ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ನಿಮ್ಮೊಂದಿಗೆ

ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ಲೇಖನ ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಡಾ.ಸುಜಾತಾ.ಸಿ.                                     “ನೀನು ನಂಗೊAದು ರೊಟ್ಟಿ ಕೊಟ್ರೆ                                     ಒಂದು ದಿವ್ಸ ಹಸಿವನ್ನ ತೀರಿಸ್ದಂಗೆ                                     ರೊಟ್ಟಿಗಳಿಸೋದು ಹೆಂಗೇAತ ಕಲಿಸಿದ್ರೆ                                     ಗಳಿಸೋ ಅವಕಾಶ ಕಿತ್ಕಳೋ ತಂಕ                                     ನನ್ನ ಹಸಿವನ್ನ ತೀರ್ಸಿದಂಗೆ                                     ಅದೇ ನಿನೇನಾದ್ರೂ ವಿದ್ಯೆ ಕಲ್ಸಿ                                     ಒಗ್ಗಟ್ಟಾಗಿ ಹೋರಾಡೋದು ಕಲ್ಸಿದ್ಯಾ?                                     ಏನ್ಬೇಕಾದ್ರೂ ಆಗ್ಲಿ, ಯಾವ ಕಷ್ಟನಾದ್ರೂ ಬರಲಿ                                     ಎಲ್ಲ ಒಟ್ ಸೇರಿ                                     ನಮ್ ದಾರಿ ನಾವು ಹುಡುಕೋದ ಹೇಳಿಕೊಟ್ಟಂಗೆ” ಭಾರತದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಅಪ್ಪಟ ಸ್ತ್ರೀವಾವಾದ ಚಿಂತಕಿ ಮಾತೆ ಸಾವಿತ್ರಿ ಭಾ ಫುಲೆ ಅವರಿಗೆ ಮಹಿಳೆಯರ ಬಗ್ಗೆ ಇದ್ದ ಕಾಳಜಿ ಮತ್ತು ಪ್ರೇಮ ಅವರ ಬದುಕು ಮತ್ತು ಬರಹದಲ್ಲಿ ಕಾಣಸಿಗುತ್ತದೆ. ಮೇಲಿನ ಕವಿತೆಯನ್ನು ನೋಡಿದರೆ ಮಹಿಳೆಯರಿಗೆ ಬಹಳ ಮುಖ್ಯವಾದುದು ಶಿಕ್ಷಣವೆಂಬುದನ್ನು ಸಾರಿ ಹೇಳುತ್ತದೆ. ಇಂತಹ ತಾಯಿಯನ್ನು ನಾವು ಪದೇ ಪದೇ ನೆನೆಯಬೇಕು ಹಾಗೇ ಅವಳ ಹೆಜ್ಜೆಯಲ್ಲಿಯೇ ನಮ್ಮ ಹೆಜ್ಜೆಗಳನ್ನು ಇಡುವದರಿಂದ ಮಾತ್ರ ಅವಳ ಹೋರಾಟಕ್ಕೆ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಭಾರತೀಯರಿಗೆ ಅದರಲ್ಲೂ ಶೂದ್ರಾತಿಶೂದ್ರ ಬಹುಸಂಖ್ಯಾತರಿಗೆ ಹಾಗೂ ಭಾರತದ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸಲು ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟು ಅಕ್ಷರ ಬೀಜವನ್ನು ಬಿತ್ತಿ ಕ್ರಾಂತಿಯನ್ನೇ ಹುಟ್ಟು ಹಾಕಿದ ದಿಟ್ಟ ಮಹಿಳೆ ಅವ್ವ ಸಾವಿತ್ರಿ ಬಾಯಿ ಫುಲೆ. ಸಾವಿತ್ರಿ ಬಾಯಿ ಅವರು ಬಡ ರೈತ ಕುಟುಂಬದಲ್ಲಿ ಶಿರವಳ ಹತ್ತಿರವಿರುವ ನಾಯಗಾವ ಎಂಬ ಹಳ್ಳಿಯಲ್ಲಿ ಝಗಡ ಪಾಟೀಲರ ಮಗಳಾಗಿ ೩ ನೇ ಜನೇವರಿ ೧೮೩೧ ರಲ್ಲಿ ಜನಿಸಿದರು. ಸಾವಿತ್ರಿಬಾಯಿ ಅವರಿಗೆ ಎಂಟು ವರುಷವಿರುವಾಗ ಗೋವಿಂದರಾವ್ ಅವರ ಮಗ ಜ್ಯೋತಿ ಬಾ ಫುಲೆ ಅವರಿಗೆ ಹದಿಮೂರು ವರ್ಷ ಇರುವಾಗ ವಿವಾಹ ಮಾಡುತ್ತಾರೆ. ಸಾವಿತ್ರಿಬಾಯಿ ಹುಟ್ಟಿದ ಊರಲ್ಲಿ ಶಿಕ್ಷಣದ ಪರಂಪರೆ ಇರಲಿಲ್ಲ. ಅನಕ್ಷರಸ್ಥಳಾದ ಸಾವಿತ್ರಿಯನ್ನು ಮದುವೆಯಾವ ಜ್ಯೋತಿಭಾ ಅಕ್ಷರ ಕಲಿಸಲು ಒರ್ವ ಶಿಕ್ಷಕನನ್ನು ನೇಮಿಸುತ್ತಾರೆ. ಆ ಶಿಕ್ಷಕರು ಕೇಶವ ಶಿವರಾಮ ಭಾವಳ್ಕರ ಎಂಬುವವರು. ಸಾವಿತ್ರಿಬಾಯಿಯವರಿಗೆ ಕಲಿಸಲು ಒಪ್ಪಿಕೊಂಡು ಅಕ್ಷರದ ಅಭ್ಯಾಸವನ್ನು ಮಾಡಿಸುತ್ತಾರೆ. ಹಾಗೆ ಸಮಯ ಸಿಕ್ಕಾಗ ಜ್ಯೋತಿಬಾಫುಲೆ ಅವರು  ಕೂಡಾ ಪಾಠ ಮಾಡಲು ಅಣಿಯಾಗುತ್ತಿದ್ದರು. ಇದರಿಂದ ಸಾವಿತ್ರಿಬಾಯಿ ಫುಲೆ ಅವರು ಸಂಗಾತಿ ಜ್ಯೋತಿಬಾಫುಲೆ ಅವರ ಹೆಗಲಿಗೆ ಹೆಗಲು ಕೊಟ್ಟು ಕ್ರಾಂತಿಯ ಜ್ಯೋತಿಯನ್ನು ಹಚ್ಚಲು ಕಾರಣವಾಯಿತು. ಸಮಾಜದ ಅನೇಕ ಮೌಢ್ಯಗಳನ್ನು ಶಿಕ್ಷಣದ ಅರಿವಿನ ಮೂಖಾಂತರ ಹೊರದೂಡುವ ಕೆಲಸವನ್ನು ದಂಪತಿಗಳು ಮಾಡಿದರು. ಅಕ್ಷರ ಕಲಿತ ಸಾವಿತ್ರಿಯವರು ಸುಮ್ಮನೆ ಕೂಡುವ ಜಾಯಮಾನದವಳಾಗಿರದೇ ತಮ್ಮ ಮನೆಯನ್ನೇ ಮೊಟ್ಟ ಮೊದಲಿಗೆ ಶಾಲೆಯನ್ನಾಗಿ ಮಾಡಿ ಗಂಡ ಹೆಂಡತಿ ಇಬ್ಬರು ಸೇರಿ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುತ್ತಾರೆ. ಜ್ಯೋತಿಬಾ ಅವರಿಗೆ ಹಿಂದೂ ಸ್ತ್ರೀಯರಿಗೆ ವಿಮೋಚನೆ ಮಾಡುವದು ಪ್ರಥಮ ಆದ್ಯ ಕರ್ತವ್ಯವೆಂದು ತಿಳಿದು ಎಲ್ಲ ಹೆಣ್ಣು ಮಕ್ಕಳ ಹಾಗೂ ಶೂದ್ರರಿಗೆ ಶಿಕ್ಷಣವನ್ನು ಕೊಡಲು ನಿರ್ಧರಿಸುತ್ತಾರೆ. ಒಂದು ದಿನ ಜ್ಯೋತಿಬಾ ಫುಲೆ ಅವರು ಮಿಸ್ ಫೆರಾರ್ ಅವರು ನಗರದಲ್ಲಿ ಅಮೇರಿಕನ್ ಮಿಷನ್ ನಡೆಸುತ್ತಿದ್ದ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಡುತ್ತಾರೆ. ಅಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ವ್ಯವಸ್ಥೆಯನ್ನು ನೋಡಿ ತಾವು ಕೂಡ ಹಾಗೆ ಶಿಕ್ಷಣವನ್ನು ಕೊಡಿಸಬೇಕು ಎಂದು ಅವರನ್ನು ನೋಡಿ ಬಹಳವಾಗಿ ಪ್ರಭಾವಿತರಾಗುತ್ತಾರೆ. ೧೮೪೮ ರಲ್ಲಿ ಕೆಳಜಾತಿಯ ಹೆಣ್ಣು ಮಕ್ಕಳ ಶಾಲೆಯನ್ನು ಪ್ರಾರಂಭಿಸುತ್ತಾರೆ. ಸಂಪ್ರದಾಯವಾದಿಗಳಿಂದ ಈ ಶಾಲೆ ಬಹುಬೇಗ ಮುಚ್ಚಿ ಹೋಗುತ್ತದೆ. ಮರಳಿ ಪ್ರಯತ್ನ ಮಾಡು ಎಂಬಂತೆ ಪುಣಿಯ ಬುಧವಾರ ಪೇಟೆಯಲ್ಲಿರುವ ಬಿಢೆ ಎಂಬುವರ ಮನೆಯಲ್ಲಿ ಶಾಲೆಯನ್ನು ತೆರೆಯುತ್ತಾರೆ. ಅಹಮ್ಮದ ನಗರದ ಮಿಸ್ ಫರಾರ್ ಫಾರ್ಮಲ್ ಸ್ಕೂಲಿಗೆ ಶಿಕ್ಷಕ ತರಬೇತಿ ಪಡೆದುಕೊಳ್ಳಲು ಕಳಿಸುತ್ತಾರೆ. ಅದೇ ಶಾಲೆಯಲ್ಲಿ ಫಾತಿಮಾ ಶೇಕ್ ಎಂಬಾಕೆಯೂ ಕೂಡಾ ಕಲಿಯುತ್ತಿರುತ್ತಾರೆ. ಸಾವಿತ್ರಿಬಾಯಿ ಫುಲೆ ಅವರ ಕನಸಿಗೆ ನೀರೆಯುವಂತೆ ಫಾತಿಮಾಳು ಕೂಡಾ ಶಿಕ್ಷಕ ವೃತ್ತಿಯನ್ನು ಸಾವಿತ್ರಿಬಾಯಿ ಅವರ ಜೊತೆಗೂಡಿ ಕೆಲಸದಲ್ಲಿ ತೊಡಗಿಸಿಕೊಂಡರು. ಸಾವಿತ್ರಿ ಬಾಯಿ ಫುಲೆ ಅವರ ಶಿಕ್ಷಕ ವೃತ್ತಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಶಾಲೆ ಪ್ರಾರಂಭಿಸಿದ ಮೊದಲಲ್ಲಿ ಎಂಟು ಜನ ಹೆಣ್ಣು ಮಕ್ಕಳು ಮಾತ್ರ ಪ್ರವೇಶವನ್ನು ಪಡೆದುಕೊಂಡಿದ್ದರು. ನಂತರದ ದಿನದಲ್ಲಿ ನಲವತ್ತೇಂಟು ಜನರಿಂದ ಶಾಲೆ ಕಂಗೊಳಿಸಹತ್ತಿತ್ತು. ಅದೇ ಶಾಲೆಗೆ ಸಾವಿತ್ರಿಬಾಯಿ ಫುಲೆಯವರನ್ನು ಮುಖ್ಯ ಶಿಕ್ಷಕಿಯನ್ನಾಗಿ ನೇಮಿಸಿಕೊಳ್ಳಲಾಯಿತು. ನಿರಂತರವಾಗಿ ಶಾಲೆಯ ಅಭಿವೃದ್ಧಿಗಾಗಿ ಹಗಲಿರುಳು ದುಡಿದು ಶೈಕಣಿಕವಾಣಿ ಉತ್ತಮ ಪ್ರಗತಿಯನ್ನು ಸಾಧಿಸಲು ಸಫಲತೆಯನ್ನು ಪಡೆಯಿತು. ಆ ಶಾಲೆಗೆ ಬರುವವರೆಲ್ಲರೂ ಕಡು ಬಡತನದಲ್ಲಿ ಇದ್ದ ಹೆಣ್ಣು ಮಕ್ಕಳು.ಶೂದ್ರರು ದಮನಿತರು. ಇತಂಹ ಪರಿಸ್ಥಿತಿಯಲ್ಲಿ ಶಾಲೆಗೆ ದುಡ್ಡು ಖರ್ಚು ಮಾಡುವದು ಹರಸಾಹಸವೇ ಆಗಿತ್ತು. ಅದನ್ನು ಅರಿತ ಫುಲೆ ದಂಪತಿಗಳು ಹೆಣ್ಣು ಮಕ್ಕಳಿಗೆ ಊಟ,ಸಮವಸ್ತç, ಆಟಕ್ಕೆ ಬೇಕಾದ ಸಾಮಿಗ್ರಿಗಳ ವ್ಯವಸ್ಥೆಯನ್ನು ಮಾಡಿದರು. ಅಲ್ಲದೆ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದುಕೊಂಡುಬರಲು ಮತ್ತು ಮತ್ತೇ ಮರಳಿ ಮನೆಗೆ ಕಳಿಸಲು ಸರಿಯಾದ ವ್ಯವಸ್ಥೆಯನ್ನು ಮಾಡಿದರು. ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕಲಿಯಲು ಸಹಾಯವಾಯಿತು.  ಶೂದ್ರರು ಶಾಲೆಗೆ ಹೋಗಿ ಅಕ್ಷರ ಜ್ಞಾನ ಪಡೆದು ಕೊಳ್ಳುವುದನ್ನು ಸಹಿಸದ ಕೆಲ ಜಾತಿವಾದಿ ಪುಣಿಯ ಬ್ರಾಹ್ಮಣರು ವಿರೋಧಿಸಿದರು. ಜ್ಯೋತಿಬಾ ಫುಲೆ ಅವರಿಗೆ ಬೇದರಿಕೆಗಳನ್ನು ಹಾಕಿದರು ಆದರೆ ಇಂತಹ ಗೊಡ್ಡು ಬೇದರಿಕೆಗೆ ಹೆದರದೆ ತಮ್ಮ ಗುರಿ ಮತ್ತು ಉದ್ದೇಶವನ್ನು ಫುಲೆಯವರು ಬಿಡಲಿಲ್ಲ. ಒಂದು ಕ್ಷಣ ಇಂದಿನ ಪರಿಸ್ಥಿತಿಯಲ್ಲಿ ನಾವು ನೋಡಿದರೆ ಅಂದು ಫುಲೆ ಅವರು ತಾವು ಮಾಡುವ ಕೆಲಸದಿಂದ ಒಂದು ಹೆಜ್ಜೆ ಹಿಂದೆ ಸರಿದಿದ್ದರೆ ಎಲ್ಲ ಹೆಣ್ಣು ಮಕ್ಕಳ ಪರಿಸ್ಥಿತಿ ಏನಾಗುತ್ತಿತ್ತು ಎಂದು ವಿಚಾರಿಸಿದರೆ ಮೈಯೆಲ್ಲ ನಡುಕ ಹುಟ್ಟುತ್ತದೆ. ಪರಿಸ್ಥಿತಿ ತುಂಬಾ ಹದಗೆಟ್ಟು ಕಲಿಸಲು ಬಂದ ಶಿಕ್ಷಕರನ್ನು ಕೂಡಾ ಬೆದರಿಸಿ ಹೆದರಿಸಿ ಅವರನ್ನು ಶಾಲೆಗೆ ಬರದಂತೆ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿಯವರನ್ನೇ ಮನೆಯಲ್ಲಿಯೇ ಪಾಠ ಮಾಡಲು ನೇಮಿಸಿಕೊಳ್ಳುತ್ತಾರೆ. ಇದನ್ನು ಅರಿತ ಇಡೀ ಪುಣಿ ತಲ್ಲಣಕ್ಕೆ ಇಡಾಗುತ್ತದೆ. ಮಹಿಳೆಯಾದವಳು ಮನೆಯಿಂದ ಹೊರಹೋಗಿ ಶಿಕ್ಷಕಿಯಾಗಿ ಕೆಲಸ ಮಾಡುವುದು ಮಹಾ ಅಪರಾಧವೆಂಬAತೆ ಸಂಪ್ರದಾಯಸ್ಥರೆಲ್ಲರೂ ವಿರೋದ ವ್ಯಕ್ತಪಡಿಸುತ್ತಾರೆ. ಇದು ರಾಷ್ಟಿçÃಯ ಗೌರವಕ್ಕೆ ಮಾಡಿದ ಅಪಮಾನವೆಂದು, ಇಂತಹ ಕೆಲಸ ಅಪವಿತ್ರವೆಂದು ಬ್ರಾಹ್ಮಣರು ಸಾವಿತ್ರಿಬಾಯಿಯವರು ಶಾಲೆಗೆ ಹೋಗುವಾಗ ಅವರ ಮೇಲೆ ಮಣ್ಣು, ಸೆಗಣಿಯನ್ನು ಎಸೆಯುತ್ತಾರೆ ದೃತಿಗೆಡದ ಸಾವಿತ್ರಿಬಾಯಿ ಅವರು “ದೇವರು ನಿಮಗೆ ಒಳ್ಳೆಯದು ಮಾಡಲಿ, ಅವನು ನಿಮ್ಮನ್ನು ಕ್ಷಮಿಸಲಿ, ನನ್ನ ಕರ್ತವ್ಯವನ್ನು ನಾನು ನಿರ್ವಹಿಸುತ್ತಿದ್ದೇನೆ” ಎಂದು ಸಾವಿತ್ರಿಬಾಯಿಯವರು ತಮ್ಮ ಮೇಲೆ ಸೆಗಣಿ ಎಸೆದವರಿಗೆ ಒಳ್ಳೆಯದಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿ ಅವರು ಶಾಲೆಗೆ ಹೋಗುವಾಗ ತಮ್ಮ ಕೈಯಲ್ಲಿ ಒಂದು ಸೀರೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು ಶಾಲೆ ಪ್ರವೇಶಿಸಿದ ನಂತರ ಸೆಗÀಣಿಯ ಸೀರೆಯನ್ನು ಕಳಚಿ ಕೈಯಲ್ಲಿ ತಂದ ಮತ್ತೋಂದು ಸೀರೆಯನ್ನು ಊಡುತ್ತಿದ್ದರು. ಯಾವದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪತಿಯ ಸಹಾಯದಿಂದ ಕೆಲಸದಲ್ಲಿ ನಿರತರಾಗುತ್ತಾರೆ. ಸಾವಿತ್ರಿಬಾಯಿಯವರು ಸ್ತ್ರೀಯರ ಸುಧಾರಣಿಗಾಗಿ ಜ್ಯೋತಿರಾವರ ಮಾರ್ಗದರ್ಶನದಲ್ಲಿ “ಮಹಿಳಾ ಸೇವಾ ಮಂಡಳ”ವನ್ನು ಸ್ಥಾಪನೆ ಮಾಡುತ್ತಾರೆ. ಪುಣಿಯ ಕಲೆಕ್ಟರ್ ಅವರ ಪತ್ನಿ ಇ.ಸಿ.ಜೋನ್ಸ ಎಂಬುವರು ಮಹಿಳಾ ಸೇವಾ ಮಂಡಳ ಸಂಸ್ಥೆಯ ಅಧ್ಯಕ್ಷರಾಗುತ್ತಾರೆ. ಮಹಿಳೆಯರನ್ನೆಲ್ಲಾ ಒಟ್ಟು ಗೂಡಿಸಲು ೧೮೫೨ ರಲ್ಲಿ ದೊಡ್ಡ ಪ್ರಮಾಣದ ಎಳ್ಳುಬೆಲ್ಲ ಹಂಚುವ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲ ಹೆಣ್ಣು ಮಕ್ಕಳಿಗೆ ಕುಂಕುಮವನ್ನು ವಿತರಿಸಿ ಅವರಿಗೆಲ್ಲ ಊಡಿಯನ್ನು ತುಂಬುತ್ತಾರೆ. ೧೮೭೧ ರಲ್ಲಿ ಸ್ತ್ರೀ ವಿಚಾರವತಿ’ ಸಭಾ ಸ್ಥಾಪನೆ ಮಾಡುತ್ತಾರೆ. ಆ ಕಾಲದಲ್ಲಿ ಬ್ರಾಹ್ಮಣ ಸ್ತ್ರೀಯರಿಗೆ ಹೆಚ್ಚಿನ ತೊಂದರೆ ಇತ್ತು. ಅದರಲ್ಲಿ ವಿಧವೆಯರಾದರೆ ಅನೇಕ ಬ್ರಾಹ್ಮಣ ಮನೆತನದ ಮಾವ, ಮೈದುನ ಮುಂತಾದವರು ಅವರ ಮೇಲೆ ಬಲಾತ್ಕಾರ ಮಾಡುತ್ತಿದ್ದರು. ಲೈಂಗಿಕ ಶೋಷಣೆ ಮಾಡುತ್ತಿದ್ದರು. ಇದರ ಪರಿಣಾಮವಾಗಿ ಅವರಿಗೆ ಮಕ್ಕಳಾದರೆ ‘ಬಾಲ ಹತ್ಯೆ’ ಮಾಡುತ್ತಿದ್ದರು. ಇಲ್ಲವೇ ಗರ್ಭವತಿಯಾದರೆ ಸ್ವತಃ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇವೆಲ್ಲವನ್ನೂ ತಡೆಗಟ್ಟುವ ಉದ್ದೇಶದಿಂದ ಜ್ಯೋತಿಭಾರವರು ‘ಬಾಲಹತ್ಯಾ ಪ್ರತಿಬಂಧಕ ಗೃಹ’ ಸ್ಥಾಪಿಸಿದರು. ತರುಣ ಬ್ರಾಹ್ಮಣ ವಿಧವೆಯರಿಗೆ ಈ ಗೃಹ ದೊಡ್ಡ ಆಧಾರವಾಗಿತ್ತು. ೧೮೬೩ರಲ್ಲಿ ಸ್ವಂತ ಮನೆಯಲ್ಲಿ ಸ್ಥಾಪಿಸಿದ ಅನಾಥ ಬಾಲಶ್ರಮವನ್ನು ಸಾವಿತ್ರಿಯವರು ೩೫ ಜನರಿಗೆ ಬಾಣಂತನವನ್ನು ಮಾಡಿದರು. ಸವರ್ಣೀಯ ವಿಧವೆಯರು ಅವರ ಸೇವೆ ಮಾಡುವಾಗ ಸಾವಿತ್ರಿಭಾಯಿಯವರಿಗೆ ಅದು ಎಂದು ಕೀಳಾಗಿ ತೋರಲಿಲ್ಲ. ೧೮೭೩ರಲ್ಲಿ ಕಾಶೀಬಾಯಿ ಎಂಬ ಬ್ರಾಹ್ಮಣ ವಿಧವೆಯ ಇಂತಹದೇ ಸಂಬಂಧದಿಂದ ಹುಟ್ಟಿದ ಮಗನನ್ನು ಜ್ಯೋತಿಬಾಪುಲೆ ಮತ್ತು ಸಾವಿತ್ರಿಬಾಯಿಪುಲೆ ದತ್ತು ತೆಗೆದುಕೊಳ್ಳುತ್ತಾರೆ. ಆ ಮಗುವಿಗೆ ಯಶವಂತ ಅಂತಾ ನಾಮಕರಣ ಮಾಡುತ್ತಾರೆ. ಅನನ್ನು ಎಂ.ಬಿ.ಬಿ.ಎಸ್ ಓದಿಸಿ ಡಾಕ್ಟರರನ್ನಾಗಿ ಮಾಡುತ್ತಾರೆ.ಹೀಗೆ ಮಹಿಳೆಯರಿಗಾಗಿ ವಿಧವೆಯರ ಪುನರ್ವಸತಿ, ವಿಧವಾ ಅನಾಥಾಶ್ರಮವನ್ನು ಕೂಡಾ ಸ್ಥಾಪಿಸುತ್ತಾರೆ. ಪುಲೆಯವರು ಸ್ಥಾಪಿಸಿದ್ದ ವಿಧವಾ ಅನಾಥಾಲಯವು ದೇಶದಲ್ಲಿಯೇ ಸ್ಥಾಪಿಸಿದ ಪ್ರಥಮ ಸಾಮಾಜಿಕ ಸಂಸ್ಥೆಯಾಗಿದ್ದಿತು. ೧೮೬೮ರಲ್ಲಿ ತಮ್ಮ ‘ನೀರಿನಬಾವಿ’ಯನ್ನು ಕೆಳಜಾತಿಗಳಿಗೆ ಮುಕ್ತಗೊಳಿಸಿ ಬಿಡುತ್ತಾರೆ. ಇದರಿಂದ ಎಷ್ಟೋ ಕೆಳವರ್ಗದವರಿಗೆ ನೀರು ಸಿಕ್ಕಂತಾಗುತ್ತದೆ. ಶಿಕ್ಷಣ ನೀಡುವ ದಾಹವು ಪುಲೆಯವರು ವಯಸ್ಕ ರೈತರು  ಮತ್ತು ದುಡಿಯುವವರಿಗಾಗಿ ರಾತ್ರಿ ಶಾಲೆಯನ್ನು ಪ್ರಾರಂಭಿಸುವAತೆ ಮಾಡಿತು. ತಮ್ಮ ಮನೆಯಲ್ಲಿ ರಾತ್ರಿ ಶಾಲೆಯನ್ನು ಪ್ರಾರಂಭಿಸಿ ಪ್ರತಿದಿವಸ ೨ ಗಂಟೆಗಳ ಕಾಲ ತಾವು ಮತ್ತು ತಮ್ಮ ಪತ್ನಿ ಸಾವಿತ್ರಿಬಾಯಿ ಪುಲೆಯವರು ‘ಅಶಿಕ್ಷಿತ ವಯಸ್ಕ, ರೈತರರಿಗೆ ಶಿಕ್ಷಣವನ್ನು ನೀಡುತ್ತಿದ್ದರು. ನಿರಂತರ ಹೋರಾಟದಿಂದ ೭೩ ವರ್ಷದ ಮಹಾತ್ಮ ಜ್ಯೋತಿಬಾಪುಲೆಯವರು ಧೀರ್ಘ ಅನಾರೋಗ್ಯದಿಂದ ೧೮೯೦ರಲ್ಲಿ ನವೆಂಬರ್ ೨೮ರಂದು ನಿಧನರಾದರು. ಮಕ್ಕಳಾಗದ ದಂಪತಿಗಳಾಗಿದ್ದರಿAದ ದತ್ತು ಪುತ್ರ ಯಶವಂತನಿಗೆ ಸಂಸ್ಕಾರ ಮಾಡಲು ಕುಟುಂಬದವರು ಒಪ್ಪದೇ ಇದ್ದಾಗ ಸ್ವತಃ ಕೈಯಲ್ಲಿ ದಿವಟಿಯನ್ನು ಹಿಡಿದು ಜ್ಯೋತಿಯವರ ಅಂತ್ಯ ಸಂಸ್ಕಾರ ಮಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಪುಲೆ. ಹಾಗೇ ಅವರು ತಮ್ಮ ಇಡೀ ಜೀವನದ ಉದ್ದಕ್ಕೂ ಹೆಣ್ಣುಮಕ್ಕಳಿಗಾಗಿ ಮತ್ತು ಅಶ್ಪೃಶ್ಯರಿಗಾಗಿ ಶಾಲೆ ಪ್ರಾರಂಭಿಸಿದರು. ಬಾಲಹತ್ಯಾ ಪ್ರತಿಬಂಧಕ ವಿಧವಾ ಅನಾಥಾಶ್ರಮ, ಕೂಲಿಕಾರ ರೈತರಿಗಾಗಿ ರಾತ್ರಿಶಾಲೆ, ಬಡವರಿಗಾಗಿ ಅನ್ನಛತ್ರಗಳನ್ನು ತೆರೆದರು. ಬ್ರಾಹ್ಮಣ ವಿಧವೆಯರ ತಲೆಬೋಳಿಸುವುದನ್ನು ವಿರೋಧಿಸಿದರು. ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ ಪ್ರಯತ್ನದಲ್ಲಿ ತೋಡಗಿದರು. ಹೀಗೆ ಎಲ್ಲ ರೀತಿಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಮೊದಲ ಮಹಿಳೆ ಸಾವಿತ್ರಿಬಾಫುಲೆ ಎಂದರೆ ತಪ್ಪಾಗಲಾರದು. ಒಟ್ಟಾರೆಯಾಗಿ ಸಮಾಜದ ಎಲ್ಲ ಅನಿಷ್ಟಗಳಿಗೂ ಕಾರಣವಾದ ಜಾತಿಪದ್ಧತಿ ಅಳಿಯಬೇಕೆಂದು ಜಾಲ್ತಿಯಲ್ಲಿದ್ದ ಬಹುಪಾಲು ವ್ಯವಸ್ಥೆ ಆಚರಣೆ ನಂಬಿಕೆಗಳಿಗೆ ಸವಾಲೆಸೆದರು. ಶಿಕ್ಷಣ ಎಲ್ಲರ ಹಕ್ಕು ಎಂದು ಸಾರಿ ಶಾಲೆಯನ್ನು ತೆರೆದರು ಪುರೋಹಿತರಿಲ್ಲದೆ ಮದುವೆ ಮಾಡಿಸಿದರು. ಬಹುಪತ್ನಿತ್ವವನ್ನು ವಿರೋಧಿಸಿದರು. ವಿಧವೆಯರ ಮಾನವ ಹಕ್ಕುಗಳ ಎತ್ತಿ ಹಿಡಿದು ಮರು ವಿವಾಹವನ್ನು ಪ್ರತಿಪಾದಿಸಿದರು. ಸತ್ಯಶೋಧಕ ಸಮಾಜ ಕಟ್ಟಿದರು. ತಮಗೆ ತಿಳಿದಂತೆ ಕವಿತೆಗಳನ್ನು ಬರೆದರು. ಎಲ್ಲ ಧರ್ಮಗಳ ಶಾಸ್ತç-ಪುರಾಣ-ಗ್ರಂಥಗಳ ನಿರಾಕರಿಸಿ ಸಾರ್ವಜನಿಕ ಸತ್ಯ ಧರ್ಮ ಪ್ರತಿಪಾದಿಸಿ ಹೊಸ ಹೊಸ ಗ್ರಂಥಗಳನ್ನು ರಚಿಸಿ ಓದುಗರ ಮನಸ್ಸನ್ನು ಸೋರೆಗೊಂಡ ಮಹಾನ್ ಕ್ರಾಂತಿಕಾರಿ ತಾಯಿಯಾಗಿ ನಮಗೆಲ್ಲ ಮಾರ್ಗದಾತೆಯಾದವರು. ಇಂತಹ ಮಾತೆ ಸಾವಿತ್ರಿಬಾಯಿಯವರ ಕಲಿಸಿದ ಪಾಠದ ಪರಿಣಾಮವಾಗಿ ಹದಿನಾಲ್ಕು ವರ್ಷದ ‘ಮುಕ್ತಾ’ ಎಂಬ ಹುಡಗಿ ೧೫ನೇ ಫೆಬ್ರುವರಿ ೧೮೫೫ ರಿಂದ ೯ ಮಾರ್ಚ ೧೮೫೫ ರ ಜ್ಞಾನೋದಯ ಎಂಬ ಪತ್ರಿಕೆಯ ಅಂಕಣದಲ್ಲಿ ‘ಹೊಲೆಯ ಮಾದಿಗರ ದುಖಃಗಳು’ ಎಂಬ ಪ್ರಬಂಧ ಪ್ರಕಟವಾಗುತ್ತದೆ. ಇದೆಲ್ಲದರ ಪರಿಣಾಮವಾಗಿ  ಅವರು ಕಟ್ಟಿದ ಕನಸು ನನಸಾಗಲು ಬಹಳ ಸಮಯ ಹಿಡಿಯುವದಿಲ್ಲ. ೧೮೪೮ ರಿಂದ ೧೮೫೨ರ ಅವಧಿಗೆ ೧೮ ಶಾಲೆಗಳನ್ನು ತೆರೆಯುತ್ತಾರೆ. ಇದರಿಂದ ನಮಗೆಲ್ಲಾ ತಿಳಿದು ಬರುವ

ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ Read Post »

ಆರೋಗ್ಯ, ಇತರೆ

ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ?

ಲೇಖನ ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ? ಆಶಾ ಸಿದ್ದಲಿಂಗಯ್ಯ ತರಕಾರಿ ಎಂಬುದು ಸಾಮಾನ್ಯವಾಗಿ ಹಣ್ಣುಗಳನ್ನು ಹೊರತಾಗಿ ಅಹಾರವಾಗಿ ಉಪಯೋಗಿಸಲಾಗುವ ಸಸ್ಯಗಳ ಭಾಗಗಳು. ಮಳೆಗಾಲದ ತರಕಾರಿಗಳು : ಟೊಮೊಟೊ, ಬೆಂಡೆ, ಬದನೆ, ಹುರುಳಿ, ತಿಂಗಳ ಹುರಳಿ, ಗೆಣಸು, ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಹಾಗಲ, ಮೂಲಂಗಿ ಮುಂತಾದುವುಗಳು. ಚಳಿಗಾಲದ ತರಕಾರಿಗಳು: ಕ್ಯಾಬೇಜ್, ಹೂವುಕೋಸು, ಗಜ್ಜರಿ, ಬಟಾಣಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಟರ್ನಿಪ್, ಸೊಪ್ಪು ತರಕಾರಿ ಮುಂತಾದುವುಗಳು. ಬೇಸಿಗೆ ತರಕಾರಿಗಳು : ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಬೆಂಡೆ, ಬದನೆ ಮುಂತಾದವುಗಳು. ನಮ್ಮ ದೇಹವನ್ನು ಸಮಸ್ತ ರೋಗರುಜಿನಗಳಿ೦ದ ದೂರವಿರಿಸಲು ನಾವು ಸೇವಿಸುವ ಆಹಾರವು ನಮ್ಮ ಹಸಿವನ್ನು ಹಿಂಗಿಸುವುದರ ಜೊತೆಗೆ ಅದು ಔಷಧದಂತೆ ಕಾರ್ಯನಿರ್ವಹಿಸುವಂತಿರಬೇಕು. ಆರೋಗ್ಯದಾಯಕ ಜೀವನಕ್ಕಾಗಿ ಆಹಾರಪದ್ಧತಿಯಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳುವುದು ತುಂಬಾ ಮುಖ್ಯ. ಸೊಪ್ಪು,ತರಕಾರಿಗಳ ಪ್ರಯೋಜನಗಳು ನಾರಿನಾಂಶದಿಂದ ಸಮೃದ್ಧವಾಗಿವೆ ಈ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ನಾರಿನ೦ಶವು ಯಥೇಚ್ಚವಾಗಿರುವುದರಿಂದ,  ಜೀರ್ಣಾಂಗವ್ಯೂಹ ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಲ್ಲಿ ಚಮತ್ಕಾರವನ್ನೇ ಮಾಡಬಲ್ಲವು. ಮಲಬದ್ಧತೆಯ ಉಪಟಳವನ್ನು ದೂರವಿರಿಸಲು ನಾವು ಸೇವಿಸುವ ಆಹಾರದಲ್ಲಿ ನಾರಿನಂಶವು ಸಾಕಷ್ಟಿರುವುದು ಅತ್ಯಗತ್ಯ. ಮಲವಿಸರ್ಜನೆಯು ಸರಾಗವಾಗಿ ಆಗುವಂತಾಗಲು, ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇವಿಸಿರಿ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತವೆ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ  ನಾರಿನಂಶವು  ಶರೀರದ ರಕ್ತದೊತ್ತಡ ಹಾಗೂ ಕೊಲೆಸ್ಟೆರಾಲ್ ನ ಮಟ್ಟವನ್ನು ಸರಿಪಡಿಸಲು ನೆರವಾಗುತ್ತದೆ. ತೂಕ ಕಡಿಮೆ ಆಗಲೂ ಸಹಕಾರಿ ತೂಕನಷ್ಟವನ್ನು ಹೊಂದುವುದಕ್ಕೆ ಪೂರಕವಾಗಿರುವ ಆಹಾರಕ್ರಮಗಳ ರೂಪದಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಏಕೆಂದರೆ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿದ್ದು, ಕಡಿಮೆ ಮಟ್ಟದಲ್ಲಿ ಕ್ಯಾಲರಿಗಳನ್ನು ಹೊಂದಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳು ನಾನಾ ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಒಳಗೊಂಡಿವೆ. ಇವುಗಳ ಜೊತೆಗೆ,ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ರೋಗಗಳ ವಿರುದ್ಧ ಸೆಣೆಸಾಡುವ ಕೆಲವು ಮಾಧ್ಯಮಗಳಿದ್ದು, ಅವು ಶರೀರವನ್ನು ನಾನಾ ಬಗೆಯ ರೋಗರುಜಿನಗಳಿ೦ದ ರಕ್ಷಿಸುತ್ತವೆ. ಮಧುಮೇಹ ಸೊಪ್ಪುಯುಕ್ತ ಹಸಿರು ತರಕಾರಿಗಳು ಮಧುಮೇಹದ ಅಪಾಯವನ್ನು ತಡೆಗಟ್ಟುತ್ತವೆ ಹಾಗೂ ಜೊತೆಗೆ ನಿಮ್ಮ ಶರೀರವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಕೂಡ ನೆರವಾಗುತ್ತವೆ. ತ್ವಚೆಯ ಆರೋಗ್ಯಕ್ಕಾಗಿ ಸೊಪ್ಪುಯುಕ್ತ ಹಸಿರು ತರಕಾರಿಗಳು ನಿಮ್ಮ ತ್ವಚೆಯ ಹಾಗೂ ಕೇಶರಾಶಿಯ ಆರೋಗ್ಯಕ್ಕೂ ಸಹ ಒಳ್ಳೆಯದು. ಪ್ರತಿದಿನವೂ ಸೊಪ್ಪುಯುಕ್ತ ಹಸಿರು ತರಕಾರಿಗಳ ಸೇವನೆಯಿಂದ ನೀವು ಆರೋಗ್ಯಕರವಾದ ತ್ವಚೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಬಳಸಿಕೊಂಡು ತಯಾರಿಸಿದ ಸಲಾಡ್ ಗಳ ಸೇವನೆಯಿಂದಾಗುವ ಹಲವಾರು ಪ್ರಯೋಜನಗಳ ಪೈಕಿ ಇದೂ ಸಹ ಒಂದು. ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ ಕೆಲವೊ೦ದು ಸೊಪ್ಪುಯುಕ್ತ ಹಸಿರು ತರಕಾರಿಗಳು ಕ್ಯಾಲ್ಸಿಯಂನಿಂದಲೂ ಸಂಪನ್ನವಾಗಿವೆ. ನಮಗೆಲ್ಲಾ ತಿಳಿದಿರುವಂತೆ ಮೂಳೆಗಳು ಹಾಗೂ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಕ್ಯಾಲ್ಷಿಯಂ ಆತ್ಯಂತ ಅವಶ್ಯಕ ಮೂಲವಸ್ತುವಾಗಿದೆ. ಕಣ್ಣುಗಳನ್ನು ಬಾಧಿಸುವ ರೋಗಗಳನ್ನು ಹತ್ತಿಕ್ಕುತ್ತವೆ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ ಕೆಲಬಗೆಯ ಆಂಟಿ ಆಕ್ಸಿಡೆಂಟ್ ಗಳು ಕಣ್ಣಿನ ಪೊರೆಗಳಂತಹ, ನೇತ್ರ ಸಂಬಂಧೀ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೀಲುಗಳಿಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟುತ್ತವೆ ಆರ್ಥ್ರೈಟಿಸ್ನಂತಹಾ ಕೀಲುಗಳಿಗೆ ಸಂಬಂಧಿಸಿದ ಕೆಲವೊಂದು ರೋಗಗಳನ್ನು ತಡೆಗಟ್ಟುವಲ್ಲಿಯೂ ಸಹ ತರಕಾರಿಗಳು ಪ್ರಯೋಜನಕಾರಿಯಾಗಿವೆ. ಸೊಪ್ಪುಯುಕ್ತ ಹಸಿರು ತರಕಾರಿಗಳ ಮತ್ತೊಂದು ಪ್ರಯೋಜನವೇನೆಂದರೆ, ಅವು ಹೃದ್ರೋಗಗಳ ಅಪಾಯವನ್ನೂ ಸಹ ತಡೆಗಟ್ಟಬಲ್ಲವು. ತರಕಾರಿಗಳು ತಾರುಣ್ಯಭರಿತರನ್ನಾಗಿರಿಸುತ್ತವೆ. ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ಕೆಲವೊಂದು ಬಯೋ ಪ್ರತಿಬಂಧಕ ಕಾರಕಗಳಿದ್ದು ಅವು ಆರೋಗ್ಯಕರವಾದ ತ್ವಚೆ ಹಾಗೂ ಮೂಳೆಗಳನ್ನು ಪಡೆಯುವಲ್ಲಿ ಸಹಕಾರಿಯಾಗಿರುತ್ತವೆ.  ತರಕಾರಿಗಳ ಒಂದು ಅತ್ಯುತ್ತಮವಾದ ಗುಣವಿಶೇಷವೇನೆಂದರೆ, ಅವು ಟನ್ನುಗಟ್ಟಲೆ ಕ್ಯಾಲರಿಗಳನ್ನು ಒಳಗೊಂಡಿರಲಾರವು. ಹೀಗಾಗಿ,  ಸೊಪ್ಪು, ತರಕಾರಿಗಳ ಪ್ರಮಾಣದ ಕುರಿತಾಗಿ ಚಿಂತಿಸುವ ಅವಶ್ಯಕತೆ ಇಲ್ಲದೇ ಅವುಗಳನ್ನು ಧಾರಾಳವಾಗಿ ಸೇವಿಸಬಹುದು.

ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ? Read Post »

ಇತರೆ, ಲಹರಿ

ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್

ಕವಿತೆ ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ ಸ್ಮಿತಾ ಭಟ್ ವರ್ಷವೊಂದು ಗತಿಸಿ ಹೋಯಿತಲ್ಲ, ಎಂದು ಅಂತರ್ಮುಖಿಯಾಗಿ ಯೋಚಿಸುತ್ತಾ ಖಾಲಿ ಗೋಡೆಯತ್ತ ತದೇಕಚಿತ್ತದಿಂದ ನೋಡುತ್ತಿದ್ದೆ. ತನ್ನ ಅಸ್ತಿತ್ವವನ್ನು ನೆನಪಿಸುವಂತೆ, ತೂಗುಹಾಕಿದ ಕ್ಯಾಲೆಂಡರ್ ಗಾಳಿಗೆ ಹಾರುತ್ತಾ ಪರ ಪರ ಸದ್ದು ಮಾಡಿತು ಅದು ಏನನ್ನೋ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಬೀಸುವ ಗಾಳಿಗೆ ಉದುರಿ ಬಿದ್ದಾವು ಎಂದು,ಬರುತ್ತಿದ್ದ ಗಾಳಿಯನ್ನು ತಡೆಯಲು ಎದ್ದು ಕಿಟಕಿಯ ಕದವನ್ನು ಎಳೆದೆ. ಆಗಲೂ ಕ್ಯಾಲೆಂಡರ್ ನದು ಮತ್ತದೇ ಸದ್ದು. ಆಗಲೇ ನಾನು ಗಮನಿಸಿದ್ದು ನವೆಂಬರ್ ತಿಂಗಳಿನಲ್ಲಿಯೇ ನಿಂತು ತನ್ನ ದಯನೀಯ ಸ್ಥಿತಿಯನ್ನು ಹೇಳುತ್ತಿರುವಂತೆ ಭಾಸವಾಯಿತು. ಈ ನಡುವೆ ನಾನು ಗಮನಿಸಿಯೇ ಇರಲಿಲ್ಲ. ಭಾವದೊಳಗೆ ನಡೆದ ನೋವಿನ ಸಂಗತಿಗಳು ಸಂಪೂರ್ಣ ದಿನಚರಿಯನ್ನು ಅದಲು-ಬದಲು ಮಾಡಿತ್ತು. ಕೆಟ್ಟ ಗಡಿಯಾರ ಮತ್ತು ತಿರುಗಿಸಿ ಇರದ ಕ್ಯಾಲೆಂಡರ್ ಮನೆಯ ಗೋಡೆಯ ಮೇಲೆ ಯಾವತ್ತೂ ಇರಬಾರದು. ಅದು ಇದೆ ಅಂತಾದರೆ ಆ ಮನೆಯ ದಿನಚರಿ ಸರಿ ಇಲ್ಲ ಅಂತಲೇ ಅರ್ಥ. ಎನ್ನುವ ಅಪ್ಪನ ಮಾತು ತಕ್ಷಣ ನೆನಪಾಯಿತು. ನನ್ನ ಭಾವ ಕೂಡಾ ಅದಕ್ಕೆ ಪುಷ್ಟಿ ಕೊಡುತ್ತಿತ್ತು. ಎದ್ದು ಹೋಗಿ ಕ್ಯಾಲೆಂಡರನ್ನು ತಿರುವಿಹಾಕಿದೆ. ಇನ್ನು ಮೂರೇ ದಿನ ಇರುವುದು ಈ ಕ್ಯಾಲೆಂಡರಿನ ಅಸ್ತಿತ್ವ ಮುಗಿಯಲು. ಅಯ್ಯೋ ಪಾಪ ಅನ್ನಿಸಿ ಕ್ಯಾಲೆಂಡರ್ ಅನ್ನು ಸವರುತ್ತಾ ಕುಳಿತೆ. ಎಷ್ಟೊಂದು ನೋವುಗಳನ್ನು ಹೊತ್ತು ತಂದಿದ್ದೆ ನೀನು.ಸಾವು-ನೋವು,ರೋಗ,ಪ್ರವಾಹ, ಒಂದಾ ಎರಡಾ, ಮನುಕುಲಕ್ಕೆ ಅತಿ ತ್ರಾಸದಾಯಕವಾದ ವರ್ಷ ಅನ್ನಬಹುದು. ನೀನು ಕೊಟ್ಟ ನೋವಿನಿಂದ ನಿನ್ನ ಕಾಲ ಇತಿಹಾಸದಲ್ಲಿ ಕಹಿ ಭಾವದಿಂದ ನೆನಪಿರುವಂತಹ ವರ್ಷವಾಗುತ್ತದೆ ಅಂದೆ. ಅದೇ ಕ್ಷಣದಲ್ಲಿ ನನ್ನ ತಪ್ಪು ಮಾತಿನ ಅರಿವಾಯಿತು ನಡೆದ ಘಟನೆಗಳಿಗೆ ಕ್ಯಾಲೆಂಡರನ್ನು ದೂಷಿಸುತ್ತಿದ್ದೇನಲ್ಲ ಎಂದು. ನಡೆದ ತಪ್ಪುಗಳಿಗೆ ಯಾರನ್ನಾದರೂ ಹೊಣೆ ಮಾಡುವುದು ಮನುಷ್ಯನ ಸಹಜ ಗುಣ ಅನ್ನಿಸಿ ನಗು ಬಂತು.ಮತ್ತಲ್ಲೇ ತೂಗುಹಾಕಿ ಇನ್ನೆರಡು ದಿನ ಆರಾಮವಾಗಿ ಇರು ಕಾಲ ಎಲ್ಲರದ್ದು ಮುಗಿಯುತ್ತದೆ. ಹಾಗೆ ನಿನ್ನದೂ.. ಆದರೆ ಎಷ್ಟು ವಿಚಿತ್ರ ನೋಡು ನೀನು ಕಾಲ ಮುಗಿದ ಮೇಲೆ ಮತ್ತೆ ಇದೇ ರೂಪದಲ್ಲಿ ಬರುತ್ತೀಯ. ಯಾವ ವ್ಯತ್ಯಾಸವೂ ಇಲ್ಲದೇ. ಅದೇ ದಿನಾಂಕ, ಅದೇ ವಾರ, ಅದೇ ತಿಂಗಳು, ಅದೇ ಹಬ್ಬ ಹರಿದಿನಗಳನ್ನು ಹೊತ್ತು. ಕೇವಲ ಒಂದು ಸಂಖ್ಯೆಯನ್ನು ಬದಲಿಸಿಕೊಂಡು.ನಿನಗದು ಕರಾರುವಾಕ್ಕಾಗಿ ಗೊತ್ತಿದೆ. ಯಾರ ಕೈ ಚಳಕದೊಳಗೆ ಸಿಕ್ಕು ಹಣಿಸಿಕೊಂಡರೂ, ನಿನ್ನ ನಿಯಮಕ್ಕೇ ಬಂದು ನಿನಗೆ ರೂಪ ಕೊಡುತ್ತಾರೆ. ಮನುಷ್ಯನಂತೆ ಬೇರೆ ಬೇರೆ ದೇಹಗಳಿಗೆ ಹೊಕ್ಕು ಸಂಭ್ರಮಿಸುವ ನೋಯುವ ನಿಯಮವೂ ಇಲ್ಲ. ಆತ್ಮವು ಮಾತ್ಮತ್ತೆ ಅದದೇ ದೇಹದೊಳಗೆ ಹೊಕ್ಕು ನಗುವದೆಷ್ಟು ಸೋಜಿಗ ಅನ್ನಿಸುತ್ತದೆ. ಪ್ರತಿ ಮನೆಯಲ್ಲಿ ಅತ್ಯಂತ ಗೌರವದ ಸ್ಥಾನವೂ, ಮೂಲೆಗುಂಪು ಮಾಡುವ ನೋವು ಅನುಭವಿಸುವೆ.ಹೆಚ್ಚು ಕಡಿಮೆ ಮನುಷ್ಯನದು ಹಾಗೆ ಅಲ್ವಾ?ನಿನ್ನ ಹೊಸ ಹುಟ್ಟನ್ನು ತಂದು ಸಂಭ್ರಮಿಸುತ್ತಾರೆ, ಮತ್ತೆ ನಿನ್ನ ಎಸೆಯುತ್ತಾರೆ.ಬಹುಶಹ ಕಾಲಚಕ್ರ ಎನ್ನುವುದು ಇದೇ ಇರಬೇಕು.ಎಲ್ಲಿಂದಲೋ ಬಂದು, ಹೊಸತೊಂದು ಏನೂ ಸೇರಿಕೊಳ್ಳುವುದಿಲ್ಲ.ಇದೇ ಪರಿಧಿಯೊಳಗೆ ರೂಪಾಂತರವಾಗುತ್ತ ನಾವು ನೋಡುವ ರೀತಿಯಲ್ಲಿ ನಮಗೆ ಗೋಚರಿಸುತ್ತದೆ.ಹಾಗೆ ನಮ್ಮ ಸಂತೋಷ ಕೂಡ ಹೊರಗೆಲ್ಲೂ ಇರುವುದಿಲ್ಲ. ಅದು ನಮ್ಮೊಳಗೇ ಇರುತ್ತದೆ. ಅದನ್ನು ನಾವು ಗ್ರಹಿಸಬೇಕು ಮತ್ತದಕ್ಕೆ ಪುನಹಃ ಪುನಹಃ ಹೊಸ ರೂಪವನ್ನು ಕೊಡಬೇಕು ಅಷ್ಟೇ. ಕ್ಯಾಲೆಂಡರ್ ನಂತೆ.ಕಾಲದ ಜೊತೆಗೆ ಸಾಗುವಾಗ ನೀನೊಂದು ಅದ್ಭುತ ಸಂಗತಿ ಮತ್ತು ಸಂಗಾತಿಯಂತೂ ಹೌದು. ನಿನ್ನ ಬೀಳ್ಕೊಡುತ್ತಿಲ್ಲ ಮತ್ತೆ ಸ್ವಾಗತಿಸುತ್ತಿದ್ದೇನೆ ಎಂದೆ. ಸದ್ದು ಮಾಡುವುದು ನಿಲ್ಲಿಸಿ ನಕ್ಕಂತೆ ಭಾಸವಾಯಿತು ***********************************

ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ Read Post »

ಇತರೆ

2020 ರ ಜೀವನ ಕಥನ

ಲೇಖನ 2020 ರ ಜೀವನ ಕಥನ ಸರಿತಾ ಮಧು ಕ್ರಿಕೆಟ್ ಆಟದಲ್ಲಿ 20- 20 ಆರಂಭವಾದಾಗ ಆಟದ ಗತಿಯೇ ಬದಲಾಗಿ  ಅಭಿಮಾನಿಗಳನ್ನು ರೋಮಾಂಚನಗೊಳಿಸಿತ್ತು. ನಮಗೂ ಹಾಗೆಯೇ ಸಿಹಿ ಕಹಿ ಗಳೆರಡೂ ಬೆರೆತು ಬಂದಿದೆ ಎನ್ನುವಷ್ಟರಲ್ಲಿ 2020 ಅನಿರೀಕ್ಷಿತ ತಿರುವು ನೀಡಿತ್ತಲ್ಲದೇ, ಬಹುದೊಡ್ಡ ಸವಾಲು ಹಾಕಿದ್ದು ಸುಳ್ಳಲ್ಲ. ಆರಂಭಿಕ ದಿನಗಳಲ್ಲಿ ಕೊರೊನಾ ಅಟ್ಟಹಾಸ ಬಹುತೇಕ ಜನರ ಪಾಲಿಗೆ ಕರಾಳವಾಗಿತ್ತು. ಅಕ್ಷರಶಃ ಜೀವನ ಸಂಕಷ್ಟಗಳನ್ನು ಇಂಚುಇಂಚಾಗಿ ಎದುರಿಸಬೇಕಾಯಿತು. ಪರದೇಶದ ಅಗೋಚರ ವೈರಾಣುವಿಗೆ ಇಡೀ ದೇಶದ ಆರ್ಥಿಕತೆ ತೊಡರುಗಾಲು ಹಾಕಿದ್ದು ನಮ್ಮ ಕಣ್ಣು ಕಟ್ಟಿದೆ. ಹಿಂದೆಯೂ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಧೈರ್ಯದಿಂದ ಮುನ್ನುಗ್ಗಿದ ಪ್ರತಿಯೊಬ್ಬರೂ ಕೊರೊನಾ ಅಟ್ಟಹಾಸಕ್ಕೆ ಹಿಮ್ಮೆಟ್ಟುವಂತಾಗಿತ್ತು. ಕಳೆದುಕೊಂಡ ಅಪ್ರತಿಮ ಚೇತನಗಳು ನಮ್ಮ ಕಣ್ಣಾಲಿಗಳ ತೋಯಿಸಿದ್ದರೂ , ಮನದ ಮುಂದಣ ಕತ್ತಲೆಗೆ ಹೊಸಬೆಳಕಿನ ಹಾದಿತೋರುತ ಮತ್ತೊಂದು ಘಟ್ಟದ ನಿರೀಕ್ಷೆ ಇದೆ.    ನಿರೀಕ್ಷೆಗಳೆಂದೂ ಧನಾತ್ಮಕವಾಗಿರಲಿ ಎನ್ನುವ ಧೋರಣೆ ನನ್ನದು. ಕಳೆದ ವರ್ಷ ಹಣವಂತರ ಪಾಲಿಗೆ ಹಾಗೂ ಇಲ್ಲದವರ ಪಾಲಿಗೂ ವಿಭಿನ್ನವಾಗಿತ್ತು.  ದೇಶದ ಲಾಕ್ಡೌನ್ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಒಟ್ಟಿಗೆ ಇರುವ ಅವಕಾಶ ಒದಗಿಸಿದ್ದು ಮಾತ್ರವಲ್ಲ , ಉಳ್ಳವರಿಗಂತೂ ಬಯಸಿದ ಭೋಜನ ಸವಿಯುವ ಸುಸಂದರ್ಭ . ಯಾವಾಗಲೂ ಹಣದ ಹಿಂದೆ ಸವಾರಿ ಮಾಡಿದ್ದವರಿಗೆ ಒಂದು ಬ್ರೇಕ್ ಸಿಕ್ಕಂತಾಯಿತು. ಸಂತಸ ಪಟ್ಟರು, ಮಕ್ಕಳೊಟ್ಟಿಗೆ ಮನೆಯ ಎಲ್ಲ ಸದಸ್ಯರ ನಡುವೆ  ಮೌಲ್ಯಯುತ ಸಮಯ ಕಳೆದರು. ಅವರಿಗೆ ಜೀವನ ಕಷ್ಟವೆನಿಸಲಿಲ್ಲ ಕಾರಣ ಸಂಪಾದಿಸಿದ ಹಣವಿತ್ತು .ಆದರೂ ಕೊರೋನಾ ಅವರಿಗೂ ಕಾಡದೇ ಇರಲಿಲ್ಲ. ಹಣದಿಂದ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂಬ ಅರಿವು ನೀಡಿತ್ತು. ಆದರೆ ದಿನದ ದುಡಿಮೆ ನಂಬಿದ ಅದೆಷ್ಟೋ ಕುಟುಂಬಗಳ ಪಾಡು ಹೇಳತೀರದು. ನಗರಗಳಿಗೆ ವಲಸೆ ಹೋದ ಸಾವಿರಾರು ಕುಟುಂಬಗಳು ನೂರಾರು ಮೈಲುಗಳು ನಡೆದು ಸ್ವಂತ ಊರುಗಳಿಗೆ ಹೊರಟರು. ನಗರದಲ್ಲಿ ಕೆಲಸವೂ ಇಲ್ಲ , ಊಟವೂ ಇಲ್ಲ. ಊರನ್ನಾದರೂ ತಲುಪಿದರೆ ಎಲ್ಲಾ ಸರಿಯಾಗಿಬಿಡಬಹುದು ಎಂಬ ನಿರೀಕ್ಷೆ ಧನಾತ್ಮಕವಾಗಿಯೇ ಇತ್ತು. ಆದರೆ ನಮ್ಮ ಹಳ್ಳಿಯ ಮಂದಿ ಇದಕ್ಕೆ ಸುತರಾಂ ಒಪ್ಪಲಿಲ್ಲ. ಬೇರೆಬೇರೆ ನಗರಗಳಿಂದ ಬಂದವರಿಗೆ ಊರೊಳಗೆ ನಿರ್ಬಂಧ ಹೇರಲಾಗಿತ್ತು. ಊರಿನ ಪ್ರವೇಶ ದ್ವಾರದಲ್ಲಿ ಮುಳ್ಳು ಬೇಲಿ ಹಾಕಿ ಕಾವಲು ನಿಂತರು. ಅತ್ತ ನಗರದಿಂದಲೂ ಇತ್ತ ತಮ್ಮ ಹುಟ್ಟೂರಿನಿಂದಲೂ ನಿರ್ಲಕ್ಷಿತರಾಗಿದ್ದು ಯಕಃಶ್ಚಿತ್ ಒಂದು ವೈರಾಣುವಿನ ಭಯಕ್ಕೆ.     ಮನುಷ್ಯ ಸಹಜವಾಗಿ ಜೀವಸಂಕುಲದಲ್ಲಿ ಬುದ್ದಿವಂತ ಪ್ರಾಣಿ. ಸಹಸ್ರಾರು ವರ್ಷಗಳ ಕಾಲ ಪ್ರಕೃತಿಯ ಮೇಲಿನ ದೌರ್ಜನ್ಯಕ್ಕೆ ಪ್ರತೀಕಾರದಂತೆ ಕಂಡಿದ್ದು ಈ ವರ್ಷ. ಮನುಷ್ಯನ ಅಟ್ಟಹಾಸವನ್ನು ಮೆಟ್ಟಿನಿಂತು ಸಹಜ ಜೀವನ ಶೈಲಿಗೆ ಸರಿಯುವಂತೆ ಮಾಡಿದ್ದು ಈ ವರ್ಷ. ಕೆಲಸ ಕಳೆದುಕೊಂಡು ಮಾನಸಿಕ ಒತ್ತಡಕ್ಕೆ ಒಳಗಾದ ಜನರೇ ನಮ್ಮಲ್ಲಿ ಹೆಚ್ಚು. ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದ ಜನತೆಗೆ ಮತ್ತೊಮ್ಮೆ ಲಾಕ್ ಡೌನ್ ಎಂದರೆ ಕಂಗೆಡುವಂತೆ ಮಾಡುವುದು. ಮಾರ್ಚ್ ತಿಂಗಳಲ್ಲಿ ಶಾಲೆಯಿಂದ ಹೊರಗೆ ಬಂದ ಮಕ್ಕಳು ಆನ್ಲೈನ್ ತರಗತಿಗೆ ಸೇರಲು ಪರದಾಡುವಂತಾಯಿತು. ಪರೀಕ್ಷೆ ಬರೆಯದೇ ಪಾಸ್ ಆಗಿದ್ದು ವಿದ್ಯಾರ್ಥಿಗಳಿಗೆ ಸಂತಸ ನೀಡಿತ್ತು. ನಗರದ ಮಕ್ಕಳಿಗೆ ಇರುವ ಅನುಕೂಲ ಗ್ರಾಮೀಣ ಮಕ್ಕಳಿಗೆ ಇಲ್ಲದ ಕಾರಣ ಆನ್ಲೈನ್ ತರಗತಿಗಳು ಯಶಸ್ವಿ ಯಾಗಲಿಲ್ಲ. ಅನೇಕ ಏಳು ಬೀಳುಗಳ ನಡುವೆ ಶಿಕ್ಷಣ ವ್ಯವಸ್ಥೆ ನಡೆದದ್ದು ಈ ವರ್ಷದ ಕೊಡುಗೆ. ಅನೇಕ ಸವಾಲುಗಳ ನಡುವೆಯೂ SSLC ಪರೀಕ್ಷೆ ನಡೆಸಿದ್ದು ಮೆಚ್ಚುಗೆ ಪಡೆಯಿತು.  ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ, ಸ್ಚಚ್ಚತಾ ಸಿಬ್ಬಂದಿ ಹೀಗೆ  ಅನೇಕ ಇಲಾಖೆಯವರು ಕೊರೊನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸಿದರು , ಇಂಥ ಅಮೂಲ್ಯ ವ್ಯಕ್ತಿತ್ವಗಳಿಗೆ ಈ ಮೂಲಕ ನಮ್ಮೆಲ್ಲರ ಹೆಮ್ಮೆಯ ನಮನಗಳು. ಹೋರಾಟದ ಬದುಕಿಗೆ ಯಾರೂ ಜಗ್ಗಲಿಲ್ಲ. ಆದರೂ ಸಾವಿನ ಹೊಡೆತ ಜರ್ಜರಿತಗೊಳಿಸಿದ್ದು ನಮ್ಮ ಜನರನ್ನು. ಆತ್ಮೀಯರನ್ನು ಕಳೆದುಕೊಂಡು ಸಮೀಪಕ್ಕೆ ಹೋಗಲಾರದ, ಅಂತ್ಯಕ್ರಿಯೆ ಮಾಡಲೂ ಸಂಕಷ್ಟ ತಂದ ಪರಿಸ್ಥಿತಿ ನಿಜಕ್ಕೂ ಮನಸ್ಸಿಗೆ ಸಂಕಟವನ್ನು ಉಂಟುಮಾಡಿದರೆ ಅದು ಅನಿವಾರ್ಯವಾಗಿತ್ತು. ಕುಟುಂಬದವರನ್ನು ಕಳೆದುಕೊಂಡು ನರಳಿದವರಿಗೆ ಈ ಮೂಲಕ ನಮ್ಮೆಲ್ಲರ ಸಾಂತ್ವನ ನೀಡುವ ಅವಕಾಶವಿದು. ನೋವುಗಳುಂಡರೂ ಒಂದೆಡೆ ಸ್ಥಗಿತಗೊಳ್ಳುವ ಬದುಕು ನಮ್ಮದಲ್ಲ. ವರುಷ ಕಳೆದು ಮತ್ತೊಂದು ವರುಷ ಸಿದ್ಧವಾಗಿದೆ. ಕ್ಯಾಲೆಂಡರ್ ಬದಲಾಯಿಸುವ ಮುನ್ನ ಹಿನ್ನೋಟಕ್ಕೆ ಅವಕಾಶ ಇದೆ. ಸಿಂಹ ಕೂಡ ತಾನು ನಡೆದ ದಾರಿಯನ್ನೊಮ್ಮೆ ಅವಲೋಕಿಸುವಂತೆ ನಾವೆಲ್ಲರೂ ಕಳೆದ ಪ್ರತಿಯೊಂದು ಕ್ಷಣಗಳನ್ನು ಮೆಲುಕು ಹಾಕೋಣ.    ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯತಾ ಭಾವದಿಂದ ಸ್ಮರಿಸುವ, ಅಗಲಿದ ಎಲ್ಲಾ ಚೇತನಗಳಿಗೂ ನಮನ ಸಲ್ಲಿಸುವ ಮೂಲಕ ಹೊಸ ಹೆಜ್ಜೆ ಇಡೋಣ. ಹಿಂದೂ ದೇಶವಾದ ನಮಗೆ ಇದು ಕೇವಲ ಕ್ಯಾಲೆಂಡರ್ ಹೊಸವರ್ಷ ಎಂಬುದು ನನ್ನ ಭಾವ. ಆಡಳಿತ ವ್ಯವಸ್ಥೆ ಒಪ್ಪಿಕೊಂಡ ಈ ಕ್ರಮಕ್ಕೆ ಯಾರೂ ಹೊರತಲ್ಲ. ಕೇವಲ ದಿನಗಳೆರಡು ಬಾಕಿಯಿದೆ 2021 ರ ಆರಂಭಕ್ಕೆ. ಕಳೆದ ಕಹಿ ಕ್ಷಣಗಳ ಮರೆತು ಹೊಸ ಬದುಕಿಗೆ ಸ್ವಾಗತ ಬಯಸುವ. ನಿರೀಕ್ಷೆ ಸದಾ ಒಳ್ಳೆಯದೇ ಇರಲಿ.

2020 ರ ಜೀವನ ಕಥನ Read Post »

ಇತರೆ, ಜೀವನ

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦ ಚಂದಕಚರ್ಲ ರಮೇಶ ಬಾಬು ಒಂದು ವರ್ಷ ಸರಿದು ಹೋಗುವಾಗ ಅದು ಕೊನೆಗೆ ಕೊಟ್ಟ ಬವಣೆಯನ್ನು ಕಂಡು ವರ್ಷವನ್ನೇ ದೂರಲಾಗುವುದಿಲ್ಲ. ಎಂದಿನ ಹೊಸ ವರ್ಷದಂತೆ ೨೦೨೦ ರನ್ನು ಸಹ ನಾವೆಲ್ಲ ಸಂಭ್ರಮದಿಂದಲೇ ಸ್ವಾಗತಿಸಿದೆವು. ನಮ್ಮ ಕನಸುಗಳನ್ನು ನನಸಾಗಿಸಲು ಈ ವರ್ಷ ತನ್ನ ಪಾತ್ರ ಪೋಷಿಸುತ್ತದೆ ಎಂಬ ಭರವಸೆಯ ಆಶೆ ಹೊತ್ತೆವು. ಮೊದಲೆರಡು ತಿಂಗಳೂ ಯಾವುದಕ್ಕೂ ಕೊರತೆಯೆನಿಸಲಿಲ್ಲ. ಹಬ್ಬಗಳೂ, ಹರಿದಿನಗಳೂ, ಮದುವೆಗಳೂ ಎಲ್ಲ ಎಲ್ಲರೂ ಅಂದುಕೊಂಡಂತೆ ನಡೆದವು. ಅಷ್ಟರಲ್ಲೇ ಚೀನಾಕ್ಕೆ ಕೊರೋನಾದ ಸೋಂಕು ಕಾಲಿಟ್ಟಿತ್ತು. ಅಲ್ಲಿ ಸಾವುಗಳು ಸಂಭವಿಸಲಾರಂಭಿಸಿದ್ದವು. ಅವರು ತಮ್ಮನ್ನು ಇದರ ಬಗ್ಗೆ ಆಗಲೇ ಎಚ್ಚರಿಸಿಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ದೂರಿದ್ದು ಈ ಸೂಕ್ಷ್ಮಾಣು ಇತರೆ ದೇಶಗಳಲ್ಲೂ ತನ್ನ ಕರಾಳ ಹಸ್ತಗಳನ್ನು ಚಾಚಿದಾಗಲೇ. ನಮ್ಮ ದೇಶಕ್ಕೂ ಮಾರ್ಚ್ ತಿಂಗಳಲ್ಲಿ ಕಾಲಿಟ್ಟ ಈ ಕರೋನಾ ( ನಂತರ ಇದಕ್ಕೊಂದು ಕೋವಿಡ್-೧೯ ಅಂತ ನಾಮಕರಣ ಮಾಡಲಾಯಿತು ಅನ್ನಿ) ತನ್ನ ಪ್ರತಾಪ ತೋರಿಸಲಾರಂಭಿಸಿತ್ತು.  ಆ ಹೊತ್ತಿಗಾಗಲೇ ಇಟಲೀ, ಸ್ಪೆಯಿನ್, ಬ್ರಿಟನ್. ಫ್ರಾನ್ಸ್ ದೇಶಗಳಲ್ಲಿ ಸಾವಿರಾರು ಜನಗಳು ಸಾಯಲಾರಂಭಿಸಿದ್ದರು. ಅಮೆರಿಕಾ ಸಹ ಹಿಂದುಳಿದಿದ್ದಿಲ್ಲ. ಚೈನಾದ ಜೊತೆ ಉಳಿದ ದೇಶಗಳು ಇದರ ಬಗ್ಗೆ ಅಧ್ಯಯನ, ಚಿಕಿತ್ಸೆಗೆ ಬೇಕಾದ ಪ್ರಯೋಗ ಆರಂಭಿಸಿದವು. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದಂತೆ ಕೈಗಳನ್ನು ಬಾರಿಬಾರಿಗೂ ಶುಚಿಮಾಡಿಕೊಳ್ಳುವುದು, ಮುಖಕ್ಕೆ ಗವಸು ಹಾಕಿಕೊಳ್ಳುವುದು, ಸಾಮಾಜಿಕ ದೂರದ ಪಾಲನೆ ಮಾಡುವುದು ನಮ್ಮ ದೇಶದಲ್ಲೂ ಆರಂಭಮಾಡುತ್ತ ಮಾರ್ಚ್ ೨೪ ರಿಂದ ಮೂರು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಯಿತು. ಅದನ್ನು ಲೆಕ್ಕಿಸದೇ ಹೊರಬಂದವರನ್ನು ಥಳಿಸಿ ಒಳಗೆ ಅಟ್ಟಲಾಯಿತು. ಕಚೇರಿಗಳಿಗೆ ಹೋಗುವ ಗಂಡಂದಿರು, ಶಾಲೆಗಳಿಗೆ ಹೋಗುವ ಮಕ್ಕಳು ಮನೆಯಲ್ಲೇ ಇರುತ್ತಿದ್ದು, ಅವರಿಗೆ ಹೊತ್ತು ಹೊತ್ತಿಗೂ ತಿಂಡಿ, ಊಟ ಒದಗಿಸುವುದಕ್ಕೆ ಮನೆ ಹೆಂಗಸರು ಹೆಣಗಾಡಿದರು. ಈ ಲಾಕ್ ಡೌನ್ ಸಮಯದಲ್ಲಿ ತಮಗೆ ಬೇಕಾದ ಎಣ್ಣೆ ಸಿಗದೇ ಮದ್ಯಪ್ರೇಮಿಗಳು ತಲೆಕೆಟ್ಟು ಆಡಿದ್ದು ನೆನೆಯಬಹುದಾಗಿದೆ. ಮೂರುವಾರ ಹೇಗೋ ಹಲ್ಲು ಕಚ್ಚಿ ತಡೆದುಕೊಂಡರಾಯಿತು ಎನ್ನುತ್ತ ಜನರು ಸಹ ಹುರುಪಿನಲ್ಲಿ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಮುಗಿಯುವುದಕ್ಕಾಗಿ ಕಾದರು. ಹೊಸ ದಿರಿಸುಗಳಂತೆ ಮುಖಕ್ಕೆ ಕವಚಿಕೊಳ್ಳುವ ಮುಸುಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚುಟುಕುಗಳು ಓಡಾಡಿದವು, ಹೊಸ ಕವಿತೆಗಳು ಹಾರಾಡಿದವು. ಪರಿಸರ ಮಾಲಿನ್ಯ ಕಮ್ಮಿಯಾಗಿ ವಾತಾವರಣ ತಿಳಿಯಾಯಿತು. ಎಂದೂ ಕೇಳದ ಕೋಗಿಲೆಯ ಇಂಚರ ಸತತವಾಗ ಕೇಳಿತು. ಕೆಲವರಿಗೆ ಅಲ್ಲಿಯವರೆಗೆ ಕಾಣದ ಹಿಮಾಲಯಗಳು  ಕಂಡವು. ತಾಂತ್ರಿಕತೆ ಮೈಗೂಡಿಸಿಕೊಂಡ ಜನರ ಈ ಉಸಿರುಗಟ್ಟುವ ಸನ್ನಿವೇಶದಲ್ಲೂ ತಮ್ಮದೇ ಆದ ಹೊಸ ಆಯಾಮಗಳನ್ನು ಹುಡಿಕಿದರು. ಝೂಮ್, ವೆಬ್ ನಾರ್, ಗೂಗಲ್ ನವರ ಆನ್ ಲೈನ್ ಸಮಾವೇಶಗಳು ಶುರುವಾದವು. ಸಮಾಚಾರ ತಂತ್ರದ ಸಂಸ್ಥೆಗಳು ಉದ್ಯೋಗಿಗಳಿಂದ ಮನೆಯಿಂದಲೇ ಕೆಲಸ ಮಾಡಿಸುತ್ತ ಅವರ ಕೆಲಸ ಕೆಡದಂತೆ ನೋಡಿಕೊಂಡರು. ಪಾಪ, ದಿನಗೂಲಿ ಕೆಲಸಗಾರರು, ಅಸಂಘಟಿತ ಕಾರ್ಮಿಕರು ತಮ್ಮ ತುತ್ತಿಗೆ ಒದ್ದಾಡಿದರು. ತಮ್ಮ ಮನೆಗಳಿಗೆ ಬೇಕಾದ ಸಂಚಾರದ ವ್ಯವಸ್ಥ ಕಾಣದೇ ಕಾಲ್ನಡಿಗೆಯಲ್ಲೇ ಮನೆಗಳಿಗೆ ತೆರಳುತ್ತಾ ಬವಣೆ ಅನುಭವಿಸಿದರು. ಅವರಿಗೆ ನೆರವಾಗುವ ಕೆಲ ಉದಾರಿ ಮನಗಳು ಹೊರಬಂದವು. ಕೆಲವರು ಮನೆಗಳಿಗೆ ಹೊರಟಿರುವ  ಈ ತರದ ಬಡಪಾಯಿಗಳಿಗೆ ಅನ್ನ, ವಸ್ತ್ರ, ವಸತಿ ನೋಡಿಕೊಂಡರ. ಕೆಲ ಸಂಸ್ಥೆಗಳು ತಮ್ಮ ಊರಿನಲ್ಲಿಯ ಬಡವರಿಗೆ ದಿನಸಿಯನ್ನು ಪೂರೈಸಿದರು. ಕರೋನಾ ಈ ತರದ ದಾನಶೀಲ ಗುಣವನ್ನು ಪ್ರಚೋದಿಸಿತ್ತು. ಝೂಮ್, ವೆಬ್ ನಾರ್, ಗೂಗಲ್ ನವರ ಆನ್ ಲೈನ್ ವೇದಿಕೆಗಳನ್ನು ಕಲಾಕಾರರು ಸಮರ್ಥವಾಗಿ ತಮ್ಮದಾಗಿಸಿಕೊಂಡು ತಮ್ಮ ಕಲಾ ಪ್ರದರ್ಶನಕ್ಕೊಂದು ಹೊಸ ವಿಧಾನ ಕಂಡುಕಂಡರು. ಕವಿಗೋಷ್ಠಿಗೆ ಅಥವಾ ಸಾಹಿತ್ಯ ಕಾರ್ಯಕ್ರಮಕ್ಕಾಗಿ ಆಯೋಜಕರು ಸಭಾಂಗಣಕ್ಕಾಗಿ ಒದ್ದಾಡುವುದು,ಕಲಾ ಕಾರರನ್ನು ಕರೆಸುವುದು, ಏನೋ ಅಡೆತಡೆಯಾಗಿ ತಡವಾಗಿ ಬರುವುದು ಅಥವಾ ಅನಾರೋಗ್ಯದಿಂದ ಬರದೇ ಇರುವುದು ಇವೆಲ್ಲವೂ ಇಲ್ಲದಾದವು. ಮನೆಯಲ್ಲಿ ತಮ್ಮ ಆರಾಮ ಕುರ್ಚಿಯಿಂದಲೇ ತಮ್ಮ ಸಾಹಿತ್ಯ ಕೃತಿಯನ್ನು ಓದಲು ಅನುಕೂಲವಾಯಿತು. ಯಕ್ಷಗಾನದ ಒಂದು ಪ್ರದರ್ಶನ ಸಹ ಪ್ರೇಕ್ಷಕರೇ ಇಲ್ಲದೇ ಪ್ರಯೋಗ ಮಾಡಿ ಮೆಚ್ಚುಗೆ ಗಳಿಸಲಾಯಿತು. ನಿರ್ಬಂಧಗಳು ಸಡಿಲವಾದ ಮೇಲು ಈ ಆನ್ ಲೈನ ವೇದಿಕೆಗಳಿಗೇ ಜನ ತಮ್ಮ ಒಲವನ್ನು ತೋರುತ್ತಿದ್ದಾರೆ. ಒಟಿಟಿ ವೇದಿಕೆಗಳು ತುಂಬಾ ಬೇಡಿಕೆಗೊಳಗಾದವು. ಅದರಲ್ಲಿ ಸಿಗುವ ಸಿನಿಮಾಗಳು ಜನಪ್ರಿಯವಾದವು. ಇನ್ನು ಕೆಲವೇ ದಿನಗಳಲ್ಲಿ ನಿರ್ಬಂಧ ಸಡಿಲಗೊಂಡು ಸಿನಿಮಾ ಟಾಕೀಸುಗಳು ತೆರೆದರೂ ಅವುಗಳಿಗೆ ಮುಗಿ ಬೀಳುವ ಜನತೆ ಕಮ್ಮಿಯೇ ಇರಬಹುದು. ಮನೆಯಲ್ಲಿಯೇ ಸಿನಿಮಾ ನೋಡಲು ಸಿಗುವಾಗ ಇನ್ನು ಟಾಕೀಸುಗಳಿಗೆ ಹೋಗುವರಾರು? ಅಲ್ಲವೇ ? ಈಗಿನ್ನೂ ಅರ್ಧದಷ್ಟು ಸಾಮರ್ಥ್ಯದಲ್ಲೇ ನಡೆಯುತ್ತಲಿವೆ. ಇವುಗಳ ಆರ್ಥಿಕ ಆಗುಬರುವಿಕೆಯ ಬಗ್ಗೆ ಪ್ರತ್ಯೇಕ ಅಧ್ಯಯನ ಮಾಡಬೇಕಾದೀತು. ಜೂಲೈ ತಿಂಗಳ ಹೊತ್ತಿಗೆ ಸರಕಾರ ಕೆಲವಾರು ವರ್ಗಗಳಿಗೆ ನಿಬಂಧನೆಗಳನ್ನು ಸಡಲಿಸಿತು. ಮತ್ತೆ ಜನ ಜೀವನ ರಸ್ತೆಗಳಿಗೆ ಬರಲು ಶುರುವಾಯಿತು. ಆದರೆ ಕರೋನಾ ಸೋಂಕಿದ ರೋಗಿಗಳ ಸಂಖ್ಯೆ ಕಮ್ಮಿಯಾಗಲಿಲ್ಲ. ಜನ ಸಂದಿಗ್ಧತೆಗೆ ಬಿದ್ದರು. ಹೊರಬರಲು ಹೆದರುವ ವರ್ಗವು ಒಂದಾದರೆ, ಯಾವುದಕ್ಕೂ ಲೆಕ್ಕಿಸದಿರುವ ಮತ್ತೊಂದು ವರ್ಗ ಹೀಗೆ. ಜೂಲೈ ತಿಂಗಳು ಮುಗಿಯುವಾಗ ಹತ್ತು ಲಕ್ಷ ಸೋಂಕುದಾರರಾದರು. ಆಗಸ್ಟ್ ತಿಂಗಳಾದರೂ ಕಮ್ಮಿಯಾಗಲಿಲ್ಲ. ಆದರೆ ನಿಬಂಧನೆಗಳು ಮಾತ್ರ ಸಡಿಲಗೊಳ್ಳುತ್ತಾ ಹೋದವು. ರಸ್ತೆಗಳ ಮೇಲೆ ಜನಸಂಚಾರ ಶುರುವಾಯಿತು. ಗಣಪತಿಯ ಹಬ್ಬಕ್ಕೆ ನಿಬಂಧನೆಗಳು ಸ್ವಲ್ಪ ಮಟ್ಟಿಗೆ ಸಡಿಲಗೊಂಡಿದ್ದರೂ ಜನರೇ ಹೆದರಿ ಜಾಸ್ತಿ ನೆರೆಯದಾದರು. ದಸರೆಗೂ, ದೀಪಾವಳಿಗೂ ಇದೇ ತರದ ಪರಿಸ್ಥಿತಿ. ನಮ್ಮ ದೇಶದಲ್ಲಿ ರಿಕವರಿ ಚೆನ್ನಾಗಿದೆ, ಮೃತರ ಸಂಖ್ಯೆ ತುಂಬಾ ಕಮ್ಮಿ ಅಂತ ಯಾವು ಯಾವುದೋ ಸಬೂಬುಗಳನ್ನು ಹೇಳಿಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳೋದು ಆಯಿತು. ಆದರೆ ನಂತರದ ದಿನಗಳಲ್ಲಿ ಮದುವೆ, ಗೃಹ ಪ್ರವೇಶಗಳು ಭರದಿಂದ ಮತ್ತೆ ಆಗ ತೊಡಗಿದವು. ಎಲ್ಲೆಲ್ಲೂ ಜನ ಕಾಣತೊಡಗಿದರು. ಛಾಂದಸರು ಮಾತ್ರ “ ಯಾರೂ ಕರೋನಾದ ನಿಬಂಧನೆಗಳನ್ನು ಪಾಲಿಸುತ್ತಲೇ ಇಲ್ಲ. ಏನು ಜನವಪ್ಪಾ!” ಎನ್ನುತ್ತ ಮೂಗು ಮುರಿಯುತ್ತ ಮನೆಗಳಲ್ಲೇ ಕಳೆಯತೊಡಗಿದರು. ಮನೆಯಲ್ಲಿಯ ದೊಡ್ಡವರಿಗೆ ತಮ್ಮ ನಿರ್ಬಂಧ ಹೇರತೊಡಗಿ ಹಿರಿಯರು ಚಡಪಡಿಸಲಾರಂಭಿಸಿದರು. ಅಮೆರಿಕದಲ್ಲಿಯ ಜನ ಮಾಸ್ಕ್ ಎನ್ನುವುದು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುವಂತಾಗುತ್ತದೆ ಎಂದು ಘೋಷಿಸಿ ಹಾಕದೇ ಎಲ್ಲ ಕಡೆಗೆ ತಿರುಗುತ್ತಾ ಅಲ್ಲಿದ್ದ ನಮ್ಮ ಭಾರತೀಯರಿಗೆ ತಳಮಳ ತಂದಿರುವುದು ಬೆಳಕಿಗೆ ಬಂದಿದೆ. ಅಲ್ಲಿ ಕರೋನಾದ ಅಟ್ಟಹಾಸ ಇನ್ನೂ ಕಮ್ಮಿಯಾಗಿಲ್ಲ. ಶಾಲೆಗಳು ಮಾತ್ರ ಇನ್ನೂ ಪ್ರಾರಂಭವಾಗಿಲ್ಲ. ಹಾಗಂತ ಮಕ್ಕಳಿಗೇನೂ ರಿಯಾಯ್ತಿಯಾಗಿಲ್ಲ. ಅವರಿಗೂ ಆನ್ ಲೈನಿನ ಮೇಲೆ ಪಾಠಗಳು ಮೂರು ತಿಂಗಳ ಹಿಂದಿನಿಂದಲೇ ಶುರುವಾಗಿವೆ. ಮಕ್ಕಳ ಶಾಲೆಯ ಶುಲ್ಕವೂ ಕಟ್ಟ ಬೇಕಾಗಿದ್ದು ಪಾಲಕರು ಎರಡೂ ಬಗೆಯ ನೋವನ್ನು ಅನುಭವಿಸುತ್ತಿದ್ದಾರೆ. ಕೆಲ ಖಾಸಗೀ ವಿದ್ಯಾ ಸಂಸ್ಥೆಗಳು ಬಂದಾಗಿ ಅಲ್ಲಿಯ ಶಿಕ್ಷಕರು ಬೀದಿಗೆ ಬಿದ್ದಿದ್ದಾರೆ. ಜೀವನ ನಡೆಸಲ ಯಾವ್ಯಾವುದೋ ಕೆಲಸಗಳನ್ನು ಮಾಡಿ ಬದುಕುತ್ತಿರುವುದು ಸಹ ಸಾಮಾಜಿಕ ಜಾಲತಾಣಗಳ, ಕಥೆಗಳ ವಸ್ತುವಾಗಿದೆ. ಆನ್ ಲೈನ ಪಾಠಗಳು, ಮೀಟಿಂಗ್ ಗಳು ನಡೆಯುವಾಗ ಮಧ್ಯದಲ್ಲಾಗುವ ಕೆಲ ಹಾಸ್ಯ ಪ್ರಸಂಗಗಳು ಮನಸ್ಸಿಗೆ ಮುದ ನೀಡಿವೆ. ಕೆಲ ನಿಯತ ಕಾಲಿಕ ಪತ್ರಿಕೆಗಳು ಅನ್ ಲೈನ್ ನ ಆಸರೆ ಪಡೆದು ಮುದ್ರಣವನ್ನು ಕೆಲ ಕಾಲ ನಿಲ್ಲಿಸಿದ್ದು, ಈಗಷ್ಟೇ ಮತ್ತೆ ಶುರುಮಾಡಿವೆ. ಈ ವರ್ಷದ ಕೊನೆಯ ಹೊತ್ತಿಗೆ ಇನ್ನೇನು ಎಲ್ಲಾ ಸೇವೆಗಳೂ ಪುನರಾರಂಭವಾಗುವುವು ಎನ್ನುವ ಹೊತ್ತಿಗೆ ಇಂಗ್ಲೆಂಡಿನಲ್ಲಿ ಮತ್ತೊಂದು ಇದರ ಸಂಬಂಧೀ ಸೋಂಕಿನ ಸೂಕ್ಷ್ಮಾಣು ಕಾಣಿಸಿಕೊಂಡು ತನ್ನ ಪ್ರತಾಪ ತೋರಲಾರಂಭಿಸಿದೆ. ಇದರ ಹಾವಳಿ ಏನು, ಹೇಗೆ ಅಂತ ಇನ್ನೂ ಗೊತ್ತಾಗುತ್ತಾ ಇಲ್ಲ. ಆದರೇ ಇತರೆ ದೇಶಗಳು ಅಪ್ರಮತ್ತವಾಗಿರುವು ಹೌದು. ಆದರ ಒಂದು ಸಮಾಧಾನದ ಅಂಶವೆಂದರೆ ಕೆಲ ದೇಶಗಳಲ್ಲಿ ಲಸಿಕೆಯನ್ನು ಕೊಡಲು ಶುರುಮಾಡಿದ್ದು. ನಮ್ಮ ಭಾರತದಲ್ಲಿ ಇದರ ಒಣ ಪ್ರಯತ್ನವನ್ನು ಮಾಡಿ ನೋಡುತ್ತಿದ್ದಾರೆ. ಲಸಿಕೆ ಎಲ್ಲರಿಗೂ ಸಿಗುವ ಹಾಗೆ ಮಾಡುತ್ತೇವೆಂದು ಸರ್ಕಾರ ಆಶ್ವಾಸನ ನೀಡಿದೆ. ಕಾಯಬೇಕು ಮಾತ್ರ. ಕರೋನಾ ಪ್ರಭಾವದಿಂದ ಹಲವಾರು ದೇಶಗಳ ಆರ್ಥಿಕ ಸ್ಥಿತಿಯನ್ನು ಹದಗೆಟ್ಟಿವೆ. ಹೊಸ ಉದ್ಯೋಗಗಳು ನಿರ್ಮಾಣವಾಗುವ ಅವಕಾಶ ಕಾಣದಾಗಿದೆ. ಇತರೆ ಕ್ಷೇತ್ರಗಳಲ್ಲಿ ನಡೆಯ ಬೇಕಾದ ಸಂಶೋಧನಾ ಕಾರ್ಯಕ್ರಮಗಳು ನಿಂತಿವೆ. ಎಲ್ಲರ ಲಕ್ಷ್ಯ ಬರೀ ಕರೋನಾಗೆ ಲಸಿಕೆ ಕಂಡ ಹಿಂಡಿಯುವುದರಲ್ಲೇ ಆಗಿದೆ. ನಿಧಿಗಳು ಸಹ ಅದಕ್ಕೇ ನೀಡಲಾಗುತ್ತಿದೆ. ವಿಶ್ವದಾದ್ಯಂತವಾಗಿ ೮ ಕೋಟಿ ಜನರು ಇದರಿಂದ ಪೀಡಿತರಾಗಿದ್ದಾರೆ. ಸುಮಾರು ೧೮ ಲಕ್ಷ ಜನರು ಸತ್ತಿದ್ದಾರೆ. ನೂರು ವರ್ಷದ ಹಿಂದೆ ಸ್ಪೆಯಿನ್ ಫ್ಲೂ ನಂತರ ಈ ತರದ ಜನರನ್ನು ಬಲಿ ತೆಗೆದುಕೊಂಡ ಮಹಾಮಾರಿ ಕರೋನಾವೇ ಆಗಿದೆ. ಜನರು ಅತಿ ಜರೂರು ಸಮಯಗಳಲ್ಲೂ ತಮ್ಮವರ ಹತ್ತಿರಕ್ಕೆ ಹೋಗಲಾರದೇ ಒದ್ದಾಡಿದ್ದಾರೆ. ಕೆಲವರ ಕೈ ಕಟ್ಟಿ ಹೋಗಿದೆ. ಬಡತನ ಹೆಚ್ಚಿದೆ. ಆದರೆ ಕರೋನಾ ಹೊಡೆತದಿಂದ ಕೆಲವಾರು ಸಾಮಾಜಿಕೆ ಸುಧಾರಣೆಗಳಾಗಿವೆ.  ಜನರಿಗೆ ತಾವೊಬ್ಬರೇ ಸುಖವಾಗಿರಬೇಕು ಎನ್ನಿಸದೇ ಇಡೀ ಸಮುದಾಯವೇ ರೋಗ ರಹಿತವಿರಬೇಕೆಂಬ ಭಾವನೆ ಬೆಳೆದಿದೆ. ಒಂದೈದಾರು ತಿಂಗಳು ವಾತಾವರಣ ತಿಳಿಯಾಗಿದ್ದು, ಪಶು ಪಕ್ಷಿಗಳು ಸುಖ ಕಂಡಿವೆ. ತಮ್ಮ ವೈಯಕ್ತಿಕ ಶುಭ್ರತೆಯ ಬಗ್ಗೆ ಜನರಿಗೆ ತಿಳಿದುಬಂದಿದೆ. ಇದರ ಬಗ್ಗೆ ಅತೀ ಮಡಿ ಮಾಡುವ ಜನರು ಬೆನ್ನು ತಟ್ಟಿಕೊಂಡಿದ್ದಾರೆ.  ಅಲ್ಲಲ್ಲಿ ಕೆಲ ಲೋಪದೋಷಗಳು ಕಂಡರೂ ಸರಕಾರದ ಬಗ್ಗೆ ಭರವಸೆ ಹುಟ್ಟಿದೆ. ಇವು ಯಾವುದಕ್ಕೂ ಕಾರಣವಲ್ಲದ ೨೦೨೦ರ ವರ್ಷ ಬರೀ ಸಾಕ್ಷಿಯಾಗಿ ನಿಂತು ಕಾಲಗಮನದಲ್ಲಿ ತನ್ನ ಪಾತ್ರವನ್ನು ಮುಗಿಸಿ ಹೊರಡಲಿದೆ. ಕೆಲಕಡೆ ೨೦೨೦ರ ಮೊದಲಲ್ಲಿ ಯಾರು ಹ್ಯಾಪೀ ನ್ಯೂ ಇಯರ್ ಹೇಳಿದ್ದು ಅಂತ ದೊಣ್ಣೆ ಹಿಡಿದು ನಿಂತ ಚುಟುಕನ್ನು ಕಂಡು ಈ ವರ್ಷ ನಗೆ ತಂದುಕೊಂಡಿದೆ. ತಾನು ಮಾಡಿದ್ದೇನು ಇದರಲ್ಲಿ ಅಂತ ಪ್ರಶ್ನಿಸಿಕೊಂಡಿದೆ. ಮನುಷ್ಯನ ದುರಾಸೆ, ಸ್ವಾರ್ಥ, ವಾತಾವರಣದ ಬಗ್ಗೆ ಯಾವ ಮಾತ್ರವೂ ಕಾಣದ ಕಾಳಜಿ ಇದಕ್ಕೆ ಕಾರಣಗಳು ಎಂದು ಅರಿಯದ ಮನುಷ್ಯ ಜಾತಿಯ ಬಗ್ಗೆ ಮರುಕ ಪಟ್ಟು ಹೊರಡಲಿದೆ. ಅದಕ್ಕೊಂದು ಸಮಾಧಾನ. ತನ್ನ ಅವಧಿ ಮುಗಿಯುವ ವೇಳೆಗೆ ಲಸಿಕೆ ಲಭ್ಯ ಅಂತ ಗೊತ್ತಾಗಿದ್ದು ಹರ್ಷದಾಯಕವೇ ಆದರೂ ಇನ್ನೇನು ಒಂದು ಸಂತೋಷದ ನಗೆಯಿಂದ ಮುಕ್ತಾಯವಾಗ ಬೇಕಿದ್ದ ತನ್ನ ಅವಧಿಗೆ ಕರೋನಾದ ಹೊಸ ಅವತಾರ ನಿರಾಶೆ ತಂದಿದೆ. ದುರಂತವೂ ಸುಖಾಂತವೂ ತಾನಂತೂ ತೆರೆ ಮರೆಯಾಗುವುದು ಖಂಡಿತಾ ಅಂತ ಗೊತ್ತಿದ್ದ ೨೦೨೦ ಜಗಕ್ಕೆ ಬಂದು ಅಪ್ಪಳಿಸಿದ ಈ ವಿಪತ್ತಿಗೆ ತನ್ನ ಪ್ರಮೇಯ ಏನೂ ಇಲ್ಲ ಎಂಬುದು ಎಲ್ಲರೂ ಅರಿಯಲಿ ಎಂದು ಆಶಿಸುತ್ತಾ ಮತ್ತು ೨೦೨೧ ಕರೋನ ಒಂದೇ ಅಲ್ಲ ಎಲ್ಲ ರೋಗ ರಹಿತ ಹೊಸ ವರ್ಷವಾಗಲಿ ಎಂದು ಹಾರೈಸುತ್ತಿದೆ. *********************                                                                                    

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦ Read Post »

ಇತರೆ, ಜೀವನ

ಆಶ್ಚರ್ಯ,ಆಘಾತಗಳ ವರ್ಷ

ಆಶ್ಚರ್ಯ,ಆಘಾತಗಳ ವರ್ಷ ನೂತನ ದೋಶೆಟ್ಟಿ 2020ರ ವರ್ಷಕ್ಕೆ ಒಂದು ಪದದಲ್ಲಿ  ಶೀರ್ಷಿಕೆ ಕೊಡಿ ಎಂದರೆ ನಾನು ‘ದಿಗಿಲು’ ಎಂದು ಕೊಡುತ್ತೇನೆ. ಇದು ಭಯ, ಆಶ್ಚರ್ಯ, ಆಘಾತ ಮೊದಲಾದವುಗಳು ಒಟ್ಟು ಸೇರಿ ಉಂಟು ಮಾಡಬಹುದಾದ ಹೇಳಲು ಆಗದ ಒಂದು ಸ್ಥಿತಿ. ಇಂಥ ಸ್ಥಿತಿ ಆಗಾಗ ಎಲ್ಲರ ಜೀವನದಲ್ಲೂ ಬರುತ್ತಲೇ ಇರುತ್ತದೆ. ಆದರೆ ಒಟ್ಟಾರೆ ಮನುಕುಲವೇ ಇಂಥ ಸಮೂಹ ಸ್ಥಿತಿಗೆ ಒಳಗಾಗಿದ್ದು ಆಧುನಿಕ ಕಾಲದಲ್ಲಿ ಇದು ಮೊದಲ ಬಾರಿ ಎಂದು ಹೇಳಬಹುದು. ವಿಶ್ವ ಮಹಾಯುದ್ಧ ಗಳು  ನಡೆದ ಕಾಲದಲ್ಲಿ ಮಾಧ್ಯಮಗಳು, ಅದರಲ್ಲೂ ಸಾಮಾಜಿಕ ಮಾಧ್ಯಮಗಳು ಇರದ ಕಾರಣ ಇವುಗಳ ಘೋರ ಪರಿಣಾಮ ಇಡಿಯ ವಿಶ್ವದ ಮೇಲೆ ಈಗಿನಂತೆ ಆಗಿರಲಿಲ್ಲ. ಆದರೆ ಈಗ  ಕ್ಷಣಾರ್ಧದಲ್ಲಿ ವಿಶ್ವವನ್ನು ಸುತ್ತಿಬರುವ  ಸುದ್ದಿಗಳು ಈ ವರ್ಷದ ದಿಗಿಲನ್ನು ಹೆಚ್ಚಿಸಿವೆ ಎಂದರೂ ತಪ್ಪಿಲ್ಲ. ಇವೆಲ್ಲದರ ಹೊರತಾಗಿ ಬದುಕು ನಿಲ್ಲದೇ ನಡೆದು ದೊಂದು ದೊಡ್ಡ ಸೋಜಿಗ. ಹೃದಯವನ್ನು ಕಲಕುವ ಜನರ ಗುಳೆ, ಬಾಗಿಲಲ್ಲಿ ಬಂದು ನಿಂತು ಅಕ್ಕಿ, ಹಿಟ್ಟು ಏನಾದರೂ ಕೊಡಿ ಎಂದು ಕೇಳುವ ಚಿಕ್ಕ ವಯಸ್ಸಿನ ಹೆಂಗಸರು, ಚಿಕ್ಕ ಮಕ್ಕಳ ಮನಕಲಕುವ ಕಂಗೆಟ್ಟ ಮುಖಗಳು, ರಣಗುಡುವ ಏಕಾಂತ ಬೀದಿಗಳು, ಸತ್ತ ನೆರೆಹೊರೆಗಳು ಏಪ್ರಿಲ್, ಮೇ ತಿಂಗಳುಗಳನ್ನು ಈ ಮೊದಲು ಹೇಳಿದ ದಿಗಿಲಿಗೆ ಅಕಸ್ಮಾತ್ ಆಗಿ ನೂಕಿ ಕಂಗೆಡಿಸಿದ್ದವು. ಇನ್ನು ಕೈಯಲ್ಲಿ ಕಾಸಿದ್ದರೂ ಹೊರಗೆ ಹೋಗುವಂತಿಲ್ಲ. ಕೊಳ್ಳುವ ಶಕ್ತಿ ಇರುವವರ ಕತೆಯೇ ಹೀಗಾದರೆ ರಟ್ಟೆಯ ಬಲವನ್ನೇ ನಂಬಿ ಬದುಕುತ್ತಿದ್ದ ಅಸಂಖ್ಯಾತರ ಬದುಕು ಏನಾಗಿರಬೇಡ!!  ಇಂಥ ಕಾಲದಲ್ಲಿ ಕೈ ಹಿಡಿದು ನಡೆಸಿದ್ದು ಗಾಂಧೀಜಿಯವರ ಸರಳ ಜೀವನದ ಕಲ್ಪನೆ. ಕೊಳ್ಳುವ, ತಿನ್ನುವ ಎಲ್ಲ ಹಪಹಪಿಗಳಿಗೂ ಸಾರ್ವತ್ರಿಕವಾಗಿ ಕಡಿವಾಣ ಹಾಕಿ ಅಲ್ಪ ತೃಪ್ತಿಯನ್ನು ವಿಶ್ವಕ್ಕೇ ಕಲಿಸಿದ ಕಾಲ ಇದು. ಭಾರತದ ಮಟ್ಹಿಗೆ ಹೇಳುವುದಾದರೆ ಮೊದಲೆರಡು ಮೂರು ತಿಂಗಳುಗಳಿಗೆ ಬೇಕಾಗುವಷ್ಟು ಸಾಮಾನುಗಳನ್ನು ಮನೆಯಲ್ಲಿ ತಂದು ಪೇರಿಸಿಕೊಂಡ ಕೊಳ್ಳುಬಾಕರು,  ತಿಂದು ತೇಗಿದರೂ ನಂತರ ಸರಳತೆಯ ಕಡೆ ಅನಿವಾರ್ಯವಾಗಿ ಹೊರಳಬೇಕಾದ್ದು ಈ ವರ್ಷ ಕಲಿಸಿದ ದೊಡ್ಡ ಪಾಠ. ಗಾಂಧೀಜಿಯವರು ಹಾಲು, ಹಣ್ಣು, ಶೇಂಗಾಬೀಜ ಮೊದಲಾದ ಅತ್ಯಲ್ಪ ಆಹಾರವನ್ನು ಸೇವಿಸಿಯೂ ನೂರಾರು ಕಿ.ಮೀ ದೂರ ಕಾಲ್ನಡಿಗೆ ಮಾಡಬಲ್ಲ, ಹತ್ತಾರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವ ಸಾಮರ್ಥ್ಯವನ್ನು ದೇಹಕ್ಕೆ ಕಲಿಸಿದ್ದರು. ದೇಹ ನಮ್ಮ ಅವಶ್ಯಕತೆಗೆ ಒಗ್ಗಿಕೊಳ್ಳುವಂತೆ ಬಾಗಿಸುವ ಸಾಮರ್ಥ್ಯ ಎಲ್ಲರಿಗೂ ಇರುತ್ತದೆ. ಆದರೆ ತೀರದ  ಆಸೆಗಳು, ಜಿಹ್ವಾ ಚಾಪಲ್ಯ ಅದನ್ನು ತಡೆ ಹಿಡಿಯುತ್ತವೆ. ಇದನ್ನು ನಾನೂ ಏಕೆ ಪ್ರಯತ್ನಿಸಬಾರದು ಎಂದು ನನಗೆ ಸಲಹೆ ನೀಡಿದ್ದು ನನ್ನ ಮಗ.  ಮನೆಯಿಂದ ದೂರ ಇರಬೇಕಾದ ಅನಿವಾರ್ಯತೆ, ಹೊರಗೆ ಕೊಂಡು ತಿನ್ನಲು ಹೊಟೆಲ್ಲುಗಳಿಲ್ಲ. ಏನಾದರೂ ಸಿದ್ಧ ಪಡಿಸಿಕೊಳ್ಳೋಣವೆಂದರೆ ಹೊರಗೆ ಹೋಗಿ ಕೊಳ್ಳಬೇಕಾದ ಅನಿವಾರ್ಯತೆ. ಇವೆಲ್ಲವುಗಳಿಗೆ ಪರಿಹಾರವಾಗಿ ಬಂದಿದ್ದು ದ್ರವಾಹಾರದ ಪ್ರಯೋಗ.  ಮೂಲತಃ ಮಲೆನಾಡಿಗರಾದ ನಮ್ಮ ಬೆಳಗು ಆರಂಭವಾಗುವುದು ಕಷಾಯದಿಂದ. ಸುಮಾರು 15 ಪದಾರ್ಥಗಳನ್ನು ಹಾಕಿ ನಾನು ಮನೆಯಲ್ಲೇ ಮಾಡುವ ಈ ಕಷಾಯಕ್ಕೆ ಬೆಲ್ಲ ಹಾಕಿ ಕುಡಿದರೆ ಇದು ಸಾರ್ವಕಾಲಿಕ ಔಷಧ ನಮಗೆ. ಆನಂತರ ಸುಮಾರು 9 ಗಂಟೆಗೆ ವಿವಿಧ ಧಾನ್ಯಗಳು, ಮೊಳಕೆ ಕಾಳುಗಳ ಪುಡಿಯ ಮಿಶ್ರಣವನ್ನು ಹಾಲಿನಲ್ಲಿ ಕಲೆಸಿ ಕುಡಿದರೆ ಅದು ತಿಂಡಿಗೆ ಪರ್ಯಾಯ. ಮಧ್ಯಾಹ್ನದ ಊಟದ ಹೊತ್ತಿಗೆ ಹಣ್ಣು, ಸೌತೆಕಾಯಿ, ಗಜ್ಜರಿ, ಒಣಹಣ್ಣುಗಳು  ಇವುಗಳಲ್ಲಿ ಯಾವುದನ್ನಾದರೂ ತಿಂದು ಮತ್ತೆ ಒಂದು ಲೋಟ ಪುಡಿ ಮಿಶ್ರಣ ಮಾಡಿದ ಹಾಲು ಕುಡಿದರೆ ಊಟ ಮುಗಿದಂತೆ. ರಾತ್ರಿ ಊಟಕ್ಕೆ ಮತ್ತೆ ಮಧ್ಯಾಹ್ನದ ಊಟದಂತೆಯೇ. ಕೆಲವೊಮ್ಮೆ ರಾಗಿಯ ಮಾಲ್ಟ್ ಅನ್ನು ಊಟ ಅಥವಾ ತಿಂಡಿಗೆ ಪರ್ಯಾಯವಾಗಿ ಬಳಸುವುದು. ಮೊದಲ ನಾಲ್ಕೈದು ದಿನಗಳು ಸ್ವಲ್ಪ ಸುಸ್ತು ಎನ್ನಿಸಿದ್ದು ನಿಜ. ಆದರೆ ಯೋಗ, ವ್ಯಾಯಾಮ ಮಾಡುವಾಗ ಏನೂ ತೊಂದರೆಯಾಗುತ್ತಿರಲಿಲ್ಲ. ಲವಲವಿಕೆಗೂ, ಉತ್ಸಾಹಕ್ಕೂ ಕುಂದು ಬರಲಿಲ್ಲ. ಶ್ರವಣ ಬೆಳಗೊಳದ 650 ಮೆಟ್ಟಿಲುಗಳನ್ನು 25 ನಿಮಿಷಗಳಲ್ಲಿ  ಏದುಸಿರಿಲ್ಲದೇ ಹತ್ತಿದಾಗ ನನ್ನ ಆಹಾರ, ಜೀವನ ಶೈಲಿಯ ಬಗ್ಗೆ ನನಗೆ ಪೂರ್ಣ ನಂಬಿಕೆ ಬಂದಿತು. ಈಗ ನಾನು ಅದನ್ನೇ ಮುಂದುವರೆಸಿದ್ದೇನೆ. ಎಂದಾದರೊಂದು ದಿನ ಬಾಯಿ ಚಪಲದಿಂದಾಗಿ ಇತರ ತಿಂಡಿಗಳನ್ನು ತಿಂದರೂ ಮತ್ತೆ ಇದಕ್ಕೇ ಮರಳುತ್ತೇನೆ. ಈ ಮಿತ ಆಹಾರ  ನನಗೆ ಹೆಚ್ಚು ಆರಾಮದಾಯಕ ಎನ್ನಿಸುತ್ತದೆ. ಬಹುಶಃ ಈ ದಿಗಿಲಿನ ವರ್ಷ  ಬರೆದಿದ್ದರೆ ನಾನು ಇಂಥ ಪ್ರಯೋಗ ಮಾಡುತ್ತಿದ್ದೆನೋ ಇಲ್ಲವೋ. ಹೀಗೊಂದು ಸಂತ್ರಪ್ತಿ ತಂದ ವರ್ಷವೂ ಇದು ಎನ್ನುವುದು ನನಗೂ ಸೋಜಿಗವೇ. **********************************

ಆಶ್ಚರ್ಯ,ಆಘಾತಗಳ ವರ್ಷ Read Post »

ಇತರೆ

ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ ಕತೆ

ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ ಕತೆ ಆಶಾ ಸಿದ್ದಲಿಂಗಯ್ಯ ಅಮೆರಿಕಾದ ಗೊಂಬೆ-ತಯಾರಿಕಾ ಕಂಪೆನಿ ಮಾಟೆಲ್ ಇಂಕ್ 1959ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ. ಅಮೆರಿಕಾದ ಮಹಿಳಾ ಉದ್ಯಮಿ ರುತ್ ಹ್ಯಾಂಡ್ಲರ್ (1916-2002) ಬಿಲ್ಡ್ ಲಿಲ್ಲಿ ಎಂಬ ಜರ್ಮನ್‌ ಗೊಂಬೆಯಿಂದ ಸ್ಪೂರ್ತಿ ಪಡೆದು ಬಾರ್ಬಿಯನ್ನು ರೂಪಿಸಿದರು.ಐವತ್ತು ವರ್ಷಗಳಲ್ಲಿ ಗೊಂಬೆ ಮಾರುಕಟ್ಟೆಯಲ್ಲಿ ಹಲವು ವಿವಾದ ವ್ಯಾಜ್ಯಗಳನ್ನು ಹುಟ್ಟುಹಾಕುತ್ತಲೇ ಟೀಕೆಗೆ ಒಳಗಾಗುತ್ತಲೇ ಬೆಳೆಯಿತು ಬಾರ್ಬಿ ಹಾಗೂ ಆಕೆಯ ಜೀವನ ಶೈಲಿ. ಇತ್ತೀಚಿನ ದಿನಗಳಲ್ಲಿ ಬಾರ್ಬಿಗೆ ಪ್ರತಿಸ್ಪರ್ಧಿಯಾಗಿ ಬ್ರಾಜ್ಸರಣಿಯ ಗೊಂಬೆಗಳು ಹುಟ್ಟಿಕೊಂಡಿವೆ. ತಮ್ಮ ಮಗಳು ಬಾರ್ಬರಾ ಕಾಗದದ ಬೊಂಬೆಗಳಿಗೆ ದೊಡ್ಡವರ ಪಾತ್ರ ನೀಡಿ ಆಟ ಆಡುತ್ತ ಖುಷಿ ಪಡುತ್ತಿರುವುದನ್ನು ರುತ್ ಹ್ಯಾಂಡ್ಲರ್ ಗಮನಿಸಿದರು. ಆಗೆಲ್ಲ ಮಕ್ಕಳ ಗೊಂಬೆಗಳು ನವಜಾತ ಶಿಶುವಿನ ಪ್ರತಿನಿಧಿಗಳಾಗಿದ್ದವು. ಗೊಂಬೆ ಮಾರುಕಟ್ಟೆಯಲ್ಲಿ ಇಂಥ ಕಂದರ ಇದ್ದುದನ್ನು ಗಮನಿಸಿದ ಹ್ಯಾಂಡ್ಲರ್ ತಮ್ಮ ಗಂಡ ಹಾಗೂ ಮಾಟೆಲ್ ಗೊಂಬೆ ಕಂಪೆನಿಯ ಸಹ ಸಂಸ್ಥಾಪಕ ಎಲಿಯಟ್ ಅವರಿಗೆ ದೊಡ್ಡವರ ದೇಹ ಹೊಂದಿದ ಗೊಂಬೆ ತಯಾರಿಸುವಂತೆ ತಿಳಿಸಿದರು. ಆದರೆ ಆತ ಕೂಡ ಮಾಟೆಲ್‌ನ ನಿರ್ದೇಶಕರಂತೆ ಈ ಬಗ್ಗೆ ಉತ್ಸಾಹ ತೋರಲಿಲ್ಲ. 1956 ರಲ್ಲಿ ತಮ್ಮ ಮಕ್ಕಳಾದ ಬಾರ್ಬರಾ ಮತ್ತು ಕೆನೆತ್ ಅವರೊಂದಿಗೆ ಯೂರೋಪ್ ಪ್ರವಾಸ ಕೈಗೊಂಡ ರುತ್ ಹ್ಯಾಂಡ್ಲರ್ ಜರ್ಮನ್ ಗೊಂಬೆ ಬಿಲ್ವ್ ಲಿಲಿಯ ಬಗ್ಗೆ ಅರಿತರು. ಹ್ಯಾಂಡ್ಲರ್ ಮನಸ್ಸಿನಲ್ಲಿದ್ದ ದೊಡ್ಡ-ವಯಸ್ಸಿನ ಗೊಂಬೆಯಂತೆಯೇ ಇದ್ದುದನ್ನು ಕಂಡ ಹ್ಯಾಂಡ್ಲರ್ ಮೂರು ಗೊಂಬೆಗಳನ್ನು ಖರೀದಿಸಿದರು. ಅದರಲ್ಲಿ ಒಂದನ್ನು ತಮ್ಮ ಮಗಳಿಗೆ ಕೊಟ್ಟ ಆಕೆ ಉಳಿದವನ್ನು ಮಾಟೆಲ್ ಕಂಪೆನಿಗಾಗಿ ಕೊಂಡೊಯ್ದರು. ರೈನ್‌ಹರ್ಡ್ ಬ್ಯೂತಿನ್ ವೃತ್ತಪತ್ರಿಕೆ ಡೈ ಬಿಲ್ಡ್ ಜೈತುಂಗ್‌ ಗಾಗಿ ಬರೆದ ಕಾಮಿಕ್ ಸರಣಿ ಲಿಲಿ ಗೊಂಬೆಯ ಸೃಷ್ಟಿಗೆ ಪ್ರೇರಣೆ ನೀಡಿತ್ತು. 1955 ರಲ್ಲಿ ಲಿಲ್ಲಿ ಗೊಂಬೆ ಪ್ರಥಮ ಬಾರಿಗೆ ಜರ್ಮನಿಯಲ್ಲಿ ಮಾರಾಟವಾಯಿತು.ಮೊದಲು ದೊಡ್ಡವರೇ ಅದನ್ನು ಹೆಚ್ಚಾಗಿ ಕೊಂಡರೂ ಮಕ್ಕಳ ಮನಗೆಲ್ಲುವಲ್ಲಿ ಅದು ಯಶಸ್ವಿಯಾಯಿತು. ಆಕೆಗೆ ತೊಡಿಸುವ ಉಡುಪುಗಳು ಪ್ರತ್ಯೇಕವಾಗಿ ಲಭ್ಯ ಇದ್ದವು. ಅಮೆರಿಕಕ್ಕೆ ಹಿಂತಿರುಗಿದ ಹ್ಯಾಂಡ್ಲರ್ ಎಂಜಿನಿಯರ್ ಜಾಕ್ ರ್ಯಾನ್ ಅವರ ಸಹಾಯ ಪಡೆದು ಹೊಸ ಗೊಂಬೆ ತಯಾರಿಸಿ ಅದಕ್ಕೆ ತಮ್ಮ ಮಗಳು ಬಾರ್ಬರಾ ಹೆಸರನ್ನು ಹೋಲುವಂತೆ ಬಾರ್ಬಿ ಎಂಬ ಹೆಸರಿಟ್ಟರು. 9 ಮಾರ್ಚ್ , 1959ರಂದು ನ್ಯೂಯಾರ್ಕ್‌ನಲ್ಲಿ ನಡೆದ ಅಮೆರಿಕ ಅಂತರರಾಷ್ಟ್ರೀಯ ಗೊಂಬೆ ಮೇಳದಲ್ಲಿ ಈ ಗೊಂಬೆ ಮೊದಲ ಪ್ರದರ್ಶನ ಕಂಡಿತು. ಈ ದಿನದಂದೇ ಬಾರ್ಬಿಯ ಅಧಿಕೃತ ಹುಟ್ಟುಹಬ್ಬ ಆಚರಿಸಲಾಗುತ್ತಿದೆ.1964ರಲ್ಲಿ ಮಾಟೆಲ್ ಬಿಲ್ಡ್ ಲಿಲ್ಲಿ ಗೊಂಬೆ ಯ ಎಲ್ಲ ಹಕ್ಕುಗಳನ್ನು ಖರೀದಿಸಿ ನಂತರ ಅದರ ಉತ್ಪಾದನೆ ಸ್ಥಗಿತಗೊಳಿಸಲಾಯಿತು.ಮೊದಲ ಬಾರ್ಬಿ ಗೊಂಬೆಗೆ ಕಪ್ಪು ಬಿಳುಪು ಜೀಬ್ರಾ ಪಟ್ಟಿಗಳಿರುವ ಈಜುಡುಗೆ ತೊಡಿಸಿ ಜುಟ್ಟು ಕಟ್ಟಿದಂತೆ ಅಲಂಕರಿಸಲಾಗಿತ್ತು. ಹೊಂಬಣ್ಣ ಅಥವಾ ಕಂದು ಗೌರವರ್ಣದ ಜುಟ್ಟು ಕಟ್ಟಿಕೊಂಡ ಗೊಂಬೆಗಳು ಮಾರುಕಟ್ಟೆ ಯಲ್ಲಿ ಲಭ್ಯ ಇದ್ದವು. ಮಾಟೆಲ್ ವಸ್ತ್ರ ವಿನ್ಯಾಸಕ ಚಾರ್ಲಟ್ ಜಾನ್ಸನ್ ಅವರು ರೂಪಿಸಿದ ಉಡುಪುಗಳನ್ನು ಧರಿಸಿದ ಗೊಂಬೆಯನ್ನು “ಹದಿ ಹರೆಯದ ಫ್ಯಾಷನ್ ರೂಪದರ್ಶಿ” ಎಂದು ಬಿಂಬಿಸಿ ಮಾರಲಾಯಿತು. ಜಪಾನ್‌ನ ಗುಡಿ ಕಾರ್ಮಿಕರು ಕೈಯಲ್ಲಿ ಹೊಲಿದ ವಸ್ತ್ರಗಳನ್ನು ಧರಿಸುವ ಮೂಲಕ ಮೊದಲ ಬಾರ್ಬಿ ಗೊಂಬೆಗಳು ಜಪಾನ್‌ನಲ್ಲಿ ಮಾರಾಟವಾದವು. ಮೊದಲ ವರ್ಷ ಸುಮಾರು 350,000 ಬಾರ್ಬಿ ಗೊಂಬೆಗಳು ಮಾರಾಟವಾದವು. ವಯಸ್ಕ ರೀತಿಯ ಪೋಷಾಕು ಬಾರ್ಬಿಗೆ ಅಗತ್ಯ ಎಂದು ತಿಳಿದಿದ್ದ ಹ್ಯಾಂಡ್ಲರ್ ಅವರಿಗೆ ಮೊದಲ ಮಾರುಕಟ್ಟೆ ಸಂಶೋಧನೆಯಲ್ಲಿ ಗೊಂಬೆಯ ಉಬ್ಬಿದ ಎದೆಭಾಗದ ಬಗ್ಗೆ ಪೋಷಕರು ಅಸಂತೃಪ್ತಿ ಹೊಂದಿದ್ದಾರೆ ಎಂದು ತಿಳಿದು ಬಂತು. ಬಾರ್ಬಿಯ ಚಹರೆಯನ್ನು ಅನೇಕ ಬಾರಿ ಬದಲಾಯಿಸಲಾಗಿದ್ದು 1971ರಲ್ಲಿ ಆಕೆಯ ಕಣ್ಣುಗಳನ್ನು ವಾರೆನೋಟಕ್ಕೆ ಬದಲಾಗಿ ನೇರವಾಗಿ ನೋಡುವಂತೆ ಗಮನಾರ್ಹ ಮಾರ್ಪಾಡು ಮಾಡಲಾಯಿತು.ಟೆಲಿವಿಷನ್ ಜಾಹೀರಾತು ಬಳಸಿ ಮಾರುಕಟ್ಟೆ ತಂತ್ರದಲ್ಲಿ ಯಶಸ್ವಿಯಾದ ಮೊದಲ ಗೊಂಬೆ ಬಾರ್ಬಿಯಾಗಿದ್ದು ನಂತರ ಬಂದ ಗೊಂಬೆಗಳು ವ್ಯಾಪಕವಾಗಿ ಈ ತಂತ್ರವನ್ನು ಅನುಸರಿಸಿದವು. 150 ದೇಶಗಳಲ್ಲಿ ಈವರೆಗೆ ೧೦೦ ಕೋಟಿ ಬಾರ್ಬಿ ಗೊಂಬೆಗಳು ಮಾರಾಟವಾಗಿದ್ದು ಮಾಟೆಲ್ ಕಂಪೆನಿ ಹೇಳಿಕೊಂಡಿರುವಂತೆ ಪ್ರತಿ ಸೆಕೆಂಡಿಗೆ ಮೂರು ಬಾರ್ಬಿ ಗೊಂಬೆಗಳು ಮಾರಾಟವಾಗುತ್ತವೆಯಂತೆ. ಬಾರ್ಬಿ ಕೇವಲ ಗೊಂಬೆ ಹಾಗೂ ಅದರ ಉಡುಪಿನ ಮಾರಾಟಕ್ಕೆ ಸೀಮಿತವಾಗಿಲ್ಲ ಬಾರ್ಬಿ ಬ್ರಾಂಡ್‌ನ ಪುಸ್ತಕಗಳು, ಫ್ಯಾಷನ್ ವಸ್ತುಗಳು ಹಾಗೂ ವೀಡಿಯೊ ಗೇಮ್‌ಗಳು ಕೂಡ ಲಭ್ಯ ಇವೆ. ಬಾರ್ಬಿ ಅನೇಕ ಅನಿಮೇಷನ್ ಸರಣಿ ಚಿತ್ರಗಳಲ್ಲಿ ಭಾಗವಹಿಸಿದ್ದು 1999ರ ಟಾಯ್ ಸ್ಟೋರಿ 2 ಚಿತ್ರದಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದಾಳೆ. ಗೊಂಬೆ ಪ್ರಪಂಚದಲ್ಲಿ ಅತಿ ವಿರಳವಾಗಿ ಸಿಗುವಂತದ್ದು ಎಂದು ಗೌರವಿಸಲ್ಪಟ್ಟಿದೆ. 1974ರಲ್ಲಿ ನ್ಯೂಯಾರ್ಕ್ ಸಿಟಿಯ ಒಂದು ವಿಭಾಗವಾದ ಟೈಮ್ಸ್ ಸ್ಕ್ವೇರ್‌ಅನ್ನು ಒಂದು ವಾರದವರೆಗೆ ಬಾರ್ಬಿಬೊಲಿವರ್ಡ್ ಎಂದು ಮರುಹೆಸರಿಸಲಾಗಿತ್ತು. 1985ರಲ್ಲಿ ಕಲಾಕಾರ ಆಂಡಿ ವರೊಲ್ ಬಾರ್ಬಿಯ ವರ್ಣಚಿತ್ರವನ್ನು ರಚಿಸಿದ್ದನು ********************************************

ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ ಕತೆ Read Post »

ಇತರೆ

ಗೃಹಬಂಧ

ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು ಗೃಹಬಂಧ ರೇಶ್ಮಾ ಗುಳೇದಗುಡ್ಡಾಕರ್ ಕರೋನಾ ಎಂಬ ಅಂತಕದ ಅಲೆ ಹೊತ್ತು ಬಂದ ವರ್ಷ ಇಗ ಕಳೆಯುವ ದಿನದಲ್ಲಿ ನಾವು ಇದ್ದೇವೆ .ಹೊಸ ವರ್ಷದ ಬಳಿ ಸಾಗುತ್ತಾ ಇದ್ದೇವೆ . ಆಪಾರ ಭರವಸೆಗಳೊಂದಿಗೆ ಇಡೀ ಭೂಮಂಡಲವನ್ನೆ ತಲ್ಲಣಿಸಿದ ವರ್ಷವಿದು .ನಾವು ಕಂಡು ಕೇಳಿರದ ಸಂಗತಿಗಳು ನಮಗೆ ಎದುರಾದವು .ಸಂಕ್ರಾಮಿಕ ರೋಗದ ಅಬ್ಬರ ಓದಿದ್ದೆವು .ಅದರಲ್ಲೂ ಬಂಕಿಮ ಚಂದ್ರ ಚಟರ್ಜಿ ಅವರ ಆನಂದ ಮಠ ಓದಿದಾಗ ಸಂಕ್ರಾಮಿಕ ರೋಗದ ಕ್ರೂರ ,ಭೀಕರ , ಓದುಗರಿಗೆ ದರ್ಶನ ನೀಡುತ್ತದೆ ಮನಕಲಕುವಂತೆ ಎಳೆ ಎಳೆಯಾಗಿ ಬದುಕಿನ ಮಜಲುಗಳನ್ನು ವಿಸ್ತಾರಿಸುತ್ತದೆ .ಆನಂದ ಮಠ ಪುಸ್ತಕ ದಲ್ಲಿರುವಂತೆ ಯೇ .ನಾವು  ದಿನಗಳು ಅನುಭವಿಸಿದೆವು ಅದನ್ನು ಅನುಭವಿಸುತ್ತಲೇ ಆನಂದಮಠ ಓದಿದೆ .ಅದು ಬೇರೆ ವಿಚಾರ .     ಈ ಗೃಹಬಂಧ ಎಂಬ ‌ವಿಶೇಷ ಶಬ್ದದ ಅರಿವು – ಆಳ‌.ಅದರ ಸೌಂದರ್ಯ ಎಲ್ಲವು ಸ್ತೂಲವಾಗಿ ಪರಿಚಯವಾದವು”  ಸ್ವತಂತ್ರ್ಯ ” ಎಂಬ ಪದ ಬಹಳ ಕಾಡಿತು .   ಇದು ಎಲ್ಲರಿಗು ಒಂದೇ ವಿಧವಾದ ಅನುಭವ ನೀಡಿಲ್ಲ ಈ ವರ್ಷ .ವಿಧ ವಿಧವಾದ ಅನುಭವದ ಬುತ್ತಿ ಎಲ್ಲರ ಬಳಿಯು ಇದೆ . ಕೊಡಿ ಬಾಳುವ ಹಂಚಿತಿನ್ನುವ , ಕ್ಷಣ  ಕೆಲವರಿಗಾದರೆ ,ಹಸಿವಿನಿಂದ ಒದ್ದಾಡಿದ  ದಿನಗಳು ಹಲವರಿಗೆ , ಅರಾಮ್ ಅಗಿ ಮನೆಯಲ್ಲೆ ಕುಳಿತು ಕೆಲಸ ಮಾಡಿ ಪಗಾರ ಎಣಿಸಿದರೆ , ಇದ್ದ ಪುಟ್ಟ ಕೆಲಸವೂ ಕಳೆದುಕೊಂಡು ಲಕ್ಷಗಟ್ಟಲೇ ಕಾರ್ಮಿಕರು ತಮ್ಮ ಸ್ವಗ್ರಾಮಕ್ಕೆ ಮರಳಿದರು ಸಗರೂಪಾದಿಯಲ್ಲಿ ….   ತಮ್ಮ ಹಸು ಮಕ್ಕಳ ಕಟ್ಟಕೊಂಡು ..        ಇನ್ನು ವಿದ್ಯಾರ್ಥಿಗಳು  ಮುಗಿಯಲಾರದ ರಜೆ ಸಿಕ್ಕರು ಆಡಲು ಅಂಗಳ ಇಲ್ಲ ! ಮುಚ್ಚಿದ ರಸ್ತೆ ಬದಿಯ ಅಂಗಡಿಗಳು ,ಹಲವರ ಬಾಯಿ ಕೆಟ್ಟಿತು ..!  ಹೀಗೆ ಅನೇಕ ಸಂಗತಿಗಳು ಎದುರಾದವು ಜೊತೆಗೆ .  ಈ ವರ್ಷ ಮತ್ತೊಂದು ಸಂತಸದ ಸುದ್ದಿ ಹಬ್ಬಿಸಿತು ಸರಕಾರಿ ಶಾಲೆಗಳತ್ತ  ಪೋಷಕರು ಮುಖಮಾಡಿದರು ! ಎಂಬುದು . ಆದರೆ ಇನ್ನು ಶಿಕ್ಷಣ ಯಕ್ಷ ಪ್ರಶ್ನೆ ಯಾಗಿ ಉಳಿದಿದೆ…..       ಈ ಕರೋನ ಕಲಿಸಿದ ಪಾಠ ಹಲವು ಭೋದಿಸಿದ ತತ್ವ ಹಲವು  .ಬದುಕಿಗೆ ಪ್ರೀತಿ ಬೇಕೇ ಹೊರತು ಹಣ ,ಅಧಿಕಾರ ಅಲ್ಲ ಎಂಬ ಸ್ಪಷ್ಟ ನೀತಿ ತುಸು  ಹೆಚ್ಚಾಗಿಯೇ ತಿಳಿಸಿದೆ . ಮುಂದಿನ ದಿನಗಳು ಕರೋನಾ ಮತ್ರ ಅಲ್ಲ ನಮ್ಮೊಳಗಿನ ಅಪಾರವಾದ ಈರ್ಷೆಯ ಪರ್ವತ ವು ಮರೆಯಾಗಿ ಹೋಗಲಿ ಎಂಬ ಬಹುದೊಡ್ಡ  ಭರವಸೆ ಇದೆ !  ಈ ನವ ವರ್ಷದಲ್ಲಿ . ಮರೆತ ಕೆಲಸ ಮಾಡುವಂತೆ , ಕನಸುಗಳು ಸಾಕಾರಗಳ್ಳುವಂತೆ ಜಡವಾದ ಮನಕ್ಕೆ ನವ ಚೈತನ್ಯವ ನೀಡಲಿ  ಎಂದು ಮುಂಬರುವ ವರ್ಷವನ್ನು  ನಾವು ಸ್ವಾಗತಿಸ ಬೇಕಿದೆ ಸರಳವಾಗಿ . ***************************************

ಗೃಹಬಂಧ Read Post »

ಇತರೆ

2020 ಎಂಬ ‘ಮಾಯಾವಿ ವರ್ಷ’

ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು 2020 ಎಂಬ ‘ಮಾಯಾವಿ ವರ್ಷ’ ಚಂದ್ರ ಪ್ರಭಾ.ಬಿ. . 2020 ಎಂಬ ‘ಮಾಯಾವಿ ವರ್ಷ’  ಕುದುರೆಯಂತೆ ಕೆನೆಯುತ್ತ ಆಗಮಿಸಿ ವ್ಯಾಘ್ರನಾಗಿ ಮನುಕುಲವನ್ನು ನುಂಗಿ ಆಪೋಶನ ತೆಗೆದುಕೊಂಡುದು ಇಷ್ಟರಲ್ಲೇ ಇತಿಹಾಸದ ಪುಟ ಸೇರಲಿದೆ. ಆಗಮನಕ್ಕೂ ಮುನ್ನ ಆ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ಬಗೆ ವಿಸ್ಮಯಕಾರಿ ನಿರೀಕ್ಷೆ ಇದ್ದುದು ನಿಜ. T20 ಎಂಬ ಚುಟುಕು ಕ್ರಿಕೆಟ್ ಮೂಡಿಸಿದ ಸಂಚಲನ ಅದಕ್ಕೆ ಕಾರಣ. T20 ಮನೆ ಮನ ಮೈದಾನ ಪ್ರವೇಶಿಸಿದ ಹೊಸತರಲ್ಲಿ ಇಷ್ಟು ಕಡಿಮೆ ಓವರ್ ನಲ್ಲಿ ಅದೆಂಥ ಆಟ? 50 ಓವರಿನಲ್ಲಿ ನಿಜವಾದ ಆಟ ಶುರುವಾಗುವುದು 20 ಓವರ್ ನಂತರ..ಅಂಥದರಲ್ಲಿ ಕೇವಲ 20 ಓವರ್ ಆಟ ಹೇಗಿದ್ದೀತು ಎಂಬುದು ಕಲ್ಪನೆಗೂ ನಿಲುಕದಂತಿತ್ತು.. ಆಟದ ಜಟಾಪಟಿ ಕಣ್ಣಿಗೆ ಕಟ್ಟುವಂತೆ ಸುಳಿದಾಡತೊಡಗಿದಂತೆಲ್ಲ ಆಟದ ಕ್ರೇಜ್ ಇನ್ನಿಲ್ಲದಂತೆ ಹೆಚ್ಚಿತು. ಸಿಕ್ಸರು,ಬೌಂಡರಿಗಳ ಭರ್ಜರಿ T20 ಆಟದ ಹಾಗೇ 2020 ರ ವರ್ಷ ನೋಡನೋಡುತ್ತಲೇ ಸರಿದು ಹೋಗುವ ಮೊದಲು ಬದುಕಿಗೆ ಭರ್ಜರಿ ಬಂಪರ್ ಕೊಟ್ಟೇ ಹೋಗುತ್ತದೆ ಎಂಬ ಉತ್ಸಾಹ, ಉಲ್ಲಾಸಭರಿತ ಚರ್ಚೆ ವಿದ್ಯಾರ್ಥಿಮಿತ್ರರು, ಸಹೋದ್ಯೋಗಿಗಳ ನಡುವೆ ಹರಿಯುತ್ತ ಇರುವಂತೇ ವರ್ಷದ ಮೂರನೇ ತಿಂಗಳ ಇಪ್ಪತ್ಮೂರನೇ ದಿನ ಬದುಕು ಲಾಕ್ಡೌನ್ ಆಗಿತ್ತು!!  ಅದಕ್ಕೆ ಕಾರಣ ಏನೇ ಆಗಿರಬಹುದು. ಆದರೆ ಪರಿಣಾಮ ಮಾತ್ರ ಕಂಡು ಕೇಳರಿಯದಂಥದು. ಚಲಿಸುತ್ತಿರುವ ಸಿನಿಮಾದ ದೃಶ್ಯವೊಂದು ಗಕ್ಕನೆ ನಿಂತು ಸ್ಟಿಲ್ ಆದಂತೆ ಬದುಕು ಚಲನೆ ತೊರೆಯಿತು. ಆಗಲೇ ಆರಂಭವಾದ ಪರೀಕ್ಷೆಗಳು ಮುಂದೂಡಲ್ಪಟ್ಟವು. ಇನ್ನೂ ಆರಂಭವಾಗಬೇಕಿದ್ದ ಪರೀಕ್ಷೆ ಅನಿಶ್ಚಿತತೆಗೆ ದೂಡಲ್ಪಟ್ಟವು. ಹತ್ತಾರು ಕಾರಣದಿಂದ ಊರು ತೊರೆದ ಜೀವಗಳಿಗೆ ತವರ ಸೇರುವ ತುಡಿತ ಕಾಡಿತು. ನೂರಾರು ಸಾವಿರಾರು ಮೈಲಿ ನಡೆದು ಸೋರುವ ಹಿಮ್ಮಡಿ, ಸೋತ ದೇಹ ಹೊತ್ತು ಉಸಿರು ಬಿಟ್ಟರೂ ತವರ ನೆಲದಲ್ಲಿ ಬಿಟ್ಟೇನು ಎನುವ ಹಂಬಲದಲ್ಲಿ ಜೀವಗಳು ಬಸವಳಿದವು. ಬಸುರಿ ಬಾಣಂತಿಯರು, ಎಳೆಯ ಜೀವಗಳು, ವೃದ್ಧರು ದಾರಿ ಮಧ್ಯೆ ಅಸು ನೀಗಿದರು. ರೈತಾಪಿ ಜನರು ತಮ್ಮ ಬೆಳೆಗೆ ಪೇಟೆ ಇಲ್ಲದೇ ಕಂಗಾಲಾದರು. ಕಾರ್ಮಿಕರು ಬೀದಿಗೆ ಬಿದ್ದರು. ಟೊಮ್ಯಾಟೊ, ಕೋಸು, ತರಾವರಿ ಬೆಳೆಗಳನ್ನು ಬೀದಿಯಲ್ಲಿ ಎಸೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಯ್ತು. ಮೊದಲೇ ಕಂಗೆಟ್ಟು ಹೋದ ಬದುಕಿನ ಬಂಡಿ ಮತ್ತಷ್ಟು ಹಳ್ಳ ಹಿಡಿಯಿತು. ನಾಳೆ ಹೇಗೆ ಎಂಬ ಚಿಂತೆಗಿಂತ ” ಇಂದು ” ಇನ್ನಿಲ್ಲದಂತೆ ಎಲ್ಲರನ್ನೂ ಕಾಡಿತು. ತೆರೆದರೆ ಬಾಗಿಲ ಸಂದಿಯಿಂದಲೂ ವೈರಸ್ಸು ಮನೆ ಸೇರೀತು ಎಂಬ ಆತಂಕದಲ್ಲಿ ಸರಿಯಿತು ತಿಂಗಳೊಪ್ಪತ್ತು. ಕೈಯಲ್ಲಿದ್ದ ಕಾಸು ಕರಗಿ ತಾತ್ಕಾಲಿಕ ನಿರುದ್ಯೋಗ ಕಾಡತೊಡಗಿತು. ಹಲವರಿಗೆ ಅದೇ ಶಾಶ್ವತವೂ ಆಗಿ ಪರಿಣಮಿಸಿ ಬದುಕು ದುರ್ಭರವಾಯ್ತು. ದಿಕ್ಕೆಟ್ಟ ಪ್ರಭುತ್ವ ಏನು ಮಾಡಲೂ ತೋಚದೆ ಹೆಜ್ಜೆ ಹೆಜ್ಜೆಗೂ ಎಡವಿ ಟೀಕೆಗೊಳಗಾಯ್ತು. ತಿಂಗಳುಗಳು ಕಳೆದು ಕಾರ್ಪೊರೇಟ್ ಜಗತ್ತಿನ ಎಲ್ಲ ಸನ್ಮಿತ್ರರು ಸೇಫ್ ಆದ ನಂತರ ಲಾಕ್ಡೌನ್ ರೂಪಾಂತರ ಹೊಂದಿ ಸುಳಿದಾಡತೊಡಗಿತು. ಜನಸಾಮಾನ್ಯನ ಗೋಳು ಅಂತ್ಯವಿಲ್ಲದ್ದಾಯ್ತು. ಹೊರ ಬಿದ್ದರೆ ಬೆತ್ತದ ರುಚಿ ನೋಡಬೇಕು. ಮನೆ ಒಳಗೆ ಕುಳಿತರೆ ದುಡಿವೆಯಿಲ್ಲ. ಹೊಟ್ಟೆ ಹಸಿವಿಗೆ ಚೀಲದಲ್ಲಿ ಏನಾದರೂ ತುಂಬಲೇಬೇಕು. ತುಂಬಲೇನೂ ಇಲ್ಲ! ಆ ಓಣಿಯ ಆತ ಈ ಓಣಿಯ ಈಕೆ.. ಚಿಕ್ಕ ವಯಸ್ಸಿನವರು, ವಯಸ್ಸಾದವರು ನೋಡ ನೋಡುತ್ತ ವೈರಸ್ಸಿಗೆ ಆಹುತಿಯಾದರು. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದವರ ಹೆಸರಿನಲ್ಲಿ ಹಲವರ ಜೇಬು ತುಂಬಿದವು. ಖಾಸಗಿ ಆಸ್ಪತ್ರೆಗಳ ಬಿಲ್ಲು ವೈರಸ್ ದಾಳಿಗಿಂತ ಭಾರವೆನಿಸಿತು. ಕಾರಣವಿಲ್ಲದೆ ಸಮುದಾಯವೊಂದನ್ನು ಟೀಕೆಗೆ ಗುರಿಪಡಿಸಿದರು ಹಲವರು. ನರಕವಾಯಿತು ಬದುಕು. ಶಾಲೆ, ಕಾಲೇಜು, ಕಚೇರಿ, ಮಿಲ್ಲು, ಫ್ಯಾಕ್ಟರಿ ಎಲ್ಲ ಕದ ಮುಚ್ಚಿದವು. ಗಿಜಿಗುಡುವ ಸಂತೆ, ಪೇಟೆ, ಚೌಕ, ವೃತ್ತಗಳು ನಿಶ್ಶಬ್ದವಾದವು. ಉದ್ದಕ್ಕೆ ಚಾಚಿಕೊಂಡ ನೀರವ ರಸ್ತೆಗಳಲ್ಲಿ ಕಾಡಿನ ಪ್ರಾಣಿಗಳು ನಿರಾತಂಕವಾಗಿ ಸಂಚಾರಗೈಯಲು ತೊಡಗಿದವು. ಫೇಸ್‌ಬುಕ್, ಟ್ವಿಟರ್ ನಂತಹ ಮಾಧ್ಯಮಗಳು ಸುರಕ್ಷಿತ ಅಂತರ ಕಾಯ್ದುಕೊಂಡೇ ಜನರನ್ನು ಬೆಸೆಯುವ ಜನಪ್ರಿಯ ಮಾಧ್ಯಮಗಳಾದವು. ಉದ್ಯೋಗಸ್ಥ ಹೆಣ್ಮಕ್ಕಳಿಗೆ ಅಡುಗೆ ಮನೆಯಲ್ಲಿ ಒಂದಷ್ಟು ಹೊತ್ತು ನಿರಾತಂಕ,   ” ಕ್ವಾಲಿಟಿ ” ಸಮಯ ಕಳೆಯುವ ಅವಕಾಶ ನಿರಾಯಾಸವಾಗಿ ಒದಗಿತು. ಒಂದರ್ಥದಲ್ಲಿ ಬಗೆ ಬಗೆ ತಿಂಡಿ ತಿನಿಸು ಮಾಡಿ ಪರಿವಾರದೊಂದಿಗೆ ಸಂಭ್ರಮಿಸುವ ಅನಿರೀಕ್ಷಿತ ಲಾಟರಿ ದಕ್ಕಿತು. ಯೂ ಟ್ಯೂಬ್ ಗೆಳತಿಯರ ನೆರವಿನಿಂದ ದಿನಕ್ಕೊಂದು ಬಗೆಯ ರೆಸಿಪಿ ಪ್ರಯೋಗಗಳು ಶುರುವಿಟ್ಟುಕೊಂಡವು. ಪ್ರೀತಿ ಪಾತ್ರರ ಆರೋಗ್ಯ ಇನ್ನಿಲ್ಲದಂತೆ ಸುಧಾರಿಸಿತು. ಬೇಕಿದ್ದರೂ ಬೇಡದಿದ್ದರೂ ಪ್ರತಿಯೊಬ್ಬರೂ ಕೆಲವಷ್ಟು ಕೆ.ಜಿ. ತೂಕ ಹೆಚ್ಚಿಸಿಕೊಳ್ಳುವಂತಾಯ್ತು. ಒಂದೇ ಪೇಜಿನಲ್ಲಿ ಬಗೆ ಬಗೆ ವ್ಯಂಜನಗಳು ಸಚಿತ್ರ ಪ್ರಕಟವಾಗುವಾಗಲೇ ಹಸಿದ ಹೊಟ್ಟೆಯ, ನಿಸ್ತೇಜ ಕಂಗಳ ಕರುಳು ಹಿಂಡುವ ಚಿತ್ರಗಳೂ ಪ್ರಕಟವಾದವು. ಸಹೃದಯರು ಹಲವರು ಗುಂಪು ಕಟ್ಟಿಕೊಂಡು ಹಸಿದ ಹೊಟ್ಟೆಗೆ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ತೋರಿದರು. ಮೂರು ಹೊತ್ತು ಅಡುಗೆ ಮನೆಯಲ್ಲಿ ಸವೆಯುವುದು ಹೆಂಗಳೆಯರಿಗೆ ಬೇಸರಿಕೆಯಾಯ್ತು. ವಿಶ್ವದಾದ್ಯಂತ ನದಿ, ಸರೋವರ, ನಾಲೆಗಳ ನೀರು ಜನ ಸಂಪರ್ಕದಿಂದ ದೂರಾಗಿ ಮಾಲಿನ್ಯ ಕಳಚಿಕೊಂಡು ಫಳಫಳಿಸಿದವು. ದಕ್ಷಿಣ  ಉತ್ತರ ಧ್ರುವದ ತುತ್ತ ತುದಿ ಶುಭ್ರಗೊಂಡವು, ದೆಹಲಿಯಂಥ ನಗರಗಳು ತುಸುವಾದರೂ ಮಾಲಿನ್ಯಮುಕ್ತವಾದೆವು, ಗಂಗೆ ಯಮುನೆಯರ ಶತಮಾನದ ಕೊಳೆ ಕಳೆಯಿತೆಂದು ಪತ್ರಿಕೆಗಳಲ್ಲಿ ವರದಿಯಾಯ್ತು. ಗೆಳತಿಯರು ಅಚ್ಚರಿ ಮೂಡಿಸುವ ಅನುಭವ ಹಂಚಿಕೊಂಡರು. ನೌಕರಿ ಅಂಬೊ ಚಾಕರಿ ಶುರುವಾದಾಗಿನಿಂದ ಶುರುವಾದ ಬಸ್ ಪ್ರಯಾಣ ತಂದ ಬೆನ್ನು ನೋವು ತಿಂಗಳಾನುಗಟ್ಚಲೆ ವಿರಾಮದಿಂದ ಕಡಿಮೆಯಾಗಿತ್ತು ಗೆಳತಿಗೆ. ಬಿದ್ದು ಕಾಲಿಗೆ ಪ್ಲಾಸ್ಟರ್ ಹಾಕಿಸಿಕೊಂಡ ಮತ್ತೊಬ್ಬಾಕೆಗೆ ಕಾಲಿನ ಉಳುಕು ಅಕ್ಷರಶಃ ಮಾಯವಾಗಿತ್ತು. ಪಾಠಗಳಿಲ್ಲದೆ ಸೊರಗಿದ ತರಗತಿಗಳಿಗೆ ತಾತ್ಕಾಲಿಕ ಪರ್ಯಾಯ ಮಾರ್ಗಗಳು ಒದಗಿ ಬಂದವು. ಪರಿಪೂರ್ಣ ಅಲ್ಲದಿದ್ದರೂ ಅಷ್ಟೋ ಇಷ್ಟೋ ಆಸರಾಯಿತು ಆನ್‌ಲೈನ್. ನಗರಗಳ ನೌಕರಿ ತೊರೆದು ಹಳ್ಳಿಗಳಿಗೆ ಹಿಂದಿರುಗಿದ ಯುವಕರು ಪಿಕಾಸಿ, ಹಾರೆ, ಗುದ್ದಲಿ ಹಿಡಿದು ಬಾವಿ,  ಹಳ್ಳ,  ಕಾಲುವೆ ತೋಡಿದರು. ಒಕ್ಕಲುತನದಲ್ಲಿ ಬದುಕಿದೆ ಎಂದು ಮನಗಂಡರು. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕಳಕೊಂಡ  ಹಲವಾರು ಮಿತ್ರರು ತಳ್ಳು ಗಾಡಿಯಲ್ಲಿ ಹಣ್ಣು ತರಕಾರಿ ಮಾರಾಟಕ್ಕೆ ತೊಡಗಿದರು. ಅಕ್ಷರಶಃ ಗುಡಿ ಕೈಗಾರಿಕೆ ಎಂಬುದು ಸಾಕಾರಗೊಂಡಿತು. ಹಲವರು ಗೃಹ ಉದ್ಯೋಗ ಆರಂಭಿಸಿದರು.  ಇಲೆಕ್ಟ್ರಾನಿಕ್ ಮಾಧ್ಯಮಗಳನ್ನು ಮಾರಾಟಕ್ಕೆ ವೇದಿಕೆಯಾಗಿ ಬಳಸಿಕೊಂಡರು. ಅಂಚೆಯಣ್ಣ ಹೆಚ್ಚೆಚ್ಚು ಆಪ್ತನಾದ. ಆಡಂಬರ ತೆರೆಗೆ ಸರಿದು ಖರ್ಚಿಲ್ಲದ ಮದುವೆಗಳಾದವು. ಮದುವೆಗೆ ಕರೆಯದಿದ್ದರೆ ಯಾರೂ ಅನ್ಯಥಾ ಭಾವಿಸುವುದಿಲ್ಲ ಎಂಬುದು ಎಲ್ಲರಿಗೂ ಸುಲಭವಾಗಿ ಅರ್ಥವಾಯಿತು. ವೈದ್ಯೆ ಗೆಳತಿಗೆ ಫೋನ್‌ ಸಂಭಾಷಣೆಯಲ್ಲಿ ಕೇಳಿದ್ದೆ, “ಈ ಲಾಕ್ಡೌನ್ ಯಾವೆಲ್ಲ ರೀತಿ ಪರಿಣಾಮ ಬೀರಬಹುದು” ಅಂತ. “ಗಾಯ ಅಳಿದರೂ ಅಳಿಯದೇ ಉಳಿವ ಅದರ ಕಲೆಗಳಂತೆ ಶಾಶ್ವತ ವೈಕಲ್ಯ ಉಳಿಯುತ್ತೆ ಕಣೇ” ಅಂತ ನೋವಿನಿಂದ  ನುಡಿದಿದ್ದಳಾಕೆ. ಅದು ದಿನ ದಿನವೂ ಮನದಟ್ಟಾಗುತ್ತ ಸಾಗಿತು. ಎಂದಿಗಿಂತ ಹೆಚ್ಚು ಆತಂಕಕಾರಿ ಎನಿಸುವ  ಆರ್ಥಿಕತೆ, ನಿರುದ್ಯೋಗ ಹೆಗಲೇರಿ ಕುಳಿತಿವೆ. ಕೊರೊನಾವನ್ನು  ಹಿಂಬಾಲಿಸಿ ಬಂದ ಪ್ರವಾಹ ಗಾಯದ ಮೇಲೆ ಬರೆ ಎಳೆದಿದೆ. ಬೇರೆ ಯಾವುದೂ ಅಲ್ಲ ಕೇವಲ ಸೌಹಾರ್ದ, ಭೃಾತೃತ್ವ, ಹೊಂದಾಣಿಕೆ ಬದುಕು ಕಟ್ಟಿಕೊಳ್ಳುವ ದಾರಿಗಳು ಎಂಬುದು ಎದೆಗಿಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯರ ಮುಖವಾಡ ಕಳಚಿದೆ. ತಿದ್ದಿಕೊಳ್ಳಲು ಇರುವ ದಾರಿ ಹುಡುಕುತ್ತ  ನಿಜ ಅರ್ಥದಲ್ಲಿ ಬದುಕು ಕಟ್ಟಿಕೊಳ್ಳುವ ಹೊಣೆ ಹೊತ್ತು 2021 ನ್ನು ಸ್ವಾಗತಿಸಬೇಕಿದೆ. ***********

2020 ಎಂಬ ‘ಮಾಯಾವಿ ವರ್ಷ’ Read Post »

ಇತರೆ, ಜೀವನ

ಹೊಸ ಭರವಸೆಯೊಂದಿಗೆ..

ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು ಹೊಸ ಭರವಸೆಯೊಂದಿಗೆ..    ಜ್ಯೋತಿ  ಡಿ.ಬೊಮ್ಮ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಿಂದಿರುಗಿ ನೋಡಿದಾಗ ನಿಟ್ಟುಸಿರಿನೊಂದಿಗೆ ವಿಷಾದದ ವಿಷಣ್ಣ ನಗೆಯೊಂದು ಮೂಡುತ್ತದೆ ಕಂಡು ಕಾಣದಂತೆ. 2020 ನೆಯ ವರ್ಷವನ್ನು ಕೂಡ ಒಂದು ಹೊಸ ಭರವಸೆಯಿಂದಲೆ ಬರಮಾಡಿಕೊಂಡಿದ್ದೆವು.ಹಿಂದೊಂದು ಕಾಣದ ಸಾಂಕ್ರಾಮಿಕ ಪಿಡುಗಿನ ಭಯಾನಕ ರೂಪ ಇಡೀ ಮನಕುಲವನ್ನೆ ತಲ್ಲಣಿಸಿಬಿಟ್ಟಿತು. ಎಂಥ ಅನಿಶ್ಚಿತತೆಯ ವಾತಾವರಣ ,ಇಡೀ ಜಗತ್ತೇ ಸ್ಥಬ್ದವಾದಂತಹ ಅಸಹಾಯಕ ಸ್ಥಿತಿ.ರೋಗದ ಭಯ ಎಷ್ಟು ವ್ಯಾಪಿಸಿಬಿಟ್ಟಿತೆಂದರೆ ವೈದ್ಯಕೀಯ ಕ್ಷೇತ್ರವು ಕಂಪಿಸಿತು. ಯಾರಿಗೆ ಯಾವಾಗ ರೋಗ ತನ್ನ ಆಪೋಷನಕ್ಕೆ ತೆಗೆದುಕೊಳ್ಳುವದೊ ಎಂಬ ಭಯದಲ್ಲೆ ದಿನಕಳೆದಿದ್ದಾಯಿತು.ಒಬ್ಬರನ್ನೊಬ್ಬರು ಸದಾ ಅನುಮಾನದಿಂದ ನೋಡುತ್ತ ಸಂಬಂಧಗಳನ್ನೆಲ್ಲ ದೂರಗೊಳಿಸಿ ಒಂದು ಸೀಮಿತ ವಲಯದಲ್ಲೆ ಪರಸ್ಪರರಿಂದ ದೂರವಾಗಿ ಬದುಕಿದ ಆ ಕ್ಷಣಗಳು ಈಗ ನೆನಪಿಸಿಕೊಂಡಾಗ ಮತ್ತೆ ವಿಷಾದ ಕಾಡುತ್ತದೆ.ಕರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಅಷ್ಟೊಂದು ವೈಭವಿಕರಿಸಿ ಭಯಗೊಳಿಸುವ ಅಗತ್ಯವಿತ್ತೆ ..ಎಂಬ ಪ್ರಶ್ನೆಗೆ ಈಗ ಉತ್ತರ ಬೇಕಾಗಿಲ್ಲದಿರಬಹುದು.ಎಕೆಂದರೆ ಈಗ ನಿಧಾನಕ್ಕೆ ನೇಪಥ್ಯಕ್ಕೆ ಸರಿಯುತ್ತಿರುವ ಅದನ್ನು ಮತ್ತೆ ನೆನಪಿಸಿಕೊಳ್ಳದಿರುವದೆ ಸೂಕ್ತ.  ಆದರೆ ಆ ಸಂದರ್ಬದಲ್ಲಿ ಜನರಿಗೆ ಕಾಡಿದ ಒಂಟಿತನ ,ಖಿನ್ನತೆ , ನೆನೆಸಿ ಕೊಂಡರೆ ಮನ ಕಂಪಿಸದೆ ಇರದು. ಮೊದಮೊದಲು ಲಾಕ್ ಡೌನ್ ಅನ್ನು ಸಂಭ್ರಮಿಸಿದವರೆ ಎಲ್ಲರು. ಮನೆಯ ದಿಗ್ಬಂಧನ ಮುಂದುವರೆದಂತೆ ಅದರ ಪ್ರತಿಕೂಲ ಪರಿಣಾಮ ಎಲ್ಲಾ ಕ್ಷೇತ್ರಗಳ ಮೇಲೂ ತೊರತೊಡಗಿತು..ಕಾರ್ಮಿಕರು ಇನ್ನಿಲ್ಲದಂತೆ ತೊಂದರೆಗೊಳಗಾದರು.ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳು ಈಗಲೂ ಪರದಾಡುತಿದ್ದಾರೆ. ಕರೋನಾ ಮಾರಿಯೂ ಪ್ರತಿಯೊಬ್ಬರ ಶಿಸ್ತು ಬದ್ಧ ಜೀವನ ಕ್ರಮವನ್ನೆ ಕಸಿದುಕೊಂಡು ಬಿಟ್ಟಿತು. ಒಂದೊಂದು ಕಷ್ಟವು ಒಂದೊಂದು ಪಾಠ ಕಲಿಸಿಯೆ ಹೋಗುತ್ತದೆ.ಕರೋನಾ ಕಾಲಘಟ್ಟದ ಸಂದರ್ಭ ವೂ  ನಮಗೆ ಅನೇಕ ಪಾಠ ಕಲಿಸದೆ ಇರಲಿಲ್ಲ.ಮೊಟ್ಟ ಮೊದಲು ಮಾನವನ ಅತೀ ವೇಗದ ಬದುಕಿಗೊಂದು ಬ್ರೇಕ್ ಹಾಕಿತು.ಧಾವಂತ ಬದುಕಿನಲ್ಲಿ ಯಾಂತ್ರಿಕವಾಗಿದ್ದ ಸಂಭಂದಗಳು ಮತ್ತೆ ಬೆಸೆದವು ,ಬಾಂಧವ್ಯದ ಸೆಲೆ ವೃದ್ಧಿಸಿತು. ಮನೆಯಲ್ಲಿ ತಯ್ಯಾರಿಸಿ ಸೇವಿಸುವ ಆಹಾರದ ಮಹಾತ್ಮೆಯ ಅರಿವಾಯಿತು.ಪ್ರಕೃತಿ ಮತ್ತೆ ನಳನಳಿಸಿತು ಮಾಲಿನ್ಯವಿಲ್ಲದೆ.ಹಣ ಒಂದೇ ಪ್ರತಿಯೊಂದಕ್ಕೂ ಪರಿಹಾರವಲ್ಲ ಎನ್ನುವದು ಈ ಕರೋನಾ ಕಲಿಸಿಕೊಟ್ಟಿತು. 2020 ರ  ಕಾಲಘಟ್ಟದಲ್ಲಿ ಕರೋನಾ ಸೋಂಕಿಗೆ ಒಳಗಾದ ಕುಟುಂಬಗಳಲ್ಲಿ ನಮ್ಮದು ಒಂದು.ಆ ಸಂದರ್ಭದಲ್ಲಿ ನಾನು ಅನುಭವಿಸಿದ ತವಕ ತಲ್ಲಣಗಳು ಅಪಾರ.ರೋಗ ಲಕ್ಷಣಗಳು ಅಷ್ಟಾಗಿ ಭಾದಿಸದಿದ್ದರೂ ಅದರ ಸುತ್ತಲಿನ ಸರ್ಕಾರದ ಕಟ್ಟಳೆಗಳು ನಿಜವಾಗಿಯು ನಲುಗಿಸಿದ್ದವು. ಮುಂದೆಯೂ ಅದರೊಂದಿಗೆ ಬದುಕುವ ಅನಿವಾರ್ಯತೆ ಪ್ರತಿಯೊಬ್ಬರಿಗೂ. ಅಂತರ ಮತ್ತು ಮುಖಗವಸು ಕಡ್ಡಾಯವೆ. ಒಂದೂ ರೀತಿಯಲ್ಲಿ ಕರೋನಾ ಪಿಡುಗು ನಮ್ಮನ್ನು ಕಾಡಿದಷ್ಟು ಬದುಕುವ ಛಲ ಮತ್ತು ಆತ್ಮವಿಶ್ವಾಸ ಹೆಚ್ಚಿಸಿತು.ಮುಂದೆಯೂ ಅದರೊಂದಿಗೆ ಬದುಕಬೇಕು ,ಬದುಕೋಣ ,ಮತ್ತೊಂದು ಹೊಸವರ್ಷವನ್ನು ಸ್ವಾಗತಿಸುತ್ತ..ಹೊಸ ಭರವಸೆಯೊಂದಿಗೆ.. ಹೊಸ ಬೆಳಕಿನೊಂದಿಗೆ. **************************************   

ಹೊಸ ಭರವಸೆಯೊಂದಿಗೆ.. Read Post »

You cannot copy content of this page

Scroll to Top