ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಗಝಲ್ ಸುಜಾತಾ ರವೀಶ್ ಅಕ್ಷರದ ಪಯಣಕ್ಕೆ ಒಂದಾಗಿ ಹೊರಡೋಣ  ಬರುವೆಯಾ ಸಂಗಾತಿ ಅಕ್ಷಯದ ಒಲವಿನ ಸುಗಮ ಸಂಪ್ರೀತಿಯನು ತರುವೆಯಾ ಸಂಗಾತಿ  ಶಬ್ದಗಳ ಮಾಲೆಯನ್ನು ಕಟ್ಟುತಾ ಹಾಕೋಣವೇ ಕನ್ನಡಮ್ಮನಿಗೆ ಹಾರ?  ಪದಗಳ ಅಡಿಪಾಯ ನೆಡಲು ಶ್ರಮದಕಲ್ಲ ಹೊರುವೆಯಾ ಸಂಗಾತಿ ಸಾಹಿತ್ಯದ ತೇರನೆಳೆಯುತ ಮುಂದಡಿ ಇಡುತಲಿ ಸಾಗೋಣವೇ?  ಸಾಂಗತ್ಯದ ಭರವಸೆ ಕೊಡುತ ಬಾಳಗಮ್ಯ ಸೇರುವೆಯಾ ಸಂಗಾತಿ    ಕುಶಲ ಕರ್ಮಿಯಂತೆ ಮಾಡೋಣ ಚಿತ್ತಾರದ  ಕುಸುರಿ ಕೆಲಸ ವಿಶಾಲ ಪುಸ್ತಕಗಳ ಆಗಸದಿ ನನ್ನೊಡನೆಯೇ  ಹಾರುವೆಯಾ ಸಂಗಾತಿ  ಅನನ್ಯವು ಕಾವ್ಯಪ್ರಪಂಚ ವಿಸ್ಮಯ ವಿನೂತನ ವಿಹಾರವಿದು ಅಮೂಲ್ಯವು ಸುಜಿಗೆ ಓದುವಿಕೆ ಕಡೆವರೆಗೂ ಇರುವೆಯಾ ಸಂಗಾತಿ  *****************************

ಗಝಲ್ Read Post »

ಕಾವ್ಯಯಾನ

ಕನ್ನಡಮ್ಮನ ಬೆಡಗು

ಕವಿತೆ ಕನ್ನಡಮ್ಮನ ಬೆಡಗು ವೀಣಾ ರಮೇಶ್ ಕರುನಾಡು ನನ್ನದುಕನ್ನಡವದೇ ಸಾಕುನನಗೆ ಬಿರುದುಸಂಸ್ಕೃತಿಯ ತವರಿದುಹಸಿರು ಸಿರಿಯಶೃಂಗಾರದಲಿ ಬಿರಿದು ಧೀರ ಶರಧಿಯ ಬಗೆದುಕವಿಶ್ರೇಷ್ಠ ರ ಆಗೆದುಸಾಹಿತ್ಯ ಶಿಖರದನೆತ್ತಿಯಲಿ ಇಳಿದುಹರಿಸಿದಳು ಅಕ್ಷರಧಾರೆಮೊಗೆ ಮೊಗೆದು ಮಲೆನಾಡ ಕಾಡಲ್ಲಿಕಂಗೊಳಿಸಿದ ಸುಂದರಿರಸಋಷಿಗೆ ಜ್ಞಾನಪೀಠದಹೆಮ್ಮೆಯ ಗರಿನಾಲ್ಕು ತಂತಿಗಳಲಿಮೀಟಿದ ನಾದಲಹರಿನಮ್ಮ ವರಕವಿ ಶಿಲ್ಪಕಲೆ,ಬೇಲೂರು ಹಳೇಬೀಡಿನ ಬೆಡಗುರಾಜ ವೈಭೋಗದಮೈಸೂರಿನ ಸೊಬಗುಹಂಪಿಯ ಸುವರ್ಣ ಯುಗ ಕನ್ನಡಾಂಬೆಯಮೆರುಗು. ಯಕ್ಷ ಪ್ರೇಮಿಗಳ ಹೃದಯದಲಿಯಕ್ಷಗಾನದ ಹೆಜ್ಜೆಗಳಲಿಮದ್ದಳೆಯ ಸದ್ದಲ್ಲಿಕುಣಿಯಿತು ಯಕ್ಷಗಾನಕಾರಂತರ ಹೆಜ್ಜೆಗಳಲಿ ಎಲ್ಲೆಲ್ಲೂಮೊಳಗಲಿ ನಿನ್ನ ಕಹಳೆಸಮರಸದ ಸಹಬಾಳ್ವೆಬೆಳಗಲಿ ,ಹರಡಲಿಕನ್ನಡ ದೇವಿಯಪ್ರಭಾವಳಿ **********

ಕನ್ನಡಮ್ಮನ ಬೆಡಗು Read Post »

ಕಾವ್ಯಯಾನ

ವಿವೇಕ ವಾಣಿ

ಕವಿತೆ ವಿವೇಕ ವಾಣಿ ಬಾಗೇಪಲ್ಲಿ ಕೃಷ್ಣಮೂರ್ತಿ ಬೆಳಕು ಮೂಡುವಮುನ್ನ ನಡಿಗೆಗೆ ಹೊರಟೆಬಿಳುಪಿಗೆ ಪರಿಕಲಿತ ಸೌಂದರ್ಯದ ಆಕಾಶ ಮಲ್ಲಿಗೆ ಹೂ ಕಂಡೆ ಮರದ ಎತ್ತರದಿಆನಂದಿಸಲು ಬಿಡದ ಮನ ಹೇಳಿತುಆಕೆ ಇಷ್ಟೇ ಅಲ್ಲವೆ ನಿನಗೆ? ಮುನ್ನಡೆದು ಹಾದಿಬದಿಯ ಗಿಡದ ಹೂ ಮೇಲೆ ಕುಂತ ಬಣ್ಣದಚಿಟ್ಟೆ ಕಂಡೆಪ್ರಯಾಸದಿ ಹಿಡಿದೆ ಪಾಪವೆನಿಸೆ ಬದುಕಲ ಬಿಟ್ಟೆಹಿಡಿದ ಬೆರಳಿಗೆ ಹತ್ತಿತ್ತು ರೆಕ್ಕೆಯ ಬಣ್ಣಸಂತೋಷಿಪ ಮೊದಲೇ ಮನ ಹೇಳಿತು ಪುನಃಆಕೆ ಇಷ್ಟೇ ಅಲ್ಲವೆ ನಿನಗೆ! ಯೋಚನೆ ಹರಿವನು ಬದಲಿಸ ಲೆತ್ನಿಸಿಮುಂದಿನ ಮರದ ರೆಂಬೆಯಲಿ ಕುಂತ ಹಕ್ಕಿಕಂಡೆರಾತ್ರಿ ಓದಿದ ನೆನಪು ಇವು ನೈಲ್ ನದಿಯನು ಬಳಸಿ ವಲಸೆ ಬರವುದಂತೆಮೂಬೈಲಿಗೆ ಕ್ಲಿಕ್ಕಿಸಿ ಕೊಂಡೆ ಚಿತ್ರ ಚನ್ನಾಗಿಯೇ ಮೂಡಿತ್ತುಸಂತೋಷಿಪ ಮುನ್ನ ಮನ ಹೇಳಿತು ಮತ್ತೊಮ್ಮೆಆಕೆ ಇಷ್ಟೇ ಅಲ್ಲವೆ ನಿನಗೆ? ಮನವ ಕೇಳಿದೆ ಹೀಗೇಕೆ ಹಿಂಸಿಸುತಿರುವೆ ಮನ ಹೇಳಿತುನಿನ್ನ ಪ್ರಙ್ಞೆಯೊಂದಿಗೆ ನೀನೇ ಕಣ್ಣುಮುಚ್ಚಾಲೆ ಆಡಬೇಡ. ಇಂದು ಬೇಗನೆ ನಡಿಗೆಗೆ ಬಂದುದೇಕೆನೆನ್ನೆ ಕಂಡು ಮಾತನಾಡಿದ ಸುಂದರ ಗರತಿಯ ಕಾಣಲಲ್ಲವೇ?ಅದಕೇ ಎಚ್ಚರಿಸುತಿರುವೆ ಸಭ್ಯನಾಗು ಆಕೆ ಗರತಿ! ಎಟುಕದ ಹೂ ದಕ್ಕದ ಪಾತರಗಿತ್ತಿಚಿತ್ರದೊಳಗಿನ ಸುಂದರ ಹೆಣ್ಣು ಆಕೆಯ ಗುಂಗನು ಬಿಡುನಿರ್ಮಲ ಚಿತ್ತದಿ ನಡಿಗೆ ನಡಿ!ನಾನೂ ಸಹಕರಿಸುವೆ ಅಂದಿತು. ************************

ವಿವೇಕ ವಾಣಿ Read Post »

ಕಾವ್ಯಯಾನ

ಮೋಹದ ಕಡಲಲ್ಲಿ…

ಕವಿತೆ ಮೋಹದ ಕಡಲಲ್ಲಿ… ಜಯಲಕ್ಷ್ಮೀ ಎನ್ ಎಸ್ ಕೋಳಗುಂದ ಅಂಗ ಸಂಗವ ಜರೆದುಅರಿವೆ ಹಂಗನು ತೊರೆದುಬೆತ್ತಲಾದ ಅಕ್ಕಯ್ಯನಿಗೂಆತ್ಮ ಸಂಗಾತದ ಮೋಹ..! ಮಾಯೆಯ ಜಗದೊಳಗೆಈಸಿ ಗೆದ್ದ ಅಲ್ಲಮನಿಗೂಲಿಂಗದಾಲಿಂಗನದ ಮೋಹ…! ಕಾನನದ ಕಾರ್ಪಣ್ಯಗಳಅರಿವಿದ್ದೂ ಸೀತೆಯ ಬಿಡದಬಂಗಾರದ ಮೋಹ…! ಬಸುರಿ ಹೆಂಡತಿಯಕಾಡಿಗಟ್ಟಿದ ಪುರುಷೋತ್ತಮನಜನಪದದ ಮೋಹ..! ಮಡದಿಯ ಅಡವಿಟ್ಟೂಮಾತುತಪ್ಪದ ಹರೀಶ್ಚಂದ್ರನಸತ್ಯನಿಷ್ಠೆಯ ಮೋಹ..! ಗೆದ್ದ ರಾಜ್ಯವ ಒದ್ದುತಪೋನಿರತನಾದವನಿಗೂಜಿತನಾಗುವ ಮೋಹ…! ಸಾವಿನ ಬಾಗಿಲಿನಲಿ ನಿಂತಅರಿವಿದ್ದೂ ಫಣಿಕೇತನನಿಗೆಛಲಮೆರೆವ ಮೋಹ..! ತುಂಡು ಅರಿವೆಯ ಮಂಡಿಯ ಮೇಲೆಸುತ್ತಿಕೊಂಡ ಫಕೀರನಿಗೆಮುಕ್ತಿ ಕೊಡಿಸುವ ಮೋಹ…! ಮೋಹವ ಗೆದ್ದೂ ಗೆಲ್ಲದನಿರ್ಮೋಹಿಗಳೂಮೋಹದ ಕಡಲೊಳಗಿನಆಣಿಮುತ್ತುಗಳಾದರು….!! **************************************

ಮೋಹದ ಕಡಲಲ್ಲಿ… Read Post »

ಕಾವ್ಯಯಾನ

ಅವ್ಯಕ್ತ

ಕವಿತೆ ಅವ್ಯಕ್ತ ಡಾ.ಪ್ರೀತಿ. ಕೆ. ಎ  ಹೇಳಿಬಿಡಬಹುದಿತ್ತು ನಾನುನಿನ್ನ ಪ್ರತಿಯೊಂದು ಮಾತುನನ್ನಲ್ಲಿ ಅನುರಾಗದ ಅಲೆಗಳನ್ನುಎಬ್ಬಿಸುವುದೆಂದು ನಿನ್ನ ಸಾಮೀಪ್ಯವು ನನಗೆಎಷ್ಟೊಂದು ಮುದನೀಡುವುದೆಂದು ಹೇಳಿಬಿಡಬಹುದಿತ್ತು ನಾನುನಿನ್ನ ಹೊಗಳಿಕೆಯೊಂದುಇಂದಿಗೂ ಕೂಡನನ್ನ ಕೆನ್ನೆಯ ರಂಗೇರಿಸುವುದೆಂದು ನನ್ನ ನಗೆಯ ಹಿಂದಿನಕಾರಣವು ನೀನಷ್ಟೇಆಗಿರುವೆಯೆಂದು ಹೇಳಿಬಿಡಬಹುದಿತ್ತು ನಾನುನಿನ್ನ ಒಂದೇ ಒಂದು ಸ್ಪರ್ಶನನ್ನೊಳಗಿನ ಭಾವ ತಂತಿಯನ್ನುಮೀಟುವುದೆಂದು ನಿನ್ನ ಬಾಹುಗಳಲ್ಲಿನನ್ನನ್ನೇ ನಾನುಕಳೆದುಕೊಳ್ಳುತ್ತೇನೆಂದು ಹೇಳಿಬಿಡಬಹುದಿತ್ತು ನಾನುನೀನು ನನ್ನೊಡನಿದ್ದ ಕ್ಷಣನನಗೆ ಮತ್ತೇನೂನೆನಪಾಗುವುದಿಲ್ಲವೆಂದು ಎದೆ ಬಡಿತ ನಿಲ್ಲುವ ತನಕನನ್ನ ಹೃದಯ ನಿನ್ನ ಹೆಸರನ್ನಷ್ಟೇಕೂಗುವುದೆಂದು ಆದರೂ ಹೇಳಲಿಲ್ಲಏಕೆಂದರೆ ನನಗೆ ಗೊತ್ತುನಿನ್ನೆಡೆಗಿನ ನನ್ನ ಪ್ರೀತಿಹೇಳಿದರಷ್ಟೇ ನಿನಗೆ ಗೊತ್ತಾಗುವಷ್ಟುಬಲಹೀನವಲ್ಲವೆಂದು ! **********************************

ಅವ್ಯಕ್ತ Read Post »

ಕಾವ್ಯಯಾನ

ಪ್ರಕೃತಿ

ಕವಿತೆ ಪ್ರಕೃತಿ ಭಾಗ್ಯ ಸಿ ಮನುಜ ಜೀವನದ ಅವಿಭಾಜ್ಯ ಅಂಗ ಪ್ರಕೃತಿಜತನದಲಿ ಕಾಪಾಡಿಕೊಳ್ಳುವುದಾಗಬೇಕು ನಮ್ಮ ಪ್ರವೃತ್ತಿಗಾಳಿ,ಬೆಳಕು,ನೀರು ಎಲ್ಲಾ ಪ್ರಕೃತಿಯ ಒಡಲಲಿ ನಗುತಿರೆಮನುಜನ ಜೀವನವು ವಜ್ರದಂತೆ ಹೊಳೆಯುತ್ತಿರೆ ವಿಪರೀತ ಬಯಕೆಗೆ ಪರಿಸರ ಬಲಿಪ್ರಾಣಿ ಪಕ್ಷಿಗಳ ಆಸರೆಗಿಟ್ಟ ಕೊಡಲಿಸಣ್ಣ ಮಳೆಗೂ ಕುಸಿಯುತ್ತಿದೆ ಬೆಟ್ಟ ಗುಡ್ಡಜಲಪ್ರಳಯ, ಚಂಡಮಾರುತ ಸೀಳಿದೆ ಅಡ್ಡಡ್ಡ ಬಳಲಿಕೆ ನಿವಾರಣೆಗೆ ಬೇಕು ನೀರುಪಂಚಭೂತಗಳ ನಿರ್ವಹಣೆ ಹೊತ್ತವರಾರುಪ್ರಕೃತಿಯ ಒಡಲ ಸೀಳಿ ತಲೆಯೆತ್ತಿವೆ ಕಟ್ಟಡಗಳುಅವೈಜ್ಞಾನದ ಫಲವಾಗಿ ಉರುಳುತ್ತಿವೆ ತಲೆಗಳು ಅಪ್ಪಿಕೋ ಚಳುವಳಿಯ ರೂವಾರಿ ತಾಯಿಹದಿನೇಳನೆ ಶತಮಾನದ ಅಮೃತಾದೇವಿ ಬಿಷ್ಣೋಯಿಅಧಿಕಾರವಲ್ಲ ಅಸ್ತಿತ್ವವಿದೆ ನಮಗೆ ಪ್ರಕೃತಿಯೊಂದಿಗೆಸಂದೇಶ ಬಿಟ್ಟಿದ್ದಾರೆ ಪ್ರಾಣ ತ್ಯಾಗದೊಂದಿಗೆ ಅರಿಯಬೇಕಿದೆ ಜೋಧಪುರದ ಹೆಣ್ಣು ಮಗಳ ಕಾಳಜಿಯನ್ನುವ್ಯರ್ಥವಾಗಲು ಬಿಡಬಾರದು ಬಿಷ್ಣೋಯಿ ಜನರ ತ್ಯಾಗವನ್ನುಓ ವಿಶ್ವ ಮಾನವರೆ ಸಿದ್ದರಾಗಿ ಪೋಷಿಸಲು ನೀವಿನ್ನುಸೃಷ್ಠಿಯ ವಿಶೇಷವಾದ ಚರಾಚರ ಚೈತನ್ಯವನ್ನು **********************************************************

ಪ್ರಕೃತಿ Read Post »

ಕಾವ್ಯಯಾನ

ನಕ್ಷತ್ರ ನೆಲಹಾಸು

ಕವಿತೆ ನಕ್ಷತ್ರ ನೆಲಹಾಸು ಸ್ವಭಾವ ಕೋಳಗುಂದ ನಕ್ಷತ್ರಗಳ ಹಾದಿಗುಂಟ ಹಾಸಿಸಿಂಗರಿಸಿ ನಿನ್ನ ಕೊಳಲ ಪಾದನೆನಪಿನೆದೆಯ ತುಳಿಯಲಾಶಿಸಿದೆ ಅರ್ಧ ಕತ್ತಲಲಿ ಎದ್ದು ಹೊರಟುನಿನ್ನ ತಬ್ಬಲಿ ಮಾಡಿನಾ ಬುದ್ಧನಾಗಲಾರೆ ಈ ಹಾದಿಗಳೆಲ್ಲಾಎಷ್ಟೊಂದು ಆಮಿಷ ಒಡ್ಡುತ್ತಿವೆಹೃದಯ ಬಂಧಿಯ ಮುಕ್ತಿಗಾಗಿ ನನ್ನೊಳಗಿನ ಸೀತಾಮೀನ ಮೊಟ್ಟೆಯ ಕಾವಲಲಿಸಾವಿರ ಸಂತತಿಯ ಬೆಳಕು ನನ್ನ ಅಸ್ತಿತ್ವದ ಬಿಂದುವಿಗೆನಿನ್ನೊಲವಿನ ಮೊಲೆಹಾಲ ಸ್ಪುರಣಭರವಸೆಯ ಮುತ್ತ ಮಣಿಹಾರ ಹಿಮ ಮಣಿಯ ಮರಳಿನಮರೀಚಿಕೆಯ ಸಾಗರಪಾರಿಜಾತದ ಪರಿಮಳದ ಸಂದೇಶ ಹನಿ ಬೀಜಕ್ಕೆ ಸಾವಿರ ಸಂತಾನನೆಲದ ನಾಲಗೆಯಲಿಸಾವಿನ ಸಂಚಾರಿ ಹಸಿ ಮಣ್ಣ ಮೈಯೊಳಗೆಕನಸ ಕಲ್ಪನೆಯ ಕೂಸುಬಿತ್ತಿ ನಡೆದು ಬಿಡು ನಕ್ಷತ್ರದ ನೆಲಹಾಸು *********************

ನಕ್ಷತ್ರ ನೆಲಹಾಸು Read Post »

ಕಾವ್ಯಯಾನ

ಗಝಲ್

ಗಝಲ್ ರತ್ನರಾಯ ಮಲ್ಲ ಅಕ್ಕಸಾಲಿಗನಲ್ಲಿ ಕಾಲ್ಗೆಜ್ಜೆ ತಂದಿರುವೆನು ಪ್ರೀತಿಯಿಂದಬಲಗಾಲು ಮುಂದೆಯಿಡು ತೊಡಿಸುವೆನು ಪ್ರೀತಿಯಿಂದ ಮಯೂರವು ವಿಹರಿಸಿದಂತಾಗುತಿದೆ ಈ ಹೃದಯದಲ್ಲಿಹಂಸದ ನಡಿಗೆಯನು ಪ್ರೀತಿಸುತಿರುವೆನು ಪ್ರೀತಿಯಿಂದ ಹಕ್ಕಿಗಳ ಕಲರವವು ಆಲಂಗಿಸುತಿದೆ ಈ ಮೈ-ಮನಗಳನ್ನುಶಕುಂತಲೆಯ ನಾಟ್ಯದಿ ಮೈ ಮರೆತಿರುವೆನು ಪ್ರೀತಿಯಿಂದ ಗೆಜ್ಜೆ ಎದೆ ಬಡಿತದೊಂದಿಗೆ ಪ್ರೇಮ ರಾಗವ ನುಡಿಸುತಿದೆನಿದ್ದೆ ಮರೆತು ನಿನ್ನನ್ನೆ ಕನವರಿಸುತಿರುವೆನು ಪ್ರೀತಿಯಿಂದ ‘ಮಲ್ಲಿ’ ನಿನ್ನ ಹೆಜ್ಜೆಯಲ್ಲಿ ಗೆಜ್ಜೆಯನು ಹುಡುಕುತಿರುವನುನಿನ್ನ ಪಾದಗಳನ್ನು ಅಲಂಕರಿಸುತಿರುವೆನು ಪ್ರೀತಿಯಿಂದ **********************************

ಗಝಲ್ Read Post »

ಕಾವ್ಯಯಾನ

ಬಾಲ್ಯ

ಕವಿತೆ ಬಾಲ್ಯ ತಿಲಕ ನಾಗರಾಜ್ ಹಿರಿಯಡಕ ಅರೆ! ಎಷ್ಟು ಚೆನ್ನಾಗಿತ್ತಲ್ಲ?ಅಲ್ಲಿ ಯಾವ ನೋವಿನಹಂಗಿರಲಿಲ್ಲ….ಚಿಂತೆಗಳ ಬರೆಯಿರಲಿಲ್ಲಮುದವೀಯುತ್ತಿದ್ದವಲ್ಲಕಾಡು ಮೇಡುಗಳ ಅಲೆದಾಟಗದ್ದೆ ಬಯಲುಗಳ ಓಡಾಟ…ಲಗೋರಿ ಕಣ್ಣಾಮುಚ್ಚಾಲೆಚಿನ್ನಿದಾಂಡು ಉಯ್ಯಾಲೆಕ್ರಿಕೇಟು ಕುಂಟೆಬಿಲ್ಲೆಆಟಗಳಾಡಿ ರಾತ್ರಿಯಲ್ಲಿಕಾಲಿಗೆ ಚುಚ್ಚಿದ ಮುಳ್ಳುಗಳನೋವಿನ ಜೊತೆಹಿರಿಯರ ಬೈಗುಳದ ಜೋಗುಳಒಂದಷ್ಟು ಹಾಯಾದ ನಿದ್ದೆಮರವೇರಿ ಕೊಯ್ದಮಾವಿನ ಕಾಯಿಗಳಬಚ್ಚಿಟ್ಟು ಹಣ್ಣಾಗಿಸಿ ತಿಂದಸ್ವಾದ ನಾಲಗೆಯಲ್ಲಿ ಸದಾ ಅಮರಹಚ್ಚಿಟ್ಟ ಚಿಮಣಿ ದೀಪದಆಚೆಗೆ ಬೀಡಿ ಎಲೆಗಳ ಸುರುಳಿಸುತ್ತುತ್ತಿದ್ದ ಅಮ್ಮನ ಬೆರಳುಗಳುಈಚೆಗೆ ಪುಸ್ತಕಗಳ ಮೇಲೆಕಣ್ಣಾಡಿಸುತ್ತಿದ್ದ ನಾವುಗಳುಒಮ್ಮೊಮ್ಮೆ ಬೇಸರೆನಿಸಿದಾಗಪಠ್ಯ ಪುಸ್ತಕಗಳ ನಡುವೆಇರಿಸಿ ಓದುತ್ತಿದ್ದ ಕತೆ ಪುಸ್ತಕಗಳಮುಖಾಂತರ ಕಲ್ಪನಾ ಲೋಕದಲ್ಲಿಒಂದು ಸಣ್ಣ ವಿಹಾರ..ಮರೆಯಲಾಗದ್ದು, ಮರಳಿ ಬಾರದ್ದುಎಷ್ಟು ಚೆನ್ನಾಗಿತ್ತಲ್ಲ ಬಾಲ್ಯ? ***********************

ಬಾಲ್ಯ Read Post »

ಕಾವ್ಯಯಾನ

ಆಹುತಿ

ಕವಿತೆ ಆಹುತಿ ಅನಿಲ ಕಾಮತ ದೇಹ ಹಿಂಡಿಹಿಪ್ಪೆಯಾಗಿಸಿದೆಕಾರಿನಲ್ಲಿ ಬಸ್ಸಿನಲ್ಲಿಹಗಲಲ್ಲಿ ನಸುಕಿನಲ್ಲಿಕಾನನದಲ್ಲಿನೀರವ ಅಹನಿಯಲ್ಲಿ ಬೆಳಕು ಸೀಳುವ ಮುನ್ನಬ್ರೇಕಿಂಗ್ ನ್ಯೂಸ್‌ಗಳಿಗೆಆಹಾರಭುವನ ಸುಂದರಿಸ್ಪರ್ಧೆಯಲ್ಲಿದೇಹ ಸೌಂದರ್ಯದ ಬಗ್ಗೆತೀರ್ಪುಗಾರರತಾರೀಪು ಹೆಣ್ಣು ಭ್ರೂಣಪತ್ತೆ ಮಾಡುವತವಕದಲ್ಲಿಸ್ಕೆನ್ನಿಂಗ್ಮಿಷನ್ ಗಳಿಗೆಪುರುಸೊತ್ತಿಲ್ಲ ನದಿಯ ತಟದಲ್ಲಿರೇಲ್ವೆ ಸೇತುವೆಯಕೆಳಗೆಅರೆಬೆಂದ ಶವವಾಗಿಖಾಕಿಗಳಿಗೆ ಮಹಜರುಮಾಡಲು…. ****************

ಆಹುತಿ Read Post »

You cannot copy content of this page

Scroll to Top