ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೆವರ ಹನಿಗಳು

ಚೈತ್ರಾ ಶಿವಯೋಗಿಮಠ

ಬೆವರ ಹನಿಗಳು

Indian women are tough - this lady is a construction worker. (With ...

ದುಡಿಯುವ ಕೈಗಳು,
ದೇವರ ಕೈಗಳು

ಹೊಲದಲಿ ಕೃಷಿಕ
ಗಡಿಯಲಿ ಸೈನಿಕ
ದುಡಿಯಲು ಕಾರ್ಮಿಕ

ಕಾಯಕ ಯೋಗದ ಹರಿಕಾರರು
ಬಸವಾದಿ ಪ್ರಮಥರು
ದುಡಿಮೆ, ಶ್ರಮದ ಮಹತ್ವ
ಸಾರಿದ ಜಗದ ಶ್ರೇಷ್ಠ ಕಾರ್ಮಿಕರು

ದುಡಿಯುವ ಜೀವಗಳಿಗೆ
ಸದಾ ಸಮೃದ್ಧಿಯಿರಲಿ
ದುಡಿಸುವವರಿಗೆ, ಶ್ರಮಿಕರಿಗೆ ಪ್ರೀತಿ-ಗೌರವ
ನೀಡುವ ಬುದ್ಧಿ ಸರ್ವದಾ ಇರಲಿ

ಕಠಿಣ ಪರಿಶ್ರಮ
ದುಡಿಮೆಯೇ ರಾಮನಾಮ.
ಕಾರ್ಮಿಕನಿಗಿಲ್ಲ ವಿರಾಮ!

ಇವರಿಗೆ,
ದುಡಿಮೆಯೆ ದೈವ
ಸ್ವಾಭಿಮಾನವೆ ಭವ-ಭಾವ
ಪರಿಶ್ರಮವೆ ವಿಭವ!

ಬೇಕು,
ಚಿಪ್ಪಿಗೆ ಸ್ವಾತಿ
ಮುತ್ತಾಗಲು
ದೇಶಕೆ ಕಾರ್ಮಿಕ
ಅಭಿವೃದ್ಧಿಯಾಗಲು

ಮನೆಯ ಗೃಹಿಣಿ
ರಜೆಯೇ ಇರದ
ಕಾರ್ಮಿಕ
ಗುಡಿಸಿ, ಸಾರಿಸಿ, ಬೇಯಿಸಿ
ಎಲ್ಲರ ಹೊಟ್ಟೆ ಹೊರೆಯುವ
ಶ್ರಮಿಕ

ಅರೆಬರೆ ತುಂಬಿದರೂ
ಹೊಟ್ಟೆ
ದುಡಿಯಲು ಸದಾ ಸಿದ್ಧ
ರಟ್ಟೆ

ಬಲ ಒಂದೆಯಲ್ಲ, ಮತಿಯೂ
ಅಸ್ತ್ರ
ಮಾತು, ಬುದ್ಧಿಮತೆಯೆ
ದುಡಿಯುವ ಸಾಫ್ಟ್ ಕಾರ್ಮಿಕರ
ಶಸ್ತ್ರ

********

About The Author

Leave a Reply

You cannot copy content of this page

Scroll to Top