ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಿಯ ಸಖ

Clear Glass Bowl With Brown Liquid

H. ಶೌಕತ್ ಆಲಿ 

ಬೆಳದಿಂಗಳಲ್ಲಿ ತಂಪು ತಂಗಾಳಿಯಲ್ಲಿ
ನಮ್ಮ ಮಿಲನ ಆಲಿಂಗನ
ಅರಳಿದ ನೈದಿಲೆಯ ಚಂದಿರನ ಚುಂಬನ
ಪ್ರಶಾಂತವಾದ ಹೃದಯ
ಮನಸೆಲ್ಲಾ ಅವನಲ್ಲೇ ಲೀನಾ
ಆಧ್ಯಾತ್ಮವೂ ಅಮರ ಪ್ರೇಮವೂ
ಬುದ್ಧ ನನ್ನ ಪ್ರಿಯ ಸಖ

ಬೆಳಕಾಗಬೇಕು ಈ ಭೂಮಿಯು
ಈ ಸುಂದರ ಪ್ರಕೃತಿ ನೆನಪಿರಲಿ
ಶ್ವೇತ ಮೋಡಗಳು ಆಗಸದಲ್ಲಿ
ಹೃನ್ಮನಗಳು ಏಕಾಂತವಾಗಿ
ಭಾವನೆಗಳು ಹೂವಂತೆ ಅರಳಿ
ಸುಖದ ಸೆಲೆಯಾಗಿ ಅವ ನಿಂತ
ಬುದ್ಧ ನನ್ನ ಪ್ರಿಯ ಸಖ

ನೋಟದಲ್ಲಿ ಸಾವಿರ ಅರ್ಥ
ಜನ್ಮಜನ್ಮಾಂತರ ಪುನೀತ
ಕಣ್ಣ ರೆಪ್ಪೆಗಳು ಮಿಟುಕಾಡಲಿಲ್ಲ
ಜಗದ ಉದ್ದಾರಕ ನಾಯಕ
ಶುಭವನ್ನೆ ಲೇಸೆಂದು ಬಯಸುವ
ಬೆಳದಿಂಗಳ ಭಾಸ್ಕರ ಚಂದಿರ
ನಾ ಬೆರೆತು ಹೋದೆ ಬೆಳಕಲಿ
ನಕ್ಷತ್ರಗಳು ಆಗಸದಲ್ಲಿ
ಆಗೋ ಬಂದ ನನ್ನ ಸನಿಹಕ್ಕೆ ಮಿತ್ರ
ಬುದ್ಧನನ್ನ ಪ್ರಿಯಸಖಿ

**********

About The Author

Leave a Reply

You cannot copy content of this page

Scroll to Top