ಎಮ್ಮಾರ್ಕೆ ಅವರಕವಿತೆ-ʼಮಧ್ಯದ ಸದ್ಯದ ಪದ್ಯʼ
ಕಾವ್ಯ ಸಂಗಾತಿ ಎಮ್ಮಾರ್ಕೆ ʼಮಧ್ಯದ ಸದ್ಯದ ಪದ್ಯʼ ಕೇಳಿದರೂ ಕಿವುಡರಂತಿರುವಈ ಜಗದ ಜನರ ಮಧ್ಯ,ಯಾರ ಕಿವಿಗೂ ಕೇಳದಂತೆಪಿಸುಗುಡಬೇಕಿದೆ ಸದ್ಯ ಕಂಡರೂನು ಕಾಣದಂತಿರುವಈ ಜಗದ ಜನರ ಮಧ್ಯ,ಯಾರ ಕಣ್ಣಿಗೂ ಬೀಳದಂತೆಸುಳಿದಾಡಬೇಕಿದೆ ಸದ್ಯ ಘ್ರಾಣಿಸಿ ಗ್ರಹಿಸದಂತಿರುವಈ ಜಗದ ಜನರ ಮಧ್ಯ,ಯಾರ ನಾಸಿಕಕೂ ಸಿಗದಂತೆಸುಮ್ಮನಿರಬೇಕು ಸದ್ಯ ಅರಿತರೂ ಅರಿಯದಂತಿರುವಈ ಜಗದ ಜನರ ಮಧ್ಯ,ಯಾರ ಅರಿವಿಗೂ ಬಾರದಂತೆದೂರವಾಗಿರಬೇಕು ಸದ್ಯ ಜಗದ ಜಂಜಡದ ಮಧ್ಯ ಸಿಕ್ಕಿಬರೆದಿರುವೆ ಈ ಸಾಲು ಸದ್ಯ,ಕಣ್ಣು ಕಾಣದೇ ತುಟಿಯೊದದೇಅನಾಥವಾಗದಿರಲಿ ಈ ಪದ್ಯ ಎಮ್ಮಾರ್ಕೆ
ಎಮ್ಮಾರ್ಕೆ ಅವರಕವಿತೆ-ʼಮಧ್ಯದ ಸದ್ಯದ ಪದ್ಯʼ Read Post »









