ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸನ್ಮಾನ

ಸಂಮ್ಮೋದ ವಾಡಪ್ಪಿ

ಸನ್ಮಾನ

Mayday (music festival) - Wikipedia

ಗಳಿಕೆಗೆ ಸ್ವಾಭಿಮಾನದ ದಿಟ್ಟ ಹೆಜ್ಜೆ ಇಡುತ
ಬೆವರ‌ ಹನಿಗಳ ಸುರಿಸಿ ದುಡಿಮೆಯಲಿ ನಗುತ
ಭವ್ಯ ದೇಶದ ಏಳಿಗೆಯ ಬೆನ್ನೆಲಬು ನಾವು
ಶ್ರಮದ ದಾರಿ ಜೀವನದುದ್ದಕ್ಕೂ ನಡೆಯುತಿಹೆವು

ಒಗ್ಗಟ್ಟಿನಲಿ ಒಕ್ಕೊರಲಿನ ಶಿಸ್ತಿನ ನಡೆಯು
ದಣಿವಿಲ್ಲದ‌ ಚಲನೆ ನಿಲ್ಲಬೇಕು ಮನೆಯು
ಸಹಿಷ್ಣುತೆಯಿಂದ ಸದಾ‌ ಕಾರ್ಯೋನ್ಮುಖ
ಆತ್ಮವಿಶ್ವಾಸದ ಪಡೆ ಆಗನೆಂದು ವಿಮುಖ

ಕಾರ್ಮಿಕರು ಒಂದೇ‌ ಸೂರಿನಲಿ ಬಂಧುಗಳು
ಸಮಯ‌‌ ಪಾಲನೆ, ಶ್ರದ್ಧೆಯೇ ಪ್ರಮಾಣಗಳು
ತಂತ್ರಜ್ಞಾನ ಕಾರ್ಯತಂತ್ರದಲ್ಲಿ‌ಯೂ ಪರಿಣಿತರು
ಆರ್ಥಿಕತೆಯ ಬುನಾದಿ ನಿರಂತರ ಸಾಧಕರು

ದಿನ‌‌ ವಾರ ಮಾಸ ವರುಷ ದಿಟ್ಟ ದುಡಿಮೆ
ವಿವಿಧ ಕಾರ್ಯ ಅನೇಕ‌ ಕ್ಷೇತ್ರದ ಹಿರಿಮೆ
ಕಾರ್ಮಿಕರ ಬಲ ದಕ್ಷತೆ ದೇಶದ ಹೆಮ್ಮೆ
ಶಕ್ತಿ ಯುಕ್ತಿ ಕಾರ್ಯದಿ ಇವರೇ ರಾಷ್ಟ್ರದ ಗರಿಮೆ

ಮೇ ದಿನವು ಕಾರ್ಮಿಕರಿಗಾಗಿ ಒಂದು ದಿನ
ಪ್ರತಿಯೊಬ್ಬರ ಶ್ರಮಕೆ ಈ ಕವನದಿ ಸನ್ಮಾನ

*******

About The Author

2 thoughts on “ಕಾರ್ಮಿಕ ದಿನದ ವಿಶೇಷ-ಕವಿತೆ”

Leave a Reply

You cannot copy content of this page

Scroll to Top