ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಮಲಾರುಣ ಪಡ್ಡoಬೈಲು ಕವಿತೆ-ಜಾರುವ ಮುನ್ನ

ಕಾವ್ಯ ಸಂಗಾತಿ ಜಾರುವ ಮುನ್ನ ಅಂದ ಕಂಗಳು ಹುಡುಕುತ್ತಿವೆಬದುಕಿನ ಬೇಗೆಯ ದಾಟುವುದೆಂತುಬಳಲಿ ಮುದುಡಿವೆ ಮೈ ಮನ ಬೇನೆಯಲಿಮೌನವಾಗಿ ಕಾಣದ ಲೋಕದಪರದೆಯ ದಿಟ್ಟಿಸುತ್ತಾ ಹುಟ್ಟುವ ಆ ಗಳಿಗೆ ಕಣ್ಣೀರೆ ಉಸಿರುನಲಿವಿನ ಸಿಂಚನ ಸುತ್ತಲೂ ಹರಿಸಿಹಸಿರ ನೀವುದು ಹೆತ್ತೊಡಲ ಕನಸುಒಂದಷ್ಟುಪ್ರೀತಿ ಎದೆಯಾಳದಿ ಎದೆಗವಚಿಬಂದು ಬಾಂಧವರ ಕಳಚಿ ಸಾಗುವ ಹೊತ್ತು… ಅಂತ್ಯ ಅರಿಯದ ಖಗ ಮೃಗ ಅಂತ್ಯ ಅರಿಯದ ಖಗ ಮೃಗಹಸಿರಲ್ಲೇ ಉಸಿರ ನೀವ ಮಲೆಕೊನೆ ಕ್ಷಣಕ್ಕೂ ಬದುಕ ಸವಿದುವಿಷವಿಕ್ಕದ ಗಿಡಮರ ಬಳ್ಳಿಯಂತೆತೆರಳು ನೀ ಇಹಲೋಕವ ಬಾಳ ಪಯಣದಿ ಹುಟ್ಟಿಗೇ ಸಾವು ನಿಶ್ಚಿತಅವಿತುಕೊಳ್ಳಲಾಗದು ಈ ಬಂಧದಿನಗ ನಾಣ್ಯ ಹೊನ್ನು ಮಣ್ಣಲಿಪಡೆಯಲಾಗದು ಮರುಜನ್ಮಕರ್ಮದಲಿ ಬೆರೆತು ಧರೆಗೆ ನೀ ಋಣಿಯಾಗು ಸ್ಮಶಾನದಿ ಚಿರನಿದ್ರೆಗೆ ಜಾರುವ ಮುನ್ನರಾಡಿಯಾದ ಮನದಿ ಅನುರಾಗ ಬೆಸೆದುದೀಪ್ತಿಯಾಗು ಆಸರೆಯ ಬದುಕಿಗೆನೂರಾರು ಮನಕೆ ಸ್ಫೂರ್ತಿ ನೀನಾಗು

ವಿಮಲಾರುಣ ಪಡ್ಡoಬೈಲು ಕವಿತೆ-ಜಾರುವ ಮುನ್ನ Read Post »

ಕಾವ್ಯಯಾನ

ಮಾನಸ ಎಸ್ ಕವಿತೆ-ಅವಳೊಂದು ಮಾಯೆ…

ಕನಸಿಲ್ಲದ ಕಣ್ಣಿಗೆ ರೆಪ್ಪೆಯಾದವಳು
ನಿಂತು ಬಿಟ್ಟಳು ನಡುವಲ್ಲಿ..,
ಆಕಾಶದ ಎತ್ತರಕ್ಕೆ ಹಾರುವ ಕನಸ ಕಂಡು
ಪತಂಗದಂತೆ ಹಾರಿಹೋದಳು ಅವಳೊಂದು ಮಾಯೆ…

ಮನದಲ್ಲಿ ಪ್ರೀತಿಯ ಚಿತ್ತಾರ ಮೂಡಿಸಿ
ಗೌಪ್ಯವಾಗಿ ಉಳಿದುದು ಎನ್ನಲ್ಲಿ..,
ಅಂಗೈಯ ರೇಖೆಗಳಂತೆ ಅಸ್ಪಷ್ಟವಾಗಿ ಉಳಿದವಳು ಅವಳೊಂದು ಮಾಯೆ…

ಸವಿಜೇನ ಮಾತಲ್ಲೇ ತೆಲಿಸುವಳು
ಹೂ ಅರಳುವ ಮುನ್ನ ಚಿವುಟಿದಳು..,
ಸಾಗರದಲ್ಲಿ ತೆಲಿಸುತ ಅದರ ಅಲೆಗೆ
ಮುಳುಗಿಸಿದವಳು ಅವಳೊಂದು ಮಾಯೆ…

ನಕ್ಷತ್ರಕ್ಕೆ ಕೊಡಲಾಗುವುದಿಲ್ಲ ಲೆಕ್ಕ
ಪ್ರೀತಿಯಲ್ಲಿ ಮುಳುಗಿದವ ಸತ್ತ..,
ಆದರೂ ನಿನ್ನ ನೆನೆಪಿಸುವೆ ನಿತ್ಯ
ಕಾರಣ ವಾಸ್ತವದಲ್ಲಿ ಅವಳೊಂದು ಮಾಯೆ…

ಮಾನಸ ಎಸ್ ಕವಿತೆ-ಅವಳೊಂದು ಮಾಯೆ… Read Post »

You cannot copy content of this page

Scroll to Top