ಅಪ್ಪನ ಕೊನೇ ಪತ್ರ.!
ಕವಿತೆ ಅಪ್ಪನ ಕೊನೇ ಪತ್ರ.! ಅಲ್ಲಾಗಿರಿರಾಜ್ ಕನಕಗಿರಿ ಬರುವ ಹೊಸ್ತಿಲು ಹುಣ್ಣಿಮೆಗೆರಕ್ತ ಹೆಪ್ಪುಗಟ್ಟುವ ಚಳಿ ಗಾಳಿ. ಒಂದು ವೇಳೆ ನಾನು ಕೊರೆಯುವ ಚಳಿಗೆಬೀಸುವ ವಿಷ ಗಾಳಿಗೆ ದಿಲ್ಲಿ ಗಡಿಯಲ್ಲಿಹೆಣವಾದರೆ ಯಾರೂ ಹೆದರಬೇಡಿ. ನನ್ನ ಹೆಣಕ್ಕೆ ಗೋರಿ ಕಟ್ಟುವ ಬದಲುಕೊರೆಯುವ ಚಳಿಯಲ್ಲಿ ನನ್ನ ಹೆಣ ಸುಟ್ಟು ಮೈ ಬಿಸಿ ಮಾಡಿಕೊಳ್ಳಿ.ಮುಂದಿನ ದಿನಗಳ ಹೋರಾಟಕ್ಕೆ ಅಣಿಯಾಗಿ. ನನ್ಹೆಣ ಸುಟ್ಟ ಬೂದಿ ಮನೆಗೆ ಬಂದರೆ ನಿನ್ನವ್ವನ ಹಣೆಗೆ ಹಚ್ಚಿ.ಕಣ್ಣೀರು ಬಂದರೆ ಬೆಳೆಗೆ ಹರಿಸಿಬಿಡಿ.ನಾ ಇಲ್ಲವೆಂದು ಒಕ್ಕಲುತನ ಜೊತೆಗೆ ಹೋರಾಟಎಂದೂ ನಿಲ್ಲದಿರಲಿ ಮಗನೆ. ಇದು ನಿನಗೆ ಕೊನೇ ಪತ್ರ…. ಇಂತಿ ನಿನ್ನ ಅಪ್ಪ “ಅನ್ನದಾತ”. ************************************









