ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ನದಿಯೊಳಗಿನ ಹರಿವು ಕನ್ನಡ ಮೂಲ: ಗೀತಾ ಡಿ.ಸಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಇರುತ್ತದೆನದಿತನ್ನಷ್ಟಕ್ಕೆತಾನೆಂಬಂತೆಸದಾ..ತನ್ನೊಳಗಿನಪಸೆಯಾರದಂತೆಬೆಚ್ಚಗಿನಒರತೆಬತ್ತದಂತೆತನ್ನಪಾತ್ರದರಿವುಹರಿವಿನಜೀವಂತಸೆಲೆಯನುಸಂಯಮದಿಕಾಯ್ದುಕೊಳ್ಳುತ್ತದೆದಿವ್ಯಮೌನದಧ್ಯಾನದಲಿಸದಾ..ಅಂದುಕೊಳ್ಳುತ್ತಾರೆಜನಇಲ್ಲಸಲ್ಲದ್ದನ್ನು..ಬತ್ತಿದಂತಿರುವನದಿಯಕಂಡುಮರುಕಪಡುತ್ತಾರೆ.ಕರುಣೆಯುಕ್ಕಿಸಿಲೊಚಗುಡುತ್ತಾರೆ.ಉಕ್ಕಿಹರಿವಂತೆಸುಖಾಸುಮ್ಮನೆಪ್ರಾರ್ಥಿಸುತ್ತಾರೆ!ಮೊರೆಯದುನದಿಮೊಳೆಯದುಬೀಜಅದರಷ್ಟಕ್ಕೆಅದು..ಇಲ್ಲ. ಇಲ್ಲ..ನದಿತಾನಾಗಿಯೇಎಂದೂಬತ್ತುವುದಿಲ್ಲ.ಕಾಯುತ್ತದೆಜೀವಚೈತನ್ಯದರಸವುಕ್ಕುವಗಳಿಗೆಗಳಿಗಾಗಿ..ಇದ್ದಕ್ಕಿದ್ದಂತೆಮೋಡಗಟ್ಟಿಹನಿಯುದುರಿದ್ದೇತಡಭೋರ್ಗರೆಯುತ್ತದೆ.ಸಂಭ್ರಮಿಸುತ್ತದೆಸೋಂಕುವಗಾಳಿಗೆರವಿಕಿರಣದತೆಕ್ಕೆಯೊಳಗಿನಬೆಚ್ಚಗಿನಭಾವಕ್ಕೆಮೊಳೆವಬೀಜದರಿವಿಗೆಉದುರಿದಹನಿಮಣ್ಣಿಗೆಬಿದ್ದಬೀಜಕಾಯ್ದಿಟ್ಟನೀರತೇವಮುಪ್ಪುರಿಗೊಂಡುಮೊಳೆವಜೀವತನ್ನೊಳಗೇಸಕಲವನುಕಾಯ್ದುಪೊರೆವಜೀವಜಲಧುಮ್ಮಿಕ್ಕಿಹರಿಯುತ್ತದೆ..ತಡೆಯಿಲ್ಲದೆಹರಿವರಭಸಕ್ಕೆಉರುಳುರುಳಿಕೊಚ್ಚಿಹೋಗುತ್ತವೆಪ್ರಾರ್ಥನೆಗೂಉಳಿಯದಗುಡಿಗೋಪುರಗಳು..ಉಕ್ಕುಕ್ಕಿಹರಿವನದಿ.. ಭಯ, ವಿಸ್ಮಯದನಡುವೆಯೂಆಡಿಕೊಳ್ಳುತ್ತಾರೆಅರಿವಿರದಜನ..ಸುಮ್ಮನಿರುತ್ತದೆನದಿತನ್ನಷ್ಟಕ್ಕೆತಾನೆಂಬಂತೆಜೀವಂತಹರಿಯುತ್ತಾತನ್ನೊಳಗನ್ನುಬೆಚ್ಚಗೆಕಾಯ್ದುಕೊಳ್ಳುತ್ತಾಸದಾ…————- The flow of the river River is beingAs it isBy itselfAlways.Never allows todry up its inner wetnessAnd warm wellspringWith patiencedefendsthyselfthe flow and lifespringIn the meditation of devine silenceAlwaysBut they thinkAbsurd…the people!By looking at itsDrynessFeel pityMurmer atwith mercyful sightPrays for itsQuick outflowNever the riverRoars..Never the seedSproutsas by themselfNo..no..River never everBecomes dry by itself.Awaits for themoments of delightfulLifespirits.When the cloudedMass comes togetherand starts to drizzle,It roars vigorously.Rejoices itself tothe blasts of windthe warm embrace ofSunraysconsciouness of germinating seedfallen waterdropssown seedsReserved dampnessComes togetherSprouts the life.Having all withinThe protective and caringThe lifespringOutflows vigorouslyRushing riverflows fastwithout pauserolls out, all temple domeswashawayeven the prayers chantscan’t save them Still they talkFoolishlyThese people…amid the fear and wonder!River keepsItself mumas it isalwaysKeeps itself alivePreserves its innerWarmthAnd flows alwaysby itself.******************************

ಅನುವಾದ ಸಂಗಾತಿ Read Post »

ಹೊಸ ದನಿ-ಹೊಸ ಬನಿ

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು 80ರ ದಶಕದ ಆಚೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಫಿಲಾಸಫಿಗಳ ಗುಂಗು ಶುರುವಾಯಿತು. ಇದ್ದಕ್ಕಿದ್ದ ಹಾಗೆ ರಜನೀಶ್, ಬುದ್ಧ, ಜಿಡ್ಡು ಕೃಷ್ಣಮೂರ್ತಿ, ಯೂಜಿ ಮುಂತಾದವರು ಪ್ರಚಾರಕ್ಕೆ ಬಂದರು. ಇವರೆಲ್ಲ ಹೇಳಿದ್ದನ್ನು ಕತೆಗಳಲ್ಲೂ ಕವನಗಳಲ್ಲೂ ಲೇಖನಗಳಲ್ಲೂ ತಂದು ಕೊನೆಗೆ ಆ ಹೆಸರುಗಳನ್ನು ಕೇಳಿದರೆ ಕಿರಿಕಿರಿಯಾಗುವಂತೆ ಮಾಡುವಲ್ಲಿ ನಮ್ಮ ಲೇಖಕರೂ ಸಾಹಿತಿಗಳೂ ಯಶಸ್ವಿಯಾದರು.ಈಗಲೂ ಕೆಲವರು ಲೋಹಿಯಾವಾದವನ್ನು ಮತ್ತೆ ಕೆಲವರು ಅಂಬೇಡ್ಕರರನ್ನೂ ಕೆಲವರು ಗಾಂಧಿಯನ್ನೂ ಹೀಗೇ ಬಳಸುತ್ತ, ಬೆದಕುತ್ತ ತಮ್ಮ ಬರವಣಿಗೆಗೆ ಬಳಸುತ್ತ ಆ ಅಂಥವರ ಹೆಸರನ್ನೇ ಮತ್ತೆ ಮತ್ತೆ ಹೇಳುತ್ತ ನಿಜಕ್ಕೂ ಬೆನ್ನೆಲುಬಾಗಿಟ್ಟುಕೊಳ್ಳಬೇಕಿದ್ದ ಆ ಹಿರೀಕರ ಆದರ್ಶಗಳು ಕನಸುಗಳೂ ಮರೆಯಾಗಿ ಕೇವಲ ಹೆಸರೇ ಮೆರೆಯತೊಡಗಿದ್ದನ್ನೂ ನಾವು ಬಲ್ಲೆವು. ಈ  ಇಂಥ ಕಾರಣಕ್ಕೇ  ಅಂಥ ಸಾಹಿತಿಗಳೂ ಅವರು ಬರೆದ ಸಾಹಿತ್ಯವೂ ಶಾಶ್ವತವಾಗಿ ನಿಲ್ಲಲಿಲ್ಲ. ಬರಿಯ ಸಿದ್ಧಾಂತಗಳನ್ನು ನಂಬಿದ ಸಾಹಿತ್ಯಕೃತಿಗಳು ಕಣ್ಮರೆಯಾಗುವುದು ಸಹಜ ಮತ್ತು ಸ್ವಾಭಾವಿಕ. ಇಂಥದೇ ಪ್ರಯೋಗಗಳು ನವೋದಯದ ಕಾಲದಲ್ಲೂ ನಡೆದದ್ದಕ್ಕೆ ಪುರಾವೆಗಳಿವೆ. ನವ್ಯದಲ್ಲಂತೂ ಪದ್ಯ ಎಂದರೆ ಪ್ರಾಸದ ಹಂಗಿಲ್ಲದ, ಅಲಂಕಾರದ ಕಷ್ಟ ಬೇಕಿಲ್ಲದ ಗದ್ಯದ ಗಟ್ಟಿ ಸಾಲು ಎಂಬ ಹುಂಬ ವ್ಯಾಖ್ಯೆಯನ್ನು ಯಾರೋ ಕೆಲವರು ಹೇಳಿದ್ದನ್ನೇ ನಂಬಿ ಗದ್ಯದ ಸಾಲನ್ನು ತುಂಡು ತುಂಡಾಗಿಸಿ ಬೇಕಾದಂತೆ ತಿರುಚಿದ ಉದಾಹರಣೆಗಳೂ ಇವೆ. ಈ ಇಂಥದೇ ಕಳೆಯನ್ನು ಬಂಡಾಯದ ಅದ್ಭುತ ಬೆಳೆಯಲ್ಲೂ, ದಲಿತ ಧ್ವನಿಯ ಸ್ಪಷ್ಟತೆಯ ನಡುವೆ ರೂಕ್ಷತೆಯನ್ನೂ ಕಂಡಿದ್ದೇವೆ. ಇದು ಕಾಲದಿಂದ ಕಾಲಕ್ಕೆ ಕವಿತೆಯ ರೀತಿ ಬದಲಾಗುವುದರ ಮತ್ತು ಕಾವ್ಯದ ರಸಗ್ರಹಣದ ಸ್ವರೂಪದ ಬದಲಾವಣೆ. ಸದ್ಯದ ಕಾವ್ಯದ ಹರಿಯುವಿಕೆಯಲ್ಲಿ ತೀವ್ರತೆ ಇದೆಯೇ? ಬದುಕನ್ನು ಸಾಹಿತ್ಯ ಬಿಂಬಿಸುತ್ತದೆ ಎನ್ನುವ ವ್ಯಾಖ್ಯೆಯ ಪುನರ್ಮನನ ಹೇಗೆ ಸಾಧ್ಯವಿದೆ? ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡಿರುವ ಈ ಅಂಕಣದ ಮೂಲ ಉದ್ದೇಶವೇ ವರ್ತಮಾನದ ಕಾವ್ಯ ಕ್ರಿಯೆಯ ಸಂಕೀರ್ಣತೆಗಳನ್ನು ಸಾಮಾನ್ಯ ಓದುಗನ ದೃಷ್ಟಿಯಿಂದ ನೋಡುವುದಾಗಿದೆ. ಬರಿಯ ಹೇಳಿಕೆಗಳು ಕಾವ್ಯವಾಗುವುದಿಲ್ಲ ಮತ್ತು ಕನಿಷ್ಠ ರೂಪಕವೊಂದನ್ನು ಟಂಕಿಸದ ಯಾರೂ ಕವಿಯಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಕನ್ನಡದ ಮನಸ್ಸುಗಳು ಈಗಾಗಲೇ ಸ್ಪಷ್ಟಪಡಿಸಿವೆ. ರಸಗ್ರಹಣದ ಮೂಲ ಉದ್ದೇಶವೇ ತನಗಿರುವ ಅರಿವನ್ನು ಪರಿಷ್ಕೃತಗೊಳಿಸಿ ತಾಜಾ ಪ್ರತಿಮೆಗಳ ಮೂಲಕ ಹೇಳುವ ಪ್ರಯತ್ನ. ಫೇಸ್ಬುಕ್ ಎಂಬ ಸಾಮಾಜಿಕ ಮಾಧ್ಯಮದ ಮೂಲಕವೆ ತಮ್ಮ ಕವಿತೆಗಳನ್ನು ಪ್ರಕಟಿಸುತ್ತಿರುವ ಹಲವರು ನಮ್ಮ ನಡುವೆ ಇದ್ದಾರೆ. ಬಹಳ ವರ್ಷಗಳಿಂದ ಕವಿತೆಯನ್ನು ಬರೆಯುವ ಅಭ್ಯಾಸವಿದ್ದವರೂ ಪತ್ರಿಕೆಗಳಲ್ಲಿ ಅವನ್ನು ಪ್ರಕಟಿಸುವ “ಜಾಣ್ಮೆ” ಮತ್ತು “ಕಲೆ”ಗಳ ಅರಿವು ಇಲ್ಲದೆ ಡೈರಿಗಳ ಪುಟಗಳಲ್ಲೇ ತಮ್ಮ ಕವಿತೆಯನ್ನು ಅಡಗಿಸಿ ಇಟ್ಟುಕೊಂಡಿದ್ದವರು ಫೇಸ್ಬುಕ್ಕಿನಲ್ಲಿ ಪ್ರಕಟಿಸಿ “ಭಾರ” ಕಳೆದುಕೊಳ್ಳುತ್ತಿದ್ದಾರೆ. ಅಂಥ ಹಲವರ ರಚನೆಗಳು ನಿಜಕ್ಕೂ ಚೆನ್ನಾಗಿರುತ್ತವೆ. ಆದರೆ ಫೇಸ್ಬುಕ್ ಪುಟಗಳು ಕ್ಷಣಕ್ಷಣಕ್ಕೂ ಹೊಸ ಹೊಸ ಬರಹ, ಫೋಟೋ, ಕವಿತೆ, ಸ್ಟೇಟಸ್ಸುಗಳ ಮೆರವಣಿಗೆ ಆಗಿರುವುದರಿಂದ ನಿಜಕ್ಕೂ ಅದ್ಭುತ ಎಂದೆನಿಸುವ ಸಾಲುಗಳು ಕೂಡ ಭರಪೂರ ಪೇಜುಗಳ ನಡುವೆ ಮಾಯವಾಗುವುದೂ ಸಹಜ. ಶ್ರೀ ಎನ್.ಡಿ.ರಾಮಸ್ವಾಮಿ ಮೇಲೆ ಹೇಳಿದ ಆ ಅಂಥ ಹಲವರ ಪೈಕಿ ಒಬ್ಬರು. ವೃತ್ತಿಯಿಂದ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾಗಿರುವುದರಿಂದ ಸಹಜವಾಗಿ ಛಾಸರಿನಿಂದ ಶೇಕ್ಸ್ ಪಿಯರನವರೆಗೆ, ಡಾಂಟೆಯಿಂದ ಆಫ್ರಿಕದ ಕಪ್ಪು ಹಾಡಿನವರೆಗೂ ಅವರ ಓದು ತೆರೆದೇ ಇರುತ್ತದೆ. ಆದರೆ ಎಲ್ಲ ಉಪನ್ಯಾಸಕರೂ ಕವಿಗಳಾಗುವುದಿಲ್ಲ. ಕವಿತೆಯನ್ನು ಪಾಠ ಮಾಡುವಾಗ ಮಾತ್ರ ಕವಿತೆಯನ್ನು ಬ್ರೌಸು ಮಾಡುವ ಶಿಕ್ಷಕರೂ ಇದ್ದಾರೆ. ಆದರೆ ಎನ್.ಡಿ.ಆರ್ ಅಪವಾದ. ಇನ್ನೇನು ಮೂರು ವರ್ಷಗಳಷ್ಟೇ ನಿವೃತ್ತಿಗೆ ಬಾಕಿ ಇರುವ ಅವರು ಅದೆಷ್ಟು ವರ್ಷಗಳಿಂದ ಪದ್ಯದ ಮೊರೆ ಹೋಗಿದ್ದರೋ ಏನೋ ಫೇಸ್ಬುಕ್ಕಿನಲ್ಲಿ ನಿತ್ಯವೂ ಅವರ ಪದ್ಯ ಪ್ರಕಟ ಆಗುತ್ತಲೇ ಇರುತ್ತದೆ. ಮೊನ್ನೆ ಫೇಸ್ಬುಕ್ ಪುಟದಲ್ಲಷ್ಟೇ ಬರೆಯುವ ಮತ್ತೊಬ್ಬ ಅನುವಾದಕರು ಇವರ ಪದ್ಯವನ್ನು ತೆಲುಗು ಭಾಷೆಗೆ ಅನುವಾದಿಸಿದ್ದರು ಎಂದರೆ ಇವರ ಪದ್ಯಗಳ ಝಳ ಕಡಿಮೆಯದೇನೂ ಅಲ್ಲ. ಸಾಹಿತ್ಯದಲ್ಲಿ ಆಸಕ್ತಿ ಇರುವ ಇಂಗ್ಲಿಷ್ ಉಪನ್ಯಾಸಕರಿಗೆ ಇರುವ ಮತ್ತೊಂದು ಲಾಭವೆಂದರೆ ಅವರು ಕನ್ನಡದ ಮಹತ್ವದ ಲೇಖಕರನ್ನು ಸುಲಭವಾಗಿ ಒಳಗೊಳ್ಳುವ ಸೌಲಭ್ಯ. ಏಕೆಂದರೆ ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳು ಬಹುತೇಕ ಒಟ್ಟಿಗೇ ಇರುವುದರಿಂದ ಭಾಷಾ ಶಿಕ್ಷಕರುಗಳ ಮಾತಿನ ನಡುವೆ text ಬಗ್ಗೆ ಮಾತು ಸಹಜವೇ ಆಗಿರುವುದರಿಂದ ಗ್ರಹಿಕೆ ಸೂಕ್ಷ್ಮತೆ ಇದ್ದವರು ಗೆದ್ದಿರುತ್ತಾರೆ. ಎನ್.ಡಿ.ಆರ್ ಪದ್ಯಗಳ ಮೂಲ ಪುರಾತನ ನವ್ಯದ ಶಾಲೆ. ಪ್ರತಿಮೆಗಳೂ ರೂಪಕಗಳೂ ಇಲ್ಲದ ಬರಿಯ ಕನಸುಗಳು ಅವರ ಪದ್ಯಗಳಲ್ಲಿ ವಿರಳಾತಿ ವಿರಳ. ಏನನ್ನು ಹೇಳುವುದಕ್ಕೂ ಪ್ರತಿಮೆ ಮತ್ತು ರೂಪಕಗಳ ಮೊರೆ ಹೋಗುವ ಅವರ ಕವಿತೆಗಳಿಗೆ ಒಮ್ಮೊಮ್ಮೆ ಈ ಭಾರವೇ ಜಾಸ್ತಿಯಾಗಿ ಮೂಲದಲ್ಲಿ ಅವರೇನು ಹೇಳ ಹೊರಟಿದ್ದರೋ ಆ ಅಂಶವೇ ಮರೆಯಾಗುವುದೂ ಉಂಟು. ಉದಾಹರಣೆಗೆ; ಅಕ್ಷಿ ನಕ್ಷತ್ರವಾದದ್ದು ಏಕೆ? ಎದೆಯೊಳಗೆ ಪುಟ್ಟ ಕಾರಂಜಿ ಶಬ್ದ,ಶಬ್ದಕ್ಕೂ ಪುಳಕ ಜೀವ ಸೆಲೆ ಕಡಲಾಗಿ,! ಇಲ್ಲಿ ಶಬ್ದಾಡಂಬರದ ನಡುವೆ ಅಕ್ಷಿ ಅಂದರೆ “ಕಣ್ಣು” ಪುಳಕ ಹುಟ್ಟಿಸುವ ಜೀವಸೆಲೆಯಾಗಿದೆ ಎನ್ನುವುದನ್ನು ಹೇಳುತ್ತಲೇ, “ಮೀಟುತ್ತಿದೆ ಕನಸುಗಳ ಉಡವನ್ನ” ಅನ್ನುವಾಗ ಈ ಪದ್ಯ ಮತ್ತೆಲ್ಲಿಗೋ ತುಯ್ಯುತ್ತಿದೆ ಅಂತ ಭಾವಿಸಿದರೆ, “ಆಕಾಶದ ನಕ್ಷತ್ರಗಳೂ ನಕ್ಕು ವಿಷಾದದ ಅಮಲಲಿ” ಎಂದು ಮುಕ್ತಾಯ ಆಗುವಾಗ ಈ ಕವಿತೆ ಹೇಳಿದ್ದಾದರೂ ಏನನ್ನು ಎನ್ನುವ ಗೊಂದಲ ಸಹಜ. “ಇಲ್ಲಿ ಜೇನಿದೆ,ಹಾಲಿದೆ,ಹಣ್ಣಿದೆ ಅದು ಇದೆ ಇದು ಇದೆ ಎಲ್ಲ ಇದೆ” ಎಂದು ಆರಂಭವಾಗುವ ಪದ್ಯ ಈ ನೆಲದ ಘಮವನ್ನೋ ಅಥವ ಭಾಷೆಯ ಬೆಡಗನ್ನೋ ಹೊಗಳುತ್ತಿದೆ ಅಂದುಕೊಂಡರೆ ” ಏಕಲವ್ಯ ಜಗದೇಕ ವೀರನಾಗಿದ್ದು ಇಳಿದ ಹೊಳೆಯ ದಂಡೆಯಾಚೆಯೂ ಈಜಿದ್ದು!” ಎಂದು ರೂಪುಗೊಂಡರೆ ಮತ್ತೊಂದು ಜಿಗಿತಕ್ಕೆ ತುಯ್ದು “ಲಕ್ಷ್ಮಣ ಹಣ್ಣ ಬಿಟ್ಟು ಓಡಿದ್ದು ಕೋದಂಡ ಹಣ್ಣ ಜತಯೇ ಓಡಿದ್ದು” ಎಂದು ಹೇಳುತ್ತ ಕಡೆಗೆ ಪದ್ಯ “ಮುಗಿಲ ಅಟ್ಟದಲ್ಲೇ ಇರಲಿ ಕೈ ಚಾಚಿದರಷ್ಟೇ ಹಣ್ಣು!” ಎಂದು ಕೊನೆ ಮುಟ್ಟಿದಾಗ ಓಹ್ ಈ ಕವಿ ಹೆಣ್ಣನ್ನು ಕುರಿತು ಹೇಳಲು ಏನೆಲ್ಲ ಪದ ಭಂಡಾರವನ್ನೇ ಸೂರೆಗೊಂಡರಲ್ಲ ಎನ್ನಿಸುತ್ತದೆ. ರಾಮಾಯಣ, ಭಾರತದ ಪಾತ್ರಗಳೆಲ್ಲ ಕಣ್ಣ ಮುಂದೆ ಸರಿದು ಹೋಗುತ್ತವೆ, ಸವೆದ ದಾರಿಯ ಕುರುಹಾಗುತ್ತವೆ “ಬುದ್ಧ ಗುರುವಿನ ಕಣ್ಣಿಗೆ ಧೂಳು ಬಿದ್ದು ಧಾರಾಕಾರ ಕಣ್ಣೀರು ನೋವು,ನವೆ” ಎಂದು ಸುರುವಾಗುವ ಕವಿತೆ ಬುದ್ಧನೂ ಅನುಭವಿಸಿದ ಸಾಮಾನ್ಯ ನೋವನ್ನು ತೆರೆದಿಡುತ್ತಲೇ ” ಓಡಿದ,ಓಡಿದ ಧೂಳುಗಳು ಬಿಡದೆ ಹಿಂಬಾಲಿಸಿದ್ದು ಕಣ್ಣ ಮುಚ್ಚಿ ಓಡಿದ!” ಎಂದು ಹೇಳುವಾಗ ಕಣ್ಣಿಗೆ ಬಿದ್ದದ್ದು  ಧೂಳಲ್ಲ,  ಬದುಕಿನ ಸತ್ಯಗಳು ಎಂದು ಗೊತ್ತಾಗುತ್ತದೆ. ಮುಂದುವರೆದಂತೆ,  “ಈಗ ಬುದ್ದನ ಕಣ್ಣು ಸ್ಪಷ್ಟ, ಎಲ್ಲವೂ ನಿಖರವಾಗಿ ಕಂಡು ಬೆರಗು!” ಎನ್ನುವಾಗ ಬುದ್ಧನ ಜ್ಞಾನೋದಯವನ್ನು ಬೆರಗಿನಿಂದ ಕಂಡಿರಿಸಿದ ಕವಿತೆ ಆಗಿ ಮಾರ್ಪಾಡಾಗುತ್ತದೆ. ಶಬ್ದಗಳು ಚಿನ್ನದ ಅದಿರಾದಾಗ ಬದುಕ ಹೊಲ ಬಂಗಾರವಾಗಿತ್ತ ಶಬ್ದಗಳು ಪ್ರೀತಿಯ ಮೊಗ್ಗಾದಾಗ ಬದುಕು ಮಲ್ಲಿಗೆ ತೋಟವಾಗಿತ್ತ! ಎಂದೂ ಹೇಳಬಲ್ಲ ಈ ಕವಿಯ ಬಳಿ ಶಬ್ದ ಭಂಡಾರದ ಸಂದೂಕ ಇದ್ದೇ ಇದೆ ಈ ಕವಿ ಬದುಕಿನ ನಶ್ವರತೆಯನ್ನು ಕೂಡ ಬಿಡುಬೀಸಾಗಿ ಹೇಳಬಲ್ಲರೆಂಬುದಕ್ಕೆ ನೋಡಿ; “ಸಂತೆಯಲಿ ಮೀನು ಮಾರುವ ಸೊಪ್ಪು,ಸದೆ ಮಾರುವ ಜಾಗದಲಿ ಮಾತುಗಳದೇ ಕಾರುಬಾರು ಗಟ್ಟಿಯಾಗಿ,ಕರ್ಕಶವಾಗಿ ಕಂಚಿನ ಕಂಠದಲಿ ಕೂಗಾಟ!” ಯೆಸ್, ಮುಂದಕ್ಕೆ ಇಣುಕಿದರೆ, “ಮೌನಕ್ಕೆ ಜಳಕ ಮಾಡಿಸಿ ಹೊಸ ಅಂಗಿ ತೊಡಿಸಿ ಕಥೆ,ಕವನ,ಹೇಳುತ್ತಾ ಹೋದರೆ ಸಿಡಿ ಮಿಡಿ ಗೊಂಡು ಉಗಿಯುತ್ತಿತ್ತು!” ಎಂದು ಕುತೂಹಲ ಹುಟ್ಟಿಸುತ್ತಾರೆ. ಆದರೆ ಪದ್ಯ ಕೊನೆಯಾಗುವುದು ಹೀಗೆ; “ಮೌನದ ಗೆಳೆತನ ದುಬಾರಿ ಖಿನ್ನತೆ, ಸಿಡುಕು, ಕೋಪ,ಕುದಿತ,ಮಿದಿತದ ಹೊಂಡವಾದದ್ದು!”. ಈಗ ಹೇಳಿ, ಈ ಪದ್ಯ ಬದುಕಿನ ನಶ್ವರತೆಯನ್ನು ಹೇಳುತ್ತಿದೆಯೋ ಅಥವ ಶಬ್ದದ ಆಡಂಬರದಲ್ಲಿ ಮೌನದ ಮಹತ್ತನ್ನು ಹುಡುಕುವ ಯತ್ನ ಮಾಡುತ್ತಿದೆಯೋ? ಈ ಪರಿಗೆ ಒಯ್ಯವ ಪದ್ಯಕ್ಕೆ ಆಗಾಗ ಲಿಫ್ಟ್ ಕೊಡುವುದರಲ್ಲಿ ಇವರು ಸಿದ್ದ ಹಸ್ತರೇ! “ಈ ಕನ್ನಡಿಯಲಿ ಅದೆಷ್ಟು ಮುಖ ಯುಧಿಷ್ಟರನೂ  ನಿಂತಿದ್ದ ಕಿಮ್ ಮಹಾಶಯನೂ ನಿಂತಿದ್ದ ರಂಗದಲಿ ವೇಷ ಕಟ್ಟಿ”. ಎಂದು ಆರಂಭಗೊಂಡ ಪದ್ಯ ದಾಟುತ್ತ ದಾಟುತ್ತ “ಇವನೂ ಬಿಳಿ ಬಟ್ಟೆಯಲಿ ಚಿತ್ರ ಬಿಡಿಸಿದ್ದು ನೆತ್ತರ ಬಣ್ಣದಲಿ” ಎಂದು ಮತ್ತೊಂದು ಲಿಫ್ಟ್ ಪಡೆದಾಗ ಗೊಂದಲ. ಪದ್ಯ ಹೆಚ್ಚಿಸಿದ ಗೊಂದಲದಲ್ಲಿ ” ಇವನು ಶಿಶುಪಾಲನ ಕೊನೆ ತಮ್ಮ ನಂದನನಿಗೂ ಬೆಂಕಿ ಇಟ್ಟೇ ತೀರುವೆನೆಂದ!” ಎಂದು ಕೊನೆಯಾಗುವಾಗ ಈ ಕವಿ ಕಾಣಿಸಿದ ಬೆಳಕ ಝಳಕ್ಕೆ ಕಣ್ಣು ಕುಕ್ಕುವ ಶಕ್ತಿ ಇದ್ದೇ ಇದೆ ಎನ್ನುವುದಕ್ಕೆ ಸಾಕ್ಷಿ. ಆದರೆ ಪುರಾಣ ಪ್ರತಿಮೆಗಳ ಮೂಲಕವೇ ಏನೆಲ್ಲವನ್ನೂ ಕಟ್ಟುವ ಈ ಕವಿಯ ರಚನೆಗಳು ಆಧುನಿಕ ಮನಸ್ಥಿತಿಯ ಮತ್ತು ಪುರಾಣ ಪ್ರತಿಮೆಗಳ ಮೂಲ ಆಶಯವೇ ತಿಳಿಯದವರಿಗೆ ಗೊಂದಲ ಮತ್ತು ಶಬ್ದಾಡಂಬರದ ಹಾಗೆ ಕಂಡರೆ ತಪ್ಪೇನಲ್ಲ. “ತಳ ಇರದ ದೋಣಿಯಲಿ ಮಹಾ ಯಾನ ಆಸೆ ಎಂಬು ಹುಟ್ಟು ಒಂದರಗಳಿಗೆಯೂ ಬಿಡದೆ” ಈ ಸಾಲುಗಳು ಹುಟ್ಟಿಸುವ ತಳಮಳಗಳ ಲೆಕ್ಕ ಸುಲಭಕ್ಕೆ ಸಿಕ್ಕದ್ದು. ಮುಂದುವರೆದಂತೆ ” ಯುದ್ದದ ದಿರಸು ಕವಚ,ಕತ್ತಿ ತಿವಿದಲ್ಲದೇ ಮುಂದೆ ಹಾದಿ,ಹೆಜ್ಜೆ!” ಎಂದು ಆಕ್ಷೇಪಿಸುವ ಈ ಕವಿ ನಿಜಕ್ಕೂ ಏನನ್ನು ಹೇಳಲು ಹವಣಿಸುತ್ತಿದ್ದಾರೆ ಎನ್ನುವುದೇ ಕುತೂಹಲಕ್ಕೆ ದಾರಿ ಮಾಡುತ್ತದೆ. ಇನ್ನೂ ಏನೆಲ್ಲವನ್ನೂ ಹೇಳುತ್ತ ಈ ಕವಿಯ ಕವಿತೆಗಳನ್ನು ಡಿಸೆಕ್ಟ್ ಮಾಡುತ್ತ ಹೋಗಬಹುದು. ಆದರೆ ಪುರಾಣ ಪ್ರತಿಮೆಗಳ ಭಾರದಲ್ಲಿ ಇವರ ನಿಜದ ಆಶಯಗಳೇ ಸುಸ್ತು ಪಡುತ್ತಿವೆ ಎನ್ನುವದಂತೂ ನಿಜ. “ಇಲ್ಲಿ ಗಂಗೆಯಿದೆ ಗಾಂಗೇಯನ ಶರಶಯ್ಯೆ ಇದೆ ಅರ್ಜುನ ದಾಹಕ್ಕೆ ತಳಾ ತಳ ಸೀಳಿ ಗಂಗೆ ತರಬೇಕು!” ಎಂಬ ಭರವಸೆಯ ಕ್ಷೀಣ ದನಿಯೂ ಇವರಿಗೆ ದಕ್ಕಿರುವುದರಿಂದಲೇ ಇವರು ಪದ್ಯ ಪೋಸ್ಟ್ ಮಾಡುತ್ತಿದ್ದಂತೆಯೇ ಬೀಳುವ ಲೈಕುಗಳು ಈ ಕವಿಯು ಮತ್ತಷ್ಟು ಮಗದಷ್ಟು ಪುರಾಣ ಪ್ರತಿಮೆಗಳನ್ನು ಉಜ್ಜುಜ್ಜಿ ಹೊಳಪು ಪೇರಿಸುವಂತೆ ಮಾಡಿವೆ. ಶ್ರೀ ಎನ್. ಡಿ. ರಾಮಸ್ವಾಮಿ ಯಾವತ್ತೋ ತಮ್ಮ ಸಂಕಲನ ತರಬಹುದಿತ್ತು. ಪ್ರತಿಮೆ ರೂಪಕಗಳ ಅರಿವೇ ಇಲ್ಲದ ಸ್ವ ಮರುಕಗಳನ್ನೇ ಕಾವ್ಯವೆಂದು ಬಿತ್ತುತ್ತಿರುವರ ನಡುವೆ ಎನ್ ಡಿ ಆರ್ ಪುರಾಣದ ಪಾತ್ರಗಳ ಮೂಲಕವೇ ಬದುಕನ್ನು ಅರಿಯುವ ರೀತಿಯಿಂದ ಬಹು ಭಿನ್ನಾವಾಗಿ ಕಾಣುತ್ತಾರೆ ಮತ್ತು ವಿಭಿನ್ನವಾಗಿಯೇ ಉಳಿಯುತ್ತಾರೆ ಅವರ ೧೫ ಪದ್ಯಗಳನ್ನು ಒಟ್ಟು ಮಾಡಿ ಇಲ್ಲಿ ಪೋಣಿಸಿದ್ದೇನೆ. ಸುಮ್ಮನೇ ಕಣ್ಣಾಡಿಸುತ್ತ ಹೋದಂತೆ ಮತ್ತೆಲ್ಲಿಗೋ ಮತ್ಯಾವುದೋ ಪರಿಜಿಗೆ ಒಯ್ಯುವ ಈ ಪದ್ಯಗಳ ಝಳ ನಿಮಗೂ ಮುಟ್ಟಲಿ. ಎನ್.ಡಿ.ಆರ್. ಕವಿತೆಗಳು 1. ಅಕ್ಷಿ ನಕ್ಷತ್ರವಾದದ್ದು ಏಕೆ? ಎದೆಯೊಳಗೆ ಪುಟ್ಟ ಕಾರಂಜಿ  ಶಬ್ದ,ಶಬ್ದಕ್ಕೂ ಪುಳಕ ಜೀವ ಸೆಲೆ ಕಡಲಾಗಿ,!  ಹರಿಯುತ್ತಿದೆ ಝರಿ ಜುಳು,ಜುಳು ನಿನಾದವೆಲ್ಲ ಅಲೌಕಿಕದ ಹುನ್ನಾರವೆ? ಮೀಟುತ್ತಿದೆ ಕನಸುಗಳ ಉಡವನ್ನ!  ತಳ ಕಂಡ ಬದುಕ ಸೆಲೆ ಉನ್ಮತ್ತ,ಉನ್ಮೀಲನದ ಗಾಳಿಪಟ ಇಲ್ಲಿಲ್ಲ ಭಾವಗಳ ಹಕ್ಕಿ  ಪರಿಧಿಯ ಸೀಳಿ !  ಹಂಚಿ ಕೊಂಡ ಕನಸುಗಳು ಆಯಾತ ನಿರ್ಯಾತವಾಗುತ್ತಿವೆ ಈ ಸೇತುವೆಗೆ  ಬದುಕ ಎರಡೂ ಹೊಳೆ ಕಾಯುತ್ತಲೇ!  ಆಕಾಶದ ನಕ್ಷತ್ರಗಳೂ ನಕ್ಕು ವಿಷಾದದ ಅಮಲಲಿ ಈ ಸೇತುವೆ ಎಂದಿಗಾದರೂ ಒಮ್ಮೆ ದಕ್ಕಿದರೆ? 2. ಇಲ್ಲಿ ಜೇನಿದೆ,ಹಾಲಿದೆ,ಹಣ್ಣಿದೆ ಅದು ಇದೆ ಇದು ಇದೆ ಎಲ್ಲ ಇದೆ ಹೂವು,ಹಾಸಿಗೆ,ಚಂದ್ರ,ಚಂದನ ನಗು,ಉತ್ಸಾಹ ,ಹುರುಪು,ಕನಸು ಹೊಳೆಯಂತೆ ಕಾದಿದೆ ! ಇಳಿಯ ಬೇಕು ಕನಸುಗಳ ಹೊಳೆಗೆ ಜಿಗಿ,ಜಿಗಿದು ಬಾಚಲು ಬೇಕು ಹಣ್ಣ ಗೊಂಚಲಿನ ಪರಿ ಹರಡಿದ್ದು ಬೇಕಾದ ಮಾಗಿದ ಹಣ್ಣೇ ಕಿತ್ತು! ಏಕಲವ್ಯ ಜಗದೇಕ ವೀರನಾಗಿದ್ದು ಇಳಿದ ಹೊಳೆಯ ದಂಡೆಯಾಚೆಯೂ ಈಜಿದ್ದು! ಬಾಚಿದ್ದು ಯಾವನೂ ಮುಟ್ಟದ ಹಣ್ಣು! ಸುಧಾಮ ಯಾವ

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು Read Post »

ಕಾವ್ಯಯಾನ

ಕಾವ್ಯಯಾನ

ಭೂಕ೦ಪವಾದ ಮೇಲೆ ಮೇಗರವಳ್ಳಿ ರಮೇಶ್ ಭೂಕ೦ಪವೊ೦ದು ಸ೦ಭವಿಸಿಊರಿಗೆ ಊರೇ ಅವಶೇಷ ವಾದಾಗಹಾಗೇ ಬಿಡಲಾಗುತ್ತದೆಯೆ?ಅಣಿಗೊಳಿಸಲೇ ಬೇಕು ಮತ್ತೆ. ಯದ್ವಾ ತದ್ವಾ ಬಿದ್ದಿರುವಇಟ್ಟಿಗೆ. ಕಬ್ಬಿಣದ ರಾಡುಗಳು, ಗರ್ಡರ್ ಗಳುಛಾವಣಿಯ ಸ್ಲ್ಯಾಬ್,ಮುರಿದ ಫ಼ರ್ನಿಚರ್ಗಳುಒಡೆದ ಕನ್ನಡಿಯ ಚೂರು, ಟೀವಿಪಾತ್ರೆ ಪಡಗ, ನುಜ್ಜುಗುಜ್ಜಾದ ಟ್ರ೦ಕು,ಹರಿದ ಮಣ್ಣಾದ ಬಟ್ಟೆ ಬರೆ,ಚೆಲ್ಲಿದ ಅನ್ನ, ರೊಟ್ಟಿ, ಬ್ರೆಡ್ಡುದೇವರ ಪಟಇವುಗಳ ಮಧ್ಯ ದಾರಿ ಮಾಡಿಕೊಳ್ಳುತ್ತಾಅವಶೇಷಗಳಡಿಯಲ್ಲಿ ಆಕ್ರ೦ದಿಸುತ್ತಿರುವವರನ್ನುನಿಧಾನಎತ್ತಿ ಹತ್ತಿರದ ಆಸ್ಪತ್ರೆಗೆ ಸೇರಿಸ ಬೇಕುಹೆಣಗಳನ್ನೆತ್ತಿ ಸ೦ಸ್ಕಾರ ಮಾಡ ಬೇಕು ಬೃಹತ್ ಯ೦ತ್ರಗಳನ್ನು ತ೦ದುಅವಶೇಷಗಳನ್ನೆಲ್ಲ ಎತ್ತಿಅಣಿಗೊಳಿಸ ಬೇಕು ಮತ್ತೆಹೊಸದಾಗಿ ಊರು ಕಟ್ಟಲು. ವಿನಾಶದ ಒಡಲಿ೦ದ ಮತ್ತೆಬದುಕು ಚಿಗುರಿಸಲು. **************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನುಡಿ ನಾಗರ ಅರುಣಾ ರಾವ್ ಮನುಜನ ಮುಖದಲ್ಲಿನಗೆಯ ಮುಖವಾಡಮರೆಮಾಚುವುದುದುಗುಡ, ದುಮ್ಮಾನಅಷ್ಟೇಕೆ ?ಅಸೂಯೆ ಅನುಮಾನ! ಮುಖವಾಡದ ಹಿಂದಿನ ಮನಅರಿಯದೇ ನಿಜವನ್ನ?ಕಣ್ಣು ಹೇಳದಿದ್ದೀತೇಎದೆಯ ಮಾತನ್ನ?ನಂಬಬಹುದೇ ನಿನ್ನನ್ನಓ ನಾಲಿಗೆಯೇ?ನುಡಿವೆ ನೀ ಏನನ್ನ?ನೀ ಸುಮ್ಮನಿದ್ದರೇನೆ ಚೆನ್ನ! ನಿನ್ನಿಂದ ನೋವುಂಡ ಮನನಯನದಲ್ಲಿ ತೋರೀತುತನ್ನ ನೋವನ್ನ|ಎಲುಬಿಲ್ಲದ ಜಿಹ್ವೆ ನೀನುಡಿದ ನುಡಿಯದುಗಾಯಪಡಿಸೀತು ಎನ್ನ! ಬಿಗಿತುಟಿಯ ದುಡಿವಂದುನೋವಪಡುವಂದು, ಎಂದೆಂದಮಾತಿನಲಿ ಹುಡುಗಿಹುದು ಸತ್ಯಬಿಗಿದ ತುಟಿ ತರಬಲ್ಲದು ಹಾಸಕಟು ಮಾತಿಗಾತಿಗದೆರಾಮಬಾಣ! *********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೂಕವೇದನೆ ಶಿವಲೀಲಾ ಹುಣಸಗಿ ಮೌನಕ್ಕೆ ನೂರು ಭಾವಲೇಪನದ ನಂಟುಹಕ್ಕಿ ರೆಕ್ಕೆ ಬಿಚ್ಚಿ ಹಾರಲಾಗದೆ ತತ್ತರಿಸಿದೆಕಣ್ಣಂಚಲಿ ಕಂಬನಿಯ ಹನಿಗಳುತೊಟ್ಟಿಕ್ಕಿದಂತೆ ಸಂತೈಸದಾ ಮನವುಮೂಲೆಗುಂಪಾಗಿ ರೋಧಿಸುತ್ತಿದೆ.ಹೊದ್ದ ಕಂಬಳಿಯ ತುಂಬಾ ತೂತುಬಿತ್ತರಿಸಲಾದಿತೇ ಅಂತರಾಳದ ಹೊರತುಬರದ ಮೇಲೆ ಬರೆಯಳೆದಂತೆ ನೆನಪುಕರಗಬಹುದೇ ಬುಗಿಲೆದ್ದ ಆಕ್ರೋಶದ ಕಂಪುಕಾದಕಬ್ಬಿಣವು ಕುಲುಮೆಯಲಿ ಪಳಗಿದಂತೆನಿನ್ನಾರ್ಭಟಕೆ ಒಂದು ಕ್ಷಣ ಮೈ ಮರೆತಂತೆಹಾಯ್ದ ಹೊದ್ದ ಮನವರಿಕೆಗಳ ತೀಡಿದಾಂಗೆಹರಯವೊಂದೆ ಇಳೆಗೆ ಆಗಾಗಾ ಮೈತಳೆದಾಂಗೆಬರಿದಾದ ಒಡಲು ಬೆಸದು ಮಿಸುಕಿದಂತೆಕಣ್ಣು,ಮೂಗು ಕೈಕಾಲು ಮೂಡಿದ್ದಂತೆಯಾವ ಮೂರ್ತವೋ ಕೊನೆಗಾಲಕೆಕಡಲ ಸೇರದಾ ಮರ್ಮವನು ಬಲ್ಲವರಾರುತುಟಿ ಕಚ್ಚಿ ಕರಗಿಸಿದ ಪಿಂಡದಂತೆ ಎಲ್ಲವುಮೌನವೊಂದು ಉತ್ತರವಾದಿತೆ ಕಂಗಳಿಗೆನಿನ್ನ ಎದೆಯ ಅಗ್ನಿಯಲಿ ಬೇಯುವಮೂಕವೇದನೆಯ ಹಸುಗೂಸಾದಿತೆ.ಇರಳು ಕರಗಿ ಹಗಲು ತೆರೆದರೂಮೂಡದಾ ಕಾಮನಬಿಲ್ಲುಗಳುನೀರಿಗೆಗಳು ನೀರೆಯರಿಲ್ಲದೆ ಒದ್ದಾಡಿಕರಗಿದ ಮೇಣದಂತೆ ಕಮರಿ ಹೋಗಿವೆಗುಡಿಸಲೊಳಗೆ ಕೊಸರಾಡಿ ಸೋತಿವೆಹರೆಯದ ಹಂಗು ತೊರೆದ ಬಾಳಿಗೆತ್ಯಾಪೆಯಾಗಿ ಹೊಸೆಯ ಹೊರಟಂತೆಉಸಿರಾದ ಪ್ರಕೃತಿಯ ಗರ್ಭದೊಳುಮತ್ತೆ ಮೂಡನೆ ನಭದಲಿ ಭಾಸ್ಕರಮೌನ ಮುರಿದು ತಾರೆಯಾಗಲುಮನ ಬಿಚ್ಚಿ ಹಾರಲು ಅನುವಾಗಲು.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನ ರೇಷ್ಮಾ ಕಂದಕೂರ ಮೌನದ ಆಲಾಪಮಾತಿನ ಆರ್ಭಟ ಸರಿಸಿಶಾಂತ ಚಿತ್ತಕೆ ಆಹ್ವಾನ ದುಗುಡ ಅದುಮಿಡುತಸುಪ್ತ ಲೋಕದಿ ವಿಹಾರಜಂಜಡಗಳ ವಿರಮಿಸುವಿಕೆ ಸಮಸ್ಯಯ ಪಿರಾಮಿಡ್ಡಿಗೆಉಪಶಮನದ ಪರಿಸೂಕ್ಷ್ಮ ಅವಲೋಕನ ಪ್ರತಿಭಟಿಸುವ ಪ್ರತಿರೂಪನಿರ್ಣಯಗಳ ಸೂಚಿಕುಹಕತಗೆ ವಿಹಂಗಮ ನೋಟ ಗಟ್ಟಿತನದ ಪ್ರದರ್ಶನಹತೋಟಿಯ ಮನದೊಡಲುಮುಂದಿನ ಸವಾಲಿಗೆ ಅಣಿ ಚಿತ್ತದಲಿ ಅಚ್ಚೊತ್ತಿಮುತ್ತುವವರಿಗ ಎಚ್ಚರಿಕೆ ಘಂಟೆನಡುವೆ ಕೈ ಬಿಟ್ಟವರಿಗೆ ಸವಾಲು ನಿರಾಳತೆಯ ಸ್ವರೂಪವೇದನೆ ಸಹಿಸುವಿಕೆಅಂತರಾಳದ ಸತ್ವ. *******************

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಮಳೆ ಹನಿ ಕನ್ನಡಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ. ಇಂಗ್ಲೀಷಿಗೆ: ಸಮತಾ ಆರ್. ಮಳೆ ನಿಂತುಹೋದ ಮೇಲೂಯಾರನ್ನೋ ಕಾಯುತ್ತಾಒಂಟಿ ಹಗ್ಗದ ಮೇಲೆಆತುಕೊಂಡ ಸಾಲು ಸಾಲುಮಳೆ ಮಣಿಗಳುಒಲ್ಲದ ಮನಸ್ಸಿನಿಂದಧರೆಗುರುಳುತ್ತಿವೆ. ಬೆಡಗು ಬಿನ್ನಾಣದಲಿಒಂದೇ ಬಿಂದು ಹನಿಹೂ ದಳದ ಮೇಲೆಎತ್ತಿ ಬೊಗಸೆಯೊಳಗಿಟ್ಟುಜೋಪಾನ ಮಾಡ ಬೇಕೆನ್ನುವಷ್ಟರಲ್ಲಿ..ಸಣ್ಣಗೊಂದು ನಕ್ಕುಹೂವಿನೆದೆಯೊಳಗೆ ಹುದುಗಿ ಹೋಯಿತು. ಎಲೆಯ ತುದಿಯಲ್ಲಿಕೊನೇ ಹನಿಇನ್ನೇನು ಬೀಳಬೇಕುನನ್ನೊಳಗೆ ತೀರದ ಸಂಕಟಮೆಲ್ಲಗೆ ಬೆರಳ ತುದಿಗೆಇಳಿಬಿಟ್ಟು ಕಣ್ಣ ಪಾಪೆಯೊಳಗೆಮುಚ್ಚಿಟ್ಟೆ. ನನಗೂ ಮಳೆಗೂ ಈಗತೀರದ ನಂಟು. *********************** A Drop..Even after the rain has stoppedAs if waiting for someoneDrops lined on a lone ropeAre dripping downWith a heavy heart… A lovely single dropOn a petal is gleaming andWhen went to pick itAnd protect in my handIt escaped smiling and hidIn the bosom of the flower. A last drop at the tip of a leafWas about to dropThen unable to bear that painI held it on my finger tipAnd hid it inside my eye. Now I and rain are bonded forever…

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಇಲ್ಲಿ ಎಲ್ಲವೂ ಬದಲಾಗುತ್ತದೆ ಅರ್ಪಣಾ ಮೂರ್ತಿ ದಿನಕ್ಕೊಂದು ಬಣ್ಣ ಬದಲಿಸುವಇದೇ ಇಳಿಸಂಜೆಗಳಲ್ಲಿನಾ ಬದಲಾಗದ ನೆನಪ ಹರವಿದ್ದೇನೆ, ಬರಡು ಬಯಲಿನಮನಸುಗಳ ನಡುವೆನಾಕೊನರಿದ ಕೊರಡಿನ ಹಸಿರನ್ನಷ್ಟೇ ಮನಕ್ಕಿಳಿಸಿಕೊಂಡಿದ್ದೇನೆ, ದಿಕ್ಕು ತಪ್ಪಿದ ನದಿಗಳುಅಲ್ಲೆಲ್ಲೋ ಸಂಗಮಿಸುವಾಗನಾನಿಲ್ಲಿ ಅಲೆದಾಡಿ ನದಿಯ ಕಾಯುವ ಕಡಲಾಗಿದ್ದೇನೆ., ಹೌದು ಇಲ್ಲಿ ಎಲ್ಲವೂ ಬದಲಾಗಿದೆ, ನಾನು?ಊಹೂ,ನಾನೀಗಲೂಬಾರದ ಅಮವಾಸ್ಯೆಯ ಚಂದಿರನ ಬೆಳಕಚುಕ್ಕಿಯಲಿ ಹುಡುಕುವಕಾತರದ ಕಣ್ಣಾಗಿದ್ದೇನೆ…. ************************

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಗೋಲಿಗಳು ಹಿಂದಿಮೂಲ:- ಮರಹೂಮ್ ಇಮ್ತಿಯಾಜ. ಕನ್ನಡಕ್ಕೆ:-ಡಿ.ಎಮ್. ನದಾಫ್ ನನ್ನ ಬಾಲ್ಯದ ಮೊದಲಗಳಿಕೆ ಅದ ನಾನು ಕಡು ಶ್ರಮದಿ ಗಳಿಸಿದೆ,ಹಗಲೆನ್ನಲಿಲ್ಲ,ರಾತ್ರಿಯನಲಿಲ್ಲಹಸಿವೆನಲಿಲ್ಲ,ನೀರಕಾಣಲಿಲ್ಲ,ಬರೀ ಗಳಿಕೆಯೋ ಗಳಿಕೆ. ಹಲ ಹಲವು ಬಣ್ಣ-ಬಣ್ಣದವುಕೆಲ-ಕೆಲವು  ಒಡಕು ತಡುಕುವಿಧ-ವಿಧದ ಹೊಂಬಣ್ಣದವುಕೆಲವು ನನ್ನಂತೆ ಅಮೂಲ್ಯಹಲವಲ್ಲಿ ಗೋವ ಕಂಗಳ ನೈರ್ಮಲ್ಯ ಕಿಸೆಯ ಕೊನೆ ಮೂಲೆ ಹರಿದಿತ್ತುಆದರೂ ಅದು ಗೋಟಿಗಳಿಂದ ತುಂಬಿತ್ತು.ವೇಗವಾಗಿ ಓಡಿದಾಗಲೆಲ್ಲಇವುಗಳ ಕಿಂಕಿಣಿ ಕಿವಿ ತುಂಬುತಿತ್ತು. ನಾನು ನನಗಿಂತ ಅವುಗಳನ್ನೇಹೆಚ್ಚು ಸಂಭಾಳಿಸಿದ್ದೆ’ಹಿಟ್ಟಿನ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದೆ,ಗೊತ್ತಾಗುತ್ತಿಲ್ಲ ಗೆಳೆಯ ನನ್ನ ಗೋಟಿಗಳು ಎಲ್ಲಿ ಕಳೆದು ಹೋದವು?ತುಂಬಿ ಹರಿಯುವ  ನದಿಯಂತೆ ನನ್ನ ಯೌವನದ ಸೆಳೆವಿನಲ್ಲಿ ಎಲ್ಲಿ ತೇಲಿ ಹೋದವು. *********************************

ಅನುವಾದ ಸಂಗಾತಿ Read Post »

ಇತರೆ

ಲಲಿತ ಪ್ರಬಂಧ

ನೆನಪಿಗೆ ಬರುತ್ತಿಲ್ಲ ಶೀಲಾ ಭಂಡಾರ್ಕರ್ ತಂಗಿ ಫೋನ್ ಮಾಡಿ..” ಅಕ್ಕಾ.. ಈ ಸಲ ದಸರಾ ರಜದಲ್ಲಿ ಊರಿಗೆ ಬಂದಾಗ ಸಾಲೆತ್ತೂರಿಗೆ ಹೋಗಿ ಬರೋಣ್ವಾ? ” ಅಂದಾಗ ನಾನು ಖುಷಿಯಿಂದ “ಹೇಯ್ ನಾನೂ ಅದನ್ನೇ ಯೋಚಿಸ್ತಿದ್ದೆ.. ಖಂಡಿತ ಹೋಗೋಣ” ಅಂದೆ. ಅದಕ್ಕವಳು “ಎಷ್ಟೋ ದಿನದಿಂದ ನನಗೆ ತುಂಬಾ ಆಸೆ ಆಗ್ತಿದೆ ನಾವು ಕಲಿತ ಸ್ಕೂಲು, ಅಪ್ಪನ ಬ್ಯಾಂಕು, ನಾವಿದ್ದ ಮನೆ, ಶೇಷಪ್ಪನ ಅಂಗಡಿ” … ಅನ್ನುವಾಗ ನಾನು ಪಟಕ್ಕನೆ., “ರತ್ನಾಕರ. ನಾನು ರತ್ನಾಕರನನ್ನು ನೋಡಬೇಕು” ಅನ್ನುವುದರೊಳಗೆ ನಮ್ಮವರು ಮನೆಯೊಳಗೆ ಕಾಲಿಟ್ಟಾಯಿತು. ಇನ್ನು ಮಾತಾಡುವುದು ಕಷ್ಟ ಇವರೆದುರಿಗೆ , ನಿಮ್ಮದು ಯಾವಾಗಲೂ ಇದ್ದದ್ದೆ ಪಿಟಕಾಯಣ ಅನ್ನುತ್ತಾರೆ ಅಂತ,  ಅವಳಿಗೆ ಅಂದೆ ” ನಾಳೆ ಮಾತಾಡ್ತೇನೆ ಆಯ್ತಾ”. “ಯಾರದು ರತ್ನಾಕರ?” ಇವರು ಕೇಳಿದರು. ನಾನು ಮನಸ್ಸಿನಲ್ಲೇ,. ರತ್ನಾಕರನ ಬಗ್ಗೆ ಅಂದಿದ್ದು ನನ್ನ ತಂಗಿಗೆ ಕೇಳಿಸಿತ್ತೋ ಇಲ್ಲವೋ ಆದರೆ ಇವರಿಗೆ ಹೇಗೆ ಕೇಳಿಸಿತಪ್ಪ..? ಅಂದುಕೊಂಡು.. ಹಿಹಿ ಇಲ್ಲಪ್ಪ ರತ್ನಕ್ಕ ಅಂತ ಅಂದಿದ್ದು  ಅಂದೆ. ಏನೋ ಸುಮ್ಮನಾದರು. ನಾನು ಮಾತ್ರ ಆವತ್ತು ಇಲ್ಲಿರಲಿಲ್ಲ.. ಮನಸ್ಸೆಲ್ಲ ಸಾಲೆತ್ತೂರೆಂಬ ಚಂದದ ಊರು .. ರತ್ನಾಕರ , ಅವನ ಮುಗ್ಧ ನಗು, ಅವನ ಒಡನಾಟ ಇದನ್ನೇ ಯೋಚಿಸುತ್ತಿತ್ತು. ರತ್ನಾಕರ ನನಗಿಂತ ಒಂದು ವರ್ಷ ಚಿಕ್ಕವನು.. ತುಂಬ ಒಳ್ಳೆಯ ಪಾಪದ ಹುಡುಗ. ಆ ಊರಲ್ಲಿದ್ದ ಒಂದೇ ಶಾಲೆಗೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿ ಒಟ್ಟಿಗೆ ಹೋಗುವುದು ಬರುವುದು. ಕುಂಟಲ ಹಣ್ಣು, ಕೇಪಳ ಹಣ್ಣು  ತಿನ್ನಲು ಕಲಿಸಿದ್ದೇ ರತ್ನಾಕರ. ಹಸಿ ಗೇರುಬೀಜಗಳನ್ನು ಒಟ್ಟು ಮಾಡಿ ಒಣಗಿದ ಎಲೆಗಳ ನಡುವೆ ಇಟ್ಟು ಬೆಂಕಿ ಹಾಕಿ ಸುಟ್ಟು ತಿನ್ನೋಣ ಎಂದು ನಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ದ, ಏನೋ ಸಾಧಿಸುವವರಂತೆ ನಾವೆಲ್ಲ ಸೇರಿ ಸಾಹಸ ಮಾಡುವಾಗ ಗೇರುಬೀಜವೊಂದು ಸಿಡಿದು ಅದರ ಎಣ್ಣೆ ನನ್ನ ಕೈಗೆ ಹಾರಿ ಕಪ್ಪನೆಯ ಬೊಬ್ಬೆ ಬಂದಿದ್ದು.. ಅದರ ಕಲೆ ಇನ್ನೂ ಇದೆ. ಸಾಲೆತ್ತೂರಿನಲ್ಲಿ ನಾವಿದ್ದದ್ದು ಒಂದೇ ವರುಷವಾದರೂ ಈ ಇಡೀ ಜನ್ಮಕ್ಕಾಗುವಷ್ಟು ನೆನಪುಗಳು ಮೆರವಣಿಗೆ ಕಟ್ಟಿಕೊಂಡು ಧಾಪುಗಾಲು ಹಾಕುತ್ತ ಬರುತ್ತವೆ. ಸವಿ ಸವಿ ನೆನಪುಗಳು. ಅಲ್ಲಿ ನಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ, ಬಾವಿಯಿಂದಲೇ ಸೇದಿ ತರಬೇಕು. ಅದಕ್ಕಾಗಿ ಒಬ್ಬ ಆಳನ್ನು ಗೊತ್ತು ಮಾಡಿದ್ದರು ಅಪ್ಪ. ಆದರೆ ಅಮ್ಮನಿಗೆ ಅಡುಗೆಗೆ ಮತ್ತು ಕುಡಿಯಲು ತಾನೇ ಸೇದಿ ತರಬೇಕಿತ್ತು. ನಾನೂ ಅಮ್ಮನ ಹಿಂದೆ ಮುಂದೆ ಸುತ್ತುತ್ತಿದ್ದೆ ಬಾವಿಯ ಹತ್ತಿರ. ನನಗೆ ಬರಿಯ ಹನ್ನೊಂದು ವರ್ಷ ಆವಾಗ. ಹಾಗೊಂದು ದಿನ ಯಾರೋ ನೆಂಟರು ಬಂದಿದ್ದರು ಅಮ್ಮ ಅವರಿಗೆ ಕುಡಿಯಲು ನೀರು ಕೊಡುತ್ತ ನಮ್ಮ ಬಾವಿಯ ನೀರು ತುಂಬ ರುಚಿ., ಬಾವಿಯಿಂದ ಸೇದಿದ ಕೂಡಲೇ ಕುಡಿಯಬೇಕು ಅಮೃತವೇ ಅಂತೆಲ್ಲ ಹೊಗಳುವಾಗ.., ನಾನು ಯಾಕೆ ಈಗ ಹೋಗಿ ಬಾವಿಯಿಂದ ನೀರು ತರಬಾರದು..? ಅಮ್ಮ ಹೇಗೂ ಅವರ ಹತ್ತಿರ ಮಾತಾಡುತಿದ್ದಾರಲ್ಲ ಎಂದುಕೊಂಡು ಮೆತ್ತಗೆ ಕೊಡಪಾನ (ಬಿಂದಿಗೆ) ತೆಗೆದುಕೊಂಡು ಬಾವಿಯ ಹತ್ತಿರ ಹೋದೆ. ಅಮ್ಮ ಮಾಡಿದ ಹಾಗೆ ಹಗ್ಗದ ಕುಣಿಕೆಯನ್ನು ಕೊಡದ ಕತ್ತಿಗೆ ಸುತ್ತಿ ಎಳೆದೆ. ಅಮ್ಮನ ಜತೆ ಬಂದಾಗ ಒಂದೊಂದು ಸಲ ಇಷ್ಟು ಮಾಡಿ ನಿಧಾನಕ್ಕೆ ಬಾವಿಯೊಳಗೆ ಕೊಡವನ್ನು ಇಳಿಸುವ ಕೆಲಸ ಮಾಡುತ್ತಾ ಇದ್ದೆ. ಹಾಗಾಗಿ ಆ ಕೆಲಸ ಸುಲಭವಾಗಿ ನಡೆಯಿತು. ಕೊಡ ತುಂಬಿತು. ಇನ್ನೇನು ಎಳೆದರೆ ಆಯಿತು ಎಂದುಕೊಂಡು ಬಾವಿಕಟ್ಟೆಯಲ್ಲಿ ಕಾಲಿಡುವ ತ್ರಿಕೋಣಾಕಾರದ ಸಂಧಿಯಲ್ಲಿ ಕಾಲಿಟ್ಟು ಹಗ್ಗವನ್ನು ಎಳೆಯಲು ನೋಡಿದರೆ.. ಯ್ಯಪ್ಪಾ….!!! ಈಗೇನು ಮಾಡುವುದು…? ಹಗ್ಗ ಬಿಟ್ಟರೆ ಸೊಂಯ್ಯೆಂದು ಸೀದಾ ಬಾವಿಯೊಳಗೆ ಎಂಬುದು ಗೊತ್ತಿತ್ತು. ಏನು ಮಾಡುವುದಪ್ಪ ಈಗ…..??? ಅಲ್ಲಿಯೇ ಬಾವಿಯ ಪಕ್ಕದ ತಗ್ಗಿನಲ್ಲಿ ಮನೆ ರತ್ನಾಕರನದ್ದು… ಯೇ ರತ್ನಾಕರ ಅಂತ ಕೂಗಿದ್ದು ನನಗೇ ಕೇಳಿಸಲಿಲ್ಲ. ಪುನಹ ಜೋರಾಗಿ “ರತ್ನಾಕರ ……….” ಅಂದಾಗ “ಏನು?” ಅಂದಿದ್ದು ಕೇಳಿಸಿತು. “ಇಲ್ಲಿ ಬಾರಾ ಸ್ವಲ್ಪ” ಅಂದೆ. “ಎಲ್ಲಿಯಾ?” ಅಂದ. ಬಾವಿಯ ಹತ್ತಿರ ಅನ್ನುವುದರೊಳಗೆ.. ಒಂದೇ ಹಾರಿಗೆ ಬಂದ ರತ್ನಾಕರ ..ಪಾಪ! ಅವನಿಗೆ ನನ್ನನ್ನು ನೋಡಿ ನಗು. ಅವನ ನಗು ನೋಡಿ ನಂಗೆ ಕೋಪ ಬಂತು ..”ಬಾ ಹಗ್ಗ ಎಳಿ” ಅಂದೆ. “ನೀ ಯಾಕೆ ದೊಡ್ಡ ಜನದ ಹಾಗೆ ಬಂದದ್ದು? ” ಅಂದ. “ಯಾರಿಗೂ ಗೊತ್ತಿಲ್ಲ ನಾನು ಬಂದದ್ದು” ನಾನು ಹೇಳಿದೆ. ಸರಿ.. ಆದರೆ ನಂಗೆ ಕೂಡ ಒಬ್ಬನಿಗೆ ಹಗ್ಗ ಎಳೆಯುವುದಕ್ಕೆ ಆಗ್ಲಿಕ್ಕಿಲ್ಲ .. ಒಂದು ಕೆಲಸ ಮಾಡುವ.. ನೀನು ಹಗ್ಗ ಗಟ್ಟಿ ಹಿಡಕೊಂಡು ನಿಲ್ತಿಯಾ? ಅಂದ. ಹೂಂ… ಅಂದೆ. ಅವನು ಎಳೆದ, ನಾನು ಹಿಡಿದೆ… ಹಾಗಂತ ಅಂದುಕೊಂಡೆ..!! ಆದರೆ ಹಗ್ಗ ಸುಂಯ್…. ಎಂದು ಪುನಹ ಹಿಂದಕ್ಕೆ ಹೋಯಿತು. ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ದೊಡ್ಡವರನ್ನು ಕರೆಯೋಣ ಎಂದರೆ ಅವರಿಂದ ಬಯ್ಯಿಸಿಕೊಳ್ಳುವುದು ಯಾರು? ರತ್ನಾಕರನಿಗೆ ಒಂದು ಪ್ಲಾನ್ ಹೊಳೆಯಿತು ಎಂದು ಕಾಣುತ್ತದೆ… ಹಹ್ಹಹ್ಹಾ ಅಂತ ನಗುತಿದ್ದ. ನಾವಿಬ್ಬರೂ ಹಗ್ಗ ಹಿಡಿದುಕೊಂಡೇ ನಿಂತಿದ್ದೆವಲ್ಲ..? “ಏನು?” ಅಂದೆ. “ನೋಡು ನಾನು ಹಗ್ಗ ಎಳೆದುಕೊಂಡೇ ಅಲ್ಲಿವರೆಗೆ ಹೋಗ್ತಾ ಇರುತ್ತೇನೆ. ಕೊಡ ಮೇಲೆ ಬಂದಾಗ ಅದನ್ನು ಎತ್ತಿ ಕಟ್ಟೆ ಮೇಲೆ ಇಡುವುದು ನಿನ್ನ ಕೆಲಸ. ಆಗಬಹುದಾ?” ಎಂದ. ಆಗಬಹುದು ಅಂದೆ. ಅವನು ಗತ್ತಿನಿಂದ ಕಳೆದ ವಾರವಷ್ಟೇ ಸಾಲೆತ್ತೂರಿನ ಮೈದಾನದಲ್ಲಿ ನಡೆದ ಬಯಲಾಟದಲ್ಲಿ ಬಂದ ಭೀಮ ಗದೆಯನ್ನು ಹಿಡಿದುಕೊಂಡ ಹಾಗೆ ಬಾವಿಯ ಹಗ್ಗವನ್ನು ಹೆಗಲ ಮೇಲೆ ಇಟ್ಟುಕೊಂಡು ಆ ಕಡೆ ತಿರುಗಿ ಬೀಮನ ಹಾಗೆಯೇ ನಡೆದುಕೊಂಡು ಹೋಗುತಿದ್ದ. ನಾನು ಖುಷಿಯಿಂದ ಅವನನ್ನೇ ನೋಡುತ್ತ ನಗುತ್ತ ನಿಂತುಬಿಟ್ಟೆ. ಅವನು ಅಲ್ಲಿಂದಲೇ “ಬಂತಾ?” ಅಂತ ಕೇಳಿದ ಜೋರಾಗಿ. ನಾನು ತಿರುಗಿ ನೋಡುವಾಗ ಬಿಂದಿಗೆ ರಾಟೆಯ ಹತ್ತಿರ ಇದೆ.. ಹೇಯ್ ಎಂದೆ.. ಅವನು ಗಾಬರಿಯಾಗಿ ತಿರುಗುವುದರೊಳಗೆ.. ಹಗ್ಗ ಸರಸರನೇ ಸೀದಾ ಬಾವಿಯ ಒಳಗೆ.. ಈಗ ಹಗ್ಗದ ಈ ತುದಿಯ ಗಂಟು ರಾಟೆಯ ಹತ್ತಿರ. ಕಷ್ಟ ಪಟ್ಟು ಆ ಗಂಟನ್ನು ಹಿಡಿದು ಎಳೆಯಲು ನೋಡಿದರೆ ಹಗ್ಗ ಸಲೀಸಾಗಿ ಬರ್ತಾ ಇದೆ… ಬಾವಿಯ ಒಳಗೆ ಇಣುಕಿದೆವು ಇಬ್ಬರೂ…. ಕೊಡವಿಲ್ಲ ..!! ದೇವರೇ ಏನಪ್ಪ ಮಾಡುವುದು ಈಗ…? ನಂಗೆ ಭಯ, ಇವನೇನಾದರೂ ಓಡಿ ಹೋದರೆ ನಾನೊಬ್ಬಳೇ ಬಯ್ಯಿಸಿಕೊಳ್ಳಬೇಕಲ್ಲ. ಅವನೂ ಸ್ವಲ್ಪ ಭಯ , ಸ್ವಲ್ಪ ಕೋಪದಲ್ಲಿ “ನಿಂಗೆ ಹೇಳಿದೆ ನಾನು ದೊಡ್ಡವರನ್ನು ಕರೆಯೋಣ ಅಂತ.” … ” ನೀನ್ಯಾವಾಗ ಅಂದೆ ಹಾಗಂತ?” ಸ್ವಲ್ಪ ಜೋರಾಗೇ ಕೇಳಿದೆ. ನಮ್ಮ ಮಾತುಕತೆ ಕೇಳಿಯೋ ಏನೋ ರತ್ನಾಕರನ ಅಮ್ಮ ಬಾವಿಯ ಹತ್ತಿರ ಬಂದರು. “ಸತ್ತೇ….” ಅಂತ ಒಂದೇ ಉಸಿರಿಗೆ ರತ್ನಾಕರ ಎಲ್ಲಿ ಹಾರಿ ಹೋದನೋ ಗೊತ್ತಾಗಲಿಲ್ಲ. ನಾನು ನಡುಗುತ್ತ ಹೆದರುತ್ತ ಅವರ ಹತ್ತಿರ ಹೇಳಿದೆ.. ಹೀಗೆ ಹೀಗೆ ಮಾಡಿದೆವು.. ಹೀಗೆ ಹೀಗೆ ಆಯಿತು ಅಂತ. ಅವರು “ನಿಂಗೆ ಉಂಟು ಇವತ್ತು ಅಮ್ಮನಿಂದ ಪೂಜೆ” ಅಂತ ನಗುತ್ತ ಹೇಳುವಾಗ.. ನನಗೆ ಅಳು ತಡೆಯದೆ ಜೋರಾಗಿ ಅಳಲು ಶುರು ಮಾಡಿದೆ. ಆಗ ಅವರು ಅವರ ಗಂಡ ಆಚಾರಿಯನ್ನು ಕರೆದು… “ಇಗಾ… ಆ ಗರುಡ ಪಾತಾಳ (ಪಾತಾಳ ಗರಡಿ) ತೆಗೆದುಕೊಂಡು ಬನ್ನಿ ಇಲ್ಲಿ ಸ್ವಲ್ಪ” ಅಂದರು. ಅವರು ಆದಷ್ಟು ನಿಧಾನವಾಗಿ  ಕೈಯಲ್ಲಿ ಏನೋ ಹಿಡಿದುಕೊಂಡು ಬರುತಿದ್ದರು. ನಂಗೆ “ಅವರು ಏನು ತರಲು ಹೇಳಿದ್ದಿರಬಹುದು…? ಈಗ ಕೊಡವನ್ನು ಹೇಗೆ ತೆಗೆಯುತ್ತಾರಪ್ಪ? ಆದಷ್ಟು ಬೇಗ ಮನೆಯಲ್ಲಿ ಗೊತ್ತಾಗುವ ಮೊದಲೇ ತೆಗೆಯಬಾರದಾ? ” ಅಂತೆಲ್ಲ ಅನಿಸಲಿಕ್ಕೆ ಶುರುವಾಯಿತು. ಆಚಾರಿಯವರು ಕೂಡ.. “ಏನು ಅಮ್ಮ…. ಸಧ್ಯ ನೀವೆ ಬಾವಿಯೊಳಗೆ ಬೀಳಲಿಲ್ಲವಲ್ಲ ” ಅಂತ ಕೇಳುತ್ತ.. 3-4 ಕೊಕ್ಕೆಗಳಿರುವ ಒಂದು ಸಾಧನವನ್ನು ನಿಧಾನವಾಗಿ ಬಾವಿಕಟ್ಟೆ ಮೇಲಿಟ್ಟು ಹಗ್ಗವನ್ನು ಅದಕ್ಕೆ ಗಟ್ಟಿಯಾಗಿ ಕಟ್ಟಿ ಬಾವಿಯೊಳಗೆ ಬಿಟ್ಟರು. ಠಣ್… ಎಂದು ಸದ್ದಾಯಿತು. ಸ್ವಲ್ಪ ಪ್ರಯತ್ನದ ನಂತರ ಆಚಾರಿಯವರು ಹಗ್ಗ ಮೇಲೆ ಎಳೆದಾಗ ಆ ಕೊಕ್ಕೆಗಳು ಕೊಡದ ಬಾಯಿಯ ಒಳಗೆ ಸಿಕ್ಕಿಕೊಂಡಿದ್ದವು.  ಕೊಡವನ್ನು ಮೇಲಕ್ಕೆ ಎಳೆದು ತೆಗೆದುಕೊಟ್ಟು ಇನ್ನೊಂದು ಸಲ ಬರ್ತೀರಾ ಅಮ್ಮ ನೀರು ಸೇದಲಿಕ್ಕೆ? ಅಂತ ರತ್ನಾಕರನ ಅಮ್ಮ ತಮಾಷೆ ಮಾಡಿದರು. “ಈಗ ನೀವೆ ಒಂದು ಸಲ ನೀರು ಎಳೆದು ಕೊಡಿ” ಎಂದೆ. ಅವರು ಮನೆಯವರೆಗೆ ತಂದು ಕೊಡುತ್ತೇನೆ ಅಂತ ಹೇಳಿದರೂ ಕೇಳದೆ ನಾನೇ ಕಷ್ಟಪಟ್ಟು ಸೊಂಟದ ಮೇಲೆ ಇಟ್ಟುಕೊಂಡು ಮನೆಗೆ ಹೋದೆ. ಅಮ್ಮನಿಗೆ ಆಶ್ಚರ್ಯ… ಜತೆಗೆ ಖುಷಿ. “ಓ… ನನ್ನ ಮಗಳು ಭಾರಿ ಜಾಣೆ ” ಎಂದರು. ನನಗಷ್ಟೆ ಸಾಕು. ಎಲ್ಲ ಮರೆತು ಹೋಯಿತು. ಹೀಗೆ ಇನ್ನೂ ತುಂಬಾ ನೆನಪುಗಳು ದಬದಬನೇ ಬಂದು ಬಿದ್ದಾಗ.. ಯಾವಾಗ ದಸರಾ ರಜ ಬರುತ್ತದೋ… ಯಾವಾಗ ಊರಿಗೆ ಹೋಗ್ತೇವೋ ಅನ್ನಿಸಲಿಕ್ಕೆ ಶುರುವಾಯ್ತು. ಮಕ್ಕಳ ಪರೀಕ್ಷೆಗಳು ಮುಗಿದು, ರಜ ಶುರುವಾದಕೂಡಲೇ ೪-೫ ದಿನದ ಮಟ್ಟಿಗೆ ಊರಿಗೆ ಹೊರಟೆವು. ಎರಡನೇ ದಿನವೇ ನಮ್ಮ ಪ್ಲಾನ್ ಪ್ರಕಾರ ಸಾಲೆತ್ತೂರಿಗೆ ಪ್ರಯಾಣ..  ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಡುತ್ತ ದಾರಿ ಸಾಗುತಿತ್ತು. ಮಂಚಿ, ಕುಕ್ಕಾಜೆ ದಾಟಿ ಸಾಲೆತ್ತೂರಿನ ಮೈದಾನವೂ ಬಂತು. ಅಲ್ಲಿಂದ ಕೆಳಗೆ ಇಳಿದರೆ ನಾವಿದ್ದ ರೋಡು. ಎಲ್ಲವೂ ಬದಲಾಗಿದೆ. ಒಂದರದ್ದೂ ಗುರುತು ಸಹ ಸಿಗುತ್ತಿಲ್ಲ. ಬ್ಯಾಂಕ್ ಕಟ್ಟಡವೂ ಬೇರೆಯಾಗಿದೆ. ನಾವಿದ್ದ ಮನೆಯ ಜಾಗದಲ್ಲಿ ಎರಡು ಮಹಡಿಗಳ ತಾರಸಿ ಮನೆ. ಶಾಲೆಯ ಹತ್ತಿರ ಹೋದರೆ ಚಿಕ್ಕದಾಗಿದ್ದ ನಮ್ಮ ಶಾಲೆ ಈಗ ತುಂಬ ದೊಡ್ಡದಾಗಿ ಚಂದದ ತೋಟ ಎಲ್ಲವೂ ಇತ್ತು.. ಆದರೆ ನಮ್ಮ ನೆನಪಿನ ಗುರುತುಗಳು ಒಂದೂ ಇಲ್ಲದೆ ಬಹಳ ಬೇಜಾರಾಯ್ತು. ಸರಿ … ರತ್ನಾಕರನೂ ಬದಲಾಗಿರಬಹುದು ಅನಿಸಿತು. ಹಾಗೆ ಪುನಹ ನಾವಿದ್ದ ಮನೆಯ ಹತ್ತಿರ ಬಂದು ರತ್ನಾಕರನ ಮನೆಯ ಹತ್ತಿರ ಕಾರು ನಿಲ್ಲಿಸಿದ ಕೂಡಲೇ ಅಲ್ಲಿಯೇ ಇದ್ದ ವಯಸ್ಸಾಗಿದ್ದ ಗಂಡಸು ಕಣ್ಣಿಗೆ ಕೈ ಅಡ್ಡ ಇಟ್ಟು ಯಾರು….. ? ಅನ್ನುವ ಹಾಗೆ ನಮ್ಮನ್ನು ನೋಡುತ್ತಾ ನಿಂತರು. ನಮ್ಮ ಗುರುತು ಹೇಳಿದ ಕೂಡಲೆ ಅವರಿಗಾದ ಸಂತಸ ಅವರ ಮುಖದಲ್ಲಿ ಕಂಡು .. ಇವರಾದರೂ ಹಾಗೇ ಇದ್ದಾರಲ್ಲ.. ಎಂದು ಮನಸ್ಸಿಗೆ ಹಾಯೆನಿಸಿತು. ಅವರು ರತ್ನಾಕರನ ಅಪ್ಪ. ಸಂಭ್ರಮದಿಂದ ಅವರ ಹೆಂಡತಿಯನ್ನು ಕರೆದರು.. ಅವರಿಗೂ ಸ್ವಲ್ಪ ವಯಸ್ಸಾಗಿತ್ತು. ನಮ್ಮನ್ನೆಲ್ಲ ನೋಡಿ ಅವರಿಗೆ ಖುಷಿಯೊ ಖುಷಿ. ಅಮ್ಮ ಹೋದರೆಂದು ಕೇಳಿ ತುಂಬಾ ದುಃಖ ಪಟ್ಟರು. ರತ್ನಾಕರನ ಬಗ್ಗೆ ವಿಚಾರಿಸಿದಾಗ ಅವನು ವಿಶ್ವಕರ್ಮ ಬ್ಯಾಂಕ್ ನಲ್ಲಿ ಕೆಲಸ ಮಾಡುತಿದ್ದಾನೆ ಎಂದು ಕೇಳಿ ನಮಗೂ ಖುಷಿ ಆಯ್ತು. ಅವನಿಗೆ ಒಳ್ಳೆಯ ಹೆಂಡತಿ ಮತ್ತು ಮುದ್ದಾದ 2 ಮಕ್ಕಳು. ಮನಸ್ಸಿಗೆ ನೆಮ್ಮದಿ ಅನಿಸಿತು. ಹಾಗೆ ಹೀಗೆ ಮಾತಾಡಿ, ಅವರು ಪ್ರೀತಿಯಿಂದ ಕೊಟ್ಟಿದನ್ನು ತಿಂದು ಹೊರಟೆವು. ಅರ್ಧ ದಾರಿಗೆ ಬಂದ ಮೇಲೆ ನೆನಪು….. ಛೆ!!!!!! ಅವನ ಫೋನ್ ನಂಬರ್ ಆದ್ರೂ ಕೇಳಬೇಕಿತ್ತಲ್ಲ… ಅಥವ ನಮ್ಮ ನಂಬರ್ ಆದ್ರೂ ಕೊಟ್ಟು ಬರಬೇಕಿತ್ತು. ನನ್ನ ತಲೆ ಎಲ್ಲಿ ಬಾಡಿಗೆಗೆ ಕೊಟ್ಟಿದ್ದೆನೋ ಇನ್ನೂ ನೆನಪಿಗೆ ಬರುತ್ತಿಲ್ಲ.

ಲಲಿತ ಪ್ರಬಂಧ Read Post »

You cannot copy content of this page

Scroll to Top