ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಾತೃ ದೇವೋಭವ

Mother Daughter Sculpture, Mother Daughter Statue, Mother Daughter ...

ಸಂಮ್ಮೋದ ವಾಡಪ್ಪಿ

ದೇವ ಬಿತ್ತಿದ ಇಲ್ಲಿ ಎದ್ದು ನಿಲ್ಲಲೆಂದು
ಹಸಿರ ಚಿಗುರೊಡೆದು ಮೇಲೇಳಲೆಂದು
ಬಸಿರ ಭೂತಾಯಿಯ ಒಡಲ ಹೊರಬಂದು
ಉಸಿರ ಬೆಸೆದು ನಸು ನಗುವ ಬೀರಲೆಂದು

ಇದು ಜನುಮ ಅಗೋಚರ ಶಕ್ತಿಯಿಂದ
ಅಳುವ ದ್ವನಿಯ ಕೇಳುವ ತವಕದಿಂದ
ಹುಟ್ಟು ನವಮಾಸದ ತಪದ ದಾರಿಯಿಂದ
ಪಯಣ ಆ ಮಾತೆಯ ಲಾಲಿ ಹಾಡಿನಿಂದ

ರತ್ನವಾಗಲಿ ಎನುತ ತೊಟ್ಟಿಲ ತೂಗಿದಾಗ
ಮಂದಹಾಸದಿ ದೃಷ್ಟಿ ಬೊಟ್ಟು ಒತ್ತಿದಾಗ
ಸುಪಥವ ಹಿಡಿದು ನಡೆಸಲು ಹರಸಾಹಸ
ಯಶೋದೆಯ ಪರಿಶ್ರಮವೇ ಅವನ ವಿಕಾಸ

ಭವದ ದಾರಿಯಲಿ ತಂದು ನಿಲ್ಲಿಸಿದ ದಾತ
ಅವನು ನಿರ್ವಿಕಾರ,ಮಾತೆಯನಿಟ್ಟು ಮಾಡಿದ ಸಾಕಾರ
ಎರಡು ಬಿಂದು ನಡುವೆ ಬಹು ಏಳು ಬೀಳು
ಚಲಿಸು ಮುಂದೆ, ಒಳಿತು ಮಾಡು, ಅವಳು ಕೊಟ್ಟ ಬಾಳು

**********

About The Author

Leave a Reply

You cannot copy content of this page

Scroll to Top