ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ದುಬಾರಿಯಾಗಲಿರುವ ದಿನಗಳು ಅರುಣ್ ಕೊಪ್ಪ *ಕೊರೊನಾ ದಿನಗಳು ಇನ್ನೂ ದುಬಾರಿಯಾಗಲಿವೆ* ಹೌದು ಇಲ್ಲಿ ದುಬಾರಿ ಎಂದ ಮಾತ್ರಕ್ಕೆ ಹಣ ಅನ್ನೋ ಶಬ್ಧ ಕಾಲ್ಪನಿಕತೆ ಒಂದೆಡೆ ಆದರೆ  ಸಂಕ್ಷಿಪ್ತದೆಡೆಗೆ ಒಯ್ದು ಆಚೆ ಕಿವಿಯಿಂದ ಕೇಳಿ ಈಚೆ ಕಿವಿಯಲ್ಲಿ ಬಿಡುವ ಆಲಸಿ ಪ್ರಮೇಯಕ್ಕೆ ಎಳೆದು ಬಿಡುತ್ತದೆ ಅಲ್ಲವೇ? ಅದು ಹಾಗಲ್ಲ ಇಲ್ಲಿನ ಸಮತೋಲನ ಪರೋಕ್ಷವಾಗಿ ಬದಲಾವಣೆಯಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರುವದಷ್ಟೇ ಅಲ್ಲದೆ ,ಮುಂದಿನ ಕ್ರಮ,ಮುಂದೇನು ಅನ್ನೋ ಪ್ರಶ್ನೆ ಮೂಡುವದು ಸಹಜವಾಗಿಯೇ ವಯಕ್ತಿಕ ಬದುಕಿನತ್ತ ಲಗ್ಗೆ ಇಡುತ್ತವೆ. ನಾವಿಷ್ಟು ದಿನ ಮಾಡಿದ ವ್ರತ ಕೆಡಲೂಬಹುದು. (ಸಾಮಾಜಿಕ ಅಂತರ ಕಾಪಾಡುವ ಹಾಗೂ ಆರೋಗ್ಯ ಕೋವಿಡ್ ಕ್ರಮಗಳು) ಕ್ಷಣಕ್ಕೂ ಮುಟ್ಟಿದ್ದೆಲ್ಲಾ ವಿಷವೆಂಬಂತೆ ಇಂದು ಬರಬರುತ್ತಾ ಕಾಳಜಿ ಕ್ಷೀಣಿಸುತ್ತಿದೆ. ಇದು ಯಾರ ಕಾಳಜಿ ಅಂತೀರಾ ನಮ್ಮದೇ.. ಮತ್ತೆ ಯಥಾ ಸ್ಥಿತಿಗೆ ಬರುವಾಗ ನಮ್ಮ ಸಾಮಾಜಿಕ ಅಂತರದ ಬದುಕು, ಕೆಲವಷ್ಟು ತ್ಯಾಗಗಳಿಗೆ, ಪಾಲನೆಗೆ ಬದ್ದವಾಗಿಯೇ ಇರಬೇಕು ಎನ್ನೋದನ್ನ ನಾವು ಮರೆಯುವಂತಿಲ್ಲ. ಮುಂದೇನು ಜನಸಾಮಾನ್ಯರ ಸ್ಥಿತಿ ——————————————— ಇದೊಂದು ದೊಡ್ಡ ಸಮೂಹ ಇಲ್ಲಿ ದೊಡ್ದವರಿಂದ ಹಿಡಿದು ಕಾರ್ಮಿಕ ಕುಳಿಗಾರರೊರೆಗೆ ಎಲ್ಲರೂ ಜನ ಸಾಮಾನ್ಯರೇ… ಅಂದ ಮೇಲೆ ಇವರ ಅವಲಂಬನೆಯ ಕ್ಷೇತ್ರಗಳ ,ಕಾರ್ಯಗಳ ಪಾಡಿನ ಮೇಲೆ ಎಲ್ಲವೂ ನಿರ್ಧರಿತ. ಕುಟುಂಭ, ಬೇಡಿಕೆಗಳು, ಸಾಲಗಳು,ಸವಲತ್ತುಗಳಿಗೆ ಹುಟ್ಟಿನಿಂದಲೇ ಒಗ್ಗಿ ಕೊಂಡ ಜನಸಾಮಾನ್ಯರ ಜೀವನ ಶೈಲಿಗೆ ಇನ್ನೂ ಕೂಡ ಯಾವಾಗಲೂ ಈ ರೀತಿಯ ಅನುಭವಗಳು ಆಗಲೇ ಇಲ್ಲ. ಇದೊಂದು ಹೊಸ ದುರ್ ಬೆಳವಣಿಗೆ. ಅನಿರೀಕ್ಷಿತ ವಿಪತ್ತು ಬಂದೊದಗಿದೆ. ಬಹುಪಾಲು ಜನಜೀವನ ದೂರದರ್ಶಿತ್ವದ ವಿಮರ್ಶೆಯೊಂದಿಗೆ ನಡೆಯುತ್ತಿದ್ದ ಈ ಆಧುನಿಕ ಜನ ಜೀವನ ಇಂದು ಸೋತು ಸುಣ್ಣಗಿದೆ. ವನ್ಯಮೃಗಗಳ ಹಾಗೆ ನಡೆದದ್ದೇ ದಾರಿಯಾಗಿ ಗೋಚರಿಸುತ್ತಿದೆ. ——————————————————- ಹೌದು ಅನೇಕ ಅಸಂಘಟಿತ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಎಷ್ಟೋ ದಿನಗಳ ಹಿಂದೆ ಮನೆ, ಮಠ ಬಿಟ್ಟು ಪದವಿ ಹಾಗೂ ಹೆಚ್ಚಿನ ಓದಿಲ್ಲದೆ ಬೇಕಾದದ್ದನ್ನು ಸಾಧಿಸಿ ಸ್ವಾವಲಂಬಿಗಳಾದವರು ಊರತ್ತ ಮುಖ ಮಾಡಿದ ಅನೇಕ ಉದಾಹರಣೆಗಳಿವೆ. ಹಾಗಾದರೆ ಮುಂದೇನು…? ಎಸ್, ಎಸ್, ಎಲ್, ಸಿ, ಮೊದಲೇ ಮುಂದೇನು? ನಂತರ ಮುಂದೇನು ಅನ್ನೋ ಲೇಖನಗಳನ್ನು ಈ ಮೊದಲೆಲ ಓದುತ್ತಾ ಇದ್ವಿ… ಈಗದೇ ವಿರುದ್ಧವಾಗಿದೆ. ಭವಿಶ್ಯದ ಕನಸುಗಳು ಕಮರಿಹೋಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. ಮುಂದೇನು? ——————- ಸರ್ಕಾರದ ಚಿಂತನೆಗಳಾದ ಅಂತರ್ಜಾಲ ಕಲಿಕಾ ವ್ಯವಸ್ಥೆಯನ್ನು ಸರ್ಕಾರ ಈಗಾಗಲೇ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಿ ,ಪರೀಕ್ಷೆಗೆ ಪೂರಕ ಅಭ್ಯಾಸದ ಮರು ಅವಲೋಕನ ಒಂದೆಡೆಯಾದರೆ ಮುಂದಿನ ಶೈಕ್ಷಣಿಕ ವರ್ಷ ಅಂದರೆ ಇದೇ ಜೂನ್ ಒಂದರ ಆರಂಭದ ಪ್ರಾಥಮಿಕ ,ಪ್ರೌಢ, ಹಾಗೂ ಪದವಿ ಪೂರ್ವ ಶಿಕ್ಷಣ ಹಂತಗಳ ಆರಂಭ ಅಥವಾ ಮುಂದುಡಿಕೆಯ ಎಂಬ ಬಗ್ಗೆಯೂ ಈಗಾಗಲೇ ಚರ್ಚೆ ಆದರೂ ಈ ಎಲ್ಲ ಮೇಲಿನ ಸನಸ್ಯಗಳಿಗೆ, ಅಂತ್ಯ ಹಾಗೂ ಸ್ಪಷ್ಟ ಉತ್ತರ ಸಿಗೋದು ಕಷ್ಟವೇ ಆಗಿದೆ. ತೀರ ಕಳವಳ ಕಕ್ಕಾ -ಬಿಕ್ಕಿಯಲ್ಲಿ ಸಾಗಿತ್ತಿರುವ ಈ ಪ್ರಮುಖ ಸಾಮಾಜಿಕ ಹಂತಗಳಾದ, ವ್ಯಾಪಾರ, ವಹಿವಾಟು, ಶಿಕ್ಷಣ ,ಉದ್ಯೋಗಗಳ ಪುನಶ್ಚೇತನ ಹಾಗೂ ಮರು ಹುಟ್ಟು ಆಗಬೇಕಿದೆ. ದೇಶದಲ್ಲಿ ಜಿ ಡಿ ಪಿ ಯ ಕುಸಿತ ಹಾಗೂ ನಿರುದ್ಯೋಗದ ಮಟ್ಟ ಹಾಕುವ ಪ್ರಕ್ರೀಯೆ ಈಗ ಹೇಗೆ ಕೋವಿಡ್ ವಿರುದ್ಧ ನಡೆಯುವ ಸರ್ಕಾರದ ವೇಗದ ಕ್ರಮಗಳ ಮಾಧರಿಯಲ್ಲೇ ಆಗಬೇಕಿದೆ. ಕೃಷಿ ಚಟುವಟಿಕೆಯೊಂದಿಗೆ ಕರೊನಾ ಕಾಲದ ರೈತನ ಬದುಕು ಹೌದು ದೇಶದ ಬೆನ್ನೆಲುಬು ಅನ್ನ ನೀಡುವ ಅನ್ನದಾತ ರೈತ ಈ ಮುಂಗಾರಲ್ಲಿ ತನ್ನ ಕೆಲಸದ ಕೈ ಚುರುಕುತನ ಪ್ರಾರಂಭಿಸುತ್ತಾನೆ. ಹದ ಮಳೆ, ಸಮರ್ಪಕ ಬೆಳೆಯ ಇಳುವರಿಗಾಗಿ ಗೊಬ್ಬರ ಹತ್ತಲವು ಕೀಟನಾಶಕ, ಬೀಜ ನಾಶಕಗಳನ್ನೊಳಗೊಂಡಂತೆ ತೀರ ಬಂಡವಾಳ ಹಾಕುವ ಸಕಾಲವಿದು. ಸರ್ಕಾರ ಈ  ಬಗ್ಗೆ ಗಮನ ಹರಿಸುವದು ಸೂಕ್ತ. ವಿಶೇಷವಾಗಿ ಬತ್ತದ ಬೆಳೆಯ ತಯಾರಿ ,ಅಂದರೆ ಕೆಲ ಭಾಗದಲ್ಲಿ ಈ ಮೊದಲು ಬಿತ್ತುವ ಕಾರ್ಯ ಹೆಚ್ಚಿನದ್ದಾಗಿತ್ತು ಈಗ ಅದು ವಿರಳವಾಗಿ ಹೆಚ್ಚಿನ ರೈತರು ನಾಟಿಯನ್ನೆ ಅವಲಂಭಿಸಿದ್ದಾರೆ. ಇದಕ್ಕೆ ಪೂರಕ ಮಳೆ ಹಾಗೂ ಕೆಲಸಗಾರರ ಲಭ್ಯತೆ ಕೂಡ ಒಂದು ಮುಖ್ಯ ವಿಚಾರ. ಹೀಗೆ ಹತ್ತು ಹಲವು ಸಾಮಾಜಿಕ ವ್ಯವಸ್ಥೆಯ ಕ್ಷೇತ್ರಗಳು ಅಸಮತೋಲನದ ಹಂತ ತಲುಪಿರುವದು ಕರೋನವೇ ಪ್ರಮುಖ ಕಾರಣವಾಗಿದೆ ಎಂದು ಪ್ರತ್ಯಕ್ಷವಾಗಿ ಕಾಣುವ ವಸ್ತು ಸ್ಥಿತಿ. ಭೂತಕಾಲ, ಭವಿಷ್ಯತಕಾಲ ಹಾಗೂ ವರ್ತಮಾನದ ತುಲನೆಗೆ ಹೋದಾಗ ನೇರವಾಗಿ ದುಬಾರಿ ಕಾಲ ಅನುಭವವಾಗುತ್ತದೆ. ಕಾದು ನೋಡೋಣ ಕರೊನಾ ಬದುಕಿನ ಸಂಕ್ಷಿಪ್ತ ಕಲ್ಪನೆಯೊಂದಿಗೆ ಬರೆದ ಈ ಲೇಖನ ಹೋಲುವ ದಿನಗಳು ಹೌದೋ ಅಲ್ಲವೋ ಎಂದು… *****

ಪ್ರಸ್ತುತ Read Post »

ಆರೋಗ್ಯ, ಇತರೆ

ಆರೋಗ್ಯ

ಧೂಮಪಾನ ದುಷ್ಟಪರಿಣಾಮಗಳು. ಸಂಗಮೇಶ ಎನ್ ಜವಾದಿ  ಧೂಮಪಾನ ಎಂದರೆ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಹೊಗೆಯನ್ನು ಒಳತೆಗೆದುಕೊಳ್ಳುವುದನ್ನು ಧೂಮಪಾನ ಸೇವನೆ ಯೆಂದು ಕರೆಯಲಾಗುತ್ತದೆ. ಇದರಿಂದ ಹೊರಡುವ ಹೊಗೆಯನ್ನು ಉಚ್ಛ್ವಾಸದ ಮೂಲಕ ಒಳತೆಗೆದುಕೊಂಡಾಗ ಇದರ ಸಕ್ರಿಯ ವಸ್ತುಸಾರಗಳು ಆಲ್ವಿಯೋಲೈ ಮೂಲಕ ಶ್ವಾಸಕೋಶದಲ್ಲಿ ಹೀರಲ್ಪಡುತ್ತವೆ.ಈ ಸಕ್ರಿಯ ವಸ್ತುಸಾರಗಳು ನರಗಳ ತುದಿಗಳಲ್ಲಿ ರಾಸಾಯನಿಕ ಕ್ರಿಯೆಗಳನ್ನುಂಟುಮಾಡಿ ಹೃದಯ ಬಡಿತದ ವೇಗ, ನೆನಪಿನ ಶಕ್ತಿ, ಸಕ್ರಿಯತೆ ಹಾಗೂ ಪ್ರತಿಕ್ರಿಯಿಸುವ ಸಮಯದಲ್ಲಿ ಏರಿಕೆಯನ್ನುಂಟುಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಚಟ ಹೆಚ್ಚಾಗಿ ಗ್ರಾಸವಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 500ರಲ್ಲಿ 100ಜನರಿಗೆ ಮಾದಕ ವ್ಯಸನಿಗಳಾಗಿದ್ದರೆ, ಇತ್ತೀಚಿನ ದಿನಗಳಲ್ಲಿ 100ರಲ್ಲಿ 40 ಜನರಿಗೆ ಇಂತಹ ಚಟಗಳಿಗೆ ವ್ಯಸನಿಯಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇಂತಹ ಮಾದಕ ವಸ್ತುಗಳ ಸೇವನೆಯಿಂದ ಯಾವುದೇ ಪ್ರಯೋಜನ ವಿಲ್ಲದುದ್ದರೂ,ಮೋಜು ಮಸ್ತಿಗಾಗಿ, ಪಾಶ್ಚಾತ್ಯ ಸಂಸ್ಕೃತಿಯ ಸೆಳೆತ, ಸಂಪ್ರದಾಯದ ಕಂದಾಚಾರ, ಕಾಮೋತ್ತೇಜನ ಪ್ರಚೋದನೆಗಾಗಿ, ಆಕ್ರಮಣ ಶೀಲತೆ ತೋರಿಸಲು, ಪ್ರತಿಭೆ ಪ್ರದರ್ಶನಕ್ಕೆ, ಹಣಕಾಸು ಸಮಸ್ಯೆ, ಖಿನ್ನತೆ ಯಂತಹ ವಿಷಯಗಳಿಂದಾಗಿ,ಧೂಮಪಾನದಂತ ಚಟಗಳತ್ತ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಈಗ ತಂಬಾಕು ಭಾರತದಲ್ಲಿ ಹಲವು ರೂಪಗಳಲ್ಲಿ ಸರ್ವೇಸಾಮಾನ್ಯವಾಗಿ ವ್ಯಾಪಕವಾಗಿ ಬಳಕೆಯಲ್ಲಿರುವ ಒಂದು ವ್ಯಸನಕಾರಿ ಪದಾರ್ಥ. ನಿಕೊಟಿನ್ ತಂಬಾಕನ್ನು ಸಿಗರೇಟ್ ರೂಪದಲ್ಲಿ ವಿಶ್ವದಾದ್ಯಂತ ಹೆಚ್ಚಾಗಿ ಬಳಸಲಾಗುತ್ತಿರುವಂತೆ, ಭಾರತದಲ್ಲಿ ಸಿಗರೇಟ್, ಬೀಡಿ, ನಶ್ಯ, ಹುಕ್ಕಾ ಮತ್ತು ಜಗಿಯುವ ತಂಬಾಕು ಎಂಬ ಬೇರೆಬೇರೆ ರೂಪದಲ್ಲಿ ಬಳಸಲಾಗುತ್ತದೆ.ಧೂಮಪಾನ ದುಶ್ಚಟಗಳ  ಬಳಕೆಗೆ ಯಾವುದೇ ನಿರ್ಧಿಷ್ಟ ಕಾರಣಗಳು ಇಲ್ಲದಿದ್ದರೂ, ಹಿರಿಯರ ಜೊತೆಗೆ ಇವತ್ತಿನ ಯುವ ಸಮೂಹ ಕೂಡ, ಕ್ಷುಲಕ ಕಾರಣ, ಕ್ಷಣಿಕ ತೀರ್ಮಾನಗಳಿಂದಾಗಿ ದುಶ್ಚಟಕ್ಕೆ ಬಲಿಯಾಗುತ್ತಿದೆ. ವಿಶ್ವ ಸಂಸ್ಥೆಯ ಸಮೀಕ್ಷೆಯ ಪ್ರಕಾರ 1 6ರ ವಯೋಮಿತಿಯಿಂದ 30ರ ವಯೋಮಿತಿಯ ಒಳಗಿನವರೇ, ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಾರೆ ಎನ್ನುವ ಅಂಶ ಹೊರಗೆಡುವಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಎಂದರೆ ಶೇ 10ರಲ್ಲಿ 4 ಜನ ಧೂಮಪಾನವನ್ನು, 3 ಜನ ಮದ್ಯಪಾನವನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಕೂಡ ಇದರಿಂದ ಹೊರತಾಗಿಲ್ಲ. ಧೂಮಪಾನ ಅತಿ ಹೆಚ್ಚಿನ ವ್ಯಸನಕಾರಿ ಪದಾರ್ಥ ಮತ್ತು ಅದರ ಸೇವನೆ ಬಿಡಬೇಕೆಂದುಕೊಂಡರೂ ಬಿಡಲು ಸಾಧ್ಯವಾಗುವುದಿಲ್ಲ. ಇದು ಹೆಚ್ಚಿನ ವಿಷಕಾರಿ ಗುಣ ಹೊಂದಿದೆ. ಜಗತ್ತಿನಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ 40 ಲಕ್ಷ ಸಾವು ಸಂಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ತಂಬಾಕು ಪ್ರತಿ ವರ್ಷ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತಿದೆ.ತಂಬಾಕು ಸಂಬಂಧಿತ ರೋಗಗಳಿಂದ ಭಾರತದಲ್ಲಿ ಪ್ರತಿನಿತ್ಯ 2500 ಜನರು ಮರಣ ಹೊಂದುತ್ತಿದ್ದಾರೆ. ವಿಶ್ವದಾದ್ಯಂತ ಕೊಕೇನ್ ಅಥವಾ ಹೆರಾಯಿನ್ ಮತ್ತು ಮದ್ಯ ಬಳಕೆಯಿಂದ, ಅಗ್ನಿ ದುರಂತ, ಕೊಲೆ, ಆತ್ಮಹತ್ಯೆ, ಅಪಘಾತ ಮತ್ತು ಏಡ್ಸ್ ನಿಂದಾಗುವ ಸಾವುಗಳ ಒಟ್ಟೂ ಸಂಖ್ಯೆಗಳಿಗಿಂತಲೂ ತಂಬಾಕು ಸೇವನೆಯಿಂದ ಸಾಯುವವರ ಸಂಖ್ಯೆಯು ಅಧಿಕ ಪ್ರಮಾಣದಲ್ಲಿದೆ. ಧೂಮಪಾನದಲ್ಲಿ ಏನಿದೇ : ಹೊಗೆಸೊಪ್ಪಿನ ಗಿಡದಲ್ಲಿನ ನಿಕೊಟಿಯಾನಾ ಟೊಬ್ಯಾಕಮ್ ಎನ್ನುವ ಸಾರವನ್ನು ಬಳಸಿಕೊಂಡು ತಯಾರಾಗುವ ಪದಾರ್ಥ ತಂಬಾಕು. ಈ ಗಿಡದ ಒಣಗಿದ ಎಲೆಗಳನ್ನು ಉಳಿದ ಕೆಲವು ವಸ್ತುಗಳೊಂದಿಗೆ ಮಿಶ್ರಣ ಮಾಡಿ ಬೀಡಿ, ಸಿಗರೇಟ್, ನಶ್ಯ, ಹುಕ್ಕಾ, ಜರ್ದಾ, ಕಡ್ಡಿಪುಡಿ ಮತ್ತು ತಂಬಾಕಿನ ಉಳಿದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಸುಫಾರಿ ಜಗಿಯುವುದರ ಮೂಲಕ, ಸೇದುವುದರ ಮೂಲಕ (ನಶ್ಯ), ಧೂಮಪಾನದ ಮೂಲಕ (ಸಿಗರೇಟ್, ಬೀಡಿ) ಹೀಗೆ ಅನೇಕ ವಿಧಗಳಲ್ಲಿ ತಂಬಾಕನ್ನು ಬಳಸಲಾಗುತ್ತದೆ. ಮುದ ನೀಡುವ ನಿಕೊಟಿನ್ ತಂಬಾಕು ಗಿಡದ ಎಲೆಗಳಲ್ಲಿ ಕಂಡುಬರುವ ರಾಸಾಯನಿಕ. ಧೂಮಪಾನ ಅಥವಾ ತಂಬಾಕು ಜಗಿಯುವುದು ನಿಕೊಟಿನ್ ಮತ್ತು ಕಾರ್ಬನ್ ಮೋನಾಕ್ಸೈಡ್ ಹಾಗೂ ಟಾರ್ಗಳನ್ನೊಳಗೊಂಡು ಅಂದಾಜು 4000 ಬೇರೆ ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಧೂಮಪಾನ ವ್ಯಸನಕ್ಕೆ ಕಾರಣಗಳು : ತಂಬಾಕು ಸೇವನೆಯು ಮಿದುಳಿನಲ್ಲಿ ಆನಂದ ನೀಡುವ ಡೋಪಮೈನ್‌ ನರವಾಹಕವನ್ನು ಬಿಡುಗಡೆ ಮಾಡುತ್ತದೆ. ಮಿದುಳು ಇದನ್ನು ಆನಂದದಾಯಕವಾದ ಚಟುವಟಿಕೆ ಎಂದು ಗ್ರಹಿಸುತ್ತದೆ ಮತ್ತು ವ್ಯಕ್ತಿಯು ತಂಬಾಕು ಸೇವನೆಯನ್ನು ಮತ್ತೆಮತ್ತೆ ಬಯಸುವಂತೆ ಮಾಡುತ್ತದೆ. ಕ್ರಮೇಣ ಮಿದುಳಿನ ಸಂದೇಶವಾಹಕಗಳು ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಆನಂದದ ಭಾವ ಹೊಂದಲು ಮಿದುಳು ಹೆಚ್ಚು ತಂಬಾಕು ಪದಾರ್ಥಗಳ ಸೇವನೆಯನ್ನು ಬಯಸುತ್ತದೆ. ವ್ಯಕ್ತಿಯು ನಿಕೊಟಿನ್ ಸೇವಿಸಿದಾಗ, ರಾಸಾಯನಿಕಗಳು ಚರ್ಮ, ಬಾಯಿ, ಮೂಗಿನ ನಾಳಗಳು ಹಾಗೂ ಶ್ವಾಸಕೋಶಗಳ ಮೂಲಕ ಮಾನವನ ಮಿದುಳನ್ನು ತಲುಪುತ್ತವೆ. ನಿಕೊಟಿನ್ಯುಕ್ತ ಧೂಮಪಾನವು ನಿಮಗೆ ತಕ್ಷಣ ನಶೆಯನ್ನು ಮತ್ತು ಅತಿಯಾದ ಶಕ್ತಿಯನ್ನು ನೀಡುತ್ತದೆ. ಕೆಲವು ನಿಮಿಷಗಳ ನಂತರ, ನಶೆ ಇಳಿದು ಹೋಗುತ್ತದೆ ಮತ್ತು ನಿಮಗೆ ಸುಸ್ತಾದಂತೆ ಅಥವಾ ಶಕ್ತಿ ಕಡಿಮೆಯಾದಂತೆ ಭಾಸವಾಗುತ್ತದೆ. ಇದರ ಪರಿಣಾಮವಾಗಿ, ನಿಮಗೆ ಮತ್ತೆ ಧೂಮಪಾನ ಮಾಡಬೇಕೆಂದು ಅನಿಸುತ್ತದೆ.ಅಧ್ಯಯನಗಳ ಪ್ರಕಾರ ಮಕ್ಕಳು ಹಾಗೂ ಹದಿಹರೆಯದವರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಉತ್ಪನ್ನಗಳ ವ್ಯಸನಿಗಳಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂಬಾಕು ಬಳಸಲು ಆರಂಭಿಸಿದರೆ, ವ್ಯಸನಿಗಳಾಗುವ ಸಾಧ್ಯತೆ ಹೆಚ್ಚು.ತಂಬಾಕು ವ್ಯಸನದಿಂದ ಮಿದುಳಿನಲ್ಲಿ ಉಂಟಾಗುವ ಬದಲಾವಣೆಗಳು ಕೊಕೇನ್ ಮತ್ತು ಹೆರಾಯಿನ್ ಬಳಕೆಯಿಂದ ಉಂಟಾಗುವ ಬದಲಾವಣೆಗಳಂತೆ. ದೀರ್ಘಕಾಲದ ಬಳಕೆಯಿಂದ ವ್ಯಕ್ತಿಗೆ ಧೂಮಪಾನ ಮಾಡುವ (ಅಥವಾ ತಂಬಾಕು ಪದಾರ್ಥಗಳ ಬಳಕೆಯ) ಬಯಕೆ ಕೂಡ ಉಂಟಾಗಬಹುದು. ಸಾಮಾನ್ಯವಾಗಿ ಬೆಳಗ್ಗೆ ಏಳುವಾಗ, ಕಾಫಿಯ ಸೇವಿಸುವಾಗ, ಕೆಲಸದ ನಡುವಿನ ಊಟದ ವಿರಾಮದಲ್ಲಿ ತಂಬಾಕು ಸೇವನೆಯನ್ನು ಬಯಸುವಂತೆ ಮಾಡುತ್ತದೆ. ವಾಹನ ಚಲಿಸುವಾಗ, ಮದ್ಯಪಾನ ಮಾಡುವಾಗ ಅಥವಾ ಒತ್ತಡದ ಕೆಲಸ ಮಾಡುತ್ತಿರುವಾಗ ಧೂಮಪಾನ ಮಾಡಬೇಕೆಂದು ಬಲವಾಗಿ ಅನಿಸುವ ಸಾಧ್ಯತೆಯೂ ಇದೆ. ಧೂಮಪಾನದ ದುಷ್ಟಪರಿಣಾಮಗಳು : ಸಿಗರೇಟ್ ನಲ್ಲಿ ಸುಮಾರು 4000 ವಿಷ ಪದಾರ್ಥಗಳಿದ್ದು 400ರಕ್ಕೂ ಹೆಚ್ಚು ಪದಾರ್ಥಗಳು ಕ್ಯಾನ್ಸರಿಗೆ ಕಾರಣವಾಗಿವೆ,ಅತಿಯಾದ ಧೂಮಪಾನ ನರಗಳ ದೌರ್ಬಲ್ಯ,  ಜೀರ್ಣ  ಶಕ್ತಿಯಲ್ಲಿನ  ಇಳಿತಕ್ಕೆ ಕಾರಣವಾಗುತ್ತದೆ. ಸತತವಾದ ದಮ್ಮು , ರಕ್ತದ ಖಾಯಿಲೆ  ಉಂಟುಮಾಡುತ್ತದೆ. ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಗೆ ಭಂಗ ತರುತ್ತದೆ. ದೇಹದ ಎಲ್ಲಾ ಅಂಗಗಳಿಗೂ ಧಕ್ಕೆಯಾಗುತ್ತದೆ .5 ಸೆ, ಮೀ, ಸಿಗರೇಟ್ ಸೇವನೆಯಿಂದ 5 ನಿಮಿಷ ಆಯಸ್ಸು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಜಠರ ಮತ್ತು ಕರುಳಿನ ಮೇಲೆ ಧೂಮಪಾನ ಸರಿಪಡಿಸಲು ಆಗದಂತಹ ಪರಿಣಾಮ ಬೀರುತ್ತದೆ. ಸಿಗರೇಟಿನಲ್ಲಿರುವ ದುಷ್ಪರಿಣಾಮ ಬೀರುವ ವಿಷದ ಅಂಶ ಜಠರದ ಒಳಪದರವನ್ನು ಸವೆಸುತ್ತದೆ ಮತ್ತು ಜೀರ್ಣಾಂಗದ ಕಿಣ್ವಗಳು ಸರಿಯಾಗಿ ಕೆಲಸ ಮಾಡಲು ಅಡ್ಡಿಪಡಿಸುತ್ತದೆ. ಇದೇ ಕಾರಣದಿಂದ ಧೂಮಪಾನ ವ್ಯಸನಿಗಳು ಆಹಾರ ಜೀರ್ಣವಾಗುವುದರಲ್ಲಿ ತೊಂದರೆ ಅನುಭವಿಸುತ್ತಾರೆ.ಧೂಮಪಾನ ವ್ಯಸನಿಯಾಗಿದ್ದರೆ ನಿಮ್ಮ ನಾಲಗೆಯ ಮೇಲಿರುವ ರುಚಿ ಗ್ರಾಹಕ (ಟೇಸ್ಟ್ ಬಡ್) ಗಳು ಬೇಗನೆ ನಶಿಸಿ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿಯೇ ಧೂಮಪಾನ ವ್ಯಸನಿಗಳು ಖಾರ ಪದಾರ್ಥಗಳನ್ನು ಯಾವುದೇ ತೊಂದರೆಯಿಲ್ಲದೆ ಸೇವಿಸುತ್ತಾರೆ. ಅವರ ನಾಲಗೆಯ ಮೇಲಿನ ರುಚಿ ಗ್ರಾಹಕಗಳು ನಶಿಸಿ ಹೋಗಿರುವ ಕಾರಣ ಅವರಿಗೆ ರುಚಿ ತಿಳಿಯುದಿಲ್ಲ. ಕಳೆದ ದಶಕದಲ್ಲಿ ತಂಬಾಕು ಸಂಬಂಧಿತ ರೋಗಗಳು ತ್ವರಿತವಾಗಿ ಹೆಚ್ಚಾಗಿವೆ. ಸಂತಾನಕ್ಕಾಗಿ ದಂಪತಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರಲ್ಲಿ ಬೇಗನೆ ರಜೋನಿವೃತ್ತಿ ಹೊಂದುವಿಕೆ ಕಂಡು ಬರುತ್ತಿದೆ.ಧೂಮಪಾನ ಮಾಡುವವರು ಶೇ.14 ಬಂಜೆತನಕ್ಕೆ ಒಳಗಾಗುತ್ತಾರೆ. ಶೇ.30ರಷ್ಟು ಬಹುಬೇಗ ರಜೋನಿವೃತ್ತಿ ಹೊಂದುತ್ತಾರೆ. 30ರ ವಯೋಮಾನದ ಮಹಿಳೆಯರಲ್ಲಿ ಫಲವತ್ತತೆ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯು 35ರ ನಂತರ ವೇಗ ಪಡೆದುಕೊಳ್ಳುತ್ತದೆ. ಆದರೆ ತಂಬಾಕು ಬಳಕೆಯು ಅವಧಿಗೆ ಮುಂಚೆಯೇ ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದಿನಕ್ಕೆ 10ಕ್ಕಿಂತಲೂ ಹೆಚ್ಚು ಸಿಗರೇಟುಗಳ ಸೇವನೆಯು ನಿಮ್ಮ ಗರ್ಭಧರಿಸುವ ಸಾಮರ್ಥ್ಯ‌ದ ಮೇಲೆ ಹಾನಿಯುಂಟುಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.ಧೂಮಪಾನ ಮಾಡುತ್ತಿರುವ ಮಹಿಳೆಯರು ಶೇ.60ರಷ್ಟು ತಾವು ಗರ್ಭವತಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳುವರು. ಇದು ಅಪಸ್ಥಾನೀಯ ಗರ್ಭಾವಸ್ಥೆ ಮತ್ತು ಇತರೆ ಟ್ಯೂಬಲ್‌ ಫ್ಯಾಕ್ಟರ್‌ ಬಂಜೆತನಕ್ಕೂ ಸಂಬಂಧ ಹೊಂದಿದೆ. ಸಿಗರೇಟಿನಲ್ಲಿ ಇರುವ ರಾಸಾಯನಿಕಗಳು ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಒಳಗೊಂಡಿವೆ.ತಂಬಾಕು ಪುರುಷರ ಸಂತಾನೋತ್ಪತ್ತಿ ಶಕ್ತಿಯ ಮೇಲೂ ಪ್ರಭಾವ ಬೀರುತ್ತದೆ. ಇದು ರಕ್ತನಾಳಗಳಿಗೆ ಹಾನಿಯುಂಟು ಮಾಡಿ ರಕ್ತದ ಹರಿವಿನ ಮೇಲೂ ಪ್ರಭಾವ ಬೀರುತ್ತದೆ. ಕೆಲವು ಅಧ್ಯಯನಗಳು ಧೂಮಪಾನದ ಪರಿಣಾಮಗಳನ್ನು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ಕಡಿಮೆಯಾದ ಲೈಂಗಿಕ ನೆರವೇರಿಕೆಯೊಂದಿಗೆ ಸಂಬಂಧ ಕಲ್ಪಿಸಿವೆ. ಮಾನವನ ವೀರ್ಯ ಕಣಗಳು ಸಮರ್ಪಕವಾಗಿ ಸಂತುಲಿತ ಒಂದರಿಂದ ಒಂದಕ್ಕೆ ಸಂಬಂಧ ಹೊಂದಿರುವ ಪ್ರೊಟಮೈನ್‌ 1 ಮತ್ತು ಪ್ರೊಟಮೈನ್‌ 2 ಎಂದು ಕರೆಯಲಾಗುವ ಎರಡು ಚಿಕ್ಕ, ಅಧಿಕ ಆವೇಶದ ಪ್ರೊಟೀನುಗಳನ್ನು ಕೊಂಡೊಯ್ಯುತ್ತವೆ. ಆದರೂ ಧೂಮಪಾನಿಗಳ ವೀರ್ಯವು ಬಹಳ ಕಡಿಮೆ ಪ್ರೊಟಮೈನ್‌ ಅನ್ನು ಕೊಂಡೊಯ್ಯುತ್ತದೆ. ತಂಬಾಕಿನಿಂದ ಉಂಟಾಗುವ ಹಾನಿಯು ವೀರ್ಯದಲ್ಲಿ ಕ್ರೊಮೊಸೋಮುಗಳ ಹಾನಿ ಮತ್ತು ಡಿಎನ್‌ಎ ವಿಘಟನೆಯನ್ನೂ ಒಳಗೊಳ್ಳುತ್ತದೆ. ಧೂಮಪಾನವು ವೀರ್ಯಕ್ಕೆ ಹಾನಿಯುಂಟುಮಾಡಿ ಸಂತಾನಶಕ್ತಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಧೂಮಪಾನಿಗಳ ವೀರ್ಯದಿಂದ ಬೆಳವಣಿಗೆಯಾದ ಭ್ರೂಣವು ಡಿಎನ್‌ಎ ಹಾನಿಯ ಕಾರಣದಿಂದಾಗಿ ಬದುಕುಳಿಯುವ ಕಡಿಮೆ ಸಾಧ್ಯತೆಯನ್ನು ಹೊಂದಿರುತ್ತದೆ. ನಿಷ್ಟ್ರೀಯ ಧೂಮಪಾನ ಪುರುಷರ ಸಂತಾನಶಕ್ತಿಯ ಮೇಲೆ ಪ್ರಭಾವ ಬೀರಬಹುದು. ಪುರುಷ ಧೂಮಪಾನಿಗಳು ಕಡಿಮೆ ಚಲನಶೀಲತೆಯೊಂದಿಗೆ ವೀರ್ಯದ ಕಡಿಮೆ ಗುಣಮಟ್ಟದೊಂದಿಗೆ ಬಳಲಬಹುದು ಮತ್ತು ಇದು ಅಸಹಜ ಆಕಾರದ ವೀರ್ಯಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಒಬ್ಬ ವ್ಯಕ್ತಿಯು ನಿರಂತರವಾಗಿ ಧೂಮಪಾನ ಮಾಡುವವನಾಗಿದ್ದರೆ, ಮೊಟ್ಟೆಗಳನ್ನು ಫಲವತ್ತತೆಗೊಳಿಸುವ ವೀರ್ಯದ ಸಾಮರ್ಥ್ಯ‌ವನ್ನೂ ಕಡಿಮೆ ಮಾಡಬಹುದು. ದೀರ್ಘಕಾಲದ ತಂಬಾಕು ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಹಲ್ಲುಗಳ ಅಕಾಲಿಕ ಮುಪ್ಪು (ಚರ್ಮ ಸುಕ್ಕುಗಟ್ಟುವಿಕೆ), ಕಣ್ಣಿನ ಪೊರೆ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ, ಬೊಜ್ಜು, ಉಸಿರಾಟದ ತೊಂದರೆ, ಹೃದಯದ ತೊಂದರೆ ಹಾಗೂ ಸ್ಟ್ರೋಕ್ ಅಪಾಯ, ಭ್ರೂಣಕ್ಕೆ ಹಾನಿ ( ಗರ್ಭಿಣಿ ಮಹಿಳೆಯರು ಧೂಮಪಾನ ಮಾಡುವುದರಿಂದ), ನಪುಂಸಕತ್ವ ಅಥವಾ ಬಂಜೆತನದ ಸಮಸ್ಯೆಗಳು ಉಂಟಾಗಬಹುದು. ತಂಬಾಕು ಸೇವನೆಯು ಮಧುಮೇಹ, ಸಂಧಿವಾತ ಹಾಗೂ ಆಸ್ಟಿಯೋಪೊರೊಸಿಸ್ ಮುಂತಾದ ತೊಂದರೆಗಳನ್ನು ಹೆಚ್ಚು ಮಾಡಬಹುದು ಜೊತೆಗೆ ಧೂಮಪಾನ ಮಾಡಿದವರ ಆಯುಷ್ಯವು ಧೂಮಪಾನ ಮಾಡದವರ ಆಯುಷ್ಯಕ್ಕಿಂತ 15 ವರ್ಷ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ ಹಾಗೂ ತಂಬಾಕಿನ ಪರೋಕ್ಷ ಧೂಮಪಾನ (ಪ್ಯಾಸಿವ್ ಸ್ಮೋಕಿಂಗ್) ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು, ಹಾಗೂ ಇದು ಮಾರಕವೆಂದು ಸಾಬೀತಾಗಿದೆ. ದೀರ್ಘಾವಧಿಯ ಪರೋಕ್ಷ ಧೂಮಪಾನದಿಂದ ಶ್ವಾಸಕೋಶ, ಸ್ತನ ಹಾಗೂ ಲಿವರ್ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಇದು ಸ್ಟ್ರೋಕ್ ಹಾಗೂ ಹೃದಯಾಘಾತಗಳಿಗೆ ಕೂಡ ಕಾರಣವಾಗಬಹುದು. ಪರೋಕ್ಷ ಧೂಮಪಾನದಿಂದ ಹೊರಬರಲು ಯಾವುದೇ ‘ಸುರಕ್ಷತೆ’ಗಳಿಲ್ಲ ಹಾಗೂ ಹೊಗೆಯ ಅಪಾಯವನ್ನು ತಡೆಯಲು ಸಾಧ್ಯವಿಲ್ಲ.ಸಾಮಾನ್ಯವಾಗಿ ಬೀಡಿ, ನಶ್ಯ ಮತ್ತು ಇತರ ಹೊಗೆ ರಹಿತ ತಂಬಾಕು ಪದಾರ್ಥಗಳು ಸಿಗರೇಟ್ ಗಿಂತ ‘ಸುರಕ್ಷಿತ’ ಎಂಬ ನಂಬಿಕೆಯಿದೆ. ಇದು ಸತ್ಯವಲ್ಲ. ಅವು ಕೂಡ ಸಿಗರೇಟ್ನಂತೆಯೇ ವ್ಯಕ್ತಿ ಹಾಗೂ ಆತನ ಸುತ್ತಮುತ್ತಲಿನವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಧೂಮಪಾನ ವ್ಯಸನದ ಪರಿಣಾಮಗಳು — ತಂಬಾಕು ಅಥವಾ ನಿಕೊಟಿನ್ ಬಳಕೆ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯು ಅಡ್ರೆನಾಲಿನ್ (ದೇಹದೊಳಗೆ ಬಿಡುಗಡೆಗೊಳ್ಳುವ ಮುದ ನೀಡುವ ವಸ್ತು) ಬಿಡುಗಡೆ ಮಾಡುತ್ತದೆ. ಅದು ದೇಹದ ಉಷ್ಣಾಂಶವನ್ನು, ಹೃದಯ ಬಡಿತವನ್ನು ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಶ್ವಾಸಕೋಶ, ಬಾಯಿ, ಸ್ತನ, ಗರ್ಭಕೋಶ, ಪ್ಯಾನ್ಕ್ರಿಯಾಸ್, ಮೂತ್ರಪಿಂಡ ಅಥವಾ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ತೊಂದರೆಗೆ ಒಳಗಾಗುವ ಅಪಾಯ ಹೆಚ್ಚು. ಹೊಗೆರಹಿತ ತಂಬಾಕು ಸೇವನೆಯನ್ನು ಮಾಡುವವರಲ್ಲಿ ಬಾಯಿ, ಧ್ವನಿಪೆಟ್ಟಿಗೆ, ಅನ್ನನಾಳ, ಪ್ಯಾನ್ಕ್ರಿಯಾಸ್ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಧೂಮಪಾನವನ್ನು ತಡೆಗಟ್ಟುವ ವಿಧಾನ: ಅನೇಕ ಜನರು ಕೋಲ್ಡ್ ಟರ್ಕಿ ವಿಧಾನದ ಮೂಲಕ ತಮ್ಮ ನಿಕೋಟಿನ್ ಚಟವನ್ನು ಬಿಡಲು ಸಮರ್ಥರಾಗಿದ್ದಾರೆ (ಆದರೆ ಮನೋವೈದ್ಯರು

ಆರೋಗ್ಯ Read Post »

ಕಥಾಗುಚ್ಛ

ಕಥಾಯಾನ

ಕಕ್ಷೆ ಡಾ.ಅಜಿತ್ ಹರೀಶಿ [11:59 am, 31/05/2020] AJITH HARISHI: ‘ಹಲೋ, ಡಾಕ್ಟ್ರೇ, ನಮ್ಮನೆ ಕೆಂಪಿಗೆ ಹೆರಿಗೆ ನೋವು ಬಂದದ್ರಾ, ಈಗ್ಲೆ ಬತ್ರ?’ ಫೋನ್ ಎತ್ತಿದೊಡನೆ ಹೇಳಿ, ನನ್ನುತ್ತರಕ್ಕೆ ಕಾಯ್ದಿತ್ತು ಆ ಸ್ವರ. ‘ನಾ ಹೆರಿಗೆ ಡಾಕ್ಟರ್ ಅಲ್ಲ, ಮಾರಾಯ್ರ,’ ಅಂದೆ. ‘ಹೋಯ್, ನೀವು ನಮ್ ದನೀನ ಡಾಕ್ಟರ ಅಲ್ದ? ನಾ ಅವ್ರಿಗೆ ಫೋನು ಮಾಡಿದ್ದಾಗಿತ್ತು’. ಫೋನ್ ಕಟ್ ಆಗಿತ್ತು. ** ಆಗಷ್ಟೇ ಆಸ್ಪತ್ರೆ ಆರಂಭಿಸಿದ್ದ ದಿನಗಳು… ಹುಟ್ಟಿದೂರಿನಲ್ಲೇ ವೈದ್ಯವೃತ್ತಿ ಆರಂಭಿಸಿದ್ದರಿಂದ ಉಳಿದ ತೊಡಕುಗಳೇನೂ ಇರಲಿಲ್ಲ. ಹೊಸ ಉತ್ಸಾಹ, ಅಪರಿಮಿತ ಆತ್ಮವಿಶ್ವಾಸ ಎನ್ನಬಹುದಾಗಿದ್ದ ದಿನಗಳು. ಮನೆ ಬಾಗಿಲಿಗೇ ಸೇವೆ ಕೊಡುವ ಹುಮ್ಮಸ್ಸು ಬೇರೇ..! ಎಲ್ಲಾ ನನ್ನ ಸುತ್ತಲೇ ಸುತ್ತುತ್ತಿದೆ, ಅನಿಸುವಂತೆ ನಡೆಯುತ್ತಿತ್ತು. ಅಂತಹದ್ದೊಂದು ದಿನ… ಬಂತಲ್ಲ ಇನ್ನೊಂದು ಫೋನ್ ಕಾಲ್… “ಹಲೋ..” “ಹಲೋ..ನಾನು ವಾಸುದೇವ ರಾವ್, ಪಂಚಾಯತ್ ಮೆಂಬರ್ರು” “ಗೊತ್ತಾಯ್ತು ಹೇಳಿ ಸರ್” “ಗುಡ್, ಗುಡ್. ಹೊಸದಾಗಿ ಬಂದ್ರೂ ಆಗ್ಲೆ ನನ್ನ ಬಗ್ಗೆನೂ ತಿಳ್ಕೊಂಡು ಬಿಟ್ರಾ..” “ನಿಮಗೆ ನನ್ನ ಬಗ್ಗೆ ಗೊತ್ತಿಲ್ಲದಿರಬಹುದು.. ನಿಮ್ ಬಗ್ಗೆ ನಂಗೊತ್ತು “ ನಾನು ಸಣ್ಣವನಿದ್ದಾಗ ಅವರನ್ನು ನೋಡಿದ್ದೆ. ಅವರೂ ನನ್ನನ್ನು ನೋಡಿದ್ದರು. ಆದರೆ ನಮ್ಮ ಒಡನಾಟ ಕಡಿಮೆ ಇತ್ತು. “ಡಾಕ್ಟರೇ.. ಅರ್ಜೆಂಟ್ ನಿಮ್ಮ ಕಿಟ್ ತಗೊಂಡು ಬನ್ನಿ ಸೀರಿಯಸ್..” ಹಳ್ಳಿಗಳ ಸ್ಥಿರ ದೂರವಾಣಿ ಕರೆ ಕಟ್ಟಾಗೋದು ಹೊಸ ವಿಷಯವೇನಲ್ಲ. ಹಿರಿಯ ವೈದ್ಯರೊಬ್ಬರು ಹಿಡಿಕೆಯಿರುವ, ಆಯತಾಕಾರದ ತಮ್ಮ ಕಿಟ್ ಒಂದನ್ನು ನೀಡಿ ಪ್ರೀತಿಯಿಂದ ಶುಭ ಹಾರೈಸಿದ್ದರು. ಹಾಗಾಗಿ ಹೊಸಕಾಲದ ಬ್ಯಾಗ್ ಖರೀದಿಸದೇ ಅದರಲ್ಲೇ ಔಷಧ ಒಯ್ಯುತ್ತಿದ್ದೆ. ಅದಂತೂ ತಾನು ರೆಡಿ ಅಂತ ತೊಡೆ ಏರಿತ್ತು. ಅವಶ್ಯವಾಗಿ ಇರಬಹುದಾದ ತುರ್ತು ಔಷಧಗಳೆಲ್ಲ ಇದೆಯಾ ಅಂತ ಮತ್ತೊಮ್ಮೆ ಪರೀಕ್ಷಿಸಿ, ನನ್ನ ಮೆಚ್ಚಿನ ಕೆಂಪು ಬಣ್ಣದ ಕ್ಯಾಲಿಬರ್ ಬೈಕ್ ಏರಿದೆ. ಜೊತೆಗೆ ಪೆಟ್ರೋಲ್ ಟ್ಯಾಂಕ್ ನ ಮೇಲೆ, ಆಚೀಚೆ ಅಲ್ಲಾಡುವ ಹಿರಿಯರು ನೀಡಿದ ಔಷಧಗಳ ಪೆಟಾರಿ..! *   * “ಓಹ್ ..! ಬಂದ್ರಾ ಬನ್ನಿ..ಬನ್ನಿ.. ಆಸರಿಗೆ ಸದ್ಯ? , ಕಮಲೀ ನೀರು ಕಾಸೆ..” ಮಹಾಬಲರಂತೂ ಅರಾಮಿದ್ದಾರೆ ಅಂತ ಲೆಕ್ಕ ತೆಗೆದೆ. ಕಮಲ ಬಹುಷಃ ಹೆಂಡತಿಯಿರಬೇಕು ಅಂತ ಯೋಚನೆ ಸಾಗುತ್ತಿತ್ತು. ತಂದೆ ಅಥವಾ ತಾಯಿಗೆ ಆರಾಮಿಲ್ಲವೇನೋ.. ಇಲ್ಲಾ, ಅರ್ಜೆಂಟ್ ಅಂದರು ಎಂದರೆ ಮಗಳಿಗೆ..ಛೇ.! ಓ ಮನಸೇ ವಸಿ ನಿಲ್ಲಪ್ಪ ಅಂದೆ. ಹೆಬ್ಬಾಗಿಲಿಗೆ ಅಖಂಡವಾಗಿ ನಿಂತ ರಾಯರನ್ನು ದಾಟುವ ದಾರಿಯ ಸಾಧ್ಯತೆಯ ಬಗ್ಗೆಯೂ ಮನಸ್ಸು ಹುಡುಕುತ್ತಿತ್ತು. ಹತ್ತಿರವಾಗುತ್ತಿದ್ದಂತೆ ಸ್ವಲ್ಪ ಮನೆಯ ಪಕ್ಕಕ್ಕೆ ಜರುಗಿದರು. ಅವರು ಹಿಂಬಾಲಿಸಿ ಎನ್ನುವ ನೋಟದೊಂದಿಗೆ ಹೆಜ್ಜೆ ಹಾಕಿದರು.  “ನಮ್ಮ ಕಮಲಿಗೂ ಸರಿ ಅರಾಮಿಲ್ಲ .. ಆದರೂ ಮಾಡ್ತಾಳೆ ಪಾಪ. ಹಳ್ಳಿಯಲ್ಲಿ ಎಲ್ಲಾ ಹೀಗೆನೇ. ಸದ್ಯ ನಾವಿಬ್ಬರೇ, ಮಕ್ಕಳು ಪ್ಯಾಟೇಲಿ ಒದ್ತಾ ಇವೆ..!” ಅಲ್ಲಿಗೆ ಕೋಟ್ಯಾಧಿಪತಿ ಕ್ವಿಜ಼್ ನಿಂದ ಹೊರಬೀಳುವ ಸನಿಹಕ್ಕೆ ನಾನು ಬಂದಿದ್ದೆ. ಒಂದೇ ಲೈಫ್ ಲೈನ್ ಉಳಿದದ್ದು. ಆಡಿಯನ್ಸ್ ಪೋಲ್..! ಪಕ್ಕದ ಓರಿಯಲ್ಲಿರುವ ಮನೆಯ ಕೆಲಸದ ಆಳಿಗೆ ಅರಾಮಿಲ್ಲವೇನೋ ಅಂದುಕೊಂಡೆ. ನಿಜಕ್ಕೂ ಜನಸೇವಕ, ಅದಕ್ಕೇ ಇರಬೇಕು ಪದೇ ಪದೇ ಪಂಚಾಯತ್ ಚುನಾವಣೆಯಲ್ಲಿ ಆರಿಸಿ ಬರ್ತಾರೆ. “ಇನ್ನು ನನಗೂ ವಯಸ್ಸಾಯ್ತು, ಈ ಕೂಲಿಯವರ ನಂಬಿ ಏನೂ ಮಾಡ್ವಾಂಗಿಲ್ಲ. ಎರಡು ದಿನ ಕೆಲಸಕ್ಕೆ ಬಂದ್ರೆ ನಾಕು ದಿನ ರಜೆ ಮಾಡ್ತಾರೆ. ಇವತ್ತೂ ನಾನೇ ಒದ್ದಾಡುದೇಯಾ. ಪಂಚಾಯತ್ ಮೆಂಬರ್  ಮೀಟಿಂಗ್ ಬೇರೆ. ಮೊದ್ಲೆಲ್ಲಾ ಈ ಕೆಲಸದವ್ರು ಹತ್ತು ತಾಸು ಕೆಲಸ ಮಾಡ್ತಿದ್ರು. ಈಗ ಎಂಟು ತಾಸು ಅಷ್ಟೇಯಾ. ಮುಂದೆಲ್ಲಾ ಆರೇ ತಾಸೆನಾ?” ‘ಅಪರೂಪಕ್ಕೆ ಆಡಿಯನ್ಸ್ ಕೂಡ ತಪ್ಪಾಗುವುದುಂಟು ಮಾರ್ರೆ’ ಅಂತ ಗೋಳಿಬಜೆಯನ್ನು ಸಕತ್ತಾಗಿ ಮಾಡುವ ಬೈಂದೂರು ಮೂಲದ ಗೋಪಾಲ ಹೇಳಿದ ಮಾತು ನೆನಪಾಯ್ತು. ತರ್ಕವೆಂಬ ತಾಟಗಿತ್ತಿಯ ಹೆಡೆಮುರಿ ಕಟ್ಟಿ ಹಿಡಿದು ಕುಳ್ಳಿರಿಸಿದೆ. ಮನಸ್ಸು ಮುಗ್ಗರಿಸಿದ್ದು ಅವರಿಗೇನು ಗೊತ್ತಾಗಲಿಲ್ವಲ್ಲ ಸದ್ಯ.. * * “ಇಲ್ಲಿ ಬನ್ನಿ … ಕಮಲೀ ಬಿಸಿ ನೀರು, ಸಾಬೂನು ತಂದಿಡೇ..” ಕೊಟ್ಟಿಗೆಯಂತಹ ಮನೆ, ಅಲ್ಲಲ್ಲ ಕೊಟ್ಟಿಗೆಯೇ. ಕಿರಿಕಿರಿ ಕೊಡುವ ರೋಗಿಗೆ ಮಂಪರು ಹತ್ತುವ ಇಂಜೆಕ್ಷನ್ ನೀಡಲು ಹೋಗಿ, ತಾನೇ ಅಕಸ್ಮಾತ್  ಆಗಿ ಚುಚ್ಚಿಕೊಂಡ ವೈದ್ಯನಂತಾಗಿತ್ತು ನನ್ನ ಪರಿಸ್ಥಿತಿ. ಬವಳಿಕೆ ಬಂದಂತಾದರೂ ಸ್ವಲ್ಪ ಸುಧಾರಿಸಿಕೊಂಡೆ. “ನಾನು ದನದ ಡಾಕ್ಟ್ರಲ್ಲ ..!” “ನೀವು  …!” “ನಾನು ಅದೇ ಅಂದ್ಕಂಡೆ, ನಿಮ್ಮ ಮುಖಲಕ್ಷಣ ನೊಡಿಯೇ ಡೌಟ್ ಬಂತು”. ಮುಖದ ಗೆರೆಗಳ ಮೇಲೆ ಅಂದಾಜಿಸಿದ್ದ ರಾಯರು ಬಹು ದೊಡ್ಡ ಮುಜುಗರದಿಂದ ನನ್ನನ್ನು ಪಾರು ಮಾಡಿದ್ದರು. ಬರೀ ಮೆಂಬರ್ ಅಲ್ಲಾ ಇನ್ನೂ ಮೇಲಿನ ಹುದ್ದೆಗೆ ಹೋಗುವ ಪ್ರತಿಭೆ ಇದೆ ಅನ್ನಿಸಿತು. “ಬನ್ನಿ ಒಳಗೆ, ಒಳ್ಳೆದಾಯ್ತು ನೀವು ಬಂದದ್ದು. ದೇವರು ಕರಿಸಿದಾಂಗೆ ಬಂದ್ರಿ. ನಮ್ಮ ಕಮಲೀ ಅದೃಷ್ಟ , ಪ್ಯಾಟೆಗೆ ಹೊಂಟವಳು ಮಜ್ಜಾನ ಮೇಲೆ. ಚೊಲೋ ಆಯ್ತು. ಕೇಳ್ತ್ಯನೇ ಕಮಲೀ, ನಮ್ಮೂರಿಗೆ ಬಂದ ಹೊಸ ಡಾಕ್ಟ್ರು ನಿನ್ನ ನೋಡುಲೆ ಬಂಜ್ರು”. ಒಳಗಿನಿಂದ ಧ್ವನಿ…”ಯನಗೆಂತ ಸುಟ್ಟ ಅರ್ಜೆಂಟ್ ಇತ್ತಿಲ್ಲೆ…ಕಲಗಚ್ಚು ಕುಡಿಯ ಬದಲಿಗೆ ಅಡಿಕೆ ತೊಗರು ಕುಡದ ಎಮ್ಮೆಕರ ಬದಕ್ತ ಇಲ್ಯಾ ಹೇಳದೇ ಚಿಂತೆ. ಸುಮ್ಮನೆ ವಯಸ್ಸಾಗಿದ್ದೆಯಾ, ಯಾವುದು ಮೊದ್ಲು , ಯಾವುದು ಕಡಿಗೆ ಹೇಳ ಬುದ್ಧಿ ಇಲ್ಲೆ “…. ಒಗಟೊಗಟಾದ ವಿಷಯ ಒಡಚಿತಲ್ಲಾ ಅಂತ… ಸದ್ಯ ಕೊಟ್ಟಿಗೆಯಿಂದ ನನ್ನ ಹೊರಗೆ ಬಿಟ್ಟರಲ್ಲ ಅಂತ ನಿಟ್ಟುಸಿರು ಬಿಟ್ಟೆ.. ಕಮಲಮ್ಮನವರಿಗೆ ಕಾಲುನೋವಿಗೆ ಔಷಧೋಪಚಾರ ಹೇಳಿ, ಹೊರಬಂದೆ. ಬಂದ ದಾರಿಗೆ ಒಂದಿಷ್ಟು ಸುಂಕ ಸಿಕ್ಕಿತ್ತಾದರೂ, ಒಂದು ರೀತಿಯ ಅವಮಾನ, ನಾನು ಬೇರೆಯ ಆಡಳಿತ ಪ್ರದೇಶದ ಗೆರೆಯೊಳಗೆ ಬಂದೆನೆಂಬ ಸಂಕೋಚ! ಅವರಿಗೆ ಬೇಕಾದ್ದು ಎಮ್ಮೆಗೆ ಉಪಚಾರ, ಕರೆದದ್ದು ನನ್ನನ್ನು! ನಾನು ಮನುಷ್ಯರ ಡಾಕ್ಟರು, ನನ್ನ ವ್ಯಾಪ್ತಿಯೇನು? ಅಂತೆಲ್ಲಾ… ಲೆಕ್ಕ. * * ಆಮೇಲೊಂದು ದಿನ ನನ್ನ ಅದೇ ಲ್ಯಾಂಡು ಲೈನಿಗೆ ಫೋನು ಬಂತು. “ಹಲೋ..ಡಾಕ್ಟರ್ರಾ..?” ನನ್ನ ಹೆಂಡತಿಯ ಅಣ್ಣನ ಧ್ವನಿ ಅಂತ ಗೊತ್ತಾಗಿ ಹೋಯ್ತು. ಅವನೇ ಬೇಕಂತ ತಮಾಷೆ ಮಾಡ್ತಿದಾನಂತ ನನ್ನ ಊಹೆ. ‘ಹೌದು ಹೇಳಿ’,  ಅಂದೆ. “ನಮ್ಮ ಆಕಳು ಹೀಟಿಗೆ ಬಂದಿದೆ, ದಯವಿಟ್ಟು ಬೇಗ ಬಂದರೆ ಅನುಕೂಲ ಆಗ್ತಿತ್ತು. ಇನ್ಸಮೈನೇಷನ್ ಇವತ್ತಾದ್ರೆ..” ಅಂದ. ಒಂದಿಷ್ಟು ಆಕಳನ್ನು ಕಟ್ಟಿಕೊಂಡು ಡೈರಿಗೆ ಹಾಲು ಕೊಡ್ತಾನೆ. “ಹೀಟಿಗೆ ಬಂದವರನ್ನೆಲ್ಲಾ ಸಂಭಾಳಿಸ ಹೋದರೆ ನಿಮ್ಮ ತಂಗಿ ಬಡಿಗೆ ತಗಳ್ತಾಳೆ” ಅಂದೆ. “ಅಯ್ಯೋ ಬಾವನನಾ..? ಒಂದು ತಾಸು ಹಿಂದೆ ವೆಟರ್ನರಿ ಡಾಕ್ಟರಿಗೆ ಫೋನ್ ಮಾಡಿದ್ದೆ. ಹಾಗಾಗಿ ಮತ್ಯಾರು ಫೋನ್ ಮಾಡಿಲ್ಲ ಅಂತ ಅಂದ್ಕೊಂಡು ರೀಡಯಲ್ ಬಟನ್ ಒತ್ತಿದೆ” ಅಂದ. ಅತ್ತೆಯ ಫೋನು ಬಂದಿತ್ತು.  ಮಗಳೊಂದಿಗೆ ಮಾತಾಡಿ ರಿಸೀವರ್ ಕೆಳಗಿಟ್ಟ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಇವನ ಕರೆ ಬಂದಿತ್ತು, ಹೆಂಡತಿಯ ತೌರುಮನೆಯಿಂದ. ಮನಸ್ಸಿಗೆ ಮತ್ತೆ ಮೊರೆತ. ದನದ ಡಾಕ್ಟರೆಲ್ಲಿ, ನಾನೆಲ್ಲಿ?! * ಈ ಹೊಸದಾಗಿ ಬಂದ ಪಶು ವೈದ್ಯರು ಮತ್ತು ನನ್ನ ನಡುವೆ ನಡೆಯುವ ಸಂದರ್ಭಗಳು ಸರ್ವೇಸಾಮಾನ್ಯವಾಯ್ತು. ದನಕ್ಕೆ, ಎಮ್ಮೆಗೆ, ಕರುಗಳಿಗೆ, ಅವುಗಳ ಹೆರಿಗೆಗೆಲ್ಲಾ ಕರೆಗಳು. ಇತ್ತೀಚೆಗೆ ಮೊದಲೇ ಕೇಳಿ ಬಿಡ್ತೀನಿ, “ಯಾರಿಗೆ?” ಅಂತ. ಈ ವ್ಯವಸ್ಥೆಗೆ, ನಾನು ಒಗ್ಗಿಹೋಗಿರುವಾಗಲೇ ಒಂದು ದಿನ ನಾನು ಪೇಷಂಟ್ ನೋಡುತ್ತಿರುವಾಗ ಬಂತು ಸ್ಥಿರ ದೂರವಾಣಿ ಕರೆ. ಪೇಷಂಟ್ ನೋಡುತ್ತಾ ಇದ್ದುದರಿಂದ ಕರೆ ಹಾಗೇ ಬಡಿದುಕೊಳ್ಳುತ್ತಿತ್ತು. ಸ್ವಲ್ಪ ಉದ್ದದ ಕರೆಯಾದ ಮೇಲೆ ಫೋನ್ ಎತ್ತಿ ನನ್ನ ಹಲೋ ಮುಗಿಯುವುದರೊಳಗೆ, ಒಬ್ಬಾಕೆ ಧ್ವನಿ.. ‘ರೀ, ಬಸ್ಟಾಂಡಿನಲ್ಲಿ ಕಾಯ್ತಾ ಇದ್ದಿ, ಕರಕೊಂಡು ಹೋಗಲೆ ಬನ್ನಿ’ ಫೋನ್ ಕಟ್.. ನನಗೆ ವಿಷಯ ಏನೆಂದು ಅರ್ಥವಾಗುವುದರೊಳಗೆ ಉತ್ತರಕ್ಕೂ ಕಾಯದೆ ಫೋನ್ ಕುಕ್ಕಿದ ಆ ಹೆಣ್ಣಿನ ಧ್ವನಿ ಹೊಸದು. ನಾನು ರಿಸೀವ್ ಮಾಡಿದಾಗಲೇ ನನ್ನ ಹೆಂಡತಿಯೂ ಮನೆಯಲ್ಲೇ ರಿಸೀವ್ ಮಾಡಿದ್ದಾಳೆ. ಮನೆಯೊಳಗೆ ಒಂದು, ಕ್ಲಿನಿಕ್ ನಲ್ಲೊಂದು ರಿಸೀವರ್ ಇಟ್ಟುಕೊಂಡಿದ್ದರಿಂದ ಇದು ಹೊಸತೇನಲ್ಲ. ಯಾವ ಸಮಯಕ್ಕಾದರೂ ಕರೆ ಬರುವ ಸಂಭವನೀಯತೆಗಳು. ಅಚಾನಕ್ ಆ ದೂರವಾಣಿ ಕರೆಯ ಧ್ವನಿ, ವಿವರಗಳನ್ನು ಮನಸ್ಸಿನಲ್ಲಿ ತಾಳೆ ಹಾಕುತ್ತಾ ಪೇಷಂಟ್ ನೋಡಿ ಮುಗಿಯುವುದರೊಳಗೆ ಮತ್ತೊಂದು ಕರೆ ಬಂತು, ಹತ್ತಿರದಲ್ಲೇ ಇದ್ದ ಒಬ್ಬ ರೋಗಿಯ ವಿಸಿಟ್ ಗೆ.  ಕ್ಲಿನಿಕ್ ನ ಪೇಷಂಟ್ ಸರತಿಯೂ  ಮುಗಿದಿದ್ದರಿಂದ ನನ್ನ ರಥವನ್ನೇರಿ ಹೊರಟು ಹೋಗಿದ್ದೆ. ಹತ್ತಿರದ ಕೆಲವು ಪೇಷಂಟ್ ಗಳನ್ನು ಅವರ ಮನೆಗೆ ಹೋಗಿ ವಿಸಿಟ್ ಮಾಡುವ ರೂಢಿಯಿತ್ತು. ಆದ್ದರಿಂದ ಮನೆಯಲ್ಲಿ ಹೇಳುವ ಅಗತ್ಯವೂ ಇರದ ಕಾರಣ, ನಾನು ಸಹಜದಂತೆ ವಿಸಿಟ್  ಮುಗಿಸಿ ಬಂದೆ. ಕ್ಲಿನಿಕ್ ನ ಸಮಯವೂ ಮುಗಿದಿತ್ತು, ಊಟದ ಸಮಯವಾದ್ದರಿಂದ ಮನೆಯೊಳಗೆ ಅಡಿಯಿಡುತ್ತಿದ್ದಂತೆ ಬಾವ ಜಗುಲಿಯಲ್ಲಿ ಸ್ಥಿರಮುದ್ರೆಯಲ್ಲಿ ಕುಳಿತಿದ್ದ. ಅವನ ಆಗಮನ ಅನಿರೀಕ್ಷಿತ. ‘ಹೋ, ಬಾವ ಅರಾಮ… ಯಾವಾಗ ಬಂದೆ?’ ಅಂದವನಿಗೆ ಹೆಂಡತಿ ಪ್ರಧಾನಬಾಗಿಲಿಗೆ ಆತು ಗುಮ್ಮಳಂತೆ ನಿಂತಿದ್ದು ಕಂಡಿತು. ಕೆಂಪುಕಣ್ಣು, ಉರಿಮೂಗು ನೋಡಿದಾಗಲೇ ಗೊತ್ತಾಗಿದ್ದು, ಓಹ್ ಇಂದು ಗಂಗೆ ಧರೆಗಿಳಿದಿದ್ದಾಳೆಂದು. ಅದು ಯಾವ ಕಾರಣಕ್ಕೆಂದು ಮನಸ್ಸಿನ ಮೂಲೆಗಳಲ್ಲೆಲ್ಲಾ ಸರ್ರೆಂದು ಜಾಲಾಡಿದರೂ ಬಗೆಹರಿಯದ ಕಾರಣ ಅವರಿಬ್ಬರ ಮುಖ ನೋಡುವಂತಾಯಿತು. ನನ್ನ ಚಹರೆಯ ಪ್ರಶ್ನೆಯನ್ನು ಓದಿದವನಂತೆ,  ಬಾವ ‘ಸವಾರಿ ಎಲ್ಲಿಂದ ಬಂದಿದ್ದು?’ ಕೋರ್ಟ್‌ ನ ಕಟಕಟೆಯಲ್ಲಿ ನಿಂತ ಅಪರಾಧಿಯ ಸ್ಥಾನ ನನಗಿತ್ತು. ‘ಇಲ್ಲೆಯಾ, ವಿಸಿಟ್ ಗೆ ಹೋಗಿದ್ದೆ,’ ನನ್ನ ಸಹಜ ಉತ್ತರಕ್ಕೆ ಸಮಾಧಾನ‌ವಾಗದ ಮಡದಿಗೆ ದುಃಖ ಉಮ್ಮಳಿಸಿ ಬಂದಿತ್ತು. ವೃತ್ತಿಯಂತೇ ಮದುವೆಯೂ ಹೊಸತು. ದಾಂಪತ್ಯಕ್ಕಿನ್ನೂ ದಮ್ ಇಲ್ಲದ ಎಳಸಿನ ಕಾಲ. ಹಿರಿಯರು ನಿಶ್ಚಯಿಸಿದ ಮದುವೆಯಾದ್ದರಿಂದ ಒಬ್ಬರನ್ನೊಬ್ಬರು ಇನ್ನೂ ಪರಿಚಿತರಾಗುತ್ತಿರುವಾಗಲೇ ನಡೆದಿತ್ತು ಈ ಅಪಸ್ವರದ ಘಟನೆ. ಅವಳಿಗೇನಾಯ್ತು, ಅರ್ಥವಾಗದ ನನಗೆ, ಬಾವನ ಪ್ರಶ್ನೆ. ‘ಬಸ್ಟಾಂಡಿನಲ್ಲಿ ಯಾರು ಕಾಯುತ್ತಿದ್ದರು? ಎಲ್ಲಿಗೆ ಬಿಟ್ಟು ಬಂದದ್ದು? ಯಾರ ಫೋನಾಗಿತ್ತು? ಅದು’ …. ಓಹ್, ಈಗ ಸರಿಯಾಯ್ತು ಲೆಕ್ಕ… ಆ ಅಪರಿಚಿತ ಕರೆ… ಆ ಕರೆಯ ಬಗ್ಗೆ ಹೆಂಡತಿಯ ಮೂಲಕ ಅವನಿಗೆ ತಲುಪಿದ ವಿಷಯ. ಈ ತರಹದ ಗೊಂದಲಗಳಿಗೆ ಕಾರಣವಾದ ಆ ದೂರವಾಣಿಕರೆ! ಮೂಲ ಹೇಗೆ ಹುಡುಕುವುದು? ನನ್ನನ್ನು ಸಮರ್ಥನೆ ಮಾಡಿಕೊಳ್ಳಲು ಏನು ಮಾಡಲಿ?ಮತ್ತೆ ಮನಸ್ಸಿನ ಕಕ್ಷೆಯೊಳಗೆ ಸುತ್ತುತ್ತಿರುವ ಪ್ರಶ್ನೆ, ನಾನ್ಯಾಕೆ ಪದೇ ಪದೇ ಈ ದೂರವಾಣಿ ಕರೆಯೊಳಗೆ ಸಿಕ್ಕಿ ಬೀಳುವುದು? ಅನ್ನುವಾಗಲೇ ಥಟ್ಟನೆ ಒಂದು ವಿಚಾರ ಹೊಳೆದಿತ್ತು. ‘ಬಾವ, ನಂಗೂ ಆ ಫೋನ್ ವಿಷಯ ಬೇಕಿತ್ತು. ಯಾರದ್ದು ಎಂದು… ಒಮ್ಮೆ ಪ್ರಯತ್ನ ಪಡೋಣ… ಅನ್ನುತ್ತಾ ನಮ್ಮ ಗ್ರಾಮದ ಸ್ಥಿರದೂರವಾಣಿ ಕರೆಗಳ ಸಂಖ್ಯೆ ನಮೂದಿಸಿದ ಕೈಪಿಡಿ ಹೊರತೆಗೆದೆ. ನಮ್ಮೂರಿನ ಪಶುವೈದ್ಯರ ಕರೆಗಳು ನನಗೆ ಬರುತ್ತಿದ್ದವಲ್ಲ, ಎಮ್ಮೆ, ಹಸು, ಕರುಗಳ ಚಿಕಿತ್ಸೆಗೆಂದು. ಅವರನ್ನೇ ವಿಚಾರಿಸಲು ಅವರಿಗೇ ಫೋನು ಮಾಡಲು ಅವರ ಸಂಖ್ಯೆ ಹುಡುಕಿದೆ. ಹೆಸರಿನ ಪಟ್ಟಿಯಲ್ಲಿ ಪಶುವೈದ್ಯರ ಹೆಸರು. ಅರೆ! ಸ್ಥಿರ ದೂರವಾಣಿ ಸಂಖ್ಯೆ ನಂದು! ಆಹ್, ನನ್ನ ಹೆಸರು ತೆಗೆದೆ…., ಆ ಸಂಖ್ಯೆ ನನ್ನ ಮನೆಯ ಸ್ಥಿರ ದೂರವಾಣಿ ಸಂಖ್ಯೆಯ ಮೊದಲಿನ ಅಂಕೆಗಳೆ…. ಆದರೆ ಕೊನೆಯ ಅಂಕೆ ಅಲ್ಲ! ಅಂದರೆ ಬೇರೆಯವರ ದೂರವಾಣಿ ಸಂಖ್ಯೆ… ಓಹ್! ಇದೊಂದು ಹೊಸ ಅನ್ವೇಷಣೆಯಾಗಿ, ನನಗೆ ಪತ್ತೆದಾರಿ ಮಾಡುವ ಮನಸ್ಸು ಚುರುಕಾಯಿತು. ‘ನೀವಿಬ್ಬರೂ ಇಲ್ಲೆ ಈ ರಿಸೀವರ್ ಇಂದ ಕೇಳಿ. ನಾನು ವಿಚಾರಿಸುತ್ತೇನೆ.’ ಅನ್ನುತ್ತಾ, ನನ್ನ ಹೆಸರಿನ ಮುಂದೆ ನಮೂದಿಸಿದ್ದ ಸಂಖ್ಯೆಗೆ ಕರೆಯಿತ್ತೆ. ಫೋನ್

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಲೋಕದ ಏಕಾಂತದಲಿ ನಿನ್ನ ಹುಡುಕಾಡಿದ್ದೇನೆ ನಾನು ಬಯಸಿ ನೋವನುಂಡರು ಕಾಣಲು ತಿರುಗಿದ್ದೇನೆ ನಾನು ನೋವಿನ ಹಾಸಿಗೆಯಲಿ ಮಲಗಿ ದಿನ ಕಳೆದಿದ್ದೇನೆ ಮೌನವ ಅಪ್ಪಿಕೊಂಡು ಕಾಲು ಹಾದಿ ನಡೆದಿದ್ದೇನೆ ನಾನು ಬದುಕು ಹತಾಶೆಯಲಿ ಮಿಂದಿರುವುದು ನೋಡು ಇರುವ ತನಕ ಜೀವಗಳೆರಡು ಹೊಂದಿ ನಡೆಯಲೆಂದಿದ್ದೇನೆ ನಾನು ಬಯಸಿದ ಗಳಿಗೆಯಿಂದ ಬರಿ ಚಿಂತೆ ಮೌನಗಳೆ ಆವರಿಸಿವೆ ಹೊರಗಿನ ಚಂದಕಿಂತ ಒಳಗಿರುವ ಅಂದವ ಬಯಸಿದ್ದೇನೆ ನಾನು ನಗುವ ಚೆಲ್ಲಿ ಬಾ ಖಾಲಿಯಾದ ನನ್ನೆದೆಯ ತುಂಬಿಸು ಈ ಮರುಳ ಚೆಂದಾಗಿ ಬದುಕಲು ದೇವರಿಗೆ ಬಿದ್ದು ಬೇಡುತ್ತೇನೆ ನಾನು *******

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಬದುಕುವುದು ಹೇಗೆ? ಕನ್ನಡ:ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಲಯಾಳಂ: ಚೇತನಾ ಕುಂಬ್ಳೆ ಎಲ್ಲವನು ಬಿಚ್ಚಿ ಬತ್ತಲೆಯಾಗಿಸುವ ಈ ದುಶ್ಯಾಸನರ ಮಧ್ಯೆ ಬದುಕುವುದು ಹೇಗೆ ? ಕಾಮನೆಗಳ ಬದಿಗೊತ್ತಿ ಲಿಂಗೈಕ್ಯಳಾದ ಅಕ್ಕನ ಹೆಸರು ಹೇಳಿ ನಾಪತ್ತೆಯಾಗುವ ತಂಗಿಯರ ಬಗ್ಗೆ ಬರೆಯುವುದು ಹೇಗೆ ? ಮಾತು ಬದಲಾಯಿಸುವ ನಾರದರ ಸಂತಾನ ಮೃಗವಾಗಿ ಸುಳಿಯುವ ಮಾರೀಚನ ಬಳಗ ಪ್ರತ್ಯಕ್ಷವಾದಾಗ ನಿಜರೂಪ ಅರಿಯುವುದು ಹೇಗೆ ? ಶಾಪಗ್ರಸ್ತ ಅಹಲ್ಯೆ ಶೋಕತಪ್ತ ಊರ್ಮಿಳೆ ದಿನವೂ ಅಳುವಾಗ ದೂರ ಸರಿಯುವುದು ಹೇಗೆ ? ಕಲ್ಲುದೇವರಿಗೆ ಮಂಗಳಾರತಿ ಮಾಡಿ ಹಲ್ಲುಗಿಂಜುವ ಸರ್ವನಾಮಧಾರಿಗಳು ದೂರ ನಿಂತವರಿಗೆ ತೀರ್ಥ ಚಿಮುಕಿಸಿದಾಗ ಆದ ಮೈಲಿಗೆಯನ್ನು ತೊಳೆಯುವುದು ಹೇಗೆ ? ಸುಂದರ ಸೌಧ ಕಟ್ಟಲು ಇಟ್ಟಿಗೆ ಒಟ್ಟಾಗಿಸಿ ಕಾಳಸಂತೆಗೆ ವಿಕ್ರಯಿಸಿ ಕಂಬಿ ಎಣಿಸುವ ಮಂದಿಯ ಜತೆ ದಿನ ಕಳೆಯುವುದು ಹೇಗೆ ? ನೀರಿಗೆ ಬರವಾದಾಗಲೂ ಗಲ್ಲಿಗಲ್ಲಿಗೆ ಸಾರಾಯಿ ತಲುಪಿಸುವ ಜನಸೇವಕರು ಕೆಲವೊಮ್ಮೆ ಅಸಹ್ಯವಾಗಿ ನಗುವಾಗ ಸಹಿಸುವುದು ಹೇಗೆ ? ಅಹಿತಕರ ಘಟನೆಗಳು ನಡೆದ ಮರುದಿನ ಶಾಂತಿಸಭೆಯಲ್ಲಿ ಸಾಂತ್ವನ ಹೇಳುವ ಮುಖ ವಾಡಗಳ ನಿಜ ಬಣ್ಣ ತಿಳಿಯುವುದು ಹೇಗೆ ? ಹಗಲಿಗೆ ಕಣ್ಣು ತೆರೆಯದೆ ಬೆಳದಿಂಗಳಲ್ಲಿ ನಗುವ ಚಂದಿರನ ಕರೆಯುವುದು ಹೇಗೆ ? ತಂಗಾಳಿ ಬೀಸಿದಾಗ ಪುಳಕಗೊಳ್ಳುವ ಮನದಲ್ಲಿ ಪ್ರೀತಿಯ ಸೆಲೆ ಬತ್ತುವುದು ಹೇಗೆ ? ಸತ್ಯ ಹೇಳಿದರೆ ಭಯ! ಸುಳ್ಳು ಬರೀ ಭ್ರಮೆ! ಬದುಕುವುದು ಹೇಗೆ ? ಬರೆಯುವುದು ಹೇಗೆ ? ****** [7:32 PM, 5/30/2020] chethana KUMBLE kumble: എങ്ങനെ ജീവിക്കും? എല്ലാം അഴിച്ചിട്ട് നഗ്നമാക്കുന്ന ഈ ദുശ്ശാസനന്മാരുടെ ഇടയിൽ എങ്ങനെ ജീവിക്കും ഇഷ്ട്ടങ്ങളെ തന്നുള്ളിലൊതുക്കി ലിംഗൈക്യമായ ‘അക്ക’യുടെ പേരും പറഞ്ഞ് കാണാതാകുന്ന സഹോദരിമാരെ പറ്റി എങ്ങനെ എഴുതും വാക്ക് മാറുന്ന നാരദന്റെ സന്താനം, മൃഗമായി മാറുന്ന മാരീചന്റെ സമൂഹം, പ്രത്യക്ഷപ്പെടുമ്പോൾ സത്യം എങ്ങനെ തിരിച്ചറിയും ശപിക്കപ്പെട്ട അഹല്യയും ദുഃഖിതയായ ഊർമ്മിളയും എപ്പോഴും കരയുമ്പോൾ എങ്ങനെ അകന്ന് നിൽക്കും കല്ല് വിഗ്രഹങ്ങളെ പൂജിച്ച് പല്ലിളിക്കുന്ന പൂജാരിമാർ ദൂരെ നിന്ന് തീർത്ഥം കുടയുമ്പോൾ ഉണ്ടായ അശുദ്ധത്തെ എങ്ങനെ കഴുകിക്കളയും വെള്ളതിന് ക്ഷാമം വരുമ്പോഴും മുക്കിലും മൂലയിലും കള്ള് എത്തിക്കുന്നവർ ചിലപ്പോൾ അസഹ്യമായി ചിരിക്കുമ്പോൾ എങ്ങനെ സഹിക്കും അഹിതകരമായ സംഭവം നടന്ന പിറ്റേദിവസം അനുസ്മരണച്ചടങ്ങിൽ സാന്ത്വനമേകുന്ന മുഖംമൂടികളുടെ തനിനിറം എങ്ങനെ തിരിച്ചറിയും പകൽ കണ്ണ് തുറക്കാതെ നിലാവിൽ പുഞ്ചിരിക്കുന്ന ചന്ദ്രനെ എങ്ങനെ വിളിക്കും കുളിർക്കാറ്റ് വീശുമ്പോൾ രോമാഞ്ചം കൊള്ളുന്ന മനസിൽ എങ്ങനെ സ്നേഹം വറ്റും ? സത്യം പറഞ്ഞാൽ ഭയം നുണ വെറും ഭ്രമമാണ്. എങ്ങനെ ജീവിക്കും ? എങ്ങനെ എഴുതും? ****

ಅನುವಾದ ಸಂಗಾತಿ Read Post »

ಇತರೆ

ಪ್ರಸ್ತುತ

ಸಮಯ ಅಮೂಲ್ಯ ಸಮಯ ಅಪವ್ಯಯ ಮಾಡದಿರುವುದು ಹೇಗೆ? ಜಯಶ್ರೀ.ಜೆ.ಅಬ್ಬಿಗೇರಿ. ಎಲ್ಲವನ್ನೂ ಗೆಲ್ಲಬಹುದು.ಸಮಯವನ್ನು ಗೆಲ್ಲಲಾಗುವುದಿಲ್ಲ. ಎಲ್ಲವನ್ನೂ ಕೊಳ್ಳುವ ಶಕ್ತಿ ಇರುವ ಸಿರಿವಂತನೂ ಬಡವ ಸಮಯದ ಮುಂದೆ. ಎಲ್ಲರೂ ನಿದ್ರಿಸುವಾಗಲೂ ಇದು ಜಾಗೃತವಾಗಿಯೇ ಇರುತ್ತದೆ. ಸಮಯವನ್ನು ಗೆಲ್ಲಲಾಗುವುದಿಲ್ಲ ಆದರೆ ಸರಿಯಾದ ಸಮಯ ನಿರ್ವಹಣೆ ಮಾಡಿ ಗೆಲ್ಲಬಹುದು. ಕನಸುಗಳನ್ನು ನನಸಾಗಿಸಬಹುದು. ಅಂಥವರನ್ನು ಯಶಸ್ವಿಗಳು ಎಂದು ಗುರುತಿಸಿ ಗೌರವಿಸುತ್ತಾರೆ. ಇವೆಲ್ಲ ಸಮಯದ ಕುರಿತಾದ ಸಾಮಾನ್ಯ ಮಾತುಗಳು. ‘ನೆನಪಿಡಿ, ಸಮಯ ಹಣವಿದ್ದಂತೆ.’ ಎನ್ನುವ ಬೆಂಜಮಿನ್ ಫ್ರಾಂಕ್ಲಿನ್ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಅದನ್ನು ನಂಬುತ್ತೇವೆ. ಆದರೂ ಸಮಯದ ಅಪವ್ಯಯದ ಬಗ್ಗೆ ಹೆಚ್ಚು ಒತ್ತನ್ನು ನೀಡುವುದೇ ಇಲ್ಲ. ಬಹಳ ಸಲ ಮನೋರಂಜನೆಗಳಲ್ಲಿ ಅಮೂಲ್ಯ ಸಮಯ ಹಾಳುಮಾಡುತ್ತೇವೆ. ಇದು ಮನಸ್ಸಿಗೆ ಮುದ ನೀಡುತ್ತದೆಯಾದರೂ ದೀರ್ಘ ಸಮಯದ ನಂತರ ಇದರ ದುಷ್ಪರಿಣಾಮ ಆಗದೇ ಇರದು. ಸಮಯದ ಅಪವ್ಯಯವನ್ನು ತಡೆಯುವ ಮುನ್ನ ನಾವೇಕೆ ವ್ಯರ್ಥ ಸಮಯ ಕಳೆಯುತ್ತಿದ್ದೇವೆಂದು ತಿಳಿಯುವುದು ಮುಖ್ಯ. ಸೋಲಿನ ಭಯ ಪರಿಣಾಮಕಾರಿ ಕೆಲಸಗಳ ಆಧಾರದ ಮೇಲೆ ಸಮಾಜವು ಕೆಲವು ಉನ್ನತ ಸ್ತರಗಳನ್ನು ಗುರುತಿಸಿರುತ್ತದೆ. ಸೋತ ಹೆಸರನ್ನು ಪಡೆದುಕೊಳ್ಳುವ ನೋವು ಯಾರಿಗೂ ಬೇಕಿಲ್ಲ. ಹೀಗಾಗಿ ಏನೂ ಮಾಡದೇ ಇರುವುದು ಒಳಿತು ಎಂದೆನಿಸಿಬಿಡುತ್ತದೆ. ಸೋಲಿನ ಭಯ ಇರುವವರಿಗೂ ವ್ಯರ್ಥ ಸಮಯ ಕಳೆಯುವಿಕೆ ಮತ್ತು ಕೆಲಸ ಮುಂದೂಡುವಿಕೆಯು ಅದರೊಂದಿಗೆ ಅಂಟಿಕೊಂಡಿರುತ್ತವೆ. ಆದರೆ ಇದು ಬದುಕಿನಲ್ಲಿ ಸಂಪರ‍್ಣ ವೈಫಲ್ಯತೆಯನ್ನು ಮನೆ ಮಾಡಿಸುವಷ್ಟು ಅಪಾಯಕಾರಿ. ಭವಿಷ್ಯವನ್ನು ನಿರೀಕ್ಷಿಸುವ ಮಟ್ಟಕ್ಕೆ ಕರೆದೊಯ್ಯುತ್ತದೆ. ಕರ‍್ಯದ ಗುಣಮಟ್ಟವನ್ನು ಹೆಚ್ಚಿಸುವತ್ತ ಗಮನ ನೀಡಿದರೆ ಸೋಲಿನ ಭಯ ಕಡಿಮೆಯಾಗುವುದು. ಪರಿಪರ‍್ಣತೆಯ ಮುಂದಾಲೋಚನೆಯಲ್ಲಿ ತಡೆ ಹಿಡಿದುಕೊಳ್ಳದಿರಿ.’ಯಶಸ್ವಿ ವ್ಯಕ್ತಿಯು ವಿಫಲರು ಮಾಡಲು ಇಷ್ಟಪಡದದ್ದನ್ನೇ ಮಾಡುವ ಅಭ್ಯಾಸ ಹೊಂದಿರುತ್ತಾರೆ.’ಎನ್ನುವ ಇ.ಎಂ.ಗ್ರೇ ಮಾತುಗಳನ್ನು ಅರ್ಥೈಸಿಕೊಳ್ಳಬೇಕು.. ನಿರುತ್ಸಾಹ ಅನಾರೋಗ್ಯ ಜೀವನ ಶೈಲಿಯುಳ್ಳವರಲ್ಲಿ ಕಡಿಮೆ ಶಕ್ತಿ ಹೆಚ್ಚು ನಿರುತ್ಸಾಹ ಕಂಡು ಬರುತ್ತದೆ. ಸಾಧಿಸಲು ಮನಸ್ಸೇ ಆಗುವಂಥ ಮನೋಭಾವದಲ್ಲಿ ಸಿಲುಕಿ ಹಾಕಿಕೊಂಡು ಬಿಡುತ್ತಾರೆ. ಇದು ಸಮಯದ ಅಪವ್ಯಯಕ್ಕೆ ಕಾರಣವಾಗುತ್ತದೆ. ಅನಾರೋಗ್ಯಕರ ಜೀವನ ಶೈಲಿಯು ದಣಿವನ್ನು,ಜಡತ್ವನ್ನು ಹೆಚ್ಚಿಸುವುದಲ್ಲದೇ ನಿಷ್ಕಿçÃಯರನ್ನಾಗಿಸುತ್ತದೆ.ನಿರುತ್ಸಾಹದ ಹಿಂದಿನ ಮೂಲ ಕಾರಣವನ್ನು ಹುಡುಕಲೇಬೇಕು. ಅಂದಾಗ ಮಾತ್ರ ಮುಂದೆ ಹೆಜ್ಜೆ ಇಡಲು ಅನುವಾಗುತ್ತದೆ. ಇದಕ್ಕೆ ಯಶಸ್ವಿ ವ್ಯಕ್ತಿಗಳು ಕಂಡು ಕೊಂಡಿರುವ ದಾರಿಯೆಂದರೆ ಮುಂಜಾನೆ ಹೊತ್ತಿನಲ್ಲಿ ವಾಕಿಂಗ್ ಜಾಗಿಂಗ್ ಮಾಡುವುದು. ಇದು ದಿನವೆಲ್ಲ ಉತ್ಸಾಹ ಭರಿತರನ್ನಾಗಿಸುತ್ತದೆ. ದೈಹಿಕ ಚೈತನ್ಯ ಕಡಿಮೆಯಾದರೆ ನಿರುತ್ಸಾಹ ಜಪ್ಪಯ್ಯ ಅಂದರೂ ಬಿಟ್ಟು ಹೋಗಲ್ಲ. ಆದ್ದರಿಂದ ವ್ಯಾಯಾಮಗಳಲ್ಲಿ ತೊಡಗಿಸುಕೊಳ್ಳುವುದು ಅಗತ್ಯ. ದೃಷ್ಟಿ ಕೋನದ ಅಭಾವ ‘ಆಲಿಸ್ ಇನ್ ವಂಡರ್ ಲ್ಯಾಂಡ್’ ಕೃತಿಯಲ್ಲಿಯ ಘಟನೆಯೊಂದು ನನಗೆ ನೆನಪಾಗುತ್ತಿದೆ. ಆಲಿಸ್ ಕಾಡಿನಲ್ಲಿ ಹೋಗುತ್ತಿರುವಾಗ ಮುಂದಿನ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಬೆಕ್ಕನ್ನು ಕೇಳುತ್ತಾಳೆ. ಅದಕ್ಕೆ ಬೆಕ್ಕು ‘ನಿನಗೆಲ್ಲಿ ಹೋಗುವುದಿದೆ?’ ಎಂದು ಕೇಳುತ್ತದೆ.’ಎಲ್ಲೂ ಹೋದರೂ ನಡೆಯುತ್ತದೆ.’ ಎನ್ನುತ್ತಾಳೆ ಖಚಿತವಾಗಿ ಎಲ್ಲಿಗೆ ಹೋಗಬೇಕೆನ್ನುವುದು ನಿನಗೆ ಗೊತ್ತಿಲ್ಲವೆಂದರೆ ದಾರಿ ಎಲ್ಲೋ ಒಂದು ಕಡೆ ಕರೆದೊಯ್ಯುತ್ತದೆ ಹೋಗು.’ಖಚಿತ ಗುರಿ ಇಲ್ಲದಿದ್ದಾಗ ಹೀಗೆ ಎಲ್ಲಿ ಬೇಕಾದಲ್ಲಿ ಅಲೆದಾಡಿ ಸಮಯ ವ್ಯರ್ಥವಾಗುತ್ತದೆ..ಆದ್ದರಿಂದ ಖಚಿತ ಗುರಿ ಹೊಂದಬೇಕು. ಸಮಯದ ಅಪವ್ಯವ ತಡೆಯಲು ಮೂರು ‘ಸಿ’ಗಳನ್ನು ಅಳವಡಿಸಿಕೊಳ್ಳಿ. ಸೆರೆ ಹಿಡಿಯುವಿಕೆ. ಮಾಡ ಬೇಕಾದ ಕೆಲಸಗಳನ್ನು ಸೆರೆ ಹಿಡಿಯುವುದರಿಂದ ಉತ್ಪಾದಕತೆ, ಕಾರ‍್ಯಕ್ಷಮತೆ, ದಕ್ಷತೆ ಗುಣಿಸಿದಷ್ಟು ಹೆಚ್ಚುತ್ತವೆ. ಮೆದುಳು ನಮ್ಮ ದೇಹದ ಒಂದು ಚುರುಕಾದ ಅವಯವವಾದರೂ ಅದು ಸ್ವಭಾವದಲ್ಲಿ ಸೋಮಾರಿಯಾಗಿದೆ. ಬೇಕಾದದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದಾಗೊಂದಿಷ್ಟು ನೆನಪಿಗೆ ಬರುತ್ತದೆ. ನೆನಪಾಗದಿದ್ದರೆ ನಮಗೆ ಒತ್ತಡ ಉಂಟಾಗುತ್ತದೆ.ಇದರಿಂದ ನಮ್ಮ ಮೆದುಳಿಗೆ ನಾವೇ ಘಾಸಿ ಮಾಡಿಕೊಳ್ಳುತ್ತೇವೆ ಎಂದು ಅನೇಕ ಸಂಶೋಧನೆಗಳ ವರದಿಗಳು ಹೇಳಿವೆ. ಅಷ್ಟೇ ಅಲ್ಲ ಕಾರ‍್ಯಕ್ಷಮತೆ ಮತ್ತು ಉತ್ಪಾದಕತೆಯ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅತ್ಯಗತ್ಯವಾಗಿ ಬೇಕಾದ ವಿಚಾರಗಳನ್ನು ಬರೆದಿಡಲು ನೋಟ್ ಪ್ಯಾಡ್ ಒಂದನ್ನು ಬಳಿಸಿ. ಇಲ್ಲದಿದ್ದರೆ ಮೊಬೈಲ್‌ನಲ್ಲಿರುವ ನೋಟ್‌ನ್ನು ಬಳಸಿ.ಮೆದುಳಿನಿಂದ ತೆಗೆದು ಇದರಲ್ಲಿ ದಾಖಲಿಸಬೇಕು. ಯಾವುದು ಯಾವಾಗ ನೆನಪಾದರೂ ಅದರಲ್ಲಿ ಬರೆಯಲು ಸಾಧ್ಯ.ಮಾಡದೇ ಉಳಿದ ಕೆಲಸಗಳ ಪಟ್ಟಿಯೂ ಅದರಲ್ಲಿ ಗೊತ್ತಾಗುತ್ತದೆ. ಜಗತ್ಪçಸಿದ್ಧ ವರ್ಜಿನ್ ಗ್ರೂಪ್‌ನ ಮಾಲಿಕ ರಿಚರ್ಡ್ ಬ್ರಾನ್ಸನ್ ಯಾವಾಗಲೂ ತಮ್ಮ ಹತ್ತಿರ ಒಂದು ನೋಟ್ ಪ್ಯಾಡ್‌ನ್ನು ಇಟ್ಟುಕೊಳ್ಳುತ್ತಾರೆ.ಇದೊಂದು ತರ ಎಕ್ಸಟರ್ನಲ್ ಹಾರ್ಡ್ ಡಿಸ್ಕ್ ತರಾ. ಡಿಸ್ಕ್ ನಮ್ಮ ಮೆದುಳಿನ ಜಾಗವನ್ನು ಖಾಲಿ ಮಾಡಲು ಅನುಕೂಲವಾಗುತ್ತದೆ. ಮೆದುಳು ಮತ್ತೆ ಹೊಸದಾಗಿ ಆಲೋಚಿಸಲು ಉತ್ತೇಜನ ನೀಡಿದಂತಾಗುತ್ತದೆ. ಒತ್ತಡ ಕಡಿಮೆಯಾಗಿ ಏಕಾಗ್ರತೆ ಹೆಚ್ಚುತ್ತದೆ. ಇವೆಲ್ಲ ಕರ‍್ಯಕ್ಷಮತೆಯ ಮೇಲೆ ಅತ್ಯಧಿಕವೆನಿಸುವಷ್ಟು ಸುಧಾರಣೆ ತರುತ್ತವೆ. ಕ್ಯಾಲೆಂಡರ್ ಈ ಸಂಜೆ ನನಗೆ ಇಂಥ ಲೇಖನವನ್ನು ಓದುವುದಿದೆ. ನನ್ನ ಗೆಳೆಯ/ತಿಯ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸುವುದಿದೆ. ಇದು ಕಾಲೇಜ್ ಫೀ ತುಂಬಲು ಕೊನೆಯ ದಿನಾಂಕ. ಇವೆಲ್ಲವಕ್ಕೆ ನಿಗದಿತ ದಿನಾಂಕವನ್ನು ಗುರುತಿಸುವುದು.ಹೀಗೆ ಮಾಡುವುದರಿಂದ ಮೆದುಳು ರಿಲ್ಯಾಕ್ಸ್ ಆಗಿರುತ್ತದೆ. ಮತ್ತು ಮಾಡಲೇ ಬೇಕಾದ ಕೆಲಸಗಳು ಮಾಡಲಾಗದೇ ಉಳಿಯುವುದಿಲ್ಲ. ಸೆರೆಹಿಡಿಯುವರಿಂದ ಮತ್ತು ಕ್ಯಾಲೆಂಡರ್ ಬಳಿಸಿದ್ದರಿಂದ ಯಾವ ಕೆಲಸ ಯಾವಾಗ ಮಾಡುವುದಿದೆ ಎನ್ನುವುದರ ಬಗೆಗೆ ಸಂಪೂರ್ಣ ಚಿತ್ರಣ ಸಿಗುತ್ತದೆ. ಬೆಳಿಗ್ಗೆದ್ದು ಕ್ಯಾಲೆಂಡರ್ ನೋಡಿದರೆ ಸಾಕು ಇಂದು ನಾನು ಯಾವ ಮುಖ್ಯ ಕೆಲಸಗಳನ್ನು ಮಾಡಬೇಕಾಗಿದೆ ಎನ್ನುವ ದೃಶ್ಯ ಕಣ್ಮುಂದೆ ಬರುತ್ತದೆ. ರಾತ್ರಿ ಮಲಗುವಾಗ ಅಂದು ನಿಗದಿಪಡಿಸಿದ್ದ ಕೆಲಸಗಳೆಲ್ಲ ಮಾಡಿ ಆಯಿತೇ? ಎಂದು ಚೆಕ್ ಮಾಡಿಕೊಳ್ಳಬೇಕು. ಉಳಿದಿದ್ದರೆ ಮತ್ತೆ ಅದನ್ನು ಎಂದು ಮಾಡಲಾಗುವುದು ಎಂದು ಕ್ಯಾಲೆಂಡರ್‌ನಲ್ಲಿ ಗುರುತಿಸಿಕೊಳ್ಳುವುದು. ಇದರಿಂದ ಸಮಯ ನರ‍್ವಹಣೆಯೂ ಆಗುತ್ತದೆ ಮತ್ತು ಮಾಡುವ ಕೆಲಸಗಳಿಗೆ ಸರಿಯಾದ ದಿಕ್ಕು ಸಿಗುತ್ತದೆ. ಏಕಾಗ್ರತೆ ಮೊದಲನೆಯ ‘ಸಿ’ ಕ್ಯಾಪ್ಚರ್ ಮೆದುಳಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಎರಡನೇ ‘ಸಿ’ ಕ್ಯಾಲೆಂಡರ್ ಯಾವ ಯಾವ ಕೆಲಸ ಯಾವಾಗ ಎನ್ನುವ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಸರಿಯಾದ ಫಲಿತಾಂಶ ಪಡೆಯಲು ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು. ಬೇರೆ ಬೇರೆ ವಿಚಾರಗಳು ಮನಸ್ಸಿನೊಳಗೆ ಸದ್ದು ಮಾಡತೊಡಗಿದರೆ ಅವುಗಳನ್ನು ನೋಟ್ ಪ್ಯಾಡಿನಲ್ಲಿ ಬರೆದರೆ, ಮೆದುಳು ಮತ್ತೆ ಕಾರ‍್ಯದತ್ತ ಕೇಂದ್ರೀಕರಿಸಿ ಅಡೆತಡೆಗಳಿಲ್ಲದ ಕೆಲಸ ಮಾಡಲು ಸಾಧ್ಯ. ಸಾಮಾನ್ಯವಾಗಿ ಏಕಾಗ್ರತೆ ಮುಂಜಾನೆ ಹೆಚ್ಚಿರುತ್ತದೆ. ಮುಖ್ಯವಾದ ಕೆಲಸಗಳನ್ನು ಮುಂಜಾನೆಯೇ ಮಾಡಿ ಮುಗಿಸುವುದು ಸೂಕ್ತ. ಇದರಿಂದ ಮುಖ್ಯವಾದ ಕೆಲಸಗಳನ್ನು ಚೆನ್ನಾಗಿ ಬೇಗ ಮುಗಿಸಲು ಸಾಧ್ಯವಾಗುವುದು. ‘ಸಿಂಹವೂ ಸಹ ಮೊದಲು ಎರಡು ಹೆಜ್ಜೆ ಹಿಂದೆ ಹೋಗಿ ಬೇಟೆ ಆಡುತ್ತದೆ.’ ಹಾಗೆಯೇ ನಾವೂ ಸಹ ಏಕಾಗ್ರತೆ ಆಗುತ್ತಿಲ್ಲವೆಂದರೆ ಸ್ವಲ್ಪ ಹೊತ್ತು ವಿರಾಮ ಪಡೆದು ಕೆಲಸಕ್ಕೆ ಮರಳುವುದು ಒಳ್ಳೆಯದು. ಈ ಎರಡು ಹೆಜ್ಜೆಗಳ ವಿರಾಮ ಪಡೆಯುವುದರಿಂದ ಪುನಃಶ್ಚೇತನ್ಯ ಉಂಟಾಗುತ್ತದೆ. ಬದುಕಿನ ಪ್ರತಿ ಕ್ಷಣವನ್ನು ಸುಸಂಘಟಿತವಾಗಿ, ಉತ್ಪಾದನಶೀಲ, ಶಿಸ್ತು ಬದ್ಧ ಮಾಡಬೇಕೆಂದರೆ ಈ ಮೂರು ‘ಸಿ’ ಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯ. ಈ ರೀತಿಯ ಕರ‍್ಯ ನರ‍್ವಹಣೆಯು ಸಮಯದ ಅಪವ್ಯವನ್ನು ತಡೆಯುವುದಲ್ಲದೇ ಕಾರ‍್ಯಕ್ಷಮತೆ ಮತ್ತು ಫಲಿತಾಂಶವನ್ನು ಅಧಿಕಗೊಳಿಸುತ್ತದೆ. ‘ನಿಮ್ಮ ಪ್ರಪಂಚದಲ್ಲಿ ನೀವು ಬಹಳಷ್ಟು ಆಶಿಸುವ ಬದಲಾವಣೆ ನೀವಾಗಿ.’ ಎನ್ನುವ ಗಾಂಧೀಜಿಯವರ ಮಾತನ್ನು ಅಳವಡಿಸಿಕೊಂಡರೆ ಸಮಯದ ಸವಿ ಸವಿಯಲು ಸಾಧ್ಯ. ********

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಸಮ್ಮಾನದ ಬೀಡಿಗೆ ಶಾಲಿನಿ ಆರ್. ಪ್ರಕೃತಿಯ ಭಾವೊತ್ಕರ್ಷ ದಿನದಿಂದ ದಿನಕೆ ಎಲ್ಲೆಲ್ಲೂ ನಗೆಯ ರಂಗವಲ್ಲಿ ನದಿ ಕಾನನಗಳ ಅಂಗಳದ ತುಂಬ, ಹೂ ಹಾಸಿದೆ ಡಾಂಬರಿನ ಹಾದಿಯುದ್ದಕೂ ಮರುಳಾಗಿ ಒಂದೇ ಹಠ ತುಸು ಹೆಚ್ಚೆ ಹೊತ್ತು ನಿಲುವೆ ವಾಹನಗಳ ಸುಳಿವಿರದ ಹಾದಿ ತುಂಬ, ಕಂಡು ಕಾಣದ ಹಕ್ಕಿ ಪಕ್ಕಿ ಮರಳಿ ಕಲರವ ಮೂಲೆ ಮೂಲೆಯ ಕಾಂಕ್ರೀಟಿನ ಕಾಡಿನಲ್ಲೆಲ್ಲಾ, ಜಂಗಮವಾಣಿಯಲಿ ಸೆರೆ ಹಿಡಿದರು ದಣಿವಾರದ ಪ್ರಕೃತಿಯ ಹಾವಾಭಾವ ಮತ್ತದರ ಕಾಪಿಡುವ ಧಾವ, ಮನುಜನ ಸಹಜ ಭಾವ! ನಿಧಾನಿಸಿದೆ ಪ್ರಕೃತಿ ಹೂ ಮನದ ಉಸಿರಿನೇರಿಳಿತದಲಿ ಶುದ್ದ ನರನಾಡಿನಲಿ , ಸಮ್ಮಾನದಿ ನಲಿವ ಪರಿಸರಕೂ ಬಂದಿದೆ ಉನ್ಮಾದ ಎಂದೋ ಕಳೆದ ಪಾರದರ್ಶಕ ನಡಿಗೆ ಕಳೆಯದಿರಲಿ ಮತ್ತೆಂದು ಹರಕೆ ತೇರು ಹರಿದಿದೆ, ತಗ್ಗು ದಿಬ್ಬಗಳ ಬಾಳಿನಲು ಸಗ್ಗತೋರಿದೆ ಸೃಷ್ಟಿ ಸಮಷ್ಟಿ, ಹುಸಿ ಮುನಿಸ ಮುಸಿ ನಗುತ ಕುಡಿಗಣ್ಣಲೆ ಸನ್ನೆ ಮಾಡಿಹಳು ಹಸಿರುಟ್ಟು ನಲಿದು ಮತ್ತೆ ಎಚ್ಚರಿಸುತಿಹಳು, ಪಾಠ ಕಲಿಸಲೆಂದೇ ಬಂದ ಉಸಿರ ಸೋಕಿದ ಗಾಳಿ, ಪಲ್ಲಟಗೊಂಡಿದೆ ಧಾವಂತ ಬದುಕು, ಅತಿಯಲ್ಲೆ ಅವನತಿಯ ಸೂತ್ರ ಹಿಡಿದು, ಮತ್ತೆ ಹುಡುಕಾಟ ಮೂಲ ಮಂತ್ರದ ತಡಕಾಟ ಮುಖವಾಡ ಇದ್ದ ಮುಖಕೆ ಮತ್ತೊಂದು ಮುಖವಾಡದ ಕವಚ ಕಳಚಿಡುವ ತವಕ ವೇಗ, ಮತ್ತೆ ಸರಳ ಬದುಕಿಗೆ ಸಹಜ ಸಮ್ಮಾನದ ಬೀಡಿಗೆ… ************

ಕಾವ್ಯಯಾನ Read Post »

ಇತರೆ

ಅವ್ವನ ನೆನಪಲಿ

ಅವ್ವನ ನೆನಪಲಿ… ಮಲ್ಲಿಕಾರ್ಜುನ ಕಡಕೋಳ ಸಗರನಾಡು – ಮಸಬಿನ  ಪ್ರಾಂತ್ಯದ ಸುರಪುರ ಬಳಿಯ ” ಜಾಲಿಬೆಂಚಿ ”  ಅವ್ವನ  ತವರೂರು. ಏಳೂರು  ಗೌಡಕಿಯ ವತನದಾರ ಮನೆತನದಾಕೆ.  ಕಡಲೇಬೇಳೆ ಬಣ್ಣದ ತುಂಬು ಚೆಲುವೆಯಾದ  ಆಕೆಯನ್ನು ನೋಡಿದ  ಅಪ್ಪನಿಗೆ, ಮದುವೆಯಾಗುವುದಾದರೇ.. ಈ ಸಾಹೇಬಗೌಡರ ಮಗಳು ನಿಂಗಮ್ಮ ಗೌಡತಿಯನ್ನೇ ಆಗಬೇಕೆಂಬ ಸಂಕಲ್ಪ  ಮಾಡಿದ. ಅಪ್ಪನಿಗೆ ಆಗ ಉಂಡುಡಲು  ಯಥೇಚ್ಛವಾಗಿದ್ದುದು ಕಡುಬಡತನ ಮಾತ್ರ. ನಮ್ಮೂರ ಸಾಹುಕಾರರ ಹೊಲ – ಮನೆಯಲ್ಲಿ ಜೀತಕ್ಕಿದ್ದ. ಸಾಹುಕಾರರಿಗೆ  ನೂರಾರು ಎಕರೆ ಜಮೀನು. ಅದೆಲ್ಲ  ಜಮೀನು ತನ್ನದೆಂದು ” ಫೋಸು ” ಕೊಟ್ಟು ಸುಳ್ಳುಹೇಳಿ ಅವ್ವನನ್ನು ಲಪಟಾಯಿಸಿದನಂತೆ. ೧೯೪೮ ರ ರಜಾಕಾರರ ಸಪಾಟಿಯಷ್ಟೊತ್ತಿಗೆ  ಅವರ ಲಗ್ನವಾಗಿ ಅಜಮಾಸು ಎರಡು  ಪಟ್ಟಗಳೇ ಅಂದರೆ ಇಪ್ಪತ್ನಾಲ್ಕು  ವರುಷಗಳು ಕಳೆದಿದ್ದವಂತೆ.  ಒರಟು ಕಗ್ಗಲ್ಲಿನಂತಹ  ಅಪ್ಪನನ್ನು  ತಿದ್ದಿ,ತೀಡಿ  ಮೂರ್ತಿ  ಮಾಡಿದ  ಕೀರ್ತಿ ತನ್ನದೆಂದು  ಅವ್ವ  ಹೇಳುತ್ತಿದ್ದಳು. ಅದಕ್ಕೆ  ಅಪ್ಪ  ಕೊಡುವ  ಉತ್ತರವೆಂದರೆ  ನೀನೇನು  ಕಿತ್ತೂರ  ಚೆನ್ನಮ್ಮ… ನೇರೂ  ಮಗಳು  ಇಂದ್ರಾಗಾಂಧೀನಾ..? ಅಂತಿದ್ದ.  ಆದರೆ  ನಮ್ಮ  ಮನೆತನವೆಂಬ  ವೃಕ್ಷದ  ಬೇರು, ಬೊಡ್ಡೆ, ಒಟ್ಟು  ಮರವೇ  ಅವಳು.  ನನ್ನಪ್ಪ , ಮಡಿವಾಳಪ್ಪನವರ  ತತ್ವಪದಗಳೊಂದಿಗೆ ಊರೂರು  ಶಪಥ  ಭಜನೆಗಳನ್ನು  ಹುಡುಕುತ್ತ  ತಿರುಗುವ  ತಿರುಗಲು ತಿಪ್ಪ.  ಅವನೊಂದಿಗೆ  ತಾನು  ಕಳೆದ ಮುಕ್ಕಾಲು  ಶತಮಾನದ  ಕತೆಗಳನ್ನು  ಅವ್ವ  ಸ್ವಾರಸ್ಯಕರವಾಗಿ  ನಿರೂಪಿಸುತ್ತಿದ್ದಳು.   ನನ್ನವ್ವ  ತೀರಿಕೊಂಡು(29.05.2015) ನಾಲ್ಕು  ವರುಷ  ತೀರಿದವು. ಯಾವುದೇ  ಕಾರಣಕ್ಕು  ತಾನು  ಕಡಕೋಳ ಮಡಿವಾಳಪ್ಪನ  ಸನ್ನಿಧಾನದಲ್ಲೇ  ಪ್ರಾಣ  ಬಿಡಬೇಕೆಂಬುದು  ಅವಳ ಸಂಕಲ್ಪವಾಗಿತ್ತು.  ಅಷ್ಟಕ್ಕು  ಅವ್ವ  ತನ್ನ  ಸಂಕಲ್ಪ  ಈಡೇರಿಸಿಕೊಂಡಳು.  ೧೯೮೯ ರಲ್ಲಿ  ಅಪ್ಪ  ತೀರಿಕೊಂಡ  ಮೇಲೆ  ಅವ್ವ  ನಮ್ಮೊಂದಿಗೆ  ದಾವಣಗೆರೆಯಲ್ಲೇ  ಇರ್ತಿದ್ದಳು.  ಹಾಗಿರಬೇಕಿದ್ರೇ  ನಮ್ಮನೆಗೆ  ಬರುವ ರಂಗಕರ್ಮಿಗಳು, ಸಾಹಿತಿ,  ಪತ್ರಕರ್ತರಿಗೆ  ಅವಳ  ಪರಿಚಯ  ಮಾಡಿ ಕೊಡದಿದ್ದರೆ  ಸಣ್ಣ  ಮಕ್ಕಳಂತೆ  ಮುನಿಸಿಕೊಂಡು  ಬಿಡ್ತಿದ್ದಳು.    ಕಂಚ್ಯಾಣಿ ಶ್ಯಾಣಪ್ಪ ,  ಪಿ.ಬಿ. ಧುತ್ತರಗಿ,  ಸತ್ಯಂಪ್ಯಾಟಿ ನಿಂಗಣ್ಣ ಮಾಸ್ತರ ( ಅವ್ವನ  ಮಾತಿನಲ್ಲಿ ) ,  ರವಿ ಬೆಳಗೆರೆ, ಬಸೂ, ಆರ್.ನಾಗೇಶ್, ಮುಖ್ಯಮಂತ್ರಿ ಚಂದ್ರು,  ಆರ್. ನಾಗರತ್ನಮ್ಮ, ಆರ್.ಟಿ. ರಮಾ,  ಮಾಸ್ಟರ್  ಹಿರಣ್ಣಯ್ಯ….ಹೀಗೆ  ಯಾರೇ  ಬರಲಿ  ಅವರೊಂದಿಗೆ  ತಾನು  ಮಾತಾಡುವ  ಅದಮ್ಯ  ಹಂಬಲ  ಆಕೆಗೆ. ಒಮ್ಮೆ ಎಂ.ಪಿ. ಪ್ರಕಾಶ್ ನಮ್ಮನೆಗೆ  ಬಂದು ಅವಳೊಂದಿಗೆ ತಾಸೊಪ್ಪತ್ತು  ಸಂವಾದಕ್ಕಿಳಿದರು. ಅವ್ವ ಜವಾರಿ ಸ್ವರದಲಿ ಮಧುರವಾಗಿ  ಹಾಡುವ  ಮಡಿವಾಳಪ್ಪನ ತತ್ವಪದ ಕೇಳಿ ಅವರು  ಮೈ ಮರೆತರು. ಊಟಮಾಡಿ ಮತ್ತೆ ಮತ್ತೆ  ಹಾಡುಕೇಳಿ…  ಹೋಗುವಾಗ,  ಎಂ.ಪಿ. ಪ್ರಕಾಶ  ಅವ್ವನ  ಕಾಲುಮುಟ್ಚಿ  ನಮಸ್ಕರಿಸಿದರು.   ಪ್ರಕಾಶ  ಹೋದಮೇಲೆ ” ಅವರು  ದೊಡ್ಡವರು.. ಮಂತ್ರಿಗಳು ” ಅಂತ ಹೇಳಿದೆವು. ಅವಳಲ್ಲಿ ಯಾವ  ಪ್ರತಿಕ್ರಿಯೆಯೂ  ಇರಲಿಲ್ಲ. ಆದರೆ ಅವರು ಸ್ವಾಮಿಗೋಳು, ಅಯನೋರು  ಅಂದೆವು… ಆಗನೋಡಿ  ಅವಳ  ಪಾಪಪ್ರಜ್ಞೆಯ  ಕಟ್ಟೆಒಡೆದು  ಭೋರ್ಗರೆಯತೊಡಗಿತು.  ” ಅಯ್ಯೋ ನರಕಕ್ಕೆ ಹೋಗ್ತಿನಪೋ..  ಜಂಗಮರು ನನ್ನ ಪಾದಮುಟ್ಟಿ ನಮಸ್ಕಾರ ಮಾಡಿದರು ” ಅಂತ ಭೋರ್ಯಾಡಿ ಗೊಳೋ ಅಂತ ದುಃಖಿಸ ತೊಡಗಿದಳು. ಅವರು ಮತ್ತೆ  ಯಾವಾಗ ಬಂದಾರು…ಅವರ ಪಾದ  ತೊಳೆದು ಧೂಳುಪಾದಕ  ಕುಡಿದು  ಪಾವನವಾಗಲು ವರುಷಗಟ್ಟಲೇ  ಶಬರಿಯಂತೆ ಕಾಯ್ದಳು. ಕಡೆಗೂ ಪ್ರಕಾಶರು ಬರಲೇಇಲ್ಲ.        ಅವ್ವ ನನಗೆ ಬಾಲ್ಯದಲ್ಲಿ ಮಾಡಿ ಕೊಡುತ್ತಿದ್ದ ಬಿಸಿ ಬಿಸಿ ರೊಟ್ಟಿ ಮುಟ್ಟಿಗೆ ಎಂದರೆ ಮೃಷ್ಟಾನ್ನ ಭೋಜನ ಅಂತಾರಲ್ಲ ಅಷ್ಟೊಂದು ಸಂತೃಪ್ತಿಯ ಊಟ ನನಗದು. ಅವಳೇನೇ ತಿಂಡಿ, ಅಡಿಗೆ ಮಾಡಿರಲಿ ಅದಕ್ಕೆ ಅವ್ವ ಎನ್ನುವ ಕೈಗುಣದ ರುಚಿ ಇರ್ಲೇಬೇಕು. ಅನ್ನಕ್ಕೆ ಸಾರು ಹಾಕೊಂಡು ಉಂಡಂಗೆ ಹೋಳಿಗೆಗೆ ತುಪ್ಪ ಸುರುವಿಕೊಂಡು ಉಂಡಾಗಲೇ ಆಕೆಗೆ ಸಮಾಧಾನ. ಬಾಯಿ ಕಟ್ಟುತ್ತಿರಲಿಲ್ಲ. ಒಂದಲ್ಲ ಎರಡು  ಬಾರಿಬಿದ್ದು  ಕಾಲು ಮುರಕೊಂಡಳು.  ಅಷ್ಟಾದರೂ ಆಕೆ ಬೆತ್ತ ಹಿಡಿಯಲಿಲ್ಲ. ಆದರೆ ಕಡೆ ಕಡೆಗೆ ವಾರಗಟ್ಟಲೇ ಊಟ  ಬಿಟ್ಟಳು. ಪೂರ್ತಿ ಮೆತ್ತಗಾದಳು. ದಾವಣಗೆರೆಯಿಂದ ತನ್ನನ್ನು  ಕಡಕೋಳಕ್ಕೆ ಕರ್ಕೊಂಡು  ಹೋಗಬೇಕೆಂದು ಎದೆಯೊಡೆದು ಹಾಸಿಗೆ  ಹಿಡಿದಳು.  ನೀನು ಇಲ್ಲೇ ತೀರಿಕೊಂಡರೂ ಊರಿಗೆ (ಕಡಕೋಳ) ತಗೊಂಡು  ಹೋಗ್ತೀನೆಂದರೂ  ಕೇಳುತ್ತಿರಲಿಲ್ಲ. ” ಮಲ್ಲಣ್ಣ… ನೀನು ತಗೊಂಡು  ಹೋಗ್ತಿ  ಖರೇ.. ನನಗ ಹ್ಯಂಗೊತ್ತಾಗ್ತದಪ.. ಸತ್ತು  ಹೋಗಿರ್ತಿನಲ್ಲ…ಊರಲ್ಲಿ ಮಡಿವಾಳಪ್ಪನ ನೆಲಕ್ಕ ತಲಿ ಕೊಟ್ಟು  ಪ್ರಾಣ ಬಿಡಬೇಕು ” ಅಂತಿದ್ಳು..ಹಂಗೇ  ಆಯ್ತು.  ೨೦೧೫ ರ ಮೇ ೨೮ ರಂದು  ಮುಂಜಾನೆ ಡಾವಣಗೇರಿಯಿಂದ  ಹೊರಟು ರಾತ್ರಿ ಹತ್ತುಗಂಟೆಗೆ  ಕಡಕೋಳ ತಲುಪಿದಾಗ ಅವಳಿಗೆ ಸ್ವರ್ಗ ತಲುಪಿದ  ಖಂಡುಗ ಖುಷಿ. ಮಡಿವಾಳಪ್ಪನ ಕಾಯಕ ಭೂಮಿಯ ಮಣ್ಣಲ್ಲಿ ಮಣ್ಣಾಗಲು  ಸಂತಸ  ಪಟ್ಟಳು.  ರಾತ್ರಿಯೆಲ್ಲ, ಮತ್ತು ಮಳ್ಳೇ  ಮರುದಿನ  ಊರಿಗೂರೇ ಬಂದು  ಅವ್ವನೊಂದಿಗೆ ಮಾತಾಡಿತು.  ಮೇ ೨೯ರ ಸಂಜೆ ನಾಲ್ಕುಗಂಟೆಗೆ  ಮಡಿವಾಳಪ್ಪನ  ಧ್ಯಾನದೊಳಗೆ ಅವ್ವ ಲೀನವಾದಳು. ***********

ಅವ್ವನ ನೆನಪಲಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಉಮೇಶ ಮುನವಳ್ಳಿ ಬೇಡಿದಾಗ ನೀ ಕೊಡದೇ ಹೋದರೆ, ಹುಡುಕುವಾಗ ನಿನಗೆ ಸಿಗದೇ ಇರಬಹುದು. ನೀಡಿದಾಗ ನೀ ಸ್ವೀಕರಿಸದೇ ಹೋದರೆ, ಬೇಡುವಾಗ ನಿನಗೆ ಸಿಗದೇ ಇರಬಹುದು. ಹಲುಬಿದಾಗ ನೀ ಹೊರಳಿ ನೋಡದಿರೆ, ಮರಳಿ ಬಂದಾಗ ನಿನಗೆ ಸಿಗದೇ ಇರಬಹುದು. ಕೊಡಲು ಬಂದಾಗ ನೀ ಕೊಸರಿಕೊಂಡರೆ, ಕನವರಿಸಿದಾಗ ನಿನಗೆ ಸಿಗದೇ ಇರಬಹುದು. ಬಯಸಿದಾಗ ನೀ ಬಿಗುಮಾನ ಬಿಡದಿರೆ, ಬೇಕೆಂದಾಗ ನಿನಗೆ ಸಿಗದೇ ಇರಬಹುದು. ಸನಿಹ ಬಂದಾಗ ನೀ ಮುನಿಸಿಕೊಂಡರೆ, ಸಹಿಸಿ ಬಂದಾಗ ನಿನಗೆ ಸಿಗದೇ ಇರಬಹುದು. ರೀತಿ ಬಿಟ್ಟಾಗ ನೀ ಪ್ರೀತಿ ಕೊಡದಿರೆ, ರಿವಾಜು ಬಿಟ್ಟು ಬಂದಾಗ ನಿನಗೆ ಸಿಗದೇ ಇರಬಹುದು. ಇಷ್ಟಪಟ್ಟು ಬಂದ ಪ್ರೀತಿ ನೀ ಸ್ವೀಕರಿಸದಿರೆ, ಕಷ್ಟಪಟ್ಟು ಬಂದಾಗ ನಿನಗೆ ಸಿಗದೇ ಇರಬಹುದು. ತ್ಯಾಗಿಯಾದಾಗ ನೀ ತ್ಯಜಿಸಿ ಹೋದರೆ, ಭೋಗಿ ಉಮಿ ನಿನಗೆ ಸಿಗದೇ ಇರಬಹುದು, ಜೋಗಿ, ಪ್ರೇಮ ಭಿಕ್ಷೆ ಬೇಡಿ ಬಂದಾಗ ನೀ ನೀಡದರೆ, ಯೊಗಿನಿಯಾಗಿ ಬಂದಾಗ ನಿನಗೆ ಸಿಗದೇ ಇರಬಹುದು.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಸ್ತ್ರಗಳಿವೆ ಲಕ್ಷ್ಮೀ ದೊಡಮನಿ ಕಾಳಕೂಟ ಮೀರಿಸಬಲ್ಲ ವಿಷಗಳಿವೆ ನಮ್ಮೊಳಗೆ ಅಮೃತವ ಹಾಳುಮಾಡಬಲ್ಲ ಕುತಂತ್ರಿಗಳಿವೆ ನಮ್ಮೊಳಗೆ ಕಟುವಾಣಿ,ಅಶ್ಲೀಲ ವಿಚಾರ,ಸಂಶಯಗಳ ಮುಖೇನ ಅಂದದ ತನುವ ನಶಿಸಬಲ್ಲ ರಸಾಯನಗಳಿವೆ ನಮ್ಮೊಳಗೆ ಸಂಬಂಧದ ಲೆಕ್ಕವಿಲ್ಲ, ಸಮಯ-ಜಾಗದ ಪರಿವೆಯಿಲ್ಲ ಸ್ತ್ರೀಯರ ಆಸಿಸಬಲ್ಲ ಕ್ರಿಮಿಗಳಿವೆ ನಮ್ಮೊಳಗೆ ಪ್ರಗತಿಯ ರಸ್ತೆಯಿಂದ. ಧುಮ್ಮಿಕ್ಕುವವರ ಎಳೆಯುವ ಧ್ಯೇಯದಿಂದ ದೂರಾಗಿಸಬಲ್ಲ ಭಾವನೆಗಳಿವೆ ನಮ್ಮೊಳಗೆ ಅವನನ್ನುಹೊರುವ, ಅರ್ಧಾಂಗಿಯಾಗಬಲ್ಲ ಅವಳ ಅಸಮತೆಯಿಂದ ಕಾಣಬಲ್ಲ ನೋಟಗಳಿವೆ ನಮ್ಮೊಳಗೆ ಬೆರಳಿಂದ ಬ್ರಹ್ಮಾಂಡವರಿವ ಶಕ್ತಿ ಹುಟ್ಟಿದೆ ‘ಚೆಲುವೆ’ ಪುಸ್ತಕ ಸಂಸ್ಕೃತಿ ಅಳಿಸಬಲ್ಲ ಅಸ್ತ್ರಗಳಿವೆ ನಮ್ಮೊಳಗೆ *******

ಕಾವ್ಯಯಾನ Read Post »

You cannot copy content of this page

Scroll to Top