ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಈ ಯುದ್ಧ ಗೆಲ್ಲಲು ಡಾ .ಪ್ರಸನ್ನ ಹೆಗಡೆ ಈ ಯುದ್ಧ ಗೆಲ್ಲಲು ಶಸ್ತ್ರಾಸ್ತ್ರ ಬೇಕಿಲ್ಲ ಮುಖಗವಚವಷ್ಟೆ ಸಾಕು ಈ ಯುದ್ಧ ಗೆಲ್ಲಲು ಹೊರ ನಡೆಯ ಬೇಕಿಲ್ಲ ಒಳಗಿದ್ದರಷ್ಟೆ ಸಾಕು ಈ ಯುದ್ಧ ಗೆಲ್ಲಲು ಬೊಬ್ಬಿರಿಯಬೇಕಿಲ್ಲ ಮೌನಾಸ್ತ್ರವಷ್ಟೆ ಸಾಕು ಈ ಯುದ್ಧ ಗೆಲ್ಲಲು ಕಿತ್ತುಕೊಳ್ಳುವುದು ಬೇಕಿಲ್ಲ ಹಂಚಿ ತಿಂದರಷ್ಟೆ ಸಾಕು ಈ ಯುದ್ಧ ಗೆಲ್ಲಲು ಮಲ್ಲ ಶಾಸ್ತ್ರ ಬೇಕಿಲ್ಲ ಉಸಿರ್ವಿದ್ಯೆ ಯಷ್ಟೆ ಸಾಕು ಈ ಯುದ್ಧ ಗೆಲ್ಲಲು ಅಂತರಿಕಿಕ್ಷಕ್ಹಾರ ಬೇಕಿಲ್ಲ ಅಂತರದ ಮಂತ್ರ ಸಾಕು ಈ ಯುದ್ಧ ಗೆಲ್ಲಲು ಸೈನ್ಯವೇ ಬೇಕಿಲ್ಲ ಆತ್ಮಬಲ ಒಂದೇ ಸಾಕು. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಾಯರಿ ಮರುಳಸಿದ್ದಪ್ಪ ದೊಡ್ಡಮನಿ (೧) ಹರೇ ಬಂದ್ರ ಅದು ಖರೇನ ಹೇಳತೈತಿ ಯಾವಾಗ್ಲೂ ನಕ್ಕೊಂತನ ಇರತೈತಿ ಹರೇ ಅನ್ನುದು ಹುಚ್ಚು ಕೊಡಿಯಾಗಿರತೈತಿ ಬೇಕಾದವರನ್ನ ಬೇಕಾದಂಗ ತಿರುಗುಸತೈತಿ. (೨) ಪ್ರೀತಿ ಅನ್ನು ವಿಷ ಕುಡದೇನಿ ಸಾಯಾಕ ಒದ್ದ್ಯಾಡಕ ಹತ್ತೇನಿ ನೀ ಬಂದ್ರ ನಾಕು ದಿನ ಬದುಕತೇನಿ ಇಲ್ಲಂದ್ರ ಸಾವಿನ ಕೂಡ ಮಲಗತೇನಿ. (೩) ಪ್ರೀತಿ ಮಾಡವರ ಮೂಗಿನ ತುದಿ ಮ್ಯಾಲ ಸಿಟ್ಟಿರತೈತಿ ಅವರಿಗೆ ಅದೇ ತಾನೇ ಪ್ರೀತಿ ಹುಟ್ಟಿಗೊಂಡಿರತೈತಿ ಮಾತಾಡವ್ರನ್ನ ಕಂಡ್ರ ಸಿಟ್ಟುಬರತೈತಿ. (೪) ಪ್ರೀತಿ ಸಮುದ್ರ ಒಡಿತೇಂದ್ರ ಅದು ತಡಿಯಾಂಗಿಲ್ಲ ಅದರ ತೆರಿ ಒತ್ತಿ ಬಂದ್ರ ಕಾಡವರು ಉಳಿಯಾಂಗಿಲ್ಲ. (೫) ಸಾವು ದಿವಸ ಮುಗಿಯದ ಬರಂಗಿಲ್ಲ ಪ್ರೀತಿ ಮಾಡಿದ ಹುಡುಗಿ ಕೈ ಕೊಟ್ಟರ ಪ್ರೀತಿಸಿದವ್ರು ಸಾವಿನ ಮನಿ ಮುಂದ ನಿಂದ್ರುದು ಬಿಡಲ್ಲ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನ್ನ ಸಖ ಮಧು ವಸ್ತ್ರದ್ ನೀಲಾಗಸದಿ ಹೊಳೆವ ತಾರೆಯ ಕಂಡನು ಸಖ.. ಸಖನ ಮತ್ತೇರಿಸುವ ಕಂಗಳಲಿ ನನದೇ ನಗು ಮುಖ.. ನಗುಮುಖದ‌ ಪ್ರೀತಿಯರಿತು ಕೈ ಹಿಡಿದು ನೀಡಿದ ಸ್ನೇಹಸುಖ.. ಸ್ನೇಹಸುಖದ ಎರಕ ಜೀವನದಲಿ ದೂರಾಗಿಸಿದೆ ದುಃಖ.. ದುಃಖ ದುಗುಡವ ಬೇರು ಸಹಿತ ಕಿತ್ತೆಸೆದಿದೆ ನಿನ್ನೊಲವು.. ನಿನ್ನೊಲವ ಮಹಲಿನೊಳಕರೆದು ಬರಸೆಳೆದು ನೀಡಿದೆ ನೀ ನಲಿವು.. ನಲಿವುನೋವಿನಬಾಳಪಯಣದಿ ನಮ್ಮದಾಯ್ತು ಗೆಲುವು.. ಗೆಲುವ ಮಾಲೆಯ‌ಪ್ರೇಮಪುಷ್ಪ ಗಳಿಗೆ ಅದೆಂಥಾ ಚೆಲುವು.. ಚೆಲುವಾದ ಕಂಗಳಲಿ ಅರಸುತ ನಿನ್ನರಸಿಯ.. ನಿನ್ನರಸಿಯ ಮನದ ಹಿರಿಯ ಧ್ಯೇಯವ ಹರಸುವೆಯ.. ಹರಸುತವಳ ಕಾರ್ಯದಕ್ಷತೆಯ ಎಲ್ಲಡೆ ಮೆರೆಸುವೆಯ.. ಮೆರೆಯುತಿರಲಿ ನಮ್ಮ ಉನ್ನತ ಧ್ಯೇಯವೆಂದೂ ನೀಲಾಗಸದಲಿ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿಶ್ಯಬ್ದ ವೀಣಾ ರಮೇಶ್ ಕತ್ತಲೆಯ ಬಿಳಿ ಮಂಚದಲಿ ಮಲಗಿರುವೆ ಕನಸುಗಳು ಬೀಳುತ್ತಿವೆ ಎಬ್ಬಿಸಬೇಡಿ ನೆನಪುಗಳೆ, ಸದ್ದು ಮಾಡದಿರಿ ಎದೆಯ ಬಡಿತದ ಸದ್ದು ಇಲ್ಲಿಗೂ ಕೇಳಿಸುತ್ತಿದೆ ಮತ್ತೆ ಬೆಳಕಾದರೆ ನನಗಿಲ್ಲ ಬಿಡುವು ಮತ್ತೆ ನೀ ನಸು ನಾಚಿ ಬಂದರೆ ಬಾವನೆಗಳ ಹರಿವು, ನನ್ನೊಳಗೂ ನೀನು ಹೊರಗೂ ನೀನು ನಿನ್ನ ಕನಸುಗಳ ಹೊದಿಕೆ ಬೇಕಾಗಿತ್ತು,ಮತ್ತೆ ನೆನಪುಗಳು ದಾಳಿ ಮಾಡದಿರಲಿ ಸೂರ್ಯೋದಯದ ಮೊದಲು ನಿನ್ನ ನಗುವಿನ ನಂದಾದೀಪ ನೋಡಬೇಕು ನಾನು ಬಂದು ಬಿಡು ಕಾರಣವಿಲ್ಲದೆ ಮತ್ತೆ ತೆರಳಬೇಡ ಸದ್ದಿಲ್ಲದೆ. ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾಕ್ಷಿ ವೀಣಾ ನಿರಂಜನ್ ರೆಕ್ಕೆಯಿಲ್ಲದ ಹಕ್ಕಿಯೊಂದು ಹಾರುವುದ ಕಂಡಿರಾ ಹಾಯಿಯಿಲ್ಲದ ದೋಣಿಯೊಂದು ಚಲಿಸುವುದ ಕಂಡಿರಾ ನೆರಳಿಲ್ಲದ ಜೀವವೊಂದು ನಡೆಯುವುದ ಕಂಡಿರಾ ಬಿಸಿಲು, ಗಂಧ, ಗಾಳಿ ಸೋಂಕದ ನೆಲೆಯೊಂದ ಕಂಡು ನಿಟ್ಟುಸಿರು ಬಿಟ್ಟಿತು ಕವಿತೆ ಚಿತ್ರ ಕಟ್ಟಿ ಕೊಟ್ಟ ಶಬ್ದಗಳೆಲ್ಲ ಒಣಗಿ ಬಿಟ್ಟವು ಎಲ್ಲಿತ್ತೊ? ಹೇಗಿತ್ತೊ? ಮಾಯದ ಚಿಟ್ಟೆಯೊಂದು ಹಾರಿ ಬಂದು ಅವಳ ನೆತ್ತಿ ಮೂಸಿ ಮುತ್ತನಿಟ್ಟಿತು ಕನಸುಗಳು ಅರಳಿದವು ನೆನಪುಗಳು ಮರುಕಳಿಸಿದವು ನೆಲ ನಗ ತೊಡಗಿತ್ತು! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಸ್ತಿತ್ವ ಮೇಗರವಳ್ಳಿ ರಮೇಶ್ ನಾನೊಬ್ಬ ಸಾಧಾರಣ ಮನುಷ್ಯ!ಬರೀ ಮನುಷ್ಯನಲ್ಲತನ್ನನ್ನು ಜನ ಗುರುತಿಸ ಬೇಕೆಂಬ ಹಂಬಲದಒಬ್ಬ ಕವಿಯೂ ಇದ್ದಾನೆ ನನ್ನೊಳಗೆ! ಹಾಗೆ ನೋಡಿದರೆ ನಾನೂ ಬರೆದಿದ್ದೇನೆಹಲವಾರು ವರ್ಷಗಳಿಂದ ನೂರಾರು ಕವಿತೆಗಳನ್ನ.ಪತ್ರಿಕೆಗಳಲ್ಲೂ ಬೆಳಕು ಕಂಡಿವೆ ಹಲವಾರು ಕವಿತೆಗಳು.ನನ್ನದೊಂದು ಕವಿತಾ ಸಂಕಲನವೂ ಹೊರಬಂದಿದೆ!ಆದರೂ ನಾನು ಗುರುತಿಸಲ್ಪಡುವುದಿಲ್ಲ!ಎದುರು ಬಂದವರು ಸುಮ್ಮನೇ ನಕ್ಕು ಮುಂದೆ ಸಾಗಿ ಬಿಡುತ್ತಾರೆನಾನು ಏನೂ ಅಲ್ಲವೆಂಬಂತೆ!ಸಾಹಿತ್ಯ ದಿಗ್ಗಜರ ಕಣ್ಣಲ್ಲಂತೂನಾನೊಬ್ಬ ನಗಣ್ಯ ಕವಿ! ಮೊನ್ನೆ ಮೇಗರವಳ್ಳಿಗೆ ಹೋದವನುಬೆಳಗಿನ ವಾಕಿಂಗ್ ಮಾಡುತ್ತಾ ಸಾಗಿದ್ದೆನಿಃಶಬ್ದ, ಪ್ರಶಾಂತ ಪರಿಸರದ ನಡುವೆ ಸಾಗುವ ಹಾದಿ ಗುಂಟ!ಥಟ್ಟನೇ ಕಾಣಿಸಿತಾಗ ರಸ್ತೆಯ ಮಧ್ಯ ಬಿದ್ದಿದ್ದಒಂದು ನವಿಲು ಗರಿ. ಮೇಲೆತ್ತಿಕೊಂಡೆ.ಚಿತ್ತಾರದ ನುಣುಪು ರೇಶ್ಮೆ ಯಂಥ ಅದನ್ನು ಕೆನ್ನೆಗೆ ಸವರಿಕೊಂಡೆ.ಆ ಗರಿಯ ಯಜಮಾನ ನವಿಲು ಇಲ್ಲೇ ಎಲ್ಲೋ ಇರಬೇಕೆಂದೆನಿಸಿಗರಿ ಬಿಚ್ಚಿ ಕುಣಿವ ಅದರ ವೈಭವವನ್ನು ಕಣ್ತುಂಬಿ ಕೊಳ್ಳುವ ಹಂಬಲದಲ್ಲಿಸುತ್ತಲೂ ಕಣ್ಣು ಹಾಯಿಸಿದೆ.ಅದೋ, ತುಸು ದೂರದಲ್ಲಿ ಕೇಕೆ ಹಾಕುತ್ತಾಗರಿ ಬಿಚ್ಚಿ ನರ್ತಿಸುತ್ತಿತ್ತು ನವಿಲು ತಾನೇ ತಾನಾಗಿ!ನೋಡುತ್ತಾ ಮೈಮರೆತೆ. ರಸ್ತೆಯ ನಡುವೆ ಬಿದ್ದಿದ್ದ ಆ ಒಂದು ನವಿಲು ಗರಿಅದರ ಅಸ್ತಿತ್ವವನ್ನು ಸಾರಿಅದನ್ನು ಕಾಣಬೇಕೆಂಬ ಹಂಬಲವನ್ನು ನನ್ನೊಳಗೆ ಮೂಡಿಸಿತಲ್ಲ,ಎಂಥ ಅಚ್ಚರಿ! ಇನ್ನು ಮೇಲೆ ಬರೆದರೆಆ ನವಿಲು ಗರಿಯಂಥ ಕವಿತೆಗಳನ್ನೇಬರೆಯ ಬೇಕು ಅಂದು ಕೊಂಡೆ! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ರತ್ನರಾಯಮಲ್ಲ ಬಾಳಲ್ಲಿ ಎಡರು ತೊಡರುಗಳು ಬಂದಾಗ ನಿನ್ನ ಸಹಾಯ ಬೇಕು ಸಾಮಾಜಿಕ ವ್ಯವಸ್ಥೆಯು ಎದುರಾದಾಗ ನಿನ್ನ ಸಹಾಯ ಬೇಕು ಈ ಜೀವನದಲ್ಲಿ ನಿನ್ನನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ ಅನುದಿನವು ನಾನು ಹೊಸ್ತಿಲು ದಾಟುವಾಗ ನಿನ್ನ ಸಹಾಯ ಬೇಕು ರಜನಿಗೆ ರಜನೀಚರ ಬೆಂಗಾವಲಾಗಿರುವನು ರವಿ ಮೂಡೊವರೆಗೆ ಕರಾಳ ಅಂಧಕಾರವು ನನಗೆ ಅಪ್ಪಿದಾಗ ನಿನ್ನ ಸಹಾಯ ಬೇಕು ಅನುರಾಗದ ನಿಷ್ಠೆಯಿಂದ ನಾನು ನಿನ್ನನ್ನು ಹಿಂಬಾಲಿಸುತಿದ್ದೇನೆ ಜೀವನದಲ್ಲಿ ಉಸಿರಿನೊಂದಿಗೆ ಆಡುವಾಗ ನಿನ್ನ ಸಹಾಯ ಬೇಕು ನಾವು ಮೊದಲೇ ಭೇಟಿಯಾಗಿದ್ದೆವೆಂದು ಹೃದಯಕ್ಕೆ ತಿಳಿದಿದೆ ‘ಮಲ್ಲಿ’ಯ ಜಿಂದಗಿಯಲ್ಲಿ ತಪ್ಪಾದಾಗ ನಿನ್ನ ಸಹಾಯ ಬೇಕು ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನ ಭಾಷೆ ಸರೋಜಾ ಶ್ರೀಕಾಂತ್ ಅದಾವುದೋ ದೂರದ ಭಾವಗಳೂರಿಗೆ ಬರಸೆಳೆದ ಗಳಿಗೆಯಲ್ಲೇ..! ಮತ್ತಾವುದೂ ನೆನಪಾಗದಂತೆ ಮರೆಸಿ ಕಾಡಿದವನು ಕ್ಷಣದಲ್ಲೇ..!! ತಣ್ಣನೆಯ ತಂಗಾಳಿಯಲ್ಲೂ ನುಸುಳಿ ನಸು ನಾಚಿಸಿದವನಿವನೆ..! ಹೊಂಬಿಸಿಲಿನ ಹೊನ್ನ ರಶ್ಮಿಯಲ್ಲೂ ತುಸು ಸಂಚರಿಸಿದವನಿವನೇ..!! ಹಸಿರಸಿರಿನ ತುಂತುರು ಹನಿ ಹನಿಯಲ್ಲೂ ನಿನ್ನಿರುವಿನ ರೋಮಾಂಚನ..! ಅರಳಿದ ಸುಮದೊಳಗಿನ ಘಮವೂ ನಿನ್ನರಿವಿನ ಅನಾವರಣ..!! ಸ್ಪರ್ಶದುಸಿರಿಗೆ ಸಂಪ್ರೀತಿಯ ಹೂಬಾಣ ಬಿಟ್ಟು ಪ್ರೇಮದ ಹೆಸರಿಟ್ಟವ ನೀನೆ..! ಮೊದಲೊಲವಿನ ಮೌನ ಭಾಷೆಗೆ ಮರುಧ್ವನಿಯ ಮಾತು ಶುರು ನಿನ್ನಿಂದಲೇ..!! *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇಂದಿನ ಕವಿತೆ ಡಾ.ವೈ.ಎಂ.ಯಾಕೊಳ್ಳಿ ಬೇಡ ಗೆಳೆಯ ನನ್ನ ಕವಿತೆಗಳಲ್ಲಿ ನನ್ನ ಹುಡುಕಬೇಡ ಬರೀ ನನ್ನ ಬಗ್ಗೆ ನಾನು ಬರೆದರೆ ಕವಿಯಾಗಲಾರೆ ಕೂಡ ಪಕ್ಕದ‌ಮನೆಯಲಿ ಹಸಿದವರ ಅರೆಹೊಟ್ಟೆಯ‌ ಬಗ್ಗೆ ಬರೆಯದಿರೆ ನನ್ನ ಕವಿತೆ ಆಗಬಹುದು ಬರೀ ಪದಗಳ ಸಂತೆ ಸುತ್ತಲಿನ ಜಗದಲಿ ನೋವಿಂದ ನಲುಗಿರಲು ನನ್ನ ಮಂದಿ ಚಂದ್ರ ತಾರೆಗಳ ಬಗ್ಗೆ ಹಾಡು ಕಟ್ಟಿದರೆ ನಾ ಎಂಥ ಕವಿಯು ಅಂದಿ ನನ್ನ ಹಾಡು ಜೊತೆಯಾಗಬೇಕು ಗೆಳೆಯ ನನ್ನೂರ ರೈತ ಗೆಳೆಯನ ನೇಗಿಲ ಕುಳಕೆ ರಾಟಿಯ ಎತ್ತುಗಳ ನೊಗದಿ ಬಾವಿಯಾಳವ ಇಳಿದು ನೀರನು ಹೊತ್ತು ತರಲಿ ಮೇಲಕೆ ಬೇಡವೆಂದಲ್ಲ ನನಗು ಚಲುವು ಸೌಂದರ್ಯದ ಮಾತು ಹಸಿವೆ ನೋವುಗಳು ಸುತ್ತ ತುಂಬಿರುವಾಗ ಹೇಗೆ ಬರೆಯಲಿ ಹೇಳು ಅವನು ಕುರಿತು *********** ಡಾ.ವೈ.ಎಂ.ಯಾಕೊಳ್ಳಿ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನಪ ತಿಜೋರಿ ಶಾಲಿನಿ ಆರ್. ನೆನಪಿಗೊಂದು ಮೊಳೆ ಹೊಡೆಯುತಿದ್ದೇನೆ, ಯಾರಿರದ ಇರುಳಲಿ ಚಂದಿರನ ಬೆಳಕಲಿ, ಮೆಲ್ಲನೆ ಅರಳಿದ ನೈದಿಲೆಗು ಸಂಕೋಚ, ಸದ್ದು ಕೇಳಿಸಿತೇ ಅವನಂಗಳಕು! ಸುದ್ದಿಯಾಗದಿರಲಿದು ಹೊಸ್ತಿಲಾಚೆ, ಮರಳಿ ಮನದ ಮೂಲೆಗೆ ನೆನಪುಗಳ ಜೇಡ ಬಲೆ ಸುಮ್ಮನೆ ಜಿನುಗಿದ ಕಣ್ಣಹನಿಗೂ ದಿಗಿಲು, ನಗುವ ಕತ್ತಲಿಗೂ ಬಿಕ್ಕು ಕೇಳಿಸಿತೇ? ಮತ್ತೆ ನೋಡುತ್ತೇನೆ ಗೋಡೆಯ ಕ್ಯಾಲೆಂಡರ್ ದಿನದ ಅಂಕ, ನಗೆಯ ಅನುರಣಿತ ಬೇಡದೆ ಉಳಿದ ಮಾವಿನ ಚೂರುಗಳು ಮರುಗುವಾಗ ಮನದಾಚೆಯ ಹೆದ್ದಾರಿಲಿ ಭಾರಿ ಮಳೆಯ ಸದ್ದು ತೊಯ್ದರು ತೋಯದ ನಿರ್ಲಿಪ್ತ ಮನ ತುಕ್ಕು ಹಿಡಿದಿದೆ ಬಾಗಿಲ ಚಿಲಕ ನಿಟ್ಟುಸಿರ ಹನಿಗೆ ನಿಲ್ಲುವ ಗಳಿಗೆಯಲಿ ಹರಿವ ಹುನ್ನಾರಿದು ನೀರಿನ ಸಲಿಗೆ ಹಿಡಿದ ಬಟ್ಟಲಲಿ ಪಡೆವ ಆಕಾರ ನೆನಪ ಕಡಲಿಗೆ ಓ! ನೆನಪ ತಿಜೋರಿಯ ಕೀಲಿ ಕೈ ಕಳೆದಿದೆ, ಹೆಕ್ಕಿ ಹೇಗೆ ಎತ್ತಿಡಲಿ ಹೇಳೆ, ಮರಳಿ ಪೆಟ್ಟಿಗೆಗೆ ಮತ್ತೆ ಮತ್ತೆ ಕಳೆದು ಹೋಗದಂತೆ ನಾಳೆಗೆ , ಮತ್ತೆ ಅವನಿಗೆ ತಿಳಿಯದಂತೆ ಕೊನೆವರೆಗೆ… ******

ಕಾವ್ಯಯಾನ Read Post »

You cannot copy content of this page

Scroll to Top