ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಾಳು ಮನವೆ.

Black Road Bike Leaning on Red-blue-and-white Wing Graffiti Wall

ಚೈತ್ರಾ ಶಿವಯೋಗಿಮಠ

ತಲ್ಲಣಿಸದಿರು ಮನವೆ!
ದಟ್ಟೈಸುವ ಕಾರ್ಮೋಡಗಳ ಸುರಿದು
ಹಗುರಾಗಿ ಮತ್ತೆ ಕಂಗೊಳಿಸದೆ ನೀಲ ನಭವು???

ತಲ್ಲಣಿಸದಿರು ಮನವೆ!
ಕಗ್ಗತ್ತಲ ಒಡಲ ಹರಿದು ಪ್ರಖರವಾಗಿ
ಇರುಳ ಗರ್ಭದಿ ಜನಿಸಿ ಬರುವನಲ್ಲವೆ ಇನನು??

ತಲ್ಲಣಿಸದಿರು ಮನವೆ!
ಬೊಬ್ಬೆಯಿಟ್ಟು ಚಂಡಿಹಿಡಿದ ಕಂದನ
ಹಾಲುಣಿಸಿ ಸಂತೈಸಲು ಬರಲಾರಳೇನು ಅಬ್ಬೆಯು??

ತಲ್ಲಣಿಸದಿರು ಮನವೆ!
ಶೀತ ಹೇಮಂತನ ಕೊರೆತವ ಕರಗಿಸಿ
ಬಿಸುಪ ಮುದ ನೀಡಲು ಬರುವಳಲವೆ ಗ್ರೀಷ್ಮಳು?

ತಲ್ಲಣಿಸದಿರು ಮನವೆ!
ಕಾಲಚಕ್ರವದು ನಿಲದೆ ತಿರುಗುವುದು
ಅಹಿತವು ಅಳಿದು ಹಿತವು ನಿನಗಾಗಿ ಬಾರದೆ??

ತಲ್ಲಣಿಸದಿರು ಮನವೆ!!
ಮಂದಸ್ಮಿತವು ವದನದೊಳಿರಲಿ!!
ತಲ್ಲಣಿಸದೆ ಶಾಂತನಾಗು ಮನವೆ!!

*********

About The Author

2 thoughts on “ಕಾವ್ಯಯಾನ”

  1. T S SHRAVANA KUMARI

    ಸಕಾರಾತ್ಮಕ ಭಾವನೆಯ ಕವಿತೆ ಚೆನ್ನಾಗಿದೆ

  2. ಶ್ರೀನಿವಾಸ್ ಬಿ.ಎಸ್

    ಸದಾಶಯವುಳ್ಳ ಸುಂದರ ಕವನ.ಅಭಿನಂದನೆ

Leave a Reply

You cannot copy content of this page

Scroll to Top