ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಗುವ ತೊಡಿಸಲೆಂದು

Woman Sitting While Showing Heart Sign Hands

ಶಾಲಿನಿ ಆರ್.

ತಾಳ್ಮೆ ಕಳಕೋತಿದಿನಿ ದಿನದಿಂದ ದಿನಕ್ಕೆ,
ಮರೆತೆನೆಂದರು
ನೆನಪ ನೋವ ಎಳೆಯ
ನೂಲುತಿದೆ ಗೆಳೆಯ,

ಬೇಡ ಎನಗಿದು
ಬೇಸರದ ಹೊದಿಕೆ
ಸ್ವಚ್ಛಂದ ಹಕ್ಕಿಯಿದು
ನಭದ ನೀಲಿಯಲಿ
ಹಾರುವ ಬಯಕೆ,

ಒಲವ ಮಳೆಯಿದು ನನಗಾಗಿ ಕಾಯುತಿದೆ,
ಬಣ್ಣದ ಕುಂಚಗಳು ತುಂಟನಗೆ ಬೀರುತಿದೆ,

ಅಂಕುಡೊಂಕಿನ ನವಿಲು, ಬಿಂಕ ತೋರಿಅಣಕಿಸುತಿದೆ,
ಮನದ ಸಾರಂಗ ಮನಸಾರೆ ತಪಿಸುತಿದೆ,

ಕಳೆದ ನೆನ್ನೆಗಳು
ನಾಳೆಗಳ ಹುಡುಕುವಂತೆ
ಬಾಗಿದ ಬೆನ್ನಿಗಿದು ನೋವಿನ ಕುಣಿಕೆ,

ನಾ ಒಲ್ಲೆ ಗೆಳೆಯ
ನಾಳೆಯ ಸೂರ್ಯನಿಗೆ
ಸುಪಾರಿ ಕೊಟ್ಟು ಬಾರೋ,
ನನ್ನೆದೆಯ ನೋವುಗಳ ಕೊಲ್ಲಲ್ಲೆಂದು,ನಗೆಯ ನಗವ ತೊಡಿಸಲೆಂದು…

*******

About The Author

Leave a Reply

You cannot copy content of this page

Scroll to Top