ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಮನಸೆಂಬ ಮರ್ಕಟ

ಕಥೆ ಮನಸೆಂಬ ಮರ್ಕಟ ವಾಣಿ ಸುರೇಶ್ ಕೆ. ಸ್ಕೂಟರ್ ಕೀ , ಬ್ಯಾಗನ್ನು ತೆಗೆದುಕೊಂಡು ಧಾತ್ರಿ ಟಿವಿ ನೋಡುತ್ತಿದ್ದ ಮಗಳು, ಪೇಪರ್ ಓದುತ್ತಿದ್ದ ಗಂಡ, ತಿಂಡಿ ತಿನ್ನುತ್ತಿದ್ದ ಅತ್ತೆಗೆ ಕೇಳಿಸುವಂತೆ ಜೋರಾಗಿ , ” ಇನ್ನು ಮುಂದೆ ನಾನು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ ಅಂತ ಡಿಸೈಡ್ ಮಾಡಿದ್ದೇನೆ.ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು  ಪಾಲಿಸಿದರೆ , ನನಗೂ ಆ್ಯಂಗ್ಸೈಟಿ, ಮೈಗ್ರೇನ್‌ ಕಡಿಮೆಯಾಗತ್ತೆ. ಸಣ್ಣಪುಟ್ಟ ವಿಷಯಕ್ಕೆ ನನಗೆ ಮೆಸೇಜ್ ಮಾಡೋದು, ಫೋನ್ ಮಾಡೋದು ಮಾಡ್ಬೇಡಿ. ಫೋನನ್ನು ಸೈಲೆಂಟ್ ಮೋಡಲ್ಲಿ ಇಡ್ತಾ ಇದ್ದೇನೆ ನಾನು. ಬರ್ಲಾ, ಬೈ” ಎಂದು ಲಿಫ್ಟ್ ಹತ್ತಿದಳು.       ಸ್ಕೂಟರ್ ಓಡಿಸುತ್ತಿರುವಾಗ ಇವತ್ತು ಮೈ ಮನಸ್ಸು ಹಗುರವಾದಂತೆ ಅನಿಸಿತು ಧಾತ್ರಿಗೆ. ಗೆಳತಿ ಹರಿಣಿ ಹೇಳಿದ್ದು ಎಷ್ಟು ನಿಜ! ತರಗತಿಯಲ್ಲಿ ಪಾಠ ಮಾಡುವಾಗಲೂ ಬರುವ ಮೆಸೇಜ್ ಮತ್ತು ಕಾಲ್ ಗಳು ತಲೆ ಚಿಟ್ಟು ಹಿಡಿಸುತ್ತಿದ್ದವು. ಬ್ಯಾಂಕ್ ಸ್ಟೇಟ್ ಮೆಂಟ್ ತಗೊಂಡು ಬಾ ಇವತ್ತೇ ಲಾಸ್ಟ್ ಡೇಟು ಅನ್ನುವ ಗಂಡ, ದೇವಸ್ಥಾನಕ್ಕೆ ಹೋಗ್ಬೇಕು ಮನೆ ಕೀ ಕಾಣಿಸ್ತಿಲ್ಲ ಅನ್ನೋ ಅತ್ತೆ, ಯಾವತ್ತೋ ಕೊಟ್ಟ ಪ್ರಾಜೆಕ್ಟ್ ವರ್ಕ್ ಮಾಡದೆ ,ಟೀಚರ್ ಕೈಯಲ್ಲಿ ಪನಿಷ್ಮೆಂಟ್ ತಗೊಂಡು ‘ ಇವತ್ತೇ ತಗೊಂಡು ಬಾ’ ಅಂತ ಮಗಳು ಕಳಿಸಿದ ಮೆಟೀರಿಯಲ್ಸ್ ಲಿಸ್ಟ್…. ಇವೆಲ್ಲಾ ಒಂದೊಂದು ಉದಾಹರಣೆ ಅಷ್ಟೇ. ನಾನು ಮಾಡಿದ್ದು ಜಾಸ್ತಿ ಆಯಿತು, ಇನ್ನು ಮುಂದೆ ಮೂವರೂ ಸ್ವಲ್ಪವಾದರೂ ಜವಾಬ್ದಾರಿ ವಹಿಸಿಕೊಳ್ಳಲಿಅಂದುಕೊಳ್ಳುತ್ತಾ ಶಾಲೆ ತಲುಪಿದಳು.      ಧಾತ್ರಿ ಮತ್ತು ಹರಿಣಿ ಹೇಗೆ ಗೆಳತಿಯರಾದರು ಎನ್ನುವುದೇ ಎಲ್ಲರ ಮಿಲಿಯನ್ ಡಾಲರ್ ಪ್ರಶ್ನೆ!! ಧಾತ್ರಿ ಮಿತಭಾಷಿಯಾದರೆ, ಹರಿಣಿಯದ್ದು ಮಲೆನಾಡಿನ ಮಳೆಯಂಥ ಮಾತು.ಕೇಳುವ ಎರಡು ಕಿವಿಗಳಿದ್ದರೆ ಸಾಕು ಹರಿಣಿಗೆ, ಮತ್ತೇನೂ ಬೇಕಿಲ್ಲ.ಅದಕ್ಕೇನೇ ಪಾಪದ ಧಾತ್ರಿಯ ಗೆಳೆತನ ಮಾಡಿದ್ದಾಳೆ ಎಂದು ಎಲ್ಲರ ಅಭಿಪ್ರಾಯ.    ಇವತ್ತು ಫಸ್ಟ್ ಪೀರಿಯಡ್ ಫ್ರೀ ಇದ್ದುದರಿಂದ ಇವರಿಬ್ಬರೂ ಸ್ಟಾಫ್ ರೂಮಿನಲ್ಲಿದ್ದರು. ಹರಿಣಿ ಅಸಹನೆಯಿಂದ ವಾಟ್ಸಾಪ್ ನಲ್ಲಿ ಮೆಸೇಜ್ ಟೈಪ್ ಮಾಡುತ್ತಿದ್ದನ್ನು ನೋಡಿ ಧಾತ್ರಿ ನೋಟ್ ಬುಕ್ ತಿದ್ದುತ್ತಾ ಕುಳಿತಳು. ಮೆಸೇಜ್ ಕಳಿಸಿ ಧಾತ್ರಿ ಕಡೆಗೆ ತಿರುಗಿದ ಹರಿಣಿ ಮಾತಿಗೆ ಶುರು ಹಚ್ಚಿದಳು ” ನೋಡು, ನನ್ನ ಮಗಳದು ಒಂದು ವಾರದಿಂದ ಒಂದೇ ಹಠ, ನೆಟ್ ಫ್ಲಿಕ್ಸ್ ಬೇಕಂತ. ಈವಾಗ ಸೆಕೆಂಡ್ ಪಿಯುಸಿ ಅವಳು. ಹಾಳುಮೂಳು ಸೀರೀಸ್ ನೋಡಿ ಕೂತ್ರೆ ಓದೋದು ಯಾವಾಗ? ಅವಳ ಅಪ್ಪನೂ ಅವಳ್ಗೇ ಸಪೋರ್ಟು. ಏನು ಬೇಕಾದ್ರೂ ಮಾಡ್ಕೊಳ್ಳಿ ಅಂತ ಗಂಡಂಗೆ ಮೆಸೇಜ್ ಹಾಕ್ದೆ.ತಲೆ ಕೆಟ್ಟು ಹೋಗ್ತಿದೆ ನಂದು” ಧಾತ್ರಿಗೆ ಏನು ಹೇಳಬೇಕೆಂದು ತೋಚಲಿಲ್ಲ.ಅಷ್ಟರಲ್ಲಿ ಹರಿಣಿಗೊಂದು ಕಾಲ್ ಬಂತು.” ಯಾವ ಟೀ ಶರ್ಟ್? ಬ್ಲ್ಯಾಕ್ ಕಲರ್ ಯೂ.ಎಸ್ ಪೋಲೋ ನಾ? ಮೊನ್ನೆ ಇಸ್ತ್ರಿಗೆ ಕೊಟ್ಟು ನಿನ್ನ ಕಪಾಟಿನಲ್ಲಿ ಇಟ್ಟಿದ್ದೇನೆ ನೋಡು.” ಕಾಲ್ ಕಟ್ ಮಾಡಿ ಪುನಃ ಧಾತ್ರಿ ಕಡೆಗೆ ತಿರುಗಿ, ” ಇವತ್ತು ಫೈನಲ್ ಇಯರ್ ಬಿ.ಇ. ಯವರೆಲ್ಲಾ ಸೇರಿ ಪಾರ್ಟಿ ಮಾಡ್ತಾ ಇದ್ದಾರಂತೆ. ಈ ಮಹಾರಾಯ ಈವಾಗ ಎದ್ದು ಶರ್ಟು ಕಾಣಿಸ್ತಿಲ್ಲ ಅಂತೆ! ಇವರಿಗೆಲ್ಲಾ ಕೈ ಕಾಲ ಹತ್ತಿರ ಕೆಲಸ ಮಾಡಿಕೊಟ್ಟು ಅಭ್ಯಾಸ ಆಗಿಹೋಗಿದೆ.ತಲೆ ಕೆಟ್ಟು ಹೋಗ್ತಿದೆ ನಂದು!” ಅಂದಳು. ಧಾತ್ರಿ ಹೇಗೋ ಕಷ್ಟ ಪಟ್ಟು ನಗು ತಡೆದುಕೊಂಡಳು.       ಅಷ್ಟರಲ್ಲಿ ಹರಿಣಿಯ ಫೋನಿಗೆ ಠಣ್ ಅಂತ ಒಂದು ಮೆಸೇಜ್ ಬಂತು. ಧಾತ್ರಿ ನೋಟ್ಸ್ ತಿದ್ದುತ್ತಿದ್ದರೂ ಹರಿಣಿಯ ಟೈಪಿಂಗ್ ಸ್ಪೀಡ್ ನೋಡಿ ಏನೋ ಸೀರಿಯಸ್ ವಿಷಯ ಇರಬೇಕೆಂದುಕೊಂಡಳು.ಐದು ನಿಮಿಷ ಮಾತುಕತೆಯಾದ ಮೇಲೆ ಪುನಃ ಹರಿಣಿ ಇವಳ ಕಡೆ ತಿರುಗಿ , ” ನಿನ್ನೆ ನಮ್ಮನೆಯೋರು ಆಫೀಸ್ ನಿಂದ ಬರ್ತಾ ಜಲೇಬಿ ತಗೊಂಡು ಬಂದಿದ್ರು. ಮಾವ ಹೈ ಶುಗರ್ ಪೇಷಂಟ್ ಆದ್ರೂ ಎರಡು ಜಲೇಬಿ ತಿಂದ್ರು!! ಅದಕ್ಕೆ ನಮ್ಮತ್ತೆ ಸಪೋರ್ಟ್ ಬೇರೆ. ಇದನ್ನೇ ನನ್ನ ಓರಗಿತ್ತಿಗೆ ಹೇಳಿದ್ದು ಈವಾಗ.ಇವ್ರಿಗೆ ಹೆಲ್ತ್ ಅಪ್ಸೆಟ್ ಆದ್ರೆ ನಾನೇ ನೋಡಿಕೊಳ್ಬೇಕು ತಾನೇ? ನಂಗಂತೂ ತಲೆ ಕೆಟ್ಟು ಹೋಗ್ತಿದೆ ಕಣೇ.”      ಈವಾಗ ಧಾತ್ರಿ ಜೋರಾಗಿ ನಕ್ಕಳು! ಆಶ್ಚರ್ಯದಿಂದ ನೋಡುತ್ತಿದ್ದ ಹರಿಣಿಗೆ, ” ನಿನ್ನೆ ನೀನು ನನಗೆ ಒಂದು ದೊಡ್ಡ ಭಾಷಣ ಮಾಡ್ದೆ, ನಾವು ಯಾರ ಬಗ್ಗೆಯೂ ತಲೆಕೆಡಿಸಿ ಕೊಳ್ಳಬಾರದು ಅಂತ.ಇವತ್ತು ನೀನು ಮಾಡ್ತಿರೋದು ಏನು?” ಎಂದು ಕೇಳಿದಳು. ಹರಿಣಿ  “ಇನ್ನೇನು ಮಾಡ್ಲಿ ನಾನು?” ಅನ್ನುವಷ್ಟರಲ್ಲಿ ಬೆಲ್ ಹೊಡೆಯಿತು. ಮುಂದಿನ ಕ್ಲಾಸಿಗೆ ಬೇಕಾದ ಪುಸ್ತಕ ತೆಗೆದುಕೊಂಡು ಹೊರಟ ಧಾತ್ರಿಗೆ ಹರಿಣಿ, ” ನೀನು ಇವತ್ತು ಮೊಬೈಲ್ ತರಲಿಲ್ವಾ?” ಎಂದು ಕೇಳಿದಳು. ” ತಂದಿದ್ದೇನೆ. ಆದ್ರೆ ನಿನ್ನ ಭಾಷಣದಿಂದ ಪ್ರಭಾವಿತಳಾಗಿ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೇನೆ.” ಎಂದು ನಗುತ್ತಾ ತರಗತಿಯ ಕಡೆಗೆ ಹೊರಟಳು. ” ಅಂತೂ ಒಬ್ಬರಾದ್ರೂ ನನ್ನ ಮಾತಿಗೆ ಬೆಲೆ ಕೊಟ್ರಲ್ಲಾ ” ಎಂದು ಗೊಣಗುತ್ತಾ ಹರಿಣಿಯೂ ಹಿಂಬಾಲಿಸಿದಳು. *******************************************

ಮನಸೆಂಬ ಮರ್ಕಟ Read Post »

ಕಾವ್ಯಯಾನ

ಬಾಳ ಬೆಳಕೇ..

ಕವಿತೆ ಬಾಳ ಬೆಳಕೇ.. ವೀಣಾ ಪಿ. ‌ ಸುಧೆಗಡಲ ಸೊಗದೊಡಲಸವಿ ಆತ್ಮ ಚೇತನದಹಾಲು ಗಲ್ಲದಹದ ಭಾವವೇ.ಹೊಳೆವ ನಕ್ಷತ್ರದಮಿನುಗು ಕಣ್ಗಳ ಮಿಂಚೇ..ಮುಗ್ಧತೆಯು ಮೈವೆತ್ತಮುದ್ದು ಮಾಟದಬೊಂಬೆಯೇ..ಬೆಳಕು ಬೃಂದಾವನದಎಳೆ ತಳಿರು ತೋರಣದ‌ಚಿಗುರೊಡೆದಹಸಿರೇ..ಹೊಸ ವರಸೆಯಭರವಸೆಯನುಮೆಲ್ಲನರಳಿ ಮುಡಿಸುವನಗೆ ಮಲ್ಲಿಗೆ ಮೃದು ದಂಡೆಯೇ..ಕತ್ತಲೆಯ ಕಾರ್ಮೋಡಕಳೆದು ಬೆಳಕಾಗುವಬೆಳ್ಳಿ ಬೆಳದಿಂಗಳೇ..ನಿನ್ನಿಂದಲೇ ಬೆಳಕು ಬಾಳ್ಗೆ… ‌ *********************************************

ಬಾಳ ಬೆಳಕೇ.. Read Post »

ಕಾವ್ಯಯಾನ

ಕವಚದಲ್ಲಿ ಭದ್ರ

ಕವಿತೆ ಕವಚದಲ್ಲಿ ಭದ್ರ ತಮ್ಮಣ್ಣ ಬೀಗಾರ ಕವಚದಲ್ಲಿ ಭದ್ರ…ಅದು ಯಾವಾಗ ಹೋಗುತ್ತದೆಅಥವಾ ಹೋಗುವುದಿಲ್ಲವೆಂದುಹೇಳುವುದು ಹೇಗೆ…ನನಗಂತೂ ಬಂದಿದೆ ಕಾಯಿಲೆಮರದ ಬೇರು ಕೊಳೆಯುವಷ್ಟುಮಳೆಯಾದರೆ ಚಿಗುರುವುದು ಯಾವಾಗ…ತಲೆಯ ತುಂಬಾ ಕೆಲಸ ತುಂಬಿಕೊಂಡಿದೆಕಿಸೆ ಖಾಲಿಯಾಗಿ ಕೈಗಳನ್ನು ಜೇಡರ ಬಲೆಕಟ್ಟಿ ಹಾಕಿದೆ…ಒಂದು ದಿನ ರಜೆ ಸಿಕ್ಕಿದರೆ ನನ್ನೊಂದಿಗಾಡುತ್ತಿದ್ದಕಂದ… ದಿನವೂ ನನ್ನೊಂದಿಗೆಕುಸ್ತಿ ಹಿಡಿಯುತ್ತಾನೆ ತಲೆ ಕೆಡಿಸುತ್ತಾನೆಅಲ್ಲಿ ಬಸ್ ನಲ್ಲಿ ಜನರಿಲ್ಲ ಅಂಗಡಿಯಲ್ಲಿಜನರಿಲ್ಲ ಹೊಟೆಲಿನಲ್ಲಿ ಜನರಿಲ್ಲಆದರೂ ಕಾಯ್ದುಕೊಂಡಿಲ್ಲ ಅಂತರರೋಗ ಹರಡುತ್ತಲೇ ಇದೆಇವಳು ಯುಟ್ಯೂಬ್ ನೋಡಿ ಮಾಡುವಹೊಸ ತಿಂಡಿ ರುಚಿಯಾಗುವುದಿಲ್ಲಮತ್ತೆ ಕಂಪನಿಯಿಂದ ಬರುವ ಮೇಲ ಎಷ್ಟುನಿಧಾನವೆಂದರೆ ನಡೆದು ಬರುವಪೋಷ್ಟಮ್ಯಾನ ಗಿಂತಲೂ ಹಿಂದೆಊರ ತುಂಬೆಲ್ಲ ಜನರಿದ್ದಾರೆಎಲ್ಲರಿಗೂ ಈಗ ಬಾಯಿಗೆ ಮಾಸ್ಕ ಕಟ್ಟಿದ್ದಾರೆಮತ್ತು ಕಣ್ಣೂ ಮಾತಾಡುತ್ತಿಲ್ಲಸಾಲದ ಕಂತು ರಸ್ತೆಯ ಹೊಂಡಮತ್ತು ಕಚೇರಿಯ ಕೆಲಸ ಹಾಗೇ ಇವೆಯಾವುದೋ ಕಾಯಿಲೆಗಳಿಗೆಲ್ಲತಡೆ ಹಾಕಿಕೊಂಡವರು…ಆರಾಮ ಇದ್ದೇವೆ ಎನ್ನುತ್ತಾರೆಎಲ್ಲರೂ ಕೋವಿಡ ಕವಚದಲ್ಲಿ ಭದ್ರಹಲವರಿಗೆ ಜೈಲು… ಕೆಲವರಿಗೆ ರಕ್ಷಣೆ… ************************************

ಕವಚದಲ್ಲಿ ಭದ್ರ Read Post »

ಕಾವ್ಯಯಾನ

ನೀವು-ನಾವು

ಕವಿತೆ ನೀವು-ನಾವು ಸಿ.ಎಚ್.ಮಧುಕುಮಾರ ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದುನಿಮ್ಮನ್ನು ಕೇಳುವಂತಿಲ್ಲ;ಏಕೆಂದರೆ ನೀವು ಸಿಟ್ಟುಗೊಳ್ಳುವಿರಿ. ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದುನೀವು ನಮ್ಮನ್ನು ಪದೇ ಪದೇ ಕೇಳಬಹುದುನಾವಾಗ ಶಾಂತವಾಗಿದ್ದರೆನಿಮ್ಮ ಆತ್ಮಕ್ಕೆ ಸ್ವರ್ಗಸುಖನಿಮ್ಮ ಮಾತಿಗೆ ಸಿಟ್ಟಾದರೆತಟ್ಟನೇದುರಹಂಕಾರಿಯ ಪಟ್ಟ ಹೊರಿಸುವಿರಿ. ನೀವು ಸದಾ ಮುಂದೆ ನಡೆಯಲು ಬಯಸುವಿರಿ; ಅದಕ್ಕೂ ಮೊದಲುಹಿಂದೆ ನಾವಿರುವುದ ಖಚಿತ ಪಡಿಸಿಕೊಳ್ಳುವಿರಿ.ನಿಮ್ಮೊಂದಿಗೆ ಹೆಜ್ಜೆ ಹಾಕುವ ಬಯಕೆಯಿದೆ,ಅದು ಯಾವತ್ತೂ ಈಡೇರದ ಬಯಕೆಯೆಂದು ತಾವು ಆಗಾಗ್ಗೆ ಧೃಢಪಡಿಸಿರುವಿರಿಆದರೂ ಪಟ್ಟು ಬಿಡದೆ ನಡೆಯುವೆವು ನಾವು! *************************************************

ನೀವು-ನಾವು Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಜ್ಞಾನಪಾನ ಭಕ್ತಿ ಜ್ಞಾನಗಳನ್ನು ಪ್ರೇರಿಸುವ ಕೃತಿ ಕೃತಿಯ ಹೆಸರು : ಜ್ಞಾನಪಾನಪ್ರಕಾಶಕರು : ಶ್ರೀ ಅಯ್ಯಪ್ಪ ಭಕ್ತ ಸಭಾ , ಚೆನ್ನೈಪ್ರಕಟಣಾ ವರ್ಷ : ೨೦೨೦ಪುಟಗಳು : ೩೨ ಹದಿನಾರನೆಯ ಶತಮಾನದಲ್ಲಿ ಭಾರತದಾದ್ಯಂತ ನಡೆದ ಭಕ್ತಿ ಚಳುವಳಿಯ ಸಂದರ್ಭದಲ್ಲಿ ಮಲೆಯಾಳ ಭಕ್ತಿ ಕಾವ್ಯ ರಚನೆ ಮಾಡಿದವರಲ್ಲಿ ಪ್ರಮುಖರು ಪೂಂದಾನಂ ನಂಬೂದಿರಿ. ಕನ್ನಡದಲ್ಲಿ ರಚನೆಯಾದ ದಾಸ ಸಾಹಿತ್ಯದಷ್ಟು ವ್ಯಾಪಕವಾದ ವಸ್ತು ವೈವಿಧ್ಯಗಳಿಲ್ಲದಿದ್ದರೂ ಮಲೆಯಾಳದಲ್ಲಿ ಪೂಂದಾನಂ, ಚೆರುಶ್ಶೇರಿ ನಂಬೂದಿರಿ, ತುಂಜತ್ತ್ ಎಳುತ್ತಚ್ಛನ್, ನಾರಾಯಣ ಭಟ್ಟಾತಿರಿಪ್ಪಾಡ್ ಮೊದಲಾದ ಭಕ್ತಿ ಕವಿಗಳು ಬಹಳಷ್ಟು ಜೀವನಮೌಲ್ಯಗಳುಳ್ಳ ದೈವಭಕ್ತಿ ಪ್ರೇರಕ ಕಾವ್ಯವನ್ನು ರಚಿಸಿದ್ದಾರೆ.   ‘ಜ್ಞಾನಪಾನ'(ಪಾನ ಅಂದರೆ ಮಣ್ಣಿನಿಂದ ಮಾಡಿದ ಒಂದು ಅಲತೆಯ ಪಾತ್ರ) ಗುರುವಾಯೂರಪ್ಪನನ್ನು ಸಂಬೋಧಿಸಿ ಬರೆದ ಭಕ್ತಿ ಕಾವ್ಯ. ಮಹಾಕೃಷ್ಣ ಭಕ್ತರಾದ ಪೂಂದಾನಂ ತಮ್ಮ ಎಳೆಯ ಮಗುವಿನ ಅಕಾಲ ಮರಣದ ಸಹಿಸಲಾರದ  ದುಃಖವನ್ನು  ಈ ಕಾವ್ಯದ ಮೂಲಕ ಯೋಗವಿಶೇಷವಾಗಿ ಪರಿವರ್ತಿಸುತ್ತಾರೆ. ಮಲೆಯಾಳದ ಭಗವದ್ಗೀತೆಯೆಂದೇ ಪ್ರಾಮುಖ್ಯ ಪಡೆದ ಈ ಕಾವ್ಯದಲ್ಲಿ ಪಾನ ಎಂಬ ಹೆಸರಿನ ಛಂದಸ್ಸಿನಲ್ಲಿ ಬರೆದ ೩೬೫  ಸಾಲುಗಳಿವೆ. ಇದು ಒಂದು ದಾರ್ಶನಿಕ ಕಾವ್ಯ. ತನ್ನ ಸಾಹಿತ್ಯಕ ಗುಣ, ಸರಳ ಪದಪುಂಜಗಳು, ತಾತ್ವಿಕ ಶಕ್ತಿ ಹಾಗೂ ಆಳವಾದ ಭಕ್ತಿಯ ಗುಣಗಳನ್ನೂ ಈ ಕಾವ್ಯದಲ್ಲಿ ನಾವು ಕಾಣಬಹುದು. ಉದ್ದಕ್ಕೂ ವಿರುದ್ಧ ಪ್ರತಿಮೆಗಳನ್ನು ಬಳಸುವ ಮೂಲಕ ಕೃಷ್ಣನ  ಬ್ರಹ್ಮಾಂಡ   ಕೃತ್ಯಗಳನ್ನು ವ್ಯಯ ಕರ್ಮಜಾಲದಿಂದ ಮೇಲೆತ್ತುವ ಕೆಲಸವನ್ನು ಇಲ್ಲಿ ಕವಿ ಮಾಡಿದ್ದಾರೆ. ಕವಿ ತನ್ನ ದುಃಖಾನುಭವವನ್ನು ಭಕ್ತಿಸೌಧದ ನಿರ್ಮಾಣಕ್ಕಾಗಿ ಬಳಸಿ ಎಲ್ಲರಿಗಾಗಿ ಅದನ್ನು ಸದಾಕಾಲವೂ ತೆರೆದಿಟ್ಟಿದ್ದಾರೆ. ಉಣ್ಣಿಕೃಷ್ಣನ್ ಮನಸ್ಸಿಲ್ ಕಳಿಕ್ಕುಂಬೋಳ್ ಉಣ್ಣಿಗಳ್ ಮಟ್ಟು ವೇಣಮೋ ಮಕ್ಕಳಾಯ್’ (  ಬಾಲ ಕೃಷ್ಣನು ಮನದಿ ಆಟವಾಡುತ್ತಿರಲು/ ಎಳೆಯ ಮಕ್ಕಳು ನಮಗೆ ಬೇರೆ ಬೇಕೆ? (ಪುಟ ೨೬)ಎನ್ನುವ ಸಾಲುಗಳು ಕವಿಯ ದುಖದ ಅಗಾಧತೆಯನ್ನೂ ದೃಢವಾದ ಕೃಷ್ಣಭಕ್ತಿಯನ್ನೂ ಪ್ರಕಟಿಸುತ್ತವೆ. ಈ ಭರತಖಂಡದ ಪುಣ್ಯ ಭೂಮಿಯಲ್ಲಿ ಜನ್ಮತಳೆದ  ನಾವು ಪುಣ್ಯವಂತರೆಂದೂ ಈ ಜನ್ಮವನ್ನು ನಾವು ಸತ್ಕಾರ್ಯಗಳಿಗಾಗಿ ವಿನಿಯೋಗಿಸ ಬೇಕೆಂದೂ ಪೂಂದಾನಂ ಇಲ್ಲಿ ಹೇಳುತ್ತಾರೆ. ಕೇವಲ ಲೌಕಿಕ ಸುಖ ಭೋಗಗಳಿಗಾಗಿ ಹೆಣಗಾಡುವುದು ನಮ್ಮ ಜೀವನದ ಧ್ಯೇಯವಾಗಬಾರದು. ದೇವರ ಸಹಸ್ರನಾಮಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಂಡು ಅಂತರಂಗದ ಭಕ್ತಿಯಿಂದ ನಿರಂತರವಾಗಿ ನಾಮಸ್ಮರಣೆ ಮಾಡುತ್ತ ಮೋಕ್ಷಪ್ರಾಪ್ತಿಗಾಗಿ ಪ್ರಯತ್ನಿಸುವುದೇ ನಮ್ಮ ಏಕಧ್ಯೇಯವಾಗಿರಬೆಕು ಎಂದೂ ಹೇಳುತ್ತಾರೆ.    ‘ಜ್ಞಾನಪಾನ’ ಕೃತಿಯ ಭಾಷಾ ಸರಳವಾಗಿದ್ದರೂ ಅದು ಶ್ರಿಮದ್ಭಾಗವತ, ಭಜಗೋವಿಂದಂ,, ವಿವೇಕಚೂಡಾಮಣಿ ಮತ್ತು ನಾರಾಯಣೀಯಂ ಎಂಬ ಮಹತ್ವದ ಕೃತಿಗಳ ಎಲ್ಲ ಸತ್ವಗಳನ್ನು ಒಳಗೊಂಡಿದೆ. ಪೂಂದಾನಂ ಅನ್ನುವುದು ಕವಿಯ ಹೆಸರಲ್ಲ.ಅದು ಅವರ ಮನೆತನದ ಹೆಸರು. ‘ಪೂಂದಾನಂ ಇಲ್ಲಂ’  ಇರುವುದು  ಈಗಿನ ಮಲಪ್ಪುರಂ ಜಿಲ್ಲೆಯ ಪೆರಿಂದಲ್ಮಣ್ಣದಿಂದ ೮ ಕಿ.ಮೀ.ದೂರದಲ್ಲಿ. ಕಾಸರಗೋಡಿನಲ್ಲಿರುವ ಹಿರಿಯ ಅನುವಾದಕರಾದ ಎ.ನರಸಿಂಹ ಭಟ್ ಕನ್ನಡಕ್ಕೆ ಮೂಲದ ಸೌಂದರ್ಯವನ್ನು ಮತ್ತು ಕಾವ್ಯಾತ್ಮಕತೆಯನ್ನು ಉಳಿಸಿಕೊಂಡು ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ಉದಾಹರಣೆಯಾಗಿ ಪೂಂದಾನಂ ಅವರು ಸಮಾಜದ ವಿವಿಧ ವರ್ಗಳ ಜನರನ್ನು ಚಿತ್ರಿಸುವ ಕೆಲವು ಸಾಲುಗಳ ಅನುವಾದ : ಸ್ಥಾನಮಾನಕ್ಕಾಗಿ ಬೈದಾಡಿ ಬಡಿದಾಡಿ/  ಮಾನವೆಲ್ಲವ ಕಳೆದು ಬದುಕುವರು ಕೆಲವರು/ ಮದಮತ್ಸರಾದಿಗಳ ಮನದಲ್ಲಿ ಮುದ್ರಿಸುತ/ಮತಿಹೀನರಾಗಿ ಬದುಕುವರು ಕೆಲವೆಉ/ ಕಾಮಮೋಹಿತರಾಗಿ ಕಾಮಾಕ್ಷಿಯರ ಸೇರಿ/ಕಾಮಕೇಳಿಯಲಿ ಕಾಲ ಕಳೆಯುವರು ಕೆಲವೆರು/ದೇವಾಲಯಗಳಲ್ಲಿ ಸೇವೆಗಾಗಿಯೆ ಸೇರಿ/ ವೇಷಧಾರಿಗಳಂತೆ ಬದುಕುವರು ಕೆಲವರು..     ಓದುಗರ ಅನುಕೂಲಕ್ಕಾಗಿ ಅನುವಾದಕರು ಮೂಲ ಕೃತಿಯ ಸಾಲುಗಳನ್ನು ಬಲ ಬದಿಯ ಪುಟಗಳಲ್ಲೂ ಅನುವಾದವನ್ನು ಎಡಬದಿಯ ಪುಟಗಳಲ್ಲೂ ನೀಡಿದ್ದಾರೆ. *********************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಕಾವ್ಯಯಾನ

ಮೊಬೈಲಾಯಣ

ಕವಿತೆ ಮೊಬೈಲಾಯಣ ಪೂರ್ಣಿಮಾ ಸುರೇಶ್ ಹಳೆಯದು,ಉಪಯೋಗಕ್ಕೆ ಬಾರದು ಎಂದು ಸರಿಸಿಟ್ಟಮೂಲೆ ಸೇರಿದ ಮೊಬೈಲ್ಇಂದು ಅಚಾನಕ್ ಸಿಕ್ಕಿದೆ ಗಾತ್ರದಲ್ಲಿ ಚಿಕ್ಕದುಅಡ್ಡಡ್ಡ ತರಚಿದ ಕವಚಪರದೆ ದೃಷ್ಟಿ ಮಂದಇದರ ಮಿದುಳಲ್ಲಿ ನಾನು ಎಷ್ಟೊಂದು ಭಾವರಸ, ಚಿತ್ರಪಟಕಸವನ್ನೂ ತುಂಬಿಟ್ಟಿದ್ದೆಬೇಕಾದಾಗ ನೆರವಾಗುವುದೆಂದು ನಂಬಿದ್ದೆ ಕುತೂಹಲ ಆಶ್ಚರ್ಯಕರಹಿಡಿಯಲ್ಲಿ ಬ್ರಹ್ಮಾಂಡಧರ ಅಳಿಸದ ಮಾತು ತಳದಲ್ಲಿ ಉಳಿದಿರಬಹುದೇನನ್ನೊಡನೆ ಅನುಸಂಧಾನ ನಡೆಸಬಹುದೇಬಿಚ್ಚದೆ ರೆಕ್ಕೆ ತೆಪ್ಪಗಿದೆಚಾರ್ಜರ್ ಗೆ ಸಿಕ್ಕಿಸಿದೆಧ್ಯಾನಬಿಂದು ಮಿನುಗುವಂತೆಆಹಾ! ಕೆಂಪು ಚುಕ್ಕಿ ಅತ್ತ ಸರಿದು ದಿಟ್ಟಿಸಿದೆಈಡಾಗಿ ಸೂಕ್ಷ್ಮ ಸೆಳೆತಕ್ಕೆ ಈಗ ತನ್ನನ್ನು ತಾನೇತೆರೆದುಕೊಂಡಿತು ಕ್ಷಣಾರ್ಧದಲ್ಲಿನನ್ನ ಮೊಗದಲ್ಲಿ ಮುಗುಳ್ನಗೆಯ ಚೆಲ್ಲಿ- ಜಾತ್ರೆಯಲ್ಲಿ ಕಳೆದುಹೋದಹಸುಳೆ ಸಿಕ್ಕಂತೆಆಪ್ತತೆಯಿಂದ ಅಪ್ಪಿ,ಕೆನ್ನೆ ಸವರಿ ಸಂಭಾಷಿಸಿದೆಮುಗುಳ್ನಗು,ಅರೆನಗು, ಚೂರುಮಾತುಹಳಹಳಿಕೆ ಪ್ರಶ್ನೆಗಳ ಖಜಾನೆ;ಸ್ವಲ್ಪ ಹಾಡಿ ಬಿಟ್ಟ ಹಾಡು,ಕಾವ್ಯ ಆಗದ ಪದಗಳ ತಂಡ,ಕಥೆ, ಚುಟುಕು,ಲಹರಿಪೆಚ್ಚುಮುಖ, ವಿಜಯದ ನಿಶಾನೆರವಾನೆಯಾದ ದಾಖಲೆ ಕಳಚಿ ಬಿದ್ದ ಕ್ಷಣಗಳುಪರಾಗಸ್ಪರ್ಶ ನಡೆಸಿವೆಮೌನದ ಮೊಗ್ಗಿಗೆ ಸುಗಂಧವನು ಕೂಡಿಸಿದೆ ನೀನೆಂಬ ಕಳಚಿಹೋದ ನಾನುಕಳಚಲಾಗದಂತೆಎದುರಾದೆವು ನುಡಿಯಲಾಗದೆಪರಿಸ್ಥಿತಿಗೆ ತುಡಿಯಲಾಗದೆ ಈಗ ಗುಂಗಿನ ಸುರಿಮಳೆಎಲ್ಲೆಲ್ಲೂ ಹೊಮ್ಮಿದಂತೆ ಜೀವಸೆಲೆಎದೆ ಒದ್ದೆಹರವಾಗಿ ಉತ್ತ ಗದ್ದೆಕವನ ಪಲ್ಲವಿಸಿಪರಿಮಳಿಸಿದ ಮುಹೂರ್ತ; ಬದುಕಿಗೆ ದೊರಕಿದಂತೆ ಅರ್ಥ ********************************************************************************************************

ಮೊಬೈಲಾಯಣ Read Post »

ಕಾವ್ಯಯಾನ

ನೋವಮೌನ-ಅನಾಥನಲಿವು

ಕವಿತೆ ನೋವಮೌನ-ಅನಾಥನಲಿವು ಮಮತ ಅರಸೀಕೆರೆ ಸುಡುವ ಆಲೋಚನೆಗಳ ಹೊರೆಭಾರದಲ್ಲಿ ಮಗ್ಗುಲು ಬದಲಾಯಿಸಿದ ಅವಳ ನಿಟ್ಟುಸಿರು ಅತ್ಯಾಚಾರದ ಕನಸು ಕಂಡು ದಡಕ್ಕನೆ ಎಚ್ಚರಗೊಂಡ ಬೆಲೆವೆಣ್ಣ ಸಾಂದ್ರಗೊಂಡ ನಿರಾಳತೆ ಗದರಿಕೆಗೆ ಬೆದರಿ ಕೈಮುಷ್ಟಿ ಹಿಡಿದು ಸ್ಥಂಭೀಭೂತವಾಗಿ ನಿಂತ ಅಬೋಧ ಬಾಲನ ಬೆರಗು ಕಣ್ಣುಮೊಲೆಹಾಲು ಕುಡಿದು ಕಟುವಾಯಿಯಲ್ಲಿ ಇಳಿಯುವಾಗಲೇ ಅಂಗಾತವಾದ ನಿದ್ದೆಗಣ್ಣ ಬೊಮ್ಮಟೆ ನಗು ಬವಣೆಗಳನ್ನೆಲ್ಲ ಬರಹವಾಗಿಸಿದ ಅಪೂರ್ಣ ಡೈರಿಯ ಇನ್ನರ್ಧ ಖಾಲಿಪುಟಗಳ ಚಡಪಡಿಕೆಬರೆಯುತ್ತಲೇ ಅತ್ಯುತ್ಸಾಹಕ್ಕೆ ಸ್ತಬ್ಧವಾದ ಸಾಲುಗಳ ನಡುವಿನ ರೂಪಣಾತ್ಮಕ ಧ್ವನ್ಯಾರ್ಥ ಪ್ರಯಾಣದ ನಡುವೆಯೇ ತಿರುವು ರಸ್ತೆಯಲ್ಲಿ ತಟಕ್ಕನೆ ಕೆಟ್ಟು ನಿಂತ ಬದುಕ ಬಂಡಿಯ ಚಲನೆಕಕ್ಷೆಯ ತಂತು ಕಡಿದು ಆಳಕ್ಕೆ ಜಾರುವಾಗಲೇ ಖಿನ್ನ ಉಪಗ್ರಹದ ಕೈಹಿಡಿದ ಭೂಮಿ ಗುರುತ್ವ ಬತ್ತಿದ ಮೈಯ ತುಂಬ ಮರಳು ಹೊತ್ತು ಸಾಗುತ್ತಲೇ ಮರುಗಿ ತಟ್ಟಾಯಿಸುವ ನದಿಯ ಅಳಲುಧುಮುಕು ಜಲಪಾತದ ಮೆರುಗು ಕಳೆದ ಖಾಲಿಬಂಡೆಗಳ ಸವರುವ ಬಳ್ಳಿ, ಹೂಜಾಲ ನವಿರು ಯಾರೊ ಬೀಸಿದ ಕಲ್ಲು ಮತ್ತಾರಿಗೊ ತಾಗಿದಂತೆ, ಕಾಲು ಕಳೆದುಕೊಂಡು ಕುಂಟುವ ನಾಯಿ ಆರ್ತತೆಸೋಲನ್ನೇ ಕನವರಿಸಿ ಸದಾ ಸವಾರಿ ಮಾಡುವ ಜೂಜು ಕುದುರೆಯ ಮೊದಲ ಬಾರಿಯ ಗೆಲುವಿನ ಕೆನೆತ *******************************************

ನೋವಮೌನ-ಅನಾಥನಲಿವು Read Post »

ಪುಸ್ತಕ ಸಂಗಾತಿ

ಜನ್ನತ್ ಮೊಹಲ್ಲಾ

ಕಥೆಗಾರ, ಕಾದಂಬರಿಕಾರ ಅಬ್ಬಾಸ ಮೇಲಿನಮನಿಯವರು ಇವತ್ತು ನಮ್ಮನ್ನಗಲಿದ್ದಾರೆ. ಅವರ ಜನ್ನತ್ ಮೊಹಲ್ಲಾ ಎಂಬ ಕಾದಂಬರಿ ಕುರಿತು ಸುನಂದಾ ಕಡಮೆ ಬರೆದಿದ್ದಾರೆ ಜನ್ನತ್ ಮೊಹಲ್ಲಾ ಸುನಂದಾ ಕಡಮೆ ಅಬ್ಬಾಸ ಮೇಲಿನಮನಿಯವರ ಹೆಂಗರುಳು ತುಂಬಿದ ‘ಜನ್ನತ್ ಮೊಹಲ್ಲಾ’     ಎರಡು ಓದಿನ ನಂತರ ಈ ಜನ್ನತ್ ಮೊಹಲ್ಲಾದಲ್ಲಿ ಎರಡು ದಿನ ಇದ್ದು ವಿಶ್ರಮಿಸಿ ಬಂದಂತೆ ಪಾತ್ರಗಳು ಸಂಭಾಷಣೆಗಳು ಘಟನೆಗಳು ಪುನಃ ಪುನಃ ಕಾಡತೊಡಗಿದವು. ಅಚ್ಚರಿಯೆಂದರೆ ಇಲ್ಲಿಯ ಹೆಣ್ಣು ಮಕ್ಕಳಿಗೆ ಹಿಂಸೆಯೆನಿಸದ ಸ್ವಾತಂತ್ರ್ಯವಿದೆ ಮತ್ತು ಕಕ್ಕುಲಾತಿಯ ಬಂಧನಗಳಿವೆ. ನಂಬಿಕೆಗಳಿಗೆ ಕಟ್ಟುಬೀಳದೇ ಸಹಜ ಬದುಕು ನಡೆಸುವಂತೆ ಹುಮ್ಮಸ್ಸು ನೀಡುವ ವಾತಾವರಣವಿದೆ. ಹೆಣ್ಣುಮಕ್ಕಳು ಅಪೇಕ್ಷೆ ಪಟ್ಟ ಬದುಕನ್ನು ಆಯುವ ಪ್ರಜ್ಞಾನೀತಿಯಿದೆ. ಇಲ್ಲಿ ಪ್ರೀತಿ ಪ್ರೇಮ ಹಟ ರೋಷ ದ್ವೇಷ ಅಸೂಯೆ ಅನುಕಂಪ ಅಂತಃಕರಣ ಮುಂತಾದ ಮನುಷ್ಯ ಸಹಜ ಸ್ಪಂದನೆಗಳೆಲ್ಲವೂ ಬಿಡಿಬಿಡಿಯಾದ ಆಕೃತಿಯಾಗಿ ಮೇಳೈಸಿವೆ. ನಮ್ಮ ಒಟ್ಟೂ ಸಮಾಜ ವ್ಯವಸ್ಥೆಯೇ ಪುರುಷ ಪ್ರಧಾನವಾಗಿರುವದರಿಂದ, ನಮ್ಮ ಶಿಕ್ಷಣ ನೀತಿ ಶಾಸ್ತç ಕಾನೂನು ಆಡಳಿತ ಉದ್ಯೋಗ ಈ ಎಲ್ಲ ಕ್ಷೇತ್ರಗಳಲ್ಲೂ ಗಂಡಿಗೊಂದು ಹೆಣ್ಣಿಗೊಂದು ಪ್ರತ್ಯೇಕ ಮಾನದಂಡ ಏರ್ಪಟ್ಟಿರುವದು ಕೃತ್ರಿಮ ಅನ್ನುವ ಗೋಜಿಗೇ ಹೋಗುವಂತಿಲ್ಲ ಎನ್ನುವಷ್ಟರ ಮಟ್ಟಿಗೆ ನಾವೂ ಹೊಂದಾಣಿಕೆ ಮಾಡಿಕೊಂಡುಬಿಟ್ಟಿದ್ದೇವೆ. ಎಲ್ಲ ಧರ್ಮಗಳಲ್ಲೂ ಹೆಣ್ಣಿನ ಪ್ರಜ್ಞೆಯನ್ನು ಸಾವಿರಾರು ವರ್ಷಗಳಿಂದ ಒಲೆ, ಅಡಿಗೆಮನೆ, ಕಸಬರಿಗೆ, ಕನ್ನಡಿ, ಮೆಹಂದಿ ಹೀಗೆ ಹೊಸ್ತಿಲೊಳಗೇ ಕಟ್ಟಿಹಾಕಿರುವದರಿಂದ ನಮಗೆ ವಿಕಾಸ ಎಂಬುದು ಒಂದು ವಿದೇಶೀ ಪರಿಕಲ್ಪನೆ. ಸ್ತ್ರೀಯರನ್ನು ಒಂದು ವಸ್ತು ಅಥವಾ ಒಂದು ಪದಾರ್ಥದಂತೆ ಭಾವಿಸಿರುವ ಈ ವ್ಯವಸ್ಥೆ, ಹೆಣ್ಣನ್ನು ಇಂದಿಗೂ ಎರಡನೇ ನಾಗರಿಕಳಾಗಿಯೇ ನೋಡುತ್ತ ಬಂದಿದೆ. ಆದರೆ ಈ ಕೃತಿಯಲ್ಲಿ ಅಲ್ಲಲ್ಲಿ ಅವಳಿಗೆ ತುಂಬಿದ ಚೈತನ್ಯದಾಯಕವಾಗಿ ಮಿಡಿಯುವ ಜೀವ, ಲೇಖಕರ ಔದಾರ್ಯವನ್ನೂ ಮೀರಿ ಬೆಳೆದು ನಿಂತಿರುವುದು ಒಂದು ಸೋಜಿಗವೇ ಸರಿ. ಇಲ್ಲಿಯ ಹೆಂಗರುಳು ತುಂಬಿದ ಜಗತ್ತು, ನನಗೆ ಈ ಕಾದಂಬರಿ ಇಷ್ಟವಾಗಲು ಕಾರಣ.      ಕಾದಂಬರಿಕಾರ ಅಬ್ಬಾಸ್ ಮೇಲಿನಮನಿಯವರು ಅತ್ಯಂತ ಸಹಜವಾದ ಸ್ತ್ರೀಪರ ದೃಷ್ಟಿಕೋನವನ್ನು ಹೊಂದಿರುವವರಾದ್ದರಿಂದ ಈ ಮೊಹಲ್ಲಾ ಪರಂಪರೆಯ ಜಾಡ್ಯವನ್ನು ನಿವಾರಿಸಿಕೊಳ್ಳುತ್ತಲೇ ಮನುಷ್ಯತ್ವದ ಉನ್ನತಿಯನ್ನು ಇಡಿಯಾಗಿ ತನ್ನೊಡಲಲ್ಲಿಟ್ಟಿಕೊಂಡು ಸಮೃದ್ಧವಾಗಿ ಮೂಡಿ ಬಂದ ಕೃತಿ. ಹೀಗೆ ಅಮಿನೂರಿನಲ್ಲಿ ಮೈತೆತ್ತ ಪ್ರತಿಯೊಬ್ಬ ಮಹಿಳೆಯೂ ಮಾನವೀಯ ಅಂತಃಕರಣವುಳ್ಳವಳು. ವ್ಯವಸ್ಥೆಯ ಕಾರಸ್ಥಾನಕ್ಕೆ ಬಲಿಪಶುವಾಗುವ ಹೆಣ್ಣುಗಳು ತಂತಮ್ಮ ಮನೋಸ್ತೈರ್ಯದಿಂದಲೇ ಈ ಕಾದಂಬರಿಯ ಅಂತಃಸತ್ವವಾಗಿ ಬೆಳೆದು ನಿಂತಿದ್ದಾರೆ. ಕೆಲವು ಪುರುಷರ ಸಣ್ಣತನ ದುಷ್ಟತನ ಧರ್ಮಾಂಧತೆಯ ನಡುವೆಯೇ ಬೆಂದು ಬಸವಳಿದು ತಲ್ಲಣಿಸುವ ಈ ಮೊಹಲ್ಲಾದಲ್ಲಿಯ ಪ್ರತಿಯೊಬ್ಬ ಸ್ತ್ರೀ ತನ್ನ ಹೆಜ್ಜೆ ಹೆಜ್ಜೆಗೂ ಗೆಲುವಿನ ದಾರಿಯನ್ನೇ ಹಿಡಿಯುತ್ತಾಳೆ. ಇಲ್ಲಿ ಜೀವಿಸುವ ಹನ್ನೆರಡು ಪ್ರಮುಖ ಹೆಣ್ಣು ಜೀವಗಳಲ್ಲಿ ಒಬ್ಬೊಬ್ಬರದೂ ಒಂದೊಂದು ದಾರಿ. ಒಂದೊAದು ನಡೆ. ಬೇರೆ ಬೇರೆ ನೋಟ. ವಿವಿಧ ತರ್ಕಗಳು, ಪ್ರತ್ಯೇಕ ಸಂವೇದನೆಗಳು, ಎಲ್ಲ ಮನೋಭೂಮಿಕೆಗಳೂ ಸೇರಿ ಈ ನೆಲದ ನೆಮ್ಮದಿಯ ಬದುಕಿನ ಮಹತ್ತರವಾದೊಂದು ಆಕಾಂಕ್ಷೆಯೊಂದಿಗೆ ಜನ್ನತ್ ಮೊಹಲ್ಲಾ ರೂಪಿತವಾಗಿದೆಯೇನೋ ಅನಿಸುತ್ತದೆ.       ಆರಂಭದಲ್ಲಿ ನಿರಪರಾಧಿ ಮೆಹರುನ್ನಿಸಾ ತನ್ನ ಸುರುಳೀತ ದಾರಿಯಲ್ಲಿ ಅಕಾರಣ ಒದಗಿ ಬಂದ ಅನೇಕ ಸಂಧಿಗ್ಧಗಳನ್ನು ಮೆಟ್ಟಿ ನಿಲ್ಲುತ್ತಾಳೆ. ಕೊನೆಯಲ್ಲಿ ಗಂಡ ಜಾವೇದನೇ ಕ್ಷಮೆ ಕೇಳಿದರೂ ಅವನ ಮಾತನ್ನು ಧಿಕ್ಕರಿಸಿ ‘ಸ್ವಂತ ಬುದ್ಧಿ ಮತ್ತು ಮನುಷ್ಯತ್ವ ಇಲ್ಲದವನೊಂದಿಗೆ ನಾನು ಜಿಂದಗಿ ಮಾಡುವುದಿಲ್ಲ’ ಎಂದು ತಾನು ಹುಟ್ಟಿದ ಮನೆಯ ದಾರಿ ಹಿಡಿಯುವ ಮೆಹರುನ್ನೀಸಾ ವ್ಯವಸ್ಥೆಯ ತುಳಿತದಿಂದಲೇ ಸ್ವತಂತ್ರ ಬಾಳಿಗೆ ಮುನ್ನುಡಿ ಬರೆದವಳು. ಮಗುವನ್ನು ಕಳೆದುಕೊಂಡ ಸಂಕಟದಲ್ಲೂ ತನ್ನ ದಾರಿಯನ್ನು ನೇರವಾಗಿ ಗುರುತಿಸಿಕೊಂಡವಳು. ಕಷ್ಟ ಸಹಿಷ್ಣುವಾಗಿ ಬಾಳಿದ ರೆಹಮಾನನ ತಾಯಿ ಅಮೀನಾ ಕೂಡ ಇಡೀ ಬದುಕನ್ನು ಒಳ್ಳೆಯದರ ನಿರೀಕ್ಷೆಯಲ್ಲೇ ಕಳೆದವಳು. ಸಣ್ಣ ವಯದಲ್ಲೇ ಗಂಡನನ್ನು ಕಳಕೊಂಡು ಮಗ ಕೆಲಕಾಲ ದೂರವಾದಾಗ್ಯೂ ಏಕಾಂಗಿ ಜೀವಿಸಿದವಳು. ಆ ಮೂಲಕ ಇಡೀ ಸಮಾಜವನ್ನು ಕ್ಷÄಲ್ಲಕವಲ್ಲದ ರೀತಿಯಲ್ಲಿ ಮುನ್ನಡೆಸಬೇಕೆನ್ನುವವಳು. ವಿಧವೆ ತಾಹಿರಾಳನ್ನು ಸೊಸೆ ಮಾಡಿಕೊಂಡು ಸಂಪ್ರದಾಯದ ವಿರುದ್ಧವೂ ಒಂದು ಕಲ್ಲು ಎಸೆದವಳು. ಸಮಾಜ ಕೊಡಮಾಡದ ನೆಮ್ಮದಿಯನ್ನು ತನ್ನ ವೈಚಾರಿಕ ಬೆಳಕಿನಲ್ಲೇ ಪಡಕೊಂಡವಳು.       ತಂದೆಯಿಲ್ಲದ ಬಡ ಹುಡುಗ ರೆಹಮಾನನನ್ನು ತನ್ನ ಮಗನಂತೆಯೇ ನೋಡಿಕೊಂಡ, ಪ್ರಭಯ್ಯ ಹಿರೇಮಠ ಮಾಸ್ತರರ ಹೆಂಡತಿ ಮಲ್ಲಮ್ಮ,, ನಿಸ್ವಾಥದಿಂದ ಓದುಗರ ಮನಸ್ಸಿನಲ್ಲಿ ನಿಲ್ಲುತ್ತಾಳೆ. ಅನ್ಯ ಧರ್ಮೀಯ ಹುಡುಗನನ್ನು ಮನೆ ಸೇರಿಸುವ ತಾಯ ಮಮತೆಯನ್ನು ತನಗೆ ಸಿಕ್ಕ ಅವಕಾಶದಲ್ಲೇ ಸಾರ್ಥಕಪಡಿಸಿಕೊಳ್ಳಲು ಮೂಡಿ ಬಂದಂತಿರುವವಳು. ಅಮಿನೂರಿನ ಶಾಲೆಗೆ ಕನ್ನಡ ಶಿಕ್ಷಕಿಯಾಗಿ ಹೊಸ ಕದಿರು ತಂದ ಚಿಕ್ಕೋಡಿಯ ಧ್ಯಾನಸ್ಥ ಮನಸ್ಸಿನ ಹುಡುಗಿ ತಾಹಿರಾ ಪಟೇಲ್ ಸಹ ಚಿಕ್ಕ ವಯದಲ್ಲೇ ವೈಧವ್ಯದ ನೋವು ಅನುಭವಿಸಿದವಳಾದರೂ ಹೃದಯವಂತ ಸ್ವಭಾವದವಳು, ಅನಕ್ಷರಸ್ಥ ಮಹಿಳೆಯರಿಗೆ ಹೊಲಿಗೆ ಕಸೂತಿ ಕಲಿಸಿ ಪಾರತಂತ್ರದಿಂದ ನೇರ ನಿಲ್ಲಲು ಛಲ ತುಂಬಿದವಳು. ವೈಚಾರಿಕ ಪ್ರಜ್ಞೆಯ ಬೆಳಕನ್ನು ಚೆಲ್ಲುತ್ತ, ನತದೃಷ್ಟ ನಜಮಾಗೆ ಅಕ್ಷರ ಕಲಿಸುವವಳು, ಒಂದು ಕಡೆಯಿಂದ ‘ಮೊಹಲ್ಲಾದ ಹೆಂಗಸರ ತಲೆಕೆಡಿಸಿ ಪುರುಷರ ಮೇಲೆ ಎತ್ತಿಕಟ್ಟಿ ಅವಾಂತರ ಉಂಟು ಮಾಡುತ್ತಿದ್ದಾಳೆ’ ಎಂದು ತಿವಿಸಿಕೊಂಡರೂ, ಇನ್ನೊಂದು ಕಡೆಯಿಂದ ‘ಬಸವನ ಹುಳದಂಗ ತೆವಳೂದ್ರಾಗ ತೃಪ್ತಿ ಐತಿ ಹೊರತು ಹಕ್ಕಿ ಹಂಗ ಮುಗಿಲು ತುಂಬಾ ಹಾರಾಕ ಬಯಸೂದಿಲ್ಲ ಇವರು’ ಅಂತ ತನ್ನ ಜನರ ದುಗುಡ ದುಮ್ಮಾನ ಸ್ವಂತದ್ದಾಗಿಸಿಕೊಳ್ಳುವ ತಾಹಿರಾಳೇ ಈ ಕಾದಂಬರಿಯ ನಾಯಕಿಯಂತೆ ಮೇಲ್ನೋಟಕ್ಕೆ ಸೃಷ್ಟಿಯಾಗಿದ್ದಾಳೆ. ಹೆಣ್ಣುಮಕ್ಕಳ ಹತಾಷೆಯ ಬಾಳನ್ನು ಹಿಡಿದೆತ್ತಿ ಆತ್ಮಸ್ತೈರ್ಯ ತುಂಬುವದೂ ಅದರಂತೆ ಬದುಕುವುದೂ ಸಾಮಾಜಿಕ ಕಳಕಳಿಯ ಮನಸ್ಸಿಗೆ ಹಿಡಿದ ಘನತೆಯ ಕನ್ನಡಿಯಾಗಿದೆ.         ‘ಇನ್ಮೇಲೆ ನಜಮಾ ಶಾಲೀಗ ಹೊಕ್ಕಾಳ, ನಾನು ದುಡಿದು ಆಕೀಗ ಕಲಿಸ್ತೀನಿ’ ಎನ್ನುವ ನೂರಜಾನ ಕೂಡ ಕೌಟುಂಬಿಕ ವಲಯದಲ್ಲೇ ದಿಟ್ಟೆಯಾಗಿ ವರ್ತಿಸಿದವಳು. ಕುಡುಕ ಗಂಡ ಶಾಲೆ ಬಿಡಿಸಿ ಕೂಲಿಗೆ ಹಚ್ಚಿದ ಮಗಳನ್ನು, ಪುನಃ ಕೂಲಿ ಬಿಡಿಸಿ ಶಾಲೆಗೆ ಸೇರಿಸಿ ‘ಅವಳ ಕೆಲಸಾ ನಾನು ಮಾಡ್ತೀನಿ, ನನ್ನ ಕೂಸು ಓದು ಬರಹ ಕಲೀಲಿ’ ಎನ್ನುತ್ತ ತನ್ನ ಗಂಡನನ್ನೇ ಎದುರು ಹಾಕಿಕೊಂಡು ತನ್ಮೂಲಕ ಸಾಕ್ಷರದ ಮಹತ್ವವನ್ನು ಸ್ತಿçà ಸಮೂದಾಯಕ್ಕೆ ಅರುಹಿ, ಬಡವರ ಅವಶ್ಯಕತೆಗಳು ಹೆಣ್ಣುಮಗಳೊಬ್ಬಳ ಶಿಕ್ಷಣಕ್ಕೆ ಶಾಪವಲ್ಲ ಎಂಬುದನ್ನು ಕಾಣಿಸಿದವಳು. ಮುಂಬೈಗೆ ಮದುವೆಯಾಗಿ ಹೋಗಿ ಅಲ್ಪ ಕಾಲಾವಧಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ರೂಬಿಯಾ, ಪ್ರೀತಿಸಿದ ರೆಹಮಾನನನ್ನು ಅವನ ಬಡತನವೇ ಕಾರಣವಾಗಿ ಅವಳ ತಂದೆ ಎಸಗಿದ ದುರ್ವಿಧಿಯಿಂದ ಅತ್ತ ಮೆಚ್ಚಿದವನನ್ನು ಪಡೆಯಲಾರದೇ ಇತ್ತ ಅನ್ಯಾಯವನ್ನೂ ಸಹಿಸಲಾರದೇ ಜೀವ ತೆತ್ತವಳು. ರೆಹಮಾನನ ಸಖಿಯಾಗಬೇಕಾದವಳು ಸಾವಿನ ಸಖಿಯಾಗಿ ಹೋದ ದಾರುಣತೆಗೆ ಈಡಾದ ರೂಬಿಯಾ ವ್ಯವಸ್ಥೆಯ ಶೋಷಣೆಗೆ ಸಿಕ್ಕಿಹಾಕಿಕೊಂಡು ಅಸಹಾಯಕಳಾಗಿ ನಲುಗಿದಳು.       ತಸ್ಲೀಮಾ, ಗಂಡ ಅಶ್ರಫ್ ನ ಸಂಶಯಕ್ಕೆ ಎಡೆ ಮಾಡಿಕೊಡುವಂತೆ ಕುಹಕಿಗಳ ವಂಚನೆಗೆ ಬಲಿಯಾಗಿ ಕಾಲೇಜು ವಿದ್ಯೆಗೆ ತೆರೆದುಕೊಂಡವಳು. ದೂರ ಇದ್ದ ಗಂಡನನ್ನೇ ಕಾಯುತ್ತ ಚಿಂತಿಸುತ್ತ, ಅಲ್ಲಿಂದ ಹರಿದು ಬರುವ ಕೇವಲ ಹಣದ ರಾಶಿಗಾಗಿಯೋ ಎಂಬ ಸಂಶಯಕ್ಕೆಡೆ ಮಾಡುವಂತೆ ತನ್ನ ಮನಸ್ಥಿತಿಯನ್ನು ಕಿಂಚಿತ್ತೂ ಸಡಿಲಿಸದೇ ಕೂತಿದ್ದಾಗ್ಯೂ ಮನೆಯಲ್ಲೇ ಇರುವ ಕಾಮುಕನ ಹಿಂಸೆಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿ, ಆ ಹಿನ್ನೆಲೆಯಲ್ಲೇ ಅಗ್ನಿ ಪರೀಕ್ಷೆ ಎದುರಿಸುವ ಸಧೃಡ ಮನಸ್ಸಿನವಳಾಗಿ ರೂಪಗೊಂಡವಳು. ಹೊಟೇಲ್ ಮಾಲಿಕ ಹುಸೇನ್ ಮೀಯ್ಯಾನ ಹೆಂಡತಿ ಸುರಯ್ಯಾ, ವೃದ್ಧ ಪತಿಯ ಅನಾಸಕ್ತಿಯಿಂದ ಬೇಸತ್ತು ಆತ್ಮವಂಚಿತಳಾಗಿ ಯಾವುದೋ ಕ್ಷಣದಲ್ಲಿ ರೆಹಮಾನನ ಆಸರೆ ಬಯಸಿ ಬಂದು, ನಂತರ ಪಶ್ಚಾತ್ತಾಪದಿಂದ ನೇರ ಮನಸ್ಥಿತಿಗೆ ಮರಳಿದವಳು, ರೆಹಮಾನನ ಒಡತಿಯಾದ ಇವಳು ಕೊನೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ಪುನಃ ತನ್ನ ಗೋಡೆ ತಾನೇ ನಿರ್ಮಿಸಿಕೊಂಡ ಹಾಗೆ ಅನಿಸುತ್ತ ಸುರಯ್ಯಾ ತನ್ನ ಮನಸ್ಸನ್ನೇ ತಾನು ಸಮಾಧಿಮಾಡಿಕೊಂಡವಳಂತೆ ಕಾದಂಬರಿಯಿAದಲೇ ದೂರವಾಗುತ್ತಾಳೆ. ರೆಹಮಾನನ್ನು ಒಂದರೆಕ್ಷಣ ಬಯಸಿದ ಅಭೀಪ್ಸೆಯೇ ಅವಳ ಅಂತರAಗದ ಬಿಡುಗಡೆಯಂತೆ ಇಲ್ಲಿ ಧ್ವನಿತವಾಗಿದೆ.       ಜಾಹೀರಾ, ಖತೀಜಾ ಬೀಬಿಯ ಮಗ ನೌಷಾದನನ್ನು ಪ್ರೇಮಿಸಿ ಮನೆ ಬಿಟ್ಟೇ ಬರುವ ಧೈರ್ಯ ತೋರಿದವಳು. ರಾತ್ರಿಯ ಕತ್ತಲನ್ನು ಸಹ ಹಿಮ್ಮೆಟಿಸಿ ಬೆಳಕಿಗೆ ಮುಖ ಮಾಡಿ ನಿಂತು ಬದುಕಿನ ಪಯಣದಲ್ಲಿ ಗಂಡಾಂತರವನ್ನೇ ಎದುರಿಸುವ ಛಾತಿಯುಳ್ಳವಳು. ಇಂಥ ಕತ್ತಲನ್ನು ಎದುರಿಸದ ರೂಬಿಯಾ ಪುನಃ ನೆನಪಾಗುತ್ತಾಳೆ. ಸೈರಾ, ಜಿಲಾನಿಯವರ ಒಳಕತ್ತಲನ್ನು ತೆರೆದು ತೋರಿದ್ದಷ್ಟೇ ಅಲ್ಲದೇ ಅವನ ನೆಚ್ಚಿನ ಹುಡುಗಿಯಾಗಿ ತನ್ನ ಒಂಟಿ ಬಾಳಿಗೆ ನಾಂದಿ ಹಾಡಲು ಹೊರಟಿರುವವಳು. ಸೈರಾಳ ಸೂಕ್ಷ್ಮಮತಿ ಬುದ್ಧಿವಂತಿಕೆ ಚಾಣಾಕ್ಷ್ಯತೆ ಧೈರ್ಯವಂತಿಕೆ ಗಮನಿಸಿದರೆ ಇವಳೇ ಈ ಕೃತಿಯ ನಿಜವಾದ ನಾಯಕಿಯಂತೆ ಮೂಡಿಬಂದಿದ್ದಾಳೆ. ಇವಳು ತಾನು ಅನುಭವಿಸಿದ ನೋವಿನ ಘರ್ಷಣೆಗಳಿಂದಲೇ ಪಾಕಗೊಂಡು ಬೆಳೆದ ಮನಸ್ಸುಳ್ಳವಳು. ಸೈರಾ ಮುಂದೊಂದು ದಿನ ತಾಹಿರಾಳಂತೆ ಜನ್ನತ್ ಮೊಹಲ್ಲಾವನ್ನಷ್ಟೇ ಅಲ್ಲ ಇಡೀ ಭೂಮಿಯನ್ನು ತಾಯಂತೆ ಪೊರೆಯುವ ಶಕ್ತಿಯುಳ್ಳವಳಂತೆ ಕಾಣುತ್ತಾಳೆ. ಕೌಸರ್ ಭಾನು, ತನ್ನ ಅನಾರೋಗ್ಯಕ್ಕೆ ಆಸ್ಪತ್ರೆಯ ವೈಜ್ಞಾನಿಕ ಔಷಧಿಯಿಂದಲೇ ಗುಣಪಡಿಸುವ ಶಕ್ತಿಯಿದೆಯೆಂದು ನಂಬಿದ್ದವಳು. ವೈಜ್ಞಾನಿಕ ದೃಷ್ಟಿಕೋನದಲ್ಲಿ ಯಾವ ಮಹಿಳೆ ಯೋಚಿಸಲು ತೊಡಗುತ್ತಾಳೋ ಅಂದಿನಿಂದಲೇ ಅವಳ ವಿಕಾಸದ ಮೆಟ್ಟಿಲುಗಳು ಆರಂಭಗೊಳ್ಳುತ್ತವೆ ಅಂದಿದ್ದರು ಲೋಹಿಯಾ. ಖತೀಜಾ ಬೀಬಿ, ಗಂಡನಿಗೆ ಒಂದು ಮಗುವನ್ನು ಹೆತ್ತುಕೊಡುವಲ್ಲಿ ಯಶಸ್ವಿಯಾಗಿ ಅವನ ಆಸ್ತಿಯಲ್ಲೇ ಸಂಸಾರ ನಡೆಸುವ ಪಯಣದಲ್ಲಿ ದಾಯಾದಿಗಳಿಂದ ಅನ್ಯಾಯವಾಗಿ ನೋವು ಅನುಭವಿಸುತ್ತಿರುವವಳು. ಖತೀಜಾ ಬೀಬಿಯ ನಂಬಿಕೆಗಳು ಕೂಡ ಅವೈಜ್ಞಾನಿಕವಾದುದಲ್ಲ. ಇದು ಸುರಯ್ಯಾಳ ಧಾರ್ಮಿಕ ನಂಬಿಕೆಗಳಿಗಿAತ ತೀವ್ರವಾದದ್ದು ಮತ್ತು ಅಷ್ಟೇ ಪ್ರಾಮಾಣಿಕವಾದದ್ದು.       ರಾಜಕೀಯ ಸ್ವಾರ್ಥ ವಂಚನೆ ತುಳಿತ ಹಿಂಸೆ ಏನೆಲ್ಲವುಗಳ ಮಧ್ಯೆಯೇ ಈ ಮೊಹಲ್ಲಾದಲ್ಲಿ ಹನ್ನೆರಡು ಸ್ತ್ರೀಪಾತ್ರಗಳು ಜೀವಂತಿಕೆಯಿಂದ ನಳನಳಿಸುತ್ತವೆ, ಸ್ತ್ರೀಯರನ್ನು ತಿಳಿವಳಿಕೆಯುಳ್ಳವರು ಸಂಸ್ಕಾರವಂತರು ಸುಸಂಸ್ಕೃತರು ಎಂಬುದನ್ನು ಒಪ್ಪಿಕೊಳ್ಳುತ್ತ ಸಾಗುವುದು ಕೂಡ ಕಾದಂಬರಿಕಾರ ಅಬ್ಬಾಸರ ದೊಡ್ಡತನವೇ ಆಗಿದೆ. ಈ ವಿಶಾಲ ಮನೋಭಾವ ಎಲ್ಲ ಲೇಖಕರಲ್ಲಿ ಇರುವುದಿಲ್ಲ. ಇಲ್ಲಿ ಹಣಕಿ ಹಾಕುವ ಮನುಷ್ಯ ಸಹಜ ಹಿಂಸೆಯಲ್ಲೇ ನಿಗೂಢವಾಗಿರುವ ಇನ್ನೊಂದು ಸ್ತರದಲ್ಲಿ ಅಹಿಂಸೆ ಮಾನವೀಯತೆಗಳು ಪ್ರತಿಬಿಂಬಿಸುತ್ತವೆ. ಮುಸ್ಲಿಂ ಸಮುದಾಯದ ನಿತ್ಯದ ಬದುಕನ್ನು ನಿರೂಪಿಸುತ್ತ ಅಬ್ಬಾಸರು ಈ ನೆಲದ ಕತೆಯನ್ನು ಆಪ್ತವಾಗಿ ಹೇಳುತ್ತಾ ಹೋಗುತ್ತಾರೆ. ಅಬ್ಬಾಸರ ದೃಷ್ಟಿಯಿರುವುದು ಸಾಮಾಜಿಕ ನ್ಯಾಯಗಳ ಬಗ್ಗೆ. ಮನುಷ್ಯ ಸಂಬಂಧಗಳನ್ನು ಸಮುದಾಯಿಕ ನೆಲೆಯಲ್ಲಿ ತಂದು ನಿಲ್ಲಿಸಿ ಪರಸ್ಪರ ಕೊಂಡಿ ಬೆಸೆಯಲು ಕಾದಂಬರಿಯುದ್ದಕ್ಕೂ ಯತ್ನಿಸುತ್ತಾರೆ.       ಪುರುಷರ ಬದುಕಿನಲ್ಲಿ ಸ್ತ್ರೀಯರ ಅಗತ್ಯವನ್ನು ಮನಗಂಡವರು ಅಬ್ಬಾಸರು. ಹಾಗೂ ಸ್ತಿçÃಯರ ದೈನಿಕಕ್ಕೆ ಇರುವ ಆತ್ಮವಿಶ್ವಾಸಗಳ ಕೊರತೆಯನ್ನು ಕಾಣಿಸುತ್ತಲೇ ಅಬ್ಬಾಸರು ಅದಕ್ಕೆ ಪರ್ಯಾಯವಾಗಿ ಕೆಲವು ಬಿಡುಗಡೆಯ ನೋಟಗಳನ್ನು ತೋರಿಸುತ್ತಾರೆ. ನೆಲದ ನೆಮ್ಮದಿಗೆಡದಂತೆ ಬದುಕು ನೀಡಬಹುದಾದ ಅನೇಕ ಎಚ್ಚರಗಳನ್ನು ಮೊಹಲ್ಲಾದ ಪಾತ್ರಗಳು ಸಾಧಿಸುತ್ತವೆ, ಮೊಹಲ್ಲಾದ ಲೋಕವು ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಗತ ಘನತೆಯನ್ನು ಎಲ್ಲೂ ಭಂಜಿಸದ ಹಾಗೆ ಕಾದುಕೊಳ್ಳುತ್ತದೆ. ಶ್ರಮಿಕ ವರ್ಗದ ಹಿತದ ದೃಷ್ಟಿಯಿಂದ ಇಲ್ಲಿಯ ಸಂದರ್ಭಗಳು ಘಟನೆಗಳು ಮೊನಚಾಗಿಯೂ ಹರಿತವಾಗಿಯೂ ಮೂಡಿ ಬಂದಿವೆ. ದುರ್ಬಲ ಮನಸ್ಥಿತಿಯ ಪ್ರಾಣಿ ಬುದ್ಧಿಯ ಬೆರಳೆಣಿಕೆಯಷ್ಟೇ ವ್ಯಕ್ತಿಗಳೂ ಹಂತಹಂತವಾಗಿ ಉನ್ನತಿಯ ಮಟ್ಟಕ್ಕೇರುವ ಸಕಾರಣ ಸನ್ನಿವೇಶಗಳ ಸರಪಳಿ ಆಪ್ಯಾಯಮಾನವಾಗಿದೆ.      ಪ್ರೇಮ, ಮದುವೆ, ಹೊಂದಾಣಿಕೆ ಇವನ್ನು ಮೀರಿದ ಲಾಕ್ಷಣಿಕ ಬದುಕು ದೊರೆತ ದಿನ, ಇಲ್ಲಿಯ ಹೆಣ್ಣು ಜೀವಗಳ ಆತಂಕಗಳು ತಲ್ಲಣಗಳು ತೋರತೊಡಗುವವು. ಬಡ ಮಧ್ಯಮ ವರ್ಗದ ಜಗತ್ತಿನ ಸಂಬಂಧಗಳ ವಿಪರೀತಗಳನ್ನು ಬೆಸೆಯಲು ಹೋಗದೇ ಅದರ ನಡುವಿನ ಅನಾಮಿಕತೆಯನ್ನು ಅದು ಇದ್ದಂತೆಯೇ ಬೆಳೆಯಲು ಬಿಟ್ಟು ನಿರೂಪಿಸಿದ ಕಾರಣದಿಂದ ಒಂದು ರೀತಿಯ ಲೋಕಾರೂಢಿಯ ದೃಶ್ಯ ವಿಸ್ತಾರ ಇಲ್ಲಿ ತಾನೇ ತಾನಾಗಿ ಒಲಿದು

ಜನ್ನತ್ ಮೊಹಲ್ಲಾ Read Post »

You cannot copy content of this page

Scroll to Top