ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಲಿತ ಚೇತನ

Dr Bhimrao Ambedkar brought Indias first Water Policy

ಮನುಶ್ರೀ ಸಿದ್ದಾಪುರ

ಓ ದಲಿತರ ಮಹಾಚೇತನವೇ
ಇಗೋ ನಿನಗೆನ್ನಯ ನಮನ
ಕಷ್ಟ-ಕಾರ್ಪಣ್ಯಗಳ ಬಳ್ಳಿಯಲಿ
ಅರಳಿ ನಗುವ ಚೆಲ್ಲಿದೆ ಗುಲಾಬಿ ಯಂತೆ.
ನರನಾಡಿಗಳ ಬತ್ತಿಯಾಗಿ
ತಾನುರಿದು ಸುತ್ತಲೂ
ಜ್ಞಾನದ ಬೆಳಕು ಹರಡಿದೆ.
ಶೋಷಿತರ ದನಿಗೆ ಮೂಕನಾಯಕನಾಗಿ
ಸೆಟೆದು ನಿಂತೆ ದೀನ ದಲಿತರ
ಬದುಕಿನ ಉದ್ದಾರಕೆ.
ಕಗ್ಗಲ್ಲಿನಲಿ ಮೂಡಿದೆ ಉಜ್ವಲ ಮೂರ್ತಿಯಾಗಿ
ಕೂಗಿ ಕರೆದು ತೋರಿಸಿದೆ
ಮಹಾಮನೆಯ ಬಿರುಕನು
ಶಿಕ್ಷಣ ಸಂಘಟನೆ ಹೋರಾಟದ
ತ್ರಿಪಟಿಕ ಸೂತ್ರ
ದಲಿತರ ಬದುಕಿನ ಪಾವನದಿ
ಸಾಗಿಬಂದ ಮಹಾಪಾತ್ರ.
ಹೊನ್ನ ಚರಿತೆಯ ಮಹಾಪುರುಷರಲಿ ನೀನಾದೆ
ಪುರುಷೋತ್ತಮ
ವಿಶ್ವವೇ ಸಾರಿದೆ ನೀ ಎಂದಿಗೂ
ಭಾರತಾಂಭೆಯ ಭಾರತರತ್ನ..

******

About The Author

Leave a Reply

You cannot copy content of this page

Scroll to Top