ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಬಾನು ಬಂಜೆಯಾಗಿದೆ ನಿಲ್ಲು ಮೋಡ ಕಟ್ಟಲಿ ನವಿಲಾಗಿ ಬಿಚ್ಚಿಕೊಳ್ಳುತ್ತೇನೆಭೂಮಿ ಬರಡಾಗಿದೆ ನಿಲ್ಲು ಸೋನೆಸುರಿಯಲಿ ಮಳೆ ಬಿಲ್ಲಾಗಿ ಬಿಚ್ಚಿಕೊಳ್ಳುತ್ತೇನೆ ಹಿಗ್ಗಿರದ ಮೊಗ್ಗಿನೆದೆಯಲಿ ಅದೆಂಥ ಕಠೋರ ಅಡಗಿದೆ ಸಜನಾನಗೆ ಮಿಂಚನ್ನೊಮ್ಮೆ ಮುಡಿಸು ತುಟಿ ಬಿರಿದು ಹೂವಾಗಿ ಬಿಚ್ಚಿಕೊಳ್ಳುತ್ತೇನೆ ಬಿಡಿಸಲಾಗದ ಬಂಧದ ಸಾವಿರಾರು ಎಳೆಗಳು ಸಿಕ್ಕುಗಟ್ಟಿವೆಒಂದೊಂದೇ ಗಂಟು ನಾಜೂಕಾಗಿ ಬಿಡಿಸು ಭಾವವಾಗಿ ಬಿಚ್ಚಿಕೊಳ್ಳುತ್ತೇನೆ ಧಗಧಗಿಸುವ ಬಿಸಿಲ ಝಳಕಿಂತ ಒಡಲ ಬೇಗೆಯೇ ಹೆಚ್ಚು ಸುಡುತ್ತಿದೆನೋವಿರಲಿ ಕಾವಿರಲಿ ಜೊತೆಗೆ ನೀನಿರಲು ಕೊಡೆಯಾಗಿ ಬಿಚ್ಚಿಕೊಳ್ಳುತ್ತೇನೆ ಕಾಲ ಮರೆವೆಂಬ ಮುಲಾಮು ಸವರಿ ಮನದ ಗಾಯ ಮಾಸುತ್ತದೆ ಅರುಣಾಅರಿವಿನ ಅಕ್ಷರಗಳಿಗೆ ಅರಿವೆ ತೊಡಿಸಿ ಕಾವ್ಯವಾಗಿ ಬಿಚ್ಚಿಕೊಳ್ಳುತ್ತೇನೆ ***************************

ಗಜಲ್ Read Post »

ಕಾವ್ಯಯಾನ

ನೀಲ ಮೋಹ.

ಕವಿತೆ ನೀಲ ಮೋಹ. ನಂದಿನಿ ವಿಶ್ವನಾಥ ಹೆದ್ದುರ್ಗ ಪ್ರೀತಿ ನೆರೆನುಗ್ಗಿದಾಗೆಲ್ಲಾನಾನವನ ನಿನ್ನ ಹೆಸರಲ್ಲೇಕರೆಯುವೆ,ಬಲ್ಲೆಯಾ?ನನ್ನ ಉತ್ಕಟತೆಗೆ ಒದಗುತ್ತಿ ನೀನುಆಗಾಗ ಚಲುವ.ನವುರಾಗಿ ನಿನ್ನ ಉಸುರುವಾಗೆಲ್ಲಾಅಂಗುಲಂಗುಲದಲ್ಲೂಸಂಗಕ್ಕೆ ಅರಳುವಬಂಗಾರದ ಹೂವು ನಾನು. ಆಗೆಲ್ಲಾ ಬೆಚ್ಚಿ ಬೀಳುತ್ತಾನೆಇವನು.ಮತ್ತ ಮತ್ಸರದಲಿ ಪ್ರೇಮದ ಹೊಸಸಂವತ್ಸರ ಶುರುವಾಗುತ್ತದೆಇಲ್ಲಿ.ಬಿಗಿ ಕಳೆದುಕೊಂಡಿದ್ದ ನನ್ನಹಳೆಯ ಒಲವಿಗೆಸಿಹಿಹಗೆಯಿಂದಲೆ ಸೊಗ ನೀಡುತಾನೆಮತ್ತೆ. ಅಡಿಗಡಿಗೆ ಬಣ್ಣ ಬದಲಿಸುವನಭದ ಮೋಹನನೇನೆಲ ಮುಗಿಲ ಹೊಲೆಯುವಚತುರ ಚಮ್ಮಾರನೇನೇವರಿಕೆಯೂ ಇರದೆ ನೆನಪಿಗೇನಲುಗುವಾಗೆಲ್ಲಾನೀನಾರೆಂದು ತಿಳಿವ ಕುತೂಹಲನನಗೆ. ಅವಳಾರೋ ನಿತ್ಯ ಕನ್ನೆಬಿಚ್ಚಿ ಬಿಸುಟ ಸೀರೆಯೆನಿಸುತ್ತಿನಕಾಶೆ ನಕ್ಷೆ ಹೆಸರು ವಿಳಾಸವಿರದಊರೆನಿಸುತ್ತಿ.ಆಕಾರವಿರದ ಮಳೆಯ ತತ್ತಿಗಳಹೊತ್ತು ನಡೆವ ಬಟಾಬಯಲೆನಿಸುತ್ತಿ.ನೆಲದ ನೀರೆಲ್ಲಾ ಹರಳಾಗಿಅಡಗಿಸಿಡುವ ಗೋದಾಮು ಎನಿಸುತ್ತಿ.ಭಂಗವಿಲ್ಲದೇ ಭಗವಂತ ಎಸೆದ ಚೆಂಡುನಿನ್ನಂಗಳ ಮುಟ್ಟುವಾಗೆಲ್ಲಾಮುಟ್ಟಾದ ನಾನೇಎನಿಸುತ್ತಿ. ಹಾರುಹಕ್ಕಿಗೆ ಏರುತ್ತೇರುತ್ತಾಹೋರುವ ದಾರಿಯೆನಿಸುತ್ತಿರಚ್ಚೆ ಹಿಡಿದ ಪುಟ್ಟಿ ಅಪ್ಪನಹೆಗಲೇರಿ ಮುಟ್ಟ ಬಯಸುವಅಟ್ಟವೆನಿಸುತ್ತಿಜಡೆಬಿಲ್ಲೆ ಮುಡಿದ ಮರಕ್ಕೆಸಮಸ್ತ ವಿವರವೆನಿಸುತ್ತಿ. ನೀಲನೇ..ಪ್ರೇಮಲೋಲನೇಎದೆಯ ಖಾಲಿಯೇಜಗದ ಮಾಲಿಯೇನನ್ನ ಕಾವು ನೀನುತುಯ್ಯುವ ಸಾವು ನೀನು.ಮೋಹದ ನೋವು ನೀನು ಅಪ್ಪುಗೆಗೆ ದಕ್ಕಿಬಿಡು ಒಮ್ಮೆನಿನ್ನ ಪರಿಮಳಕೆ ಅರಳಿಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿದೆಚೆಲುವ.ಮಂತ್ರ ಹೇಳಿಹೊಳೆವ ಕನ್ನಡಿಯಲಿ ಕೂಡಿಹೆರುವೆ ನಿನ್ನನ್ನೆ ದಮ್ಮಯ್ಯ.!!ಅರೆ..ಬೆಚ್ಚುವೇ ಏಕೆ.?ಆಗದೋ..?ಬಾ ಹೋಗಲಿ.ತುಸು ಹೊತ್ತು ಕುಳಿತು ಮಾತಾಡುವ. ********************************

ನೀಲ ಮೋಹ. Read Post »

ಕಾವ್ಯಯಾನ

ಯಾರಿಗೂ ನಾವು ಕಾಯುವುದಿಲ್ಲ

ಕವಿತೆ ಯಾರಿಗೂ ನಾವು ಕಾಯುವುದಿಲ್ಲ ನೂತನ ದೊ ಶೆಟ್ಟಿ ಕುಂಡದಿಂದೆದ್ದು ಚಿಗುರಿದ ಗಿಡದಲ್ಲಿಕಡುಕೆಂಪಾಗಿ ಜೀವ ತುಂಬಿಕೊಂಡಿತ್ತುಆ ಗುಲಾಬಿ ಹೂ ಎಳೆಯ ಹೊನ್ನ ಕಿರಣಗಳುಮಲಗಿದ್ದ ಇಬ್ಬನಿಗೊಂದುಹೂ ಮುತ್ತನಿಕ್ಕಿದಾಗನಾಚುತ್ತಲೇ ಸುಖಿಸಿತ್ತು. ಮುಳ್ಳುಗಳ ಸಂಗವೇಕೆಂದುದೂರ ನಿಂತಕರಗಳಿಗಾಗಿ ಕಾತರಿಸುತ್ತತಂಗಾಳಿಯಲಿ ತೂಗಿ ಸಂದೇಶ ಕಳಿಸಿತ್ತು ಏರಿದ ಬಿಸಿಲಲ್ಲಿ ಕಿರುಗಣ್ಣಾಗಿಈಗ ಬರಬಹುದೇ?ಕೇಳಿದ ಪ್ರಶ್ನೆಗೆಇಬ್ಬನಿಯ ನಿರುತ್ತರ ಹೊನ್ನ ಕಿರಣಗಳ ತೆಕ್ಕೆಯಲ್ಲಿಸೇರಿ ಹೋದ ಇಬ್ಬನಿಯ ಕಂಡುಗುಲಾಬಿಗೂ ತವಕಎಲ್ಲಿ ನನ್ನ ತಬ್ಬುವ ಕೈಗಳು ಬೆಳಕು ಕರಗಿದ ಸಂಜೆಯಲಿರಾತ್ರಿ ರಾಣಿಗಳು ನಕ್ಕು ಕೇಳಿದೆವುಏಕೆ ಕಾಯುವೆ? ಕಿರಣ, ಇಬ್ಬನಿ, ಸಂದೇಶಯಾರಿಗೂ ನಾವು ಕಾಯುವುದಿಲ್ಲಅರಳುತ್ತೇವೆ, ಘಮಿಸುತ್ತೇವೆಎಲ್ಲ ನಮಗಾಗಿಗಾಳಿಯಲಿ ಸುಗಂಧವ ಸೇರಿಸಿಅವರೆದೆಗಳಲ್ಲಿ ಹರಡುತ್ತೇವೆ ********************************

ಯಾರಿಗೂ ನಾವು ಕಾಯುವುದಿಲ್ಲ Read Post »

ಕಾವ್ಯಯಾನ

ಕೊಡವಿ ( ಕನ್ಯೆ )

ಕವಿತೆ ಕೊಡವಿ ( ಕನ್ಯೆ ) ಭಾಮಿನಿ ಷಟ್ಪದಿ ಅಭಿಜ್ಞಾ ಪಿ ಎಮ್ ಗೌಡ ಕೊಡವಿ ಕಂಗಳ ಕಾಂತಿ ಹೆಚ್ಟುತಬಡವಿ ಹೆಣ್ಣಲಿ ಕಾಶ ತುಂಬಿದೆನಡುವೆ ನೊಸಲದ ನಲಿವ ಹೆರಳದು ನಿತ್ಯ ಜೀಕುತಿದೆಕೊಡುಗೆ ನೀಡುವ ಮನದ ಬಿಂಬದಿಗಡನೆ ಹೊಳೆಯುವ ಹೃದಯ ಸಾಕ್ಷಿಯುಜಡಿಪ ಕೂಜನ ಕಂಪಿನಲೆಯಲಿ ಕುಣಿದು ಜಿಗಿಯುತಿದೆ|| ಮೊಗದ ಭಾಷೆಯು ಕೂಗಿ ಹೇಳಿದೆನಗುವ ಮನಸಿನ ನೂರು ಭಾವವಮಗುವ ಮುಗ್ದತೆ ಮೀರಿ ನಿಂತಿದ ಭವ್ಯ ಕೌಮಾರಿಜಗದ ಚೆಲುವದು ತುಂಬಿ ಕೊಂಡಿದೆಗಗನ ಚುಂಬಿತ ವೃಕ್ಷ ರಾಶಿಯುಸುಗುಣ ಸದ್ಗುಣಿ ನಿತ್ಯ ಶೋಭಿತ ಚೆಲ್ವಿ ಮದನಾರಿ|| ಹೆಣ್ಣು ರೂಪವು ಚಂದ ಮೆರೆದಿದೆಮಣ್ಣು ಹೊನ್ನಿನ ನಡುವೆ ಬಂಧದಿಬೆಣ್ಣೆ ಮಾತಿನ ಮೃದುಲ ನಡೆಯಲಿ ಸಾಗಿ ನಿಂತಿಹಳುಸುಣ್ಣ ಬಣ್ಣದ ರಂಗು ಚೆಲ್ಲುತಸಣ್ಣತನವನು ಬಿಟ್ಟು ನಡೆಯುವಕಣ್ಣ ಮುಂದಿನ ದಿಟ್ಟ ಬೆಡಗಿಯ ತಥ್ಯ ಮಾರ್ಗವಿದು|| ರಿಗ್ಗವಣೆಯನು ನಿತ್ಯ ಬಾರಿಸಿನುಗ್ಗಿ ಬಂದಿಹ ಹೆಣ್ಣ ಭಾವದಿಸುಗ್ಗಿ ಸಿರಿಯಲಿ ಕಾವ್ಯ ಬಿತ್ತುತ ನಿತ್ಯ ಮೆರೆದಿಹಳುಬಗ್ಗಿ ನಡೆಯುವ ಲಲನ ಮಣಿಯೂಜಗ್ಗಿ ಕೂತಿಹ ಮೌನದಾತೆಯುತಗ್ಗಿ ನಡೆಯಲಿ ತಥ್ಯ ಮಾರ್ಗದಿ ಗೆದ್ದು ಬರುತಿಹಳು|| ಚೆಲುವೆ ಡಂಕಿಸಿ ಕುಣಿದು ನಲಿಯುತಬಲುಮೆ ಗೆಳೆತಿಯು ಕಾದು ಕುಳಿತಳುನಲುಮೆ ನಲ್ಲನ ಮಾತು ಕೇಳುತ ದಿವ್ಯ ಹಾಸದಲಿಒಲವ ಹೂವಿನ ಮಳೆಯ ಕರೆಯುತಗೆಲುವು ಸಾಧಿಸಿ ಮೆಟ್ಟಿ ನಿಂತಳುಕಲೆಯ ಸೃಷ್ಠಿಸಿ ಬಲವ ತೋರಿಸಿ ಮೆಚ್ಚಿ ನಡೆದಿಹಳು|| ********************************************

ಕೊಡವಿ ( ಕನ್ಯೆ ) Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಪರಿಶ್ರಮದಿಂದ ನೆಲಕೆ ಉದುರಿದ ಬೆವರ ಮುತ್ತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ಕಾಲಗರ್ಭದಲ್ಲಿ ಕರಗಿಹೋಗುವ ಬದುಕಿನ  ಚಿತ್ರಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ನಗರಗಳ ತುಂಬಾ ಇರುಳಾದರೆ ಸಾಕು ಬಗೆ ಬಗೆಯ ಭಾವಗಳ ವೇಷಗಳ ಕುಣಿತ ಮಣಿತ ಬೆಳಕಿನಲಿ ವಿನಾಕಾರಣ ಸೋರಿಹೋಗುವ ಕ್ಷಣಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಬೀದಿಯ ಬದಿಯಲ್ಲಿ ಖಾಲಿ ಪಾತ್ರೆಯಂಥ ಹೊಟ್ಟೆ  ಖಾಲಿ ತಟ್ಟೆಯಂಥ ಕಣ್ಣುಗಳು ಸಿರಿತನದ ಸೊಕ್ಕಿನಲಿ ಚೆಲ್ಲಿದ ಅನ್ನದ ಅಗುಳುಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಮಸಣದಂತಹ ಖಾಲಿ ಎದೆಯಲಿ ಮಿಡಿತವೊಂದನ್ನು ಬಿಟ್ಟು ಏನನ್ನೂಗುರುತಿಸಲಾಗದು ಯಾರೂ ಗುರುತಿಸದೆ ಬಾಡುವ ಹೂಗಳ ಅರಳುವಿಕೆಗಳನ್ನು ಮತ್ತೆ ಪಡೆಯಲಾಗುವುದಿಲ್ಲ ನೇರ ದಾರಿ ಎಂದೇ ತಿಳಿದ ಬದುಕಿನ ಪಯಣದಲಿ ಎಷ್ಟೋ ತಿರುವುಗಳನ್ನು ಕಂಡಿಹನು ಸಿದ್ಧ ನಡೆದ ದಾರಿಯಲ್ಲಿ ಅಳಿಸಿಹೋದ ಹೆಜ್ಜೆ ಗುರುತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ********************************************************

ಗಜಲ್ Read Post »

ಕಾವ್ಯಯಾನ

ಹಾಯ್ಕುಗಳು

ಕವಿತೆ ಹಾಯ್ಕುಗಳು ಭಾರತಿ ರವೀಂದ್ರ 1) ಲಾಸ್ಯ ಬುವಿ ಮೊಗದಿಚಿಗುರೊಡೆದ ಲಾಸ್ಯಮೇಘ ಮಿಂಚಲು. 2) ಸಾಕ್ಷಿ ಕಣ್ಣಂಚು ಹನಿ :ಬಿಕ್ಕಲು, ಬಿಟ್ಟು ಹೋದನೆನಪು ಸಾಕ್ಷಿ. 3) ಸತ್ಯ ಕತ್ತಲು ಭ್ರಮೆಸುಳ್ಳಿನ ಕನ್ನಡಿಗೆಬೆಳಕು ಸತ್ಯ. 4) ಮಲ್ಲಿಗೆ ಮಾತು ಮಲ್ಲಿಗೆಸುಗಂಧದ ಸೊಗಸುನುಡಿ ಸಂಗೀತ 5) ಸೋನೆ ನೆನಪು ಸೋನೆ:ಕಣ್ಣು ಹಸಿ ಯಾಗಿಸಿಹೃದಯ ಒದ್ದೆ. *************************

ಹಾಯ್ಕುಗಳು Read Post »

ಕಾವ್ಯಯಾನ

ಯಾರು ಬಂದರು

ಕವಿತೆ ಯಾರು ಬಂದರು ಡಾಲಿ ವಿಜಯ ಕುಮಾರ್.ಕೆ.ವಿ. ಯಾರು ಬಂದರು ಸಖಿಯೇಎಲ್ಲಿ ಹೋದರು…. ಬೆಳ್ಳಿ ಬೆಳಕು ಬರುವ ಮುನ್ನಮಲ್ಲೆ ಮುಡಿಸ ಬಂದರು.ರಾಶಿ ಹಿಮದ ತಂಪು ಸುರಿದುಮುತ್ತ ಎರಚಿ‌ ಹೋದರು. ಪಚ್ಚೆ ಹಸಿರ ಸೀರೆಯುಡಿಸಿಬೆಟ್ಟಬಯಲೆ ಕುಚ್ಚವೂಶರಧಿಯಗಲ ಸೆರಗ ಹೊದಿಸಿಮೈಯಮುಚ್ಚಿ ಹೋದರು. ಅಡವಿಯೊಳಗೆ ತೊಟ್ಟಿಲಿಟ್ಟುಒಲವ ತೂಗ ಬಂದರು.ನಭದ ನೂಲು ಇಳೆಗೆ ಇಳಿಸಿನಲ್ಲೆ ಮುಟ್ಟಿ ಹೋದರು. ಅಲ್ಲಿ ಯಾರೋ ಕಂಡ ಹಾಗೆಕರಗಿ ನದಿಯ ತಂದರು.ಇಲ್ಲಿ ಯಾರೋ ಕೂಗಿದಾಗೆಜಲಧಿಯೊಳಗೆ ಹೋದರು. ಬಿದಿರಕೊಳಲ ಶ್ಯಾಮನೇನೆರಾಧೆ ನಿದಿರೆ ಕದ್ದವ.ಗರಿಯ ಮುಡಿದ ಗೊಲ್ಲನೇನೆನಿನ್ನ ಕಂಡು ಹೋದವ… ***************************************************

ಯಾರು ಬಂದರು Read Post »

ಕಾವ್ಯಯಾನ

ಅಭಿವ್ಯಕ್ತ

ಕವಿತೆ ಅಭಿವ್ಯಕ್ತ ವೀಣಾ ರಮೇಶ್ ನೀನು ಅನುಭವನಾನು ಅನುಭಾವವಾಗಿನೀನು ವ್ಯಕ್ತ,ನಾನು ಅಭಿವ್ಯಕ್ತವಾಗಿನನ್ನ ಏಕಾಂತದಲ್ಲೂನೀ ಕಾಂತವಾಗಿ ಮಾತು ಬೆತ್ತಲೆಯಾಗಿಮೌನ ಕತ್ತಲೆಯ ಪ್ರತಿಶೂನ್ಯದಲ್ಲೂ ನನ್ನಾವರಿಸಿಮೌನ ಬಗೆದುದಿಗಂತ ದೆತ್ತರಕ್ಕೂಸವಿ ಮಾತಿನ ಮೆಟ್ಟಿಲಾಗಿರುವೆ ಬಿರುಬಿಸಿಲoತೆ ವಿರಹದನಿನ್ನುಸಿರು ಸುಟ್ಟರೂಮಳೆಯಾಗಿ ನಾನು ಇನ್ನಷ್ಟೂ ಸುರಿದುಒಂದಿಷ್ಟು ನನ್ನುಸಿರು ಸೇರಿಸಿ ಕವಿದ ಮೋಡ ದೊಳಗೆ..ನನ್ನ ಮುಚ್ಚಿದರೂಹಾಲುನಗುವಿಗೂ ಬಿಳಿಮುಗಿಲು ಮೆಚ್ಚಿದರೂ,ತಿಂಗಳ ಬೆಳಕುವಿರಮಿಸದಂತೆ ಚಂದ್ರಮನಂತೆ ನಿನ್ನ ಇಡಿಯಾಗಿತುಂಬಿ ಕೊಳ್ಳುವೆ ನಿನ್ನೊಲುಮೆಗೆ ಆಲಾಪವಾಗಿಅಧೀತ ಪ್ರೀತಿಗೆ ಅನುರಾಗವಾಗಿನಾ ರಾಗವಾಗಿಅತೀತವಾಗಿರುವೆ *********************************

ಅಭಿವ್ಯಕ್ತ Read Post »

ಕಾವ್ಯಯಾನ

ಗಂಗಾವತಿ

ಕವಿತೆ ಗಂಗಾವತಿ ಜ್ಯೋತಿ ಬಳ್ಳಾರಿ ಗಂಗಾವತಿ ಎಂದರೆ,ಬರೀ ಊರಲ್ಲ,ದೇಶಕ್ಕೆ ಅನ್ನ ನೀಡುವ ನಾಡು,ನಮ್ಮ ಭತ್ತದ ನಾಡು. ಗಂಗಾವತಿ ಎಂದರೆ,ಬರೀ ಇತಿಹಾಸವಲ್ಲ,ರಾಮಾಯಣಕ್ಕೆ ಸಾಕ್ಷಿಯಾದ,ಆಂಜಿನೇಯ ಜನಿಸಿದ ನಾಡು.ಗತ ಇತಿಹಾಸ ಸಾರುವಮೊರೆರ ತಟ್ಟೆಗಳ ಬೀಡು. ಗಂಗಾವತಿ ಬರಿ ಊರಲ್ಲಪರನಾರಿ ಸಹೋದರ,ಗಂಡುಗಲಿ ಕುಮಾರರಾಮ,ಗಂಡು ಮೆಟ್ಟಿದ ನಾಡು,ಆಧ್ಯಾತ್ಮದ ಗುರು ಹೆರೂರುವಿರುಪನಗೌಡರ ಹುಟ್ಟಿದ ಬೀಡು. ಗಂಗಾವತಿ ಎಂದರೆ,ಬರೀ ಹೆಸರಲ್ಲ,ಜನರ ಉಸಿರಲ್ಲೂ,ಆರಾಧ್ಯದೈವ ಚನ್ನಬಸವ ತಾತನ ಪೂಜಿಸುವಬೀಡು.ತಾಯಿ ಗ್ರಾಮದೇವತೆ ದುರ್ಗಾದೇವಿ ಆಶೀರ್ವದಿಸಿದ ಊರು. ಗಂಗಾವತಿ ಎಂದರೆ,ಬರೀ ಪ್ರಾಂತ್ಯವಲ್ಲ,ಕವಿ, ಇತಿಹಾಸಕಾರರ ನೆಲೆಬೀಡು,ಹಾಸ್ಯ ಚಕ್ರವರ್ತಿ ಪ್ರಾಣೇಶ್,ಇತಿಹಾಸ ತಜ್ಞ ಕೋಲ್ಕಾರರ ತವರೂರು. ಗಂಗಾವತಿ ಬರಿ ಊರಲ್ಲ,ವಾನಭಧ್ರೇಶ್ವರ,ಪಂಪಾಸರೋವರ, ವಿಜಯನಗರ ಅರಸರ ಮೂಲ ತಾಣ ಆನೆಗೊಂದಿಯ ಕೋಟೆಯ ನಾಡು. ಗಂಗಾವತಿ ಎಂದರೆ,ಬರೀ ಸಾಧನೆಯಬೀಡಲ್ಲ,ಕಣಕಣದಲ್ಲೂ ಸಂಸ್ಕಾರವನ್ನು,ತೋರುವ ನೆಲವಿದು. ಗಂಗಾವತಿಯ ಒಮ್ಮೆ ನೋಡುಹಚ್ಚ ಹಸುರಿನ ಬಯಲು ಸೀಮೆಯ ಮಲೆನಾಡು,ನದಿ ಗುಡ್ಡ ಬೆಟ್ಟಗಳ ಸೌಂದರ್ಯದ ಸ್ವರ್ಗದ ಬೀಡು. ಗಂಗಾವತಿ ಎಂದರೆ,ಬರೀ ಸೌಹಾರ್ದವಲ್ಲ,ಹಿಂದೂ ಮುಸ್ಲಿಂ ಕ್ರೈಸ್ತರ,ಸರ್ವಜನಾಂಗದ ಶಾಂತಿಯ ತೋಟವಿದು. ***************************************

ಗಂಗಾವತಿ Read Post »

ಕಾವ್ಯಯಾನ

ತಮಟೆ ಬೇಕಾಗಿದೆ

ಕವಿತೆ ತಮಟೆ ಬೇಕಾಗಿದೆ ಎನ್.ರವಿಕುಮಾರ್ ಟೆಲೆಕ್ಸ್ ನನ್ನ ತಮಟೆ ಹರಿದು ಹೋಗಿದೆ ಎದೆಯಗಲ ಚರ್ಮ ಬೇಕಾಗಿದೆಸತ್ತ ದನದ್ದು…. ತಮಟೆ ಸದ್ದಿನೊಳಗೆದುಃಖ ದೂರುಗಳ ಜಗಕೆಆಡಿ ಹಗುರಗೊಳ್ಳಬೇಕಿದೆ ಜುಂಗು ಕಿತ್ತು ರಂಪಿಗೆ ಆಡಿಸಿಅಡಗಲ್ಲಿನಲ್ಲಿತಟ್ಟಿ ಹದ ಮಾಡಿಹದಿನಾರು ಎಳೆ ಬಿಗಿದುಎಳೆ ಬಿಸಿಲಿಗಿಡಿದುಅಲುಗು ಅಲುಗಿಗೂ…ಕಂಟ ಕಾವು ರಣಬಾಜಿ,ಹುಲಿ ಹೊಡೆತಎರಡೇಟು…ಗಸ್ತಿನೋವು ನೀಗಿಸಿಕೊಳ್ಳಬೇಕಿದೆಶತಮಾನಗಳದ್ದುಈಗೀಗ ವರ್ತಮಾನದ್ದೂ…. ಸತ್ತದನವೊಂದಿದ್ದರೆಕೊಟ್ಟು ಬಿಡಿನನ್ನ ತಮಟೆ ಹರಿದು ಹೋಗಿದೆ.// ಕಾಡುಕತ್ತಲೆಬಿಳಿಯ ತೊಗಲ ದೊರೆ ದೇಶ ತೊಲಗಿದಕರಿಯ ತೊಗಲ ಬಿಳಿಯ ಬಟ್ಟೆದೇಶ ಜನರ ಬಗೆ ಬಗೆದುಸುಲಿತಿದೆ ಹಾಡಹಗಲೆಸುಳ್ಳು ಮಾತು ಕಳ್ಳನಡೆಪೊಳ್ಳು ಧರ್ಮದ ಇಷವಯ್ಯಸತ್ತಂತಿಹರನು ಬಡಿದೆಚ್ಚರಿಸಲುತಮಟೆಯೊಂದು ಬೇಕಾಗಿದೆ// ಹೊಲಗದ್ದೆ ಸುಗ್ಗಿಕಣಊರ ಹುಣಸೆ ಮರವೂಗಂಟುಕಳ್ಳರ ಪಾಲುಅನ್ನದಾತನ ಕೈಗಳಿಗೆ ಭಿಕ್ಷೆ ಚರಿಗೆಕುಂಬಾರ, ಕಮ್ಮಾರ,ಚಮ್ಮಾರ,ಮಡಿವಾಳ,ಬಡಗಿ,ಕೂಲಿಯಾಳು, ಒಕ್ಕಲು ಕಾಡು ಪಾಲುದೇವ್ರು – ಧರ್ಮ ಕರ್ಮಗೆಡಿಸಿನೆರೆಹೊರೆ ನಂಟು ಊರಾಳುಎದೆ ಎದೆಗೂ ಇದ ಸಾರಲುತಮಟೆಯೊಂದು ಬೇಕಾಗಿದೆ. ಮುತ್ತಾತ ಮೆಚ್ಚಿ ಬಾರಿಸಿದ ತಮಟೆತಾತಾ ತಲೆ ಎತ್ತಿ ಬಡಿದ ತಮಟೆಅಪ್ಪ ಕುಣಿ ಕುಣಿದು ಅಬ್ಬರಿಸಿದ ತಮಟೆಸಾವಿನ ಸೂತಕಕ್ಕೂದೇವರ ಒಡ್ಡೋಲಗಕ್ಕೂಒಪ್ಪುಳ್ಳ ತಮಟೆ ಸತ್ತದನವೊಂದಿದ್ದರೆ ಕೊಡಿತಮಟೆ ಬಿಗಿಯಬೇಕಿದೆನಿಮ್ಮ ಮೆರವಣಿಗೆಗೆ!!! ವಲಸೆ ಹೋದ ದಾರಿಯಲ್ಲಿರಕ್ತ ಮಾಸಿಲ್ಲಬಿಮ್ಮನಿಸಿ ಬಾಣಂತಿ ಹಸುಗೂಸುಗಳನಿಟ್ಟುಸಿರು ನಿತ್ರಾಣವಿನ್ನೂ ತಣಿದಿಲ್ಲಹಸಿವು,ಕಣ್ಣೀರ ಅನಾಥ ಮೆರವಣಿಗೆಗೆನೀರಿಲ್ಲ , ನೆಳಲಿಲ್ಲ ದೇವರಿಗೊಂದುಮಹಲು‌ ಕಟ್ಟುವ ಮೋಜು ಮುಗಿದಿಲ್ಲದೊರೆಯನ್ನು ಧ್ಯಾನದಿಂದ ಎಬ್ಬಿಸಲುತಮಟೆಯೊಂದು ಬೇಕಾಗಿದೆ. ದೇವರುನಡುರಸ್ತೆಯಲ್ಲೆ ನಿಂತಿದ್ದಾನೆಹೆಣವೊಂದು ಚಟ್ಟ ಏರಲೊಲ್ಲುತ್ತಿಲ್ಲಸಂಪ್ರದಾಯ ಮುಕ್ಕಾದೀತುತಮಟೆಯೊಂದು ಬೇಕಾಗಿದೆಹೆಣದ ಮೋಕ್ಷಕ್ಕೆದೇವರ ಸುಖ ನಿದ್ರೆಗೆ ದೇಶದಲ್ಲೀಗ ಭಕ್ತರ ಕಾಲಪ್ರಶ್ನಿಸುವವರು ಜೈಲಿಗೆದುಡಿವವರು ಬೀದಿಗೆಉಳಿದವರು‌ ಜೀತಕ್ಕೆತುಂಡು ಬಾಡು ತಿಂದಿದ್ದಕ್ಕೆಕಾಡು ನ್ಯಾಯದ ಸಾವ ಶಿಕ್ಷೆಮತದ ಮತ್ತೇರಿದವರನ್ನೆಲ್ಲಮನುಜಮತದ ಮನುಷ್ಯರೂರಿಗೆಮೆರವಣಿಗೆ ಕರೆದೊಯ್ಯಬೇಕಿದೆ ಸತ್ತದನವೊಂದಿದ್ದರೆ ಕೊಡಿಎದೆಯಗಲ ಚರ್ಮ ಬೇಕಿದೆಎಂದೂ ಹರಿಯದಬುದ್ಧ ಭಾರತ,ಭೀಮ ಭಾರತಬಸವ ಪಥ ಕಟ್ಟಲುತಮಟೆಯೊಂದು ಬಿಗಿಯಬೇಕಿದೆ. *************************************

ತಮಟೆ ಬೇಕಾಗಿದೆ Read Post »

You cannot copy content of this page

Scroll to Top