ಮಳೆಗಾಲದ ಬಿಸಿಲುಕವಿತೆ
ಕವಿತೆ ಮಳೆಗಾಲದ ಬಿಸಿಲು ಅಬ್ಳಿ,ಹೆಗಡೆ ಹಗಲ ಶಿಶು ಶಶಿಯೊಡನೆಆಟದಲಿ ಸೋತು.ಮುಗಿಲುಗಳ ಮರೆಯಲ್ಲಿಅಳುತಿಹನು ಕೂತು.ಮಗುವ ಕಾಣದ ತಾಯಿರಮಿಸಿ ತಾ ಕರೆಯೆ-ಕಣ್ಣೊರೆಸಿ ಹೊರ ಬಂದಮಗು-ನಗುವ ‘ಹೊಳೆಯೆ’. ******************************
ಮಳೆಗಾಲದ ಬಿಸಿಲುಕವಿತೆ Read Post »
ಕವಿತೆ ಮಳೆಗಾಲದ ಬಿಸಿಲು ಅಬ್ಳಿ,ಹೆಗಡೆ ಹಗಲ ಶಿಶು ಶಶಿಯೊಡನೆಆಟದಲಿ ಸೋತು.ಮುಗಿಲುಗಳ ಮರೆಯಲ್ಲಿಅಳುತಿಹನು ಕೂತು.ಮಗುವ ಕಾಣದ ತಾಯಿರಮಿಸಿ ತಾ ಕರೆಯೆ-ಕಣ್ಣೊರೆಸಿ ಹೊರ ಬಂದಮಗು-ನಗುವ ‘ಹೊಳೆಯೆ’. ******************************
ಮಳೆಗಾಲದ ಬಿಸಿಲುಕವಿತೆ Read Post »
ಕವಿತೆ ಬದುಕು- ಬವಣೆ ಸಹನಾ ಪ್ರಸಾದ್ ಗಂಡ ಹೆಂಡಿರ ಸಂಬಂಧಸಂಸಾರಕ್ಕೆ ಇದೇ ಮೆರಗುಉಫ಼್ಫ಼್ ಹೇಳಲಾಗದು ಅನುಬಂಧಜತೆಗಿರುವರು ಸಾಯುವವರೆಗೂ ಆದರೆ ಇರಲೇಬೇಕಿಲ್ಲ ಪ್ರೀತಿವ್ಯಾವಹಾರಿಕವಾದರೂ ನಡೆದೀತುಇದ್ದರೆ ಸಮಾಜದ ಭೀತಿಪ್ರೀತಿಯೂ ಗಿಲೀಟು ಬತ್ತಿ ಹೋದ ಮೇಲೆ ಪ್ರೀತಿಯ ಚಿಲುಮೆಜತೆಗಿರುವುದೂ ಅನಿವಾರ್ಯವಾದಾಗಮುದುಡಿದ ಮನಸ್ಸುಗಳಿಗೆ ಎಲ್ಲಿದೆ ಒಲುಮೆಕಿತ್ತೇ ಹೋಯಿತೇನೋ ಅನಿಸುತ್ತೆ ಹೃದಯದ ಭಾಗ ನಮ್ಮ ಸಮಾಜದಲ್ಲಿ ಇಲ್ಲ ವಿಚ್ಚೇದನಒಮ್ಮೆ ಜತೆಗೂಡಿದರೆ ಮುಗಿಯಿತು ಬದುಕುಒಳ್ಳೆ ಜನ ಸಿಗದಿದ್ದರೆ ಬದುಕೇ ವೇದನಸಹಿಸಿಕೊಳ್ಳಬೇಕು ಖಾಲಿಯಾಗುವವರೆಗೂ ಸರಕು! *************************
ಕವಿತೆ ರಚ್ಚೆ ಹಿಡಿದ ಮನ ಸ್ವಭಾವ ಕೋಳಗುಂದ ಮಳೆ ನಿಂತ ನೆಲದಲ್ಲಿನಡೆಯುತ್ತಲೇ ಇದ್ದಳುಗುರುತು ಮಾಡಿ ಗುರಿಯೆಡೆಗೆ ಹಸಿಟ್ಟಿಗೆ ಬಿಸಿ ನೀರು ಸುರುವಿತಟ್ಟಿ ಬೆಳರ ಚಿತ್ರದ ಹಚ್ಚೆಬೆಂದ ರೊಟ್ಟಿ ಹಸಿದ ಹೊಟ್ಟಗೆ ಹರಗಿದ ಹೊಲಕ್ಕೆ ಬೀಜ ಬಿತ್ತಿನೀರು ಹಾಯಿಸಿ ಕಳೆ ಕಿತ್ತುಕೊಯ್ಲಿಗೆ ಕಾದು ರಾಶಿ ಪೈರಾಗಿಸಿದ್ದ ರಚ್ಚೆ ಹಿಡಿದ ಕೂಸುನೆಟಿಗೆ ತೆಗೆದು ನೀವಾಳಿಸಿರಂಚು ಬೂದಿಯ ತಿಲಕದ ಕೈಚಳಕ ಗುಡಿಯ ಗಂಟೆಯ ನಾದಕ್ಕೆತಲೆದೂಗಿದ ಎಳೆ ಜೋಳದ ತೆನೆನೊರೆ ಉಕ್ಕಿ ಕೆಚ್ಚಲ ತಂಬಿಗೆ ಸೋರಿತ್ತು ಕೊಟ್ಟಗೆಯ ಕರು ಚಂಗನೆ ಎಗರಿಅಂಗಳದ ರಂಗೋಲಿ ಗೋಮಮಯಅಜ್ಜಿಗೆ ಕೈಲಾಸ ತೀರ್ಥ ಕೋಲು ಕನ್ನಡಕದ ಅಜ್ಜಊರುರು ಅಲೆದು ಊರು ಕಟ್ಟಿದಮೊಮ್ಮೊಗನು ಮನೆಯೊಡೆದತಲೆ ಬಾಗಿಲು ಸೀಳಿ *****
ಗಝಲ್ ಸ್ಮಿತಾ ಭಟ್ ಒಲವಿನ ನಿರೀಕ್ಷೆಯ ಬದುಕ ಮುಗಿಸಿದ್ದೇನೆನಲಿವಿನ ದೀಪದೆದುರು ಕಣ್ಮುಚ್ಚಿ ಕುಳಿತಿದ್ದೇನೆ/ ಯಾರಿಗೆ ಯಾರೂ ಆಸರೆಯಲ್ಲ ಇಲ್ಲಿಸೆರೆಯಾದ ಉಸಿರಿನ ಕೀಲಿ ತೆಗೆದಿದ್ದೇನೆ / ಕ್ಷಮಿಸು ಕಣ್ಣತೇವಕ್ಕೆ ನನ್ನ ಹೊಣೆ ಮಾಡದಿರುಕರವಸ್ತ್ರ ಇರಿಸಿಕೊಳ್ಳುವ ರೂಢಿ ಮರೆತಿದ್ದೇನೆ/ ಮೊಗಕೆ ಒಳಗುದಿಯ ತೋರುವ ಇರಾದೆ ಇಲ್ಲಬರಿದೇ ತರತರದ ಮಾತಾಗಿ ನಗುತ್ತಿದ್ದೇನೆ/ ಬಲಹೀನ ಮನಸು ಏನೂ ಸಾಧಿಸದು ಮಾಧವಾಭವಿತವ್ಯದ ಬಾಗಿಲಿಗೆ ತೋರಣವ ಕಟ್ಟಿದ್ದೇನೆ/ *********************************
ಕವಿತೆ ಆಯ್ಕೆ ನಿನ್ನದು ಸುಮಾ ಆನಂದರಾವ್ ಜುಳುಜುಳು ಹರಿವ ಝರಿ ತೊರೆಗಳುನಯನ ಮನೋಹರ ಪರ್ವತ ಶಿಖರಗಳುಬಣ್ಣ ಬಣ್ಣದ ಹೂ ಗೊಂಚಲುಗಳುಹೀರಿದ ಮಕರಂದದಿ ಮಧು ಪಾತ್ರೆಯಸಿಹಿ ತುಂಬಿಸಿ ಝೇಂಕರಿಪ ದುಂಬಿಗಳುಕಣ್ಮನ ಸೂರೆಗೊಳ್ಳುವ ಹಚ್ಚ ಹರಿದ್ವರ್ಣಒಳನುಸುಳಲು ಹೊಂಚುಹಾಕುತಿಹ ಸೂರ್ಯಕಿರಣಒಂದೇ ಎರೆಡೇ ಗೋವರ್ಧನ ಗಿರಿ ಸಂಪತ್ತು ಶ್ಯಾಮನೇಕೆಭಾರದ ಗಿರಿಯ ಒಂದೇ ಬೆರಳಲಿ ಹಿಡಿದ ?ಹಗುರಾದ ಕೊಳಲನೇಕೆ ಎರಡು ಕೈಯಲಿ ಪಿಡಿದ!ಅಚ್ಚರಿಯೊಡನೆ ದಿವ್ಯ ಸತ್ಯವೊಂದಿಹುದುಗಿರಿಯಲಿ ಸೌಂದರ್ಯ ತುಂಬಿಕೊಂಡರೂಗಾಢ ಕತ್ತಲು, ಭಯಂಕರ ಮೃಗಗಳು, ಸರೀಸೃಪಗಳುಓಡಲಾಳದಿ ಇವೆಯಲ್ಲವೇ?ಕೊಳಲಾದರೋ ತನ್ನೊಳಗೆ ನುಗ್ಗಿದ ಶ್ವಾಸವನ್ನು ಸಹ ಹಿಡಿದಿಡದೆಸುಶ್ರಾವ್ಯವಾಗಿ ಕಿವಿಗೆ ಇಂಪು ನೊಂದ ಮನಕೆ ತಂಪು ನೀಡುವುದು ನಿರಾಡಂಬರ ನಿಷ್ಕಲ್ಮಶವ ಅನಾವರಣಗೊಳಿಸುವಕೊಳಲಾಗುವೆಯ ಶ್ಯಾಮ ನಿನ್ನ ಭದ್ರವಾಗಿಎರೆಡು ಕೈಯಲಿ ಪಿಡಿವಗಿರಿಯಾಗುವೆಯ ಆಗಲು ಹಿಡಿವ ಆದರೆಎತ್ತಿ ಆಗಸದೆತ್ತರಕೆ ಒಂದೇ ಬೆರಳಲಿಆಯ್ಕೆ ನಿನ್ನದು *****************************************
ಕವಿತೆ ಈ ರೋಗ… ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೊರಗೆ ಕಾಯುತ್ತ ಇದ್ದಾನೆನನಗಾಗಿಕ್ಲಿನಿಕ್ ರಷ್ ಆಗಿದೆಹೇಳಿ ಕೇಳಿಕೋವಿಡ್ ಕಾಲ!ಆತನ ಮನೆಗೆ ಹೋಗಿಬರಬೇಕಿದೆ… ಬೈಕ್ ಹತ್ತಿ ಹೊರಟಾಗಹೊರಟಾಗ ಗಾಢ ಸಂಜೆನಾ ಮುಂದು ಆತ ಹಿಂದೆಯಾರದೋ ಜಮಾನಿನಕಾಲುದಾರಿ ಹಿಡಿದುಹಳ್ಳಿಯಕಡೆ… ಝಗಮಗವಿಲ್ಲದ ಊರಲ್ಲಿಎಲ್ಲೆಲ್ಲೂ ಮಬ್ಬುಗತ್ತಲೆಇಲ್ಲಿ ಈ ಹೆಂಚಿನಮನೆಯೊಳಗೂ ಅರೆಜೀವದಮಿಣುಕುದೀಪಅದೇ ಅವಸ್ಥೆಯಲಿನರಳುತ್ತಮೂಲೆಯ ಮಂಚವೊಂದರಮೇಲುರುಳಿದ್ದವಯೋವೃದ್ಧಆಗಲೇ ಅರೆಜೀವದ ಸೊಪ್ಪು…ಮೂಳೆ ಚಕ್ಕಳ!ಜೊತೆಗೆ ಬಿಡುವಿಲ್ಲದ ಕೆಮ್ಮಿಗೆಉಬ್ಬಿಳಿವ ಹೊಕ್ಕುಳ…ಮೈ ಕೆಂಪಾದ ಜ್ವರದ ತಾಪಉಲ್ಬಣಿಸಿತ್ತುಅಷ್ಟರಲ್ಲಿ ಕ್ಷಯ ಆಸ್ಥಿತಿಗೆ!ಎಂಥ ರೋಗ ಈಜನದ ನಡುವೆ!ಎಲ್ಲಿ ಕೊಡಲಿ ಮದ್ದುಇಲ್ಲಿ ಇಂಥ ಮನೆಯಲ್ಲಿಇಂಥ ರೋಗಿಗೆತೊಟ್ಟಿಮನೆಯಂಥಈ ಕುಟುಂಬದಲ್ಲಿ!ಸಾವಿಗೆ ಒಂದೇ ಒಂದಡಿಮೇಲಿನ ತ್ರಿಶಂಕು ರೋಗಿ!ಈ ಸಂಕಟದ ನನ್ನಈ ಗತಿಯಾವ ಆಸ್ಪತ್ರೆಗೂಕಳಿಸಲೂ ಆಗದ ಸ್ಥಿತಿಏನು ವೃತ್ತಿಯೋಎಷ್ಟರ ವೈದ್ಯವೋ ಏನೋ…ಅಂತೂ ವಿಧಿಯೆಂದುಹೇಳಿದೆ…ಬೈಕ್ ಏರಿ ಹೊರಟೆ… **********************************
ಕವಿತೆ ಬದುಕಲಿ ಅವಳು ತಿಲಕ ನಾಗರಾಜ್ ಬಿಟ್ಟು ಬಿಡಿ ಅವಳನುಅವಳ ಪಾಡಿಗೆಬದುಕಲಿ ಅವಳು…. ನಿಮ್ಮ ನಿರ್ಧಾರಗಳೇಸುಟ್ಟಿರುವಾಗಅವಳ ಬದುಕಅಳಿದುಳಿದವುಗಳನೇಜೋಡಿಸಿ ಮುನ್ನಡೆಯಲಿ ಬಿಡಿ ಕಣ್ಮುಂದೆ ಕುಣಿದುಅಣಕಿಸುತಿರುವಾಗ ಅವಳುಕಂಡ ಕನಸುಗಳುಈಡೇರದ ಆಸೆಗಳು ಚಾಟಿಯೇಟಿನಂತೆ ಮೈಮನದ ತುಂಬೆಲ್ಲಾ ನೋವಬರೆಗಳ ಎಳೆಯುತಿರಲುಕೆನ್ನೆಯ ತುಂಬೆಲ್ಲಾ..ಕಂಬನಿಯ ಬಿಂದುಗಳು ಬಿಟ್ಟುಬಿಡಿ ಅವಳನುಅವಳ ಪಾಡಿಗೆಆಗಲೇ ದಾಟಿತಲ್ಲ ಮೂವತ್ತು ಎಲ್ಲದಕೂ ಆಕ್ಷೇಪಿಸುವ ನೀವುಗಳುಕೊಟ್ಟಿರೇ ಒಂದೊಳ್ಳೆ ಬದುಕನು?ಇನ್ನಾದರೂ ಬಿಟ್ಟು ಬಿಡಿ ಅವಳನುನಿಮ್ಮ ಬಂಧನದ ಕಟ್ಟಳೆಗಳಿಂದ ಕಟ್ಟಿಕೊಳ್ಳಲಿ ಒಂದೊಳ್ಳೆ ಬದುಕನು ***********************************
ಕವಿತೆ ಬದಲಾಗುವ ಸತ್ಯ ನೂತನ ದೋಶೆಟ್ಟಿ ನಿನ್ನೆಗಳ ಬಾನಲ್ಲಿ ನಿನ್ನ ನಗುವಿನ ನಕ್ಷತ್ರ‘ ಶೂಟಿಂಗ್ ಸ್ಟಾರ್ ‘ ಎಂದ ಗೆಳತಿಯ ಪುಳಕಮರೆತ ಜಿಜ್ಞಾಸೆಎದುರಲ್ಲಿ ನಿನ್ನ ಗುರಿಗಳು ಅವಳ ಪಿಟಿಪಿಟಿಸುವ ಬಾಯಲ್ಲಿಅವಸರದ ಬೇಡಿಕೆಗಳುನನ್ನ ಮುಚ್ಚಿದ ಕಂಗಳಲ್ಲಿನಿನ್ನ ಕನಸುಗಳ ಹಾರೈಕೆನಿನ್ನೆಯವರೆಗೆ ಇದೆಲ್ಲ ಸತ್ಯ ಇಂದುನೀನು, ನಕ್ಷತ್ರ , ಕನಸು ನನ್ನ ಮುಖದಲೊಂದು ಮುಗುಳ್ನಗೆತುಟಿಯಂಚಿನ ಅಚ್ಚರಿಗಲ್ಲದಲ್ಲೂರಿ ಕುಳಿತ ವಾಸ್ತವಶೂಟಿಂಗ್ ಸ್ಟಾರಿನತ್ತ ಹರಿದು ನೋಟನಾಳಿನ ಸತ್ಯಕ್ಕೆ ಸಿದ್ಧವಾಗಿತ್ತು. **********************
ಕವಿತೆ ಅದಿತಿ ಮುರಳಿ ಹತ್ವಾರ್ ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.ಒಂದಿಷ್ಟೂ ಬಿಸಿಯಾಗಲಿಲ್ಲ ಅದುಅದರ ಮೇಲೇ ಕುಳಿತು ಆ ಒಂದೂವರೆ ಕಾಲಿನ, ಒಂಟಿ ಕಣ್ಣಿನಇರಾಕಿನವ ಕಣ್ಣು ಕಿತ್ತು ಬರುವ ಹಾಗೆ ಅವನ ಕಥೆ ಹೇಳಿಕೊಂಡಾಗ ಹೇಗೆ ಬಿಸಿಯಾದೀತು? ನಾಜೂಕಿನಿಂದಧೂಳೊರೆಸಿಕೊಳ್ಳುವದು ಅಭ್ಯಾಸವಾದಮೇಲೆ.ಬೇರು ಕಿತ್ತು, ಕೈ-ಕಾಲು ಕೊಯ್ದು,ನೀರು, ಎಣ್ಣೆಯಲದ್ದಿದ ತುಂಡುಗಳ ಅಂಟಿಸಿ,ಮೇಲೊಂದು ಹತ್ತಿಯ ಮೆತ್ತೆಯಿಟ್ಟು ಕಟ್ಟಿದ ಕುರ್ಚಿಯಲ್ಲವೇ ಅದು. ಆ ಆಫ್ರಿಕಾದ ಅಮ್ಮ, ಅಲ್ಲ, ಎಲ್ಲರ ಅಮ್ಮಅವಳ ಕಥೆ ಹೇಳಿಕೊಂಡಾಗಲೂ ಅಷ್ಟೇ.ಆಕೆ “ಅಯ್ಯೋ, ನಂಬಿಬಿಟ್ಟೆ ಆ ಜನದ ಮಾತು,‘ಅಮ್ಮ, ಬೇಡಮ್ಮ, ಬಿಡಬೇಡ ನನ್ನ ಇವರೊಟ್ಟಿಗೆ”ಎಂದ ಇನ್ನೂ ನೆರೆಯದ ಕೂಸಿನ ಮಾತೂ ಕೆಳದಷ್ಟು.ಕೆಟ್ಟೆ, ನಾ ಕೆಟ್ಟೆ, ನನ್ನ ಮಕ್ಕಳನ್ನು ಇನ್ನಾದರೂ ಬದುಕಲು ಬಿಟ್ಟುಬಿಡಿ”ಎಂದು ಗೋಳಿಟ್ಟರೂ ಒಂದಿಷ್ಟೂ ಒದ್ದೆಯಾಗಲಿಲ್ಲ ಆ ಕುರ್ಚಿ. ಅದರ ಒಣ ಪ್ರತಿಷ್ಠೆ ನೋಡಿ ನೋಡಿ ಸಾಕಾಗಿತ್ತು ಅವನಿಗೂ.ಎತ್ತಿ ನೆಲಕ್ಕೆಸೆದ ಜೋರಾಗಿ. ಶಬ್ದ ಹುಟ್ಟಿ ಮೌನವಾಯಿತು ಅಷ್ಟೇ.ಕತ್ತಿಯಲಿ ಕೊಚ್ಚಿದ – ನೋವು ಹುಟ್ಟಬಹುದೆಂದು.ಒಂದಿಷ್ಟು ತರಚಿತಷ್ಟೇ. ಅಲ್ಲಾಡಲಿಲ್ಲ ಅದು. ಅವನೂ ಬಿಡಲಿಲ್ಲ: ಮಾರಮ್ಮನ ಗುಡಿಯ ಸುತ್ತ ಸುತ್ತಿಸಿದ;ರಕ್ತೇಶ್ವರಿಯ ಕೋಲ ಕಟ್ಟಿದ; ಕೆಂಡದ ಮೇಲೆ ದೂಡಿದಸುಟ್ಟು ಬೂದಿಯಾಯಿತೇ ಹೊರತು ಕೆಚ್ಚು ಕೆರಳಲಿಲ್ಲ. ಕಣ್ಣಿಗೆ ಸಿಡಿದ ಆ ಬೂದಿ ಬೆಳೆದ ರೊಚ್ಚಿನಲಿ,ದುರ್ಗಮ್ಮನಿಗೆ ಹೊದಿಸಿದ್ದ ಸೀರೆಯಲಿ ಮೈ ಸುತ್ತಿಕೊಂಡ;ಅಣ್ಣಮ್ಮನ ಅರ್ಚನೆಯ ಕೆಂಪನ್ನ ಹಣೆಗೊತ್ತಿಕೊಂಡಗಿರಗಿರನೆ, ಗಿರಗಿರನೆ, ಗಿರಗಿರನೆ ತಿರುಗಿದ: ಉಧೋ! ಉಧೋ! ಎನ್ನುತೆದ್ದವುನೆಲದಡಿಯ ಚಿನ್ನ, ಚಿಪ್ಪಿನೊಳಿಟ್ಟ ಮುತ್ತುಕುದಿಯುತಲಿ – ಕುಣಿಕುಣಿದು ಕಂಪಿಸಿ.ಅಲ್ಲೋಲ ಕಲ್ಲೋಲ ಎಲ್ಲೆಲ್ಲೂಎಲ್ಲವೂ ಛಿದ್ರ, ಛಿದ್ರ, ಛಿದ್ರ;ಉಸಿರಿಲ್ಲದ ಕಾರ್ಗತ್ತಲ ಮೌನಗರ್ಭದಲಿ ಲೀನ. ಆ ತುಂಬು ಗರ್ಭದಮೌನದ ಬಸಿರೊಡೆದುಹೊಸ ಬೆಳಕೊಂದು ಹುಟ್ಟಿಮತ್ತೆ ಅದಿತಿಯಾಯಿತು! **********************************
ಕವಿತೆ ದ್ವಿಪದಿಗಳು ವಿ.ಹರಿನಾಥ ಬಾಬು ಹೊರಗೆ ಚಿಟ್ಟೆ ಹಾರುವುದ ನೋಡಿದೆಮೊನ್ನೆಯಿಂದ ಹೃದಯವೇಕೋ ಖಾಲಿ ಖಾಲಿ ಮೋಡಗಳು ಇದ್ದ ಮಳೆಯೆಲ್ಲಾ ಸುರಿಸಿ ನಿಂತಿವೆಮನಸು ನೀನಿಲ್ಲದೆ ಕತ್ತಲ ಕೋಣೆಯಾಗಿದೆ ನದಿಗಳು ಉಕ್ಕಿ ಹರಿಯುತ್ತಿವೆನಿನ್ನ ಹುಡುಕಿ, ಕೈಚೆಲ್ಲಿ ಕುಳಿತಿರುವೆ ಈಜಲಾಗದೆ ನೀರು ಹರಿದ ನೆಲದ ಮೇಲೆ ಅದರ ಹೆಜ್ಜೆ ಮೂಡಿದೆನಿನ್ನ ಬಂದು ಹೋಗುವಿಕೆಗೂ ಇಂಥದೇ ನವಿರು ಯಾಕೋ ಗಾಳಿ, ಛಳಿಗೆ ಮೂಲೆಯಲಿ ಮುದುಡಿ ಕುಳಿತಿದೆನೀನು ಕಾಣದೆ ಮನಸು ಗರಬಡಿದ ಹಾಗಿದೆ *********************
You cannot copy content of this page