ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Buy Hope Handmade Painting by Community Artists Group. Code ...

ಗಝಲ್

ಎ.ಹೇಮಗಂಗಾ

ಬಾಳಿನೆಲ್ಲ ಏಳುಬೀಳುಗಳ ದಾಟಿದ್ದೇನೆ ಕಾಲವೇ ಮುನ್ನಡೆಸು ನನ್ನ
ಗೋಳಿನೆಲ್ಲ ಸರಮಾಲೆಗಳ ಬಿಸುಟಿದ್ದೇನೆ ಕಾಲವೇ ಮುನ್ನಡೆಸು ನನ್ನ

ನಂಜಾದ ಅವನ ಕಹಿನೆನಪುಗಳು ಅಸ್ತಿತ್ವವನ್ನೇ ಬಲಿಪಡೆಯುತ್ತಿವೆ
ಅಂತರಾಳದಿ ನೋವನ್ನೆಲ್ಲ ಹೂಳಿದ್ದೇನೆ ಕಾಲವೇ ಮುನ್ನಡೆಸು ನನ್ನ

ಹೂವಿಂದ ಹೂವಿಗೆ ಹಾರುವ ದುಂಬಿ ಅವನೆಂದು ತಿಳಿಯಲಿಲ್ಲ
ತಪ್ಪಿನ ಅರಿವಾಗಿ ಎಚ್ಚೆತ್ತುಕೊಂಡಿದ್ದೇನೆ ಕಾಲವೇ ಮುನ್ನಡೆಸು ನನ್ನ

ವಂಚನೆಯ ಕತ್ತಿಯೇಟಿಗೆ ಹೃದಯದ ಗಾಯವಿನ್ನೂ ಮಾಯಬೇಕಿದೆ
ಸತ್ತ ಕನಸಿಗೆ ಜೀವ ತುಂಬಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ

ಜೀವನಕ್ಕೆ ಬೆನ್ನು ತಿರುಗಿಸಿ ಹೇಡಿಯಂತೆ ಸಾವ ಬಯಸದಿರು ಹೇಮ
ನನಗೆಂದೇ ನಾನಿನ್ನು ಬದುಕಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ

******

About The Author

Leave a Reply

You cannot copy content of this page

Scroll to Top