ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಸರಳವೇ ಸುಂದರ ಇಂಗ್ಲೀಷ್ ಮೂಲ:ಮ್ಯಾಥಿವ್ ಪಿ ಥಾಮಸ್ ಕನ್ನಡಕ್ಕೆ:ಚೈತ್ರಾ ಶಿವಯೋಗಿಮಠ ಪುಟ್ಟ ವೃಕ್ಷಮಾತೆಯೊಬ್ಬಳು ಕೈಚಾಚಿ ಕರೆದಳು,ತನ್ನ ಪ್ರೀತಿಯ ತೆಕ್ಕೆಯಲ್ಲಿ ನನ್ನ ಎತ್ತಿ ಮೇಲಕ್ಕೆಸೆದು ಆಡಿಸಿದಳುಅಲ್ಲಿ ಮೇಲೆ, ಸಣ್ಣ ಬಿಳಿ ಹತ್ತಿಯಂತಹ ಮೋಡಗಳು ತೇಲುವುದ ಕಂಡೆಬಾಳಿನ ಅವ್ಯಕ್ತ ಚಿತ್ರಗಳನು ತಿಳಿ ನೀಲಿ ಬಾನ ಪಟದ ಮೇಲೆ ಬಿಡಿಸಿದಂತೆ. ಅವಳು ತನ್ನ ನೆಮ್ಮದಿಯ ನೆಳಲಿನ ಮಡಿಲಲಿ ನನ್ನ ಮಲಗಿಸಿದಳು.ದೂರದೂರುಗಳ, ಹಚ್ಚ ಹಸಿರು ಬಯಲುಗಳ ಕನಸ ಕಂಡೆಅಲ್ಲಿ, ಉಕ್ಕಿ ಹರಿಯುವ ನದಿಗಳು ಪ್ರತಿ ಕಲ್ಲುಗಳನ್ನು ನುಣುಪಾಗಿಸುವುವುಅಲ್ಲಿ, ನವಿಲು ತನ್ನ ನಲ್ಲೆಯ ಹೃದಯದ ತಾಳಕೆ ಹೆಜ್ಜೆ ಹಾಕುವುದುಅಲ್ಲಿ, ಹುಲ್ಲೆ-ಹುಲಿಗಳು ಸ್ವಚ್ಛಂದವಾಗಿ ಒಂದೇ ಕೊಳದಲಿ ನೀರು ಕುಡಿಯುವವುಅಲ್ಲಿ, ಮಕ್ಕಳು ಗಾಳಿಯಲ್ಲಿ ಅಚ್ಚ ಬಿಳಿ ಹೊಗೆಯುಂಗುರಗಳನು ಹಿಡಿಯಲು ಯಾವ ಅಳುಕಿಲ್ಲದೆ ಓಡುವರು.ಅಲ್ಲಿ, ಮುಂಬೆಳಗಲಿ ಮುಗಿಲು ಬೆಟ್ಟಗಳನು ತಬ್ಬುವುದು.ದೂರದೂರುಗಳ, ಹಚ್ಚ ಹಸಿರು ಬಯಲುಗಳ ಕನಸ ಕಂಡೆ ವರುಷಗಳ ನಂತರ….. ವಿಮಾನದಲ್ಲಿ ಕುಳಿತು ಮುಗಿಲ ಮೇಲೆ ಹಾರಿದೆ.ಎತ್ತರದ ಕಾರ್ಖಾನೆ-ಕಟ್ಟಡಗಳು ಉಗುಳುವ ಹೊಗೆ-ಧೂಳುಗಳಿಂದ ಮೋಡಗಳು ಕಡುಗಪ್ಪಾಗಿ ಬಿಮ್ಮನಿಸಿದ್ದವುಹಾಲು-ಜೇನುಗಳ ಸಮೃದ್ಧ ನಾಡನ್ನು ಕಟ್ಟಲು,ಕಲ್ಲಿನ ಗಣಿಗಳು, ಬೆಳ್ಳಿ-ಬಂಗಾರದ ಖನಿಗಳ ಕನಸ ಕಂಡೆಆಯುಧದ ಬಲಿಪೀಠಗಳು, ಹುತಾತ್ಮರ ಪ್ರತಿಮೆಗಳ ಕನಸ ಕಂಡೆಮರಮುಟ್ಟು, ಉಕ್ಕು, ಗಾರೆ, ಇಟ್ಟಿಗೆಗಳ ಕನಸ ಕಂಡೆಇಷ್ಟೆಲ್ಲ ಕನಸುಗಳುವಿಮಾನ ಕೆಳಗಿಳಿದು, ವಿವಿಧ ಆಕಾರದ ಮುಖಗವಸುಗಳ ತೊಟ್ಟಮನುಷ್ಯರು ಅಂತರ ಕಾಯ್ದುಕೊಂಡು ನನ್ನನ್ನು ಸ್ವಾಗತಿಸುವವರೆಗೆ! ಆ ದೇವರ ಸೃಷ್ಟಿಯ ಒಂದು ಸಣ್ಣ ವೈರಾಣುವಿನಿಂದಾಗಿಮತ್ತೆ ಸ್ವಚ್ಛ ಆಕಾಶ, ಸ್ವಚ್ಛ ಭೂಮಿಯ ಕನಸ ಕಂಡೆ.ಇನ್ನಿಲ್ಲದ ಮರದ ಅಪ್ಪುಗೆ ಬಯಸಿ ಹಂಬಲಸಿದೆ! “ಸರಳವೇ ಸುಂದರ”‌ವೆಂದು ಮಮ್ಮಲ ಮರುಗಿದೆ! ********************************

ಅನುವಾದ ಸಂಗಾತಿ Read Post »

ಇತರೆ

ಇತರೆ

ಎಚ್ ಎನ್ ರವರ ಸರಳತೆ ಮತ್ತು ಸಾಮಾಜಿಕ ಚಿಂತನೆ. ನಾಡು ಕಂಡ ಅಪರೂಪದ ಧೀಮಂತ ಸಜ್ಜನ ವ್ಯಕ್ತಿ,ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ಪ್ರಗತಿಪರವಿಚಾರವಾದಿ, ಹಾಸ್ಯ ಪ್ರಜ್ಞೆಯ ವ್ಯಕ್ತಿತ್ವ,ರಾಷ್ಟ್ರೀಯವಾದಿ,ಖಾದಿ ಬಟ್ಟೆಯನ್ನೇ ಕೊನೆಯವರೆಗೂ ಧರಿಸುತ್ತಿದ ಮೇಧಾವಿ,ಬದುಕಿನೂದ್ದಕ್ಕೂ ಸರಳತೆ ಜೀವನಸಾಗಿಸಿದ ಸಾಧಕ. ಕಡು ಬಡತನದ ನಡುವೆಯೂ ಬದುಕನ್ನು ತಮ್ಮ ಇಷ್ಟದಂತೆ ಕಟ್ಟಿಕೊಂಡು ಬೆಳೆದಕರುಣಾಮೂರ್ತಿ ಡಾ.ಎಚ್.ನರಸಿಂಹಯ್ಯನವರು. ದಟ್ಟ ದಾರಿದ್ರ್ಯದ ಮಧ್ಯೆಯೂ ತನ್ನಲ್ಲಿ ಅಂತರ್ಗತವಾಗಿದ್ದ ಪ್ರತಿಭೆಯ ಮೂಲಕ ವ್ಯಕ್ತಿಯೋರ್ವ ಎಂಥ ಎತ್ತರಕ್ಕೆ ಬೆಳೆದು ನಿಲ್ಲಬಹುದೆನ್ನುವುದನ್ನು ಜಾಗತಿಕ ಪ್ರಪಂಚಕ್ಕೆ ತೋರಿಸಿಕೊಟ್ಟ ಮಾಹಾಪುರುಷ.ಹಾಗಾಗಿಶಿಸ್ತು ಮತ್ತು ಸರಳತೆಗೆ ಎಚ್ಚೆನ್ ರವರು ಹೆಚ್ಚು ಆದ್ಯತೆ ನೀಡಿದವರು.ಜೊತೆಗೆ ಕರ್ನಾಟಕದ ಮೂಡಲಸೀಮೆಯ ಹುಡುಗನೊಬ್ಬ ಅಮೆರಿಕ್ಕೆ ಹೋದರೂ ಉಪ್ಪಿಟ್ಟು ತಿನ್ನುವ, ಗಾಂಧಿಟೊಪ್ಪಿಯನ್ನೇ ತೊಡುವ ಮೂಲಕ ಭಾರತದ ಹಿರಿಮೆಯನ್ನು ಕಾಪಾಡಿಕೊಂಡು ಬಂದ ಶಿಕ್ಷಣಪ್ರೇಮಿ ಎನ್ನುವುದು ನಾವ್ಯಾರು ಮರೆಯುವಂತಿಲ್ಲ.ಸರಳತೆ, ಪ್ರಾಮಾಣಿಕತೆ, ಸಮಾಜಿಕ ಚಿಂತನೆ, ಪರಿಶುದ್ಧತೆಯನ್ನು ತಮ್ಮ ಬಾಳಿನುದ್ದಕ್ಕೂ ಒಂದು ವ್ರತದಂತೆ ಕಾಯ್ದುಕೊಂಡು ಬಂದ ಎಚ್ಚೆನ್‍ರ ಬದುಕು ಇಂದಿನ ಸಮಾಜಕ್ಕೆ ಆದರ್ಶ ಮತ್ತು ಮಾರ್ಗದರ್ಶನ ಎಂಬುವುದರಲ್ಲಿ ಎರಡು ಮಾತಿಲ್ಲ ಬಂಧುಗಳೆ. ಡಾ.ಎಚ್ ಎನ್ ರವರ ಸರಳತೆ:ಡಾ.ಎಚ್ ಎನ್ ರವರ ಬದುಕಿನಲ್ಲಿ ಅವರು ಕಂಡ ನೋವು, ಸಂಕಟ, ಅನುಭವಿಸಿದ ಬಡತನ, ತಂದೆಯ ಸಾವು, ಓದಿಗಾಗಿ ಊರೂರು ಅಲೆದದ್ದು, ಬರಿಗಾಲಿನಲ್ಲಿ ನಡೆದುಕೊಂಡೆ ಬೆಂಗಳೂರು ತಲುಪಿದ್ದು, ಬದುಕಿಗೊಂದು ಹೊಸ ತಿರುವು ನೀಡಿದ ನ್ಯಾಷನಲ್ ಹೈಸ್ಕೂಲು, ಉಚಿತ ಪ್ರಸಾದ ನಿಲಯದಲ್ಲಿ ಪ್ರವೇಶ ಪಡೆಯಲು ಮಾಡಿದ ಹೋರಾಟ, ಬರೀ ನೀರು ಕುಡಿದೇ ದಿನಗಳನ್ನು ನೂಕಿದ್ದು, ಫೇಲಾದರೆ ಮತ್ತೆ ಮರಳಿ ಊರಿಗೆ ಹೋಗಬೇಕಲ್ಲ ಎನ್ನುವ ಭೀತಿಯಿಂದ ಓದಿದ್ದು, ಪ್ರತಿ ತರಗತಿಯಲ್ಲೂ ಪಟ್ಟಣದ ಹುಡುಗರಿಗೆ ಸ್ಪರ್ಧೆ ಒಡಿದ್ದು ಹೀಗೆ ಹತ್ತು ಹಲವು ಸಂಗತಿಗಳು ಅವರ ಸರಳತೆಗೆ ಸಾಕ್ಷಿಯಾಗಿದೆ. ಅವರು ಬಾಲ್ಯದಲ್ಲಿ ಅನುಭವಿಸಿದ ಕಡು ಬಡತನ ಮತ್ತು ವಿದ್ಯಾಭ್ಯಾಸಕ್ಕಾಗಿ ಮಾಡಿದ ಹೋರಾಟ ನಂತರದ ಪ್ರಾಮಾಣಿಕ ಸರಳತೆಯ ಬದುಕಿಗೆ ಗಟ್ಟಿ ಅಡಿಪಾಯ ಒದಗಿಸಿತು ಎನ್ನುವುದು ಸುಳ್ಳಲ್ಲ.ನಂತರದ ಭಾಗ ಶಿಕ್ಷಕರಾಗಿ ಎಚ್.ನರಸಿಂಹಯ್ಯನವರು ಮಾಡಿದ ಸಾಧನೆಗಳು ಅದ್ಭುತ. ತಮ್ಮ ಇಡೀ ಬದುಕನ್ನು ಶಿಕ್ಷಕ ವೃತ್ತಿಗಾಗಿ ಮುಡಿಪಾಗಿಟ್ಟ ನರಸಿಂಹಯ್ಯನವರ ಸರಳ ಬದುಕು ಇಂದಿನ ಜನರಿಗೆ ಪ್ರೇರಣೆ ನೀಡುತ್ತದೆ. ಅಮೇರಿಕಾದಂಥ ಆಕರ್ಷಕ ರಾಷ್ಟ್ರದಲ್ಲಿ ಅಧ್ಯಯನ ಮಾಡಿಯೂ ತಾಯ್ನಾಡಿನಲ್ಲಿ ಸೇವೆ ಸಲ್ಲಿಸಬೇಕೆನ್ನುವ ಅವರ ಹಂಬಲ, ವಿದ್ಯೆ ಕೊಟ್ಟು ಬದುಕು ರೂಪಿಸಿದ ನ್ಯಾಷನಲ್ ಶಿಕ್ಷಣ ಸಂಸ್ಥೆಯಲ್ಲೆ ಕೆಲಸ ಮಾಡಬೇಕೆನ್ನುವ ಅವರ ತುಡಿತ, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತಿಯ ನಂತರ ನ್ಯಾಷನಲ್ ಕಾಲೇಜಿಗೆ ಮರಳಿ ಬಂದ ಅವರ ಸರಳತೆಯ ನಿಷ್ಠೆ, ದೊಡ್ಡ ಹುದ್ಧೆಯಲ್ಲಿದ್ದೂ ವಿದ್ಯಾರ್ಥಿಗಳ ವಸತಿ ಗೃಹದ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದ ಅವರ ಸರಳತೆ, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿದ್ದು, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಸೇವೆಗಳು, ಪವಾಡಗಳ ದುರುಪಯೋಗವನ್ನು ವಿರೋಧಿಸಿದ ಅವರ ವೈಚಾರಿಕ ಕ್ರಾಂತಿ, ತಮ್ಮ ಅಂತ್ಯಕ್ರಿಯೆಯನ್ನು ಅತ್ಯಂತ ಸರಳವಾಗಿ ಮಾಡಬೇಕೆಂದು ಅವರು ಬರೆದಿಟ್ಟ ಉಯಿಲು ಹೀಗೆ ಅನೇಕ ಸಂಗತಿಗಳ ಮೂಲಕ ಎಚ್ಚೆನ್ ಅವರ ಅಗಾಧ ಸರಳ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ ಎನ್ನಬಹುದು. ಅತ್ಯಂತ ಪ್ರಜ್ಞಾಪೂರ್ವಕವಾಗಿ ಅವರು ರೂಢಿಸಿಕೊಂಡಿದ್ದ ಸರಳ ಬದುಕು ಎಚ್ಚೆನ್ ಯವರು ಇಂದಿನ ಆಧುನಿಕ ಸಮಾಜಕ್ಕೆ ಇಷ್ಟವಾಗಲು ಮುಖ್ಯಕಾರಣವಾಗುತ್ತದೆ. ಸರಳತೆಗೆ ಇನ್ನೊಂದು ಹೆಸರೇ ಎಚ್.ನರಸಿಂಹಯ್ಯನವರು ಎನ್ನುವಂತೆ ಅವರು ಬದುಕಿ ಬಾಳಿದರು. ಧರಿಸುವ ಬಟ್ಟೆ, ಸೇವಿಸುವ ಆಹಾರ, ವಾಸಿಸುವ ಕೋಣೆ ಹೀಗೆ ಪ್ರತಿಯೊಂದು ಅವರ ಸರಳ ಬದುಕಿಗೆ ಸಾಕ್ಷಿಯಾಗಿದ್ದವು. ಸರಳತೆಗೂ ಮತ್ತು ಅವರ ಬದುಕಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯನ್ನು ಅಲಂಕರಿಸಿದಾಗಲೂ ಅವರು ತಮ್ಮ ವೇಶ ಭೂಷಣಗಳಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ. ಒಂದು ಹಂತದಲ್ಲಿ ಅಂಥದ್ದೊಂದು ಒತ್ತಡ ಬಂದಾಗ ಹುದ್ದೆಯನ್ನು ತ್ಯಜಿಸಲು ಮುಂದಾದರೆ ವಿನಹ ಸರಳತೆಯನ್ನು ಬಿಟ್ಟುಕೊಡಲು ಸ್ವಲ್ಪವೂ ಯೋಚಿಸಲಿಲ್ಲ. ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯೋರ್ವ ತನ್ನ ಬದುಕಿನುದ್ದಕ್ಕೂ ವಿದ್ಯಾರ್ಥಿಗಳ ವಸತಿ ನಿಲಯದ ಸಣ್ಣ ಕೋಣೆಯಲ್ಲಿ ವಾಸವಾಗಿದ್ದರೆನ್ನುವುದು ಕಲ್ಪನೆಗೂ ನಿಲುಕದ ಸಂಗತಿ. ಆ ಕೋಣೆಯಲ್ಲಾದರೂ ಏನಿತ್ತು ಮಲಗಲು ಒಂದೆರಡು ಹಾಸಿಗೆಗಳು, ಬರೆಯಲು ಸಣ್ಣ ಮೇಜು, ಅತಿಥಿಗಳಿಗಾಗಿ ಕೂಡಲು ಎರಡು ಕುರ್ಚಿಗಳು. ವಿಲಾಸಿ ಜೀವನವನ್ನು ನಡೆಸುತ್ತ ಸರಳತೆಯನ್ನು ಕೇವಲ ಉಪದೇಶವಾಗಿಟ್ಟುಕೊಂಡವರಿಗೆ ಎಚ್ಚೆನ್ ಅವರ ಸರಳ ಬದುಕು ಒಂದು ನೀತಿ ಪಾಠವಾಗುತ್ತದೆ. ಡಾ.ಎಚ್ ಎನ್ ರವರ ಸಮಾಜಿಕ ಚಿಂತನೆ :ಏನನ್ನೂ ಪ್ರಶ್ನಿಸದೇಒಪ್ಪದಿರು ಎಂದು ಘಂಟಾ ಘೋಷವಾಗಿ ಹೇಳುತ್ತಿದ್ದರು ಹಾಗೆ ಮಾತನಾಡುತ್ತಿದ್ದರು ವಿಚಾರವಾದಿ,ಸಮಾಜಿಕ ಚಿಂತನೆಯ ಹರಿಕಾರ ಶಿಕ್ಷಣ ತಜ್ಞ ಎಚ್‌. ನರಸಿಂಹಯ್ಯನವರು. ವೈಜ್ಞಾನಿಕ ಮನೋಧರ್ಮ, ಜೀವಪರತೆ, ಜಾತ್ಯತೀತತೆ ಸಮಾಜಸೇವೆಯಂತಹ ಅನೇಕ ಸಮಾಜಿಕ ಸೇವೆಗಳನ್ನು ಈ ನಾಡಿಗಾಗಿ ಮಾಡಿದ್ದಾರೆ.ನಿಖರತೆ, ನಿಷ್ಠುರತೆಯಿಂದ ವೈಚಾರಿಕತೆಯ ಸಮಾಜಿಕ ಚಿಂತನೆಗಳನ್ನು ಈ ಸಮಾಜದಲ್ಲಿ ಬಿತ್ತಿರುವುದು ಇವರ ಬಹುದೊಡ್ಡ ಗುಣ.ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಕ್ರಾಂತಿ ಕಾರಿ ಸಮಾಜಿಕ ಚಿಂತನೆಗಳಿಗೆ ಆದ್ಯತೆ ನೀಡಿದ್ದಾರೆ. ಇದರ ಜೊತೆಗೆ ಇವರಿಗೆ ವಿಜ್ಞಾನದಲ್ಲಿ ಅಚಲವಾದ ನಂಬಿಕೆ ಇತ್ತು. ಶೂನ್ಯದಿಂದ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ ಮೌಢ್ಯದ ವಿರುದ್ಧ ಸತತ ಹೋರಾಟ ಅಗತ್ಯ. ಜನರ ಅಜ್ಞಾನವನ್ನು ಬಂಡವಾಳವನ್ನಾಗಿಸಿಕೊಂಡು ಶೋಷಣೆ ಮಾಡುವವರ ವಿರುದ್ಧ ಹೋರಾಟ ಮಾತ್ರವಲ್ಲ ಅಂಥವರ ಪೊಳ್ಳುತನವನ್ನು ಬಯಲಿಗೆಳೆಯಬೇಕು ಹಾಗೂ ಅವರ ಹಿಡಿತದಿಂದ ಮುಗ್ಧ ಜನತೆಯನ್ನು ರಕ್ಷಿಸಬೇಕೆಂದು ಯಾವಾಗಲೂ ಹೇಳುತ್ತಿದ್ದರು. ಅಂದರಂತೆ ಚಾಚೂ ತಪ್ಪದೇ ನಡೆದುಕೊಂಡು ಹೋಗಿದ್ದಾರೆ. ಸ್ವಾತಂತ್ಯ್ರ ಹೋರಾಟಗಾರ ಎಚ್. ನರಸಿಂಹಯ್ಯ ಅವರು ನಂಬಿದ ತತ್ವಕ್ಕಾಗಿ ಕುಲಪತಿ ಹುದ್ದೆಯನ್ನೇ ಬಿಟ್ಟು ನ್ಯಾಷನಲ್ ಕಾಲೇಜಿಗೆ ಹಿಂದಿರುಗಿದ ಧೀರೋದಾತ್ತ ವ್ಯಕ್ತಿತ್ವ ಹೊಂದಿದ್ದವರು. ತಮ್ಮ ಬದುಕಿನಲ್ಲಿ ನ್ಯಾಯವಾದ ಆಯ್ಕೆಯ ಪ್ರಶ್ನೆ ಎದುರಾದಾಗಲೂ ಅಂಜದೆ ಅಳುಕದೆ ಸ್ಪಷ್ಟ ದಾರಿಯಲ್ಲಿ ನಡೆಯಬಲ್ಲ ದೃಢವಾದ ಮನಸ್ಸು ಅವರಿಗಿತ್ತು. ಅವರು ದೇವರ ಇರುವಿಕೆಯ ಬಗೆಗೆ ನಂಬಿಕೆ ಕಳೆದುಕೊಂಡಿರಲಿಲ್ಲ. ಆದರೆ ಸಾಂಸ್ಥಿಕವಾಗಿರುವ ಧರ್ಮ, ಜಾತಿಗಳ ಬಗೆಗೆ ಅವರಿಗೆ ಸಂದೇಹವಿತ್ತು. ಜಾತಿ, ಧರ್ಮಗಳು ಬದುಕನ್ನು ಸ್ಥಗಿತಗೊಳಿಸುತ್ತಿವೆಯೆಂಬ ನೋವು ಅವರಲ್ಲಿ ಕಾಣುತ್ತಿತ್ತು.ಹಾಗೂ ಜಾತೀಯತೆ ಇದ್ದ ಕಡೆ ಧರ್ಮವಿಲ್ಲ. ಪೂಜಾರಿಯಿದ್ದ ಕಡೆ ದೇವರಿಲ್ಲ, ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಧರ್ಮವು ನಿಂತ ನೀರಾಗಿದ್ದರೆ, ವಿಜ್ಞಾನ ಹರಿಯುವ ನದಿ ಎಂದು ತಿಳಿದಿದ್ದರು. ಮೂಢನಂಬಿಕೆ, ಕಂಧಾಚಾರ, ಬೃಷ್ಟಚಾರ ಹಾಗೂ ನೈತಿಕ ವಲ್ಲದ ವಿಚಾರಗಳಿಗೆ ಎಂದು ಅವರು ಆಸ್ವದ ಕೊಡಲಿಲ್ಲ. ಸ್ವತಃ ಗಾಂಧಿವಾದಿಯಾಗಿದ್ದ ಅವರು ಸಮಾಜಿಕ ವಿಚಾರವಾದಕ್ಕೆ ಅಡ್ಡಿಯಾಗುವುದಿದ್ದರೆ, ಗಾಂಧೀಜಿಯವರ ಸಿದ್ದಾಂತ್ ವನ್ನು ಬದಿಗೆ ಸರಿಸಿ ಮುನ್ನಡೆಯುವ ಬದ್ಧತೆ ತೋರಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.ನಮ್ಮ ತಿಳುವಳಿಕೆಯಲ್ಲಿ ಎಷ್ಟೆ ಕಂದರಗಳಿದ್ದರೂ, ವಿಜ್ಞಾನಕ್ಕೆ ತನ್ನದೆ ಆದ ಮಿತಿಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವಲ್ಲಿ ವಿಜ್ಞಾನದ ವಿಧಾನಗಳೇ ಹೆಚ್ಚು ಸಮರ್ಪಕ. ಯಾವುದೇ ಹೇಳಿಕೆ ಅಥವಾ ಸೂಕ್ತಿಯನ್ನು ಒಪ್ಪಿಕೊಳ್ಳವುದು ಸರಿಯಲ್ಲ. ಸಾಧ್ಯವಾದಷ್ಟರಮಟ್ಟಿಗೆ ಅವುಗಳನ್ನು ಪ್ರಯೋಗಗಳ ಮೂಲಕ ಪರಿಕ್ಷೀಸಬೇಕು. ಎಲ್ಲ ಪರಿಶೀಲನ ಮಾರ್ಗಗಳಲ್ಲೂ ವಿಚಾರವು ಅಡಿಪಾಯವಾಗಬೇಕು ಎಂದು ತಿಳುವಳಿಕ ನೀಡುತ್ತಿದರು. ವಿಶ್ವವಿದ್ಯಾಲಯಗಳು ಉನ್ನತ ಧ್ಯೇಯಗಳನ್ನು ಹೊಂದಿ ಮನುಷ್ಯನ ಪ್ರಗತಿಯಲ್ಲಿ ಮುನ್ನುಗ್ಗಬೇಕು. ಅವು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಜನಗಳಿಗೆ ಹಾಗೂ ದೇಶಕ್ಕೆ ಒಳ್ಳೆಯದನ್ನು ಮಾಡಿದಂತೆ ಆಗುತ್ತದೆಂದು ಎಚ್ಎನ್ ರವರು ಯಾವಾಗಲೂ ಹೇಳುತ್ತಿದ್ದರು .1980 ರಿಂದ 1986 ರವರಿಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ( ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ) ನಾಮಕರಣ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.ಹೀಗೆ ವಿವಿಧ ಹಂತಗಳಲ್ಲಿ ಸಮಾಜಿಕ ಚಿಂತನೆಯನ್ನು ಜನಸಾಮಾನ್ಯರ ಜೀವನದಲ್ಲಿ ಬಿತ್ತುವ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಾ ,ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಡಾ.ಎಚ್ ಎನ್ ರವರಿಗೆ ಸಂಧಪ್ರಶಸ್ತಿ/ಗೌರವಗಳು:ಅವರ ಸರಳತೇಯ ಹೋರಾಟ, ಸಮಾಜಿಕ ಚಿಂತನೆಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1968),ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ನೀಡಿದ ತಾಮ್ರಪತ್ರ ಪ್ರಶಸ್ತಿ (1973), ಭಾರತ ಸರ್ಕಾರದಪದ್ಮಭೂಷಣ ಪ್ರಶಸ್ತಿ (1984),ಕಲ್ಬುರ್ಗಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ(1988), ದೇವರಾಜ ಅರಸು ಪ್ರಶಸ್ತಿ (1994) ಗಳು ದೊರೆಕಿವೆ. ಮತ್ತುಫೆಲೋಗಳಾಗಿರುವ ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` ( Committee for Scientific Investigation of the claims of the Paranomal) ಸಂಸ್ಥೆಯು ಭಾರತದ ಏಕೈಕ ಫೆಲೋ ಎಂಬ ಗೌರವಕ್ಕೆ ಎಚ್ ಎನ್ ರವರು ಪಾತ್ರರಾಗಿದ್ದಾರೆ. 2004ರ ದಸರಾ ಮಹೋತ್ಸವದ ಉದ್ಘಾಟನೆ ಮಾಡುವ ಹಿರಿಮೆಗೆ ಭಾಜನರಾಗಿದ್ದಾರೆ . ಹೀಗೆ ಹತ್ತು ಹಲವು ಪ್ರಶಸ್ತಿ, ಗೌರವ, ಸನ್ಮಾನಗಳು ಸಂಧಿವೆ. ಕೊನೆಯ ಮಾತು: ಎಚ್ಚೆನ್ ರವರ ನಿರ್ಮಲ ವ್ಯಕ್ತಿತ್ವ ಅದ್ಭುತ ಗುಣಗಳ ಒಂದು ಗಣಿ. ಕುಗ್ರಾಮವೊಂದರ ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿ ಬಂದ ಹಳ್ಳಿಯ ಹುಡುಗನೊಬ್ಬ ನಿರಂತರವಾದ ಸರಳತೆಯ,ಸಮಾಜಿಕ ಚಿಂತನೆಯ ಶ್ರಮದಿಂದ ಜೊತೆಗೆ ಅಚಲವಾದ ವಿಶ್ವಾಸದಿಂದ, ತನ್ನ ವೈಚಾರಿಕ ಮನೋಭಾವದಿಂದ ಅತ್ಯಂತ ಪ್ರತಿಭಾವಂತನಾಗಿ ಬೆಳೆದು ನಿಂತು ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಅಪ್ರತಿಮ ಸಾಧನೆ ನಮ್ಮಗೆಲ್ಲರಿಗೂ ಬೆರಗು ಹುಟ್ಟಿಸುತ್ತದೆ. ಜೊತೆಗೆ ಅವರ ಸರಳತೆಯ ಬದುಕು ಅನೇಕರಿಗೆ ಸ್ಪೂರ್ತಿಯ ಸೆಲೆಯಾಗುತ್ತದೆ. ಮನುಷ್ಯ ಹೇಗೆ ಬದುಕಬೇಕೆನ್ನುವುದಕ್ಕೆ ಎಚ್ಚೆನ್ ಸದಾಕಾಲ ಮಾದರಿಯಾಗಿ ನಿಲ್ಲುತ್ತಾರೆ. ಎಚ್ಚೆನ್ ನಮಗೆಲ್ಲ ಇಷ್ಟವಾಗಲು ಅನೇಕ ಸಂಗತಿಗಳು ಕಾರಣವಾಗುತ್ತವೆ. ಅವರ ಸರಳ ಜೀವನ ಶೈಲಿ, ಅನನ್ಯ ರಾಷ್ಟ್ರ ಪ್ರೇಮ, ಬದುಕು ರೂಪಿಸಿದ ಶಿಕ್ಷಣ ಸಂಸ್ಥೆಯ ಮೇಲಿನ ನಿಷ್ಠೆ, ಕಡು ಬಡತನದ ಬದುಕಿನೊಂದಿಗಿನ ಹೋರಾಟ, ಅವರಲ್ಲಿನ ಅಚಲವಾದ ಆತ್ಮವಿಶ್ವಾಸ, ವೈಚಾರಿಕ ಮನೋಭಾವ, ಬದುಕಿನ ಒಂದು ಭಾಗ ಎನ್ನುವಂತೆ ಬೆಳೆಸಿಕೊಂಡು ಬಂದ ನಿಷ್ಟೂರತೆ ಹೀಗೆ ಅನೇಕ ಕಾರಣಗಳಿಂದ ನರಸಿಂಹಯ್ಯನವರ ವ್ಯಕ್ತಿತ್ವ ನಮಗೆ ಆಪ್ತವಾಗುತ್ತದೆ.ಹಳ್ಳಿಯಿಂದ ಬಂದ ಅನಾಥ ಬಾಲಕ ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರವೇಶ ಪಡೆದು ತನ್ನ ಸ್ವಂತ ಪರಿಶ್ರಮದಿಂದ ಆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆರಿದ್ದು ಅವರ ಬದುಕಿನ ಮಹತ್ವದ ಸಾಧನೆಗಳಲ್ಲೊಂದು. ವಿಶ್ವವಿದ್ಯಾಲಯದ ಉಪಕುಲಪತಿ, ಮೇಲ್ಮನೆಯ ಶಾಸಕ ಸ್ಥಾನ, ಕನ್ನಡ ಪ್ರಾಧಿಕಾರದ ಅಧ್ಯಕ್ಷತೆ, ಪದ್ಮಭೂಷಣ ಪ್ರಶಸ್ತಿ, ಗೌರವ ಡಾಕ್ಟರೇಟ್ ಈ ಎಲ್ಲವು ಎಚ್ಚೆನ್ ಅವರ ಪ್ರತಿಭೆಗೆ ಸಂದ ಗೌರವಗಳು. ಯಾವುದನ್ನೂ ಅವರು ಅಪೇಕ್ಷಿಸಿದವರಲ್ಲ. ಯಾವ ಪ್ರಶಸ್ತಿ, ಗೌರವಗಳ ಹಿಂದೆ ಬಿದ್ದವರಲ್ಲ. ಒಂದು ಪ್ರಶಸ್ತಿ, ಉನ್ನತ ಹುದ್ದೆ ದೊರೆತಾಗಲೂ ಅವರದು ನಿರ್ವಿಕಾರ ಭಾವ. ತನ್ನದು ಎನ್ನುವ ಒಂದು ಕೌಟಂಬಿಕ ಚೌಕಟ್ಟನ್ನೂ ಕಟ್ಟಿ ಕೊಳ್ಳದ ವ್ಯಕ್ತಿಗೆ ಅನೇಕ ಸ್ಥಾನ ಮಾನಗಳು ಹುಡುಕಿಕೊಂಡು ಬಂದವು. ಪ್ರತಿಭೆ, ನಿರಂತರ ಪರಿಶ್ರಮ, ಪ್ರಾಮಾಣಿಕತೆ ಈ ಗುಣಗಳಿಂದ ಮನುಷ್ಯನೋರ್ವನ ಜೀವನದಲ್ಲಿ ಏನೆಲ್ಲ ಪವಾಡಗಳಾಗಬಹುದೆನ್ನುವುದಕ್ಕೆ ಎಚ್.ನರಸಿಂಹಯ್ಯನವರ ಸರಳತೆ ಬದುಕು, ಸಮಾಜಿಕ ಚಿಂತನೆಗಳು ಸಾಕ್ಷಿ ಹಾಗೂ ನಮಗೆಲ್ಲರಿಗೂ ಪ್ರೇರಣೆಯಾಗಿವೆ. ಸಂಗಮೇಶ ಎನ್ ಜವಾದಿ,

ಇತರೆ Read Post »

ಕಾವ್ಯಯಾನ

ಕಾವ್ಯಯಾನ

ಒಂದು ವೈರಸ್ ಮುಂದಿಟ್ಟು ಕೊಂಡು ನಾಗರಾಜ ಹರಪನಹಳ್ಳಿ ಅಬ್ಬಾ ಮೊನ್ನೆ ಸ್ವಾತಂತ್ರ್ಯ ಆಚರಸಿದೆವುಅದೆಷ್ಟು ಬಿಗಿ, ಅದೆಷ್ಟು ಭಯಗಳನ್ನಿಟ್ಟುಕೊಂಡುಎಲ್ಲಿಯ ಗಾಂಧೀ, ಎಲ್ಲಿಯ ಬ್ರಿಟಿಷರು, ಎಲ್ಲಿಯ ಸುಭಾಷ್ ಚಂದ್ರ …ಯಾರ ಹಂಗು ಇರಲಿಲ್ಲಒಂದು ವೈರಸ್ ಕಾರಣವಾಗಿ ನಗುವಿಲ್ಲ ಮೊಗವಿಲ್ಲ, ಮಕ್ಕಳಿಲ್ಲ, ಘೋಷಣೆಯಿಲ್ಲ, ಪೋಷಣೆಯಿಲ್ಲಎಲ್ಲವೂ ಕಳೆದುಕೊಂಡ ಭೂಮಿಮಕ್ಕಳನು ಕಳೆದು ಕೊಂಡ ತಾಯಿಏನೂ ಉಸಿರೆತ್ತುವಂತಿಲ್ಲವೈರಸ್ ಕಾರಣವಾಗಿ ಏನಿತ್ತು ಅಲ್ಲಿ , ಭಯ ಬಿಟ್ಟುಮುಖ ಗುರುತು ಸಿಗದಂತೆ ಹಾಕಿದ ಬಾಯಿಪಟ್ಟಿಉಸಿರೆತ್ತದಂತೆ ಕಾಡಿದ ವೈರಸ್ಕಾರಣವಾಗಿ ಹೌದು, ಈಗೀಗ ಎಲ್ಲೆಲ್ಲೂ ಫತ್ವಾಗಳ ಹೊರಡಿಸುವುದೇ ಆಗಿದೆ;ಮನುಷ್ಯನಿಂದ ಮನುಷ್ಯನ ಇಬ್ಬಾಗವಾದರೂಕಸಿದ ಸ್ವಾತಂತ್ರ್ಯ ಪಕ್ಕದಲ್ಲಿ ಇದ್ದವಗೆ ಗೊತ್ತಾಗದಂತೆ ಕಸಿದರೂಮಾತಾಡುವಂತಿಲ್ಲವೈರಸ್ ಕಾರಣವಾಗಿ ಭೂಮಿಯನ್ನು ಮಾತೆ ಎನ್ನುತ್ತಲೇ , ಎದೆಯ ಮೇಲೆ ಕಾಲಿಟ್ಟು ತುಳಿದವರುಅವಳ ಕಾಲಿಗೆ ಕಾಲಬಂಧಿ ಹಾಕಿದರೂ ; ಮಾತಾಡುವಂತಿಲ್ಲಕಾಣದ ವೈರಸ್ ಕಾರಣವಾಗಿ ಸ್ವಾತಂತ್ರ್ಯದ ದಿನ ಸ್ವಾತಂತ್ರ್ಯ ಕಳೆದುಕೊಂಡವರು ,ಕಸಿದುಕೊಂಡವರು, ಇನ್ನೂ ಏನೇನೋ ಬಸಿದುಕೊಂಡವರುಮಾತಾಡುವಂತಿಲ್ಲವೈರಸ್ ಕಾರಣವಾಗಿ ಕಾಣದ ಕೇಳದಕಂಡೂ ಕಾಣದ ವೈರಸ್ ಕೊಲ್ಲಲು ಹಾಗೂಜನರ ಬದುಕಿಸಲು ಕವಿದಾರಿಯಿಲ್ಲದ , ಚಾವಿಯಿಲ್ಲದಮನೆ ಮನದಲ್ಲಿ ಅವಿತಿರುವ ಔಷಧಿ ಹುಡುಕಲು ಹೋಗಿದ್ದಾನೆ ಕವಿ ದೇಶಾಂತರ ಅಲೆದಾಟಕೆ ************************

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಅಕ್ಷತಾ ಕೃಷ್ಣಮೂರ್ತಿ. ನಿನ್ನ ಮುಂಗೈ ಮೇಲೆ ನನ್ನ ಹೆಸರು ಹೇಗೆ ಬರೆಯಲಿ ನೀನೇ ಹೇಳುನಿನ್ನ ಗಲ್ಲ ಕುಕ್ಕುವ ಮುಂಗುರುಳು ಹೇಗೆ ಮುಟ್ಟಲಿ ನೀನೇ ಹೇಳು. ಆ ಒಂದು ದಿನದ ಸವಿ ನೆನಪು ಕಣ್ಣ ತುಂಬ ಹಾಗೆಯೇ ಉಳಿದಿದೆನಿನ್ನ ಕನಸಿನ ಬಾಗಿಲು ತೆರೆದೆ ಇದೆ ಹೇಗೆ ಮುಚ್ಚಲಿ ನೀನೇ ಹೇಳು. ಮನದ ಅಂಗಳದಲ್ಲಿ ನಿನ್ನ ಹೆಸರಿನ ರಂಗೋಲಿ ಹೂ ನಗುವಿನಂತೆನಿನ್ನ ಮೌನ ಧ್ಯಾನ ಇನ್ನು ಇದೆ ಹೇಗೆ ಎಬ್ಬಿಸಲಿ ನೀನೇ ಹೇಳು. ನೆರಳಿನೊಳಗಿನ ನೆರವಾಗಬೇಕು ನೆನಪಲಿ ನಾನು ನೀನು ಕೈ ಕೈ ಹಿಡಿದುನಿನ್ನ ನಗುವಿನೊಳಗೆ ಇನ್ನೂ ಸಲುಗೆ ಇದೆ ಹೇಗೆ ಮರೆಯಲಿ ನೀನೇ ಹೇಳು. ಉದುರಿದ ಎಲೆಯೊಂದು ನಗುತ ಸ್ವರ್ಗ ಸುಖ ಅನುಭವಿಸುತ್ತಿದೆ ಎನ್ನ ಮುಂದೆನಿನ್ನ ನೆನಪಿನೊಳಗೆ ನೆನಪಾಗದೇ “ಅಕ್ಷತಾ” ಹೇಗೆ ಇರಲಿ ನೀನೇ ಹೇಳು. **********************

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಅವನು.. ಸುಜಾತ ಲಕ್ಷ್ಮೀಪುರ. ಅವನು ಸುಳಿಯುತ್ತಿಲ್ಲ.ಈ ನೀರವ ಸಂಜೆಯಲಿ..ಬರೀ ಮಂಕು ಮಗ್ಗುಲಾಗುತ್ತಿದೆಕತ್ತಲಾವರಿಸಿ ಆಗಸವೂ ಬಿಕ್ಕುತ್ತಿದೆ . ಚಿಕ್ಕಿ ಚಂದ್ರಮರೂ ನಾಪತ್ತೆಪಯಣ ಬೆಳೆಸಿರಬೇಕುಅವನ ಊರಿನ ಕಡೆಗೇ..ಕಿಟಕಿಯಾಚೆ‌ ಮಳೆಮೋಡವೂಕಣ್ಣಂಚಲಿ‌ ತೊಟ್ಟಿಕ್ಕಲುಹವಣಿಸುತಿದೆ ಅರೆಗಳಿಗೆ ಅತ್ತುಬಿಡಲು ಅವಸರಿಸಿವೆ ನಯನಗಳುತಂಗಾಳಿಯೂ ತಂಪೀಯದೆಸುಟ್ಟು ಬೂದಿಯೂ ಆಗಿಸದೆಕಿಡಿ ತಾಗಿಸಿ ಮರೆಯಲಿ ಇಣುಕಿದೆ. ನಿಟ್ಟುಸಿರ ಮೈದಡವಿಮುದ್ದು ಮಾತುಗಳಲಿ ಒಲಿಸಿಜೇನು ಸುರಿಸುವ ಕಣ್ಣಂಚಿನ ಪಿಸುಮಾತೂ ಕಾಣೆಯಾಗಿದೆ ಬರಿದೆ ಹಂಬಲಿಕೆ‌ ಚಡಪಡಿಕೆಮುಗಿಯದಾ ಕಾಲದ ಸಂಚುಸುಕ್ಕಾಗುತ್ತಿದೆ ನಿರೀಕ್ಷೆ.ಅವನು ಸುಳಿಯುತ್ತಿಲ್ಲಾ..ಬೆಳಗು ಬೈಗು ನೆನಪಿನ ಗಾಯಒಳಗೊಳಗೇ ಹಸಿರಾಡುತ್ತಿದೆ. ಬೇಸರದಿ ಆಸರೆಗೆಕತ್ತಲಲ್ಲಿ ಕೈಚಾಚಿದ್ದೇನೆಏಕಾಂತವೆಲ್ಲಾ‌ ಲೋಕಾಂತಆಗಿಸುವ ಬಯಕೆ ಅವನುಮಾಯವಾಗಿದ್ದಾನೆ *****************************

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಶೂರ್ಪನಖಾಯಣ ಮಲಯಾಳಂ ಮೂಲ:ರವೀಂದ್ರನ್ ಪಾಡಿ ಕನ್ನಡಕ್ಕೆ:ಚೇತನಾ ಕುಂಬ್ಳೆ ರಾತ್ರಿ ಕಂಡ ಕನಸಿನಲ್ಲಿನನ್ನ ಮುಂದಿದ್ದಳು ಶೂರ್ಪನಖಿಎಲ್ಲಿಯೂ ಸೀತೆಯನ್ನು ಕಾಣಲಿಲ್ಲಬಳಿಯಲ್ಲಿ ರಾಮನೂ ಇರಲಿಲ್ಲ ಹಲವು ದಿನಗಳಿಂದ ಆಲೋಚನೆಗಳಲ್ಲಿರಾಮ ರಾವಣ ಯುದ್ಧವೇ ತುಂಬಿತ್ತುಯಾರ ಪಕ್ಷ ಸೇರಲಿ?ಮಾನ್ಯರಲ್ಲ ಇಬ್ಬರೂ ಸೀತೆಯೊಂದಿಗೆ ನಿಂತುರಾಮನನ್ನು ದೂಷಿಸಬಹುದೇ?ವಾಲಿಯನ್ನು ವಧಿಸದೆರಾಮನ ವಿರುದ್ಧ ನಿಲ್ಲಬಹುದು ತಾಟಕಿ, ಶಂಬೂಕರುನಮ್ಮ ಪಕ್ಷ ಸೇರುವರುರಾವಣನನುಜ ವಿಭೀಷಣನನ್ನು ಅಂಕೆಯಲ್ಲಿರಿಸಬಹುದು ಹನುಮಂತನನ್ನು ಸೋಲಿಸಲುವಾಲಿಯೊಬ್ಬನೇ ಸಾಕಲ್ಲವೇಪ್ರಜೆಗಳು ಹೇಗಾದರೂ ಇರಲಿಅಮ್ಮನಿಗೆ ಕೈಯೆತ್ತುವರು ಅವರ ಮಾತನಾಲಿಸಿನಾಡಿನಲ್ಲಿ ಬದುಕಲು ಸಾಧ್ಯವೇ?ಗಾಳಿಸುದ್ದಿಯನ್ನೇ ಹಬ್ಬಿಸುವರೆಲ್ಲರೂಬೇರೇನೂ ಕೆಲಸವಿಲ್ಲವಲ್ಲ ವಾಲ್ಮೀಕಿ ಬರೆಯಲಿಅವರು ಕವಿಯಲ್ಲವೇಕವಿತೆಗಳೆಲ್ಲವೂ ಕಥೆಗಳಲ್ಲಕಥೆಗಳೆಲ್ಲವೂ ನಿಜವಲ್ಲ ರಾಮನಿಗೆ ಸೀತೆ ಏನಾಗಬೇಕೆಂದುಚಿಂತಿಸುತ್ತಲೇಜನರು ಸಮಯ ವ್ಯಯಿಸುತ್ತಾರೆಕಾಡುಗಳಲ್ಲಿ ಮತ್ತೆ ಹೂಗಳರಳುತ್ತವೆ ಬಂದುಬಿಡು ಪ್ರಾಣಸಖಿಶೂರ್ಪನಖೀ ನನ್ನೊಲವೇಲಕ್ಷ್ಮಣ ಹೋಗಲಿ ಬಿಡುನಾನಿದ್ದೇನೆ ನಿನಗೆ ****************************

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಸಾಹಿತ್ಯದ ಒಳಸುಳಿಗಳ ಜೊತೆ ಒಂದು ಸುತ್ತು!! ಸುಜಾತಾ ಲಕ್ಮನೆ ಅರೆಚಣವೂಅತ್ತಿತ್ತ ಅಲುಗದೇಮಗ್ಗುಲಲ್ಲೇ ಕೂತು ಕಚಗುಳಿಯಿಟ್ಟು ನಗಿಸುವಮನದನ್ನೆಯಂತೆ ಇದು –“ಸಾಮಾಜಿಕ ಜಾಲತಾಣ” !ನಾವೂ ನೀವೂ ಎಲ್ಲರೂ ಜಾಲಿಯಾಗಿ ಜಾಲಾಡಿಈಜಾಡುವ ಸುಂದರ ತಾಣ!ಮೆರೆಸಬಹುದಿಲ್ಲಿಸ್ವ-ಪ್ರತಿಷ್ಠೆ, ಸ್ವ-ಪ್ರಶಂಸೆ, ಬೊಗಳೆ ಒಂದಷ್ಟು, ವೈಯಕ್ತಿಕ ಬಿನ್ನಾಣ..!ಅಷ್ಟಷ್ಟು ಸಾಧನೆ ಸನ್ಮಾನಗಳ ಲಿಸ್ಟಿನ ಅನಾವರಣ!ಹಾಗೋ ಹೀಗೋ ಗೀಚಿ, ಬೀಗಿ,, ಎದೆ ಸೆಟೆಸಿಮೈ ಮನ ಮ(ಮೆ)ರೆಯಲು ಇದೊಂದು ಚಂದದ ನಿಲ್ದಾಣ!ಬರೆದದು ಜೊಳ್ಳೋ, ಸುಳ್ಳೋ, ಕಾವ್ಯವೋ, ವಾಚ್ಯವೋ,ನಿಯಮಬದ್ಧ ಗಜ಼ಲ್ಲೋ, ಅಪಭ್ರಂಶವೋ,ಸ್ವಂತವೋ, ಸಂಗತವೋ, ಅನೂಹ್ಯವೋಒಟ್ಟಾರೆ–ದೊಪ್ಪೆಂದು ರಾಶಿ ರಾಶಿ ಸುರುವಿಸಾಕಷ್ಟು ಲೈಕ್ ಗಿಟ್ಟಿಸಿದರೆಅಲ್ಲಿಗೆ ಸಾರ್ಥಕ್ಯ ಆ ದಿನ!!“ನೀನು ನನಗೆ ಲೈಕ್ ಕೊಡು, ನಾನೂ ಕೊಡುವೆ”“ಮತ್ತೆ ನೋಡು- ವಿರುದ್ಧ ಕಮೆಂಟ್ ಮಾಡಬೇಡ” ಒಳ ಒಪ್ಪಂದ!!ತರಾತುರಿಯಲಿ ಅಂತೂ ಗೀಚಿಹೊಗಳಿಕೆಗಷ್ಟೇ ಹಾತೊರೆದುಕಸದ ತೊಪ್ಪೆಯಂತೆ ಎಲ್ಲ ತಂದು ಸುರಿದಂತೆಲ್ಲಕೆಲವಕ್ಕೆ ಲೈಕುಗಳ ಜಡಿಮಳೆ;ಇನ್ನು ಕೆಲವಕ್ಕೆ ಜಡಿದು ಜಡಿದಂತೆ ಕೊನೆಯ ಮೊಳೆ!!ಹೆಂಗಸರು ಹೆತ್ತ ಕವನಗಳಲ್ಲಿ ಮೈ ಕಾಯಿಸಿಕೊಳ್ಳುವಜೊಲ್ಲುಬುರುಕ ಪುರುಷ ಸಿಂಹಗಳು!ಇವರು ಫ್ರೀಯಾಗಿ ಕೊಡುವ ಗುಲಾಬಿ ಗುಚ್ಛ,ತುಟಿಯಂಚಲೊತ್ತಿದ ಮುತ್ತು;ಕಣ್ಣಲ್ಲೆರಡು ಲವ್ ಸಿಂಬಾಲ್ಗಳ ಇಮೋಜಿಗಳಲಿ ಕಣ್ಣರಳಿಸಿಚಪ್ಪರಿಸಿ ಬವಳಿ ಬಂದು ಕಳೆದುಹೋಗುತ್ತಾರೆಕವಯಿತ್ರಿ ಲಲನಾ ಮಣಿಗಳು!! ಕೊಂಡಾಟ ಅಟ್ಟಕ್ಕೇರಿದಂತೆಲ್ಲಾಜಿರಲೆ ಮೀಸೆಯ ಕೆಳಗಿನ ತನ್ನ ತುಟಿಗಳ ಮೇಲೆ ನಗು ತೇಲಿಸಿತನ್ನೊಳಗೇ ಖುಷಿ ಪಟ್ಟು ಬೀಗುವವನಿಗೆತಾನು ಬರೆದುದೇ ಪರಮ ಶ್ರೇಷ್ಠವೆಂಬ ಭಾವ!!ತಪ್ಪು ಒಪ್ಪುಗಳ ಪರಾಮರ್ಶೆಯ ಉಸಾಬರಿಯೇ ಸಲ್ಲದೆಂದುಆಗಸಕೆ ಮುಖ ಮಾಡಿದ ಹೆಬ್ಬೆರಳ ಚಿತ್ರ ಒತ್ತಿ ಓದುಗಜೈ ಕಾರ ಹಾಕುತ್ತಾನೆ ನೋಡ!!“ಕೇಳಿ ಕೇಳಿ” ಲೈಕ್ ಒತ್ತಿಸಿಕೊಳ್ಳುವವರ ಪರಿಪಾಟಲಂತೂ“ಅಯ್ಯೋ ಪಾಪ” ಏನಕ್ಕೂ ಬೇಡ!! ಇಲ್ಲಿ ಮಣಗಟ್ಟಲೆ ಪ್ರಶಂಸೆಗಳ ಹೊಳೆ;ನಾಲ್ಕಾರು ಡಜನ್ ದ್ವೇಷ, ಅರ್ಧ ಕೆಜಿ ಹತಾಶೆ,ಟನ್ ಗಟ್ಟಲೆ ಹೆಸರು ಮಾಡುವ ಹಪಹಪಿ;ಗ್ರಾಂಗಟ್ಟಲೆ ಕೆಸರೆರಚಾಟ,ತಮಾಷೆಯೋಪಾದಿಯಲಿ ಎದೆಗೇ ಒದೆದಂತಿರುವ ತೇಜೋವಧೆ!ಚೂರು ಪಾರು ಒಳಗೊಳಗೇ ಗುಂಪುಗಾರಿಕೆಮೀಟರ್ ಗಟ್ಟಲೆ ಸಣ್ಣತನಗಳುಲೀಟರ್ ಗಟ್ಟಲೆ ಒಳಸುಳಿಗಳು!!ಮೂಲೆ ಮೂಲೆಯಿಂದ ಹಿನ್ನೆಲೆಯಲಿ ಪಿಸುಗುಡುವ ಕಿಸುರುಮನಸಿನ ಒಳಧ್ವನಿಗಳು!!ಸಂಕಲನ ತಂದವರದೇ ಒಂದು ಪಟಾಲಂತರದೇ ಇರುವವರು ಅಕಟಕಟಾ ಅಕ್ಷರಶಃ ಅಸ್ಪೃಶ್ಯರು!!ಪ್ರಶಸ್ತಿ, ಫಲಕ, ಹಾರ ತುರಾಯಿ, ಲೋಕಾರ್ಪಣೆಯಾದ ಪುಸ್ತಕಗಳ ಲೆಕ್ಕ!ಕ್ವಾಲಿಟಿಗಿಂತ ಕ್ವಾಂಟಿಟಿಗೇ ಪ್ರಾಶಸ್ತ್ಯ!!ಪ್ರಬುದ್ಧ ನೂರು ಗಜಲ್-ಕವನ ಬರೆದವನಿಗಿಂತ ಹಾಳೋ ಮೂಳೋಸಾವಿರ ಸಾವಿರ ಬರೆದವನೇ “ಅಂತೆ” ಗ್ರೇಟು!!ಹಾಗಂತ ಸಾಹಿತ್ಯದ ಪಡಸಾಲೆಯಲಿ ನೇತುಹಾಕುವ ನೇಮ್ ಪ್ಲೇಟು!!ಆಸ್ತಿ, ಅಂತಸ್ತುಗಳ ಪಟ್ಟಿಯೂ ಅಕ್ಕ ಪಕ್ಕ!!ಸಾರಸ್ವತ ಲೋಕದ ತುಂಬ ಬರಿ ರೇಷ್ಮೆ ಶಾಲು ಹೊದ್ದ ಟೊಳ್ಳುಬರಹಗಳ ಸದ್ದು!!ಮುತ್ತು ರತ್ನದಂಥ ಸಾಹಿತ್ಯವೆಲ್ಲ ಮೂಲೆ ಸೇರಿದವೇ ಬೇಸರದಲಿ ಎದ್ದು ಬಿದ್ದು!?ಕೈ ಚೀಲ ಹಿಡಿದು ಹಲ್ಗಿಂಜಬೇಕುವೇದಿಕೆಯ ಮೇಲೂ ರಾರಾಜಿಸಲು!!“ಅಕ್ಷರ ಮಾಧ್ಯಮಗಳಲೂ” ಇಂಥದಕ್ಕೇ ಕುಮ್ಮಕ್ಕುಗೆಲ್ಲಬೇಕೇ- ಮಾಡಲೇಬೇಕು ಅಲ್ಲಿಯೂ ಗಿಮಿಕ್ಕು!! ಎಷ್ಟು ಬರೆದರೇನು ಬಿಡಿ-ಈಗ ಮಾಮರದಲ್ಲಿ ಕೋಗಿಲೆಗಳು ಕೂಗುವುದಿಲ್ಲ!!ಕಾಣಿಸದೇ…ಬೋಳು ಮರಕೆ ಜೋತು ಬೀಳುವ ಬಾವಲಿಗಳೇಮೆರೆಯುತಿವೆಯಲ್ಲ!? ***********************************

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಕನ್ನಡದ ಇಲಿ ವಸುಂಧರಾ ಕದಲೂರು ಅಮ್ಮನ ಕೈ ಹಿಡಿದು ಹಾಲಿನ ಬೂತಿನ ಬಳಿ ನಿಂತಿದ್ದ ಕಿಶೋರನಿಗೆ ಪಕ್ಕದ ಮೋರಿಯಿಂದ ಏನೋ ಚಲಿಸುತ್ತಿರುವುದು ಕಂಡಿತು.          ಅಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದವನೇ ಪುನಃ ಆ ಕಡೆಗೇ ನೋಡತೊಡಗಿದ. ಪುಳುಪುಳನೆ ಪುಳಕ್ಕೆಂದು ಬಿಲದಿಂದ ಹೊರಬಂದ ಇಲಿಯೊಂದು ಕಸದ ಡಬ್ಬದ  ಹೊರಗೆ ಚೆಲ್ಲಿದ್ದ ಹಾಲಿನ ಕವರ್ ಅನ್ನು ಸ್ವಲ್ಪ ಎಳೆಯಿತು.       ಬರೀ ಟಾಮ್ ಅಂಡ್ ಜರ್ರಿ ಕಾರ್ಟೂನಿನಲ್ಲಿ ಇಲಿ ನೋಡಿ ಗೊತ್ತಿದ್ದ ಕಿಶೋರ ನಿಜವಾದ ಇಲಿ ನೋಡಿ ಪುಳಕಿತನಾಗಿ ಬಿಟ್ಟ. ‘ಮಮ್ಮೀ ಸೀ… ದೇರ್ ಇಸ್ ಅ ‍ರ‍್ಯಾಟ್…!’ ಜೋರಾಗಿ ಕೈ ಜಗ್ಗಿದ.      ಕೋವಿಡ್ ನ ಸಲುವಾಗಿ ಮುಂದಿನ ವಾರ ಪೂರ  ಲಾಕ್ ಡೌನ್ ಎಂದು ಅನೌನ್ಸ್ ಮಾಡಿದ್ದರಿಂದ ಗಡಿಬಿಡಿಯಿಂದ ಮನೆಗೆ ಅಗತ್ಯದ ಸಾಮಾನು – ಸರಂಜಾಮು, ಸೊಪ್ಪು-  ತರಕಾರಿ, ಬೇಳೆ, ಮಾತ್ರೆ ಇತ್ಯಾದಿ ಇತ್ಯಾದಿ ಕೊಳ್ಳುತ್ತಾ ಗಡಿಬಿಡಿಯಿಂದ ಕೆಲಸ ಮಾಡಿಕೊಂಡಿದ್ದ ಕಿಶೋರನ ಅಮ್ಮ ಸುನಂದಾ ಹಾಲಿನ ಬೂತಿನ ಉದ್ದ ಕ್ಯೂ ನಲ್ಲಿ ನಿಂತಿದ್ದರೂ ‘ಮತ್ತೇನು ಬೇಕಿದೆ?’ ಎಂದು ಒಂದೇ ಸಮನೆ ಮನಸ್ಸಿನಲ್ಲೇ ಪ್ರಶ್ನಮ ಕೇಳಿಕೊಳ್ಳುತ್ತಿದ್ದಳು.      ಕಿಶೋರ ಕೈ ಜಗ್ಗುತ್ತಿದ್ದಂತೇ, ವಾಸ್ತವಕ್ಕೆ ಬಂದವಳೇ ‘ಏನ್ ಪುಟ್ಟಾ?’ ಎಂದು ಮಗನ ಮುಖ ನೋಡಿದಳು.      ‘ ಮಮ್ಮಾ ದೇರ್ ಇಸ್ ಅ ‍‍‍ರ‍್ಯಾಟ್! ಇಟ್ ವಾಸ್ ಸೋ ಕ್ಯೂಟ್…. !’ ಎಂದು ತಾನು ಕಂಡದ್ದು ಎಷ್ಟು ಕ್ಯೂಟ್ ಎನ್ನುವ ವಿಚಾರವನ್ನು ಕಣ್ಣಿನಲ್ಲೇ ಬಿಂಬಿಸುತ್ತಾ ಅಷ್ಟೇ ಮೋಹಕವಾದ ಉದ್ವೇಗದಿಂದ ಹೇಳಿದನು.       ಸುನಂದಾ, ‘ಎಲ್ಲಿ ಕಂಡೆ? ನನಗೂ ತೋರ್ಸು’ ಮಗನ ಉತ್ಸಾಹಕ್ಕೆ ತನ್ನ ಬೆರಗನ್ನೂ ಸೇರಿಸುತ್ತಾ ಕೇಳಿದಳು.         ‘ದೇರ್, ದೇರ್, ಇನ್ ಸೈಡ್ ದ ಹೋಲ್ ಮಮ್ಮಾ…! ವೇಯ್ಟ್ ಇಟ್ ವಿಲ್ ಕಮ್ಸ್ ಔಟ್..’ ಎಂದು ಕಸದ ಬುಟ್ಟಿಯ ಪಕ್ಕದಲ್ಲಿದ ಮೋರಿಯ ಬಳಿಯಿದ್ದ ಸಣ್ಣ ಬಿಲದತ್ತ ಕೈ ತೋರಿದ.     ಅಷ್ಟರಲ್ಲಿ ಆ ಇಲಿ ಪುನಃ ತನ್ನ ಪುಟ್ಟ ಚೂಪು ಮುಖ ಹೊರ ಮಾಡಿ ಒಂದೆರಡು ಕ್ಷಣ ಅವಲೋಕಿಸಿ ಬುಳಕ್ಕನೆ ಒಳ ಹೋಗಿ ಪುಳಕ್ಕನೆ ಹೊರಬಂದು ಯಾರೋ ಮುಕ್ಕಾಲುವಾಸಿ ತಿಂದು ಎಸೆದು ಹೋಗಿದ್ದ ಬಿಸ್ಕೆಟ್ಟಿನ ತುಂಡನ್ನು ಕಚ್ಚಿಕೊಂಡು ಬಿಲ ಸೇರಿತು. ಅದರತ್ತಲೇ ಕೈ ತೋರುತ್ತಾ.., ‘ಸೋ ಫಾಸ್ಟ್ , ಸೋ ಕ್ವಿಕ್…!!  ಹೌ ಕೆನ್ ಇಟ್ ಮೂವ್ಸ್  ಸೋ ಫಾಸ್ಟ್ ಮಮ್ಮಾ..?’ ಎಂದು ತಡೆರಹಿತನಾಗಿ ಕೇಳಿದನು.                   ಕಿಶೋರನ ಪ್ರಶ್ನೆಗಳಿಗೆ ಸುನಂದಾ ಉತ್ತರಿಸಲು ತೊಡಗಬೇಕು ಎನ್ನುವಾಗಲೇ ಅಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಬಣ್ಣದಲ್ಲಿ ಬರೆದ ಖಾಲಿ ಬಾಕ್ಸಿನಲ್ಲಿ ನಿಲ್ಲುವ ಸರದಿ ಅವಳಿಗೆ ಬಂದಿತು.         ಮಗುವಿನ ಕೈ ಹಿಡಿದು ಬಾಕ್ಸಿನೊಳಗೆ ಬಂದು ನಿಂತ ಸುನಂದಾ, ಗಲ್ಲದ ಮೇಲೆ ಜಾರಿದ್ದ ಮಗನ ಮಾಸ್ಕನ್ನು ಆತನ ಮೂಗು- ಬಾಯಿಯನ್ನು ಮುಚ್ಚುವಂತೆ ಸರಿಪಡಿಸಿದಳು.     ‘ಕಿಶೋರ್,  ನೀನು ಕೇಳೋ ಪ್ರಶ್ನೆಗೆಲ್ಲಾ ಉತ್ತರ ಹೇಳ್ತೀನಿ. ಆದ್ರೆ ನೀನು ಕನ್ನಡದಲ್ಲಿ ಮಾತನಾಡ್ಬೇಕು ಆಯ್ತಾ?’ ಎನ್ನುತ್ತಾ ‘ರ‍್ಯಾಟ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ ಹೇಳು’ ಎಂದಳು.     ‘ವಾಟ್ ಇಸ್ ರ‍್ಯಾಟ್ ಇನ್ ಕನ್ನಡ?!’ ಯೋಚನೆಯಲ್ಲಿ ಮಗ್ನನಾಗಿದ್ದ ಕಿಶೋರನು ‘ಪ್ಲೀಸ್ ಯೂಸ್ ದ ಸ್ಯಾನಿಟೈಸರ್ ಬಿಫೋರ್ ಎಂಟರಿಂಗ್ ದ ಶಾಪ್ ಮ್ಯಾಡಂ’ ಎಂದು ಹೇಳಿದ ಅಂಗಡಿಯವನ ಮಾತು ಕೇಳಿ ‘ರ‍್ಯಾಟ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ?’ ಅನ್ನೋದನ್ನು ಮರೆತು ಅಮ್ಮನನ್ನು ನೋಡಿದ.               **********

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ನದಿ ಈಗ ದಿಕ್ಕು ಬದಲಿಸಿದೆ ಸ್ಮಿತಾ ಅಮೃತರಾಜ್.ಸಂಪಾಜೆ. ಜುಳು ಜುಳೆಂದು ಹರಿಯುವನನ್ನೂರಿನ ತಿಳಿನೀರಿನ ನದಿಈಗ ಕೆನ್ನೀರ ಕಡಲು. ತಪ್ಪನ್ನೆಲ್ಲಾ ಒಪ್ಪಿಕೊಂಡಂತೆತೆಪ್ಪಗೆ ಹರಿಯುತ್ತಿದ್ದ ನದಿ.. ಒಣಗಿದೆದೆಯ ಮೇಲೆ ಮೊಗೆದುತಣಿಯುವಷ್ಟು ತೇವವನ್ನುನಮಗಾಗಿಯೇ ಕಾಪಿಡುತ್ತಿದ್ದ ನದಿ.. ಅಂಗಳದ ತುದಿಯವರೆಗೂ ಬಂದುಗಲಗಲಿಸಿ ನಕ್ಕು ನೇವರಿಸಿ ಹರಿಯುತ್ತಿದ್ದ ನದಿ.. ಹೌದು! ಇದುವೇ ನದಿಮೊನ್ನೆ ಹುಚ್ಚೆದ್ದು ಕೆರಳಿದ್ದಕ್ಕೆನೆಲದ ಎದೆಯೊಡೆದು ಸೆಲೆ ಸಿಡಿದುಸಾವಿರ ನದಿಯಾಗಿ ಒಸರಿ ಹರಿದವುರಕ್ತ ಕಣ್ಣೀರ ಕೋಡಿ. ದಿಕ್ಕಾಗಿದ್ದ ನದಿ ತಾನೇದಿಕ್ಕು ಬದಲಿಸಿ ಕೆಂಪಗೆ ಹರಿಯುವಾಗನಾನೋ ದಿಕ್ಕು ಕಾಣದೆ ದಿಕ್ಕೆಟ್ಟುನದಿ ಹರಿಯುವ ದಿಕ್ಕಿಗೆ ಮುಖ ಮಾಡುವುದನಿಲ್ಲಿಸಿದ್ದೇನೆ. ಈಗ ನದಿ ತಿಳಿಯಾಗಿದೆಮುಖ ನೋಡಿಕೊಳ್ಳಬಹುದು ಎನ್ನುತ್ತಾರೆಮುಖವಾಡ ಹಾಕಲು ನದಿಗೂ ಸಾಧ್ಯವಾ..?ನನಗೆ ದಿಗಿಲಾಗುತ್ತಿದೆ. ************************************

ಕಾವ್ಯಯಾನ Read Post »

ಇತರೆ

ನನ್ನಿಷ್ಟದ ಕವಿತೆ

ನನ್ನಿಷ್ಟದ ಕವಿತೆ ಮೀನಕಣ್ಣಿನ ಸೀರೆ ಲಲಿತಾ ಸಿದ್ಧಬಸವಯ್ಯಾ.               –  ಮೀನಕಣ್ಣಿನ ಸೀರೆ ಈ ಅಪರೂಪ ಸುಂದರಿಗೆ ಸೀರೆಯ ಬಗ್ಗೆ ಎಂಥ ಮುತುವರ್ಜಿ ಎಷ್ಟೇ ಆಗಲಿ ರಾಜಕುಮಾರಿ ಅವಳು ಒಮ್ಮೆ ಹಾಗೆ ಸುತ್ತಿಕೊಂಡು ಮೈಕಾಂತಿಗೆ ಸೋಕಿಸಿ ಬಿಸಾಡಿದ ಹೊಚ್ಚ ಹೊಸ ಸೀರೆಗಳನ್ನೇ ಉಟ್ಟು ಬೆಳೆದ ನೂರಾರು ದಾಸಿಯರ ನಡುವೆ ಒಡ್ಡೋಲಗ ನಡೆಸಿದವಳು ಸ್ವಯಂವರಕ್ಕೆ ಬರುವ ಮೊದಲು ಸೀರೆಗಳ ಆಯ್ದಾದು ಅದುಬೇಡಇದುಬೇಡ ಬೇಡದ ಗುಪ್ಪೆಗಳ ಬೆಟ್ಟವೇತಯಾರು ಕೊನೆಗೆ ಹತ್ತುಮಗ್ಗಗಳ ನಿಂತನಿಲುವಲ್ಲೇ ಹೂಡಿಸಿ ಅವಳ ಕಣ್ಣೆದುರಲ್ಲೇ ಅಂಚು ಸೆರಗುಗಳ ಸಂಯೋಜಿಸಿ ರಾತ್ರೋರಾತ್ರಿ ನೆಯ್ಯಿಸಿದ ಮೀನು ಕಿವುರಿಗಿಂತಲೂ ನವುರಾದ ರೇಸಿಮೆಗೆ ಮೀನ ಕಣ್ಣಂತಕುಸುರಿ ಕೆಲಸ ಉಟ್ಟು ಬಂದಳೋ ಬಂದಳೋ ಇಡೀ ಗಂಡಸಕುಲವೇ ತಿರುಗಿ ನೋಡುವಂತೆ ನಿಂದಳೋ ನಿಂದಳೋ ನಡುಬಳಕನ್ನು ಗತ್ತಲ್ಲೇ ಸ್ಥಿರಗೊಳಿಸಿ ಏಕಾಗ್ನಿಯಂತೆ ಅಂದೇ ತೀರ್ಮಾನಿಸಿಬಿಟ್ಟ ಅವನು ಇಂಥವಳನ್ನಾಳುವದು ನನ್ನಯೋಗ್ಯತೆಗೆ ಮೀರಿದ್ದು ಏನಿದ್ದರೂ ಕಾಲುಗಳ ಬಳಿ ಕುಳಿತು ಬೇಡಬಹುದಷ್ಟೇ ಅವಳಪ್ಪಣೆಯ ಅವಳೊಳು ಹೋಗಲು ಅಷ್ಟಕ್ಕೂ ಆಸ್ಪದದಕ್ಕಲಿಲ್ಲ ಅವನಿಗೆ, ಬೇಡಹೋಗಲಿ ವೀರಾಧಿ ವೀರಅವರಣ್ಣನಿಗೂ ಪಿಶಾಚನೀಚನ ನೈಚ್ಯಾನುಸಂಧಾನ ಕೊನೆಗೂ ಆಸೆ ತೀರಿಸಿಕೊಂಡಿದ್ದು ಸಭೆಯಲ್ಲಿ ಸೆರಗೆಳೆದು *********************** ಕವಿತೆಯ ಶೀರ್ಷಿಕೆಯೇ ಮೊದಲ ಸೆಳೆತ,ಲವ್ ಅಟ್ ಫಸ್ಟ ಸೈಟ್‌ಅನ್ನೋ ಹಾಗೆ. ಬಹುತೇಕಎಲ್ಲ ಹೆಣ್ಣುಮಕ್ಕಳ ಸಹಜಗುಣವೋ ಏನೋ “ಸೀರೆ”ಎಂದಾಕ್ಷಣ ಕಿವಿನಿಮಿರುವುದು,ಕಣ್ಣರಳುವದು.ಕಪಾಟಿನ ತುಂಬ ಸೀರೆಗಳಿದ್ದರೂ ಅದೇನೋ ಮೋಹ ಹೊಸ ಟ್ರೆಂಡ್ ಸೀರೆ ಬಂತೆಂದರೆ ಈ ಥರದ್ದು ನನ್ನಹತ್ರಇಲ್ಲ ,ಈ ಬಣ್ಣಕ್ಕೆ ಆ  ಬಣ್ಣದಅಂಚಿನ ಕಾಂಬಿನೇಷನ್‌ ಚೆಂದವಿದೆಯೆಂದು ಮತ್ತೆ ಕೊಂಡುಕೊಳ್ಳುತ್ತೇವೆ. ಹೀಗೆ ಅಂದುಕೊಳ್ಳುವದರಲ್ಲಿ ತಪ್ಪೇನಿಲ್ಲ ಅನಾದಿಕಾಲದಿಂದ ಇದು ನಡೆದುಬಂದಿದೆಎನ್ನುತ್ತಾರೆ ಹಿರಿಯ ಸಾಹಿತಿ ಲಲಿತಾ ಸಿದ್ಧಬಸವಯ್ಯಾ.  ಸದ್ಯ ಸೀರೆ ಆಯ್ಕೆಯಲ್ಲಾದರೂ ಇಚ್ಛೆಯಂತೆ ಆರಿಸಿಕೊಳ್ಳಬಹುದು ! ಕವಯತ್ರಿ ಲಲಿತಾ ಸಿದ್ಧಬಸವಯ್ಯಾಅವರು ಮೀನಕಣ್ಣಿನ ಸೀರೆಯ ಮೂಲಕ ಅದ್ಭುತವಾಗಿ ಸ್ತಿç ಸಂವೇದನೆಯನ್ನು ಹಿಡಿದಿಟ್ಟಿದ್ದಾರೆ. ಮೀನ ಕಣ್ಣುಅನ್ನುವ ಶಬ್ದ ತುಂಬ ವಿಶೇಷವಾಗಿ ಅರ್ಥೈಸುತ್ತದೆ. ಜೀವಶಾಸ್ತ್ರೀಯವಾಗಿ ಮನುಷ್ಯನಿಗಿಂತಲೂ ಮೀನು ಕೆಳಮಟ್ಟದ ಪ್ರಾಣಿ, ವಿಸ್ಮಯವೇನೆಂದರೆ ಮೀನಿನ ಕಣ್ಣು ಮನುಷ್ಯನಷ್ಟೇಅಥವಾ ಮನುಷ್ಯನಿಗಿಂತ ಹೆಚ್ಚು ಬೆಳವಣಿಗೆ ಹೊಂದಿದೆಯೆನ್ನಬಹುದು. ಮೀನು ಸದಾ ನೀರಿನಲ್ಲಿರುವ ಪ್ರಾಣಿ. ನಿರಂತರವಾಗಿಅದಕ್ಕೆಆಪತ್ತುತಪ್ಪಿದ್ದಲ್ಲ. ಸುತ್ತಲಿರುವ ವೈರಿಗಳಿಂದ ತನ್ನನ್ನುತಾನು ಕಾಪಾಡಿಕೊಳ್ಳಬೇಕಾಗುವದು ಎಂಬ ಮುನ್ಸೂಚನೆಯ ಸಂಕೇತವೂ ಕವಯಿತ್ರಿಯ ಮನದಲ್ಲಿರಬಹುದು. ಮೀನ ಕಣ್ಣಿನರಚನೆ ಅಕ್ಷರಶಃ ದೂರದರ್ಶಕಅಂದರೆ  ಬೈನಾಕ್ಯುಲರ್‌ತರಹವೇಇದೆ. ಇನ್ನೂ ಒಂದು ಅಡಕವಾಗಿದೆ. ವೈಜ್ಞಾನಿಕ ಮೂಲಗಳ ಪ್ರಕಾರ ಮೀನಕಣ್ಣಿನ ರೆಟಿನಾ ಭಾಗಕ್ಕೆಏನಾದರೂ ಆಘಾತವಾದರೆ ಅದುತನ್ನಷ್ಟಕ್ಕೆತಾನೆ ಗಾಯವನ್ನು ಸರಿಪಡಿಸಿಕೊಳ್ಳುವ ತಂತ್ರೌಷಧಗುಣವಿದೆ. ಈ ಒಳಮರ್ಮವನ್ನು ಯೋಚಿಸಿಯೇ ನಮ್ಮ ಕವಿಯಿತ್ರಿ  ಮೀನಕಣ್ಣನ್ನೇರೂಪಕವಾಗಿ ಬಳಸಿಕೊಂಡಿದ್ದಾರೆ ಎಂದೆಣಿಸಬಹುದು.             ಮುಂದೆಕವನದ ಸಾಲುಗಳನ್ನು ಓದುತ್ತಾ,ಕವಯತ್ರಿಇಲ್ಲಿ ಉಪಯೋಗಿಸಿದ ಕೆಲವು ಶಬ್ದಗಳು ನಮ್ಮನ್ನುಆಕರ್ಷಿಸುತ್ತವೆ ಅವುಗಳೆಂದರೆ ಮುತುವರ್ಜಿ,ಒಡ್ಡೋಲಗ,ಏಕಾಗ್ನಿ….. ಮುಂತಾದವು. ಭೂಲೋಕದಅಪ್ರತಿಮ ಸುಂದರಿಯಂದೇ ಕರೆಯಲ್ಪಡುತ್ತಿದ್ದ ದ್ರೌಪದಿಯ ಸ್ವಯಂವರದ ಪೂರ್ವಸಿದ್ಧತೆಯನ್ನು ಅತ್ಯಂತ ಸೊಗಸಾಗಿ ಹಾಗೂ ರಾಜಕುಮಾರಿಯ ಅದೇ ಗತ್ತುಗಾಂಭೀರ‍್ಯ ಭಾಸವಾಗುವಂತೆ ಬಣ್ಣಿಸಿದ್ದಾರೆ.ಇಡೀ ಗಂಡಸುಕುಲವೇ ಮಾರುಹೋಗುವಂಥ ಸೃಷ್ಟಿಸೌಂದರ‍್ಯವೇ ಅವಳಲ್ಲಿತ್ತು ಎಂದು ಹೊಗಳುತ್ತಾ  ನಂತರದ ಸಾಲುಗಳಲ್ಲಿ ದುಶ್ಯಾಸನನ ಮನದ ಭಾವನೆಗಳೂ ಮಾತಾಡಿವೆ. ಸ್ವಯಂವರದಲ್ಲಿ ಇವಳ ರೂಪರಾಶಿಗೆ ಮನಸೋತ ದುಶ್ಯಾಸನ ತಾನು ದ್ರೌಪದಿಗೆ ತಕ್ಕವನಲ್ಲ, ಏನಿದ್ದರೂ ಅವಳ ಕಾಲಬಳಿಯೇ ತನ್ನಜಾಗಎನ್ನುತ್ತದೆ ಅವನ ಸ್ವಗತ. ಹೋಗಲಿ ತನ್ನಣ್ಣನಿಗೂ ದ್ರೌಪದಿ ದಕ್ಕುವದು ಅಸಾಧ್ಯವೆಂದೆನಿಸುತ್ತದೆ. ಮನದೊಳಗಣ ನೀಚ ತಮಸ್ಸು ಆ ಸೌಂದರ‍್ಯವನ್ನುಒಮ್ಮೆ ಮುಟ್ಟಬೇಕೆಂಬ ಉತ್ಕಟತೆಯೊಂದಿಗೆ ಉಳಿದುಬಿಟ್ಟಿರುತ್ತದೆ. ಹಾಗಾಗಿ ಕೊನೆಗೆ ಸಭೆಯಲ್ಲಿ ಸೆರಗಿಗೆ ಕೈಹಾಕುತ್ತಾನೆ ಎಂಬುದಾಗಿ ದುಶ್ಯಾಸನನ ಸ್ವಗತವನ್ನು ಚಿತ್ರಿಸಿದ್ದಾರೆ. ಇದಿಷ್ಟು ಕವಿತೆಯ ಹೊರಮೈಯೆಂದಾದರೆ …….. ಇನ್ನುಕವಿತೆಯಆಂತರ್ಯಕ್ಕೆಇಣುಕೋಣ,             ಇಲ್ಲಿದ್ರೌಪದಿ ಇಡೀ ಸ್ತಿçಸಂಕುಲವನ್ನೇ ಪ್ರತಿನಿಧಿಸುತ್ತಾಳೆ. ಸಾಮಾನ್ಯವಾಗಿ ಹೆಣ್ಣಿನ ಅಳಲು,ನೋವು,ತೊಳಲಾಟದ ಕುರಿತಾಗಿ ಬರೆದಿರುತ್ತಾರೆ,ಆದರೆಇಲ್ಲಿ ಹೆಣ್ಣಿನ ಆಯ್ಕೆ ಕುರಿತಾಗಿ ಮಾತನಾಡಿದ್ದಾರೆ. ಸೀರೆ ಆಯ್ದುಕೊಳ್ಳುವ ಸ್ವಾತಂತ್ರವನ್ನು ಸಂಭ್ರಮಿಸುತ್ತಿರುವ ಚಿತ್ರಣವಿದೆ. ಇದರಲ್ಲಿನ ಧ್ವನಿ ವಿಶೇಷವೆನಿಸುತ್ತದೆ. ಕವಯಿತ್ರಿಯ ವಿಭಿನ್ನ ವಿಚಾರಲಹರಿಯು ಈ ಕವಿತೆಗೆ ವಿಶಿಷ್ಟತೆಯನ್ನು ತಂದುಕೊಟ್ಟಿದೆ. ಮುಂದೆ ಸ್ವಯಂವರದಲ್ಲಿಯೂ ಈ ಹಕ್ಕು ಅವಳಿಗಿದೆಯೆಂದು ಸೂಚನೆ ಕಾಣುತ್ತದೆ.  ಮೀನಕಣ್ಣುಎಂದಿದ್ದಾರೆ,ನವಿಲು,ನರಿ.ಕುದುರೆಅಥವಾ ಹಕ್ಕಿ,ಹುಲಿಗಳಕಣ್ಣು ಎನ್ನಬಹುದಿತ್ತು ಎಂಬ ಪ್ರಶ್ನೆಕಾಡುತ್ತದೆ, ಅಂತೇಯೇ ಮೀನಕಣ್ಣಿನ ವೈಜ್ಞಾನಿಕ ಸಂರಚನೆಯ ಸತ್ಯಾಸತ್ಯತೆಯು ಅವಳ ಬದುಕಿನಂತೆ ಬೆರಗುಗೊಳಿಸುವಂಥದ್ದು.ಮೀನ ಕಿವಿರುಗಳಿಗಿಂತ ನವಿರಾದರೇಷಿಮೆ ಎಂದು ವರ್ಣಿಸುವಾಗ ಸುಕೋಮಲೆ ಮೃದುಭಾವದ ಹೆಣ್ಣು ಭವಿಷ್ಯದಲ್ಲಿಎದುರಾಗಲಿರುವ ಭೀಕರ ಕಠೋರಗಳನ್ನೂ ದಾಟಬಲ್ಲಳು. ದ್ರೌಪದಿಯು ಮುಂದೆ ನಡೆಯಲಿರುವಯುದ್ಧಕ್ಕೆ ಸನ್ನದ್ಧಳಾಗುವ ದೂರದೃಷ್ಟಿ ಹೊಂದಿದವಳಾಗಿದ್ದಳೆಂದು ಸೂಚ್ಯವಾಗಿ ಹೇಳುತ್ತಿದ್ದಾರೆ ಲೇಖಕಿ. ಹೆಜ್ಜೆ ಹೆಜ್ಜೆಗೂ ಅವಳು ಸಂಕಟವನ್ನುಭವಿಸಲಿದ್ದಾಳೆ,ಆದ್ದರಿಂದ ಅವಳು ಮೈಯಲ್ಲಾಕಣ್ಣಾಗಿರಬೇಕೆಂಬುದರಉದ್ದೇಶವೂ ಬಿಂಬಿತವಾಗುತ್ತದೆ, ಅರ್ಥಾಥ ಮೀನಕಣ್ಣು ಬಹಿರಂಗವಾಗಿ ಸೀರೆ ಮೇಲಿನ ಆಕೃತಿ ಮಾತ್ರವಲ್ಲ, ಸದಾ ಅಂತರಂಗದ ಒಳಗಣ್ಣು ತೆರೆದು ಸುತ್ತಲು ನಡೆಯುತ್ತಿರುವದನ್ನು ಬಹು ಎಚ್ಚರದಿಂದ ಗಮನಿಸಬೇಕೆಂಬ ಮುನ್ಸೂಚನೆ ನೀಡುತ್ತದೆ.ದುಶ್ಯಾಸನನಂತ ನೀಚರು ಮನೆಯ ಒಳಗೂ ಮನೆಯ ಹೊರಗೂಎಲ್ಲಿಯೂಇರಬಹುದು.ಅದಕ್ಕಾಗಿ ಹೆಣ್ಣು ಸದಾಕಾಲ ಜಾಗೃತರಾಗಿರಬೇಕೆಂಬ ಸಂದೇಶವನ್ನೂಕೂಡಾ ಸಾರುವದರಿಂದ ಈ ಕವಿತೆ ಇಂದಿಗೂ ಪ್ರಸ್ತುತವೆನಿಸುತ್ತದೆ. ************************* ವಿಭಾ ಪುರೋಹಿತ್

ನನ್ನಿಷ್ಟದ ಕವಿತೆ Read Post »

You cannot copy content of this page

Scroll to Top