ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಡಾ.ಗೋವಿಂದ ಹೆಗಡೆ

Ocean Wave

ಈ ಬೆಳಗು ಎಂದಿನಂತಿಲ್ಲ
ಈ ಬದುಕು ಎಂದಿನಂತಿಲ್ಲ

ಅಲೆಗಳೆಷ್ಟು ಕ್ಷುಬ್ಧವಾಗಿವೆ
ಈ ಕಡಲು ಎಂದಿನಂತಿಲ್ಲ

ಮಧುಶಾಲೆಗೇ ಗರ ಬಡಿದು
ಈ ಗುಟುಕು ಎಂದಿನಂತಿಲ್ಲ

ಎಂಥ ಮರುಳಿತ್ತು ಸಂಜೆಯಲ್ಲಿ
ಈ ಇರುಳು ಎಂದಿನಂತಿಲ್ಲ

ಮುಖ ತಿರುಗಿಸಿ ನಡೆದಳಲ್ಲ
ಯಾಕವಳು ಎಂದಿನಂತಿಲ್ಲ

ಎದೆಯೂಟೆ ಬತ್ತಿಹೋಯಿತೇ
ಈ ಮಡಿಲು ಎಂದಿನಂತಿಲ್ಲ

ಬಾಂದಳಕೆ ಬೆಂಕಿ ಬಿದ್ದಿದೆ
ಈ ಮುಗಿಲು ಎಂದಿನಂತಿಲ್ಲ

ಸಾಂತ್ವನವ ಅರಸಿದೆ ‘ಜಂಗಮ’
ಈ ಹೆಗಲು ಎಂದಿನಂತಿಲ್ಲ

********

About The Author

Leave a Reply

You cannot copy content of this page

Scroll to Top