ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆರೋಗ್ಯ ಸಹಾಯಕರ ಸೇವೆ

ಗುರುತಿಸುವ ಕಣ್ಣುಗಳಿಲ್ಲ

Poor healthcare behind 6 in 10 preventable deaths: Study, Europe ...

ಮಲ್ಲಿಕಾರ್ಜುನ ಕಡಕೋಳ

ಕೊರೊನಾ ಎಂಬ ಕರಾಳ ನೆರಳಿನಲ್ಲಿ ಯುದ್ಧೋಪಾದಿ ಕೆಲಸ ಮಾಡುತ್ತಿರುವವರು ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು. ಇವರನ್ನು ಹೆಲ್ತ್ ವಾರಿಯರ್ಸ್ ಎಂದೇ ಬಣ್ಣಿಸಿ ಎಲ್ಲ ಕಡೆಗೂ ಅವರ ಸೇವಾ ಬಾಹುಳ್ಯ ಕೊಂಡಾಡಿ ಗೌರವಿಸುವುದನ್ನು ನಿತ್ಯವೂ ಕಾಣುತ್ತಿದ್ದೇವೆ. ಇದು ಸಂತಸ ಪಡುವ ವಿಷಯವೇ. ಆದರೆ ಇದೇ ಸಂದರ್ಭದಲ್ಲಿ ಅದೇ ಕೊರೊನಾ ಯುದ್ಧ ಭೂಮಿಯೊಳಗೆ ಅಕ್ಷರಶಃ ರಣರಂಗದ ಯೋಧರಂತೆ ಕೆಲಸ ಮಾಡುತ್ತಿರುವ ಬಹು ದೊಡ್ಡದಾದ ಮತ್ತೊಂದು ಆರೋಗ್ಯ ಸಮುದಾಯವೇ ಇಲ್ಲಿದೆ ಎಂಬುದನ್ನು ನಾವು ಮರೆತಿದ್ದೇವೆ. ನಾವು ಮರೆತ ಆ ಸಮುದಾಯದ ಹೆಸರು ಆರೋಗ್ಯ ಸಹಾಯಕರು.

ಪ್ರಸ್ತುತ ಕೊರೊನಾ ಸಮರ ಭೂಮಿಯಲ್ಲಿ ಆರೋಗ್ಯ ಇಲಾಖೆಯ ಹದಿನೈದು ಸಾವಿರ ಮಹಿಳಾ ಮತ್ತು ಆರೇಳು ಸಾವಿರ ಪುರುಷ ಆರೋಗ್ಯ ಸಹಾಯಕರು ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಜನಾರೋಗ್ಯ ಕಾಪಾಡುವ, ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ಹುಟ್ಟು, ಬೆಳವಣಿಗೆ, ರೋಗ ಹರಡುವಿಕೆಯ ವಿವಿಧ ಹಂತಗಳ ಕುರಿತಾಗಿ ಮೂರು ವರ್ಷಗಳ ಅವಧಿಯ ನಿಪುಣ ತರಬೇತಿಯನ್ನು ಇವರು ಸರಕಾರದ ತರಬೇತಿ ಕೇಂದ್ರಗಳಲ್ಲಿ ಪಡೆದಿರುತ್ತಾರೆ. ಐದುಸಾವಿರ ಜನಸಂಖ್ಯೆಗೆ ಓರ್ವ ಮಹಿಳಾ, ಓರ್ವ ಪುರುಷ ಆರೋಗ್ಯ ಸಹಾಯಕರನ್ನು ಸರಕಾರ ಜನಾರೋಗ್ಯ ಸೇವಾ ರಕ್ಷಣೆಗೆಂದು ನೇಮಿಸಿರುತ್ತದೆ. ಅದು ಎಂದಿನಂತೆ ಅವರ ದಿನನಿತ್ಯದ ರುಟೀನ್ ಡ್ಯೂಟಿ. ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಂದು ಹಳ್ಳಿಗಳ ಮನೆ ಮನೆ ಭೆಟ್ಟಿಮೂಲಕ ಸೇವೆಮುಟ್ಟಿಸುವಲ್ಲಿ ಇವರು ಕರ್ತವ್ಯನಿರತರಾಗಿರುತ್ತಾರೆ. ಹೀಗಾಗಿ ಸಾಂಕ್ರಾಮಿಕ ರೋಗಗಳ ಪಿಡುಗಿನ ತೀವ್ರತೆ ಬಗ್ಗೆ ಆರೋಗ್ಯ ಸಹಾಯಕರಿಗೆ ಅಗತ್ಯ ಮಾಹಿತಿ, ಜ್ಞಾನ ಇರುವುದು ಸಹಜ.

ಈ ಆರೋಗ್ಯ ಸಹಾಯಕರು ಈಗ ಹಳ್ಳಿ, ನಗರ, ಪಟ್ಟಣಗಳೆನ್ನದೇ ತಳಮಟ್ಟದಲ್ಲಿ ಮನೆ, ಮನೆ ಭೆಟ್ಟಿ ಕೊಟ್ಟು ಕೊರೊನಾ ಸಮೀಕ್ಷೆ ಮಾಡುವ ಕಾರ್ಯದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಜೀವದ ಹಂಗು ತೊರೆದು ಹಗಲು ರಾತ್ರಿಗಳನ್ನು ಲೆಕ್ಕಿಸದೇ ನಿಸ್ಪೃಹ ಕೆಲಸವಲ್ಲ ಸೇವೆಯನ್ನೇ ಮಾಡುತ್ತಿದ್ದಾರೆ. ಕೊರೊನಾ ರೋಗದ ತಪಾಸಣೆ, ಕ್ವಾರಂಟೈನ್ ಡ್ಯೂಟಿ, ಹಾಟ್ ಸ್ಪಾಟ್ ಡ್ಯೂಟಿ, ಚೆಕ್ ಪೋಷ್ಟ್, ರಾಷ್ಟ್ರೀಯ ಹೆದ್ದಾರಿ ಡ್ಯೂಟಿ… ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ರಿಸ್ಕಗಳ ನಡುವೆ ವಯಕ್ತಿಕ ರಕ್ಷಾಕವಚ(ಪಿ.ಪಿ.ಇ. ಕಿಟ್)ಗಳಿಲ್ಲದೇ ಗಲ್ಲಿ, ಮೊಹಲ್ಲಾಗಳೆನ್ನದೇ, ತಮ್ಮ ಕುಟುಂಬಗಳ ಹಿತಾಸಕ್ತಿ ಮರೆತು ಕೊರೊನಾ ನಿರ್ಮೂಲನಾ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಮಂದಿ ಕರ್ತವ್ಯನಿರತ ಆರೋಗ್ಯ ಸಹಾಯಕರು ಸಾರ್ವಜನಿಕರ, ಪೋಲೀಸರ ಲಾಠಿ ಏಟುಗಳಿಗೆ ತಮ್ಮ ಕೈ ಕಾಲುಗಳನ್ನು ಬಲಿ ಕೊಟ್ಟಿದ್ದಾರೆ. ಉದಾ: ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆಯ ಸೇಡಂ, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಘಟನೆಗಳು.

ಇದು ಆರೋಗ್ಯ ಸಹಾಯಕರ ಪಾಲಿನ ವರ್ತಮಾನದ ಕೊರೊನಾ ಯುದ್ಧ ಮಾತ್ರವಲ್ಲ. ಶತಮಾನದಷ್ಟು ಹಳತಾದ ಸಾಮಾಜಿಕ ಪಿಡುಗುಗಳಾಗಿಯೂ ಮನುಷ್ಯ ಕುಲವನ್ನು ಕಾಡಿದ, ಮನುಷ್ಯರ ಅಂಗವಿಕಲತೆಗೆ ಕಾರಣವಾಗುತ್ತಿದ್ದ ಸಿಡುಬು, ಕುಷ್ಠ, ನಾರುಹುಣ್ಣು, ಪೋಲಿಯೊ ಹೀಗೆ ಹತ್ತಾರು ಭಯಾನಕ ಮತ್ತು ಸಾಮಾಜಿಕವಾಗಿ ಕಳಂಕ ಭಾವಗಳ ಮೊತ್ತವೇ ಆಗಿದ್ದ ಅನೇಕ ಸಾಂಕ್ರಾಮಿಕ ರೋಗಗಳ ನಿರ್ಮೂಲನೆಯಲ್ಲಿ ಆರೋಗ್ಯ ಸಹಾಯಕರ ಪಾತ್ರ ಅಕ್ಷರಶಃ ಪ್ರಾತಃಸ್ಮರಣೀಯ. ಹೀಗೆ ನೂರೈವತ್ತಕ್ಕೂ ಹೆಚ್ಚು ವರ್ಷಗಳಿಂದ ಜನಾರೋಗ್ಯ ರಕ್ಷಣಾ ಕಾರ್ಯದಲ್ಲಿ ತಮ್ಮ ಆರೋಗ್ಯದ ಕಡೆಗೂ ಹೆಚ್ಚು ನಿಗಾವಹಿಸದೇ ಆರೋಗ್ಯ ಸಹಾಯಕರು ನಿರಂತರವಾಗಿ ವೈರಸ್, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿದ ಇತಿಹಾಸವಿದೆ. ಅದೇರೀತಿ ಇವತ್ತು ಸೈನಿಕರೋಪಾದಿಯಲ್ಲಿ ಕೊವಿಡ್-19 ರ ವಿರುದ್ಧ ಹೋರಾಡುತ್ತಿದ್ದಾರೆ. ಈ ಆರೋಗ್ಯ ಸಹಾಯಕ ಸೇನಾನಿಗಳು ಯಾವೊಂದು ಪ್ರಶಸ್ತಿ, ಸನ್ಮಾನ, ಶ್ಲಾಘನೆಗಳ ನಿರೀಕ್ಷೆಗಳಿಲ್ಲದೇ ಇಲಾಖೆಯ ಹುಟ್ಟಿನಿಂದಲೂ ತಮ್ಮ ಸೇವಾ ಅಸ್ಮಿತೆಯನ್ನು ಕಾಪಿಟ್ಟುಕೊಂಡಿದ್ದಾರೆ.

ಇಂಥವರ ಕುರಿತು ಹೊಗಳಿಕೆ, ಗೌರವ, ಸನ್ಮಾನಗಳು ಒತ್ತಟ್ಟಿಗಿರಲಿ. ಮಾಧ್ಯಮಗಳಿಂದಾಗಲಿ, ಮಂತ್ರಿಗಳಿಂದಾಗಲಿ ಸಣ್ಣದೊಂದು ಶಹಬ್ಬಾಶ್ ಎನ್ನುವ ಸ್ಪೂರ್ತಿ, ಪ್ರೋತ್ಸಾಹದಾಯಕ ಮಾತುಗಳು ಕೇಳಿ ಬರುತ್ತಿಲ್ಲ. ಆರೋಗ್ಯ ಸಹಾಯಕರ ಸಮರೋಪಾದಿ ಸೇವಾ ಕೈಂಕರ್ಯ ಗುರುತಿಸುವ ಕಣ್ಣುಗಳೇ ಮಾಯವಾದವೇ? ಆರೋಗ್ಯ ಇಲಾಖೆ ಎಂದೊಡನೆ ಮಂತ್ರಿಗಳಿಗೆ ಮತ್ತು ಮಾಧ್ಯಮಗಳಿಗೆ ಥಟ್ಟಂತ್ ಕಾಣಿಸೋದು ಡಾಕ್ಟರ್ಸ್ ಮತ್ತು ನರ್ಸಸ್ ಹೆಚ್ಚೆಂದರೆ ಕಂಪೌಂಡರ್ಸ್. ಈ ಕಾಣುವಿಕೆ ನಾಲ್ಕು ಗೋಡೆಗಳ ನಡುವಿನ ಆಸ್ಪತ್ರೆಯ ಜಗತ್ತು. ಗುಡ್ಡಗಾಡು, ಹಳ್ಳಿ, ಮೊಹಲ್ಲಾ, ನಗರ, ಪಟ್ಟಣಗಳಲ್ಲಿ ಎಲ್ಲೆಲ್ಲಿ ಮನುಷ್ಯರು ವಾಸವಾಗಿರುವರೋ ಅಲ್ಲೆಲ್ಲ ಆರೋಗ್ಯ ಸಹಾಯಕರ ಸೇವಾ ಕೈಂಕರ್ಯ ನಾಡಿನ ಸಮಸ್ತ ಸಮುದಾಯಕ್ಕೆ ಸಲ್ಲುತ್ತಲಿದೆ.

ಆದರೆ ಇತ್ತೀಚಿನ ದಿನಮಾನಗಳಲ್ಲಿ (೨೦೦೫ ರಿಂದ) ಹೊರಗುತ್ತಿಗೆಯಾಗಿ ನೇಮಕಗೊಂಡಿರುವ ಆಶಾ ಕಾರ್ಯಕರ್ತೆಯರು ಮಾತ್ರ ಸಮುದಾಯದ ನಿಕಟ ಸಂಪರ್ಕದ ಫ್ರಂಟ್‌ಲೈನ್ ಸೇನಾನಿಗಳು ಎಂಬಂತೆ ಮಾಧ್ಯಮಗಳಲ್ಲಿ, ಪ್ರಭುತ್ವದ ಕಣ್ಣುಗಳಲ್ಲಿ ಬಿಂಬಿತವಾಗಿ ಆರೋಗ್ಯ ಸಹಾಯಕರ ಚರಿತ್ರಾರ್ಹ ಸೇವಾ ಕೈಂಕರ್ಯವು ನೇಪಥ್ಯಕ್ಕೆ ಸರಿದಿರಬಹುದು.? ಕಾರಣ ಏನೇ ಇರಲಿ ಆರೋಗ್ಯ ಸಹಾಯಕರು ಸಲ್ಲಿಸುತ್ತಿರುವ ಗುಣಮಟ್ಟದ ಸೇವೆಗಳನ್ನು ಮಾಧ್ಯಮಗಳು, ಮಂತ್ರಿ ಮಹೋದಯರು ಗುರುತಿಸದಿದ್ದರೆ ಹೇಗೆ? ಆರೋಗ್ಯ ಇಲಾಖೆಯ ಬಹುದೊಡ್ಡ ಸೇವಾವಲಯ ಕುರಿತು ಯಾಕೆ ಮೀನಾ ಮೇಷ…?

ಇದೇ ಕಾಲಘಟ್ಟದಲ್ಲಿ ಆರೋಗ್ಯ ಮಂತ್ರಿಗಳು ಶುಶ್ರೂಷಕರ ಸೇವೆಮೆಚ್ಚಿ ಭಕ್ಷೀಸೆಂಬಂತೆ “ಶುಶ್ರೂಷಾಧಿಕಾರಿ” ಎಂದು ಅವರ ಪದನಾಮ ಬದಲಾವಣೆ ಮಾಡುವ ಬೇಡಿಕೆ ಕುರಿತು ಸುದ್ದಿ ಕೇಳಿಬಂದ ಮರುದಿನವೇ ಶುಶ್ರೂಷಾ ದಿನಾಚರಣೆಯಂದು ಸರ್ಕಾರ “ಶುಶ್ರೂಷಾಧಿಕಾರಿ” ಎಂದು ಪದನಾಮ ಬದಲಾಯಿಸಿ ಆದೇಶ ಹೊರಡಿಸಿದೆ. ಆದರೆ ಕಳೆದೊಂದು ವರ್ಷದಿಂದ ” ಸಮುದಾಯ ಆರೋಗ್ಯಾಧಿಕಾರಿ ” ಎಂದು ತಮ್ಮ ಪದನಾಮ ಬದಲಾವಣೆ ಮಾಡುವ ಕುರಿತು ಆರೋಗ್ಯ ಸಹಾಯಕರು ಬೇಡಿಕೆ ಸಲ್ಲಿಸಿದ್ದರೂ ಆರೋಗ್ಯ ಮಂತ್ರಿಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ತೋರಿಲ್ಲ. ಹೀಗಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿರುವ ಆರೋಗ್ಯ ಸಹಾಯಕರಿಗೆ ತಾವು ಸಲ್ಲಿಸುತ್ತಿರುವ ಸೇವೆಗಳ ಕುರಿತಾಗಲಿ ಅವರ ಅಸ್ತಿತ್ವ ಕುರಿತಾಗಲಿ ಪ್ರಭುತ್ವಕ್ಕೆ ಯಾಕಿಂಥ ಉದಾಸೀನ ಎಂಬುದು ಅನಾರೋಗ್ಯದ ಪ್ರಶ್ನೆಯಾಗಿ ಕಾಡತೊಡಗಿದೆ.

**********

About The Author

20 thoughts on “ಪ್ರಸ್ತುತ”

  1. ನಮ್ಮ ನಿಸ್ವಾರ್ಥ ಸೇವೆಯು ಎಲೆಮರೆಯ ಕಾಯಂತೆ.. ಗುರುತಿಸಲು ವಿಫಲವಾಗಿದೆ ..

  2. Magu alde thaayi haalu kodolla alva. Vyavastheya kannu terasabeku. Asha workerge hasivide, ottagthare… horata madthare…. neevu madbeku…ilakeyalli kelasa maadtha iro ella cadre name change aythu… adre badluck health worker anthane karithare.. enri idu.

  3. ನಮ್ಮ ವೃಂದದ ಸಂಘ ಮತ್ತು ಸಂಘಟನೆಗಳು ಬಿಗಿಯಾಗಿಲ್ಲ. ಅಸಹಾಯಕರಾಗಿದ್ದೇವೆ. 300 ಪ್ರೋತ್ಸಾಹಧನ ಒಂದು ಹಳ್ಳಿಯಲ್ಲಿ ಕೆಲಸ ಮಾಟುವ ಆಶಾ.ಕಾ.ಕರ್ತೆಯರಿಗೆ. ಆದರೆ ನಾವು 6 rind 8 ಹಳ್ಳಿಗಳ ಕೆಲಸ ಮಾಡಿದರೂ ಉಪಯೋಗವಿಲ್ಲ……‌ ಪದನಾಮ, ಸರಿಸಮಾನ ವೇತನ ಎಲ್ಲವೂ ಕನಸಷ್ಟೆ… ಮುಂದೊಂದು ದಿನ ನಮ್ಮ ಅಸ್ತಿತ್ವವೇ ಇಲ್ಲದಂತಾಗುವುದು ಖಂಡಿತ ನಿಜ.

  4. ನಮ್ಮ ವೃಂದದ ಸಂಘ ಮತ್ತು ಸಂಘಟನೆಗಳು ಬಿಗಿಯಾಗಿಲ್ಲ. ಅಸಹಾಯಕರಾಗಿದ್ದೇವೆ. 3000 ಪ್ರೋತ್ಸಾಹಧನ ಒಂದು ಹಳ್ಳಿಯಲ್ಲಿ ಕೆಲಸ ಮಾಟುವ ಆಶಾ.ಕಾ.ಕರ್ತೆಯರಿಗೆ. ಆದರೆ ನಾವು 6 rind 8 ಹಳ್ಳಿಗಳ ಕೆಲಸ ಮಾಡಿದರೂ ಉಪಯೋಗವಿಲ್ಲ……‌ ಪದನಾಮ, ಸರಿಸಮಾನ ವೇತನ ಎಲ್ಲವೂ ಕನಸಷ್ಟೆ… ಮುಂದೊಂದು ದಿನ ನಮ್ಮ ಅಸ್ತಿತ್ವವೇ ಇಲ್ಲದಂತಾಗುವುದು ಖಂಡಿತ ನಿಜ.

    1. Chandrashekhar G

      Since from last 25th March we are all working day and night even on Sundays also.male staff working in tollgate overnight.No body recognized this . This is very ridiculous.

  5. ಸರ್ ನಾನು ಸತತವಾಗಿ ಹೈವೇ ಚೆಕ್ ಪೋಸ್ಟ್ ನಲ್ಲಿ ಕೋವಿಡ್ 19ಕೆಲಸ ಮಾಡಿದೆ ನಮಗೆ ಯಾವುದೇ ಸೆಲ್ಫ್ ಪ್ರೊಟೆಕ್ಷನ್ ಇಲ್ಲದೆ 2ತಿಂಗಳು ನಾವು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದರು ನಮಗೆ ಯಾವುದೇ ಇಲಾಖೆಯಿಂದ ಊಟ. ವಾಗಲಿ ತಿಂಡಿ ಯಾಗಲಿ ತಂದು ಕೊಡಲಿಲ್ಲ ನಮ್ಮ ಅಧಿಕಾರಿಗಳು ಬಂದ್ರು ಹೋದ್ರು ಯಾರು ಕೂಡಾ ನಿಮ್ಮ ಕೆಲಸ ಶ್ಲಾಘನಿಯ ಎಂದು ಕೊಂಡಾಡಲಿಲ್ಲ ಇವತ್ತು ನನಗೆ 45 ಹಳ್ಳಿ 21ಸಾವಿರ ಜನಸಂಖ್ಯೆ ಇದ್ದು ನಮ್ಮಲ್ಲಿ ಎಷ್ಟೋ ನನ್ನ ಸಹದ್ದೋಗಿ ಮಿತ್ರರು ಕೆಲಸ ಮಾಡುತ್ತಿದ್ದಾರೆ ಹಗಲು ರಾತ್ರಿ ಎನ್ನದೆ ನಮ್ಮ ಕೆಲಸ ಅಧಿಕಾರಿಗಳ ಹೆಸರು ನಮ್ಮನ್ನು ಗುರ್ತಿಸುವವರು ಯಾರು ಇಲ್ಲಾ ಯಾಕೆ ನನ್ನ ಮಿತ್ರ ಚೆಕ್ ಪೋಸ್ಟ್ ಕೆಲಸ ನಿರವಹಿಸಿ ಕ್ವಾರೆಂಟೈನ್ ಆದ್ರೂ ಅವರಿಗೆ ಯಾವ್ ಅಧಿಕಾರ ಸಹ ಸಾಂತ್ವನ ಹೇಳ್ಳಿಲ್ಲ ತುಂಬಾ ಬೇಜಾರು ಆಯಿತು ಏನು ಕೆಲಸ ಮಾಡದವರು ಅಧಿಕಾರಿಗಳಾಗಿ ಪರಿವೇರ್ತನೆ ಯಾಗುತ್ತಿದ್ದಾರೆ ಆದರೆ ನಾವುಗಳು ಅದೆ ಸಹಾಯಕರು ಎಂದು ನೊಂದ ಸಹಾಯಕ

  6. ದನ್ಯವಾದಗಳು, ಆಶಾ ಕಾರ್ಯಕರ್ತರು ಇಲ್ಲದೇ ಇದ್ದಾಗ ಆರೋಗ್ಯ ಇಲಾಖೆಯಲ್ಲಿ ಯಾವ ಫೀಲ್ಡ್ ಲೆವೆಲ್ ಡ್ಯೂಟಿ ಆಗೇ ಇಲ್ವಾ ಯಾವ ರೋಗಗಳು ನಿರ್ಮೂಲನೆ ಆಗೇ ಇಲ್ವಾ ಎಷ್ಟೋ ವರ್ಕೆರ್ ಮಕ್ಕಳನ್ನು ಊರಿಗೆ ಕಳಿಸಿ ಫೀಲ್ಡ್ ಡ್ಯೂಟಿ ಮಾಡ್ತಾ ಇದಾರೆ 1 ಆರೋಗ್ಯ ಕಾರ್ಯಕರ್ತರು ಹಳ್ಳಿಗಲ್ಲಿ 5ರಿಂದ 10ಸಾವಿರ, ಪಟ್ಟಣದಲ್ಲಿ 50 ಸಾವಿರ ಇಂಧ 1ಲಾಕ್ ಜನಸಂಖ್ಯೆ ಗೆ ಕೆಲಸ ಮಾಡ್ತಾ ಇದಾರೆ, 1ರಿಂದ 2 ಸಾವಿರ ಕೆಲಸ ಮಾಡೋ ಇತ್ತಿಚೆಗೆ ಬಂದಿರೋ, ರೋಡ್ ಲಿ ಸರ್ಕಾರಕ್ಕೆ ಹಿನಾಯವಾಗಿ ಬೈದಿರೊ ಆಶಾ ಕಾರ್ಯಕರ್ತೆ ಎಲ್ಲರ ಕಣ್ಣಿಗೆ ಕಾಣಿಸ್ತಾರೆ, ಅದೇ ನಮ್ಮ್ ವರ್ಕೆರ್, ಕೋವಿಡ್ ಲಿ ಎಲ್ಲಿ positive ಬಂದ್ರು ಅಲ್ಲಿ ಡ್ಯೂಟಿ ರಿಪೋರ್ಟ್ ರಿಸ್ಕ್ ತಗೋತಾ ಇರೋ ನಮ್ಮ ವರ್ಕೆರ್ ಕಾಣಿಸೋಲ್ಲ, staff ನರ್ಸ್ ಅಧಿಕಾರಿ ಆದ್ರೂ ಕುಶಿ ಪಡೋಣ, ಆದ್ರೆ ನಾವೇನು ನಮ್ಮ ಅಸ್ತಿತ್ವ ಏನು, ನಿಜವಾಗ್ಲೂ ನಮ್ಮ ವ್ರಂದದವರಿಗೆ ಬೆಲೆ ಇದೆಯಾ ಯಾರು ಏನಾದ್ರು ಫೀಲ್ಡ್ ಲಿ ಔಟ್ ಬ್ರೇಕ್ ಆದ್ರೆ ನಾವೇ ಕಾರಣ ಡ್ಯೂಟಿ ಮಾಡಿಲ್ಲ ಅಂತ ಅದೇ ಏರಿಯಾ ಚೆನಾಗಿದ್ರೆ ಆಶಾ ಕಾರಣ ಎಂಥ ವಿಚಿತ್ರ, ಆದ್ರೂ ಇದು ಸತ್ಯ ಮುಂದೆ ಇದು ಎಲ್ಲಿಗೆ ಹೋಗಿ ನಿಲ್ಲುತೊ ಏನೋ,

  7. ಪ್ರೀತಿಯ ಸ್ನೇಹಿತರೆ, ಆತ್ಮೀಯ ಆರೋಗ್ಯ ಸಹಾಯಕ (health worker) ಎಂದೇ ಕರೆಸಿಕೊಳ್ಳುವ ನಾವು ನಮ್ಮ ಸಂಘಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಯಾಕೆಂದರೆ ಸಂಘಗಳ ಅಧ್ಯಕ್ಷ , ಸದಸ್ಯ ಇವರೆಲ್ಲ ಕೇವಲ ನಾವು ಒತ್ತಡ ಹೇರಿದಾಗ ಮಾತ್ರ ಮುಷ್ಕರ ಅಂತ ಮುಂದೆ ಬಂದು, ಅವರಿಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಧ್ಯಕ್ಷ ಮತ್ತು ಇಬ್ಬರು ಸದಸ್ಯರನ್ನು ಮಾತ್ರ ವೈಯುಕ್ತಿಕ ವಾಗಿ ಮಾತನಾಡಲು ಕರೆಸಿಕೊಳ್ಳುತ್ತಾರೆ, ಗೊತ್ತಲ್ಲ ಬೆಳಗಾಂ ನಲ್ಲಿ NPS ಮುಷ್ಕರದ ಫಲಿತಾಂಶ ಇದಿಷ್ಟು ಸಾಕು ಉದಾಹರಣೆಗೆ. ನಂತರದಲ್ಲಿ ASHA ರವರನ್ನ ಮುಂದಿಟ್ಟು ಈ ಬೇಡಿಕೆ ಇಟ್ಟರೆ ಸರಿಯಲ್ಲ ನೇರವಾಗಿ ವೈದ್ಯರು, ಸ್ಟಾಫ್ ನರ್ಸ್, ಆಪ್ತಲ್ಮಿಕ್ ಅಸಿಸ್ಟೆಂಟ್ ,ಫಾರ್ಮಸಿಸ್ಟ್, ಮತ್ತು ಇತರ ವೃಂದಾದವರು ನಂತರದಲ್ಲಿ ಆಶಾ ಕಾರ್ಯಕರ್ತೆಯರು ಇವರ ಚಿತ್ರಣಗಳನ್ನು ವಿಡಿಯೋ ತುಣುಕು ತಯಾರಿಸಿ ಸಿದ್ಧಪಡಿಸಿದ ತುಣುಕು ಮತ್ತು ಈ ಎಲ್ಲಾ ವೃಂದಾದವರ ನಿಜವಾದ ಕಾರ್ಯವೈಖರಿ ಯನ್ನು ದಾಖಲೆ ಸಮೇತ ಪಬ್ಳಿಕ್ ಟಿವಿ ರಂಗನಾಥ್ ಗೆ ರಿಪೋರ್ಟ್ ಕೊಡೋಣ ಅಥವಾ ಪ್ರತಿನಿತ್ಯ ಬರುವ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಯಾರಾದರೂ ಪರಿಣಿತರು ಮೊದಲೇ ಪೀಠಿಕೆ ಸಿದ್ದಪಡಿಸಿ ಅವರಿಗೆ ವಿಷಯ ತಿಳಿಸಿದಲ್ಲಿ ಇದಕ್ಕೆ ಪ್ರತಿಯಾಗಿ ನಮ್ಮ ಈ ಎಲ್ಲಾ ಸಂಕಷ್ಟಕ್ಕೆ ಒಂದು ನಾಂದಿ ಹಡಬಹುದೇ ವಿನಹ ಯಾವುದೇ ಅಧಿಕಾರಿ, ರಾಜಕಾರಣಿಗಳು ಇದಕ್ಕೆ ಸ್ಪಂದಿಸುವುದಿಲ್ಲ. ಆತ್ಮೀಯ ಗೆಳೆಯರೇ, ಹಾಗೂ ನನ್ನ ಸಹೋದರಿಯರೆ ಇದೊಂದು ವಿಚಾರ ತಿಳಿದುಕೊಳ್ಳಿ ನಮ್ಮ ಆರೋಗ್ಯ ಸಹಾಯಕ ವೃಂದದವರು ನಮ್ಮಲ್ಲೇ ಒಬ್ಬರಿಗೊಬ್ಬರು ದ್ವೇಷ ಕಾರುತ್ತೀರಿ ಆದರೆ ವಿಷಾದವೆಂದರೆ ಸಿಸ್ಟರ್ಗಳು ಬ್ರದರ್ಗಳು ಎಂದೇ ಸಂಭೋದಿಸುವುದು ಸರಿಯಲ್ಲ, ತಾಲ್ಲೂಕು ಮಾಸಿಕ ಸಭೆಯಲ್ಲಿ, ಜಿಲ್ಲಾ ಸಭೆಯಲ್ಲಾಗಲಿ ಯಾವಾಗಲೂ ಕೇಳಿಬರುವ ಮಾತು ಒಂದೇ ಬ್ರದರ್ಗಳು ನಮಗೆ ಯವುದರಲ್ಲಿಯೂ ಸಹಾಯ ಮಾಡಿಲ್ಲ. ಮೊದಲು ಈ ಎಲ್ಲಾ ತೊಡಕುಗಳನ್ನು ಬಿಟ್ಟರೆ ಮಾತ್ರ ಯಾರದರೊಬ್ಬ ನಮ್ಮಲ್ಲೇ ಸುಭಾಶ್ಚಂದ್ರ ಬೊಸ್ ಅಥವಾ ಓಬವ್ವ ತಯಾರಗಬಹುದು. ಗೆಳೆಯರೇ ತಿಳಿಯದೆ ಇಷ್ಟು ವರ್ಷಗಳ ನೋವನ್ನು ಅನುಭವಿಸಿರುವ ನಿಮ್ಮವ.

  8. ಅಂಬುಲೆನ್ಸ್ ವಾಹನ ಚಾಲಕ ರನ್ನು ಮರೆತೇ ಬಿಟ್ಟರೆ ಹೇಗೆ ಸರ್.

Leave a Reply

You cannot copy content of this page

Scroll to Top