ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವ್ವ

Mother and Child Sculpture. Would be a beautiful urn xo | Sculpture

ಲಕ್ಷ್ಮಿ ದೊಡಮನಿ

ನಮ್ಮನೆ ಮುತ್ತೈದಿಯಾದಾಕಿ ಅವ್ವ ನೀನಂದ್ರ ನನ್ಜೀವ
ಅಪ್ಪನ ಅರ್ಧಾಂಗಿಯಾದಾಕಿ
ಅವ್ವ ನೀನಂದ್ರ ನನ್ಜೀವ

ಚಳಿಗಾಲದಾಗ ಸೂರ್ಯಾನು ವ್ಯಾಳಿ ಮೀರ್ತಾನ ಆದ್ರ
ಹೊತ್ತೀಗ ಕೈತುತ್ತಿಡುವಾಕಿ
ಅವ್ವ ನೀನಂದ್ರ ನನ್ಜೀವ

ನನ್ನ ಚಿಕ್ಕಂದನ್ನ ಚಿನ್ನದ ಚಣಗಳಿಂದ ಹೆಣಿದು
ಒಲವು ಸುರಿಸಿದಾಕಿ
ಅವ್ವ ನೀನಂದ್ರ ನನ್ಜೀವ

ಜೇನುಗೂಡಿನ ಛಾವಣಿ ನಿಸರ್ಗ
ಕೋಪಕ ನಡುಗಿದ್ರೇನ ಸೆರಗು ಅಲ್ಲಾಡಿಸದಾಕಿ
ಅವ್ವ ನೀನಂದ್ರ ನನ್ಜೀವ

ಕಾಡೋ ಒಲಿ,ಉರಿಸೋ ಹೊಗಿ, ಅಳಿಸೋ ಬಡತನವ
ಸೋಲಿಸಿ ನಗುವಾಕಿ
ಅವ್ವ ನೀನಂದ್ರ ನನ್ಜೀವ

ಊಟದ ನಡುವ ಗುಟುಕ
ಅಂಬಲಿ ಕುಡಿದಾಂಗ ಸವಿಸವಿ ಮಾತಾಡಾಕಿ
ಅವ್ವ ನೀನಂದ್ರ ನನ್ಜೀವ

ಅಡುಗಿ ಮಾಡಾಗ ಕತಿ ಹೇಳಿ
ಒಳಮನಸ್ಸಿಗ ಕೈಹಾಕಿ ಮೊದಲ ಮೇಷ್ಟಾದಾಕಿ
ಅವ್ವ ನೀನಂದ್ರ ನನ್ಜೀವ

**********

About The Author

Leave a Reply

You cannot copy content of this page

Scroll to Top