ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅನಿಸಿಕೆ

ನಗರಗಳಲ್ಲಿ ದುಡಿಯುವ ಹುಡುಗರ ಕಷ್ಟ ಐಶ್ವರ್ಯ ಎಲ್ಲೇ ಹೋದ್ರು, ಎಷ್ಟೊತ್ತಿಗೆ ಮನೆಗೆ ಬಂದ್ರು ಯಾಕೆ, ಏನು ಅನ್ನೊ ಪ್ರಶ್ನೆಗಳನ್ನ ಹುಡ್ಗುರಿಗೆ ಮಾತ್ರ ಕೇಳಲ್ಲ ಅನ್ನೋದು ಪ್ರತಿಯೊಂದು ಮನೆಯಲ್ಲಿರೊ ಅಕ್ಕ ತಂಗಿಯರ ವಾದ. ನನ್ನನ್ನೂ ಸೇರ್ಸಿ…..ನಾವು ಅಪ್ಪ ಅಮ್ಮನ ಹತ್ರ ಜಾಸ್ತಿ ಜಗಳ ಮಾಡೋದು ಇದೊಂದೇ ವಿಷಯಕ್ಕೆ ಅನ್ಸತ್ತೆ. ನಮಗೂ ಹುಡ್ಗುರ ತರ ಫ್ರೀಡಂ ಬೇಕು ಅಂತ. ಹೆಣ್ಣು ಕೂಡ ಗಂಡಿನಷ್ಟೇ ಸಮಾನಳು, ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಗಂಡಿಗೆ ಸರಿ ಸಮನಾಗಿ ನಿಂತಿದ್ದಾಳೆ ಅಂತ ನಾವೆಷ್ಟೇ ಬಾಯ್ ಬಡ್ಕೊಂಡು ಮೊಂಡು ಹಠ ಮಾಡಿದ್ರು ಮನೆಲಿ ಮಾತ್ರ ನಮ್ಮ ಮಾತು ಕೆಳೋದೆ ಇಲ್ಲ. ಇದ್ನೆಲ್ಲ ನೋಡಿದ್ ನಾವು ಅನ್ಕೊಳೋದು‌ ಗಂಡ್ಮಗ ಅಂತ ತುಂಬಾ ಪ್ರೀಯಾಗಿ ಬೆಳೆಸ್ತಿದಾರೆ ಅನ್ಕೊತಿವಿ ಆದ್ರೆ ವಾಸ್ತವಾನೆ ಬೇರೆ ಇರತ್ತೆ. ಹೆಣ್ಣು ಗಂಡಿಗೆಷ್ಟೇ ಸರಿ ಸಮನಾಗಿ ದುಡುದ್ರು ಕೂಡ ಗಂಡಿನಷ್ಟು ಭಾವನೆಗಳ ಹಿಡಿತ, ತುಡಿತ ತಡೆದು ಹಿಡಿಯೊ ಶಕ್ತಿ ಹೆಣ್ಣಿಗಿಲ್ಲ. ಮದುವೆಯಾಗಿ ಹೋಗೊ ಹೆಣ್ಣು ತನ್ನವರನ್ನೆಲ್ಲ ಬಿಟ್ಟು ಹೊಗೊವಾಗ ಅಳ್ತಾಳೆ. ಆದ್ರೆ ವಯಸ್ಸಿಗೆ ಬಂದ ಹುಡುಗ್ರು ಹಾಗೆಲ್ಲ ಅಳೋಕಾಗತ್ತಾ?… ಹುಟ್ಟಿ ಬೆಳೆದ ಊರು, ಜೊತೆಗಿದ್ದ ಪ್ರೆಂಡ್ಸ್, ಕ್ರಶ್ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಬೆಂಗಳೂರಿನಂತಹ ಮಹಾನಗರಗಳ ಅರಸಿ ಮನೆ ಜವಾಬ್ದಾರಿ ಹೊತ್ತು ಹೊರಡೊಕೆ ತಯಾರಾದ ಹುಡುಗನಿಗೂ ಭಾವನೆಗಳಿದಾವೆ ಕಣ್ಣು ರೆಪ್ಪೆ ಅಲ್ಲಾಡ್ಸಿದ್ರು ಕಣ್ಣೀರು ಬಿಳೋ ಹಾಗಿದ್ರು ಹೆತ್ತವರ ಮುಖದಲ್ಲಿ ನಗು ನೋಡೊಕೋಸ್ಕರ ಎನೂ ಆಗೇ ಇಲ್ಲ ಅನ್ನೊ ತರ ಎಲ್ಲ ಅದುಮಿಟ್ಟು ಹಿಂತಿರುಗಿ ನೋಡಿದ್ರೆ ಎಲ್ಲಿ ಅಳೋದು ಗೊತ್ತಾಗತ್ತೊ ಅಂತ ಹಿಂತಿರ್ಗಿನೂ ನೋಡದೆ ಹೋಗ್ತಾರೆ…… ಪ್ರತಿಯೊಂದು ಹುಡ್ಗನೂ ಒಂದಲ್ಲ ಒಂದು ಟ್ಯಾಲೆಂಟ್ ಹೊತ್ಕೊಂಡೆ ಹುಟ್ಟಿರ್ತಾನೆ. ಆದ್ರೆ ಅವನು ಎನೇ ಮಾಡಿದ್ರು  ಅಯ್ಯೊ ಅವನು ಬಿಡು ಹುಡ್ಗ ಹೇಗೋ ಬದುಕ್ತಾನೆ ಅನ್ನೊ ಸಮಾಜ ಒಂದು ಸಲ ಅವನೂ ಹೇಗೆ ಬದುಕ್ತಾನೆ ಅನ್ನೊ ಅನ್ವೇಷಣೆ ಮಾಡಿದ್ರೆ ಇವತ್ತು ವಿಶ್ವ ಮಹಿಳಾ ದಿನಾಚರಣೆ ಅಂತ ಇರೊ ಹಾಗೆ ವಿಶ್ವ ಪುರುಷರ ದಿನಾಚರಣೆನೂ ಇರ್ತಿತ್ತು…..ಗಂಡಿನಲ್ಲಿ ಕಾಮ ಅನ್ನೊದೊಂದು ಅವನನ್ನ ಹಾಳು ಮಾಡತ್ತೆ ಅನ್ನೊದೊಂದು ಬಿಟ್ರೆ ಅವನು ಹೆಣ್ಣಿನಷ್ಟು ಜಾಣಾಕ್ಷತನ, ಸಣ್ಣತನ, ಕೊಂಕುತನ ಇದ್ಯಾವುದು ‌ಇಲ್ಲ. ಇನ್ನೊಬ್ಬರ ನೋಡಿ ಉರ್ಕೊಳೊ ಜಾಯಮಾನವೇ ಅಲ್ಲ. ಅವರೂ ಕೂಡ ಚಿಕ್ಕ ವಯಸ್ಸಿಂದಾನೇ ಹತ್ತಾರು ಆಸೆ ಕನಸುಗಳನ್ನ ಕಟ್ಕೊಂಡೆ ಬಂದಿರ್ತಾರೆ. ಆದ್ರೆ ಈ ಫ್ಯಾಮಿಲಿ, ದುಡ್ಡು, ಅಡ್ಜೆಸ್ಟಮೆಂಟ್ ಅನ್ನೊ ಲೈಫಲ್ಲಿ ಅವರ ಕನಸಿನ ಕೂಸು ಕಾಲು ಮುರ್ಕೊಂಡು ಮೂಲೇಲಿ ಕೂತಿರತ್ತೆ. ಅವರಿಗೂ ಕೂಡ ಎಲ್ಲರಂತೆ ಕಲಿಯಬೇಕು ಅನ್ನೊ ಆಸೆ ಇರತ್ತೆ , ಹಸಿದ ಹೊಟ್ಟೆ ಖಾಲಿ ಜೇಬು ಅವರಿಗೆ ಪಾಠ ಕಲಿಸ್ತಿರತ್ತೆ, ಶ್ರೀಮಂತರ ಮನೆ ಮಕ್ಕಳ ತರ ಬೈಕಲ್ಲಿ ಊರೆಲ್ಲ ಸುತ್ಬೇಕು ಅನ್ಕೊಂಡ್ರು ಬಡತನ ಇವರ ಸುತ್ತಾನೇ ಸುತ್ತುತ್ತಿರತ್ತೆ, ಓದಿ ಕೆಲಸ ಗಿಟ್ಟಿಸ್ಕೊಂಡು ಸ್ವಂತ ದುಡಿಮೇಲಿ ಬೆಳಿಬೇಕು ಅಂತಿರತ್ತೆ ಅದ್ರೆ ಅಕ್ಕಂದಿರ ಮದುವೆಗೆ ಮಾಡಿದ ಸಾಲದ ಬಡ್ಡಿನೇ ಬೆಳಿತಿರತ್ತೆ. ಸಂಸಾರದ ಜಂಜಾಟದಲ್ಲಿ ಸಿಕ್ಕು ಒದ್ದಾಡ್ತಿರ್ತಾರೆ. SSLC ನೋ ಪಿಯುಸಿ ನೋ ಓದ್ಕೊಂಡು ಅವರಿವರ ಕೈಕಾಲು ಹಿಡ್ದು ಹೋಟೆಲ್ಲೊ, ಇನ್ನೆಲ್ಲೊ ಒಂದು ಕೆಲಸಕ್ಕೆ ಸೆರ್ಕೊಂಡು ಬರೊ ಚಿಕ್ಕ ಸಂಬಳದಲ್ಲೇ ಸಂಸಾರಾನ ಸಾಗ್ಸೊ ದೊಡ್ಡ ಕನಸು ಕಾಣ್ತಿರ್ತಾರೆ. ಸಿಂಗಲ್ ರೂಮಲ್ಲಿ ಶೇರಿಂಗ್ ಗೆ ಸೇರ್ಕೊಂಡು, ಬರೊ ಸಂಬಳದಲ್ಲಿ ಅಪ್ಪನ ಟ್ರೀಟ್ಮೆಂಟ್, ಅಮ್ಮನ ಮನೆ ಖರ್ಚು, ಅಕ್ಕನ ಮದುವೆ ಸಾಲ, ತಂಗಿ ತಮ್ಮಂದಿರ ಓದು ಅಂತ ಹೊಂದ್ಸಿ ಉಳಿಯೊದ್ರಲ್ಲಿ ತಾನ್ ಪ್ರಿತ್ಸೊ ಹುಡ್ಗಿಗೊಸ್ಕರ ಸೇವ್ ಮಾಡಿ ಅವಳ್ನ ಸುತ್ತಾಡ್ಸಿ ಅವಳ ಮುಖದಲ್ಲಿ ನಗು ನೋಡೋಕೆ ಅವಳಿಷ್ಟ ಪಟ್ಟಿದ್ನಾ ಕೊಡ್ಸಿ ದುಡ್ಡಿಲ್ದೆ ಟೀ ಬನ್ ತಿನ್ಕೊಂಡು ಬದುಕೊ ಜೀವಾನೇ ಗಂಡು. ಅವನ ಪ್ರತಿಯೊಂದು ನಿರ್ಧಾರದ ಹಿಂದೆ ಇನ್ಯಾರದ್ದೊ ಬಗ್ಗೆ ಯೊಚ್ನೆ ಮಾಡಿ ನಿರ್ಧಾರ ಮಾಡ್ತಾನೆ.. ಜಗತ್ತಿನ ಕಣ್ಣಿಗೆ ಅವನ್ಯಾವತ್ತೂ ಒರಟಾಗೇ ಕಾಣ್ತಾನೆ. ಯಾಕಂದ್ರೆ ಅವನ್ನಲ್ಲಿರೊ ನೋವು ಕಣ್ಣೀರು ಅಸಮಧಾನನ ಅವನು ಹೆಣ್ಣಿನ ತರ ಪ್ರಪಂಚದ ಮುಂದಿಡಲ್ಲ. ತನ್ನವರಿಗೋಸ್ಕರ ಅಂತಾನೆ ಒದ್ದಾಡ್ತಿರ್ತಾನೆ. ಇಷ್ಟೆಲ್ಲ ಜವಾಬ್ದಾರಿ, ಪ್ರೀತಿ ನಿಭಾಯಿಸೊ ಹೊತ್ತಲ್ಲಿ ಮತ್ತೊಂದು ನೋವು ಕೂಡ ಇವನ ಕಣ್ಣ ಮುಂದೆನೆ ಓಡಾಡ್ತಿರತ್ತೆ. ಅದೆನಂದ್ರೆ ತಾನು ಪ್ರೀತ್ಸಿದ ಹುಡ್ಗಿ ತನ್ನ ಕಣ್ಣೆದುರೆ ಇನ್ನೊಬ್ಬರ ಕೈ ಹಿಡಿದು ನಡೆಯೊದ್ನ ನೋಡೊಕ್ಕಿಂತ ದೊಡ್ಡ ನರಕ ಮತ್ತೊಂದಿಲ್ಲ ಹುಡ್ಗುರಿಗೆ. ಅಕ್ಕ ತಂಗಿರ ಮದುವೆ ಮಾಡಿ ಹಣ ಕೂಡಿಟ್ಟು ಮನೆ ಮಾಡಿ ಮದುವೆ ಅಗೋ ವರೆಗೆ ಇವನಿಗೆ ಕಾಯೊ option ಇದ್ದ ಹಾಗೆ ಹೆಣ್ಮಕ್ಳಿಗೆ ಇಲ್ಲ. ಅಂತ ಹೊತ್ತಲ್ಲಿ ಪ್ರೀತ್ಸಿದವಳು ಎಲ್ಲೆ ಇದ್ರು ಚೆನಾಗಿರ್ಲಿ ಅಂತ ಮನಸ್ಸಿಂದ ಹಾರೈಸಿ ಕೊರಗೊ ತ್ಯಾಗ ಜೀವಿ…. ಇಷ್ಟನೊ ಕಷ್ಟಾನೊ ಮನೆಲಿ ನೋಡೊ ಹೆಣ್ಣು ಮದುವೆ ಆಗಿ ಇನ್ನಾದ್ರು ನೆಮ್ಮದಿಯಿಂದ ಬದುಕ್ಬೇಕು ಅನ್ನೊ ಹೊತ್ತಲ್ಲಿ ಗಂಡ, ಅಪ್ಪ ಅನ್ನೊ extra ಜವಾಬ್ದಾರಿಗಳು ಹೆಗಲೇರಿ ಕೂತಿರತ್ತೆ. ಅಕ್ಕ ತಂಗಿಯರಿಗಾಗಿ ತನ್ನೆಲ್ಲ ಬಾಲ್ಯವನ್ನ, ಹೆಂಡತಿ ಮಕ್ಕಳಿಗಾಗಿ ತನ್ನೆಲ್ಲ ಯೌವ್ವನನ್ನ ಮುಡಿಪಿಟ್ಟು ದುಡಿಯೊ ಶ್ರಮಜೀವಿ. ಹೆಣ್ಣಿನ ತ್ಯಾಗ, ಸಹನೆ ಕಂಡಂತೆ ಗಂಡಿನ ಕಾಳಜಿ ಪ್ರೀತಿ ಜಗತ್ತಿನ ಕಣ್ಣಿಗೆ ಕಂಡಿದಿದ್ರೆ ಇವತ್ತು ಜಗತ್ತು ಹೆಣ್ಣನ್ನ ಇಟ್ಟು ತೂಗೊ ಜಾಗದಲ್ಲಿ ಗಂಡಿಗೂ ಸ್ವಲ್ಪ ಜಾಗ ಕೊಡ್ತಿತ್ತು. ಅಕ್ಕ ತಂಗಿಯರ ಮಾನ ಮುಚ್ಚೋಕೆ ಮೈ ತುಂಬಾ ಬಟ್ಟೆ ಕೊಡ್ಸೊಕೆ ಅದೆಷ್ಟೋ ಅಣ್ಣ ತಮ್ಮಂದಿರು ಹೋಟೆಲ್ ನಲ್ಲಿ ಉರಿಯೊ ಬೆಂಕಿ ಮುಂದೆ ಬಟ್ಟೆ ಬಿಚ್ಚಿ ನಿಂತು ಕೆಲ್ಸ ಮಾಡ್ತಿರ್ತಾರೆ. ಕೊನೆಗಾಲದಲ್ಲಿ ಅಪ್ಪ ಅಮ್ಮನ ಕೆಲಸ ಬಿಡ್ಸಿ ಕೈ ತುಂಬಾ ಕೂಳು ಸಿಗೊ ಹಾಗೆ ಮಾಡೋಕೆ ಅದೆಷ್ಟೋ ಗಂಡ್ಮಕ್ಕಳು ರೋಡ್ ಸೈಡ್ ಲಿ ಸಿಗೊ ತಳ್ಳೊ ಗಾಡಿಲಿ ಹಾಫ್ ಪ್ಲೇಟ್ ತಿನ್ಕೊಂಡು ಫುಲ್ ಡೇ ತಳ್ತಿದಾರೆ. ದಿನವೆಲ್ಲ ದುಡಿದು ದಣಿದು ಬಂದ ಗಂಡನಿಗೆ ರಾತ್ರಿಯೆಲ್ಲ ತಲೆ ತುಂಬೊ ಹೆಂಡ್ತಿ ಆಸೆಗಳನ್ನ ಈಡೇರಿಸೊದ್ಕೆ ರಾತ್ರಿ ಪಾಳಿಲೂ ಕೆಲಸ ಮಾಡೊ ಅದೆಷ್ಟೊ ಗಂಡಂದಿರು, ಮಕ್ಕಳ ಹೈಫೈ ಲೈಫಿನ ಹೈಹೀಲ್ಸ್ ಕೆಳಗೆ ಸಿಕ್ಕು ಒದ್ದಾಡ್ತಿರೊ ಅದೆಷ್ಟೊ ಅಪ್ಪಂದಿರ ಕಷ್ಟಗಳನ್ನ ಆದಷ್ಟು ಅರ್ಥ ಮಾಡ್ಕೊಳೋ ಪ್ರಯತ್ನ ಮಾಡೋಣ. ಹುಡ್ಗುರಿಗಿರೋ freedom ಅನ್ನೊ ರೆಕ್ಕೆ ಮೇಲಿರೊ ಜವಾಬ್ದಾರಿ ಅನ್ನೊ ಭಾರಾನೂ ನೋಡೋಣ

ಅನಿಸಿಕೆ Read Post »

ಕಾವ್ಯಯಾನ

ಕಾವ್ಯಯಾನ

ಮಗಳು ಲಕ್ಷ್ಮಿಕಾಂತ್ ಮಿರಜಕರ ಮಗಳು ಹುಟ್ಟಿದ್ದಾಳೆ ತಂದಿದ್ದಾಳೆ ಜೊತೆಯಲ್ಲಿಯೇ ಹೆಡೆಮುರುಗಿ ಕಟ್ಟಿ ವಸಂತನನ್ನು ಮನೆಯಲ್ಲೀಗ ನಿತ್ಯ ದೀಪಾವಳಿ ಮನ ತುಂಬಾ ಬೆಳದಿಂಗಳ ಓಕುಳಿ ಮಗಳು ಮುಗುಳ್ನಗುತ್ತಿದ್ದಾಳೆ ಮಾಯವಾಗುತ್ತಿವೆ ಜಗದ ಜಂಜಡಗಳು ಒಂದೇ ಗುಕ್ಕಿಗೆ ಕರಗಿ ಅವಳ ನಿಷ್ಕಲ್ಮಶ ನಗುವಿನ ಮೋಡಿಗೆ ಬಂದು ಬೀಳುತ್ತಿವೆ ಗಗನದ ನಕ್ಷತ್ರಗಳೆಲ್ಲಾ ಅವಳ ಸುಕೋಮಲ ಮೃದು ಪಾದದ ಅಡಿಯಲ್ಲಿ ಮಗಳು ಅಂಬೆಗಾಲಿಡುತ್ತಿದ್ದಾಳೆ ಅವಳ ಎಳೆದೇಹದ ಸ್ಪರ್ಷ ಸಂಚಾರವಾಗುತ್ತಲೇ ಅರ್ಥ ಕಳೆದುಕೊಳ್ಳುತ್ತಿವೆ ದೊಡ್ಡವರ ಸಿನಿಕತನದ ಮಾತುಗಳು ಮಗಳು ಮಾತನಾಡುತ್ತಿದ್ದಾಳೆ ಕಪಟವರಿಯದ ಮಗಳ ತೊದಲುಮಾತುಗಳಿಗಿಂತ ಶ್ರೇಷ್ಟವೇನಲ್ಲ ರಾಮಾಯಣ ,ಕುರಾನ್,ಬೈಬಲ್ ಭಗವದ್ಗೀತೆಯ ಸಾರ ನಿಜ,ಮಗಳು ಇಲ್ಲದೇ ಹೋದರೆ ಬದುಕು ನಿಸ್ಸಾರ! ಮಗಳು ನಡೆಯುತ್ತಿದ್ದಾಳೆ ಒಂದೊಂದೇ ತಪ್ಪುಹೆಜ್ಜೆಗಳ ಸರಿಪಡಿಸಿಕೊಳ್ಳುತ ನಡೆಯುತ್ತಿದೆ ಸರಿದಾರಿಯಲ್ಲಿ ಹಳಿ ತಪ್ಪಿದ್ದ ಜೀವನಯಾನ ಮಗಳೆಂಬ ತಾಯಿಯ ಆಗಮನದಿಂದ ಜೀವಂತಿಕೆಯ ಸಾನಿಧ್ಯದಿಂದ ಮಗಳು ಓಡುತ್ತಿದ್ದಾಳೆ ಸಮಯವೂ ಈಗ ಅವಳ ಹಿಂದೆ ಹಿಂದೆ ಓಡುವ ಬಾಲಂಗೋಚಿ ಸರಿದದ್ದೇ ಗೊತ್ತಾಗುವುದಿಲ್ಲ ಮಗಳೆಂಬ ಚೈತನ್ಯದ ಸನ್ನಿಧಿಯಲ್ಲಿ ಬದುಕೀಗ ರಸನಿಮಿಷಗಳ ಆಗರ ಮನೋಲ್ಲಾಸದ ಸಾಗರ. ********************* ಪರಿಚಯ: ಲಕ್ಷ್ಮಿಕಾಂತ ಮಿರಜಕರ ..ಊರು ಹಾವೇರಿ ಜಿಲ್ಲೆ ಶಿಗ್ಗಾಂವ.ಸದ್ಯ ಮೊಳಕಾಲ್ಮುರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಣೆ.ಕವನ ಕತೆ ಓದು ಮತ್ತು ಬರೆಯುವುದರಲ್ಲಿ ಆಸಕ್ತಿ..ಶಾಲೆಯ ಮಕ್ಕಳ ಬರಹಗಳನ್ನು ಸಂಪಾದಿಸಿ “ಚಿಲುಮೆ” ಎನ್ನುವ ಪುಸ್ತಕವನ್ನು ಪ್ರಕಟಿದ್ದೇನೆ.ಕವಿತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ..

ಕಾವ್ಯಯಾನ Read Post »

You cannot copy content of this page

Scroll to Top