ದೀಪಗಳ ಸಾಲು
ಕವಿತೆ ದೀಪಗಳ ಸಾಲು ಸುವಿಧಾ ಹಡಿನಬಾಳ ಹಚ್ಚೋಣ ಸುತ್ತೆಲ್ಲಾ ದೀಪಗಳ ಸಾಲುಹೊದೆಸೋಣ ಎಲ್ಲರಿಗೂ ಪ್ರೀತಿಯ ಶಾಲು ಬೆಳಕಿಂದೆ ಜಗವು ಬೆಳಗುತಿಹುದುಅನ್ಯಾಯ ಹಿಂಸೆಯಲಿ ದಹಿಸುತಿಹುದುಜ್ಞಾನದ ಬೆಳಕಿನಲಿ ತೆರೆಯಲಿಕಣ್ಣುವಾಸಿಯಾಗಲಿ ಮನದ ಕಲ್ಮಶದ ಹುಣ್ಣು ಜಗವ ಹಿಂಡುತಿಹ ಅನಾರೋಗ್ಯ ದೂರಾಗಲಿಎಲ್ಲರೂ ತಿಂದುಂಡು ನೆಮ್ಮದಿಯಾಗಿರಲಿ ನೆಲಕಚ್ಚಿದ ಆರ್ಥಿಕತೆ ಮತ್ತೆ ಚೈತನ್ಯಗೊಳ್ಳಲಿದುಡಿಯುವ ಕೈಗಳಿಗೆ ಕೆಲಸವು ಲಭಿಸಲಿ ದಿನವೂ ಮೊರೆವ ಬಾಂಬು ಗುಂಡುಗಳ ಸದ್ದಡಗಲಿಆತಂಕವಾದಿಗಳ ಹೃದಯದ ಕತ್ತಲೆ ಕಳೆಯಲಿ ಬದುಕೆಂಬ ಅನಿಶ್ಚಿತ ಪಯಣದಲಿಸಕಲರ ಸಹಕಾರ ಋಣಭಾರವಿದೆಏಕೆ ವ್ಯಾಜ್ಯ, ಕಲಹ ಜೀವನದಲಿಪಯಣ ಸಾಗಲಿ ಹೊಂದಾಣಿಕೆ ಸಮರಸದಲಿ ಒಂದು ಸುದೀರ್ಘ ಸಂಕಟವಕಳೆದು ಬಂದಿದೆ ದೀಪಾವಳಿಮನೆ ಮನೆಯಲಿ ನೆಲೆಗೊಳ್ಳಲಿಶಾಂತಿ ಸಂಭ್ರಮದ ರಂಗವಲ್ಲಿ *********************************









