಾನ ಹೇಳಿದರು.ವಿಜಯ ಟೀಚರ್ ರಾತ್ರಿ ಊಟ ಮಾಡಿ  ಅಡುಗೆಮನೆ ಕೆಲಸವನ್ನು  ಮುಗಿಸಿ  ವಾರ ಪತ್ರಿಕೆಯನ್ನು ಓದುತ್ತಿದ್ದಾಗ ಮೊಬೈಲ್ ರಿಂಗ್ ಆಯಿತು. ನೋಡಿದರೆ  ಹೇಮಾಳದು. ಅತ್ತಲಿಂದ “ಮೇಡಂ . . ಬಿಕ್ಕಿ ಬಿಕ್ಕಿ ಅಳುವ ಸದ್ದು. “ಹಲೋ, ಹೇಮ  . . .  ಹಲೋ”ಎಂದರೆ ಮಾತಿಲ್ಲ ಸುಮ್ಮನೇ ಅಳುವುದು ಹಾಗೇ ಫೋನ್ ಕಟ್ ಆಯ್ತು. ಹತ್ತು ನಿಮಿಷದ ನಂತರ ಮತ್ತೆ ಫೋನ್. ಅವಳು ಫೋನ್ ಮಾಡುವಾಗ ಯಾರೊ ಬಂದಿರಬೇಕು.ಅದಕ್ಕೆ ಫೋನ್ ಕಟ್ ಆಗಿದೆಯೆನಿಸಿತು. ಮತ್ತೆ ಫೋನ್ ಬಂದಾಗ “ಹಲೋ ಹೇಮಾ,ಯಾಕಮ್ಮ ಏನಾಯ್ತು” ಮತ್ತೆ ಅಳು. ” ಹಲೋ,ಹೇಮಾ ನಾಳೆ ನಮ್ಮ ಮನೆಗೆ ಬಾ. ಅಳಬೇಡ  ಸುಮ್ನೆ ಮಲಗು” ಎನ್ನುತ್ತಿದ್ದಂತೆ ಫೋನ್ ಕಟ್. ಮತ್ತೆ  ಫೋನ್ ಬರಲಿಲ್ಲ. ಯಾರೋ ಪಕ್ಕದಲ್ಲಿರಬೇಕೆನ್ನಿಸಿತು ನಾನು ಫೋನ್ ಮಾಡಲಿಲ್ಲ.  ಮಾರನೆಯ ದಿನ ಭಾನುವಾರ ಸಂಜೆ ನಾಲ್ಕಕ್ಕೆ ಹೇಮಾ ಬಂದಳು. ತುಂಬಾ ಡಲ್ ಆಗಿದ್ದಳು. ಕಾಫಿ ಕುಡಿಯುತ್ತಾ ವಿಜಯಾ ಕೇಳಿದರು. “ಏನಾಯ್ತು ಹೇಳು ಹೇಮಾ” ಮೇಡಂ, ತಿಂಗಳು ಹಿಂದೆ ನಮ್ಮ ತಾತನಿಗೆ ಲೋ ಬಿ.ಪಿ. ಆಗಿ ಮತ್ತೆ ಹಾಸ್ಪಿಟಲ್ ಗೆ ಸೇರಿಸಿದ್ವಿ.  ಹಾಸ್ಪಿಟಲ್ ನಿಂದ ಬಂದ ದಿನದಿಂದ  ಒಂದೇ ಮಾತು ಮೇಡಂ  ಹೇಮಾಳ ಮದುವೆ ಬೇಗ ಮಾಡ್ಬೇಕು. ನಾನು ಹೆಚ್ಚು ದಿನ ಬದುಕಲ್ಲ ನಾನಿರುವಾಗಲೇ ಅವಳಿಗೆ ಒಂದು ನೆಲೆ ಕಾಣಿಸಬೇಕು  ಅದೊಂದು ಜವಾಬ್ದಾರಿಮುಗಿದ್ರೆ ನೆಮ್ಮದಿಯಾಗಿ ಪ್ರಾಣ ಬಿಡ್ತೀನಿ ಎಂದು ಹಠ ಮಾಡಿ ನಮ್ಮ ಮಾವಂದಿರನ್ನು ಒಪ್ಪಿಸಿದ್ದಾರೆ ನಂತರ ನಮ್ಮ ತಂದೆಗೂ ಫೋನ್ ಮಾಡಿ ವಿಷಯ ತಿಳಿಸಿ ಬರಲು ಹೇಳಿದ್ದಾರೆ. ಇನ್ನು ಒಂದೂವರೆ ವರ್ಷ ತಡೆದರೆ ನನ್ನ ಗ್ರಾಜುಯೇಷನ್ ಕಂಪ್ಲೀಟಾಗ್ತಿತ್ತು . ನನಗೆ ಈಗಲೆ ಮದುವೆ ಬೇಡ ಎಂದರೆ  ನೀನಿನ್ನು  ಚಿಕ್ಕ ಹುಡುಗಿ ಸುಮ್ನಿರಮ್ಮ ನಿನಗಿದೆಲ್ಲ ಅರ್ಥ ಆಗೋದಿಲ್ಲ ಎನ್ನುತ್ತಾರೆ..ಅಜ್ಜಿನೂ ಸಹಾ ನಿಮ್ಮ ತಾತ ಹೇಳಿದ ಹಾಗೆ ಕೇಳು. ನಿನ್ನ ಒಳ್ಳೆಯದಕ್ಕೆ ನಾವು ಹೇಳೋದು ಅಂತಾರೆ . ನನಗೇನಾದ್ರೂ ಹೆಚ್ಚು ಕಡಿಮೆ ಆದರೆ ನಿನ್ನನ್ನು  ನೋಡಿ ಕೊಳ್ಳೋದು ಯಾರು? ನಿಮ್ಮಪ್ಪ ಬಂದು ಕರ್ಕೊಂಡು ಹೋಗಿ ನಿನ್ನನ್ನು ಸಾಕ್ತಾನಾ ಹೇಳು. ಆ ನಂಬಿಕೆ ನಿನಗೆ ಇದ್ಯಾ. ಒಂದು ವೇಳೆ ಕರೆದುಕೊಂಡು ಹೋದ್ರು ನಿನ್ನ ಸ್ಥಿತಿ ಎಷ್ಟರಮಟ್ಟಿಗೆ ಇರುತ್ತೆ ಅಂತ ಯೋಚನೆ ಮಾಡು ನಾವ್ಯಾರು ಶ್ರೀಮಂತರಲ್ಲ. ಅವರವರ ಸಂಸಾರಗಳೇ ಅವರಿಗೆ ಭಾರ ಆಗಿರೋ ಕಾಲದಲ್ಲಿ ನಿನ್ನನ್ನ ಒಂದು ನೆಲೆ ಮುಟ್ಟಿಸೋ ಜವಾಬ್ದಾರಿ ನನ್ನದು. ಅದನ್ನು ಮಾಡದಿದ್ರೆ ನಿನ್ನನ್ನು ಇಷ್ಟು ವರ್ಷ ಪ್ರೀತಿಯಿಂದ  ಸಾಕಿ ಸಲಹಿದ್ದಕ್ಕೆ ಏನು ಪ್ರಯೋಜನ ? ನೀನೇ ಹೇಳು. ಇನ್ನು ನಿನ್ನ ತಮ್ಮ ರಾಘು ಗಂಡು ಹುಡುಗ ಹೇಗೋ ಆಗುತ್ತೆ . ಅವನ ಬಗ್ಗೆ ಯೋಚನೆ ಮಾಡ್ಬೇಡ. ಜಾಣ ಹುಡುಗ ಚೆನ್ನಾಗಿ ಓದ್ಬಿಟ್ಟು ಕೆಲಸಕ್ಕೆ ಸೇರಿದರೆ ಮುಗೀತು. ನಮಗೆ ನಿನ್ನದೆ ಚಿಂತೆ . ಈ ಮನೆ ಬಿಟ್ರೆ ನಿನಗೆ ಎಲ್ಲೂ ಸರಿಯಾದ ಜಾಗ ಇಲ್ಲಮ್ಮ. ನೀನು ಚೆನ್ನಾಗಿದ್ರೆ ನಮಗೆ ನೆಮ್ಮದಿ ಎಂದು ಅಜ್ಜಿ ತಾತ ಹೇಳ್ತಾರೆ ಮೇಡಂ ಎಂದು ಕಣ್ಣೀರುಹಾಕಿದಳು.ನೀವಾದ್ರು ಒಂದು ಮಾತು ಹೇಳಿ ಮೇಡಂ. ನಾನು ಇನ್ನೂ ಓದ್ಬೇಕು  ಮೇಡಂ. ನಾನು ಬಿ.ಇಡಿ. ಮಾಡೋ ಆಸೆಯಿದೆ. ಮದ್ವೆ ಆದ ಮೇಲೆ ಯಾರು ಓದಿಸ್ತಾರೆ ಮೇಡಂ. ಪ್ರೀತಿಯಿಂದ  ಸಾಕಿದ ಅಜ್ಜಿ ತಾತನಿಗೆ ಹೇಗೆ ಹೇಳಿ ಒಪ್ಪಿಸಬೇಕು ಅಂತ ಗೊತ್ತಾಗ್ತಿಲ್ಲ ಎಂದು ಹೇಳುತ್ತ ಬೇಸರ ಪಟ್ಟಳು. ಜಾಣೆ ಯಾಗಿದ್ದು ಅವಳಲ್ಲಿ ಓದುವ ಆಸೆ ಅದಮ್ಯವಾಗಿತ್ತು.  ಆದರೆ ಅವರ ಅಜ್ಜಿ ತಾತ ಹೇಳೋ ಮಾತಿನಲ್ಲಿ ಸತ್ಯಾಂಶ ಇದ್ದಿದ್ದರಿಂದ” ಹೌದು ಹೇಮಾ ಅವರು ಹೇಳಿರುವುದೆಲ್ಲಾ ಸರಿಯಾಗಿದೆ. ಯೋಚನೆ ಮಾಡು. ನೀನು ಮದುವೆ ಆದ ಮೇಲೆ ನಿನ್ನ ಗಂಡನನ್ನು ಒಪ್ಪಿಸಿ ಓದಬಹುದಲ್ವ. ನಿಮ್ಮ ತಾತನಿಗೂ ಹೇಳು ಮದುವೆಯ ನಂತರವು ನೀನು ಓದು  ಮುಂದುವರಿಸಲು ಅವಕಾಶ ಕೊಡಿರಿ ಎಂದು ಕೇಳಲು. ನೋಡೋಣ. ಇನ್ನೂ ಗಂಡು ಸಿಕ್ಕಿ ಮದುವೆಯಾಗುವ ವೇಳೆಗೆ ಪದವಿಯ ಎರಡನೆ ವರ್ಷಮುಗಿಯುತ್ತೆ. ನೀನು ಅಜ್ಜಿ ತಾತ ಹೇಳಿದಂತೆ ಕೇಳು. ಒಳ್ಳೆಯದಾಗುತ್ತೆ.ಓದಿನ ಕಡೆ ಗಮನ ಕೊಡು ಎಂದು ಸಮಾಧಾನಪಡಿಸಿದರು.   ಮನೆಗೆ ಬಂದ ಹೇಮಾ ಆ ದಿನ ರಾತ್ರಿ ಮಲಗಿದ್ದ ತಾತನ ಕಾಲನ್ನು ಒತ್ತುತ್ತಾ ” ತಾತ, ನಾನೊಂದು ಮಾತು ಹೇಳ್ತಿನಿ ಸಿಟ್ಟು ಮಾಡ್ಕೋಬಾರದು”ಎಂದಳು. ಅದೇನು ಹೇಳಮ್ಮ ಎಂದಾಗ ” ಆಯ್ತು ತಾತ ಮದುವೆ ಆಗ್ತೀನಿ. ಮದುವೆ ಸೆಟ್ ಆದರೆ ಮದುವೆ ಆದ ಮೇಲೆ ಒಂದು ವರ್ಷ ಓದಕ್ಕೆ ಅವಕಾಶ ಕೊಟ್ರೆ ಡಿಗ್ರಿ ಆಗೋಗುತ್ತೆ ತಾತ.ಇದನ್ನು ನೀನು ಗಂಡಿನವರಿಗೆ ಹೇಳಿ ಒಪ್ಪಿಸು.” ಎಂದು ಕೇಳಿಕೊಂಡಾಗ ಅವಳಿಗೆ ನಿರಾಶೆ ಮಾಡಬಾರದೆಂದು ಯೋಚಿಸುತ್ತಲೆ “ಆಯ್ತು, ದೈವಿಚ್ಛೆ ಎಂಗಿದೆಯೋ ನೋಡೋಣ”ಎಂದರು  ಆಗ ಅಜ್ಜಿಯು ಸಹಾ ಓದಕ್ಕೆ ಒಪ್ಪುವಂಥ ಗಂಡನೇ ನನ್ನ ಮೊಮ್ಮಗಳಿಗೆ ಸಿಗಲಪ್ಪ ದೇವರೇ ಎಂದು ಮನಪೂರ್ವಕ ಕೇಳಿಕೊಂಡರು. ಮೊಮ್ಮಗಳಿಗೆ ಗಂಡು ನೋಡಲು ತಮ್ಮ ಇಬ್ಬರುಗಂಡು ಮಕ್ಕಳಿಗೆ ಒತ್ತಾಯ

ಹೇಮಾ Read Post »

ಕಾವ್ಯಯಾನ

ಎರಡು ಮೊಲೆ ಕರುಳ ಸೆಲೆ

ಕವಿತೆ ಎರಡು ಮೊಲೆ ಕರುಳ ಸೆಲೆ ವಿಶಾಲಾ ಆರಾಧ್ಯ ಮನುಜ ಕುಲವ ಕತ್ತಲಿಂದ ಬೆಳಕಿಗಿತ್ತತೊಡೆಯ ಸೆಲೆಯ ಮಾಯೀ ಕಣಾನವಮಾಸ ಏನೆಂದು ಬಲ್ಲೆಯಾ?ಒಂದೊಂದು ಮಾಸದಲ್ಲೂಒಂದೊಂದು ವೇದನೆಯಗ್ರಹಚಾರವ ಮೀರಿಕೆಸರ ಮುದ್ದೆಗೆ ರೂಹಿತ್ತುಗುಟುಕಿತ್ತ ಕರುಳ ಹೊಕ್ಕುಳು !ಮಾ-ನವರಂಧ್ರದ ನಿನ್ನಧರೆಗಿಳಿಸಿ ಬಸವಳಿದರೂದಣಿವರಿಯದ ಧರಣಿ ಕಣಾ ಹೆಣ್ಣು!!ಪುಣ್ಯ ಕೋಟಿ ಕಾಮಧೇನುಬೀದಿಗಿಳಿದ ಹೋರಿಬಸವನಿಗೆ ಸಮವೇನು?ಹೋಲಿಕೆಯೇ ಗೇಲಿ ಮಾತುಒಂದೇ ಕ್ಷಣ ಬಿತ್ತುವನಿನ್ನ ಗತ್ತಿಗೆಷ್ಟು ಸೊಕ್ಕು?ಒಂದು ಬಸಿರಲುಸಿರುತುಂಬಿ ಕೊಡುವಳೆಲ್ಲರಿಗೂ ಮಿಕ್ಕು!ಒಂದೇ ಕ್ಷಣ ಉರಿದಾರುವಗಂಡೇ ಕೇಳು ದಂಡಧರಣಿಯೋ ಬೂದಿಯೊಳಡಗಿದಮೌನ ಕೆಂಡ ಹಸಿ ಮಾಂಸಮುಕ್ಕುವುದುಸುಲಭ ನಿನ್ನ ದಂಡಕೆ !ಹಲವು ಕೂಸಿಗೊಬ್ಬಳೇಹಾಲನ್ನೀವ ಹೆಣ್ಣಂತೆಎರಡು ಮೊಲೆಯಿವೆಯೇ ಗಂಡಿಗೆ? *****************************

ಎರಡು ಮೊಲೆ ಕರುಳ ಸೆಲೆ Read Post »

ಇತರೆ

ಡಿ.ಎಸ್.ರಾಮಸ್ವಾಮಿ ಕವಿತೆಗಳು ಗೆ; ಕವಿತೆಯ ಮೊಳಕೆಯೊಡೆಸುತ್ತದೆನಿನ್ನದೊಂದು ನಗು, ಸಣ್ಣ ಸಂದೇಶಎಂದಂದು ನಿನ್ನನ್ನು ಮರುಳುಮಾಡುವುದಿಲ್ಲ; ಜೊತೆಗಿರದೆಯೂ ಜೊತೆಗೇ ಇರುವಾಗ.ನಟ್ಟ ನಡುವೆ ಎದ್ದು ಹೋಗುವ ಮಾತಿಗೆಖಬರಿಲ್ಲ, ಅನ್ನುವುದಕ್ಕೆ ಪುರಾವೆ ಯೊದಗಿಸಲಾರೆ, ಬದುಕ ದುರಿತದ ನಡುವೆ.ಆಡದೇ ಉಳಿದ ಮಾತುಗಳು ಎದೆ ತುಂಬಉಳಿದದ್ದಕ್ಕೆ ಸಾಕ್ಷಿ, ಕವಿತೆಯ ಸಾಲುಗಳಲ್ಲಿ ನೀನು, ಪದೇ ಪದೇ ಇಣುಕುತ್ತೀಯ, ಮುಖಾಮುಖಿ-ಯಾಗದೆಯೂ, ಒಳಗೇ ಉಳಿದ ಬೆಳಕು.ಹಂಚಿಕೊಳ್ಳುವುದಕ್ಕೇನು ಉಳಿದಿದೆ ಎನ್ನುವುದೆಲ್ಲ ಬರಿಯ ಒಣ ತರ್ಕದ ದೇಶಾವರಿ ಹೇಳಿಕೆಇಬ್ಬರಿಗಲ್ಲದೇ ಮತ್ತಾರಿಗೂ ಗೊತ್ತಾಗಬಾರದ ಸತ್ಯ.ಹೆಗಲಿಗೊರಗಿ, ಬೆರಳ ಹೆಣೆದು ಅನೂಹ್ಯ ಲೋಕಕ್ಕೆ ಜಾರಿ, ಮನಸ್ಸಲ್ಲೇ ಕೂಡಿದ್ದು, ಮಿಥುನದುದ್ರೇಕಕ್ಕಿಂತಮಿಗಿಲೆಂದು ಗೊತ್ತಾಗಿದ್ದು, ಲೌಕಿಕದ ಎಂಜಲದಾಂಪತ್ಯದ ಗೆರೆ ದಾಟದ ನೈತಿಕದ ಗೆಲುವು. ಭಾವವಿಲ್ಲದ ಕವಿತೆ ಬರಿಯ ಹೇಳಿಕೆಯಾಗುವುದುಲೋಕ ಸತ್ಯದ ಮಾತು. ನೀನು ನೆನಯುವ ಕೃಷ್ಣನನ್ನ ಕಾಡುವ ರಾಧೆ, ಬರಿಯ ಪುರಾಣವೇನಲ್ಲ ನಮ್ಮೊಳಗೇ ಉಳಿದ ಬಾಂಧವ್ಯದ ಸೂನು.ಮುಗಿಲಂಚಿಗೆ ಹೆಣೆದ ಬಣ್ಣ ಬಣ್ಣದ ಕಮಾನು!! ———– ಹೆಣ್ಣು ಮತ್ತು ಹಾಡು ನೇಗಿಲ ಚೂಪಿಗೆ ಸಿಕ್ಕಿದ್ದಕ್ಕೆ ಸೀತೆ ಎಂದವರೇಇವಳು ಜನಕನ ಮಗಳು ಜಾನಕಿ ಎಂದಿರಿ.ಇವಳದಲ್ಲದ ತಪ್ಪಿಗೆ ಬೆಂಕಿಗೆ ಹಾಯುವಾಗಲು ತಡೆಯದವನನ್ನು ಪುರುಷೋತ್ತಮನೆಂದಿರಿ.ತ್ರೇತಾ ಯುಗದ ತಪ್ಪನ್ನು ದ್ವಾಪರಕ್ಕೂ ಮುಟ್ಟಿಸಿ ಪಾಂಚಾಲದಲ್ಲಿ ಹುಟ್ಟಿದುದಕ್ಕೇ ಪಾಂಚಾಲಿದೃಪದನ ಮಗಳಿಗೆ ದ್ರೌಪದಿಯ ಠಸ್ಸೆಯೊತ್ತಿದಿರಿಯಾರ ಮೇಲೆ ಯಾರಿಗೂ ಹಕ್ಕೇ ಇಲ್ಲದಿದ್ದರೂಜೂಜು ಕಟ್ಟೆಯ ಸ್ವತ್ತಾಗಿಸಿ ಲಿಲಾವಿಗಿಟ್ಟುದ್ವಾಪರದ ತಪ್ಪನ್ನು ಕಲಿಗಾಲಕ್ಕೂ ತಂದಿರಿಸಿದಿರಿ ಸೀತೆಯನ್ನು ಗೆಲ್ಲುವ ಮೊದಲೇ ದಾಶರಥಿ ಕಲ್ಲಂತಾಗಿದ್ದ ಅಹಲ್ಯೆಯನ್ನು ಹೂವಾಗಿಸಿದ್ದನ್ನುಸ್ವತಃ ಮರೆತದ್ದಕ್ಕೇ ಇರಬೇಕು, ಕಿಡಿಗೇಡಿಯ ಸಣ್ಣ ಮಾತಿಗೇ ಮತ್ತೆ ಕಾಡಿಗಟ್ಟಿದ ಅವಿವೇಕಹಾಡಂತೆ ಹಾಡುತ್ತಲೇ ಕುಶಲವರು ಗೆದ್ದದ್ದು. ಉಟ್ಟ ಸೀರೆಗೆ ಕೈಯಿಟ್ಟವನನ್ನು ಸುಸ್ತಾಗಿಸಿದ್ದುಕಟ್ಟಿಕೊಂಡವರೇನಲ್ಲ, ಮಾತು ತಪ್ಪದ ಸಖನೇ,ಮುಡಿ ಕಟ್ಟುವುದಿಲ್ಲ ತೊಡೆಮುರಿದ ಹೊರತೂಎಂದವಳು ಅವಳೇನಲ್ಲ,ಯಾರದೋ ಶಪಥಕ್ಕೆಪಗಡೆಯ ದಾಳವಾದದ್ದೂ ಆಕಸ್ಮಿಕವೇನಲ್ಲ, ಯುಗ ಯುಗಗಳ ಆವರ್ತದಲ್ಲೂ ಮತ್ತೆ ವ್ಯಥೆನೆಲವಲ್ಲದೇ ನೇಗಿಲ ಮೊನೆ ಸೀಳೀತೆ ಕಲ್ಲನ್ನುಬಂಡೆಗೆ ತಾಗಿದರೆ ಹಲದ ಹಲ್ಲೂ ಮುರಿದೀತುಅದಕ್ಕೇ ಯಾವತ್ತೂ ಮಿಗದ ಬೇಟೆಯ ನೆವಕ್ಕೆಈ ಇವನ ಕೈಯ ಭರ್ಜಿ,ಈಟಿ, ತಲವಾರುಗಳು. ಯಾವುವೂ ರಕ್ಷಣೆಗೆ ಸ್ವತಃ ನಿಲ್ಲುವುದಿಲ್ಲರಕ್ತದ ಹನಿ ನೆಲಕ್ಕೆ ಬಿದ್ದರೆ ಮತ್ತೆ ಅಸುರ ಶಕ್ತಿಎದ್ದೀತೆಂಬ ಎಚ್ಚರಿಕೆಯಲ್ಲೇ ನಾಲಿಗೆಯ ಹಾಸಿಶಕ್ತಿ ರೂಪಿಣಿಯ ಕೈಯಲ್ಲಿ ಆಯುಧದ ಸಾಲುಬರಿಯ ತೋರಿಕೆಗಲ್ಲ, ಅತ್ಯಗತ್ಯದ ವೇಷ. ತೊಡದೇ ಇದ್ದರೆ ಗೊತ್ತೇ ಆಗುವುದಿಲ್ಲ ಈ ಅವಿವೇಕಿಗಳಿಗೆ. ಇವಳು ತಾಯಿ, ಮಗಳುಅಕ್ಕ ತಂಗಿಯರ ಸಂಬಂಧದಲ್ಲಿ ಸೂಕ್ಷವಾಗಿ. **************************************

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಲೇರಿಯೊಂಕ ಲೇರಿಯೊಂಕ ( ಕಾದಂಬರಿ)ಮೂಲ : ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ : ಪ್ರಶಾಂತ ಬೀಚಿಪ್ರ : ಛಂದ ಪುಸ್ತಕಪ್ರಕಟಣೆಯ.ವರ್ಷ : ೨೦೦೮ಬೆಲೆ : ರೂ.೧೦೦ಪುಟಗಳು : ೨೫೦  ಕೀನ್ಯಾದ ಹೆಸರಾಂತ ಕಾದಂಬರಿಕಾರ ಹೆನ್ರಿ ಆರ್.ಓಲೆ ಕುಲೆಟ್ ಅವರ ಈ ಕಾದಂಬರಿಯು ಲೇರಿಯೊಂಕ ಎಂಬ ಒಬ್ಬ ದನಗಾಹಿ ಹುಡುಗ ಶಾಲೆಗೆ ಹೋಗಲು ಪಡಬಾರದ ಪಾಡು ಪಟ್ಟು ಕೊನೆಗೆ ಸ್ವಂತ ಪರಿಶ್ರಮದಿಂದ ವಿದ್ಯಾವಂತನಾಗಿ ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳುವುದರ ಕುರಿತಾದ ಕಥೆಯನ್ನು ಹೇಳುತ್ತದೆ.  ಮಾಸಯಿ ಜನಾಂಗಕ್ಕೆ ಸೇರಿದ ಲೇರಿಯೊಂಕ ಸರಕಾರದ ಒತ್ತಾಯಕ್ಕೊಳಗಾಗಿ ಶಾಲೆಗೆ ಸೇರುತ್ತಾನಾದರೂ ಕಾಲಕ್ರಮೇಣ ಶಾಲೆಯ ಬದುಕನ್ನು ಬಹಳವಾಗಿ ಇಷ್ಟ ಪಡುತ್ತಾನೆ. ವಾಸ್ತವದಲ್ಲಿ ಮಾಸಯಿಗಳು ಯಾರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪುವುದಿಲ್ಲ. ಲೇರಿಯೊಂಕ ಏನೇನೋ ಸಬೂಬು ಹೇಳಿ ಮನೆ ಬಿಟ್ಟು ಕಾಲ್ನಡಿಗೆಯಲ್ಲಿ ಬಹು ದೂರ ಸಾಗಿ , ಹಳ್ಳ-ತೊರೆ-ಗುಡ್ಡ-ಕಾಡುಗಳನ್ನು ದಾಟಿ, ಅನೇಕ ಅಪಾಯ-ತೊಂದರೆಗಳನ್ನು ಎದುರಿಸಿ ದೂರದ ನಗರ ಸೇರಿ ಅಲ್ಲಿ ಎಂಟು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡುತ್ತಾನೆ. ಆಗ ಅವನಿಗೆ ವಿದ್ಯಾವಂತರೆಲ್ಲ ಬಿಳಿಯರ ವಿರುದ್ಧ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವುದು ಕಾಣುತ್ತದೆ.   ಕೆನ್ಯಾದವರಿಗೆ ತಮ್ಮನ್ನು ಆಳಿಕೊಳ್ಳುವ ಶಕ್ತಿಯಿದೆ, ಆದ್ದರಿಂದ ಬಿಳಿಯರು ತಮ್ಮ ಮೇಲೆ ಅಧಿಕಾರ ಚಲಾಯಿಸುವ ಅಗತ್ಯವಿಲ್ಲವೆನ್ನುವ ಭಾವನೆ ಲೇರಿಯೊಂಕನಿಗೂ ಬರುತ್ತದೆ.  ಎಲ್ಲ ವಿದ್ಯಾವಂತರಂತೆ ಕೆನ್ಯಾ ಸ್ವತಂತ್ರವಾಗಬೇಕು, ಮತ್ತು ತನ್ನ ಸಂಸ್ಕೃತಿಯ ಎಲ್ಲ ಅಂಶಗಳನ್ನು ಉಳಿಸಿಕೊಂಡು ಆ ಬಗ್ಗೆ ಅಭಿಮಾನ ಪಡಬೇಕು ಎಂಬ ಆಶಯವನ್ನು ಲೇರಿಯೊಂಕನೂ ಇಟ್ಟುಕೊಳ್ಳುತ್ತಾನೆ.  ವಿದ್ಯೆ ಪಡೆದರೆ ಕಪ್ಪು ಜನರೂ ಬಿಳಿಯರ ಸಮಾನರಾಗಬಲ್ಲರು ಎಂಬ ನಂಬಿಕೆಯನ್ನು ಹಿರಿಯ ತಲೆಮಾರಿನವರಲ್ಲೂ ಹುಟ್ಟಿಸಿ ಕಾದಂಬರಿ ಕೊನೆಗೊಳ್ಳುತ್ತದೆ. ಕಾದಂಬರಿಯುದ್ದಕ್ಕೂ ಮಾಸಯಿ ಜನಾಂಗದ ಜೀವನ ಪದ್ಧತಿ, ನಂಬಿಕೆ-ಆಚರಣೆಗಳು, ನಡೆ-ನುಡಿ-ವರ್ತನೆ, ಅವರು ಸಂಬಂಧಗಳನ್ನಿಟ್ಟುಕೊಳ್ಳುವ ಪರಿ ಮತ್ತು ಅವರ ನಾಣ್ಣುಡಿ-ಗಾದೆ ಮಾತುಗಳು ತುಂಬಿಕೊಂಡಿವೆ.  ವಸ್ತು-ವಿನ್ಯಾಸ-ರಚನೆ, ನಿರೂಪಣೆ-ಪಾತ್ರ ಚಿತ್ರಣಗಳ ದೃಷ್ಟಿಯಿಂದ  ಇದು ಅತ್ಯುತ್ತಮವಾದ ಒಂದು ಕೃತಿ. ಆಧುನಿಕೋತ್ತರ ಸಾಹಿತ್ಯದ ಒಂದು ಪ್ರಮುಖ ಲಕ್ಷಣವಾಗಿರುವ ಬದಿಗೆ ತಳ್ಳಲ್ಪಟ್ಟ ಜನಾಂಗದ ಬದುಕಿನ ಚಿತ್ರಣ ಇಲ್ಲಿರುವುದರಿಂದ ಇದರ ಅನುವಾದ ಅತ್ಯಂತ ಪ್ರಸ್ತುತ.  ಅನುವಾದಕರ ಪ್ರಯತ್ನ ಶ್ಲಾಘನೀಯ. ಆದರೆ ವಾಕ್ಯ ರಚನೆ ಮತ್ತು ಪದಪ್ರಯೋಗಗಳನ್ನು ಸಮರ್ಪಕವಾಗಿ ಮಾಡುವಲ್ಲಿ ಇನ್ನಷ್ಟು ಪರಿಶ್ರಮವಿದ್ದರೆ ಒಳ್ಳೆಯದು. ******************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top