ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮೇ ಕವಿತೆ

ಲಕ್ಷ್ಮೀ ದೊಡಮನಿ

ಮೇ ಕವಿತೆ

May Day - Wikipedia

ನೆನಪಾಗುವಿರಿ ನೀವಿಂದು ಬಂದಿದೆ ಮೇ ಒಂದು
ಹೊಗಳುವೆವು ನಾವಿಂದು ಬಂದಿದೆ ಮೇ ಒಂದು

ಬಸವರಸರ ತತ್ವದ ತೆರದಿ ಕೈಲಾಸದಲಿ ಇರುವಿರಿ
ಬರೆಯಿಸಿಕೊಳ್ಳುವಿರಿ ನೀವಿಂದು ಬಂದಿದೆ ಮೇ ಒಂದು

ಕಣ್ಣ ಗಾರೆ,ಬಸವಳಿದ ಮೊಗ,ತನು ಎಲುಬು ಹಂದರ
ಅರಿವಿಗೆ ಬರುವಿರಿ ನಮಗಿಂದು ಬಂದಿದೆ ಮೇ ಒಂದು

ನಿಮ್ಮನ್ನು ವಿಭಜಿಸಿ ದುಡಿಸಿಕೊಳ್ಳುವ ಧೂರ್ತರಿಂದ
ಅಣಗಿಸಿಕೊಳ್ಳುವಿರಿ ನೀವಿಂದುಬಂದಿದೆ ಮೇ ಒಂದು

ನಿಮ್ಮಕಾರ್ಯ,ತ್ಯಾಗ,ಬಲಿದಾನಗಳ ಸಂದರ್ಶನ ನಡೆದು
ಪ್ರೇರಣೆಯಾಗುವಿರಿ ನಮಗೆಂದು ಬಂದಿದೆ ಮೇ ಒಂದು

ಒಂದೇ ದಿನದ ಸ್ಮರಣೆ,ಆಚರಣೆ ಬೇಡ ‘ಚೆಲುವೆ’ ಅವರಂತೆ
ಕಾಯಕಯೋಗಿಯಾಗಲಿ ನಾವೆಂದೆಂದು ಬಂದಿದೆ ಮೇ ಒಂದು

**********

About The Author

1 thought on “ಕಾರ್ಮಿಕದಿನದ ವಿಶೇಷ-ಕವಿತೆ”

Leave a Reply

You cannot copy content of this page

Scroll to Top