ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ “ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ” ಗೊಗ್ಗವ್ವೆ ಬಾಲ್ಯದಿಂದಲೂ ವಿಶಿಷ್ಟ ಶಿವಭಕ್ತೆ. ಇವಳ ಜೀವನ ಒಂದು ಬಗೆಯ ಹೋರಾಟದಿಂದ ಕೂಡಿದೆ. ಹೆತ್ತವರು ಈಕೆಗೆ ವಿವಾಹ ಮಾಡಲು ಬಯಸಿದಾಗ, ಮದುವೆ ಬಗ್ಗೆ ಆಸಕ್ತಿ ಇರದ ಈಕೆ ‘ಗೊಗ್ಗಳೇಶ್ವರ’ ದೇಗುಲದಲ್ಲಿ ಅಡಗಿ ಕುಳಿತು ವಿವಾಹ ಆಗುವ ಸಂದರ್ಭವನ್ನು ತಪ್ಪಿಸಿಕೊಂಡ ಳಂತೆ. ಇವಳು ಕೇರಳದ ಅವಳೂರಿನ ಗೊಗ್ಗಳೇಶ್ವರ ದೇವಾಲಯದಲ್ಲಿ ಧೂಪದ ಕಾಯಕ ಮಾಡುತ್ತಿದ್ದುದರಿಂದ ಈಕೆಯನ್ನು ‘ಧೂಪದ ಗೊಗ್ಗವ್ವೆ’ಯೆಂದೂ ಕರೆಯುವರು. ಗುಗ್ಗಳ ಧೂಪ ಸಸ್ಯದ ಒಂದು ಪ್ರಕಾರದ ಅಂಟು. ಪೂಜೆ ಸಮಾರಂಭಗಳಲ್ಲಿ ಪರಿಮಳ ಸೂಸುವ ಕಾರ್ಯಕ್ಕೆ  ಬೆಂಕಿಯಲ್ಲಿ ಈ ಧೂಪದ ಪದಾರ್ಥವನ್ನು ಹಾಕಿ ವಾತಾವರಣವನ್ನು ಪ್ರಸನ್ನಗೊಳಿಸುವ ಕೆಲಸ ಕಾಯಕವಾಗಿತ್ತು. ಈಕೆಯ ವಚನಗಳ ಅಂಕಿತ ‘ನಾಸ್ತಿನಾಥಾ’. ಗೊಗ್ಗವ್ವೆ ಜನನ ೧೨ ನೆಯ ಶತಮಾನ ಅಂಕಿತನಾಮ ನಾಸ್ತಿನಾಥಾ ಒಟ್ಟು ವಚನಗಳು. ೬ ಇವರು ೧೨ನೇ ಶತಮಾನದ ವಚನಕಾರರಲ್ಲಿ ಒಬ್ಬರು. ಇವರು ಬಾಲ್ಯದಿಂದಲೆ ಶಿವನ ಆರಾಧಕರಾಗಿದ್ದರು. ಇವರು ಮೂಲತಃ ಕೇರಳ ರಾಜ್ಯದ ಅವಲೂರಿನವರು. ಇವರು ತಮ್ಮ ಮದುವೆಯ ವಯಸ್ಸಿಗೆ ಬಂದಾಗ ಮನೆಯವರು ಇವರ ಮದುವೆ ವಿಷಯದ ಪ್ರಸ್ತಾವನೆ ಇವರ ಮುಂದಿಟ್ಟರು. ಆದರೆ ಇವರಿಗೆ ಮದುವೆಯ ವೈವಾಹಿಕ ಜೀವನ ಆಸಕ್ತಿ ಇಲ್ಲದಿರುವ ಕಾರಣ ಅವರೂರಿನ ಗೊಗ್ಗಳೇಶ್ವರ ದೇವಾಲಯದಲ್ಲಿ ಅಡಗಿ ಕುಳಿತಿದ್ದರಂತೆ.‌ ಮನೆಯವರು ಎಷ್ಟೇ ಕರೆದರು ಇವೆಲ್ಲವೂ ಬೇಡವೆಂದು ಆ ದೇವಾಲಯದಲ್ಲಿಯೇ ಶಿವನಿಗೆ ಪೂಜೆ ಕೈಂಕರ್ಯಗಳನ್ನು ಮಾಡತೊಡಗಿದರು. ಶಿವನಿಗೆ ದಿನಾಲು ಧೂಪ ಹಾಕುವ ಕಾಯಕವನ್ನು ಮಾಡುತಿದ್ದರಂತೆ. ಒಂದು ದಿನ ಸಾಕ್ಷಾತ್ ಪರಶಿವನೇ ಇವರನ್ನು ಪರೀಕ್ಷಿಸಲು ಬಂದಿದ್ದರಂತೆ. ಇವರ ಬಳಿ ಬಂದು ಕೈಲಾಸಕ್ಕೆ ಹೋಗುವ ದಾರಿಯನ್ನು ಕೇಳಿದ್ದರಂತೆ. ಇವರು ಗೊಗ್ಗವ್ವೆಯವರು ಶಿವನಿಗೆ ತಮ್ಮ ಧೂಪದ ಹೊಗೆಯ ಮೂಲಕ ಶಿವನಿಗೆ ಕೈಲಾಸದ ದಾರಿ ತೋರಿಸಿದರಂತೆ. ಇಂತಹ ಒಂದು ಪುರಾಣವು ಬಸವೋತ್ತರ ಕಾಲದಲ್ಲಿ ಸೃಷ್ಟಿಯಾಗಿದ್ದು ಕಂಡು ಬರುತ್ತದೆ.  ಧೂಪ ಹಾಕುವ ಕಾಯಕವನ್ನು  ಮುಂದುವರಿದಂತೆ ಇತ್ತ ಕಲ್ಯಾಣ ಕರ್ನಾಟಕದತ್ತ ಬಂದು ಅನುಭವ ಮಂಟಪದಲ್ಲಿ ಶರಣರೊಂದಿಗೆ  ನೆಲೆಸಿದಳು. ನಾಸ್ತಿನಾಥಾ’ ಅಂಕಿತದಲ್ಲಿ ೬ ವಚನಗಳನ್ನು ರಚಿಸಿದ್ದಾಳೆ. ಅವುಗಳಲ್ಲಿ ಲಿಂಗಾಂಗ ಸಾಮರಸ್ಯ, ಸ್ತ್ರೀ ಪುರುಷ ಸಮಾನತೆಯ ಚಿಂತನೆಗೆ ಅದ್ಯತೆ ನೀಡಲಾಗಿದೆ. ಸರಳ ಭಾಷೆ, ವೃತ್ತಿಪರಿಭಾಷೆಯ ಬಳಕೆಯಿಂದ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ ಇವರು ಭಾಷೆ ಗಡಿಗೂ ಮೀರಿದ ಶಿವಶರಣೆಯಲ್ಲಿ ಒಬ್ಬರು. ಇಲ್ಲಿ ಕರ್ನಾಟಕಕ್ಕೆ ಬಂದು ಇಲ್ಲಿ ನೆಲೆಸಿ ಭಾಷೆ ಸಾಹಿತ್ಯವನ್ನು ಅರಿತು ವಚನಗಳನ್ನು ರಚಿಸಿದರೆಂದರೆ ಇವರ ಸಾಧನೆ ಕಾಯಕ ಅಮೋಘ ಕೊಡುಗೆ.       ಧೂಪದ ಗೊಗ್ಗವ್ವೆಯ ಆರು ವಚನಗಳು ಲಭ್ಯವಾಗಿವೆ. 1 ನೆಯ ವಚನ ಅನಲಕೊಂಡ ಭೋಗಕ್ಕೆ ಪರಿ ಪ್ರಕಾರವುಂಟೇ ? ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೇ ? ಲಿಂಗ ಮುಟ್ಟಿದ ಅಂಗಕ್ಕೆ ಮತ್ತೆ ಪುಣ್ಯವುಂಟೇ ? ಹುಸಿ ನಾಸ್ತಿನಾಥಾ! 2  ವಚನ… ಉದ್ದವನೇರುವದಕ್ಕೆ ಗದ್ದುಗೆಯಿಲ್ಲದೆ ಎಯ್ದಬಾರದು, ಚಿದ್ರೋಪನರಿಯುವದಕ್ಕೆ,ಅರ್ಚನೆ,ಪೂಜೆ ನಿತ್ಯ ನಿಯಮವಿಲ್ಲದೆ ಕಾಣಬಾರದು.ಅದು ಸತ್ಯದಿಂದ ಮಾಡಿ,ಅಸತ್ಯವ ಮೆರೆದೆಡೆ ಅದೇ ಸತ್ಯವೆಂಬೆ ನಾಸ್ತಿನಾಥ॥॥ 3ನೇ ವಚನ ॥॥ ಗಂಡು ಮೋಹಿಸಿ,ಹೆಣ್ಣು ಹಿಡಿದೆಡೆ ಒಬ್ಬರ ಒಡವೆ ಎಂದರಿಯಬೇಕು.ಹೆಣ್ಣು ಮೊಹಿಸಿ,ಗಂಡು ಹಿಡಿದೆಡೆ ಉತ್ತರವಾವುದೆಂದರಿಯಬೇಕು.ಈ ಎರಡು ಉಭಯವ ಕಳೆದು ಸುಖಿ ತಾನಾಗಬಲ್ಲೆದು ನಾಸ್ತಿನಾಥನು ಪರಿಪೂರ್ಣನೆಂಬೆ॥॥ 4 ನೇ ವಚನ ಮಾರುತನಲ್ಲಿ ಬೆರೆದ ಗಂಧದಂತೆ,ಸುರತದಲ್ಲಿ ಬೆರೆದ ಸುಖದಂತೆ,ಮಚ್ಚಿನಲ್ಲಿ ಕೊಡುವ ಉಚಿತದಂತೆ ಭಕ್ತರಿಗದೆ ಹಾದಿಎಂಬೇ ನಾಸ್ತಿನಾಥ॥॥ 5 ನೇ ವಚನ ಭಕ್ತರು ಜಂಗಮರಲ್ಲಿ ಕಟ್ಟಿ ಹೋರಬೇಕೆ.. ಧೂಪದ ಹೊಗೆ ಎತ್ತೆ ಹೋದರು ಅದು ಸತ್ಯವೆಂಬೆ ನಾಸ್ತಿನಾಥ॥॥ 6 ನೇ ವಚನ ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರು, ಮಿಸೆ,ಕಾಸಿ ಬಂದೆಡೆ ಗಂಡೆಂಬರು ಈ ಎರಡು ಉಭಯವು ಹೆಣ್ಣೊ ಗಂಡೊ ಹುಸಿ ನಾಸ್ತಿನಾಥ॥॥  ಕಲ್ಯಾಣದ ಕ್ರಾಂತಿ ನಡೆದಾಗ ಎಲ್ಲ ಶಿವಶರಣರು ಚದುರಿ ಬೇರೆ ಬೇರೆ ಪ್ರದೇಶಗಳಿಗೆ ವಚನಗಳನ್ನು ಹೊತ್ತು ಹೋದರು. ಆದರೆ ಗೊಗ್ಗವ್ವೆ   ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ಧೂಪತಮಾಹಾಗಾಂವ ಎಂಬ ಗ್ರಾಮದಲ್ಲಿ ಬಂದು ನೆಲೆಸಿದರು. ಇದೆ ಕಾರಣಕ್ಕೆ  ಈ ಊರಿಗೆ  ಧೂಪತಮಾಹಾಗಂವ ಎಂಬ ಹೆಸರು  ಬರಲು ಇವರೇ ಕಾರಣ. ಐಕ್ಯ ಸ್ಥಳ  ಇವರು ಧೂಪ ಉರಿಸುತಿದ್ದ ಕಾರಣ  ಊರಿನ ಇದ್ದ ಹೆಸರನ್ನು ಬದಲಿಸಿ ಧೂಪತಮಾಹಾಗಂವ ಎಂದು ಮರುನಾಮಕರಣ ಮಾಡಿದ್ದರಂತೆ ಈ ಗ್ರಾಮಕ್ಕೆ ಉಲ್ಲೇಖವಿದೆ. ಇವರು ಐಕ್ಯವಾದ ಸ್ಥಳದಲ್ಲಿ ಒಂದು ದೇವಾಲಯವು ನಿರ್ಮಾಣವಾಗಿದೆ. ಇವಾಗ ಮತ್ತೆ ಆ ದೇವಾಲಯದಲ್ಲಿ ಭವ್ಯವಾದ ತೋಟವನ್ನು ನಿರ್ಮಿಸಿದ್ದಾರೆ. ಇಲ್ಲಿ ಗೊಗ್ಗವ್ವೆ ಕೆರೆ ಎಂತಲೂ ಕೂಡ ಇದೆ.  ತನ್ನ ವಚನಗಳಲ್ಲಿ ಸ್ತ್ರೀ ಸಂವೇದನೆ ಸಮಾನತೆಯ ಮೂಲಕ ಗಂಡು ಹೆಣ್ಣು ಸಮಾನರು ಎಂದು ಪ್ರತಿಪಾದಿಸಿದ ದಿಟ್ಟ ಮಹಿಳೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ “ದಿಟ್ಟ ಗಣಾಚಾರಿ ಶರಣೆ ಗೊಗ್ಗವ್ವೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ, “ಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀಬಂಥನಾಳ ಸಂಗನಬಸವ ಸ್ವಾಮಿಗಳು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ, “ಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀಬಂಥನಾಳ ಸಂಗನಬಸವ ಸ್ವಾಮಿಗಳು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಹನ್ನೆರಡನೆಯ ಶತಮಾನದ  ಶರಣರು  ಜಗತ್ತಿಗೆ ಸತ್ಯ ಸಮತೆ ಶಾಂತಿ ಪ್ರೀತಿ ನೀಡಿ ಸಾರ್ವಕಾಲಿಕ ಸಮಾನತೆ ಸಾರಿಧ ದಾರ್ಶನಿಕರು.  ಬಸವಯುಗ ವಚನಸಾಹಿತ್ಯದ ಸುಗ್ಗಿಕಾಲ. 12ನೆಯ ಶತಮಾನದ ಮಧ್ಯಭಾಗದಲ್ಲಿ ಮೈಮುರಿದು ಎದ್ದ ಲಿಂಗಾಯತ ಆಂದೋಲನ ಕನ್ನಡ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಆಚಾರ-ವಿಚಾರ, ಭಾಷೆ-ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೊಸತನ್ನು ತುಂಬಿತು. ಬಸವಣ್ಣ, ಚನ್ನಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ, ಸಿದ್ಧರಾಮ, ಮಡಿವಾಳ ಮಾಚಿದೇವ ಇವರು ಸ್ಥಾಪಿಸಿದ ಜನಮುಖಿ ಸಾಮಾಜಿಕ ಸೇವೆಯ ಪರಂಪರೆಯನ್ನು ಮುಂದಿನ ಶರಣ ಧರ್ಮದ ಸ್ವಾಮಿಗಳು   ನಿರಂತವಾಗಿ ನಡೆಸಿಕೊಂಡು ಬಂದಿದ್ದಾರೆ. ಅಂತಹವರ ಸಾಲಿನಲ್ಲಿ ಪರಮ ಪೂಜ್ಯ ತೋಂಟದ ಎಡೆಯೂರಿ ಶ್ರೀ ಸಿದ್ಧಲಿಂಗ ಶಿವಯೋಗಿಗಳು, ಜೇವರಗಿ ಷಣ್ಮುಖ ಶಿವಯೋಗಿಗಳು ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು, ಮುರುಗೋಡ ಶ್ರೀ ಮಹಾಂತಪ್ಪಜ್ಜನವರು,  ಗಚ್ಚಿನ ಮಠದ ಶ್ರೀ ಸಿದ್ಧಲಿಂಗಪ್ಪನವರು ಜಯದೇವ ಜಗದ್ಗುರುಗಳು , ಇಂತವರ ಸಾಲಿನಲ್ಲಿ ನಿಲ್ಲುವವರು ನಮ್ಮ ಬಂಥನಾಳ ಶ್ರೀ ಸಂಗನಬಸವ ಸ್ವಾಮಿಗಳು.  ಬಾರದ ನೆಲದಲ್ಲಿ ಬದುಕಿನ ಭರವಸೆಯನ್ನು ನೀಡಿದ ಅಪ್ರತಿಮ ಶಿವಯೋಗ ಸಾಧಕರು.   ಜನನಮತ್ತುಬಾಲ್ಯ————————————ಬಂಥನಾಳ ಸಂಗನಬಸವ ಶಿವಯೋಗಿಗಳ ಜನನವು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಶರಣ ದಂಪತಿಗಳಾದ ಗೌರಾಂಬೆ ಮತ್ತು ಪರುತಯ್ಯ ನವರ ಪುತ್ರರಾಗಿ 1900 ರ ಜುಲೈ 27ರಂದು ಜನಿಸಿದರು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು ಬಾಲ್ಯದಲ್ಲೆ ಪುರಾಣ ಪ್ರವಚಣ ಪೌರಾಣಿಕ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದರು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲ್ಯದಲ್ಲಿಯೇ ಅಪೂರ್ವ ತೇಜಸ್ಸು, ಹಸನ್ಮುಖತೆಗೂಡಿಸಿಕೊಂಡು ಬೆಳೆದರು.ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. 6ನೇ ತರಗತಿಯಲ್ಲಿ‘ರಾಜಾ ಸತ್ಯಹರಿಶ್ಚಂದ್ರ’ ಎಂಬ ಪೌರಾಣಿಕ ನಾಟಕದಲ್ಲಿ ತಾರಾಮತಿ ಪಾತ್ರಧಾರಿಯಾಗಿ ಅಭಿನಯಿಸಿ ಸುತ್ತಲ ಗ್ರಾಮಸ್ಥರ ಮೆಚ್ಚುಗೆ ಪಡೆದರು. 1913ರಲ್ಲಿ ಯರನಾಳ ಮಠದ ಪಂಪಾಪತಿ ಸ್ವಾಮೀಜಿ ಅವರು 11 ವರ್ಷದ ಸಂಗನಬಸವ ಶಿವಯೋಗಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವಿಕರಿಸಿದರು. ಮುಂದೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮಠದ ಶಾಂತವೀರ ಶ್ರೀಗಳ ಸಮ್ಮುಖದಲ್ಲಿ ಸಂಸ್ಕೃತ ಭಾಷೆ, ಸಾಹಿತ್ಯದ ಮೇಲೆ ಅಪಾರ ಪಾಂಡಿತ್ಯ ಸಂಪಾದಿಸಿದರು. ಕೆಲವು ದಿನಗಳು ಗತಿಸಿದ ನಂತರ ಬಂಥನಾಳ ಮಠದ ಹಿಂದಿನ ಪೀಠಾಧಿಪತಿ ಚನ್ನಬಸವ ಶ್ರೀಗಳ ಅಪ್ಪಣೆಯಂತೆ ಸಂಗನಬಸವ ಶ್ರೀಗಳು 1916ರಲ್ಲಿ ಬಂಥನಾಳ ಮಠದ 4ನೇ ಪೀಠಾಧಿಪತಿಗಳನ್ನಾಗಿ ನಿಯೋಜಿಸುವಲ್ಲಿ ಲಚ್ಯಾಣ ಸಿದ್ದಲಿಂಗ ಮಹಾರಾಜರು ಶ್ರಮಿಸಿದರು. ನಂತರ ಕೆಲವು ದಿನ ಭೀಮಾ ತೀರದ ಭೀಮೇಶ್ವರ ಬೆಟ್ಟದಲ್ಲಿ ಶಿವಧ್ಯಾನ, ಶಿವಚಿಂತನೆ, 30 ದಿನ ಮೌನಾಚರಣೆ ವ್ರತ ಕೈಗೊಂಡರು. ಪೀಠಾಧಿಪತಿಯಾಗಿಆಯ್ಕೆ—————————————ವೃಷವಲಿಂಗ ಸ್ವಾಮಿಗಳಿಂದ ಸ್ಥಾಪಿತವಾದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ಶ್ರೀಮಠವು ಧಾರ್ಮಿಕ ಮತ್ತು ರಾಷ್ಟ್ರಧರ್ಮದ ಕಾರ್ಯಗಳಿಂದ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ. ಶ್ರೀಮಠ ಪೀಠಾಧಿಪತಿಗಳಾದ ಶ್ರೀ ಸಂಗನಬಸವ ಸ್ವಾಮೀಜಿ ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು. ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಬಲೇಶ್ವರದ ಶ್ರೀ ಶಾಂತವೀರ ಸ್ವಾಮಿಗಳಿಂದ ಸಂಸೃತ ಕಲಿತು 1916ರಲ್ಲಿ ಬಂಥನಾಳ ಮಠಕ್ಕೆ ನಾಲ್ಕನೇ ಪೀಠಾಧಿಪತಿಯಾಗಿ ನಿಯೊಜನೆಗೊಂಡರು. ಶಿಕ್ಷಣಸೇವೆ————————-ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದ ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು ಅವುಗಳು ಇಂದು ಶತಮಾನ ಸಂಭ್ರಮದಲ್ಲಿದ್ದು ಶ್ರೀಗಳ ಕೀರ್ತಿ ಕಿರೀಟಗಳು. ವಿಜಯಪುರ ಜಿಲ್ಲೆಯಲ್ಲಿ ಇಂದು‌ ಹಲವಾರು ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜು ತಲೆ ಎತ್ತಲು ಕಾರಣವಾದವು.   ಅವರು ಅಂದು ಕೊಟ್ಟ ಸ್ಪೂರ್ತಿಯ ಕರೆ. ಶೈಕ್ಷಣಿಕ ಕ್ರಾಂತಿ ಮಾಡಿ ಮಠಗಳ ‌ಮೂಲಕ ರಾಷ್ಟ್ರಾಭಿಮಾನ ಹೆಚ್ಚಿಸಿದ, ಸ್ವಾತಂತ್ರ್ಯ ಹೋರಾಟಗಾರರ ಬೆಂಬಲಕ್ಕೆ ನಿಂತು ಅವರಿಗೆ ಆಶ್ರಯ ನೀಡಿ ಹೋರಾಟಕ್ಕೆ ಅಣಿಯಾದ ಧೀರ ಸನ್ಯಾಸಿ ಈ ನಮ್ಮ ಬಂಥನಾಳ ಸಂಗನವಸವ ಶಿವಯೋಗಿಗಳು. 1923ರಲ್ಲಿ ಕರ್ನಾಟಕದ ಗಾಂದಿ ಹರ್ಡೆಕರ್ ಮಂಜಪ್ಪನವರಿಂದ ರಾಷ್ಟ್ರದೀಕ್ಷೆ ಪಡೆದರು. ಹರ್ಡೆಕರ್ ಮಂಜಪ್ಪನವರು ಒಂದು ರಾಷ್ಟ್ರ ಬೆಳೆಯಬೇಕಾದರೆ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ಶಿಕ್ಷಣ ಅವಶ್ಯ ಎಂದು ಹೇಳಿದರು. ಅಂದಿನಿಂದ ಖಾದಿ ಧರಿಸಿ ಮಠದ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರದ್ವಜಾರೋಹಣ ಮಾಡಲು ಪ್ರಾರಂಬಿಸಿದರು.ಸಮಾಜಸೇವೆ1925ರಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಕಟ್ಟಿದ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರಾಗಿ  ಶೈಕ್ಷಣಿಕ‌ ಕೇಂದ್ರ ಮತ್ತು ದಾಸೋಹ ನಿಲಯ ಸ್ಥಾಪಿಸಿದರು. 1950 ರಲ್ಲಿ ಲಚ್ಯಾಣ  ಗ್ರಾಮದಲ್ಲಿ ಸರ್ವಧರ್ಮ ಸಮ್ಮೇಳನ, ಸೊನ್ನದಲ್ಲಿ 1953 ಮತ್ತು  1963ರಲ್ಲಿ ಮಂಟಪ‌ ಪೂಜೆ ಮಾಡಿದ್ದಾರೆ. ವಿಜಯಪುರ ನಗರದಲ್ಲಿ 1954ರಲ್ಲಿ 770 ಅಮರಗಣಾಧೀಶ್ವರರ ಪೂಜೆ ನೇರವೇರಿಸಿದರು ಈ ಮಹಾತ್ಕಾರ್ಯದ ಸ್ಮರಣಾರ್ಥ ಬ್ರಹತ್   ಲಿಂಗದಾಕಾರದ ಮಂದಿರಲ್ಲಿ 770 ಲಿಂಗಗಳನ್ನು ಸ್ಥಾಪಿಸಿ ಕೀರ್ತಿ ಗಳಿಸಿದ್ದಾರೆ. ಈ ಲಿಂಗದ ಗುಡಿ ಇಂದು ಲಕ್ಷಾಂತರ ಭಕ್ತರ ಶೃದ್ಧಾಕೇಂದ್ರವೆನಿಸಿದೆ. ಲಚ್ಯಾಣದಲ್ಲಿ ಅಮರಗಣಾಧೀಶ್ವರ ಪೂಜೆ ಲಕ್ಷದೀಪೋತ್ಸವದಂತ ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ಧಾರ್ಮಿಕ ಕೇದ್ರಗಳತ್ತ ಸೆಳೆದಿದ್ದಾರೆ. ತಾವು ಮಾಡಿದ ಪ್ರವಚನಗಳಿಂದ ಬಂದ ಹಣವನ್ನು ಶಿಕ್ಷಣ ಕ್ಷೇತ್ರ ಬೆಳವಣಿಗೆಗಾಗಿ ಬಳಿಸಿದ್ದಾರೆ ಹಲವಾರು ಶಾಲೆಗಳನ್ನು ಕಟ್ಟಿ ಬೆಳೆಸಿದ್ದಾರೆ. ನಿತ್ಯ ನಿರಂತರ ದಾಸೂಹ ಮಾಡಿ ದಾಸೋಹ ಮೂರ್ತಿಯಾಗಿದ್ದಾರೆ. ಸ್ವಾತಂತ್ರ ಹೋರಾಟಗಾರರಿಗೆ ಶ್ರೀ ಮಠದಲ್ಲಿ ಆಶ್ರಯ, ನೆಲೆ ನೀಡಿ ರಕ್ಷಿಸಿದ್ದಾರೆ. ಶ್ರೀಗಳು ದಾಸೋಹ, ಶೈಕ್ಷಣಿಕ, ರಾಷ್ಟ್ರಭಕ್ತಿ, ಧರ್ಮಜಾಗೃತಿ ನಡೆಸಿದ್ದಾರೆ.ಶೈಕ್ಷಣಿಕಕ್ರಾಂತಿಯಹರಿಕಾರ——————————————ವಿದ್ಯಾರ್ಥಿಗಳೇ ದೇವರ, ವಿದ್ಯಾಲಯವೇ ದೇವಾಲಯ ಎಂಬ ಮಂತ್ರ ಪಠಣದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದ ಸಂತ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು. ನಾಡಿನೆಲ್ಲೆಡೆ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ಶೈಕ್ಷಣಿಕ ಕ್ರಾಂತಿ ಮಾಡಿದ ಶ್ರೀಗಳು, ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. 18ನೇ ಶತಮಾನದಲ್ಲಿ ವೃಷಭಲಿಂಗ ಮಹಾಶಿವಯೋಗಿಗಳಿಂದ ಸ್ಥಾಪಿತವಾದ ಬಂಥನಾಳ ಮಠದ ಕೊಡುಗೆ ಅನನ್ಯ. ಮಠದ ಈ ಹಿಂದಿನ ಪೀಠಾಧಿಪತಿಗಳಾದ ಶಂಕರಲಿಂಗ ಶಿವಯೋಗಿಗಳು, ಚನ್ನಬಸವ ಶಿವಯೋಗಿಗಳು ಕುಗ್ರಾಮವನ್ನು ಸುಕ್ಷೇತ್ರವನ್ನಾಗಿಸಲು ಶ್ರಮಿಸಿದರು. ಬಸವಾದಿ ಪ್ರಮತರ ದಾರಿ ಕ್ರಮಿಸಿದರು. ತದನಂತರ ಬಂದ ಪೀಠಾಧಿಪತಿ ಸಂಗನಬಸವ ಮಹಾಶಿವಯೋಗಿಗಳ ಸಮಾಜ ಮುಖಿ ಕಾರ್ಯಗಳಿಂದ ಮಠದ ಕೀರ್ತಿ ಮುಗಿಲೆತ್ತರಕ್ಕೆರಿದೆ. ಪ್ರವಚನದ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡರು. ಅವಿರತ ಪ್ರಯತ್ನದಿಂದ ಶೈಕ್ಷಣಿಕವಾಗಿ ಬರಡಾಗಿದ್ದ ವಿಜಯಪುರ ಜಿಲ್ಲೆಯನ್ನು ಶಿಕ್ಷಣದ ತವರೂರನ್ನಾಗಿಸಿದರು. ಪರಿಣಾಮ ವಿಜಯಪುರ ಜಿಲ್ಲೆಯಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತವು. ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅನೇಕ ಬಡ ವಿದ್ಯಾರ್ಥಿಗಳು ನಾಡಿನ ನಾನಾ ಭಾಗದಲ್ಲಿ ಸರ್ಕಾರಿ ನೌಕರಿ ಪಡೆದು ಸ್ವಾವಲಂಬಿಯಾಗಿ ಬದುಕುತ್ತ, ತಮ್ಮ ಜೀವನವನ್ನು ಪಾವನಗೊಳಿಸಿಕೊಂಡಿದ್ದಾರೆ. ಲಿಂಗೈಕ್ಯ ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳು 1972 ಮೇ 7ರಂದು ಲಿಂಗೈಕ್ಯರಾದರು. *ಪ್ರಮುಖಘಟನಾವಳಿಗಳು* 1923 ರಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ನೇತೃತ್ವದಲ್ಲಿ ರಾಷ್ಟ್ರೀಯ ದೀಕ್ಷೆ ಸ್ವೀಕಾರ. 1925 ರಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು ಸ್ಥಾಪಿಸಿದ ವಿಜಯಪುರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರಾಗಿ ಸೇವೆ. 1950 ರಲ್ಲಿ ಸರ್ವಧರ್ಮ ಸಮ್ಮೇಳನ ಆಯೋಜನೆ.1953 ರಲ್ಲಿ ಸೊನ್ನದಲ್ಲಿ 63 ಪುರಾತನ ಮಂಟಪ ಪೂಜೆ. 1954 ರಲ್ಲಿ ವಿಜಯಪುರ ನಗರದಲ್ಲಿ 770 ಅಮರಗಣಾಧೀಶ್ವರರ ಪೂಜೆ. 1968 ರಲ್ಲಿ ವೃಷಭಲಿಂಗ ಮಹಾಶಿವಯೋಗಿಗಳನ್ನು ಬಂಥನಾಳ – ಲಚ್ಯಾಣ ಮಠದ ಪೀಠಾಧಿಪತಿಗಳನ್ನಾಗಿ ನೇಮಕ. 1969 ರಲ್ಲಿ ಲಚ್ಯಾಣದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅಮರಗಣದಿಶ್ವರರ ಪೂಜೆ, ಲಕ್ಷದೀಪೋತ್ಸವದಂತಹ ಮಹಾನ್ ಧಾರ್ಮಿಕ ಕಾರ್ಯಕ್ರಮ ಆಯೋಜನೆ. 1972 ರ ಮೇ 7 ರಂದು ಬಂಥನಾಳದಲ್ಲಿ ಲಿಂಗೈಕ್ಯ.  ಬಡತನ ಅಕ್ಷರವಂಚಿತ ಬರಗಾಲ ಪೀಡಿತ ಪ್ರದೇಶವೆಂದು ಕೆಟ್ಟ ಹೆಸರಿಗೆ ಕಾರಣವಾದ ವಿಜಯಪುರಕ್ಕೆ ಹೊಸ ಕಾಯಕಲ್ಪ ಕಲ್ಪಿಸಿಕೊಟ್ಟವರು ಶ್ರೀ ಬಂಥನಾಳ ಸಂಗನ ಬಸವ ಸ್ವಾಮಿಗಳು. ಇಂತಹ  ಪರಮ ಪೂಜ್ಯರ ಮೆಟ್ಟಿದಾನೆಲವೆ ಪಾವನ. ಪೂಜ್ಯರ ಕನಸುಗಳು ನನಸಾಗಿ ವಿಜಯಪುರವು ಸಕಲ  ಐಭೋಗಳ ಐಸಿರಿಯ ರಾಜಧಾನಿಯಾಗಲಿ. ಶ್ರೇಷ್ಠ ಶಿವಯೋಗ ಸಾಧಕರಾದ ಪರಮ ಪೂಜ್ಯ ಶ್ರೀ ಬಂಥನಾಳ ಸಂಗನ ಬಸವ ಸ್ವಾಮಿಗಳಲ್ಲಿ ಭಕ್ತಿ ಪೂರ್ವಕ ಶರಣಾರ್ಥಿಗಳು ಡಾಶಶಿಕಾಂತಪಟ್ಟಣರಾಮದುರ್ಗಪುಣೆ

ಸಾವಿಲ್ಲದ ಶರಣರು ಮಾಲಿಕೆ, “ಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀಬಂಥನಾಳ ಸಂಗನಬಸವ ಸ್ವಾಮಿಗಳು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ”ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಕರ್ನಾಟಕವು ಹಲವು ಶರಣರ ಸಂತರ ದಾರ್ಶನಿಕರ ನೆಲೆಬೀಡು.  ಸಂಪ್ರದಾಯಸ್ಥ ವಿಶ್ವ ಕರ್ಮರ  ಕುಟುಂಬದಲ್ಲಿ ಜನಿಸಿ ಅತ್ಯಂತ ವೈಚಾರಿಕತೆಯ ವಚನಗಳನ್ನು ರಚಿಸಿ ಸಾಮಾಜಿಕ ಧಾರ್ಮಿಕ ಅಂಕು ಡೊಂಕುಗಳನ್ನು ತಿದ್ದಿ ಟೀಕಿಸುವ ವಿಡಂಬಿಸುವ ತನ್ನ ಹುಟ್ಟು ಕುಲದ ಜನರನ್ನೇ ಟೀಕಿಸಿ ಎಚ್ಚರಿಸುವ ದಿಟ್ಟ ಶರಣ ಸಂಸ್ಕೃತಿಯ ವಾರಸುದಾರ ತಿಂಥಣಿ ಮೌನೇಶ್ವರ ಅಥವಾ ಮೌನಪ್ಪ ಮೌನೋದ್ದಿನ ಎಂಬ ಬೇರೆ ಬೇರೆ ಸಮುದಾಯದ ಪ್ರೀತಿಗೆ ಭಕ್ತಿಗೆ ಪಾತ್ರರಾದವರು ಮೌನೇಶ್ವರರು. ಪೌರಾಣಿಕ ಹಿನ್ನೆಲೆ ಅಂದಿನ ಗುಲಬರ್ಗಾ ಜಿಲ್ಲೆಯ ಇವತ್ತಿನ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಳ  ಎಂಬ ಗ್ರಾಮದ ಪಂಚಾಳ ಅಥವಾ ವಿಶ್ವಕರ್ಮ ಕುಲದಂಪತಿಗಳಾದ ಶೇಷಪ್ಪ ಆಚಾರ್ಯ ಮತ್ತು ಶೇಷಮ್ಮರೆಂಬ  (ಇವರಿಗೆ ಹಾವಪ್ಪ ಮತ್ತು ಹಾವಕ್ಕ ಎಂದು ಕರೆಯಲಾಗುತ್ತಿತ್ತು) ದಂಪತಿಗಳಿದ್ದರು. ಅವರಿಗೆ ಬಹಳಕಾಲ ಮಕ್ಕಳಾಗಿರಲಿಲ್ಲ. ಶೀಲೆ ಶೇಷಮ್ಮಳು ಆ ಊರಿನ ಆದಿಲಿಂಗೇಶ್ವರ ದೈವಕ್ಕೆ 12 ವರ್ಷಗಳ ಕಾಲ ದಿನನಿತ್ಯವೂ ಬೆಳಗ್ಗೆ ಪೂಜೆಗೈದು ಬರುತ್ತಿದ್ದಳು. ಕೊನೆಗೊಂದುದಿನ ಗಂಡನಿಗೆ ಸಂಶಯ ಬಂದು ಅವಳನ್ನು ಹಿಂಬಾಲಿಸಿದಾಗ ಅವನಿಗೆ ದೃಗ್ಗೋಚರವೇ ಎದುರಾಯಿತು. ಏನೆಂದರೆ ಶೇಷಮ್ಮಳು ಆದಿಲಿಂಗೇಶ್ವರನಿಗೆ ಎಂದಿನಂತೆ ಪೂಜೆಗೈದು ‘ತಂದೆ ಹನ್ನೆರಡು ವರ್ಷಗಳ ಕಾಲ ನಿನ್ನ ಪೂಜೆಗೈದಿರುವೆ ಈಗಲಾದರೂ ಮಕ್ಕಳ ಭಾಗ್ಯವನೀತ್ತು ಸಲಹು ತಂದೆ’ ಎಂದಾಗ ಸಾಕ್ಷಾತ್ ಶಿವನೇ ಪ್ರತ್ಯಕ್ಷವಾಗಿ “ಮಗಳೇ ಶೇಷಮ್ಮ ನೀನು ನನ್ನ ಪನ್ನಂಗಾಭರಣವಾದ್ದರಿಂದ ಆ ಬ್ರಹ್ಮನು ನಿನ್ನ ದೈವದಲ್ಲಿ ಸೃಷ್ಟಿ ಬೆಳೆಸುವ ಸಂತಾನ ಭಾಗ್ಯ ಫಲವನ್ನಿಡುವ ಸಾಹಸ ಮಾಡಲಿಲ್ಲ. ಆದಕಾರಣ ನಾನೇ ನಿನ್ನ ಮಗನಾಗಿ ನಾಳೆಯ ಉಷಾ ಕಾಲದಲ್ಲಿ ನಿನ್ನ ಮಗ್ಗುಲಲ್ಲಿ ಮಲಗಿರುವೆ” ಎಂದು ಹೇಳಿ ಪರಮಾತ್ಮನು ಅಂತರ್ಗತನಾಗುತ್ತಾನೆ. ಇದನ್ನೆಲ್ಲ ಪ್ರತ್ಯಕ್ಷವಾಗಿ ದೇಗುಲದ ಒಂದು ಕಂಬದ ಮರೆಯಲ್ಲಿ ನಿಂತು  ನೋಡುತ್ತಿದ್ದ ಶೇಷಮ್ಮಳ ಗಂಡ ಶೇಷಪ್ಪನ ಸಂಶಯವೆಲ್ಲವೂ ದೂರವಾಗಿ ಭಕ್ತಿಯ ಮಹಾಪೂರವು ಅವನ ಮನದಲ್ಲಿ ನೆಲೆಯಾಗುತ್ತದೆ ಎಂಬ ಐತಿಹ್ಯ ಪೌರಾಣಿಕ ಕಥೆಗಳಿಂದ ಮೌನೇಶ್ವರನ ಚಿತ್ರಣ ವ್ಯಕ್ತವಾಗಿದೆ. ನಂತರ ಪರಶಿವನೇ ಅಯೋನಿಜನಾಗಿ ಮೌನೇಶ್ವರರ ಅವತಾರದಿ ಚೆಲುವಿನ, ಚೆಂದದ, ಮುದ್ದಾದ ಮಗುವಿನ ರೂಪದಲ್ಲಿ ವರಪ್ರಸಾದವಾಗಿ ಧರೆಗಿಳಿದು ಬರುತ್ತಾನೆ ಎನ್ನುವ ಐತಿಹ್ಯವೂ ಇದೆ. ಜಗದ್ಗುರು ಶ್ರೀ ಮೌನೇಶ್ವರರು ಬರೀ ಮಹಿಮಾಪುರುಷರಲ್ಲದೆ ಕಾಲಜ್ಞಾನಿಗಳು, ವಚನಕಾರರು, ಸಮನ್ವತಾವಾದಿಗಳು, ಮಹಾನ್ ಮಾನವತಾವಾದಿಗಳೂ ಆಗಿದ್ದಾರೆ.  16ನೇ ಶತಮಾನದಲ್ಲಿ ಬರುವ ಶರಣರ, ವಚನಕಾರರ, ಸಂತರ ಸಾಲಿನಲ್ಲಿ ಮೌನೇಶ್ವರರು ಪ್ರಮುಖ ವಚನಕಾರರಾಗಿ ಕಂಡುಬರುತ್ತಾರೆ.  ಮೌನೇಶ್ವರರು ಒಟ್ಟು 796ಕ್ಕೂ ಅಧಿಕ ವಚನಗಳನ್ನು ಬರೆದಿದ್ದಾರೆ. ಮೌನೇಶ್ವರರು ತಮ್ಮ ಎಲ್ಲ ವಚನಗಳಲ್ಲಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಹೆಸರನ್ನು ಅಂಕಿತನಾಮವಾಗಿ ಬರೆದಿರುವುದನ್ನು ಕಾಣಬಹುದು. *ಭಾವೈಕ್ಯತೆಯ ಸಂತ* ಮೌನೇಶ್ವರರು ಹಿಂದೂ ಮುಸಲ್ಮಾನ ಧರ್ಮದ ಭಾವೈಕ್ಯತಾ ಸೂಚಕವಾಗಿ ಹೀಗೆ ಹೇಳಿದ್ದಾರೆ: “ಹಿಂದೂ ತುರುಕರಿಗೆ ಚಂದ್ರಮನೊಬ್ಬನೆ ನಿಂದಿಸಿದವನೇ ಅಧಮನು” ಎಂದು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ಹಿಂದೂ-ಮುಸ್ಲಿಂ ಸಾಮರಸ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಂಥಿಣಿಯ ಮೌನೇಶ್ವರರು ತಮ್ಮ ಸರಳ ಸಜ್ಜನಿಕೆಯ ಆಚಾರ ವಿಚಾರಗಳಿಂದಲೇ ಎಲ್ಲರನ್ನೂ ಆಕರ್ಷಿಸಿದ್ದರು. ಇವರು ಲಕ್ಷ್ಮೇಶ್ವರ, ಉಳವಿ, ಕಲ್ಯಾಣ, ವಿಜಯಪುರ, ಶಾಹಪುರ, ಸುರಪುರ, ದೇವದುರ್ಗ, ಲಿಂಗನಬಂಡಿ, ವರವಿ, ಛಬ್ಬಿ, ರಾಚೋಟಿ, ಶಿರಸಂಗಿ, ತಿರುಪತಿ, ಕಾಶಿ, ಮುಂತಾದೆಡೆ ತಿರುಗಾಡಿ, ಸಾಮಾಜಿಕ ಸುಧಾರಣೆಯನ್ನು  ಮೆರೆದವರೆಂಬುದು ಇತಿಹಾಸ.  ವರವಿ ಮತ್ತು ತಿಂಥಿಣಿ ಸ್ಥಳಗಳಲ್ಲಿ ಇವರ ಹೆಸರಿನ ದೇವಾಲಯಗಳಿವೆ. ಬಿಜಾಪುರದ ಸುತ್ತಮುತ್ತ ಅನೇಕ ಗುಡಿಗಳಿವೆ. ಇವು ಹಿಂದೂ-ಮುಸ್ಲಿಂ ಬೆರೆತ ಶೈಲಿಗಳಲ್ಲಿವೆ. ಮೌನೇಶ್ವರರು ವಿಶ್ವಕರ್ಮ ಸಮಾಜದಿಂದ ಬಂದವರು. ದಕ್ಷಿಣ ಭಾರತದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಜೀವನದುದ್ದಕ್ಕೂ ಸಾರಿದವರು ಮೌನೇಶ್ವರರೇ. ಅವರ ಒಂದು ಪದ್ಯ ಹೀಗಿದೆ- ‘|| ಓಂ ಏಕಲಾಖ್ ಐಂಸಿ ಹಜಾರ್ ಪಾಂಚೋ ಪೀರ್ ಪೈಗಂಬರ್ ಮೌನಾಧೀನ್ ಜಿತಾಪೀರ್ ಪೈಗಂಬರ್ ಮಾಧೀದೀ ಕಾಶೀಶೀಪತಿ ಗಂಗಾಧರ ಹರ ಹರ ಮಹಾದೇವ||’ ಮಹಮ್ಮದ್ ಪೈಗಂಬರ ಮತ್ತು ಗಂಗಾಧರ ಒಬ್ಬರೇ ಎಂದು ಮೌನೇಶ್ವರರು ಇದರಲ್ಲಿ ಸಾರಿದ್ದಾರೆ. ಈ ಮಾತಿನ ಅಖಂಡಾರ್ಥ ಮೌನೇಶ್ವರರ ಪದ್ಯದಲ್ಲಿದೆ. ಓಂ ಮತ್ತು ಅಲ್ಲಾ ಒಂದೇ ಎಂಬ ಅದ್ವಯಭಾವದ ಸಾಂಸ್ಕೃತಿಕ ಸಿದ್ಧಿಯನ್ನು ಮೊಳಗಿಸಿದ ಮಹಾಮಾನವತಾವಾದಿ, ಸಾಮಾಜಿಕ ಸಂತ ತಿಂಥಿಣಿ ಮೋನಪ್ಪಯ್ಯ! ಜನನ ತಿಂಥಿಣಿ ಮೌನೇಶ್ವರ ಎಂಬ ಹೆಸರಿನಲ್ಲಿ ಪ್ರಸಿದ್ಧಿಪಡೆದ ಇವರು ‘ಬಸವಣ್ಣ’ ಎಂಬ ಅಂಕಿತದಲ್ಲಿ ಹಲವಾರು ವಚನಗಳನ್ನು ಬರೆದಿದ್ದಾರೆ, ಹಂಪೆಯ ಎಮ್ಮೆ ಬಸವಣ್ಣನನ್ನು (ಕ್ರಿ.ಶ. 1510-1570) ವಚನದಲ್ಲಿ ನೆನೆದಿದ್ದಾರೆ. ವಿಜಯಪುರ ಜಿಲ್ಲೆಯ ಗೋಲಗೇರಿ ಎಂಬಲ್ಲಿದ್ದ 16ನೇ ಶತಮಾನದ ಕುರುಬಗೊಲ್ಲಾಳ ನನ್ನು ಮತ್ತೊಂದು ವಚನದಲ್ಲಿ ಸ್ಮರಿಸಿದ್ದಾರೆ. ಇವರೊಂದು ವಚನದಲ್ಲಿ, ಬಿಜಾಪುರದ ಮೊದಲನೆಯ ಆದಿಲ್​ಶಾಹನಿಗೆ (ಕ್ರಿ.ಶ. 1557-1580) ಪಟ್ಟಕಟ್ಟಿದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. ಕ್ರಿ.ಶ. 1612ರಲ್ಲಿ ಬಿಜಾಪುರದ ಸುಲ್ತಾನರ ಸುಬೇದಾರ್ ಆಗಿದ್ದ ಅಂಕುಶ ಖಾನನು ಬಾವಿಯೊಂದನ್ನು ಕಟ್ಟಿಸಲು ಯತ್ನಿಸುತ್ತಾನಷ್ಟೆ. ಆದರೆ ಅಲ್ಲಿ ಜಲ ಬರುವುದಿಲ್ಲ. ಆಗ ಮೌನೇಶ್ವರರು ಬಾವಿಗಿಳಿದು ಜಲ ತಂದುದರ ವಿವರಣೆ ಅವರ ವಚನವೊಂದರಲ್ಲಿ ಬರುತ್ತದೆ. ಇವೆಲ್ಲದರ ಆಧಾರದ ಮೇಲೆ ಇವರು 16ನೇ ಶತಮಾನದ ಮಧ್ಯಭಾಗದಿಂದ 17ನೇ ಶತಮಾನದ ಉತ್ತರಾರ್ಧದವರೆಗೆ ಇದ್ದರೆಂಬುದು ರುಜುವಾತು ಆಗುತ್ತದೆ! *ಜೀವನ ಮತ್ತು ಬಾಲ್ಯ ಮೌನೇಶ್ವರರ ತಂದೆ-ತಾಯಿ ಶೇಷಪ್ಪ (ಹಾವಪ್ಪ), ಶೇಷಕ್ಕ (ಹಾವಕ್ಕ) ಎಂಬ ಉಲ್ಲೇಖ ಐತಿಹ್ಯವಾಗಿ ದೊರಕುತ್ತದೆ. ಜಾನಪದದಲ್ಲೂ ಮೌನೇಶ್ವರರ ಬಾಲ್ಯದ ವಿವರಗಳು ತುಂಬಾ ಕಡಿಮೆ. ಅವರ ಬಗ್ಗೆ    ಕಥೆ ಐತಿಹ್ಯ ಏನೇ ಇದ್ದರೂ  ಮೌನೇಶ್ವರರು- ‘ಇಂದ್ರಿ ಸೂತಕದಿಂದ ಅಂದೆ ನಾನು ಜನಿಸಿದೆನು /ಇಂದು ನಾನು ಕೊಳೆಯಲೆ ಪ್ರಭುದೇವ ನಾ/ ಬಂದಂಥ ಭವಕೆ ಮಿತಿಯಿಲ್ಲ ಪ್ರಭುದೇವರ ನಾ/ ಹಿಂದಿಗಿಂತ ಕಡಿಮೆಯಯ್ಯ ಬಸವಣ್ಣ’/ -ಎಂದು ವಚನವೊಂದರಲ್ಲಿ ಹೇಳಿಕೊಂಡಿದ್ದಾರೆ.  ಜಾನಪದ-ಪುರಾಣ ಮುಂತಾದುವು ಅಯೋನಿಜರೆಂದರೆ, ಮೌನೇಶ್ವರರ ವಚನವು ‘ಯೋನಿಜ’ರೆಂದು ಸಾರುತ್ತದೆ. ಎಲ್ಲ ಶರಣರು ಹೊಲೆಯೊಳಗಿಂದಲೇ ಜನ್ಮಿಸಿದರೆಂದು ಹೇಳುವ ಮೌನೇಶ್ವರರು ‘ಕುಲವನೆಲ್ಲಿ ಅರಸುವುದು?’ ಎಂಬ ಪ್ರಶ್ನೆಯನ್ನು ನಮಗೆ ಹಾಕುತ್ತಾರೆ ಶರಣರೇ ನಿಜವಾದ ತಾಯ್ತಂದೆಗಳೆಂಬುದು ಇಲ್ಲಿ ಪ್ರಸಿದ್ಧಾರ್ಥ. ಸಾಹಿತ್ಯ ಸಂಪದ ಮೌನೇಶ್ವರರು ವಚನವೊಂದರಲ್ಲಿ ತನ್ನ ಗುರುಮನೆ ಗೋಗಿನ ಎಂದೂ, ಗುಂಡಿ ಬಸವಯ್ಯ ತಮ್ಮ ಗುರುವೆಂದೂ ಹೇಳಿಕೊಂಡಿದ್ದಾರೆ. ಇಲ್ಲಿಯ ಸೂಚಿತಾರ್ಥಗಳನ್ನು ಗ್ರಹಿಸಿದರೆ ಮೌನೇಶ್ವರರು ಕೆಲವು ಗುರುಗಳ ಬಳಿ ಸಾಧನೆ ಮಾಡಿರಬೇಕು. ಗುರುವಿನ ಮಾರ್ಗದರ್ಶನ ಇಲ್ಲದೆ, ಯಾವೊಬ್ಬ ಶಿಷ್ಯನೂ ಸಾಧಕನಾಗಲಾರನಷ್ಟೆ. ಆದರೆ, ಅಲ್ಲಮಪ್ರಭುದೇವ ಮಾತ್ರ ಇದಕ್ಕೆ ಅಪವಾದ. ಮೌನೇಶ್ವರರು ಅನೇಕ ವಚನಗಳಲ್ಲಿ ಅಲ್ಲಮಪ್ರಭುವಿನ ಹೆಸರನ್ನು ಪದೇಪದೆ ಬಳಸುತ್ತಾರೆ. ಅಲ್ಲಮನು ಯಾವ ಮಾಯೆಗೂ ಸಿಗದೆ, ಎಲ್ಲರೊಳಗಿನ ಮಾಯೆಯನ್ನು ಕಿತ್ತೆಸೆದವನು. ಮೌನೇಶ್ವರರು ಇಂಥ ಅಲ್ಲಮನ ದಾರಿಯಲ್ಲಿ ನಡೆದಿದ್ದಾರೆ. ಒಂದಂತೂ ನಿಜ. ಮೌನೇಶ್ವರರು ಕಠೋರ ತಪಸ್ಸಾಧನೆ ಮಾಡಿ ಅಪೂರ್ವ ಸಿದ್ಧಿಗಳನ್ನು ಪಡೆದಿರಬೇಕು. ಅವುಗಳ ಮೂಲಕ ಪವಾಡಗಳನ್ನೂ ಮಾಡಿರಬೇಕು. ಈಗಲೂ ಜನರ ಬಾಯಲ್ಲಿ ಅವರ ಪವಾಡ, ಮಹಿಮೆಗಳು ರೂಢಿಯಲ್ಲಿವೆ. ಆ ಕಾಲದ ಜನರನ್ನೋ ಸುಲ್ತಾನರನ್ನೋ ಸುಬೇದಾರರನ್ನೋ ಪ್ರಭಾವ ಗೊಳಿಸಬೇಕಾದರೆ ಇಂಥ ಪವಾಡಗಳನ್ನು ಮಾಡಿಯೇ ಸೆಳೆಯಬೇಕಿತ್ತು. ಜನಹಿತಕಾರ್ಯಕ್ಕೆ ಇದೊಂದು ಪೂರ್ವ ಮೀಮಾಂಸೆಯೇ. ಮೌನೇಶ್ವರರಿಗೆ ಅಲೌಕಿಕ ಸಿದ್ಧಿಗಳಿದ್ದಂತೆ ಅಸಾಮಾನ್ಯ ಅನುಭಾವೀ ಜೀವನವೂ ಇತ್ತು. ಅವೆರಡು ಇವರಲ್ಲಿ ಹಾಳತವಾಗಿ ಸೇರಿದ್ದಕ್ಕೆ ಅವರ ಬರಹಗಳೇ ಸಾಕ್ಷಿ. *ಉಪನಯನ ವೈದಿಕ ಸಂಸ್ಕಾರ ಬಾಲ್ಯಾವಸ್ತೆಯಲ್ಲಿ ಜಗದ್ಗುರು ಮೌನೇಶ್ವರರಿಗೆ 8 ವರ್ಷ ತುಂಬಿದಾಗ ವಿಶ್ವಕರ್ಮ ಧರ್ಮದ ವೈದಿಕ ಪರಂಪರೆಯ ಅನುಸಾರ ಗಾಯತ್ರಿ ಮಂತ್ರೋಪದೇಶದೊಂದಿಗೆ ಉಪನಯನವಾಯಿತು. ಗಾಯತ್ರಿ ಮಂತ್ರೋಪದೇಶವಾಗಿ ಅದರ ರಹಸ್ಯಾರ್ಥಗಳು ದೃಗ್ಗೋಚರವಾದುವು. ನಂತರ ಮೌನೇಶ್ವರರು ಸುರಪುರದ ಗುರುಕುಲದಲ್ಲಿ ಶಿವಸ್ವಾಮಿ ಗುರುಗಳ ಬಳಿ 4 ವರ್ಷ, ಸಂಸ್ಕೃತ, ಉರ್ದು, ಕನ್ನಡ ಕಲಿತು ಹಲವಾರು ಶಾಸ್ತ್ರಗಳ ಪರಿಚಯ ಮಾಡಿಕೊಂಡರು. ಜತೆಗೆ ಸದಾನಂದ ಗುರುಗಳ ಸಂಪೂರ್ಣ ಅನುಗ್ರಹವೂ ಮೌನೇಶ್ವರರ ಮೇಲಿತ್ತು. ಈ ನಡುವೆ ಕಾಶೀಯಾತ್ರೆ ಮುಗಿಸಿಬಂದರು. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿಗೆ ಹೋಗಿ ವೀರಭದ್ರದೇವರ ಆರಾಧನೆ ಮಾಡಿದ್ದು ವಿಶೇಷ. ನಂತರ ವರವಿ, ಲಿಂಗನಬಂಡಿಗಳಲ್ಲಿ ಅನೇಕ ಪವಾಡಗಳನ್ನು ಮಾಡಿದರೆಂದು ಪುರಾಣಗಳು ನಿರೂಪಿಸುತ್ತವೆ. ತಂದೆ-ತಾಯಿ ವೃದ್ಧರಾಗಿ ತೀರಿಕೊಂಡ ಮೇಲೆ ಮೌನೇಶ್ವರರು ದೇಶಸಂಚಾರ ಮಾಡುತ್ತ, ಎಲ್ಲ ಸಮುದಾಯದವರ ಕಷ್ಟ-ಕಾರ್ಪಣ್ಯ ನೀಗಿಸುತ್ತ ಸಮಾಜದ ಕೀಲಕಸ್ಥಾನದಲ್ಲಿ ಉಳಿದುಬಿಟ್ಟರು. *ಸಾಹಿತ್ಯ ಮೌನೇಶ್ವರರು ಶತಕಗಳನ್ನೂ ಕಾಲಜ್ಞಾನವನ್ನೂ ಬರೆದಿದ್ದಾರೆ. ದಂಡಕ, ಸುವ್ವಿಹಾಡು, ಜೋಗುಳಪದ, ಆರತಿಪದ, ಮೊಹರಂಗೀತೆ, ಕೋಲುಪದ, ಭಜನೆಹಾಡುಗಳನ್ನ್ನೂ ರಚಿಸಿದ್ದಾರೆ. ಇವರ ಪದಗಳಲ್ಲಿ ಉರ್ದು, ಪರ್ಷಿಯನ್ ಪದಗಳು ವಿಪುಲವಾಗಿವೆ. ಕನ್ನಡ, ಉರ್ದು ಕೂಡುನುಡಿಗಳಂತೂ ಬಹಳಷ್ಟಿವೆ- ಮೌನದೀನ ಪೀರ | ಸದ್ಗುರು ಜಿತಾ ಪೈಗಂಬರ ||ಪ|| ಹಿಂದೂ ಮುಸಲ್ಮೆ ಮನದ ಪ್ರಕಾರ/ ಬಲ್ಲಂಥ ಜ್ಞಾನಿಗೆ ನೀನೊಬ್ಬ ದೇವರ ಆಕಾರ ನಿರಾಕಾರ ಎರಡಕ್ಕೆ ನೀನೆ ಗಂಭೀರ/ ಶೇಕ್ ಸಯ್ಯದ ಮೊಗಲ ಪಠಾಣ ನಾಲ್ಕು ಅವತಾರ ತಾಳಿ ಮಾಡಿದಿ ಉದ್ಧಾರ ||2|| ಈ ಪದ್ಯವು ಮೌನೇಶ್ವರರ ರಚನೆಯ ಬಗೆಯನ್ನು ತಿಳಿಸುತ್ತದೆ. ಅವರು ಹಿಂದೂ-ಮುಸ್ಲಿಂ ಬಂಧುತ್ವವನ್ನು ಒಂದೆಡೆ ಸೇರಿಸಿದವರಷ್ಟೆ. ಹೀಗೆ ಭಾವೈಕ್ಯತೆ ಮತ್ತು ಮತೈಕ್ಯತೆಗಳ ಸಂಕೇತವಾಗಿ ಇವರು ಕಾಣಿಸಿಕೊಂಡರೆಂಬುದು ವಿಶೇಷ. ಮೌನೇಶ್ವರರು 17ನೇ ಶತಮಾನದ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಸಾಹಿತ್ಯದಲ್ಲಿ ಬಳಸಿಕೊಂಡರು. ಇವರ ಪದ್ಯಗಳಲ್ಲಿ ಉರ್ದುಭಾಷೆ, ಅಭಿವ್ಯಕ್ತಿಗೆ ಅನುಗುಣವಾಗಿ ಕಾಣಿಸಿಕೊಂಡಿದೆ. ಆಡುಮಾತಿನ ಪಲುಕು ಉದ್ದಕ್ಕೂ ಕಾಣಿಸುತ್ತದೆ. ಭಾಷೆಯ ದೃಷ್ಟಿಯಿಂದ ನೋಡಿದರೆ, ಎಷ್ಟೋ ಅಪಪ್ರಯೋಗಗಳು ಇವೆ. ಆದರೆ, ಮೌನೇಶ್ವರರು ಜನಸಾಮಾನ್ಯರಂತೆ ವಚನಗಳನ್ನು ಕಟ್ಟಿದ್ದಾರೆ. ಹಳ್ಳಿಗರು ಬಳಸುತ್ತಿದ್ದ ಹಾಡಿನ ಮಟ್ಟುಗಳ ಜಾಡುಹಿಡಿದು ಅನುಭವಗಳನ್ನು ಸಾರಿದ್ದಾರೆ. ಮೌನೇಶ್ವರರ ವಚನಗಳು ಬಹುತೇಕವಾಗಿ ಕನ್ನಡದ ಅಂಶಗಣಕ್ಕೆ ಹೆಚ್ಚು ಹೊಂದುತ್ತವೆ. ಇವು ಬರಹರೂಪದ ವಚನಗಳಲ್ಲ; ಅವರು ಹಾಡುತ್ತ, ಹೇಳುತ್ತ ಹೋದಂತೆ ಶಿಷ್ಯರು ಸಂಗ್ರಹಿಸಿ ಬರೆದಿಟ್ಟದ್ದೆಂದು ತೋರುತ್ತದೆ! ಮೌನೇಶ್ವರರು ತಮ್ಮ ಬಗೆಗೆ ಹೆಚ್ಚಿಗೇನೂ ಹೇಳಿಕೊಂಡಿಲ್ಲ. ತಾನು ಅಕ್ಕನಾಗಮ್ಮನ ಮಗ ಚೆನ್ನಬಸವಣ್ಣನ ಅವತಾರವೆಂದು ಮಾತ್ರ ವಚನಗಳಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಜನ್ಮ ಯಾವುದೋ ಮುಖ್ಯ ಉದ್ದೇಶಕ್ಕಾಗಿ ಆಗಿದೆಯೆಂದು ಅವರು ತಿಳಿದುಕೊಂಡಿದ್ದರು. ಆ ನಂಬುಗೆ ಅವರಲ್ಲಿ ಪ್ರಬಲವಾಗಿದ್ದುದು ಕಂಡುಬರುತ್ತದೆ. ಅವರ ಮಾತಿದು. ಅಕ್ಕ ನಾಗಲಿಯ ಮಗ ಚಿಕ್ಕ ಚನ್ನಬಸವಣ್ಣ/ ಅಕ್ಕಸಾಲೆಯರ ಒಡಲೊಳಗೆ ಜನಿಸಿ ನಿಂತು/ ರೆಕ್ಕ ಲೆಕ್ಕಕ್ಕೆ ಝುಡತಿಯ ಕೇಳಬೇಕೆಂದು/ ತಕ್ಕಡಿಯ ತ್ರಾಸು ಪಿಡಿದುಕೊಂಡು ನಿಂತಾತನ ಕೂಡ -ಈ ವಚನದಲ್ಲಿ ತಾನು ‘ಅಕ್ಕಸಾಲಿಗ’ ಎಂಬುದನ್ನು ಖಚಿತಪಡಿಸಿದ್ದಾರೆ. ‘ವಿಶ್ವಕರ್ಮ’ ಎಂದು ಪ್ರಸಿದ್ಧಿ ಪಡೆದ ಇವರು ಸಮಾಜದ ಕೀಲಕ ಸ್ಥಾನದಲ್ಲಿದ್ದವರೇ. ಮರದ ಕೆಲಸ ಮಾಡುವವರು ‘ಬಡಗಿ’ಯಾದರೆ ಕಬ್ಬಿಣದ ಕೆಲಸ ಮಾಡುವವರು ‘ಕಮ್ಮಾರ’ರು; ಕಂಚಿನ ಕೆಲಸ ಮಾಡುವವರು ‘ಕಂಚುಗಾರ’ರಾದರೆ, ಶಿಲೆಯ ಕೆಲಸ ಮಾಡುವವರು ‘ಶಿಲ್ಪಿಗರು’. ಇಷ್ಟು ಜನರನ್ನು ವಿಶ್ವಕರ್ಮರೆಂದೇ ಗ್ರಾಮ ಸಮುದಾಯ ಕರೆಯುತ್ತಿತ್ತು. ಸಮುದಾಯದಲ್ಲಿ ಇವರ ಸ್ಥಾನ ಮೇಲ್ಮಟ್ಟದ್ದಾಗಿತ್ತೆಂಬುದನ್ನು ಸಮಸ್ತರೂ ಗುರುತಿಸಿದ್ದಾರೆ. ಇವರ ವೃತ್ತಿಯು ಕೌಶಲಪ್ರಧಾನವಾದುದು. ಪಟ್ಟಣ, ಖೇಡ, ಖರ್ವಡ, ದ್ರೋಣಾಮುಖ ಎಂಬ ವಿವಿಧ ಬಗೆಯ ನಗರ ನಿರ್ವಣದಲ್ಲಿ ಇವರದು ಎತ್ತಿದ ಕೈ. ಅದಕ್ಕನುಗುಣವಾಗಿ ಬಡಿಗೇರ, ಕಮ್ಮಾರರು ಬಳಸುವ ಉಪಕರಣಗಳನ್ನು ವಚನದಲ್ಲಿ ಅಧ್ಯಾತ್ಮದ ಸಂಕೇತವಾಗಿಯೂ ಬಳಸಿ ಕೊಂಡಿದ್ದಾರೆ. ಗ್ರಾಮಜೀವನದ ಕಾಯಕವರ್ಗಕ್ಕೆ ಅನುಗುಣವಾದ ಅಡಿಗಲ್ಲು, ತ್ರಾಸು, ಮೂಸೆ, ಸುತ್ತಿಗೆಯಂಥ ಪರಿಕರಗಳನ್ನು ವಚನಗಳಲ್ಲಿ ಬಳಸಿದ್ದಾರೆ. ‘ಬಡಿಗ, ಕಮ್ಮಾರರು ಪೊಡವಿಗಕರ್ತರು’ ಎಂಬ ಮಾತು ಇದಕ್ಕೆ ಸಾಕ್ಷಿ. ಗುರು ಮೌನೇಶ್ವರ *ಬದುಕೆ ಅನುಭವ ಪಾಠ ಶಾಲೆ* ________________________ ನಮ್ಮ ಬಾಳು ಹೇಗಿರಬೇಕೆಂಬುದನ್ನು ಹಲವಾರು ವಚನಗಳಲ್ಲಿ ಮೌನೇಶ್ವರರು ಹೇಳುತ್ತಾರೆ. ಅವರ ವಚನಗಳು ಶರಣರ ಮಾರ್ಗವನ್ನು ಮುಂದುವರಿಸುತ್ತವೆ. ಅವರು ಹೆಜ್ಜೆಹೆಜ್ಜೆಗೂ ಹಿಂದಿನ ಶರಣರ ನುಡಿಗಡಣವನ್ನು ಮುಂದಿರಿಸಿಕೊಂಡು ಮಾತಾಡುತ್ತಾರೆ. ಅರಿವಿಲ್ಲದೆ ಬಾಳುವೆ ಮಾಡುವುದು ವ್ಯರ್ಥ. ಅಂಥವರಿಗೆ ಎಲ್ಲಿಯ ಗುರು, ಎಲ್ಲಿಯ ದೈವ? ಎಂದು ಒಂದೆಡೆ ಪ್ರಶ್ನಿಸುತ್ತಾರೆ. ಮೌನೇಶ್ವರರಿಗೆ ಹಳ್ಳಿಯ ಸರಳಜೀವನ ತುಂಬಾ ಇಷ್ಟ.

ಸಾವಿಲ್ಲದ ಶರಣರು ಮಾಲಿಕೆ”ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರುಮಾಲಿಕೆ “ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಹದೇವಪ್ಪ ರಾಂಪುರೆ”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು “ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಹದೇವಪ್ಪ ರಾಂಪುರೆ” ಭವ್ಯ ಭಾರತದ ಇತಿಹಾಸವು ತೆರೆದಿಟ್ಟ ಅಪ್ಪಟ ರಾಷ್ಟ್ರ ಪ್ರೇಮಿ ಸೇನಾನಿ ಹೈದ್ರಾಬಾದ ಕರ್ನಾಟಕದ ಹುಲಿ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಹದೇವಪ್ಪ ರಾಂಪುರೆ.  ಮಹದೇವಪ್ಪ ರಾಂಪುರೆ (1920-1973) ಒಬ್ಬ ಭಾರತೀಯ ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಘದ (H.K.E. Society) ಸ್ಥಾಪಕರು, ಗುಲ್ಬರ್ಗಾದಲ್ಲಿ ಮಹದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜ್ ಅನ್ನು 1963ರಲ್ಲಿ ಸ್ಥಾಪಿಸಿ, ಆ ಭಾಗದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ; ಅವರು ಮೈಸೂರು ವಿಧಾನ ಪರಿಷತ್ ಉಪಾಧ್ಯಕ್ಷರಾಗಿ, ಕಲಬುರಗಿ ಲೋಕಸಭಾ ಸದಸ್ಯರಾಗಿ ಮೂರು ಭಾರಿ ಸೇವೆ ಸಲ್ಲಿಸಿದ್ದಾರೆ.  ಸಂಕ್ಷಿಪ್ತ ಜೀವನ ಚರಿತ್ರೆ: ಜನನ ಮತ್ತು ಆರಂಭಿಕ ಜೀವನ: ಮಹದೇವಪ್ಪ ರಾಂಪುರೆ ಅವರು 1920ರಲ್ಲಿ ಜನಿಸಿದರು.ತಾಯಿ ಗುರುದೇವಿ ತಂದೆ ಯಶವಂತಪ್ಪ ರಾಂಪುರೆ  ಮಹದೇವಪ್ಪ ರಾಮಪುರೆ ಅವರು  6 ಜನ ಅಣ್ಣ – ತಮ್ಮಂದಿರು ಹಾಗೂ ಒಬ್ಬಳೆ  ಒಬ್ಬಳು ತಂಗಿ. ಆರಂಭಿಕ ಶಿಕ್ಷಣವನ್ನು ಸೊಲ್ಲಾಪುರದಲ್ಲಿ ಮುಗಿಸಿದರು. ಇವರ ಅಜ್ಜನವರು ಸುಮಾರು ನಾಲ್ಕು ನೂರು ಎಕರೆ ಭೂಮಿಯನ್ನು ಹೊಂದಿದ್ದರು. ಮೂಲತಃ ಸೋಲಾಪುರ ಜಿಲ್ಲೆಯ ಕುಂಬಾರಿ ಗ್ರಾಮದಲ್ಲಿ ಒಂದು ಅಡತಿ ಅಂಗಡಿ ಕೃಷಿ ವ್ಯಾಪಾರ ಮಾಡಿಕೊಂಡಂತಹ ಶ್ರೀಮಂತ ಮನೆತನವಾಗಿತ್ತು. ಶ್ರೀ ಮಹದೇವಪ್ಪ ರಾಮಪುರೆ ಅವರು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ ಸ್ವಾತಂತ್ರ್ಯ ಹೋರಾಟದೊಳಗೆ ಧುಮುಕಿದರು. ಮಹಾರಾಷ್ಟ್ರದಲ್ಲಿ ಇವರ ಮೇಲೆ ಬ್ರಿಟಿಷ್ ಸರ್ಕಾರ ವಾರಂಟ್ ಜಾರಿ ಮಾಡಿದ ಮೇಲೆ ಸಂಘರ್ಷವನ್ನು ಮುನ್ನಡೆದ ಬೇಕೆಂಬ ಯೋಚನೆ ಹಂಬಲದಿಂದ ಕಲಬುರ್ಗಿಗೆ ಬಂದರು . ತಮ್ಮ 26 ನೆಯ ವಯಸ್ಸಿನಲ್ಲಿ ಹೈದ್ರಾಬಾದ ಸರಕಾರದ ಎಂ ಎಲ್ ಸಿ ಆಗಿ ಆಯ್ಕೆಯಾದರು ಮುಂದೆ ಕರ್ನಾಟಕ ಏಕೀಕರಣವಾದ ಮೇಲೆ  ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಉಪಸಭಾಪತಿಯಾಗಿ ಆಯ್ಕೆಯಾದರು. ರಾಜಕೀಯ ಜೀವನ: ಶ್ರೀ ಮಹದೇವಪ್ಪ ರಾಂಪುರೆ ಅವರು ಮೂಲತಃ ಸಮಾಜವಾದಿ ಎಡಪಂಥೀಯ ವೈಚಾರಿಕ ನೆಲೆಯಲ್ಲಿ ಬೆಳೆದವರು. ಡಾ ಎಂ ಎನ್ ರಾಯ್ ಅವರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ಕರ್ನಾಟಕದ ನವ ನಿರ್ಮಾಪಕ  ಶ್ರೀ ಎಸ್ ನಿಜಲಿಂಗಪ್ಪನವರ ಬಲಗೈ ಬಂಟನಾಗಿ ಕಾರ್ಯ ಮಾಡಿದವರು. ಶ್ರೀ ಚಂದ್ರಶೇಖರ ಪಾಟೀಲ ಶ್ರೀ ವೀರೇಂದ್ರ ಪಾಟೀಲ ಮುಂತಾದ ಯುವ ನಾಯಕರ ಜೊತೆಗೂಡಿ ಹೈದ್ರಾಬಾದ ಕರ್ನಾಟಕದ ಸಮಗ್ರ ಏಳ್ಗೆಗೆ ಕನಸು ಕಂಡವರಲ್ಲಿ ಪ್ರಮುಖರು  ಹಾಗೂ ರಜಾಕಾರ ಹಾವಳಿ ಎದುರಿಸಿದ ಸೇನಾನಿಯಾಗಿದ್ದರು. ಇವರು ಶ್ರೀಮತಿ ತಾರಾದೇವಿ ಅವರನ್ನು ವಿವಾಹವಾದರು.ಇವರಿಗೆ. 5  ಜನ ಗಂಡುಮಕ್ಕಳು  3 ಜನ ಹೆಣ್ಣುಮಕ್ಕಳು  ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ನಂತರ ರಾಜಕೀಯ ಪ್ರವೇಶಿಸಿದರು. ಮೈಸೂರು ವಿಧಾನ ಪರಿಷತ್ ಉಪಾಧ್ಯಕ್ಷರಾಗಿ (1956-1957) ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ (1957-1970) ಸೇವೆ ಸಲ್ಲಿಸಿದರು. ಶ್ರೀ ಎಸ್ ನಿಜಲಿಂಗಪ್ಪನವರ ಮೊರಾರ್ಜಿ ದೇಸಾಯಿ ಡಾ ಎಂ.ಎನ್ ರಾಯ್ ಡಾ ನೀಲಂ ಸಂಜೀವ ರೆಡ್ಡಿ ಮುಂತಾದವರ ಜೊತೆಗೆ ರಾಜಕೀಯ ಒಡನಾಟವನ್ನು ಹೊಂದಿದ್ದರು. ತೀವ್ರಗಾಮಿ ಸತ್ಯ ಸಮತೆ ಶಾಂತಿ ಪ್ರೀತಿ ಮಂತ್ರ ಜಪಿಸಿದ ರಾಜಕೀಯ ಮುತ್ಸದ್ಧಿ. ಇವರ ಲೋಕ ಸಭೆಯಲ್ಲಿ ಮಾತನಾಡುವ ವೈಖರಿ ಕಂಡು ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣ ಅವರು ಶ್ರೀ ಮಹದೇವಪ್ಪ ರಾಮಪುರೆ ಅವರನ್ನು ಶ್ರೇಷ್ಠ ಸಂಸತ್ತ ಪಟು ಎಂದು ಬಣ್ಣಿಸಿದ್ದಾರೆ. ಶಿಕ್ಷಣಕ್ಕೆ ಕೊಡುಗೆ: ಡಾ ಡಿ ಸಿ ಪಾವಟೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕರ್ನಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಹೈದರಾಬಾದ್ ಕರ್ನಾಟಕ ಭಾಗದ ಶಿಕ್ಷಣದ ಬೆಳವಣಿಗೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇದರ ಫಲವಾಗಿ 1963ರಲ್ಲಿ ಗುಲ್ಬರ್ಗಾದಲ್ಲಿ ಮಹದೇವಪ್ಪ ರಾಂಪುರೆ  ವೈದ್ಯಕೀಯ  ಮಹಾವಿದ್ಯಾಲಯವನ್ನು ಸ್ಥಾಪಿಸಿದರು.  ಪ್ರಮುಖ ಕೊಡುಗೆಗಳು: H.K.E. ಸೊಸೈಟಿ: ಇದರ ಸಂಸ್ಥಾಪಕರು .ಇದಕ್ಕೂ ಮುಂಚೆ ದೊಡ್ಡಪ್ಪ ಅಪ್ಪ ಅವರ ಶ್ರೀ ಶರಣ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನೂರಾರು  ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. M.R. ಮೆಡಿಕಲ್ ಕಾಲೇಜ್: ಭಾರತದ  ಖಾಸಗಿ ವೈದ್ಯಕೀಯ ಕಾಲೇಜಾಗಿ, ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಮಾನ್ಯತೆ ಪಡೆದು, ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡುತ್ತಿದೆ. ದೂರದೃಷ್ಟಿ ಈ ಭಾಗದ ಜನರ ಕಲ್ಯಾಣಕ್ಕಾಗಿ ಶಿಕ್ಷಣ ಮತ್ತು ಆರೋಗ್ಯದ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂಬ ದೂರದೃಷ್ಟಿಯನ್ನು ಹೊಂದಿದ್ದರು.  ವಂಶಪರಂಪರೆ: ಅವರ ದೂರದೃಷ್ಟಿ ಮತ್ತು ಶ್ರಮದಿಂದ ಸ್ಥಾಪಿಸಲಾದ ಸಂಸ್ಥೆಗಳು ಇಂದಿಗೂ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಇವರ ಮೂರು ಜನ ಗಂಡು ಮಕ್ಕಳು ವೈದ್ಯರಾಗಿ ರಾಷ್ಟ್ರ ಅಂತರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಸಲ್ಲಿಸಿದ್ದಾರೆ. ಇಂತಹ ಒಬ್ಬ ಸೃಜನಶೀಲ ವೈಚಾರಿಕ ಚಿಂತಕ ಶಿಕ್ಷಣ ಪ್ರೇಮಿ ಅಪ್ಪಟ ದೇಶ ಭಕ್ತ 1973 ರಲ್ಲಿ ತಮ್ಮ 53 ನೆಯ  ವಯಸ್ಸಿನಲ್ಲಿ ಬಯಲಾದರು. ಇಂತಹ ದಿವ್ಯ ಜ್ಯೋತಿ ಇಂದಿಗೂ ಬೆಳಗುತ್ತಿದೆ ನಮ್ಮೆಲ್ಲರ ಮಧ್ಯೆ.  __________________________ *ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರುಮಾಲಿಕೆ “ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಹದೇವಪ್ಪ ರಾಂಪುರೆ”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ರಾಜಯೋಗಿ ಶ್ರೀಬೀಳೂರುಗುರುಬಸವ ಸ್ವಾಮಿಗಳು”ಡಾ.ಶಶಿಕಾಂತ್ ಪಟ್ಟಣರಾಮದುರ್ಗ ಪುಣೆ

ಶರಣರ ಸಂಗಾತಿ “ಡಾ.ಶಶಿಕಾಂತ್ ಪಟ್ಟಣರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ “ರಾಜಯೋಗಿ ಶ್ರೀಬೀಳೂರುಗುರುಬಸವ ಸ್ವಾಮಿಗಳು ಬಸವೋತ್ತರ ಕಾಲದ  ಹತ್ತೊಂಬತ್ತನೆಯ ಶತಮಾನದ ಮಹಾತಪಸ್ವಿ ಶ್ರೀ ಅಥಣಿಯ ಮುರುಗೇಂದ್ರ ಸ್ವಾಮಿಗಳ ಪಡಿನೆರಳು ಅವರ ಕೃಪಾಕಟಾಕ್ಷದಲ್ಲಿ ಲಿಂಗ ಹಸ್ತದ  ಆಶೀರ್ವಾದದಿಂದ ಜಗವ ಬೆಳಗುವ ಧೈತ್ಯ ಚೇತನ ರಾಜಯೋಗಿ ಬೀಳೂರು ಗುರುಬಸವ ಸ್ವಾಮಿಗಳು.         ಕಲಬುರ್ಗಿ ಸಮೀಪದ  ಹತ್ತಿರವಿರುವ  ಹಂಗರಗಿ ಎಂಬ ಊರು ಇದೆ ಆ ಊರಿನ ಶ್ರೇಷ್ಠ ಸದ್ಗುಣ ಮಣಿಯಾದ ರಾಮನಗೌಡ ಮತ್ತು ಚೆನ್ನಮ್ಮ ಎಂಬ ಲಿಂಗಾಯತ ಬಣಜಿಗ ದಂಪತಿಗಳ   ಉದರದಿಂದ ಜನಿಸಿ  ಬಂದ ಶಿಶುವೇ ಶ್ರೀ ಗುರುಬಸವ ಶಿವಯೋಗಿಗಳು.1843ರಲ್ಲಿ ರಾಮನಗೌಡ ಮತ್ತು ಚೆನ್ನಮ್ಮನ ಉದರದಿಂದ ಜನಿಸಿದ ಮಗುವಿನ ಮೊದಲ ಹೆಸರು. ಈ   “ಜೀವಪ್ಪ” ಎಂಬ ಮಗು ಬಡ ಕುಟುಂಬದಲ್ಲಿ ನಾಲ್ಕನೆಯವ.   ಈ ಮಗು ಅತ್ಯಂತ ಚಿರದ್ರೂಪಿ, ಸುಗುಣ ಚಾಣಾಕ್ಷ ದಷ್ಟ ಪುಷ್ಟ ಚುರುಕಾಗಿದ್ದನು. ನೋಡುವವರ ಕಣ್ಮನಗಳನ್ನು ಸೆಳೆಯುವ ಆಕರ್ಷಕ ಬಾಲಕ ಜೀವಪ್ಪನದು. ಬಾಲ್ಯ ಮತ್ತು ಬಡತನ ——————-   ಬಾಲಕ ಜೀವಪ್ಪನು ಉಂಡು ತಿಂದು ಅಡ್ಡಾಡುವ ವಯಸ್ಸಿನಲ್ಲಿ (4-5 ವರ್ಷ) ಹಂಗರಗಿ ಗ್ರಾಮದಲ್ಲಿ ಭೀಕರ ಬರಗಾಲ ಕಾಲಿಟ್ಟಿತು. ಆ ಭಾಗದಲ್ಲಿಯ ಜೀವಿಗಳಿಗೆ ಊಟಕ್ಕೆ ಆಹಾರ ಇಲ್ಲದಾಯಿತು ಕುಡಿಯಲು ನೀರಿಲ್ಲದಾಯಿತು. ಅನ್ನ ನೀರಿಲ್ಲದೆ ಜೀವ ಬಿಡುವ ಪ್ರಸಂಗ ಬಂದೊದಗಿತು. ಆ ಬರಗಾಲ ಅತ್ಯಂತ ಭೀಕರವಾಗಿತ್ತು ಜನತೆಗೆ ಅನ್ನ, ನೀರು ಆಹಾರ ದೊರೆಯದೆ  ಕೆಲವರು ಪ್ರಾಣ ಕಳೆದುಕೊಂಡರು,ಹಲವರು ಊರು ಬಿಟ್ಟು ಹೋದರು. ಊರು ಬಿಟ್ಟು ಹೊರಟವರಲ್ಲಿ ರಾಮನಗೌಡರು ಒಬ್ಬರು, ಮಡದಿ ಮಕ್ಕಳನ್ನು ಕರೆದುಕೊಂಡು ಊರೂರ ಅಲೆಯುತ್ತಾ ಅಫ್ಜಲಪುರಕ್ಕೆ  ಬಂದು ನೆಲಿಸಿದರು. ಅಲ್ಲಿ ಕೆಲವು ದಿನ ಕಾಲ ಕಳೆದು, ಮತ್ತೆ ಕೆಲಸ ಹುಡುಕುತ್ತ  ಹೊಟ್ಟೆ ಪಾಡಿಗಾಗಿ ಮತ್ತೆ ಊರು ಅಲೆಯುತ್ತಾ ಸಿಂದಗಿ ಊರಿಗೆ ಬಂದು ತಲುಪುತ್ತಾರೆ. ಸಿಂದಗಿಯ ವಿರಕ್ತಮಠದ ಅಧಿಪತಿಗಳಾದ  ಶ್ರೀ ಷಣ್ಮುಖ ಸ್ವಾಮಿಗಳು ನೀವು ಯಾರು ಏತಕ್ಕಾಗಿ ಬಂದಿರಿ ಎಲ್ಲ ಸಮಾಚಾರವನ್ನು  ವಿಚಾರಿಸಿ ತನ್ನಲ್ಲೇ ಕೆಲವು ದಿನ ಉಳಿಯಲು ಹೇಳಿದರು. ಶ್ರೀಗಳ ಆಶ್ರಯ ಪಡೆದ ರಾಮನಗೌಡರು ನಾಲ್ಕಾರು ದಿನ ಇದ್ದು ಜೀವನದ ಮುಂದಿನ ದಾರಿಯನ್ನು ಚಿಂತಿಸುತ್ತಾ ಚೆನ್ನಮ್ಮನಿಗೆ ಹೇಳುತ್ತಾರೆ ಈ ಚಿಕ್ಕ ಮಗ ಜೀವನ ಈ ಅಲೆದಾಟ ಮತ್ತು ಕಷ್ಟದ ಜೀವನವನ್ನು ಹೇಗೆ ಸಹಿಸಿಯಾನು ಆದ್ದರಿಂದ ಅವನನ್ನು ಈ ಮಠದಲ್ಲಿಯೇ ಬಿಟ್ಟು ನಾವು ಮುಂದೆ ಹೋಗೋಣ ಎಂದು ಹೇಳುತ್ತಾರೆ ಆಗ ಒಪ್ಪದ ತಾಯಿ ಕರುಳಿನ ಕುಡಿಯನ್ನು ಬಿಟ್ಟು ಹೋದ ಮಹಾ ಪಾಪಿ ನಾನಾಗುವುದೇ ಎಂದು ಬಿಕ್ಕಿ ಬಿಕ್ಕಿ ಅತ್ತಳು.ಕೊನೆಗೆ ತನ್ನ  ನನ್ನ ಮಗ ಎಲ್ಲಿಯಾದರೂ ಇರಲಿ  ಸುಖವಾಗಿರಲಿ ಎಂದು ಗಂಡನ ನಿರ್ಧಾರವನ್ನು ಒಪ್ಪಿ  ಮಲಗಿದ ಕಿರಿ ಮಗನನ್ನು ಮಠದಲ್ಲಿ ಬಿಟ್ಟು ಮಕ್ಕಳೊಂದಿಗೆ ಮುಂದೆ  ಹೊರಟು ಹೋದರು.            ಇತ್ತ ಮರುದಿನ ಜೀವಪ್ಪ ತನ್ನ ಕುಟುಂಬದವರು  ತಂದೆ ತಾಯಿ ಕಾಣದಾಗಲು ಹೆದರಿ   ಮಠದಲ್ಲಿ ಹುಡುಕುತ್ತಾ ಅಳತೊಡಗಿದನು. ಅಂದಿನ ಮಠದೊಡೆಯರಾದ ಅಧಿಪತಿಗಳು ಶ್ರೀ  ಷಣ್ಮುಖ ಸ್ವಾಮಿಗಳು ಸಂತೈಷಿ ಸಮಾಧಾನಪಡಿಸಿ ಕೆಲಸಕ್ಕೆ ಬೇರೆ ಕಡೆಗೆ ಹೋಗಿದ್ದಾರೆ ಎಂಟು ದಿನಗಳಲ್ಲಿ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಸಮಾಧಾನ ಪಡಿಸಿ   ತಮ್ಮ ಶ್ರೀ ಮಠದಲ್ಲಿ  ಇರಿಸಿಕೊಂಡರು.   ಕೆಲವು  ದಿನ ಕಳೆದ ನಂತರ ಮಗು ಜೀವಪ್ಪ ಗುರುವಿನ ಸೇವೆಯಲ್ಲಿ  ತಂದೆ ತಾಯಿಗಳನ್ನು ಮರೆತು  ಅಕ್ಷರ ಜ್ಞಾನ ಕಲಿಕೆ ಓದುವಿನಲ್ಲಿ ಕಾಲ ಕಳೆಯುತೊಡಗಿದನು. ಸುಂದರವಾದ  ಜೀವಪ್ಪನನ್ನು  ಚಿಕ್ಕವನಾಗಿದ್ದ ಕಾರಣ ಅವನ ಪಾಲನೆ ಪೋಷಣೆಗೆಂದು  ಗುರುಗಳು ಊರಿನ ಸೆಟ್ಟರ (ಪಟ್ಟಣಶೆಟ್ಟಿ )ಅವರ ಮನೆತನದವರಿಗೆ ಜೀವಪ್ಪನ ಜವಾಬ್ದಾರಿ  ಹೊರೆಯನ್ನು ವಹಿಸುತ್ತಾರೆ. ಮುಂದೆ ಜೀವಪ್ಪ  ಪಟ್ಟಣಶೆಟ್ಟಿಯವರ ಮನೆಯಲ್ಲಿ ಸುಖದಿಂದ ಬೆಳೆಯುತ್ತಾನೆ. ಮಠಗಳ ಉಸ್ತುವಾರಿ —————- ಜೀವಪ್ಪಾ ದೊಡ್ಡವನಾದನೆಂದು, ಮತ್ತು ಶ್ರೀ ಷಣ್ಮುಖಸ್ವಾಮಿಗಳಿಗೆ  ವಯಸ್ಸಾಯಿತು ಎಂದು  ತಮ್ಮ ಜೊತೆಗೆ ಜೀವಪ್ಪನನ್ನು ಮಠಗಳ ವ್ಯವಹಾರವನ್ನು ಕೊಡಲು ನಿರ್ಧರಿಸಿದರು.  ಜೀವಪ್ಪನನ್ನು ಮುಂದೆ ಇತ್ತು ಕೊಂಡು  ಪ್ರಶಸ್ತವಾದ ಹೊಸ ಕಲ್ಮಠದ    ಕಟ್ಟಡ ಕೆಲಸ ಸಂಪೂರ್ಣ ಮುಗಿಸುತ್ತಾರೆ. ಕಲ್ಮಠವು   ಪೂರ್ಣವಾದ ಮೇಲೆ ಹಲವಾರು ಮಠದ ಕೆಲಸಗಳಿಗೆ ಜೀವಪ್ಪನನ್ನು ಸ್ವಾಮಿಗಳು ಉಸ್ತುವಾರಿಗೆಂದು ನೇಮಿಸುತ್ತಾರೆ. ಗುರುಗಳು ಹೇಳಿದ ಎಲ್ಲಾ ಕೆಲಸಗಳನ್ನು ಅತ್ಯಂತ ನಿಷ್ಠೆಯಿಂದ ಶ್ರದ್ಧೆಯಿಂದ ಜೀವಪ್ಪ ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿದ ಸಿಂಧಗಿ  ಊರಿನ ಭಕ್ತರು  ನೀಬ್ಬೆರಗಾಗಿ ಜೀವಪ್ಪನ ಕಾಯಕವನ್ನು ಶ್ಲಾಘಿಸುತ್ತಿದ್ದರು. ಗುರುಬಸವ ನಾಮಕರಣ ——————————-         ಜೀವಪ್ಪನ ಗುಣ ಸ್ವಭಾವವನ್ನು ಕಂಡು ಸಂತಸಗೊಂಡ ಪೂಜ್ಯರು ಅವನಲ್ಲಿ ಅತ್ಯಂತ ಪ್ರೀತಿಯ ಅದರ ಭಾವದಿಂದ  ಕಾಣಲಾರಂಭಿಸಿದರು. ಈಗ ಜೀವಪ್ಪನಿಗೆ 12 ವರ್ಷ .  12 ವರ್ಷದ ಬಾಲಕನನ್ನು ಗೆಳೆಯ ರಾಚಯ್ಯನ ಜೊತೆಗೆ ಷಣ್ಮುಖ ಸ್ವಾಮಿಗಳು ಸಂಖದ  ಗುರುಗಳ ಕಡೆಗೆ ಕಳುಹಿಸಿಕೊಡುತ್ತಾರೆ ಗೆಳೆಯ ರಾಚಯ್ಯನೊಂದಿಗೆ ಬಂದ ಜೀವಪ್ಪನವರು ಇಂದಿನ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸಂಖ ಗ್ರಾಮದಲ್ಲಿರುವ ವಿರಕ್ತಮಠದಲ್ಲಿ ಗುರುಗಳ ಅಣತಿಯಂತೆ ಗುರು ದಿಕ್ಷೆಯನ್ನು ಪಡೆದು ಗುರು ಸೇವೆಯಲ್ಲಿ ತೊಡಗಿದರು. ಇವರ ಸೇವಾ ಮನೋಭಾವವನ್ನು, ಕಾಯಕ ನಿಷ್ಠೆ ಗುರುಭಕ್ತಿಯನ್ನು ಕಂಡು ಸಂಕದ ಗುರುಗಳು “ಗುರುಬಸವ” ಎಂದು ಹೊಸ ನಾಮಕರಣ ಮಾಡಿದರು. ಮತ್ತು ಮಠದ ಅಧಿಕಾರವನ್ನು ತೆಗೆದುಕೋ ಎಂದು ಗುರುಬಸವರಿಗೆ ಹೇಳಿದರು. ಆಗ ಸ್ವತಃ ಗುರುಬಸವರೇ ಮಠದ ಅಧಿಕಾರವನ್ನು ರಾಚಯ್ಯನಿಗೆ ಕೊಡಿರಿ ಎಂದು ನಸುನಗುತ್ತಾ ಹೇಳಿದರು. ಎಳೆ ಹರಿಯದ ಆ ಗುರುಬಸವ ದೇವರು ತನ್ನ ಗೆಳೆಯನಿಗಾಗಿ ಮಾಡಿದ ಉದಾರತೆಯ  ನಿಷ್ಕಾಮ ಭಾವ,ವಿರಕ್ತತೆ , ತ್ಯಾಗದ ವಿಷಯವನ್ನು ಅರಿತ ಸಂಖದ ಊರಿನ ಸಮಸ್ತರು ಆಶ್ಚರ್ಯದಿಂದ  ಬೆರಗಾದರು. ಗೆಳೆಯ ರಾಚಯ್ಯನಿಗೆ ಮಠದ ಅಧಿಕಾರವನ್ನು ಒಪ್ಪಿಸಿ ಗುರುಗಳ ಆಜ್ಞೆಯಂತೆ ಮುಚ್ಚಂಡಿ ಮತ್ತು ಬೀಳೂರಿಗೆ ಹೋಗುತ್ತಾರೆ. ಮೊದಲು ಮುಚ್ಚಂಡಿಯಲ್ಲಿ ಕೆಲವು ದಿನ ಇದ್ದು, ಮುಂದೆ ಬೀಳೂರಿಗೆ ಹೋಗುತ್ತಾರೆ. ಬೀಳೂರಿನಲ್ಲಿ ವಿರಕ್ತಮಠ ಹಾಳು ಬಿದ್ದಿರುತ್ತದೆ ಅದಕ್ಕೆಂದೆ ಬೀಳೂರು( ಬಿದ್ದ ಊರು – ಹಾಲು ಬಿದ್ದ ಮಠವೊಂದಿತ್ತು ) ಎಂದು ಹೇಸರು ಬಂದಿರಬಹುದು, ಹಾಳು ಬಿದ್ದ ವಿರಕ್ತ ಮಠವನ್ನು   ಅತ್ಯಂತ ಸುಪ್ರಸಿದ್ಧ ಮಾಡುವಲ್ಲಿ ಶ್ರೀ ಗುರುಬಸವ ಸ್ವಾಮಿಗಳು  ಹಗಲಿರುಳು ಅತ್ಯಂತ ಪರಿಶ್ರಮ, ಕಷ್ಟಪಟ್ಟು ಕಂತಿ  ಭಿಕ್ಷೆ ಬೇಡಿ, ಹೊಲ ಮೇಯುವ ಕೆಲಸ ಮಾಡಿ, ಅಲ್ಲಿಯ ಹಲವಾರು ಶರಣರ, ಶರಣೆಯರ ಸಹಕಾರ ಸಹಾಯದಿಂದ ಒಂದು ಹೆಸರಾಂತ ವಿರಕ್ತಮಠವನ್ನಾಗಿ ಮಾರ್ಪಡಿಸುತ್ತಾರೆ ಶ್ರೀ ಗುರುಬಸವ ಸ್ವಾಮಿಗಳು. ಅಥಣಿಯ ಶ್ರೀ ಮುರುಗೇಂದ್ರ  ಶಿವಯೋಗಿಗಳ ಸಂಪರ್ಕದಲ್ಲಿ —————————————————————————-    ಅಥಣಿಯ ಶ್ರೀ ಮುರುಗೇಂದ್ರ  ಶಿವಯೋಗಿಗಳ ಸಮಕಾಲೀನರಾದ ಶ್ರೀ ಗುರುಬಸವ ಸ್ವಾಮಿಗಳು ಸಮಾಜದ ಏಳಿಗೆಗಾಗಿ ಸಮಾಜದ ಉದ್ಧಾರಕ್ಕಾಗಿ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡು ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವಲ್ಲಿ ಸೈ ಎನಿಸಿಕೊಂಡ ಶ್ರೀ ಗುರುಬಸವ ಶಿವಯೋಗಿಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗೈಯುವದರ ಮೂಲಕ  ಕಾರ್ಯ ಮಾಡುವುದನ್ನು ಕಂಡು ಅವರನ್ನು ಗಚ್ಚಿನ ಮಠಕ್ಕೆ ಬರ ಹೇಳುತ್ತಾರೆ. ಅಂದು ಅಥಣಿಯ ಗಚ್ಚಿನ ಮಠವೆಂದರೆ ಶ್ರೀ ಮುರುಗೇಂದ್ರ ಶಿವಯೋಗಿಗಳ ಸಮ್ಮುಖದಲ್ಲಿ ನಿತ್ಯ ಶಿವಯೋಗ ಅನುಭಾವ ಚಿಂತನಾ ಗೋಷ್ಠಿಗಳು ಜರುಗುತ್ತಿದ್ದವು.  ಬಿದರಿ ಶಿವಕುಮಾರಸ್ವಾಮಿಗಳು, ಹುಲ್ಯಾಳ ಶ್ರೀಗಳು, ಧಾರವಾಡದ ಮೃತ್ಯುಂಜಯ ಸ್ವಾಮಿಗಳು, ಅವರ ತಂಡದಲ್ಲಿ ದೊಡ್ಡ ಧಡೂತಿ ಮೈಕಟ್ಟನ್ನು ಹೊಂದಿದ ಶ್ರೀ ಗುರು ಬಸವ ಸ್ವಾಮಿಗಳು ಸೇರಿಕೊಳ್ಳುತ್ತಾರೆ.      ಶ್ರೀ ಗುರುಬಸವರ ದೈವಿಕ ಶಕ್ತಿಗೆ ಮಾರುಹೋದ ಭಕ್ತರು ಬೀಳೂರಿನ ಮೂರ ಅಂಕಣದ ಕೋಣೆಯ ಮುಂದೆ ಒಂದು ಮಠವನ್ನು ಕಟ್ಟಿಸುತ್ತಾರೆ. ಇವರ ಪ್ರಭಾವ ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಬೆಳೆದಂತೆ ಇವರಿಗಾಗಿ ಕಟ್ಟಿಸಿದ ಮಠ ಸಣ್ಣದಾಗುತ್ತದೆ. ಅಥಣಿಯ ಮುರುಗೇಂದ್ರ ಶ್ರೀಗಳ ಮಾರ್ಗದರ್ಶನದ ಮೇರೆಗೆ ಭವ್ಯವಾದ ಮಠವನ್ನು ಕಟ್ಟಿಸುತ್ತಾರೆ. ಜತ್ತ ಮತ್ತು ಉಮರಾಣಿಯ ಸಂಸ್ಥಾನಿಕರು ಹತ್ತಾರು ಎಕರೆ ಭೂಮಿಗಳನ್ನು ಬೀಳೂರು ಮಠಕ್ಕೆ ದತ್ತಿಯಾಗಿ ಕೊಟ್ಟು ಪುನೀತರಾಗುತ್ತಾರೆ . ಅಸೂಹೆಯ  ಕಿಚ್ಚು ಆರಿತು —————————————    ಬೀಳೂರು ಶ್ರೀ ಗುರುಬಸವವರ ಸ್ವಾಮಿಗಳ  ಸಾಧನೆಯನ್ನು ಕಂಡು ದ್ವೇಷ ಮತ್ಸರದ ವ್ಯಕ್ತಿ  ಗಣಪತಿಯೆಂಬುವನು ಶ್ರೀ ಗುರುಬಸವರು ಒಬ್ಬರೇ  ಮಠದಲ್ಲಿದ್ದಾಗ  ಗುರುಬಸವವರ ಚಾರಿತ್ರ್ಯಕ್ಕೆ ಕುಂದುಂಟು ಮಾಡಲು ಚೆನ್ನವ್ವ ಎಂಬ ವೇಶ್ಯೆಗೆ  ಹಣ  ಕೊಟ್ಟು ಗುರುಬಸವರಿರುವ ಕೋಣೆಗೆ ಕಳುಹಿಸಿದ.  ಆ ವೇಶ್ಯೆಯ   ಕೈಗಳ ಬಳೆಯ ಸಪ್ಪಳವನ್ನು ಆಲಿಸಿದ  ಶ್ರೀ  ಗುರುಬಸವವರು ಯಾರು ತಾಯಿ ಅಲ್ಲಿಯೇ ನಿಲ್ಲು ನಾನೇ ಹೊರಗೆ ಬರುತ್ತೇನೆ ಅವ್ವ ಎಂದರಂತೆ . ವೇಶ್ಯೆಯನ್ನು  ತಾಯಿಯಾಗಿ ಸಂಭೋಧಿಸಿದಾಗ ತಾನು ತಪ್ಪು ದಾರಿ ತುಳಿಯುತ್ತಿದ್ದೇನೆ ಎಂದು ಚೆನ್ನವ್ವ ನಿಧಾನವಾಗಿ ಹೆದರಿ ದೈವದ ತೇಜೋವಧೆಗೆ  ಹೊರಟಿರುವುದು ತಪ್ಪು ಎಂದು ತಿಳಿದು ಪರಿತಪಿಸಿ  ಹಿಂದೆ ಸರಿದಳು. ಮುಂದೆ ವೇಶ್ಯೆಯ  ಕಣ್ಣು ಹೋಗಿ ಭಿಕ್ಷೆ ಬೇಡಿ ಬದುಕುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಯಿತು. ವೇಶ್ಯೆಯನ್ನು ಕಳಿಸಿದ ಆಗರ್ಭ ಶ್ರೀಮಂತ ಗಣಪತಿಯೆಂಬುವನ ವಂಶವು ನಿರ್ನಾಮವಾಯಿತು. ಗಣಪತಿಯ ಮಕ್ಕಳು ಅವನ ಕಣ್ಣ ಮುಂದೆ ತೀರಿಹೋದರು. ಬ್ರಹ್ಮ ರಾಕ್ಷಸ ಬಡೆದುಕೊಂಡ ಬಾಲಕನಿಂದ ಪಾಠ ಕಲಿತ ಶ್ರೀ ಗುರುಬಸವರು ———————————————————————————————-  ಒಂದೊಮ್ಮೆ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ತಮ್ಮ ಜೊತೆಗೆ ಬಿದರಿ ಶಿವ ಕುಮಾರಶಿವಯೋಗಿಗಳು  ಮತ್ತು ರಾಜಯೋಗಿ ಬೀಳೂರು  ಶ್ರೀ ಗುರುಬಸವ ಸ್ವಾಮಿಗಳನ್ನು ಕರೆದುಕೊಂಡು ಅಥಣಿಯ ಪಕ್ಕದ ಹಳ್ಳಿಗೆ  ಶ್ರಾವಣ ಮಾಸದ ಶಿವಾನುಭವ ಪ್ರವಚನಕ್ಕೆ ಹೋಗಿರುತ್ತಾರೆ. ಪ್ರವಚನ ಮುಗಿಸಿ ಮರಳಿ ಅಥಣಿಗೆ ಬರುವಾಗ ಕೃಷ್ಣಾ ನದಿ ತುಂಬಿ ಹರಿಯುತ್ತಿರುತ್ತದೆ.  ಎತ್ತು ಮತ್ತು ಬಂಡಿಯಲ್ಲಿದ್ದ ಸ್ವಾಮಿಗಳು ಕೊಂಚ ದಿಗ್ಭ್ರಾಂತರಾಗುತ್ತಾರೆ .   ನದಿ ಹೇಗೆ ದಾಟುವುದು. ಕೆಲ ಹೊತ್ತ ದಡದಲ್ಲಿಯೇ ಕುಳಿತು ಕೊಳ್ಳುತ್ತಾರೆ.  ಏನೋ ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು ಚಕ್ಕಡಿಯನ್ನು ಅಲ್ಲಿಯೇ ದಡದಲ್ಲಿ ಬಿಟ್ಟು ನದಿಯನ್ನು ದಾಟೋಣ ಎನ್ನುತ್ತಾರೆ. ಆಗ ಬಿದರಿ ಶ್ರೀಶಿವಕುಮಾರ ಸ್ವಾಮಿಗಳು ಮತ್ತು ಇತರ ಶಿಷ್ಯರು ಅಥಣಿಯ ಶ್ರೀ ಮುರುಗರೇಂದ್ರ ಸ್ವಾಮಿಗಳ ಮಾತಿಗೆ ಸಮ್ಮತಿಸಿ ಅವರ ಹಿಂದೆ ಹೋಗಲು ನಿರ್ಧರಿಸುತ್ತಾರೆ. ಆದರೆ ಮೈತುಂಬ ರೇಷ್ಮೆ ಬಟ್ಟೆ ಪೇಠಾ ಬಂಗಾರ ಹೊಂದಿದ ರಾಜಯೋಗಿ   ಶ್ರೀ ಗುರುಬಸವ ಸ್ವಾಮಿಗಳು ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಜೊತೆಗೆ ಹೋಗುವದಿಲ್ಲ, ಚಕ್ಕಡಿಯ ಮಾಲಕನೊಂದಿಗೆ ದಡದಲ್ಲಿಯೇ ಕುಳಿತು ಮಧ್ಯ ರಾತ್ರಿ  ಕೃಷ್ಣ ನದಿಯು ಇಳಿದ ಮೇಲೆ ಅಥಣಿಗೆ ಬಂದು ತಲುಪುತ್ತಾರೆ. ಬೆಳಿಗ್ಗೆ ಎಂದಿನಂತೆ ಎದ್ದು ಶ್ರೀಗಳ ಜೊತೆಗೆ ಕುಶಲೋಪರಿ ಮಾತನಾಡಿ ಬಹಿರ್ದೆಸೆಗೆ  ಹೊರಟು ನಿಲ್ಲುತ್ತಾರೆ. ಆಗ ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು ಅಪ್ಪವರೆ ನಿನ್ನೆ ನಿಮಗೆ ಅಸ್ತವ್ಯಸ್ತವಾಗಿದೆ ಬೇಗ ಹೋಗಿ ಬನ್ನಿ,ಸ್ನಾನ ಪೂಜೆ ಮುಗಿಸಿ ಪ್ರಸಾದವನ್ನು ಮಾಡೋಣ ಎನ್ನುತ್ತಾರೆ.   ಆಗಲಿ ಎಂದು ಒಬ್ಬ ಸೇವಕನೊಂದಿಗೆ ಊರ ಹೊರಗೆ ಹೊರಟು ನಿಲ್ಲುತ್ತಾರೆ. ದಾರಿಯಲ್ಲಿ ಹೋಗುವಾಗ ಬೆಳಿಗ್ಗೆ ಆರರ ಮುಂಜಾವು ಶ್ರಾವಣದ ತುಂತುರ ಮಳೆ ಹನಿಯ ತಂಪು, ಆಗ ಒಂದು ಬಂಡಿಯಲ್ಲಿ ಹಿಂದೆ ಕುಳಿತಿದ್ದ ಬಾಲಕ ಶ್ರೀ ಬೀಳೂರು ಗುರುಬಸವ ಸ್ವಾಮಿಗಳನ್ನು ನೋಡಿ ಅವಹೇಳನ ಮಾಡುತ್ತಾ ಕಿಸಿಕಿಸಿ ನಗುತ್ತಾನೆ, ಶ್ರೀಗಳು ಹೆಚ್ಚಿನ ಮಹತ್ವವನ್ನು ನೀಡದೆ ಮುಂದೆ ಸಾಗುತ್ತಾರೆ, ಆಗ ಹುಡುಗ ಮತ್ತೆ ಇವರತ್ತ ಕೇಕೆ ಹಾಕಿ ನಗುತ್ತಾನೆ, ಸ್ವಲ್ಪ ಮಟ್ಟಿಗೆ ವಿಚಲಿತರಾದ ಪೂಜ್ಯರು   ಅಲ್ಲಿರುವ ಜನರನ್ನು ವಿಚಾರಿಸುತ್ತಾರೆ, ಸಿಟ್ಟಿನ ಗುರುಬಸವ ಸ್ವಾಮಿಗಳು   ಜನರು ಅಂಜುತ್ತಲೇ ಅಪ್ಪಾರಾ ಹುಡುಗ ಗಾಳಿ ಶಕ ಆಗೈತಿ, ಬ್ರಹ್ಮ ರಾಕ್ಷಸ ಮೈಯೊಳಗ ಹೊಕ್ಕಾನ ಏನು ಮಾಡಿದರೂ

ಸಾವಿಲ್ಲದ ಶರಣರು ಮಾಲಿಕೆ “ರಾಜಯೋಗಿ ಶ್ರೀಬೀಳೂರುಗುರುಬಸವ ಸ್ವಾಮಿಗಳು”ಡಾ.ಶಶಿಕಾಂತ್ ಪಟ್ಟಣರಾಮದುರ್ಗ ಪುಣೆ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ-“ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ” ದೇಶವುಕಂಡ ಅಪರೂಪದ ಶ್ರೇಷ್ಠ ನೀರಾವರಿ ತಜ್ಞ ಕರ್ನಾಟಕಕ್ಕೆ ನೀರಿನ ಹಕ್ಕಿನ ಹಕ್ಕಿನ. ಬಗ್ಗೆ ನಿರಂತರ ಹೋರಾಟ ಮಾಡುತ್ತಲೆ ನ್ಯಾಯ ಒದಗಿಸುತ್ತಿದ್ದ ಉತ್ತರ ಕರ್ನಾಟಕದ ಬೆಳಗಾವಿ ಮೂಲದ ಲಿಂಗೈಕ್ಯ ಶ್ರೀ ಎಸ್ ಜಿ ಬಾಳೆಕುಂದ್ರಿ ಅವರು. ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿ ಎಸ್. ಜಿ. ಬಾಳೆಕುಂದ್ರಿಯವರು ಕರ್ನಾಟಕದ ಶ್ರೇಷ್ಠ ನೀರಾವರಿ ತಜ್ಞ ಇಂಜನಿಯರರು. ತಮ್ಮ ಬುದ್ದಿಮತ್ತೆ,ದಕ್ಷತೆ, ಪರಿಶ್ರಮ ಹಾಗು ಪ್ರಾಮಾಣಿಕ ಸೇವೆ ಇವುಗಳಿಗಾಗಿ ಬಾಳೆಕುಂದ್ರಿಯವರು ಕರ್ನಾಟಕದಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದಾರೆ  ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ನೀರಾವರಿ ತಜ್ಞರಲ್ಲಿ ನೆನಪಿಗೆ ಬರುವ ಒಂದೇ ಒಂದು ಹೆಸರೆಂದರೆ ಸರ್ ಎಂ ವಿಶ್ವೇಶ್ವರಯ್ಯನವರದು. ಆದರೆ ಅವರಷ್ಟೇ ಸಮರ್ಥರಾದ ಇಂಜಿನಿಯರೊಬ್ಬರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರೇ ಎಸ್ ಜಿ ಬಾಳೆಕುಂದ್ರಿ.  ಉತ್ತರ ಕರ್ನಾಟಕದ ಮಹಾದಾಯಿಯ ಬಗ್ಗೆ ಕೂಡ ಆಲೋಚನೆ ಅಧ್ಯಯನ ಮಾಡಿದ್ದರು. ಜನನ ಶಿವಪ್ಪ ಬಾಳೆಕುಂದ್ರಿಯವರು 1922  ಮೇ 5 ರಂದು ಬೆಳಗಾವಿಯಲ್ಲಿ ಜನಿಸಿದರು. ಇವರ ತಾಯಿ ಲಕ್ಷ್ಮೀದೇವಿ; ತಂದೆ ಗುರುಸಿದ್ದಪ್ಪ. ಶಿಕ್ಷಣ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಅಕ್ಕಿಹೊಂಡದ ಮುನಿಸಿಪಾಲಿಟಿ ಕನ್ನಡ ಶಾಲೆಯಲ್ಲಿ ಮುಗಿಸಿ, ಕೊಪ್ಪೀಕರ ಪ್ರೌಢಶಾಲೆಯಲ್ಲಿ ಎರಡು ವರ್ಷ ಕಲಿತು, ತರವಾಯ ಬೆಳಗಾವಿಯ ಸರದಾರ ಹೈಸ್ಕೂಲ್ ಸೇರಿದರು.  ಲಿಂಗರಾಜ ಕಾಲೇಜಿನಿಂದ ಇಂಟರ ಸಾಯನ್ಸ್ ವಿಷಯದ ಮೇಲೆ ಅಧ್ಯಯನ ನಡೆಸಿ ತೇರ್ಗಡೆಯಾದರು. ಆ ಬಳಿಕ ಪುಣೆಯಲ್ಲಿದ್ದ ಸರಕಾರಿ ಇಂಜನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದು 1944 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. 1947 ರಲ್ಲಿ ಎಡಿನ್ಬರೊ ವಿಶ್ವವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಪದವಿ ಸಂಪಾದಿಸಿಕೊಂಡರು. ವೃತ್ತಿ ಮತ್ತು ಉದ್ಯೋಗ 1945 ರಲ್ಲಿ ಆಗಿನ ಮುಂಬಯಿ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜನಿಯರ ಆದರು. ಮುಂಬಯಿ ಸರಕಾರ ಇವರನ್ನು ನೀರಾವರಿ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಡಿನ್ಬರೊ ವಿಶ್ವವಿದ್ಯಾಲಯಕ್ಕೆ ಕಳುಹಿಸಿತು. ಅನಂತರ ಹಾಲಂಡ್, ಸ್ವಿಡನ್, ಮತ್ತು ಇತರ ಕೆಲವು ಬಾಲ್ಟಿಕ್ ರಾಜ್ಯಗಳನ್ನು ಸಂದರ್ಶಿಸಿದರು. ವಿದೇಶದಿಂದ ಹಿಂದಿರುಗಿದ ನಂತರ ಪುಣೆ ವಿಭಾಗದ ನೀರಾವರಿ ಕಾಲುವೆಗಳ ಕೆಲಸವನ್ನುನಿರ್ವಹಿಸಿದರು. ನಂತರ ನಾಸಿಕ ಬಳಿ ನಿರ್ಮಾಣವಾಗುತ್ತಿದ್ದ ಗಂಗಾ ಆಣೆಕಟ್ಟಿನ ಉಸ್ತುವಾರಿ ಮಾಡಿದರು. ಆ ಬಳಿಕ ಧೂಲಿಯಾ ಆಣೆಕಟ್ಟು ಮತ್ತು ಅಹ್ಮದ ನಗರ ವಿಭಾಗದ ಉಸ್ತುವಾರಿ ನಿರ್ವಹಿಸಿದರು. 1956 ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯ ನಂತರ ಕರ್ನಾಟಕಕ್ಕೆ ಬಂದ ಬಾಳೆಕುಂದ್ರಿಯವರು ಕೆಲಕಾಲ ಉಪಪ್ರಧಾನ ಇಂಜನಿಯರ ಆಗಿ ಸೇವೆ ಸಲ್ಲಿಸಿದರು. ಆ ನಂತರ ಇವರ ಸೇವೆಯನ್ನು ಕೇಂದ್ರ ಸರಕಾರಕ್ಕೆ ಎರವಲು ನೀಡಲಾಯಿತು. ಅಲ್ಲಿ ಇವರು ಭಾರತ ಸರಕಾರದ ಪ್ಲ್ಯಾನಿಂಗ್ ಕಮಿಶನ್ “ನೀರಾವರಿ ಮತ್ತು ಚೈತನ್ಯ” ತಂಡದ ಸಹಾಯಕರಾಗಿಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯವನ್ನು ಬಾಳೆಕುಂದ್ರಿಯವರು ಗಮನಿಸಿ ಕರ್ನಾಟಕದ ಲೋಕಸಭಾ ಸದಸ್ಯರ ಗಮನಕ್ಕೆ ತಂದರು. ಇದರಿಂದ ಪ್ರಭಾವಿತರಾದ ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ಬಿ.ಡಿ.ಜತ್ತಿಯವರು ಬಾಳೆಕುಂದ್ರಿಯವರನ್ನು ರಾಜ್ಯಕ್ಕೆ ಮರಳಿ ಕರೆಯಿಸಿಕೊಂಡರು. 1959 ರಲ್ಲಿ ಮರಳಿ ರಾಜ್ಯಕ್ಕೆ ಬಂದ ನಂತರ ಅಂತರರಾಜ್ಯ ನದಿ ವಿವಾದ ವಿಷಯದ ಹೊಣೆ ಹೊತ್ತುಕೊಂಡ ಬಾಳೆಕುಂದ್ರಿಯವರು ಕರ್ನಾಟಕದ ನ್ಯಾಯಬದ್ಧ ಹಕ್ಕಿಗಾಗಿ ಸಮರ್ಥವಾಗಿ ಹೋರಾಡಿದರು. 1964 ರಲ್ಲಿ ಮುಖ್ಯ ಇಂಜನಿಯರ ಆಗಿ ಪದೋನ್ನತಿ ಪಡೆದು, ಬೃಹತ್ ನೀರಾವರಿ ಯೋಜನೆಗಳ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1967 ರಿಂದ 1972 ರ ವರೆಗೆ ನೀರಾವರಿ ಇಲಾಖೆಯ ಉತ್ತರ ವಿಭಾಗದ ಮುಖ್ಯ ಇಂಜನಿಯರ ಎಂದು ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಬಾಳೆಕುಂದ್ರಿಯವರು ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ನಿರ್ಮಾಣಗಳಲ್ಲಿ ಮಹತ್ವದ ಪಾತ್ರ ವಹಿಸಿದರು. 1974 ರಿಂದ 1976 ರ ವರೆಗೆ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿಯಾಗಿ ಹಾಗು 1976 ರಿಂದ 1977ರ ವರೆಗೆ ನೀರಾವರಿ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, 1977 ಮೇದಲ್ಲಿ, ಅಂದರೆ ತಮ್ಮ 55 ನೆಯ ವಯಸ್ಸಿನಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾದರು. ನಿವೃತ್ತಿಯ ನಂತರವೂ, ತುಂಗಭದ್ರಾ ಯೋಜನೆಯ ಮಾರ್ಪಾಡಿನ ತಜ್ಞ ಸಲಹಾ ಸಮಿತಿಯ ಅಧ್ಯಕ್ಷ, ಬಾಗಲಕೋಟೆ ಪುನರ್ನಿರ್ಮಾಣ ಮತ್ತು ಪುನರ್ವಸತಿ ಪರಿಶೀಲನಾ ಸಮಿತಿ ಅಧ್ಯಕ್ಷ, ಬೃಹತ್ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಳದ ಅಧ್ಯಕ್ಷ ಕರ್ನಾಟಕದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ನೇಮಿಸಿದ ಏಕಸದಸ್ಯ ಸಮಿತಿ ಅಧ್ಯಕ್ಷ ಹೀಗೆ ವಿವಿಧ ಸಾಮರ್ಥ್ಯಗಳಲ್ಲಿ ಕರ್ನಾಟಕಕ್ಕೆ ಸೇವೆಸಲ್ಲಿಸಿದರು. (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 1-4-1998 ರಲ್ಲಿ ಸಾಕಾರಗೊಂಡಿತು). ದುರಂತ ಮರಣ ದಿನಾಂಕ 4-1-1993 ರಂದು ಸಂಜೆ ಬಾಳೆಕುಂದ್ರಿಯವರು ವಾಯುವಿಹಾರಕ್ಕೆ ಹೋದ ಸಮಯದಲ್ಲಿ ಬೇಜವಾಬ್ದಾರಿ ಆಟೊ ಚಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮವಾಗಿ ಪ್ರಜ್ಞಾಹೀನ ಅವಸ್ಥೆಯಲ್ಲಿ ಅಸ್ಪತ್ರೆಗೆ ಸೇರಿಸಲ್ಪಟ್ಟರು. 1993 ಜನೆವರಿ 8 ರಂದು ಅದೇ ಅವಸ್ಥೆಯಲ್ಲಿಯೆ ಬಾಳೆಕುಂದ್ರಿಯವರು ಕೊನೆಯುಸಿರೆಳೆದರು. ಬಡ ವಿದ್ಯಾರ್ಥಿಗಳಿಗಾಗಿ ಶಿವಕಮಲ ಟ್ರಸ್ಟ್ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ, ವಿಶೇಷತಃ ತಾಂತ್ರಿಕ ಶಿಕ್ಷಣದಲ್ಲಿ ಧನಸಹಾಯ ಮಾಡಲು ಒಂದು ಟ್ರಸ್ಟ ಅನ್ನು ರೂಪಿಸುವದು ಶ್ರೀ ಬಾಳೆಕುಂದ್ರಿ ಹಾಗು ಶ್ರೀಮತಿ ಬಾಳೆಕುಂದ್ರಿಯವರ ಕನಸಾಗಿತ್ತು. ಶ್ರೀಬಾಳೆಕುಂದ್ರಿಯವರ ನಿಧನದ ನಂತರ ಶ್ರೀಮತಿ ಕಮಲಾ ಬಾಳೆಕುಂದ್ರಿಯವರು “ ಶಿವಕಮಲ ಟ್ರಸ್ಟ್ ” ಸ್ಥಾಪಿಸುವ ಮೂಲಕ ತಮ್ಮೀರ್ವರ ಕನಸನ್ನು ನನಸಾಗಿಸಿದರು. ಗೌರವ ಸನ್ಮಾನ ತಮ್ಮ ಪ್ರತಿಭೆ, ದಕ್ಷತೆ ಹಾಗು ಸಚ್ಚಾರಿತ್ರ್ಯದಿಂದ ಬಾಳೆಕುಂದ್ರಿಯವರು ಕರ್ನಾಟಕದ ನೀರಾವರಿ ಯೋಜನೆಗಳಿಗೆ ಮಹತ್ವಪೂರ್ಣ ಕಾಣಿಕೆ ನೀಡಿದ್ದಾರೆ ಹಾಗು ಕರ್ನಾಟಕ ನೀರಾವರಿ ಇಲಾಖೆಯಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದು ಹೆಸರಾಗಿದ್ದಾರೆ. ಮಲಪ್ರಭಾಎಡದಂಡೆಕಾಲುವೆಗೆಬಾಳೆಕುಂದ್ರಿಕಾಲುವೆಎಂದುಹೆಸರಿಟ್ಟುಸರಕಾರಇವರನ್ನುಗೌರವಿಸಿದೆ. 1987 ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು. 1998 ರಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಸಂಸ್ಥೆಯ ಎದುರಿನ ವೃತ್ತಕ್ಕೆ ಬಾಳೆಕುಂದಿ ವೃತ್ತ ಎಂದು ನಾಮಕರಣ ಮಾಡಲಾಯಿತು. 1999ರಲ್ಲಿಘಟಪ್ರಭಾಜಲಾಶಯದಲ್ಲಿಬಾಳೆಕುಂದ್ರಿಯವರಪ್ರತಿಮೆಯನ್ನುಅನಾವರಣ ಮಾಡಲಾಯಿತು. 2004 ರಲ್ಲಿ ಧಾರವಾಡದ ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಸಂಸ್ಥೆಯ ಮುಂದಿನ ರಸ್ತೆಗೆ ಎಸ್.ಜಿ.ಬಾಳೆಕುಂದ್ರಿ ಮಾರ್ಗ ಎಂದು ಹೆಸರಿಡಲಾಯಿತು. ಕರ್ನಾಟಕಸರಕಾರವು 2001 ರಿಂದ ಪ್ರತಿ ವರ್ಷನೀರಾವರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇಲಾಖೆಯ ಇಂಜನಿಯರರಿಗೆ ಬಾಳೆಕುಂದ್ರಿಯವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. 5 ಮೇ , 2006 ರಂದು ಅಂದರೆ ಬಾಳೆಕುಂದ್ರಿಯವರ 85 ನೆಯ ಜನ್ಮದಿನದಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಆಣೆಕಟ್ಟಿನ ವೃತ್ತದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ಆಣೆಕಟ್ಟು ನಿರ್ಮಾಣದಲ್ಲಿ ಶ್ರೀ ಎಸ್ ಜಿ ಬಾಳೆಕುಂದ್ರಿ ಅವರ ಪಾತ್ರ ಬಹಳ ದೊಡ್ದದು. ಸಮಗ್ರಹಸಿರುಕ್ರಾಂತಿಯಹರಿಕಾರನೀರಾವರಿಯತಜ್ಞಸಾಮಾಜಿಕಚಿಂತಕಎಸ್ಜಿಬಾಳೆಕುಂದ್ರಿ ಅವರಿಗೆ ನಮ್ಮ ನೂರು ನಮನಗಳು. ________________________ *ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಸಾವಿಲ್ಲದ ಶರಣರು ಮಾಲಿಕೆ-“ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕ ಗಾಂಧಿ ಶ್ರೀ ಹರ್ಡೇಕರ್ ಮಂಜಪ್ಪನವರು, ಡಾ ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕ ಗಾಂಧಿ ಶ್ರೀ ಹರ್ಡೇಕರ್ ಮಂಜಪ್ಪನವರು, ಡಾ ಶಶಿಕಾಂತ್ ಪಟ್ಟಣ ರಾಮದುರ್ಗ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಸವ ಭಕ್ತ ಲಿಂಗಾಯತ ಧರ್ಮದ ಪ್ರಚಾರಕ ಚಿಂತಕ ಸಾಹಿತಿ ಹರ್ಡೇಕರ ಮಂಜಪ್ಪನವರ ಕೊಡುಗೆ ಕರ್ನಾಟಕಕ್ಕೆ ಅಪಾರವಾಗಿದೆ. ಹರ್ಡೇಕರ ಮಂಜಪ್ಪನವರು ಕರ್ನಾಟಕದ ಸಾಮಾಜಿಕ, ಪತ್ರಿಕೋದ್ಯಮ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳನ್ನೊಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜಸೇವಕರು. ಆಮೂಲಕ ಕರ್ನಾಟಕದ ಗಾಂಧಿ ಎಂದು ಹೆಸರಾಗಿದ್ದವರು. ಕೌಟುಂಬಿಕ ಹಿನ್ನಲೆ ಮತ್ತು ಶಿಕ್ಷಣ 1886ರ ಫೆಬ್ರುವರಿ 18 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಬಡ ಕುಟುಂಬ ಒಂದರಲ್ಲಿ ಜನಿಸಿದರು. ಇವರ ಅಣ್ಣನೆ ಇವರ ಪಾಲನೆಯನ್ನು ಮಾಡಿದ್ದಲ್ಲದೆ, ಇವರ ಎಲ್ಲ ಧ್ಯೇಯ ಸಾಧನೆಗಳಿಗೆ ಒತ್ತಾಸೆಯಾಗಿ ನಿಂತನು. ಮಂಜಪ್ಪನವರು ಕಲಿತಿದ್ದು ಕೇವಲ ಕನ್ನಡ, 7ನೆಯ ತರಗತಿಯವರೆಗೆ. ತಮ್ಮ ಸ್ವಂತ ಪ್ರಯತ್ನಗಳಿಂದ ಇಂಗ್ಲಿಷ್ ಕಲಿಯಲು ಪ್ರಯತ್ನಿಸಿದರೂ ಸಹ ಅದರಲ್ಲಿ ಹೆಚ್ಚಿನ ಪ್ರಗತಿಯಾಗಲಿಲ್ಲ. 1903ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರು ಉದ್ಯೋಗಕ್ಕೆ ಹತ್ತಬೇಕಾಯಿತು. ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲಿಯೆ ಸಹಶಿಕ್ಷಕರಾದರು. 1905 ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು. ಪತ್ರಿಕಾ ಜೀವನ ಮಂಜಪ್ಪನವರು ಅಂದಿನ ರಾಷ್ಟ್ರೀಯತೆ ವಾತಾವರಣದಿಂದ ಪ್ರಭಾವಿತರಾಗಿ ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟರು. ಇವರ ಅಣ್ಣನೂ ಸಹ ತಮ್ಮ ಕೆಲಸವನ್ನು ಬಿಟ್ಟುಬಿಟ್ಟರು. ಇವರಿಬ್ಬರೂ ಜೊತೆಯಾಗಿ 1906ರ ಸೆಪ್ಟಂಬರದಲ್ಲಿ “ಧನುರ್ಧಾರಿ” ಎನ್ನುವ ಪತ್ರಿಕೆಯನ್ನು ದಾವಣಗೆರೆಯಿಂದ ಪ್ರಕಟಿಸತೊಡಗಿದರು. ಈ ಪತ್ರಿಕೆಯು ಲೋಕಮಾನ್ಯ ತಿಲಕರು ಮಹಾರಾಷ್ಟ್ರದಲ್ಲಿ ಹೊರಡಿಸುತ್ತಿದ್ದ ಮರಾಠಿ ಪತ್ರಿಕೆ ಕೇಸರಿಯ ಲೇಖನಗಳ ಕನ್ನಡ ಅನುವಾದವನ್ನು ಪ್ರಕಟಿಸುತ್ತಿತ್ತು. ಪತ್ರಿಕೆಯ ಉಗ್ರಧೋರಣೆಯನ್ನು ಇಷ್ಟಪಡದ ಮುದ್ರಕರು ಬಾಡಿಗೆ ಹೆಚ್ಚಿಸಿದ್ದರಿಂದ ಪತ್ರಿಕೆ ನಿಂತುಹೋಯಿತು. 1908ರಲ್ಲಿ ಸ್ವಂತ ಮುದ್ರಣಯಂತ್ರ ಹೊಂದಿ ಪತ್ರಿಕೆಯನ್ನು ಮತ್ತೆ ಪ್ರಾರಂಭಿಸಿದರು. ಆದರೆ 1915ರಲ್ಲಿ ಧನುರ್ಧಾರಿ ಮತ್ತೆ ನಿಂತುಹೋಯಿತು. ಸತ್ಯಾಗ್ರಹ ಆಶ್ರಮ ಕಟ್ಟಿದರು _____________________ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಪರಮ ಭಕ್ತರಾದ ಶ್ರೀ ಹರ್ಡೇಕರ ಮಂಜಪ್ಪನವರು ಅವರಿಂದ ಲಿಂಗ ದೀಕ್ಷೆಯನ್ನು ಪಡೆದರು. ಮುಂದೆ ವಿಜಯಪುರದ ಶ್ರೀ ಬಂಥನಾಳ ಸಂಗನಬಸವ ಸ್ವಾಮಿಗಳ ಆಜ್ಞೆಯಂತೆ ಅವರಿಂದ ಜಂಗಮ ದೀಕ್ಷೆ ಪಡೆದರು. ರಾಷ್ಟ್ರೀಯ ನಾಯಕರಿಂದ ಪ್ರಭಾವಿತರಾದ ಮಂಜಪ್ಪನವರು 1910ರಲ್ಲಿ ಬ್ರಹ್ಮಚರ್ಯ ವ್ರತದ ಪ್ರತಿಜ್ಞೆ ಮಾಡಿದರು. 1914ರಲ್ಲಿ ತಿಲಕರನ್ನು ಭೆಟ್ಟಿಯಾದರು. 1920 ಅಗಸ್ಟದಲ್ಲಿ ಖಾದಿವ್ರತ ಕೈಗೊಂಡರು. ಹರಿಹರ ರೇಲ್ವೆ ಸ್ಟೇಶನ್ದಿಂದ 5 ಕಿ.ಮಿ. ದೂರದಲ್ಲಿ, ತುಂಗಭದ್ರಾ ನದಿಯ ದಂಡೆಯ ಮೇಲೆ ಬಾಳಪ್ಪ ಎನ್ನುವ ತಮ್ಮ ಗೆಳೆಯರ ಭೂಮಿಯಲ್ಲಿ ಒಂದು ಆಶ್ರಮ ಕಟ್ಟಿಸಿಕೊಂಡರು. ಅದಕ್ಕೆ “ಸತ್ಯಾಗ್ರಹ ಆಶ್ರಮ” ಎಂದು ಹೆಸರಿಡಲಾಯಿತು. 1923 ರಲ್ಲಿ ಈ ಆಶ್ರಮವನ್ನು ಪ್ರವೇಶಿಸಿದರು. 1924ರಲ್ಲಿ ಸಾಬರಮತಿಗೆ ಹೋಗಿ ಗಾಂಧೀಜಿಯವರ ಜೊತೆಗೆ ಕೆಲ ದಿನ ಇದ್ದರು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಬಸವೇಶ್ವರ ಸೇವಾದಳ ಎನ್ನುವ ಸ್ವಯಂಸೇವಕರ ಸಂಘಟನೆಯನ್ನು ರಚಿಸಿ ಅಧಿವೇಶನದ ಯಶಸ್ಸಿಗೆ ಕಾರಣರಾದರು. ಮಹಾತ್ಮಾ ಗಾಂಧಿಯವರಿಗೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಆಜ್ಞೆಯಂತೆ ಶ್ರೀ ಲಕ್ಷ್ಮಣ ರಾವ್ ಬೀಡೆ ಅವರ ಸತ್ಯಾಗ್ರಹಿ ಬಸವೇಶ್ವರ ಎಂಬ ಪುಸ್ತಕವನ್ನು ಮಹಾತ್ಮಾ ಗಾಂಧಿ ಅವರ ಓದಿಗೆ ತಲುಪಿಸಿದರು. ವಿಧಾಯಕ ಯೋಜನೆಗಳು 1925 ರಲ್ಲಿ ಮಂಜಪ್ಪನವರ ತಾಯಿ ತೀರಿಕೊಂಡರು. ಆಬಳಿಕ ಮಂಜಪ್ಪನವರು ಕರ್ನಾಟಕದ ಉದ್ದಗಲಕ್ಕೂ ಹಳ್ಳಿಗಳಲ್ಲಿ ಸಂಚರಿಸಿದರು. ಗ್ರಾಮೋದ್ಧಾರದ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ನೆರವೇರಿಸಿದರು. “ರಾಟಿ ಸಂಘ”ಗಳನ್ನು ಸ್ಥಾಪಿಸಿದರು. ನೈತಿಕ ಪ್ರಚಾರ ಮಾಡಿದರು. 1927 ರ ಮೇ 13ರಂದು ಮಂಜಪ್ಪನವರು ಆಲಮಟ್ಟಿಯಲ್ಲಿ ವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿದ್ಯಾಲಯದಲ್ಲಿ ಕೇವಲ ಔಪಚಾರಿಕ ಶಿಕ್ಷಣವನ್ನಲ್ಲದೆ , ಜೀವನ ಶಿಕ್ಷಣ ಎನ್ನುವ ಹೆಸರಿನಲ್ಲಿ ಕೈಕಸಬುಗಳನ್ನೂ ಸಹ ಕಲಿಸಲಾಗುತ್ತಿತ್ತು. ಗಾಂಧೀಜಿಯವರೂ ಸಹ ಆನಂತರದ ತಮ್ಮ ಶಿಕ್ಷಣಪದ್ಧತಿಯಲ್ಲಿ ಇಂತಹದೆ ನಯಿ ತಾಲೀಮ ಎನ್ನುವ ವಿಧಾನವನ್ನು ಅಳವಡಿಸಿಕೊಂಡರು. 1930 ರಲ್ಲಿ ಮಂಜಪ್ಪನವರು “ಉದ್ಯೋಗ” ಎನ್ನುವ ಮಾಸಪತ್ರಿಕೆಯನ್ನು ಹಾಗು ಮಕ್ಕಳ ಸಾಹಿತ್ಯಮಾಲೆಯನ್ನು ಪ್ರಾರಂಭಿಸಿದರು. 1931ರಲ್ಲಿ ಶರಣಸಂದೇಶ ಎನ್ನುವ ಮಾಸಪತ್ರಿಕೆಯನ್ನು ಹೊರಡಿಸತೊಡಗಿದರು. 1924 ರಲ್ಲಿ ಮತ್ತು 1934 ರಾಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ಮಂಜಪ್ಪನವರು ಅವರ ಜೊತೆಗಿನ ಸುತ್ತಾಟದಲ್ಲಿ ಪಾಲ್ಗೊಂಡರು. 1946ರಲ್ಲಿ ಮಂಜಪ್ಪನವರು ಪ್ರಗತಿ ಗ್ರಂಥಮಾಲೆಯನ್ನು ಪ್ರಾರಂಭಿಸಿದರು. ನಿಧನ 1947 ಜನೆವರಿ 3 ರಂದು ಹರ್ಡೇಕರ ಮಂಜಪ್ಪನವರು ನಿಧನರಾದರು. ಸಾಹಿತ್ಯ ಹರ್ಡೀಕರ ಮಂಜಪ್ಪನವರು ಅನೇಕ ಲೇಖನಗಳನ್ನು ಹಾಗು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಇಂತಿವೆ: ಸ್ವಕರ್ತವ್ಯ ಸಿದ್ಧಾಂತ ಬುದ್ಧಿಯ ಮಾತು ವಾರದ ಮಲ್ಲಪ್ಪನವರ ಚರಿತ್ರೆ ಸ್ತ್ರೀನೀತಿ ಸಂಗ್ರಹ ಆರೋಗ್ಯ ಜೀವನ ಬುದ್ಧ ಚರಿತ್ರೆ ಗಾಂಧೀ ಚರಿತ್ರೆ ರಾಮತೀರ್ಥರ ಉಪನ್ಯಾಸ ಭಾರತೀಯರ ದೇಶಭಕ್ತಿ ಬಸವ ಚರಿತ್ರೆ ಆಧುನಿಕ ಜರ್ಮನಿ ವೀರಶೈವ ಸಮಾಜ ಸುಧಾರಣೆ ಕೇರ ಹಾರ್ಡಿ ಖಾದಿ ಬ್ರಹ್ಮಚರ್ಯ ಅಹಿಂಸೆ ಸತ್ಯಾಗ್ರಹ ಧರ್ಮ ಬಸವ ಬೋಧಾಮೃತ ಸುಬೋಧಸಾರ ಎಚ್ಚತ್ತ ಹಿಂದುಸ್ಥಾನ “ಕಳೆದ ನನ್ನ 30 ವರ್ಷಗಳ ಕಾಣಿಕೆ” 1936 ರಲ್ಲಿ ಪ್ರಕಟವಾದ ಇದು ಹರ್ಡೀಕರ ಮಂಜಪ್ಪನವರ ಆತ್ಮ ಚರಿತ್ರೆಯಾಗಿದೆ ಮತ್ತು ಕನ್ನಡದ ಮೊದಲ ಆತ್ಮ ಚರಿತ್ರೆ ಎಂದು ದಾಖಲೆಯಾಗಿದೆ. ಕರ್ನಾಟಕ ನಾಡು ನುಡಿ ಸಂಸ್ಕೃತಿಗಾಗಿ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ಪ್ರಸಾರಕ್ಕಾಗಿ ಬಸವ ಜಯಂತಿಯನ್ನು ಮೊಟ್ಟ ಮೊದಲು ಆರಂಭಿಸಿದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶ್ರೀ ಹರ್ಡೇಕರ್ ಮಂಜಪ್ಪನವರು ನಾಡು ದೇಶ ಕಂಡ ಅಪರೂಪದ ಶಿವಯೋಗ ಸಾಧಕರು. ಇಂತಹ ದಿವ್ಯ ಚೇತನಕ್ಕೆ ನೂರು ನೂರು ನಮನಗಳು. _________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕ ಗಾಂಧಿ ಶ್ರೀ ಹರ್ಡೇಕರ್ ಮಂಜಪ್ಪನವರು, ಡಾ ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ನಿಮ್ಮೊಂದಿಗೆ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು.ಡಾ ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಡಾ ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ, “ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು. ಕುರುಬರ ಕುಲಗುರು ಒಡೆಯರ ಶಾಖೆಯೊಂದರ ಪ್ರಮುಖ ಸಿದ್ಧ ಅಮೋಘಸಿದ್ಧ ಅಪ್ಪಟ ಜನಪದರ ದೈವ. ಈತನ ಮಟ್ಟಿಗೆ ಜನಪದರ ನಂಬಿಕೆಯೇ ಚರಿತ್ರೆ; ಭಂಡಾರದ ಮಳೆ ಸುರಿದಲ್ಲೇ ಜಾತ್ರೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜನಮಾನಸದಲ್ಲಿ ಕುರುಬರ ಇನ್ನೋರ್ವ ಕುಲಗುರುವಾದ ರೇವಣಸಿದ್ಧರಷ್ಟೇ ಪ್ರಖ್ಯಾತನಾಗಿದ್ದಾನೆ. ಆದರೆ ರೇವಣಸಿದ್ಧನಿಗಿರುವಂತೆ ಈತನ ಕುರಿತು ಶಾಸನಾಧಾರಗಳಾಗಲಿ, ಶಿಷ್ಟಕಾವ್ಯಗಳಾಗಲಿ ಇಲ್ಲ. ಈತನ ಜೀವಂತಿಕೆ ಇರುವುದು ಜನಪದರ ಮೌಖಿಕ ಸಾಮಗ್ರಿಗಳಲ್ಲಿ. ಅಮೋಘಸಿದ್ಧನ ಮೂಲ ನೆಲೆ ವಿಜಯಪುರದಿಂದ ಹತ್ತನ್ನೆರಡು ಕಿಲೋ ಮೀಟರ್ ದೂರದ ಅರಿಕೇರಿ ಸಮೀಪದ ಮುಮ್ಮೆಟಗುಡ್ಡ. ಇವನ ಜಾತ್ರೆಯನ್ನು ಜನ ಇಂದಿಗೂ ಮುಮ್ಮಡಪ್ಪನ ಜಾತ್ರೆ ಎಂದೇ ಕರೆಯುತ್ತಾರೆ. ಅಮೋಘಸಿದ್ಧನನ್ನು ಕೈಲಾಸದಲ್ಲಿ ಉದ್ಭವಿಸಿ ಭೂಲೋಕದಲ್ಲಿ ಅವತರಿಸಿದಂತೆ ಪಾರಂಪರಿಕ ಪುರಾಣ ಕಥನದಲ್ಲಿ ಕಲ್ಪಿಸಿಕೊಂಡಿರುವುದರಿಂದ ಈತ ಕಾಲಾತೀತನಾಗಿ ಗೋಚರಿಸುತ್ತಾನೆ. ಆ ಪ್ರಕಾರ ಈತ ಅವತರಿಸಿದ ನಂತರ ಉತ್ತರ ಭಾರತದ ಹಸ್ತಿನಾವತಿಯಲ್ಲಿ ಕೆಲ ದಿನವಿದ್ದು ಪಾಂಡವರು ಕೈಕೊಂಡ ಯಾಗದಲ್ಲಿ ಪಾಲ್ಗೊಳ್ಳುತ್ತಾನೆ. ಕುಂತಿಯಿಂದ ಸೇವೆ ಪಡೆದು ವಾರದ ಒಡೆಯ ಅನ್ನಿಸಿಕೊಳ್ಳುತ್ತಾನೆ.  ಅಮೋಘಸಿದ್ಧನ ಮಗನಾದ ಬಿಳಿಯಾನಿಸಿದ್ದನು ಕಲ್ಯಾಣಪಟ್ಟಣಕ್ಕೆ ಹೋಗಿ ಅಲ್ಲಿನ ಮಡಿವಂತ ಲಿಂಗಾಯತರಿಗೆ ನೀವೆಲ್ಲ ಕಟ್ಟುಲಿಂಗದವರಾದರೆ ನಾನು ಹುಟ್ಟುಲಿಂಗದವನು ಎಂಬುದನ್ನು ಸಾಬೀತುಪಡಿಸುತ್ತಾನೆ.  ಅಮೋಘಸಿದ್ಧನ ಮೊದಲ ಮಗನಾದ ಅವತಾರ ಅವಧೂಸಿದ್ಧ ವಿಜಾಪುರದ ಶೇಖಾಶಾಹಿಗಳೊಂದಿಗೆ ಕಾದಾಡಿದ್ದು ಹಾಗೂ ಅಮೋಘಸಿದ್ಧನ ಮೊಮ್ಮಗನಾದ ಮಲಕಾರಿಸಿದ್ಧನು ಆನೆಗುಂದಿ ಅರಸರೊಂದಿಗೆ ಹಾಗೂ ಸುರಪುರದ ದೊರೆಗಳೊಂದಿಗೆ ಹಸು ಮೇಯಿಸುವ ಜಾಗೆಯ ವಿಷಯದಲ್ಲಿ ಹಾಕ್ಯಾಡಿದ ವಿವರ ಜನಪದ ಮೌಖಿಕ ಸಾಮಗ್ರಿಗಳಲ್ಲಿ ನೈಜವಾಗಿ ದೊರೆಯುತ್ತವೆ.  …ಹೀಗೆ ತಂದೆ-ಮಗ-ಮೊಮ್ಮಗ ಮೂರು ತಲೆಮಾರುಗಳ ಈ ಕಥನದಲ್ಲಿ ಹಸ್ತಿನಾವತಿಯ ದ್ವಾಪರಯುಗ,  ಕಲ್ಯಾಣದ ಬಸವಯುಗ,  ವಿಜಾಪುರದ ಶಾಹಿಕಾಲ, ಆನೆಗುಂದಿಯ  ವಿಜಯನಗರದ ಕಾಲ ಹಾಗೂ ಸುರಪುರದ ಪಾಳೆಗಾರರ ಕಾಲ  ಸೇರಿದಂತೆ ವಿವಿಧ ಕಾಲಘಟ್ಟದಲ್ಲಿ ಇವರು ಗೋಚರಿಸುತ್ತಾರಾದ್ದರಿಂದ ಯಾವುದೇ ಕಾಲದ ಚೌಕಟ್ಟಿಗೆ ಸಿಗದೆ ಇಡೀ ಪರಂಪರೆ ಕಾಲಾತೀತವಾಗಿ ತೋರುತ್ತದೆ.  ಜನಪದರ ನಾಲಗೆಯ ನಂಬಿಕೆಗಳನ್ನೇ ನೆಚ್ಚಿ ತಲತಲಾಂತರಗಳಲ್ಲಿ ಹರಿದು ಬರುವ ಅಮೋಘಸಿದ್ದನ ಕಥನ ಪುರಾಣೀಕರಣಗೊಂಡು ಕಾಲದ ಹಂಗನ್ನು ಹರಿದುಕೊಳ್ಳುವ ಪರಿಯೇ ವಿಸ್ಮಯಕಾರಿಯಾದದ್ದು. ಈ ವಿಸ್ಮಯಕಾರಿ ಕಥನವನ್ನು ಅಮೋಘಸಿದ್ದ ಪರಂಪರೆಯ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿರುವ ಡಾ.ಚನ್ನಪ್ಪ ಕಟ್ಟಿಯವರು  ಕಟ್ಟಿಕೊಟ್ಟಿದ್ದಾರೆ.  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಶಿವಪ್ಪ-ಕಾಶಿಬಾಯಿ ದಂಪತಿಗಳ ಮಗನಾಗಿ ಶ್ರೀ ಯಲ್ಲಾಲಿಂಗರು ಜನಿಸಿದರು. ಬಾಲ್ಯದಿಂದಲೇ ಶಿವಧ್ಯಾನದಲ್ಲಿದ್ದ ಇವರು, ಮುಗಳಖೋಡದ ಸ್ಮಶಾನಭೂಮಿಯನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು, ಭಿಕ್ಷಾಟನೆ, ಸಮಾಜ ಸೇವೆ ಹಾಗೂ ದಾಸೋಹದ ಮೂಲಕ ಭಕ್ತರಿಗೆ ಮಾರ್ಗದರ್ಶನ ನೀಡಿದ ಮಹಾ ಸಿದ್ಧಿಪುರುಷರು.  ಯಲ್ಲಾಲಿಂಗ ಮಹಾರಾಜರ ಜೀವನದ ಪ್ರಮುಖಾಂಶಗಳು: ಬಾಲ್ಯ ಮತ್ತು ಕಾಯಕ  ಬಾಲ್ಯದಲ್ಲಿ ಕುರಿ ಕಾಯುವ ಕಾಯಕ ಮಾಡುತ್ತಿದ್ದ ಯಲ್ಲಪ್ಪ, ಇಪ್ಪತ್ತರ ಹರೆಯದಲ್ಲಿ ಕುಸ್ತಿಪಟುವಾಗಿದ್ದರು. ವೈವಾಹಿಕ ಜೀವನ:  ಮನೆಯವರ ಒತ್ತಾಯದ ಮೇರೆಗೆ ಹೊನ್ನಮ್ಮ ಎಂಬುವರೊಂದಿಗೆ ವಿವಾಹವಾದರು. ಕರ್ಮಭೂಮಿ:  ಮುಗಳಖೋಡ ಗ್ರಾಮದ ಸ್ಮಶಾನ ಭೂಮಿಯನ್ನು ಮುಕ್ತಿ ಮಂದಿರವನ್ನಾಗಿ ಮಾಡಿಕೊಂಡು, ಅಧ್ಯಾತ್ಮಿಕ ಜೀವನ ನಡೆಸಿದರು. *ಸಿದ್ಧಿ ಮತ್ತು ಸಮಾಜ ಸೇವೆ:  ಸಿದ್ಧಲಿಂಗರ ಆಶೀರ್ವಾದ ಪಡೆದಿದ್ದ ಯಲ್ಲಾಲಿಂಗರು, ಸುತ್ತಮುತ್ತಲಿನ ಗ್ರಾಮದ ಜನರಿಗೆ ಸತ್ಯದ ಮಾರ್ಗ ತೋರಿಸುತ್ತಿದ್ದರು. ಮುಗಳಖೋಡ ಮಠ:  ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆ ಮುಗಳಖೋಡದಲ್ಲಿದ್ದು, ಇದು ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ 24 ಗಂಟೆಗಳ ಕಾಲ ದಾಸೋಹ (ಅನ್ನದಾನ) ನಡೆಯುತ್ತದೆ.  ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರು ಉತ್ತರದ ಕರ್ನಾಟಕದಲ್ಲಿ ಅತ್ಯಂತ ಪೂಜನೀಯರಾಗಿದ್ದು, ಅವರ ಜೀವನ ಸತ್ಯ, ಭಕ್ತಿ ಮತ್ತು ಸೇವಾ ಮನೋಭಾಕ್ಕೆ ಸಾಕ್ಷಿಯಾಗಿದೆ. ಅಮೋಘ ಸಿದ್ಧ ಪರಂಪರೆಯ ಶ್ರೀ ಸಿದ್ಧಲಿಂಗರ ಆಶೀರ್ವಾದ ಕೃಪೆಯಿಂದ ತಮ್ಮ ಬದುಕನ್ನು ಶಿವಯೋಗ ಸಾಧನಕ್ಕೆ ಮೀಸಲಿಟ್ಟವರು ಪೂಜ್ಯರಾದ ಶ್ರೀ ಯಲ್ಲಾಲಿಂಗರು. ಮುಗುಳುಖೋಡ ಮುತ್ಯಾ ಎಂದು ಜನರು ಕರೆಯುತ್ತಿದ್ದರು. ಮೈಲಾರಲಿಂಗ ಎಂದರೆ ಮೈಯಲ್ಲಿ ಆರು ಲಿಂಗ ಗುರು ಲಿಂಗ ಜಂಗಮ ಲಿಂಗ ಹೀಗೆ. ಆದರೆ ಯಲ್ಲಾಲಿಂಗವೆಂದರೆ ಇಡೀ ಕಾಯ ಶರೀರವೇ ಲಿಂಗ ಎಲ್ಲವೂ ಲಿಂಗ ಎಂಬಂತೆ ಬಸವ ತತ್ವಕ್ಕೆ ಅನುಗುಣವಾಗಿ ಬಾಳಿ ಬದುಕಿದ ನಾವು ಕಂಡ ಶ್ರೇಷ್ಠ ಶಿವಯೋಗ ಸಾಧಕರು. ಬಡವರ ಪಾಲಿನ ಆಶಾಕಿರಣ ಭಕ್ತರ ನಂಬಿಕೆಯ ಶ್ರೇಷ್ಠ ಶಿವಯೋಗ ಸಾಧಕರು ಯಲ್ಲಾಲಿಂಗರು. ಬಂದ ಭಕ್ತರಿಗೆ ಅಂಬಲಿ ನೀಡಿ ಪ್ರೀತಿ ಗೌರವ ವಿಶ್ವಾಸದಿಂದ ಮಾತನಾಡಿ ಅವರ ದುಗುಡು ದುಮ್ಮಾನಗಳನ್ನು ದೂರು ಮಾಡುತ್ತಿದ್ದರು. ಜಿಡಗಾ ಮುಗುಳುಖೋಡ ಬೆಳಗಾವಿಯ ಶ್ರೀನಗರದಲ್ಲಿ ಇವರ ಮಠವಿದೆ.  ಯಲ್ಲಾಲಿಂಗರ ನಂತರ ಶ್ರೀ ಸಿದ್ಧರಾಮಸ್ವಾಮಿಗಳು ಮತ್ತೆ ಈಗ ಶ್ರೀ ಡಾ ಮುರುಘರಾಜೇಂದ್ರ ಶ್ರೀಗಳು ತಮ್ಮ ದಿವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ.ಇಂತಹ ಪೂಜ್ಯರನ್ನು ಹೊಂದಿದ ನಮ್ಮ ಕರ್ನಾಟಕದ ನೆಲವೇ ಪಾವನ ಸುಕ್ಷೇತ್ರ. ಇವರಿಗೆ ಭಕ್ತಿಪೂರ್ವಕ ಶರಣಾರ್ಥಿಗಳು. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರು ಮಾಲಿಕೆ,”ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು.ಡಾ ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

“ಸಾವಿಲ್ಲದಶರಣರು”ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣರ ಸಂಗಾತಿ “ಸಾವಿಲ್ಲದಶರಣರು” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಗಂಡು ಮೆಟ್ಟಿನ ಉತ್ತರ ಕರ್ನಾಟಕದ ಹುಬ್ಬಳಿಯ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳು ಬಹುಶಃ ಕರ್ನಾಟಕದ ಭಾರತದ ಇತಿಹಾಸಗಳ ಪುಟಗಳಲ್ಲಿ ಸೇರದೆ ಹೋಗಿದ್ದು ಅತ್ಯಂತ ನೋವಿನ ಸಂಗತಿ. ಇಂತಹ ಅಪ್ಪಟ ಗಾಂಧಿವಾದಿ ರಾಷ್ಟ್ರ ಭಕ್ತ ಸ್ವಾತಂತ್ರ್ಯ ಸೇನಾನಿ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಇವರ ಜೀವನದ ಸಂಘರ್ಷ ಸಮನ್ವಯತೆಯ ಹಾದಿಯನ್ನು ನೋಡೋಣ. ಮಹಾದೇವರ ಮನೆತನದ ಹಿರಿಯರು ಮೂಲತಃ ಬೈಲಹೊಂಗಲ ತಾಲ್ಲೂಕಿನ ಮುರಗೋಡ ಗ್ರಾಮದವರು. ಅವರ ಮನೆತನದ ಹಿರಿಯರು ಮನೆತನದ ಮೂಲ ಉದ್ಯೋಗವಾದ  ಕಿರಾಣಿ ವ್ಯಾಪಾರ ಮಾಡುತ್ತ ಹುಬ್ಬಳ್ಳಿ ಪಟ್ಟಣದಲ್ಲಿ ಬಂದು ಅಲ್ಲಿಯೇ ನೆಲೆಸಿದರು. ಮನೆಯ ಯಜಮಾನ ಶಿವಪ್ರಭುಗಳು.ಅವರ ಧರ್ಮಪತ್ನಿ ಕಾಳಮ್ಮ. ಧಾರ್ಮಿಕ ಹಿನ್ನೆಲೆ, ಉತ್ತಮ ವ್ಯಕ್ತಿತ್ವ ಹೊಂದಿದ ಈ ದಂಪತಿಗಳು ಇಂಚಗೇರಿ ಮಠದ ಸದ್ಗುರುಗಳು ಶ್ರೀ ಗಿರಿಮಲ್ಲೇಶ್ವರ ಮಹಾರಾಜರಿಂದ ನಾಮ ಪಡೆದಿದ್ದರು. ಇಂಚಗೇರಿ ಸಂಪ್ರದಾಯದ ನಿತ್ಯನೇಮ, ಭಜನೆ,ಧ್ಯಾನದ ವಾತಾವರಣ ಅವರ ಮನೆತನದಲ್ಲಿ ಇತ್ತು. ಶಿವಪ್ರಭುಗಳು ಚೆನ್ನಾಗಿ ಇಂಗ್ಗೀಷ ಬಲ್ಲವರಾಗಿದ್ದರಿಂದ ಹುಬ್ಬಳ್ಳಿಯ ರಾಯಲಿ ಕಂಪನಿಯಲ್ಲಿ ಮ್ಯಾನೇಜರ ಹುದ್ದೆ ಪಡೆದಿದ್ದರು. ಬಾಲ್ಯ ಮತ್ತು ಶಿಕ್ಷಣ ಸತ್ಪುರುಷರು, ಮಹಾತ್ಮರು,ಜ್ಞಾನಿಗಳು ಜನ್ಮವೆತ್ತಿ ವಿಶ್ವವನ್ನೇ ಬೆಳಗಿದ್ದಾರೆ. ಅಂತಹ ಪುರುಷರು ಶ್ರೀ ಮಹಾದೇವರು.02.11.1915 ರಂದು ವೀರಾಪುರ ಓಣಿ  ಹುಬ್ಬಳ್ಳಿಯಲ್ಲಿ ತಂದೆ ಶಿವಪ್ರಭುಗಳು ತಾಯಿ ಕಾಳಮ್ಮ ಇವರ ಉದರದಲ್ಲಿಜನಿಸಿದರು. ಧ್ಯಾನಸ್ಥಿತಿಯಲ್ಲಿರುವ ಮಗು ಗುರು ಗಿರಿಮಲ್ಲೇಶ್ವರರು ಹಸ್ತ ಇರಿಸಿದ ನಂತರ ಕಣ್ಣು ತೆರೆಯಿತು.ಸಾತ್ವಿಕ ಕಳೆ ಹೊಂದಿರುವ ಮಗುವಿಗೆ “ಮಹಾದೇವ”ನೆಂದು ನಾಮಕರಣ ಮಾಡಿದರು. ಮಗು ಮಹಾದೇವನ ಬಾಲ್ಯವು ಸಾಹಸದ ಘಟನೆಗಳಿಂದ ಕೂಡಿತ್ತು. ಚಿಕ್ಕಂದಿನಲ್ಲಿಯೇ ಅಪಾರ ಧೈರ್ಯವನ್ನು, ಧ್ಯಾನಯೋಗವನ್ನು ಮೈಗೂಡಿಸಿಕೊಂಡಿದ್ದರು. ಮಹಾದೇವನ ತುಂಟಾಟ, ಬಾಲಲೀಲೆಗೆ ಬೇಸತ್ತು ವೀರಾಪೂರ ಓಣಿಯಲ್ಲಿಯ ಕನ್ನಡ ಶಾಲೆಗೆ ದಾಖಲಿಸುತ್ತಾರೆ. 4 ನೆಯ ಇಯತ್ತೆಯ ವರೆಗೆ ಶಿಕ್ಷಣ ಪೂರೈಸಿದ ಮಹಾದೇವರು.  ಗುರುಗಳು ಅ,ಆ,ಇ,ಈ…ಹೇಳಿದರೆ…..ಮಹಾದೇವನು..ಉ,ಊ,ಋ,ಎ ಮುಂದಿನ ಅಕ್ಷರಗಳನ್ನು ಬರೆಯುವ ವಿದ್ಯಾರ್ಥಿಯಾಗಿದ್ದರು. ಶಾಲೆಯಲ್ಲಿ ತಾನೇ ಮುಂದಾಳುತ್ವ ವಹಿಸುವುದು ವಿದ್ಯಾರ್ಥಿ ನಾಯಕತ್ವವನ್ನು ನಿರ್ವಹಿಸುವುದು ಅವರ ಗುಣಗಳಲ್ಲಿ ಸರ್ವ ಶ್ರೇಷ್ಠ. ಧ್ಯಾನಕ್ಕೆ ಹೊರಳಿದ ಶ್ರೀ ಮಹಾದೇವರು ಧ್ಯಾನವೇ ಅವರ ಆಟ, ಪಾಠವಾಗಿತ್ತು.ತನ್ನ ಸಂಗಡಿಗರಿಗೂ ಅದನ್ನು ಹೇಳಿಕೊಡುತ್ತಿದ್ದರು. ಬಾಲ್ಯದಲ್ಲಿಯೇ ಅಧ್ಯಾತ್ಮವನ್ನು ಉಸಿರನ್ನಾಗಿಸಿಕೊಂಡ ಮಹಾದೇವರು ಮುಂದೆ  ಇಂಚಗೇರಿ ಮಠದ ನಾಲ್ಕನೆಯ ಗುರುಗಳಾಗಿ ಸ್ಥಾನವನ್ನು ಅಲಂಕರಿಸುತ್ತಾರೆ.  ರಾಜಕೀಯ, ಸಾಮಾಜಿಕ, ಕೃಷಿ, ಧಾರ್ಮಿಕ, ಶೈಕ್ಷಣಿಕ,ಸಾಂಸ್ಕೃತಿಕ  ಸಾಧನೆಯನ್ನು ಗೈಯ್ಯುತ್ತಾರೆ. ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಕ್ರಾಂತಿಕಾರಿ ಧ್ಯೇಯಗಳಿಂದ ರಾಸುರಿ ಆಯಾಮವನ್ನು ಪಡೆದು ಕಟು ಸಂಪ್ರದಾಯ ಕಂದಾಚಾರಗಳನ್ನು ಖಂಡಿಸುತ್ತಾ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಹಾಗೂ ಅನ್ಯಾಯಗಳ ವಿರುದ್ಧ ಹೋರಾಟ ನಡೆಸಿದ ಶ್ರೀ ಮಹಾದೇವಪ್ಪನವರಿಂದ ಶ್ರೀ ಕ್ಷೇತ್ರ ಇಂಚಗೇರಿ ಮಠ ದೀನದಲಿತರಿಗೆ ಆಶ್ರಯ ನೀಡಿದ ಆಶ್ರಮವಾಗಿ ಸ್ವತಂತ್ರ್ಯ ನ್ಯಾಯಾಲಯವಾಗಿ , ಸ್ವಯಂ ಉದ್ಯೋಗ ಕೇಂದ್ರವಾಗಿ ಕಾಯಕ ತತ್ವದ ಪ್ರತ್ಯೇಕ್ಷ ನಿದರ್ಶನವಾಗಿ ರೂಪುಗೊಂಡಿದ್ದು ಒಂದು ಅದ್ಭುತ ಸಾಧನೆ ಎಂದು ಹೇಳಬಹುದು. “ಯಾರು ಜನತಾ ಜನಾರ್ಧನ ಸೇವೆಯ ಮಡುವುನಲ್ಲಿ ದುಮುಕುವರೊ ಅವರ ಅಮೃತ ಪಾನ ಮಾಡಿ ಅಮರರಾಗುವರು “ಎಂಬುದು ಶ್ರೀ ಸ.ಸ.ಮಹಾದೇವರ ಅಮೃತವಾಣಿಯಾಗಿತ್ತು. ನಿಜವಾದ ಅರ್ಥದಲ್ಲಿ ಶ್ರಿ ಮಹಾದೇವರು ಅಮರ ಜೀವಿಗಳು. ಮಹಾತ್ಮಾಗಾಂಧೀಜಯವರ ಮೊಮ್ಮಗ ಅರುಣಗಾಂಧೀಯವರು ಇಂಪ್ರಿಂಟಿ ಎಂಬ ಪಾಕ್ಷಿಕ ಇಂಗ್ಲಿಷ್ ಪತ್ರಿಕೆಯಲ್ಲಿ ಇಂಚಗೇರಿ ಸಾಂಪ್ರದಾಯದ ಕುರಿತು ತತ್ವಗಳ ಈ ದಿಟ್ಟ ಪ್ರಯೋಗ ನಮ್ಮ ಭಾರತದಾದ್ಯಂತ ಅತಿ ಶೀಘ್ರವಾಗಿ ಕಾರ್ಯಗತವಾಗಲೆಂದು ಆಶಿಸಿ ಬರೆದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರವೆನಿಸಿದ ಹುಬ್ಬಳ್ಳಿ ಗಿರೀಶಾಶ್ರಮ ಅಜಾನು ಬಾಹು ಶ್ರೀ ಮಹದೇವಪ್ಪ ಮುರುಗೋಡ ಇವರು ತಮ್ಮ ಜೊತೆಗೆ ಸುಮಾರು 6000 ಕ್ಕೂ ಅಧಿಕ ಸ್ವಾತಂತ್ರ ಸೇನಾನಿಗಳನ್ನು ಸಿದ್ಧ ಪಡಿಸಿ ಆಯುಧ ಬಡಿಗೆ ಕೋಲು ಮುಂತಾದ ಅಸ್ತ್ರಗಳನ್ನು ಹೊಂದಿ ಸ್ವಾತಂತ್ರ್ಯ ಹೋರಾಟಗಾರರ ತಂಡ ಕಟ್ಟಿ ಕೊಂಡರು ತಮ್ಮ ಇಂಚಿಗೇರಿ ಸಂಪ್ರದಾಯದಂತೆ ಜಾತಿ ವಿಮೋಚನೆ ಸ್ವಯಂ ಉದ್ಯೋಗ ಅಂತರ್ಜಾತಿಯ ಮದುವೆಗಳು ನಡೆಯುತ್ತಿದ್ದವು. ಜನತಾ ನ್ಯಾಯಾಲಯವನ್ನು ಎಲ್ಲಾ ತಾಲೂಕು ಮತ್ತು ಹಳ್ಳಿಗಳಲ್ಲಿ ಏರ್ಪಡಿಸಿ ತುಳಿತಕ್ಕೆ ಒಳಗಾಗಿದ್ದ ಬಡವರನ್ನು ಅಸ್ಪೃಶ್ಯರನ್ನು ಎತ್ತಿ ಹಿಡಿದು ನ್ಯಾಯ ಒದಗಿಸುತ್ತಿದ್ದರು.ಸಮಾಲೋಚನೆ  ತಿಳುವಳಿಕೆ ಪರಸ್ಪರ ಪೂರಕ ಸಂಬಂಧಗಳ ವೃದ್ಧಿಗೆ ಶ್ರಮಿಸುತ್ತಿದ್ದರು. ಇವುಗಳಿಗೆ ಬಗ್ಗದೆ ಇದ್ದವರಿಗೆ ಗಣಾಚಾರದ ರುಚಿಯನ್ನು ಶ್ರೀ ಮಹಾದೇವ ಪ್ರಭುಗಳು ತೋರಿಸುತ್ತಿದ್ದರು. ಇವರ ಕ್ರಾಂತಿಕಾರಕ ಮೌಲಿಕ ಚಿಂತನೆಗಳಿಗೆ ಮಾರು ಹೋಗಿದ್ದ ರಾಮದುರ್ಗ ಸಂಸ್ಥಾನದ ಸಿಂಹ ಶ್ರೀ ಮಹದೇವಪ್ಪ ಪಟ್ಟಣ .ಹಾವೇರಿಯ ಕ್ರಾಂತಿಕಾರಿ  ಮತ್ತು ಭಗತ ಸಿಂಗ್ ಏ ಆರ ಜೊತೆಗೆ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಶ್ರೀ ವಿರೂಪಾಕ್ಷಪ್ಪ ಅಂಗಡಿ ಮುಂತಾದ ಅನೇಕರು ಹುಬ್ಬಳ್ಳಿಯ ಶ್ರೀ ಗಿರಿಶಾಶ್ರಮದಲ್ಲಿ ಕ್ರಾಂತಿಕಾರಕ ಗುಪ್ತ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಬ್ರಿಟಿಷರ ಮತ್ತು ಪೊಲೀಸರ ಹದ್ದಿನ ಕಣ್ಣು ಗಿರಿಶಾಶ್ರಮದ ಮೇಲಿತ್ತು. 1956 ರ ಚುನಾವಣೆ ಸಂದರ್ಭದಲ್ಲಿ  ರಾಮದುರ್ಗದಲ್ಲಿ ಮೈಸೂರು ಪ್ರದೇಶ ಕಾಂಗ್ರೆಸಿನ ಅಧ್ಯಕ್ಷ ಶ್ರೀ ಹೂಲಿ ವೆಂಕಟರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಹುರಿಯಾಳಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ವಿರುದ್ಧ ಲೋಕಸೇವಾ ಸಂಘದ ಕಾರ್ಯದರ್ಶಿ ರಾಮದುರ್ಗ ದುರಂತದ ನಾಯಕ ನೆಪೋಲಿಯನ್ ಎನಿಸಿಕೊಂಡ ಶ್ರೀ ಮಹದೇವಪ್ಪ ಪಟ್ಟಣ ಎದುರಿಸುತ್ತಾರೆ. ಡಾ ಬಿ ಡಿ ಜತ್ತಿ ಅವರ ರಾಜಕೀಯ ಗುರುಗಳೆನಿಸಿದ ಶ್ರೀ ಹೂಲಿ ವೆಂಕರೆಡ್ಡಿ ಅವರ ಚುನಾವಣೆಯ ಪ್ರಚಾರಕ್ಕೆ ಶ್ರೀ ಎಸ್ ನಿಜಲಿಂಗಪ್ಪನವರು ಆದಿಯಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ವರಿಷ್ಠ ನಾಯಕರು ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಆದರೆ ಚುನಾವಣೆಯಲ್ಲಿ ಶ್ರೀ ಹೂಲಿ ವೆಂಕರೆಡ್ಡಿ ಅವರು ಶ್ರೀ ಮಹದೇವಪ್ಪ ಪಟ್ಟಣ ಅವರ ವಿರುದ್ಧ  ಸೋಲುತ್ತಾರೆ. ಇಡಿ ರಾಷ್ಟ್ರವೇ ರಾಮದುರ್ಗದ ಕಡೆಗೆ ನೋಡುತ್ತದೆ. ಆರಂಭದಿಂದಲೂ ಬಿ ಡಿ ಜತ್ತಿ ಅವರ ರಾಜಕೀಯ ಎದುರಾಳಿ ಎನಿಸಿದ ಮತ್ತು ಅವರ ವಿರುದ್ಧ ಚುನಾವಣೆಗಳನ್ನು ಎದುರಿಸುತ್ತಿದ್ದ ಶ್ರೀ ಸದ್ಗುರು ಸಮರ್ಥ ಮಹಾದೇವ ಪ್ರಭು ಅವರ ಮೇಲೆ ಕೆಲ ಕ್ರಿಮಿನಲ್ ಕೇಸ್ ಗಳಲ್ಲಿ ಶ್ರೀ ಮಹದೇವಪ್ಪ ಅವರ ಮೇಲೆ ನಿರಂತರ ಪೊಲೀಸ ತನಿಖೆಗೆ ಬಿ ಡಿ ಜತ್ತಿ ಅವರು ಮುಖ್ಯ ಮಂತ್ರಿ  ಆದ ಮೇಲೆ 1958 ರಲ್ಲಿ ಒತ್ತಾಯಿಸುತ್ತಾರೆ. ತಮ್ಮ ಆತ್ಮೀಯ ಸ್ವಾತಂತ್ರ್ಯ ಹೋರಾಟಗಾರ ಸಂಗಾತಿ ಶ್ರೀ ಮಹದೇವಪ್ಪ ಮುರುಗೋಡ ಇವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಶಾಸಕ   ಶ್ರೀ ಮಹದೇವಪ್ಪ ಪಟ್ಟಣ ಅವರು ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟ ಮಾಡುತ್ತಾರೆ. ಒಮ್ಮೆ ಸದನದ ಒಳಗೆ ಶ್ರೀ ಮುರುಗೋಡ ಮಹದೇವಪ್ಪ ಅವರ ಮೇಲಿನ ಪ್ರಕರಣಗಳನ್ನು ಸರಕಾರ ಹಿಂದೆ ಪಡೆಯಬೇಕೆಂದು ಶಾಸಕ   ಶ್ರೀ ಮಹದೇವಪ್ಪ ಪಟ್ಟಣ ಅವರು ಸಿಟ್ಟಿನಿಂದ ಮುಖ್ಯ ಮಂತ್ರಿಗಳ ಕಡೆಗೆ ಪೇಪರ್ ವೆಟ್ ತೋರಿದರಂತೆ ಸ್ವತಃ ಶಾಸಕ   ಶ್ರೀ ಮಹದೇವಪ್ಪ ಪಟ್ಟಣ ಅವರು ನನ್ನ ಮುಂದೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.ಕೊನೆಗೂ ಗೆಳೆಯನಿಗೆ ನ್ಯಾಯ ಒದಗಿಸುವ ಕಾರ್ಯದಲ್ಲಿ ಶಾಸಕ   ಶ್ರೀ ಮಹದೇವಪ್ಪ ಪಟ್ಟಣ ಯಶಸ್ವಿಯಾದರು.ಶ್ರೀ ಮಹದೇವಪ್ಪ ಮುರುಗೋಡ ಇವರು ಜೀವನ ಕೊನೆಯ ಉಸಿರಿನವರೆಗೆ ಸಾಮಾಜಿಕ ನ್ಯಾಯಪರವಾಗಿಹೋರಾಡುತ್ತಲೇ ಇದ್ದರು.ಇಂಚಿಗೇರಿ ಶ್ರೀಮಠದ ದಿಂಡಿ ಯಾತ್ರೆಯಲ್ಲಿ ಚಕ್ಕಡಿ ಟ್ರಾಕ್ಟರ್ ದನಕರುಗಳು ಹಸು ಮೇಕೆ ಅವುಗಳಿಗೆ ಬೇಕಾದ ಮೇವು ಭಕ್ತರಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಹೊತ್ತು ಕೊಂಡು ಊರೂರು ತಿರುಗಿ ಸದ್ಭಾವನೆ ಸಾಮಾಜಿಕ ಸಾಮರಸ್ಯಗಳನ್ನುಮೂಡಿಸುವ ಭಜನೆ ಪ್ರಾರ್ಥನೆ ಕೀರ್ತನೆ ಏರ್ಪಡಿಸಿ ಮನುಷ್ಯರ ಮನವನ್ನು  ತಿಳಿಗೊಳಿಸುತ್ತಿದ್ದರು. ಅಲ್ಲಿಯೇ ಸಾಮಾಜಿಕ ನ್ಯಾಯ ಬಗೆ ಹರಿಸುವುದು ವಾಡಿಕೆಯಾಗಿತ್ತು. ಶ್ರೀ ವಿನೋಭಾ ಭಾವೆಯವರ ತಾಯಿಯ ತವರು ಮನೆ ಜಮಖಂಡಿ ಅವರೂ ಸಹ ಶ್ರೀ ಮಹದೇವಪ್ಪ ಮುರುಗೋಡ ಇವರ ಕಾರ್ಯಗಳ ಬಗ್ಗೆ ತಮ್ಮ ಅತೀವ ಸಂತಸ ವ್ಯಕ್ತ ಪಡಿಸಿದ್ದಾರೆ. ಬದುಕಿನ ತಪಸ್ಸಿಗೆ ಕೊನೆ ಹೇಳಿದ ಶಿವಯೋಗ ಸಾಧಕ ಬಾಲ ಬ್ರಹ್ಮಚಾರಿಯಾಗಿದ್ದ ಮಹಾದೇವರು ತದನಂತರ ದಿನಗಳಲ್ಲಿ ದೇವರು ಹಾಗೂ ಶ್ರೀ ಮಾಧವಾನಂದ ಪ್ರಭುಜೀ ಎಂದೆ ಪ್ರಚಲಿತರಾಗಿ ಭಕ್ತಿ ಪ್ರಚಾರದ ಜತೆಗೆ ಶ್ರೀ ಗುರು ಪುತ್ರೇಶ್ವರ ಮಹಾರಾಜರನ್ನು ತಮ್ಮ ಆಧ್ಯಾತ್ಮದ ಗರಡಿಯಲ್ಲಿ ಪಳಗಿಸಿ,ತಮ್ಮ ಬದುಕನ್ನು ಶೋಷಿತರ ಪರವಾಗಿ ನಿಂತು ನ್ಯಾಯ ಒದಗಿಸಿ ಭಾರತದ ಸ್ವಾತಂತ್ರ್ಯ ಹೋರಾಟ ಕರ್ನಾಟಕ ಏಕೀಕರಣ ಗೋವಾ ವಿಮೋಚನೆಗೆ ದುಡಿದು 1980 ರಲ್ಲಿ ದೈವಾದಿನರಾದರು . ಬಯಲಲ್ಲಿ ಬಯಲಾದರು.__________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

“ಸಾವಿಲ್ಲದಶರಣರು”ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ “ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಕರ್ನಾಟಕ ಮತ್ತು ಭಾರತದ ಇತಿಹಾಸದಲ್ಲಿ ಸುವರ್ಣಯುಗ ಎನ್ನುವುದು ಕೆಳದಿ ಅರಸರ ಕಾಲದಲ್ಲಿ. ಕೃಷಿ ವಾಣಿಜ್ಯ ತೆರಿಗೆ ಸುಧಾರಣೆಗಳನ್ನು ಅನುಷ್ಠಾನಗೊಳಿಸಿ ಸಮೃದ್ಧ ರಾಜ್ಯವನ್ನು ಮಾಡಿದ ಕೀರ್ತಿ ಕೆಳದಿ ಅರಸರಿಗೆ ಸಲ್ಲುತ್ತದೆ. ಶಿವಪ್ಪ ನಾಯಕ (ಶಿವಪ್ಪ ನಾಯಕ) (1645–1660), ಕೆಳದಿ ಶಿವಪ್ಪ ನಾಯಕ ಎಂದು ಜನಪ್ರಿಯವಾಗಿ ನಾಯಕರು, ಒಬ್ಬ ಭಾರತೀಯ ರಾಜ ಮತ್ತು ಕೆಳದಿ ನಾಯಕ ಸಾಮ್ರಾಜ್ಯದ ಆಡಳಿತಗಾರ. ಕೆಳದಿ ನಾಯಕರು 16 ನೇ ಶತಮಾನದ ಉತ್ತರಾರ್ಧದಲ್ಲಿ ಭಾರತದ ಕರ್ನಾಟಕದ ಕರಾವಳಿ ಮತ್ತು ಮಲೆನಾಡು (ಬೆಟ್ಟ) ಜಿಲ್ಲೆಗಳಲ್ಲಿ ವಿಜಯನಗರ ಸಾಮ್ರಾಜ್ಯದ ನಂತರದ ಲಿಂಗಾಯತ ಉತ್ತರಾಧಿಕಾರಿಗಳಾಗಿದ್ದರು. ಅವರ ಉತ್ತುಂಗದಲ್ಲಿ, ನಾಯಕರು 1763 ರಲ್ಲಿ ಮೈಸೂರು ಸಾಮ್ರಾಜ್ಯಕ್ಕೆ ಶರಣಾಗುವ ಮೊದಲು, ಆಧುನಿಕ ಕರ್ನಾಟಕದ ಕರಾವಳಿ, ಬೆಟ್ಟ ಮತ್ತು ಕೆಲವು ಆಂತರಿಕ ಜಿಲ್ಲೆಗಳನ್ನು ( ಬಯಲುಸೀಮೆ ) ಒಳಗೊಂಡ ಸ್ಥಾಪಿತ ಸಾಮ್ರಾಜ್ಯವನ್ನು ನಿರ್ಮಿಸಿದರು,   ಕೆಳದಿ ಅರಸರು ತೆರಿಗೆಯನ್ನು  ಪರಿಚಯಿಸಿದರು.  ಯುದ್ಧ ಮತ್ತು ವಿಜಯಗಳು ಶಿವಪ್ಪ ನಾಯ್ಕ ಒಬ್ಬ ಸಮರ್ಥ ಆಡಳಿತಗಾರ ಮತ್ತು  ಶೂರ ಸೈನಿಕ . ಅವರು 1645 ರಲ್ಲಿ ಸಿಂಹಾಸನವನ್ನು ಏರಿದರು. ಈ ಸಮಯದಲ್ಲಿ, ವೆಲ್ಲೂರಿನಿಂದ ಆಳಿದ ವಿಜಯನಗರ ಸಾಮ್ರಾಜ್ಯದ ಕೊನೆಯ ದೊರೆ ಶ್ರೀರಂಗರಾಯ III ಬಿಜಾಪುರ ಸುಲ್ತಾನರಿಂದ ಸೋಲಿಸಲ್ಪಟ್ಟರು ಮತ್ತು ಶಿವಪ್ಪನ ಆಶ್ರಯವನ್ನು ಪಡೆದರು. ಪೋರ್ಚುಗೀಸರ ಬೆದರಿಕೆಯನ್ನು 1653 ರ ಹೊತ್ತಿಗೆ ತೊಡೆದುಹಾಕಲಾಯಿತು ಮತ್ತು ಮಂಗಳೂರು, ಕುಂದಾಪುರ ಮತ್ತು ಹೊನ್ನಾವರ ಬಂದರುಗಳನ್ನು ಕೆಳದಿ ನಿಯಂತ್ರಣಕ್ಕೆ ತರಲಾಯಿತು.  ಕನ್ನಡ ಕರಾವಳಿಯನ್ನು ಗೆದ್ದ ನಂತರ, ಅವರು ಆಧುನಿಕ ಕೇರಳದ ಕಾಸರಗೋಡು ಪ್ರದೇಶಕ್ಕೆ ದಂಡೆತ್ತಿ ಹೋಗಿ ನೀಲೇಶ್ವರದಲ್ಲಿ ವಿಜಯಸ್ತಂಭವನ್ನು ಸ್ಥಾಪಿಸಿದರು. ಚಂದ್ರಗಿರಿ, ಬೇಕಲ್, ಅಡ್ಕ ಕೋಟೆ, ಆರಿಕ್ಕಾಡಿ ಮತ್ತು ಮಂಗಳೂರಿನ ಕೋಟೆಗಳನ್ನು ಶಿವಪ್ಪ ನಾಯಕ ನಿರ್ಮಿಸಿದ. ನಂತರ ಅವರು ತುಂಗಭದ್ರಾ ನದಿಯ ಉತ್ತರಕ್ಕೆ ದಾಳಿ ಮಾಡಿದರು ಮತ್ತು ಆಧುನಿಕ ಧಾರವಾಡ ಜಿಲ್ಲೆಯಲ್ಲಿ ಬಿಜಾಪುರ ಸುಲ್ತಾನರಿಂದ ಪ್ರದೇಶವನ್ನು ವಶಪಡಿಸಿಕೊಂಡರು. ದಕ್ಷಿಣದಲ್ಲಿ, ಆಧುನಿಕ ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಅವನು ಆಕ್ರಮಣ ಮಾಡಿ ಮುತ್ತಿಗೆ ಹಾಕಿದಾಗ, ಅವನ ಸೈನ್ಯದಲ್ಲಿ ಸಾಂಕ್ರಾಮಿಕ ರೋಗವು ಅವನನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು.  ದಕ್ಷಿಣದಲ್ಲಿ, ಅವರು ಕರಾವಳಿ ಪ್ರದೇಶದ ಎಲ್ಲಾ ಪೋರ್ಚುಗೀಸ್ ಕೋಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಕೆನರಾ ಪ್ರದೇಶದಲ್ಲಿ ಪೋರ್ಚುಗೀಸ್ ರಾಜಕೀಯ ಶಕ್ತಿಯನ್ನು ನಾಶಪಡಿಸಿದರು.  ಶಿವಪ್ಪ ನಾಯಕ ಅವರು ಸಿಸ್ಟ್ ಎಂಬ ರಾಜಸ್ವ ಪರಿಹಾರ ಯೋಜನೆಯನ್ನು ಪರಿಚಯಿಸಿದರು , ಇದು ಮೊಗಲ್ ಚಕ್ರವರ್ತಿ ಅಕ್ಬರ್ ರೂಪಿಸಿದ ಕಂದಾಯ ಯೋಜನೆಗಳಿಗೆ ಅನುಕೂಲಕರ ಹೋಲಿಕೆಯನ್ನು ಕಂಡುಕೊಂಡಿದೆ.  ಈ ಯೋಜನೆಯ ಪ್ರಕಾರ, ಮಣ್ಣಿನ ಪ್ರಕಾರ ಮತ್ತು ಲಭ್ಯವಿರುವ ನೀರಾವರಿ ಸೌಲಭ್ಯಗಳ ಆಧಾರದ ಮೇಲೆ ಕೃಷಿ ಭೂಮಿಯನ್ನು ಐದು ವಿಧಗಳಾಗಿ ವಿಂಗಡಿಸಲಾಗಿದೆ. ಖಂಡುಗ ಎಂಬ ಬಿತ್ತನೆ ಸಾಮರ್ಥ್ಯದ ಘಟಕವನ್ನು ಅಭಿವೃದ್ಧಿಪಡಿಸಲಾಯಿತು ಮತ್ತು ಪ್ರತಿ ನೀರಾವರಿ ಭೂಮಿಗೆ ಈ ಘಟಕದ ಆಧಾರದ ಮೇಲೆ ವಿವಿಧ ಮೊತ್ತಗಳಲ್ಲಿ ತೆರಿಗೆ ವಿಧಿಸಲಾಯಿತು. ತೆರಿಗೆಯ ದರವು ಈ ಐದು ರೀತಿಯ ಭೂಮಿಯಲ್ಲಿ ಪ್ರತಿಯೊಂದರ ಇಳುವರಿಯನ್ನು ಅವಲಂಬಿಸಿದೆ, ದರವು ಹಳ್ಳಿಯಿಂದ ಗ್ರಾಮಕ್ಕೆ ಬದಲಾಗುತ್ತದೆ ಮತ್ತು ಒಟ್ಟು ಇಳುವರಿಯಲ್ಲಿ ಮೂರನೇ ಒಂದು ಭಾಗದಷ್ಟು ಇರುತ್ತದೆ. ಶಿವಪ್ಪ ನಾಯಕ ಅವರು ಕೃಷಿಗೆ ಪ್ರಾಮುಖ್ಯತೆಯನ್ನು ನೀಡಿದರು, ಇದು ಕೃಷಿ ಆರ್ಥಿಕತೆಯನ್ನು ವಿಸ್ತರಿಸಲು ಕಾರಣವಾಯಿತು.  *ಧಾರ್ಮಿಕ  ಸಹಿಷ್ಣು*  ಧಾರ್ಮಿಕ ಮತ್ತು ಸಹಿಷ್ಣು ವ್ಯಕ್ತಿ, ಶಿವಪ್ಪ ನಾಯಕ ಲಿಂಗಾಯತ   ಆಚರಣೆಗಳನ್ನು ಮಾಡಿದರು ಮತ್ತು ಶೃಂಗೇರಿಯ ಹಿಂದೂ ಅದ್ವೈತ ಕ್ರಮವನ್ನು ಪೋಷಿಸಿದರು. ಶೃಂಗೇರಿಯ ಮಠ ಗುಡಿ ಕಟ್ಟಿ ಕೊಟ್ಟರು. ಅವರು ಕ್ರಿಶ್ಚಿಯನ್ನರ ಬಗ್ಗೆ ಸಹಿಷ್ಣುರಾಗಿದ್ದರು ಮತ್ತು ಅವರಿಗೆ ಕೃಷಿ ಮಾಡಲು ಭೂಮಿ ನೀಡಿದರು. ಅವರು ದಕ್ಷಿಣ ಭಾರತದ ವಾಣಿಜ್ಯ ಸಮುದಾಯಗಳಾದ ಕೋಮಟಿಗಳು ವೈಶ್ಯರು ಮತ್ತು ಕೊಂಕಣಿಗಳನ್ನು ತಮ್ಮ ರಾಜ್ಯದಲ್ಲಿ ನೆಲೆಸಲು ಮತ್ತು ವ್ಯವಹಾರಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಿದರು.  ಕಾಶ್ಮೀರಿ ಪಂಡಿತರು ವಲಸೆ ಬಂದಾಗ ಅವರಿಗೆ ಹೊಸನಗರ ಪ್ರದೇಶದಲ್ಲಿ ಆಶ್ರಯ ನೀಡಿ ಪೋಷಿಸಿದರು. *ಸ್ವಾರಸ್ಯಕರ ಪ್ರಸಂಗ* ಶಿವಪ್ಪ ನಾಯಕನ ಆಳ್ವಿಕೆಯ ಕಾಲದ ಸ್ವಾರಸ್ಯಕರ ಪ್ರಸಂಗ ಹೀಗಿದೆ. ಗಣೇಶ್ ಮಲ್ಯ ಎಂಬ ಬಡ ಬ್ರಾಹ್ಮಣನು ಉದ್ಯೋಗ ಹುಡುಕುವ ಉದ್ದೇಶದಿಂದ ರಾಜಧಾನಿ ಕೆಳದಿಗೆ ಬಂದನು. ಹಣವಿಲ್ಲದ ಕಾರಣ ಮನೆಯಲ್ಲಿ ಬೆಳೆದ ತೆಂಗಿನಕಾಯಿ ತುಂಬಿದ ಚೀಲವನ್ನು ಹೊತ್ತೊಯ್ದರು. ನಗರವನ್ನು ಪ್ರವೇಶಿಸುವ ಮೊದಲು, ಪ್ರತಿಯೊಬ್ಬ ಪ್ರಯಾಣಿಕರು ಎಂಟು ಟೋಲ್ ಗೇಟ್‌ಗಳ ಮೂಲಕ ಹಾದುಹೋಗಬೇಕಾಗಿತ್ತು, ಪ್ರತಿಯೊಂದೂ ತೆರಿಗೆಯನ್ನು ಸಂಗ್ರಹಿಸುತ್ತದೆ. ಅವರು ಯಾವುದೇ ಹಣವನ್ನು ಸಾಗಿಸದ ಕಾರಣ, ಗಣೇಶ್ ಮಲ್ಯ ಅವರು ಪ್ರತಿ ಟೋಲ್ ಗೇಟ್‌ನಲ್ಲಿ ಎರಡು ತೆಂಗಿನಕಾಯಿಗಳನ್ನು ಹಂಚಿಕೊಳ್ಳಬೇಕಾಯಿತು, ಒಂದನ್ನು ತೆರಿಗೆ ಮತ್ತು ಇನ್ನೊಂದನ್ನು ಅಧಿಕಾರಿಗೆ ಉಡುಗೊರೆಯಾಗಿ ನೀಡಲಾಯಿತು. ನಗರದ ಪ್ರವೇಶ ದ್ವಾರದಲ್ಲಿ ಎರಡು ತೆಂಗಿನಕಾಯಿ ಸಹ ಪಾವತಿಸಿದರು. ಎಲ್ಲಾ ಟೋಲ್‌ಗಳಿಂದ ನಿರಾಶೆಗೊಂಡ ಮಲ್ಯ ಅವರು ಧೈರ್ಯದಿಂದ ತಮ್ಮದೇ ಆದ ಟೋಲ್ ಗೇಟ್ (ಒಂಬತ್ತನೇ ಟೋಲ್ ಗೇಟ್) ಸ್ಥಾಪಿಸಿದರು ಮತ್ತು ತಮ್ಮ ಸ್ವಂತ ರಿಜಿಸ್ಟರ್‌ನಲ್ಲಿ ನಗರಕ್ಕೆ ಬರುವ ಪ್ರಯಾಣಿಕರ ಸಂಪೂರ್ಣ ವಿವರಗಳನ್ನು ನೋಂದಾಯಿಸಿದ ನಂತರ ಟೋಲ್ ಸಂಗ್ರಹಿಸಿದರು. ಟೋಲ್‌ಗೆ ಪ್ರತಿಯಾಗಿ, ಗಣೇಶ್ ಮಲ್ಯ ಅವರು ಹದಿನೆಂಟು ತೆಂಗಿನಕಾಯಿಗಳಿಗೆ ಹೊಸ ಕಸ್ಟಮ್ ಸ್ಟೇಷನ್, ಕುಮಟಾದ ಗಣೇಶಯ್ಯ ರಾಜರ ಸಹಿಯೊಂದಿಗೆ ಚೀಟಿಯನ್ನು ನೀಡಿದರು . ಇದು ಹದಿನೆಂಟು ತಿಂಗಳುಗಳ ಕಾಲ ರಾಜ ಶಿವಪ್ಪ ನಾಯಕನಿಗೆ ಕೇಳುವ ಮೊದಲು ಯಾರೂ ಗಮನಿಸಲಿಲ್ಲ. ರಾಜನು ಕರೆಸಿದಾಗ, ಜೀವನೋಪಾಯಕ್ಕಾಗಿ ಅಕ್ರಮ ಜಕಾತು ತೆರಿಗೆ ಸಂಗ್ರಹಿಸಿದ್ದಾಗಿ ಗಣೇಶ್ ಮಲ್ಯ ಒಪ್ಪಿಕೊಂಡಿದ್ದಾನೆ. ಅವರ ಪ್ರಾಮಾಣಿಕತೆ ಮತ್ತು ವ್ಯವಹಾರ ಕುಶಾಗ್ರಮತಿಯಿಂದ ಪ್ರಭಾವಿತರಾದ ಶಿವಪ್ಪ ನಾಯಕ ಗಣೇಶ್ ಮಲ್ಯರನ್ನು ತಮ್ಮ ಸೇವೆಗೆ ತೆಗೆದುಕೊಂಡರು.  ಶಿವಪ್ಪ ನಾಯಕನ ನಂತರ 1660 ರಲ್ಲಿ ಅವನ ಕಿರಿಯ ಸಹೋದರ ಚಿಕ್ಕ ವೆಂಕಟಪ್ಪ ನಾಯಕನು ಸಿಂಹಾಸನವನ್ನು ಅಲಂಕರಿಸಿದನು. ಶಿವಪ್ಪ ನಾಯಕ ಕೆಳದಿ ಅರಸರ ಮೊದಲ ದೊರೆ. ಇವನ ಕಾಲದ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಹಲವು ಭಾಗಗಳಲ್ಲಿ ಕಾಣುತ್ತೇವೆ.  ಇಂತಹ ಜನಪರ ಅರಸು ಸಾಮಾಜಿಕ ಬದಲಾವಣೆಯ ಕನಸುಗಾರ ಶ್ರೀ ಶಿವಪ್ಪ ನಾಯಕ ಇವರಿಗೆ ಅನಂತ ಕೋಟಿ ನಮನಗಳು ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ,”ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ Read Post »

You cannot copy content of this page

Scroll to Top