ಜಯಶ್ರೀ.ಭ.ಭಂಡಾರಿ ಗಜಲ್
ಕಾವ್ಯ ಸಂಗಾತಿ ಗಜಲ್ ಜಯಶ್ರೀ.ಭ.ಭಂಡಾರಿ ಕೂಡು ಕುಟುಂಬದಂತೆ ವಿವಿಧ ಫಲಗಳ ಹೊತ್ತು ತೋರಿದೆ ನೋಡು.ಕೂಡಿ ಬಾಳುವ ಉದಾತ್ತ ನೀತಿಯ ಮನುಜ ಬಾಳಿಗೆ ಸಾರಿದೆ ನೋಡು ತೆಂಗು ಎತ್ತರವಾಗಿ ಬೆಳೆದರೂ ನೆರಳು ನೀಡುವುದಿಲ್ಲ ಧನಿಕನಂತೆ ಅಲ್ಲವೇಸಂಗದಿ ಉತ್ತರವಾಗಿ ಸ್ವಾದಿಷ್ಟಕರ ಹಣ್ಣುಗಳ ಮೀರಿದೆ ನೋಡು. ಪ್ರಕೃತಿಯ ವಿಸ್ಮಯ ಉಸಿರಲಿ ಏನೇನು ಅಡಗಿದೆಯೋ ಕಾಣೆವು.ಸುಕೃತಿಯ ಹಸಿರ ಬಸಿರಲಿ ಮರದಿ ನಗುವ ತೋರಣ ಬೀರಿದೆ ನೋಡು . ಹಣ್ಣುಗಳಲ್ಲಿ ಮರವೋ ಮರದಲಿ ಹಣ್ಣುಗಳೋ ಅರಿಯದೇ ಪೆಚ್ಚಾದೆ ಮಣ್ಣಿನ ಸಾರ ಸತ್ವವು ತೋಟದ ಅಂದವ ಹೆಚ್ಚಿಸಿ ಹರುಷ ಊರಿದೆ ನೋಡು ಭಾರವಾದ ಕಾಯಿಗಳ ಮುತ್ತಿಕೊಂಡ ಗಿಡದ ಸಂದೇಶ ಜಯಳು ಕೇಳಿಹಳು.ಹಾರವಾಗಿ ಸುತ್ತುವರಿದು ಹಗುರವಾದ ಉದ್ದೇಶ ಪಸರಿಸಿ ಏರಿದೆ ನೋಡು
ಜಯಶ್ರೀ.ಭ.ಭಂಡಾರಿ ಗಜಲ್ Read Post »









