ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಮಾತು ಕಳೆದುಕೊಂಡಿದ್ದೇನೆ ಕನ್ನಡ:ಆನಂದ್ ಋಗ್ವೇದಿ ಇಂಗ್ಲೀಷ್: ನಾಗರೇಖಾ ಗಾಂವಕರ್ ಮಾತಾಡುವುದಿಲ್ಲ ಎಂದಲ್ಲ ಆಡುವ ಪ್ರತಿ ಮಾತಿನ ಹಿನ್ನೆಲೆ ಚರಿತ್ರೆ ಪರಂಪರೆ ಎಲ್ಲವನ್ನೂ ಶೋಧಿಸಿ ತಮಗೆ ಬೇಕಾದುದು ಸಿಕ್ಕದಿದ್ದರೆ ಸಂ- ಶೋಧಿಸಿ ತಮಗೆ ಹೊಳೆದ ಹೊಸ ಅರ್ಥ ಲಗತ್ತಿಸುವ ಅರ್ಥಧಾರಿಗಳ ಅನರ್ಥದಿಂದಾಗಿ- ನಾನು ಮಾತಾಡಿದರೆ: ಭವಿ ಭಕ್ತ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ನನ್ನ ಬಿಡದೇ ಬ್ರಾಹ್ಮಣ ಬೀದಿಗಿಳಿದ ಸಹವರ್ತಿಗಳ ಬೆನ್ನಿಗೆ ನಿಂತರೂ ಶೋಷಕ ಪಕ್ಷ- ಪಾತಿ ಮತ ಧರ್ಮ ನಿರಪೇಕ್ಷೆಯಿಂದ ದರ್ಗಾದಲ್ಲಿ ಸಕ್ಕರೆ ಓದಿಸಿ ಬಂದರೂ ಕೋಮು ವಾದಿ ಜನ ವಿರೋಧಿ! ನನ್ನ ಕಾಳಜಿಯೂ ಹುಸಿ ಕನಿಕರ ಸೌಹಾರ್ದ ಕಥನವೂ ಅತಿ ರಂಜಿತ ವಾಸ್ತವ ಆತ್ಮ ಪ್ರಶಂಸೆ ಜನಾರೋಗ್ಯದ ಕಾಯಕದಲ್ಲೂ ಗು- ಮಾನಿ ಮಾನವಂತನ ತನವೂ ಆಶಾಡ- ಭೂತಿಯಂತೆ! ಕಾಯ್ದೆ ಪರ ವಹಿಸಿದರೆ ಕಾರ್ಮಿಕರ ಬೀದಿಗೆ ಬಿದ್ದವರ ಕನಿಕರಿಸಿದವರ ಕೆಂಗಣ್ಣಿನ ಉರಿಗೆ ಗುರಿ ಯಾರೋ ಉಡಾಳರು ಮಾಡಿದ್ದ ಖಂಡಿಸುವಂತಿಲ್ಲ, ನಿಯಮ ಮೀರಿದ ಉಡಾಫೆಯ ಪ್ರಶ್ನಿಸುವಂತಿಲ್ಲ ಕವಿ ಸದಾ ಸೂಕ್ಷ್ಮ ಆಗಿರಬೇಕು ಅವರಿವರೆನ್ನದೇ ತನ್ನವರ ಮರೆತೂ ಅವ ಇವರು ಹೇಳಿದಂತೆ ಮಾತ ಆಡಬೇಕು ಕವನದ ಕನಸ ಬೇಕು ಇವರು ಹೆಸರಿಸಿದವರಿಗೇ ಉಸಿರೆತ್ತದೆ ಭೋ ಪರಾಕು ಲಂಚ ಹೊಡೆಯದೇ ಬಡವ ಬಲ್ಲಿದರ ಕಾಡದೇ ಕೆಳೆಯನಾದರೆ ನಿರುಪಯುಕ್ತ ಬರಿಯೇ ಕಾನೂನು ಹೇಳ್ವ ನಿಷ್ಪ್ರಯೋಜಕ! ಏನ ಮಾತಾಡಲಿ!? ನಿನ್ನೆಯ ದಂಗೆ ಮೊನ್ನೆಯ ಗಲಭೆ ಆಚೆ ಮೊನ್ನೆಯ ಗುಪ್ತ ಸಭೆಯ ಆಯ್ದ ಸಂಗತಿ ಮಾತ್ರ ಇತಿ ಹಾಸಃ! ಆಹಾ ಭವ್ಯ ದೇಶದ ದಿವ್ಯ ಪ್ರಜೆಗೆ ಮಾತು ಆಡುವ ವಾಕ್ ಸ್ವಾತಂತ್ರ್ಯ ಸಂವಿಧಾನದ ಪುಸ್ತಕದಲ್ಲಿ ಮಾತ್ರ! I have lost my words I have lost my words It doesn’t mean that i won’t talk But by the wrong interpretation of these Scholiasts For every word i utter Its context, its past, and customs, they explore everything If didn’t find the expected thing in it then they predict new meaning so as what they assume. If i speak Im meterialistic, even if I leave brahmanism, it won’t leave me so as im a brahmin If i stand with a supportive pose to my companions on their campaigns Still im biased.( an exploiter’s partisan) If i distribute sugar in a masjid to promote religious righteousness Im communalist And a people opponent. My indeed care appears fake merciful, harmonious stories looks exaggerated self- flattery If i work for the health of people there too prevails disbelief. the term ” hypocrite” overlaps on humanity feelings If i stand for rules, for labourers , downtrodden people, and show sympathy towards then myself to be exposed to a glare of comtempt, shouldn’t blame the misbehaviour of the rascals, shouldn’t ask negligibly violated rules, Poet always should be sensitive, should forget his people, talk and act accordingly what these people insist And should dream of a poem. Without any queries should say Jai, Jai”to whom they recommend, If I become a friend to poors and riches without accepting bribery and by avoiding corruption Im unskilled, and a useless man of rules amd regulations. What can i say? Yesterday’s riot, tumult of the day before, the day before last secret matters of whispering campaigns only these are our historic aspects! Aha! (What an irony) An honest citizen of the Great Nation has the right of speech only in the book of constitution. *******

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಚಿರಂಜೀವಿ ಮೂಲ ಮಲಯಾಳಂ:ರಾಧಾಕೃಷ್ಣ ಪೆರುಂಬಳ ಕನ್ನಡಕ್ಕೆ:ಚೇತನಾ ಕುಂಬ್ಳೆ ಮರಣ ಇತರರಿಗಿರುವುದು ರೋಗಗಳೂ ದುರಂತಗಳೂ ಅವರಿಗಾಗಿಯೇ ನನಗಲ್ಲ ಮರಣ ಪಕ್ಕದಮನೆಯಲ್ಲೇ ಇದೆ ಅನ್ಯ ಜಾತಿ ಮತದವರಿಗೆ ಬೇರೆ ಪಕ್ಷದಲ್ಲಿರುವವರಿಗೆ ನನ್ನ ಯಾರಾದರೂ ಬಂಧುಗಳೋ, ಗೆಳೆಯರೋ ಅಥವಾ ಯಾರಾದರೂ ನಾಯಕರು ಅದೇ ರೀತಿ ನೆರೆಕರೆಯವರು ನಿಧನರಾದಾಗಲೋ, ರೋಗಬಾಧಿತರಾದಾಗಲೋ ಅಪಘಾತಕ್ಕೊಳಗಾದಾಗಲೋ ಅಂಥ ದುಃಖದಲ್ಲಿ ನನಗೂ ಪಾಲ್ಗೊಳ್ಳುವ ಅವಕಾಶವಿದೆ ಆಗ ನಾನೂ ದುಃಖಪಡುತ್ತೇನೆ ಅಲ್ಲಿಗೆ ಭೇಟಿ ನೀಡುತ್ತೇನೆ ಅವರ ನೋವಿನಲ್ಲಿ ಭಾಗಿಯಾಗುತ್ತೇನೆ ಸಾಂತ್ವನ ಪಡಿಸುತ್ತೇನೆ, ಸಹಾಯ ಮಾಡುತ್ತೇನೆ ಹೂ ಇಡುತ್ತೇನೆ, ಭಾಷಣ ಮಾಡುತ್ತೇನೆ ಇವುಗಳಿಗೆ ಬೇಕಾಗಿಯಲ್ಲವೇ ನಾನಿಲ್ಲಿರುವುದು…ಹೀಗೆ…. ಚಿರಕಾಲ… ******** ചിരഞ്ജീവി മരണം മറ്റുള്ളവർക്കാണ് രോഗദുരിതങ്ങളും അപകടങ്ങളും അവർക്കുതന്നെയാണ് എനിക്കല്ല മരണം അയൽപക്കത്താണ് അന്യ-ജാതി- മതസ്ഥർക്കാണ് മറ്റേ പാർട്ടിയിലുള്ളവർക്കാണ് എൻ്റെ ഏതെങ്കിലും ബന്ധു ഏതെങ്കിലും സുഹൃത്ത് ഏതെങ്കിലും നേതാവ് അത്പോലെ അയൽവാസി മരിക്കുകയോ രോഗപ്പെടുകയോ അപകടത്തിലാവുകയോ ചെയ്തേക്കാം അത്തരം ദുഖങ്ങൾക്കും എനിക്കും അവകാശമുണ്ട് ഞാനതിൽ ദുഖിക്കുന്നു അവിടെ സന്തർശിക്കുന്നു വേതനയിൽ പങ്കുചേരുന്നു ആശ്വസിപ്പിക്കുന്നു സഹായിക്കുന്നു രീത്തുവെക്കുന്നു പ്രസംഗിക്കുന്നു അതിനൊക്കെയായിട്ടല്ലേ ഞാനിങ്ങനെയിവിടെ ചിരകാലം രാധാകൃഷ്ണൻ പെരുംബള ********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಯಾರಿವಳು? ಕನ್ನಡ: ಶೀಲಾ ಭಂಡಾರ್ಕರ್ ಮಲಯಾಳಂ: ಚೇತನಾ ಕುಂಬ್ಳೆ ಅಡುಗೆಮನೆಯಲ್ಲಿ ಹಾಲು ಉಕ್ಕುವುದರೊಳಗೆ ಓಡಿ ಅದನ್ನು ತಪ್ಪಿಸುವವಳು. ಹೆಣೆದಿಟ್ಟ ಮಧುರ ಕ್ಷಣಗಳ ಕನಸುಗಳು ಹರಿದುಹೋದರೂ ಕಾಣದಂತೆ ಸುಮ್ಮನಿರುವಳು. ರೊಟ್ಟಿ ಕರಕಾಗದಂತೆ ಎಚ್ಚರಿಕೆಯಿಂದ ಬೇಯಿಸಿಕೊಡುವವಳು.. ಎಷ್ಟೋ ಆಸೆಗಳನ್ನು ಸುಟ್ಟು ಬೂದಿ ಮಾಡಿ ಎಸೆದು ಬಿಡುವಳು. ಪಾತ್ರೆಗಳು ಬಿದ್ದು ತಗ್ಗುನುಗ್ಗಾಗದಂತೆ ನೋಡಿಕೊಳ್ಳುವವಳು. ತನ್ನ ಹುಮ್ಮಸ್ಸು, ಉತ್ಸಾಹಗಳನ್ನು ತಾನೇ ಹೊಸಕಿ ಹಾಕುವಳು. ಬಟ್ಟೆಯ ಕಲೆಗಳನ್ನು ಜಾಣ್ಮೆಯಿಂದ ತೊಡೆಯುವವಳು.. ಅಶಕ್ತ ಶಬ್ಧಗಳನ್ನು ಬರೆದ ವಿಷಾದದ ಮಸಿಯನ್ನು ಎದೆಯ ಗೋಡೆಯ ಮೇಲಿಂದ ಅಳಿಸಿಹಾಕುವಳು. ಬಂಧಿಸಿಟ್ಟ ಆಕಾಂಕ್ಷೆಗಳ ಮರೆಯಲೋಸುಗ. ಅಡುಗೆ ಮನೆಯ ಗಟ್ಟಿ ಮುಚ್ವಳದ ಡಬ್ಬಿಯೊಳಗೆ ಮುಚ್ಚಿಟ್ಟು ಆನಂದ ಪಡುವಳು. ಎಲ್ಲರ ನೋವಿಗೆ ಸ್ಪಂದಿಸುತ್ತಾ ತನ್ನದೇನಿದೆಯೋ ಎಲ್ಲವನ್ನೂ ಪಾತ್ರೆ ತೊಳೆಯುವ ಸಿಂಕಿನಲ್ಲೇ ಹರಿಯಬಿಡುವವಳು. ಪ್ರೀತಿಯ ಹವ್ಯಾಸಗಳನೆಲ್ಲ ಬಟ್ಟೆಯ ಮಡಿಕೆಯೊಳಗೆ ಮಡಚಿಟ್ಟು ಬಾಗಿಲು ಮುಚ್ಚುವಳು. ആരാണവൾ? അടുക്കളയിൽ പാൽ തിളച്ചുമരിയുന്നിൻ മുംബ് ഓടിപ്പോയി തടയുന്നവൾ കോർത്തുവെച്ച മധുര ക്ഷണങ്ങളും സ്വപ്നങ്ങളും തകർനപ്പോഴും കാണാത്ത പോലിരികുന്നവൾ ഭക്ഷണം അടിപിടിക്കാതെ ശ്രദ്ധയോടെ വേവിച്ച് വിളംബുന്നവൾ എത്രയോ ആശകളെ ദഹിപ്പിച്ച് വെണ്ണീരാക്കി എരിയുന്നവൾ പാത്രങ്ങൾ താഴെവീൺ ഉടഞ്ഞുപോകാതെ നോക്കുന്നവൾ തൻ്റെ ഉൽസാഹങ്ങളെ താനേ കെടുത്തുന്നവൾ വസ്ത്രങ്ങളിൽ പട്ടിപിടിച്ച കരങ്ങളെ സമർഥമായി തുടച്ചു നീക്കുന്നവൾ വിഷാദം നിരഞ വാക്കുകളെ നെഞ്ജിനുള്ളിൽ നിന്നും മായ്ച്ച് കളയുന്നവൾ അടക്കിപ്പിടിച്ച ആകാങ്ക്ഷങ്ങളെ മരക്കാൻ വേണ്ടി അടുപ്പുള്ള പാത്രത്തിനുള്ളിൽ ഭദ്രമായി സൂക്ഷിച്ച് സന്ദോഷിക്കുന്നവൾ എല്ലാവരുടെ വേദനകളിൽ പങ്കുചേർൻ തണ്ടേതെല്ലാം പാത്രം കഴുുകുന്ന വെള്ളത്തിൽ ഒഴുക്കി വിടുന്നവൾ തൻ്റെ പ്രിയപെട്ട ശീലങളെ വസ്ത്രങൾകുള്ളിൽ മടക്കിവെച്ച് വാതിൽ അടയ്ക്കുന്നവൾ രചന: ശീല ഭണ്ഡാർക്കർ തർജ്ജമ: ചേതനാ കുംബ്ളെ

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಕನ್ನಡ: ಕು.ಸ.ಮಧುಸೂದನ ಮಲಯಾಳಂ: ಚೇತನಾ ಕುಂಬ್ಳೆ ಅಪ್ಪಚ್ಚನ ಅದೊಂದು ಮನೆಯೂ, ನನ್ನ ಸೋದರತ್ತೆಯೂ! ಅದೊಂದು ಮನೆಯಿತ್ತು ನನ್ನದೂ ನನ್ನ ಅಪ್ಪಚ್ಚನ ಕಾಲದ್ದು ಅವನ ವಿರೋಧಿಸಿ ಮನೆ ಬಿಟ್ಟು ಬಂದ ಅಚ್ಚ ಮತ್ತೆ ಅದರೊಳಗೆ ಕಾಲಿಡದೆಲೆ ಸತ್ತು ಹೋಗಿ ನನ್ನನ್ನೂ ಅಪರಿಚಿತ ಊರಲ್ಲಿ ಪರದೇಸಿಯಾಗಿಸಿದ ನಂತರವೂ ಮೊಮ್ಮಗ ಬರುತ್ತಾನೆಂದು ಸಾಯುವ ತನಕ ಕಾವಲು ಕಾಯುತ್ತಿದ್ದ ಮುದುಕ ಅಷ್ಟು ವರುಷ ಇಲ್ಲದ್ದು ಮೊನ್ನೆ ಕಾಲುಜಾರಿ ಮನೆಯ ಹಿಂದಿನ ಅದೇ ಹಳೆಯ ಬಾವಿಗೆ ಬಿದ್ದು ಸತ್ತು ಹೋದನಂತೆ! ವಿಷಯ ಕಿವಿಗೆ ಬಿದ್ದು ಬೇಜಾರೆನಿಸಿದರೂ ಕರೆದಾಗವನು ಹೋಗಿಬಿಡಬೇಕಿತ್ತು ನನ್ನದೆನ್ನುವ ಅದೊಂದು ಮನೆಯನ್ನುನನ್ನದಾಗಿಸಿಕೊಳ್ಳಲು. ಅನ್ನುವುದಕಿಂತಲೂ ಕತ್ತರಿಸಿ ಹೋಗಿದ್ದ ಕರುಳು ಬಳ್ಳಿಗಳ ಮತ್ತೆ ಬೆಸೆದುಕೊಳ್ಳುವ ಸಲುವಾಗಿಯೆನ್ನಬಹುದೇನೊ! ಕೊನೆಯ ಗಳಿಗೆಯವರೆಗು ಕೈಲಿ ಹಿಡಿದ ಕೋಲಿಂದ ಮನೆಯಷ್ಟು ಮೂಲೆಗಳನ್ನು ತಟ್ಟುತ್ತ ತನ್ನಿರುವಿಕೆಯನ್ನು ಕಿಟಕಿ ಬಾಗಿಲು ಗೋಡೆಗಳಿಗೆ ತಿಳಿಯ ಪಡಿಸಿ ಬದುಕುತ್ತಿದ್ದವನ ಕೂಗಿಗೆ ಕಿವಿಗೊಟ್ಟು ಒಮ್ಮೆ ಹೋಗಿಬರಬಹುದಿತ್ತೆನಿಸಿದ್ದರೂ ಹುಟ್ಟಿದಾಗಿನಿಂದ ಒಮ್ಮೆ ಮಾತ್ರ ನೋಡಿದ್ದ ಆ ಮನೆ ನನಗೆ ಯಾವತ್ತಿಗೂ ಅಚ್ಚನಂತೆಯೇ ಅಪರಿಚಿತವಾಗುಳಿದಿತ್ತು. ಅಮ್ಮನನ್ನು ಹೊಸಿಲೊಳಗೆ ಬಿಟ್ಟುಕೊಳ್ಳದಾ ಮನೆ ನನಗೂ ಬೇಡವೆನಿಸಿತ್ತು,ನಿಜ! ಆದರೂ ಸೋದರತ್ತೆ ಮೊನ್ನೆ ಕರೆಮಾಡಿ ಮುದುಕ ಬಲು ಘಾಟಿ ಸಾಯುವ ಮೊದಲು ಮನೆಯನ್ನ ಕಾನೂನಿನ ಪ್ರಕಾರ ನಿನ್ನ ಹೆಸರಿಗೇ ಬರೆದಿಟ್ಟಿದ್ದಾನೆ. ಈಗ ಬೇರೆ ದಾರಿಯಿಲ್ಲ ನಿನಗಾದರು ನೀನಿರುವ ಊರಿನಲ್ಲಿ ಏನಿದೆ? ಮನೆಯಾ?ಮಠವಾ? ಹೇಳಿಕೊಳ್ಳಲೊಂದು ನೆಲೆಯ? ಸುಮ್ಮನೆ ಇಲ್ಲಿಗೇ ಬಂದು ಬಿಡು ಖಾಲಿ ಮನೆ ಬಹಳ ಕಾಲ ಹಾಳು ಬಿಡಬಾರದು! ನೀನೊ ನಮ್ಮೆಲ್ಲರ ತೊರೆದುಕೊಂಡಂತೆ ಅಲ್ಲಿನ ಕನ್ನಡದ ಹುಡುಗಿಯನ್ನೇ ಮದುವೆಯಾಗಿದ್ದೀ. ಪಾಪ! ಅವಳಾದರುಹೇಗೆ ಬಂದು ಬದುಕಿಯಾಳು ಬಾಷೆ ಗೊತ್ತಿರದ ಊರಲ್ಲಿ ಇಲ್ಲೇ ಶಾಶ್ವತವಾಗಿ ನೆಲೆಯೂರಲು ನಿನಗಿಷ್ಟವಾಗದಿದ್ದರೆ ಕೊನೆ ಪಕ್ಷ ಮನೆಮಾರಿ ದುಡ್ಡು ತೆಗೆದುಕೊಂಡು ಹೋಗು ಊರಿನಿಂದ ಹೊರಗಿರುವ ಮನೆಯೆಂದು ಬೆಲೆ ಕಡಿಮೆ ಕೇಳಬಹುದು ಜನ ಅಷ್ಟ್ಯಾಕೆ ಮಾತು ನಮ್ಮದನ್ನು ಬೇರೆಯವರ ಕೈಗೊಪ್ಪಿಸಲು ನನಗೂ ಸಂಕಟವಾಗುತ್ತೆ ಎಷ್ಟೆಂದರು ನಿನ್ನಪ್ಪನ ಜೊತೆ ನಾನೂ ಆಡಿಬೆಳೆದ ಮನೆಯದು ನಾನೇ ಅದನ್ನು ಕೊಳ್ಳುತ್ತೇನೆ ಅಮೇರಿಕಾದಲ್ಲಿರುವ ಮೊಮ್ಮಕ್ಕಳಿಗೆ ಸ್ವದೇಶದಲ್ಲಿ ಒಂದು ಅಸ್ತಿಯಂತಾದರು ಆಗುತ್ತದೆ ನೀನೇನು ಹೆದರಬೇಡ ಮಾರುಕಟ್ಟೆಯ ದರವನ್ನೇ ಕೊಡುತ್ತೇನೆ. ನಮ್ಮ ಸುಭದ್ರ ಚೇಚಿ ಗೊತ್ತಲ್ಲ ಅವಳ ಮಗನೀಗ ಈ ಊರಲ್ಲೇ ದೊಡ್ಡ ಬ್ರೋಕರ್ ಇಂತಾ ದಿನ ಬರುತ್ತೇನೆಂದು ಹೇಳು ಸಾಕು ಪತ್ರ ಹಣ ಎರಡನ್ನು ರೆಡಿ ಮಾಡಿಸಿಡುತ್ತೇನೆ ಬೇಕೆಂದಾಗ ನೀನು ಬಂದುಹೊಗುವುದನ್ನೂ ಮಾಡಬಹುದು. ಎಷ್ಟೆಂದರೂ ನೀನು ನನ್ನ ಮಗನ ಹಾಗಲ್ಲವೇ ನಿನ್ನ ಅಚ್ಚ ಬದುಕಿದ್ದಿದ್ದರೆ ಈ ಮಾತುಗಳನ್ನು ನಾನು ಆಡಬೆಕಿರಲಿಲ್ಲ, ನೋಡು. ಸೋದರತ್ತೆಯ ಮಾತುಗಳು ಯಾರೋ ಅಪರಿಚಿತ ವ್ಯಾಪಾರಸ್ಥನೊಬ್ಬನ ಮಾತಿನ ಹಾಗೆ ಕೇಳಿಸಿ ಏನೂ ಮಾತಾಡದೆ ಪೋನಿಟ್ಟೆ ಅಚ್ಚ ಬದುಕಿದ್ದರೆ ಅಂದ ಮಾತು ಮಾತ್ರ ಕಿವಿಯಲ್ಲುಳಿದು ಹೋಯಿತು.! ==== അപ്പച്ഛൻ്റെ ആ ഒരു വീടും എൻ്റെ അമ്മായിയും അപ്പച്ഛൻ്റെ ആ ഒരു വീടും എൻ്റെ അമ്മായിയും*അതൊരു വീട് എൻ്റെയുംഎൻ്റെ അപ്പച്ഛൻ്റെ കാലത്തെ. അവരെ ധിക്കരിച്ച് വീട് വിട്ടിറങ്ങി വന്ന അച്ഛൻപിന്നൊരിക്കലും തിരിച്ചു പോകാതെ മരിച്ചു പോയി.എന്നെയും അന്യ നാട്ടിലേക്കയച്ച ശേഷവും കാവലിരുന്നു വൃദ്ധൻ ആ വീടിന്.മിനിഞ്ഞാന്ന് കാൽ വഴുതി വീടിൻ്റെ പിന്നിലുള്ള പഴയ കിണറിൽ വീണ് മരിച്ചു. വിവരമറിഞ്ഞപ്പോൾ സങ്കടം തോന്നി. വിളിച്ചപ്പോൾ പോകാമായിരുന്നു.എൻ്റേതെന്ന് പറയുന്ന വീട് സ്വന്തമാക്കാനല്ലെങ്കിലുംവേർപെട്ട പൊക്കിൾക്കൊടി ബന്ധത്തെ കൂട്ടിയോജിപ്പിക്കാനെങ്കിലും. അവസാന നിമിഷം വരെ കൈയിൽ പിടിച്ച ഊന്നു വടികൊണ്ട്വീടിൻ്റെ ഓരോ കോണിലുംശബ്ദമുണ്ടാക്കി തൻ്റെ സാന്നിധ്യംജനാലകൾക്കും വാതിലുകൾക്കും ചുമരുകൾക്കും അറിയിച്ചുകൊണ്ട്ജീവിച്ചവൻ്റെ വിളി കേട്ട് ഒന്ന് പോയ് വരാമായിരുന്നു.ജനിച്ചപ്പോൾ ഒരു നോക്ക് കണ്ട വീട്അച്ഛനെപ്പോലെ അപരിചിതമായിരുന്നു. എപ്പോഴുംഅമ്മയെ പടി കയറാൻ അനുവദിക്കാത്ത വീട്എനിക്കും വേണ്ടെന്ന് തോന്നിയത് സത്യം. എന്നിട്ടും അമ്മായി വിളിച്ചറിയിച്ചുവൃദ്ധൻ മരിക്കുന്നതിൻ മുമ്പ് വീട് നിയമപരമായി നിന്റെ പേരിൽ എഴുതി വെച്ചിട്ടുണ്ട്. ഇപ്പോൾ വേറെ വഴിയില്ല. നിനക്ക് ആ നാട്ടിൽ എന്തുണ്ട്വീടോ, പറമ്പോ താമസിക്കാനൊരു തരി മണ്ണോ?നീ ഇങ്ങോട്ട് തിരിച്ച് വാ,അധിക നാൾ വീട് പൂട്ടിയിടരുത്.നീ നമ്മളിൽനിന്നും അകന്നത്പോലെഅവിടുത്തെ കന്നടക്കാരിയെ വിവാഹം കഴിച്ചുപാവം ! അവളാണെങ്കിലും എങ്ങനെ ജീവിക്കും ഭാഷയറിയാത്ത ഈ നാട്ടിൽ. ഇവിടെ സ്ഥിര താമസത്തിന് നിനക്കിഷ്ടമല്ലെങ്കിൽവീട് വിറ്റ് പണം വാങ്ങി പോയ്ക്കോനാട്ടിൻ പുറത്തുള്ള വീട് ആൾക്കാർകുറഞ്ഞ വിലയ്ക്ക് ചോദിക്കും .നമ്മുടെ സ്ഥലം അന്യാധീനപ്പെടുന്നത് എനിക്ക് സങ്കടമാണ്.എന്നിരുന്നാലും നിൻ്റച്ഛനും ഞാനുംകളിച്ചു വളർന്ന വീടാണത്. ഞാൻ തന്നെ ആ വീട് വാങ്ങാം.അമേരിക്കയിലുള്ള പേരക്കുട്ടികൾക്ക് സ്വന്തം നാട്ടിൽ ഒരു വീടും പറമ്പും ഉണ്ടെന്ന് പറയാമല്ലോ.നീയൊന്നുകൊണ്ടും പേടിക്കേണ്ടമാർക്കറ്റ് വില തന്നെ നൽകാം ഞാൻ.നമ്മുടെ സുഭദ്ര ചേച്ചിയുടെ മകൻഇപ്പോൾ ബ്രോക്കരാണ്.ഇന്ന ദിവസം വരുമെന്ന് പറഞ്ഞാൽപേപ്പറുകളും പണവും റെഡിയാക്കി വെക്കാം.നിനക്ക് തോന്നുമ്പോഴൊക്കെ വന്ന് പോകാം.നീയെൻ്റെ മകനെപ്പോലെയാണ്. നിൻ്റെ അച്ഛൻ ജീവിച്ചിരുന്നുവെങ്കിൽഈ വാക്കുകൾ ഞാൻ പറയുമായിരുന്നില്ല. അമ്മായിയുടെ വാക്കുകൾ ഏതോ അപരിചിതൻ്റെ വാക്കുകളെപ്പോലെ തോന്നിയപ്പോൾഒന്നും പറയാതെ ഫോൺ വെച്ചു. അച്ഛൻ ജീവിച്ചിരുന്നുവെങ്കിൽ ഏന്ന വാക്ക് മാത്രം കാതിനുള്ളിൽ തങ്ങിനിന്നു. മുലം : കസു മധുസൂധനതർജ്ജമ: ചേതനാ കുംബള ************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಕನ್ನಡಕವಿತೆ:ಸರಜೂ ಕಾಟ್ಕರ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನ್ಯಾಶನಲ್ ಹೈವೇಗುಂಟ ಹೋಗುತ್ತಿರುವಾಗ ನ್ಯಾಶನಲ್ ಹೈವೇಗುಂಟ ಹೋಗುತ್ತಿರುವಾಗ ಅಲ್ಲಿದ್ದ ಗಿಡಮರಗಳನ್ನು ನಿರ್ದಯವಾಗಿ ಕತ್ತರಿಸಿ ಹಾಕಿದ ರಾಕ್ಷಸರನ್ನು ನೆನೆನೆನೆದು ಸಿಟ್ಟಾಗುತ್ತೇನೆ. ಅಲ್ಲಿಯ ಬೋಳು ಮೈದಾನಗಳಲ್ಲಿ ತಮ್ಮ ಗೂಡುಗಳನ್ನು ಹುಡುಕುತ್ತಿರುವ ಸಾವಿರಾರು ಪಕ್ಷಿಗಳ ಆಕ್ರಂದನ ಕೇಳಿ ಕಂಗಾಲಾಗುತ್ತೇನೆ. ಎಲ್ಲಿ ಹೋಯಿತು ಈ ಗಿಡಗಳ ದಟ್ಟ ಹಸಿರು? ಗಿಡಗಳಿಗಿಂತಲೂ ಉದ್ದವಾಗಿ ಬೀಳುತ್ತಿದ್ದ ನೆರಳು? ವಿಧವಿಧ ಪಕ್ಷಿಗಳ ಕಲರವ? ಗಿಡಗಳ ಸಾಕ್ಷಿಯಲ್ಲಿ ನಡೆಯುತ್ತಿದ್ದ ಪ್ರೇಮದಾಟ? ಏನಾಗಿರಬಹುದು ಈ ಗಿಡಮರಗಳಿಗೆ- ಸತ್ತು ಭಸ್ಮವಾದವೇ ಈ ಮರಗಳು ಅಥವಾ ಯಾರದ್ದಾದರೂ ಮನೆಯಲ್ಲಿರಬಹುದೇ ಟೇಬಲ್, ಕುರ್ಚಿ, ಸೋಫಾಗಳಾಗಿ? ಏನಾದವು ನಮ್ಮ ಜೊತೆಗೆ ಓಡೋಡಿ ಬರುತ್ತಿದ್ದ ಈ ಗಿಡಗಳ ಟೊಂಗೆಗಳು? — ಎಲ್ಲ ನೆನಪಾಗಿ ಕಣ್ಣು ಕೊಳವಾಗುತ್ತದೆ ಆಗ ನನ್ನ ದೇಹದಲ್ಲಿಯೇ ಒಂದು ಗಿಡ ಹುಟ್ಟಿದಂತಾಗುತ್ತದೆ ಗಿಡ ಮರವಾಗಿ, ಮರ ವೃಕ್ಷವಾಗಿ, ವೃಕ್ಷ ಮಹಾ ವೃಕ್ಷವಾಗಿ ನನ್ನ ಕಣ್ಣಿಂದ, ಬಾಯಿಂದ, ಕಿವಿ, ಮೂಗಿನಿಂದ, ನನ್ನ ಸರ್ವಾಂಗಗಳಿಂದ ಒಂದೊಂದು ಟೊಂಗೆ ಹುಟ್ಟಿ ಪ್ರತಿ ಟೊಂಗೆಗಳು ಎಲೆಗಳಿಂದಾವರಿಸಿ ಹಣ್ಣು ತುಂಬಿ ತೊನೆದು ಭೂಮಿಯಲ್ಲಿ ಬೇರುಗಳಾಗಿ ಇಳಿದು ದೂರದಲ್ಲಿ ಭೃಮಿಷ್ಠರಂತೆ ಹಾರುತ್ತಿರುವ ಪಕ್ಷಿಗಳನ್ಪು ಕರೆದು ಈ ಸೀಮೆಯಿಂದ ಬೇರೆಡೆಗೆ ಜಾರುತ್ತಿರುವ ಕಪ್ಪು ಮೋಡವನ್ನು ಆಕರ್ಷಿಸಿ ಮತ್ತೆ ತನ್ನಲ್ಲಿ ಪ್ರತಿಷ್ಠಾಪಿಸಿದಂತಾಗುತ್ತದೆ ಹೀಗೆ ರಸ್ತೆ ತುಂಬ ಜನರೇ ಗಿಡಗಳಾಗಿ ಪ್ರತಿ ಗಿಡಕ್ಕೆ ಗಿಡ ಕಡಿದ ಪ್ರತಿ ರಾಕ್ಷಸರ ನೇಣು ಬಿಗಿದ ಶವಗಳು ನೇತಾಡುತ್ತಿರುವಂತೆ ಢಾಳಾಗಿ ಕಾಣಿಸುತ್ತದೆ. ******** While Traversing along the National High Way) While Traversing along the National high way I turn furious when I think of the Monsters who Mercilessly chopped off the woods I bewilder As I find the squawking of birds in search of their nests In the empty woods Where is it gone all these foliage and big shadow of these trees? sweet chirping of birds? the game of love behind the leaves of trees? What might have happened to these trees? Have they been burned to ashes? or they may be at someone’s house as table,chair, or sofa? What happened to the branches which were reaching out to us Remembering this, eyes turn into a pond Then I feel like, a seedling comes out from my body , grows itself seedling to sapling and then to immense tree. From my eyes, nose, mouth, ears and from my all organs grow boughs, fill with lush foliage and fruits. my roots branch out deep into the earth, call the deluded birds, flying afar and attract the heavy dark clouds slipping from border place Then again gets back to myself. Now, all the roads are full of people Who look like trees, every tree with the hanging of the dead bodies of the tree cutting demons It is a clear visible sight. *************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಕ್ಷುದ್ರ್ ಕೀ ಮಹಿಮಾ ಶಾಮ್ ನಂದನ್ ಕಿಶೋರ್ ಅನುವಾದಕರ ಟಿಪ್ಪಣಿ ಪದ್ಮಶ್ರಿ ಶ್ರೀ ಶಾಮ್ ನಂದನ್ ಕಿಶೋರ್ ಹಿಂದಿಯ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ಒಂದು ಕವಿತೆ “ಕ್ಷುದ್ರ್ ಕೀ ಮಹಿಮಾ” ಓದಲು ಸಿಕ್ಕಿತು. ಮೊದಲ ಓದಿಗೇನೂ ಹೆಚ್ಚು ಅರ್ಥವಾಗಲಿಲ್ಲ. ಆದರೂ ಕವಿ ಏನೋ ವಿಭಿನ್ನವಾದುದನ್ನು ಹೇಳಲು ಹೊರಟಿದ್ದಾರೆಂಬುದರ ಅರಿವಿತ್ತು. ಮತ್ತೆ ಮತ್ತೆ ಓದಿದಾಗ ಅರ್ಥ ಸ್ಪಷ್ಟವಾಗತೊಡಗಿತು. ಶಬ್ದಗಳೊಳ ಹೊಕ್ಕು ಕವಿಯ ಭಾವವನ್ನು ಅರಿಯಲು ಸಹಾಯ ಮಾಡಿದವಳು ಗೆಳತಿ ರೂಪಾ. ಅವಳು ಹಿಂದಿ ಭಾಷೆಯ ಅನುವಾದಿತ ಕೃತಿಗಳ ತುಲನಾತ್ಮಕ ಅಭ್ಯಾಸಗಳ ಮೇಲೆ ಸಂಶೋಧನೆಯನ್ನು ಮಾಡುತಿದ್ದಾಳೆ. ನಾವೆಲ್ಲರೂ ಶ್ರೇಷ್ಠವಾದುದನ್ನು, ಉನ್ನತವಾಗಿರುವುದನ್ನೇ ಬಯಸುತಿದ್ದರೆ, ಕವಿ ಶ್ಯಾಮ್ ನಂದನ್ ಕಿಶೋರ್ ಅವರು ಕ್ಷುದ್ರತೆಯ ಮಹಿಮೆಯನ್ನು ಸಾರುತಿದ್ದಾರೆ. ಅಪರಂಜಿಯಾಗೇನು ಉಪಯೋಗ? ಆಭರಣ ಬಂಗಾರವಾದರೆ ದೇವರ ಕಂಠೀಹಾರವಾದರೂ ಆಗುವ ಭಾಗ್ಯ ದೊರಕುತಿತ್ತು. ಅದೇ ರೀತಿ ಪ್ರತಿಯೊಂದು ವಿಷಯದಲ್ಲೂ ಕೊರತೆ ಇದ್ದಾಗಲೇ ಮತ್ತೆ ಅದನ್ನು ಯಥೇಚ್ಛವಾಗಿ ತುಂಬಿಕೊಳ್ಳುವ ಪ್ರಯತ್ನವಾದರೂ ನಡೆಯುತ್ತದೆ. ಪತನವಿಲ್ಲದೆ ಉತ್ಥಾನವೇ? ನನಗಂತೂ ಬಹಳ ಇಷ್ಟವಾಯಿತು ಈ ಕೃತಿ. ಶೀಲಾ ಭಂಡಾರ್ಕರ್ ಮುಖ್ಯ_ಅಮುಖ್ಯ. ಅಪರಂಜಿಯಾಗೇನುಪಯೋಗ, ನಿಗಿ ಕೆಂಡದೊಳು ಮಿಂದೆದ್ದ ಗಿನಿ ಬಂಗಾರದಿ ಕೊರೆದ ನಿನ್ನ ಕೊರಳಹಾರವಾಗದೇ..! ನಿಯಮಗಳಿಗೆ ಬಂಧಿಸಲ್ಪಟ್ಟ ಮಾನವ.. ಬಲ್ಲನೇನು..? ನಿಯಮಗಳ ಉಲ್ಲಂಘಿಸಿದ ನಂತರದ ಅವಮಾನವ. ಸದಾ ನಿನ್ನ ಸನಿಹದಲ್ಲಿದ್ದು ಅರಿಯಲು ಸಾಧ್ಯವೇ..? ನಿನ್ನ ಕರುಣೆಯ ನೆಳಲಿಗಾಗಿ ಅಲೆದಾಡುವ ಭಾಗ್ಯವ. ಪತನವಾಗಲೇ ಬೇಕಲ್ಲವೇ..! ಉತ್ಥಾನವಾಗಲು. ಇನ್ನೂ ಜನ್ಮಿಸದವಗೆ ಕಾಮನ ಬಿಲ್ಲಿನ ಬಣ್ಣದ ಜಗತ್ತಿನೊಡನೇನು ಸಂಬಂಧ.? ಸ್ವತಹ ನೋವುಣ್ಣದವನಿಂದ ಶಕ್ಯವೇ ಪರರ ದುಃಖಕ್ಕೆ ಸ್ಪಂದನ? ಸೃಷ್ಟಿಯ ಹೊರತು ಇನ್ಯಾರು ಸಮರ್ಥರು ಶೂನ್ಯವನ್ನೂ ಸಿಂಗರಿಸಲು? ತುಸುವಾದರೂ ಮೋಹವಿರಲೇಬೇಕು ಸ್ವಪ್ನ ಸಾಕಾರವಾಗಲು. ಅಭಾವವೆಂದರೆ ಭಾವದ ಕೊರತೆ. ವಿಕರ್ಷಣದಿಂದಲೇ ಪ್ರೀತಿಯ ಒರತೆ. ವಿರಹೀ ಉಪವನದಂತೆ ತೋರುವುದು ಕ್ಷಣ ಮಾತ್ರದ ಪ್ರವಾಸೀ ತಾಣವೂ. ಜಲಪಾತಗಳಿಂದ ಧುಮ್ಮಿಕ್ಕಿ ಸುರಿದ ನೀರೇ ಕಲ್ಲುಗಳ ಮೇಲೆ ಸಂಘರ್ಷದ ಕವಿತೆಗಳ ಬರೆಯುವುದು. ಸುಡುಬಿಸಿಲಿಗೆ ಆವಿಯಾದ ಹನಿಗಳೇ ತಾನೆ.. ಶ್ರಾವಣದಲ್ಲಿ ತಂಪಾಗಿ ಸುರಿಯುವುದು. ಜತೆಯಲಿದ್ದು ಅಸಾಧ್ಯ ಪೂರ್ಣ ಪರಿಚಿತರಾಗಲು. ತುಸು ದೂರ ಸರಿಯಲೇಬೇಕು ಪ್ರೀತಿ ಮಧುರವಾಗಲು. क्षुद्र की महिमा शुद्ध सोना क्यों बनाया, प्रभु, मुझे तुमने, कुछ मिलावट चाहिए गलहार होने के लिए।        जो मिला तुममें भला क्या        भिन्नता का स्वाद जाने,        जो नियम में बंध गया        वह क्या भला अपवाद जाने! जो रहा समकक्ष, करुणा की मिली कब छांह उसको कुछ गिरावट चाहिए, उद्धार होने के लिए।        जो अजन्मा है, उन्हें इस        इंद्रधनुषी विश्व से संबंध क्या!        जो न पीड़ा झेल पाये स्वयं,        दूसरों के लिए उनको द्वंद्व क्या! एक स्रष्टा शून्य को श्रृंगार सकता है मोह कुछ तो चाहिए, साकार होने के लिए!        क्या निदाघ नहीं प्रवासी बादलों से        खींच सावन धार लाता है!        निर्झरों के पत्थरों पर गीत लिक्खे        क्या नहीं फेनिल, मधुर संघर्ष गाता है! है अभाव जहाँ, वहीं है भाव दुर्लभ – कुछ विकर्षण चाहिए ही, प्यार होने के लिए!        वाद्य यंत्र न दृष्टि पथ, पर हो,        मधुर झंकार लगती और भी!        विरह के मधुवन सरीखे दीखते        हैं क्षणिक सहवास वाले ठौर भी! साथ रहने पर नहीं होती सही पहचान! चाहिए दूरी तनिक, अधिकार होने के लिए!

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಕನ್ನಡ ಮೂಲ: ರಾಜು ಹೆಗಡೆ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಹುಟ್ಟು ಹುಟ್ಟು ದೇವರಾಣೆ! ನನಗೆ ಗೊತ್ತಿರಲಿಲ್ಲ. ನಾನು ಹುಟ್ಟುತ್ತೇನೆಂದು ಹುಟ್ಟಿ ಇಷ್ಟು ವರ್ಷವಾದರೂ ಹುಟ್ಟಲಾಗಲೇ ಇಲ್ಲ. ಖಾಲಿ ಆಕಾಶದ ಕೆಳಗೆ ಬಟಾಬಯಲ ಒಳಗೆ ಬೋಳು ಮರದಡಿಯಲ್ಲಿ ಕೂರುತ್ತಿರಲಿಲ್ಲ ಹೀಗೆ ನಾನು ಹುಟ್ಟಿದ್ದರೆ ನಿರುದ್ಯೋಗ ಕಲಿಯದಿದ್ದರೆ ಇರುತ್ತಿರಲಿಲ್ಲ ಹೀಗೆ ನಾ ಹುಟ್ಟಿದ್ದರೆ ಕ್ಷಮಿಸಿ, ನನ್ನ ಕೈಲಿನ್ನೂ ಹುಟ್ಟಲಾಗಲೇ ಇಲ್ಲ.. -********** Birth ——- Swear God! I didn’t know that I would be born. After the birth Years passed many more, but I couldn’t be born. Below the empty sky within the open plain under a leafless tree I wouldn’t sit If i was born Unemployment,,, if I didn’t learn I wouldn’t be like this If I was born. Forgive me, for not born yet. ********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮೌನ ಕನ್ನಡ ಕವಿತೆ: ನಾಗರಾಜ ಹರಪನಹಳ್ಳಿ ಇಂಗ್ಳಿಷಿಗೆ: ನಾಗರೇಖಾ ಗಾಂವಕರ್ ನಾಗರಾಜ ಹರಪನಹಳ್ಳಿ ನಾಗರೇಖಾ ಗಾಂವಕರ್ ಕನ್ನಡ ಕವಿತೆ ಮೌನ ಮೌನದಲ್ಲೂ ನಾನು ಸುಳಿದಾಡುವೆ ಒಬ್ಬಳೇ ಇರುವೆ ಎಂದು ಭಾವಿಸಬೇಡ ಸುಳಿಯುವ ಗಾಳಿಯಲ್ಲಿ ಎರಡು ನಿಟ್ಟುಸಿರುಗಳಿವೆ ಅವು ಪ್ರೇಮದ ಪಲ್ಲವಿಗಳಾಗಿ ಬದಲಾಗಿ ಬಿಡಲಿ ಕಣ್ಣಲ್ಲಿ ನಕ್ಷತ್ರಗಳು ಹಾಡಲಿ ಕಾಲ್ಗೆಜ್ಜೆಗಳಲ್ಲಿ ಏಳು ಸುತ್ತಿನ ಮಲ್ಲಿಗೆ ಅರಳಲಿ ನೀನುಟ್ಟ ಸೀರೆ ಸೆರಗ ತಾಗಿದ ಗಾಳಿ ಪ್ರೇಮದ ನವಿರು ಹೊತ್ತು ತಂತು ಆಡಿದ ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿ ಚಿತ್ರ ಬಿಡಿಸಿತು ನೀನಿಡುವ ಪ್ರತಿ ಹೆಜ್ಜೆಯಲಿ ಕನಸು ಇಣುಕುತ್ತಿದೆ ಗೆಳತಿ ಮನಸುಗಳ ಅಗಣಿತ ತರಂಗಗಳು ಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನೆನ್ನಲಿ? ನಿನ್ನ ದನಿ ಕೇಳದ ಭೂಮಿಗೆ ಆಕಳಿಕೆ ಸಮಯ ಅದಕ್ಕೆ ಮಗ್ಗಲು ಬದಲಿಸುತ್ತಿದೆ ಮುಗಿಲಿಗೆ ದಿಗಿಲು ಬಡಿದಿದೆ ಎಲ್ಲಿ ಹೋದೆ ? ಗೆಜ್ಜೆ ಸದ್ದಿಗೆ ಅರಳುತ್ತಿದ್ದ ಹೂ ಸಹ ಮೌನವಾಗಿದೆ ******* ಇಂಗ್ಲೀಷ್ ಅನುವಾದ Silence I can roam even in silence Dont think that im sequestered. Two sighs are there In the wind sauntering across. Let them to be changed Like love refrains let the stars to twinkle in eyes. Seven folding jasmine to bloom in the jingle of leg chain The wind touched By the veil of your sari Carried the gentle love, Told and untold words, Collection of silences Drew an image in clouds. Dream appears in every steps of yours my dear. Uncountable wavelets of hearts touching me. What can i say for this wonder? For not being heard of Your voice The Earth is yawning and changing its axis The sky is perplexed Where had you gone? A flower, blossoming in the jingle is Also silent. *********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಒಂದುಕತ್ತಲನ್ನುಎತ್ತಿಟ್ಟುಕೊಂಡಿದ್ದೇನೆ ಕನ್ನಡ ಮೂಲ: ರಾಜು ಹೆಗಡೆ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನಾಗರೇಖಾ ಗಾಂವಕರ್ ರಾಜು ಹೆಗಡೆ ಒಂದು ಕತ್ತಲನ್ನು ಎತ್ತಿಟ್ಟುಕೊಂಡಿದ್ದೇನೆ ಹಕ್ಕಿಗಳನ್ನು ಮಲಗಿಸಿ ಚುಕ್ಕೆಗಳನ್ನು ಎಬ್ಬಿಸಿ ಇನ್ನು ಕೆಲವೇ ಗಂಟೆಗಳಿವೆ ಗಿಡಗಂಟಿಗಳ ಜೊತೆಗೆ ಮಾತಾಡಲು ಆಡದಿದ್ದವರ ಸುದ್ದಿಬೇಡ! ಒಂದೊಂದಾಗಿ ದೀಪ ಆರಿಸುತ್ತೇನೆ ಕತ್ತಲೆ ನನಗೆ ಧೈರ್ಯ ತುಂಬುತ್ತದೆ ಗೋಡೆ ಕೂಡ ಮಾತಾಡುತ್ತಿದೆ ಗಡಿಯಾರದ ಬಾಯಲ್ಲಿ ಎಷ್ಟು ಸಂತೋಷ ಕತ್ತಲೆಗೆ ಸುಮ್ಮನೆ ನಗುತ್ತಿದೆ ಅರಿವೆ ಧರಿಸಿರುವ ನನ್ನ ನೋಡಿ. ಒ ಗೇಟಿನ ಸಪ್ಪಳ ಎಲ್ಲಿ ಅಡಗಿಕೊಳ್ಳಲಿ ದಾರಿಯನ್ನೂ ಬಿಡುವುದಿಲ್ಲ ಇವರು. I have picked up a darkness I have picked up A darkness Made the birds to sleep And stars to get up Only few hours left Tobe on talk With the trees and hedges Tobe silent with Those are speechless One by one I turn off the lights Darkness makes me courageous Through the mouth Of clock Walls start to talk How cheerful This darkness is! Simply smiles at me Looking at my full atire. Oh! Sound of gatedoor Where shall i hide now Not allowing the path These are ,,,, **** Translated by– Nagarekhagaonkar

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಪ್ರಭುವೆ ಕನ್ನಡ ಕವಿತೆ:ನಂದಿನಿ ವಿಶ್ವನಾಥ ಹೆದ್ದುರ್ಗ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನಂದಿನಿ ವಿಶ್ವನಾಥ ಹೆದ್ದುರ್ಗ ನಾಗರೇಖಾ ಗಾಂವಕರ್ ಪ್ರಭುವೆ ಹಚ್ಚಿಕೊಂಡ ನಂಬಿಕೆಯೊಂದು ಕಾಯುವ ಬಯಕೆ ಹುಟ್ಟಿಸುತ್ತದೆ ಪ್ರಭುವೇ. ಕಾಲ ಭಾವಗಳ ಮಾಗಿಸಬಹುದು ಬಾಗಬಹುದು ಬಲು ಗಟ್ಟಿ ಎನಿಸಿದ್ದ ಒಳಗಿನ ಒಣ ಅಹಮ್ಮು. ಬರಡು ಎದೆಯಲ್ಲೂ ಕಳೆಹೂವುಗಳು ಅರಳಿ ಅಸಡ್ಡೆಯಲ್ಲಿ ಬಿಗಿದ ಈ ತುರುಬಿಗಿಡುವ ಆಸೆಯುದಿಸಬಹುದು. ಭೂತದ ಬೇತಾಳ ಈ ಹೆಗಲಿಂದ ಜಿಗಿದು ನೇತಾಡಿದ ಮರದಡಿಯಲ್ಲೇ ಕುಳಿತು ಹೊಸ ಮಾದರಿ ಕನಸ ಹೆಣೆಯಬಹುದು. ಹಿಡಿ ಮಣ್ಣಿನಲ್ಲಿ ಜಗ ಅಡಗಿರುವ ಕುರಿತು ತಡವಾಗಿಯಾದರೂ ಅರಿವಾಗಬಹುದು. ನಾಳಿನ ಸೂರ್ಯನೆದೆಯಲ್ಲಿ ಬಾಳಿನ‌ ಬಣ್ಣ ತುಳುಕಾಡಬಹುದು. ಹಣೆಯ ಹಳೆ ಬರಹ ಬರೆದವ ಬದಲಿಸಿ ಶುಭವಾಗಲಿ ಎಂದಾಗ ಹೊಸದಾಗಿ ಸಪ್ತಪದಿ ಬಯಕೆ ಮೂಡಬಹುದು.. ಅತಿಯೆಂದು ಹಂಗಿಸದಿರು ಪ್ರಭುವೇ… ಮರಳುಗಾಡಿಗೂ ಆಗಾಗ ಅತಿವೃಷ್ಟಿ ಯೋಗವಿದೆ. ನಡುದಾರಿಯಲ್ಲೂ ಬೀಜವೊಂದು ಕುಡಿಯೊಡೆದ ಕುರುಹಿದೆ. ಎದೆ ಕಿಟಿಕಿಯ ಗಾಜು ಒರೆಸಿಡುತ್ತೇನೆ ನಾನೇ ಬೆಳಕು ಬಾಗಿ ಒಳಗಿಳಿಯಲು ತುಸುವಾದರೂ ಸಹಕರಿಸು ಪ್ರಭುವೆ. ******** Oh! My lord! A sincere faith evokes the desire to wait, My lord. As the time rolls on emotions can be ripen The self esteem inside supposed to be hard can be bent down Blossom may appear on my dried up bosom And evoke the desire to wear it on my gnarled knot. Jumped off this shoulder And sitting on the same tree, clinged earlier the haunting past may braid new dreams. Lately may be awared that the whole world is within a handful of soil All colours of my future life may spill out In tomorrow’s sun rays. When the intender changes my destiny written earlier and Wishes me good luck, Then it may arise the desire to cover saptapadi(seven steps) once again in life “Its too much” Don’t hurl an abuse like this, my lord. Even in the desert there is a possibility of a flood. In the middle of the road,there is a sign of sprouted seed. Myself will clean the window panes of my heart, My Lord, Please… assist.. the light to bow down and enter into it. **********

ಅನುವಾದ ಸಂಗಾತಿ Read Post »

You cannot copy content of this page

Scroll to Top