ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಗಿಯದ ಹಾಡು

Blue and White Butterfly Perched on Brown Grass

ಎನ್.ಶೈಲಜಾ ಹಾಸನ

ಇಡುವ ಹೆಜ್ಜೆ ಜೊತೆ ಜೊತೆ
ಹೆಜ್ಜೆ ಕೂಡಿದ ಪಲುಕು
ಪರಿ ಪರಿಯ ಕುಲುಕು
ನಾನೆಂತು ಬಣ್ಣಿಸಲಿ
ನೀ ಒಲಿದೆ,ನನ್ನ ಒಲಿಸಿದೆ
ಬೆಸೆದಿದೆ ಬಂಧನ
ಮನವೀಗ ಹೂ ನಂದನ 

ಒಲವ ಬಂಧನದಿ ಸುಖವಿದೆ
ಸಿರಿಯಿದೆ,ಮಧುವಿದೆ,ಸವಿಯಿದೆ
ನಡೆದ ಹಾದಿಯಲ್ಲಿ
ಬಣ್ಣಗಳ ಚೆಲುವಿದೆ

ಮೌನದ ಹಾಡಲಿ
ನೂರು ಕವಿತೆ
ಕಣ್ಣ ಬೆಳಕಲಿ

ಪ್ರೇಮದಣತೆ
ನೋಟದಂಚಿನಲಿ
ಕೋರೈಸುವ ಮಿಂಚು
ನೋಟದಾಳದಲಿ 
ನಲ್ಮೆಯ ಜಲಪಾತ
ತುಂಟ ನಗೆಯಲಿ
ಸಾವಿರ ಪುಳಕ

ಕನಸುಗಳ ಸಾಕಾರ
ಎದೆಯ ಗೂಡಲಿ
ನಿನ್ನೊಲುಮೆಯ
ಹುಚ್ಚು ನದಿಯಲಿ
ಕೊಚ್ಚಿ ಹೋದವಳು
ತೇಲಿ ತೇಲಿ ತೇಲುತಲಿ
ಇರುವ ಹುಚ್ಚು ಖೋಡಿ
ಮನಸ್ಸು ನನ್ನದು

ಮುಟ್ಟಲಾಗದು,
ತಟ್ಟಲಾಗದು
ಮೆಟ್ಟಲಾಗದು
ಮುಪ್ಪಾನು ಮುಪ್ಪಿಗೆ
ಒಲುಮೆಯ ಮನಸಿಗೆ
ಗೆಲುವಿನ ಸೊಗಸು

ದಾಂಪತ್ಯ ಗೀತೆಗೆ
ಅನುರಾಗದ ಪಲ್ಲವಿ
ಶೃಂಗಾರದ   ಅನುಪಲ್ಲವಿ
ಮುಗಿಯದ ಹಾಡು ಇದು

*******

About The Author

Leave a Reply

You cannot copy content of this page

Scroll to Top