ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿಸಾರ ನಮನ

ಗಝಲ್

I have lived a fine, comfortable and colourful life, says Poet ...

ರೇಮಾಸಂ

ಹತ್ತನೇ ವಯಸ್ಸಲೇ ಮಿಂದೆದ್ದ ಕಾವ್ಯ ಕವಿ ಅಹ್ಮದ ನಿಸಾರ ನಿತ್ಯೋತ್ಸವ/
ಜಲಪಾತ ಪ್ರಥಮ ಭಾವಗೀತೆ ಪತ್ರಿಕೆಲಿ ಪ್ರಕಟಿಸಿದ ಹರಿಕಾರ ನಿತ್ಯೋತ್ಸವ//

ಮೃದು ಮಾತಿನ ಭಾವುಕದ ಸಾಹಿತಿಯೇ ಮೋಡದಲೇಕೆ ಮರೆಯಾದಿರಿ/
ಬುದ್ದಿಜೀವಿ ಸಂವೇದನಾಶೀಲ ಭಾವದ ಚಿಂತನಕಾರ ನಿತ್ಯೋತ್ಸವ//

ರಾಜಕೀಯ ಸಮರ್ಥ ವಿಡಂಬನೆಯಲಿ ಕುರಿಗಳು ಸಾರ್ ಕುರಿಗಳು ಎಷ್ಟು ಚಂದ/
ಬೆಣ್ಣೆ ಕದ್ದವ ಕೃಷ್ಣನೆಂದು ತೋರಿದ ಪ್ರತಿಭಾಕಾರ ನಿತ್ಯೋತ್ಸವ//

ಭಾವೈಕ್ಯದ ರುವಾರಿ ಕರುನಾಡಿನ ರಾಯಭಾರಿಯು ನೀವಲ್ಲವೇ/
ಕನ್ನಡದಲ್ಲಿ ಸಾರೆ ಜಹಾಂಸೆ ಅಛ್ಛಾ ನುಡಿಸಿದ ಗೀತಕಾರ ನಿತ್ಯೋತ್ಸವ//

ಬಿಗಿದು ನಿನ್ನ ನಲಿವಿನ ಕಾವ್ಯದಿ ಪಾಲುಗೊಳ್ಳು ಮನಸ್ಸದಿ ರೇಮಾಸಂ/
ಈ ಜಗವು ಬರಿದಾಗಿ ಕಾಣುತಿದೆ ನೀವಿಲ್ಲದ ಗ್ರಂಥಕಾರ ನಿತ್ಯೋತ್ಸವ//

******

About The Author

Leave a Reply

You cannot copy content of this page

Scroll to Top