ಕವಿತೆ ಪ್ಯಾರಿ ಸುತ ಮುಂದೊಂದು ದಿನ ನಾವಿಬ್ಬರು ಹೀಗೆ ಸತ್ತುಬಿಡೋಣಅಲ್ಲಿಗೆ ಬರುವವರು ಹೂವಿನ ಹಾರ,ಕನಿಕರದ ಮಾತುಗಳು,ಕೆಲವಂದಿಷ್ಟು ಬಿಡಿಬಿಡಿ ಹೊಗಳಿಕೆಗಳು,ಅಲ್ಲೊಂದಿಲ್ಲೊಂದು ತೆಗಳಿಕೆಗಳು,ತಂದು ಅಳುವ ಮುನ್ನಇಲ್ಲವೇ ;ಸಪ್ಪಳ ಮಾಡುವ ಕಣ್ಣೀರು ಅಳುವೆಂಬಪದವಾಗಿ ಸತ್ತ ಕಿವಿಯನ್ನುಸೇರೋ ಮುನ್ನಹಾಗೆ ಮಣ್ಣು ಸೇರಿಬಿಡೋಣಅಲ್ಲಿ ನಾವಿಬ್ಬರು ತಬ್ಬಿಕೊಂಡು ಒಬ್ಬರ ಮುಖವಇನ್ನೊಬ್ಬರುಹೊಂದಿಸಿಕೊಂಡು ಬೆತ್ತಲಾಗಿ ಮಲಗೋಣ ಅಲ್ಲಿ ಉಸಿರಾಡುವ,ಹೆಸರು ಮಾಡುವ ,ಸಮಸ್ಯೆಗಳೇ ಸವಾಲಾಗುವ ಯಾವ ಪ್ರಮೇಯವೇ ಇಲ್ಲವಂತೆಹೆಚ್ಚುಕಡಿಮೆ,ಬಡವ ಧನಿಕ,ಮುಟ್ಟಿಸಿಕೊಳ್ಳದವಎಲ್ಲರೂ ಹೀಗೆ ಸಮಾನವಾಗಿ ಮಲಗಿ ಸುಖಿಸುತ್ತಿದ್ದಾರೆ.ಲಾಭ-ನಷ್ಟ ,ದುಃಖ-ದುಮ್ಮಾನ ಎಲ್ಲವೂ ಕೆಲಸಕ್ಕೆ ಬಾರದವುಗಳಲ್ಲಿತೇವಳುವ,ತೇಲುವ ದುಡಿಯುವ,ಹೊಡೆಯುವಅದೆಷ್ಟು ಜೀವಗಳು ಸುಮ್ಮನೆ ಮಲಗಿಕೊಂಡಿವೆ ಅಂತರ, ಜನ್ಮಾಂತರ ಎಲ್ಲವೂ ಇಲ್ಲಿಗೆ ಸಾಕು ಮಾಡಿಬಿಡೋಣಮಾತುಗಳಿಗೆ ಬಿಗಿಯಾದ ಕೊಂಡೆಯೊಂದನ್ನು ಬಿಗಿದುಅಲ್ಲಿಯೇ ನಿಲ್ಲಿಸಿಬಿಡೋಣಪ್ರೀತಿಯು ಮಾತನಾಡಲಿ,ಅದಕ್ಕೆ ಯಾವ ಸಣ್ಣ ಬಿಂದುಗಳನ್ನು ಕೊಟ್ಟು ನಿಲ್ಲಸದಿರೋಣಬೆನ್ನು ಹಿಂದೆ ಅವಿತು ಕುಳಿತ, ತನ್ನತಾನು ಮರೆತಮಾನವೀಯತೆಯೂ ಮೊದಲು ಬಂದು ನಿಲ್ಲಲಿಅದಕ್ಕೊಂದಿಷ್ಟು ಪದಗಳಾದರೂ ದಕ್ಕಲಿ ಮುಂದೊಂದು ದಿನ ನಾವಿಬ್ಬರು ಹೀಗೆ ಸಾಯುವ ಕಲ್ಪನೆತಟ್ಟನೆ ಕಣ್ಣುಮುಂದೆ ತಂದು ನಿಲ್ಲಿಸಿದೊಡನೆಮತ್ತಷ್ಟು ಪ್ರೀತಿ ನಮ್ಮಿಬ್ಬರಲ್ಲಿ ಗಟ್ಟಿಗೊಳ್ಳಬಹುದು ***************