ಪುಸ್ತಕ ಸಂಗಾತಿ
“ಪಮ್ಮಿ” ಹನಿಗವಿತೆಗಳು ಕನ್ನಡದಲ್ಲಿ ಚುಟುಕು ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ.ನಮ್ಮಜನಪದ ತ್ರಿಪದಿಗಳು ಮೂರೆ ಸಾಲಿನಲ್ಲಿ ಥಟ್ ಅಂತ ಒಂದು ವಸ್ತುವಿಷಯದ ಮೇಲೆ ಬೆಳಕು ಚೆಲ್ಲಿ ಬೆಳಗಿಸಿಬಿಡುವ ಮಿಣುಕು ಹುಳುಗಳಂತಹವು.ಜೀವನಾನುಭವದಿಂದ ಮೂಡಿದ ನುಡಿಮುತ್ತುಗಳು.ಹೊಸಗನ್ನಡದಲ್ಲಿ ಚುಟುಕುಗಳ ಬ್ರಹ್ಮನೆಂದೆ ಖ್ಯಾತರಾದ ದಿನಕರ ದೇಸಾಯಿ ಅವರ ದ್ವಿಪದಿ, ಬೀಚಿ ಅವರ ಹಾಸ್ಯದ ಚುಟುಕುಗಳು,ದುಂಡೀರಾಜ್ ಅವರ ಪಂಚ್ ಗಳು ಪ್ರಸಿದ್ದಿಯಾದವು.ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದ ಕಂದ ಪದ್ಯಗಳು ತಾತ್ವಿಕ ವಿಚಾರಗಳನ್ನು ತುಂಬಿಕೊಂಡೆ ತೆನೆಗಳು.ಚುಟುಕುಗಳ ಮುಖ್ಯ ಲಕ್ಷಣವೇ ಯಾವ ವಿಷಯವನ್ನಾದರೂ ಪರಿಣಾಮಕಾರಿಯಾಗಿ ಚಿಕ್ಕದಾಗಿ ಚೊಕ್ಕಾವಾಗಿ ಭಾವ ಸ್ಪುರಿಸುವಂತೆ ಹೇಳಿಬಿಡುವುದು.ಕೊನೆಯಲ್ಲಿ ಪಂಚ್ ಇರಬೇಕು ಅಂತಾರ,ಅದು ಪದಗಳ ಮೂಲಕ ಇಲ್ಲಾ ಅರ್ಥದಲ್ಲಿ ಮೂಡಿಸುವ ಪಂಚ್ ಆದರೂ ಆಗಬಹುದು.ಒಟ್ಟಿನಲ್ಲಿ ಹನಿಯಲ್ಲಿ ಕಡಲು,ಕನ್ನಡಿಯಲ್ಲಿ ಕರಿ ಎಂಬಂತೆ ಮೂರು ನಾಲ್ಕೋ ಸಾಲಿನಲ್ಲೇ ಬ್ರಹ್ಮಾಂಡ ತೋರಿಬಿಡುವ ಶಕ್ತಿಯುಳ್ಳವು ಚುಟುಕುಗಳು.ಕೆಲವು ಗಂಭೀರ,ಕೆಲವು ಹಾಸ್ಯಭರಿತ, ಮತ್ತೆ ಕೆಲವು ಜಟಿಲ,ಮತ್ತಷ್ಟು ಸರಳ,ಸರಾಗ ..ಹೀಗೆ ಧೊಪ್ಪೆಂದು ಆಗಸದಿಂದ ಗಟ್ಟಿ ಮಳೆಹನಿಯೊಂದು ಕಾರ್ಮೋಡ ಸೀಳಿಕೊಂಡು ಧರೆಗೆ ಬಿದ್ದಂತೆ. ” ಮೌನವೆಂದರೆ…ಮಾತಿಲ್ಲದ ಮನೆಯೇಮಾತುಬಾರದ ಮಗಳೆಇದ್ಯಾವುದೂ ಇಲ್ಲವಾದರೆ! ಮೌನವೆಂದರೆ…ಮುನಿಸಿಕೊಂಡಮಾತಿರಬೇಕು.”.. ದೇಸು ಆಲೂರು ಮಾತು ಮೌನದ ನಡುವಿನ ಸಂಬಂಧ ಮತ್ತು ವ್ಯತ್ಯಾಸವನ್ನು ಹೇಳುವ ಈ ಚುಟುಕು ದೇಸು ಆಲೂರು ಅವರದು.ಬಾಯಿ ತೆರೆದರೆ ಸಾಕು ಹಾಸ್ಯ ಚಟಾಕಿಗಳ ಹಾರಿಸುತ್ತಾ,ಎಲ್ಲರನ್ನೂ ನಗಿಸಿ,ತನ್ನ ಸುತ್ತಮುತ್ತ ಸದಾ ಉತ್ಸಾಹದ ಅಲೆಯನ್ನು ಮೂಡಿಸಿಕೊಂಡುಬಿಡುವ ಚುಟುಕು ಕವಿ ದೇಸು ಅವರು.ಶಾಲೆ ಕಾಲೇಜುಗಳಿಗಿಂತ ಭಿನ್ನವಾದ ಕಲಿಕೆಯನ್ನು ಜೀವನದುದ್ದಕ್ಕೂ ಕಲಿಯುತ್ತಾ ಬಂದಿರುವ ದೇಸು ಅವರು ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು.ದುಡಿಮೆಯನ್ನೇ ದೈವವಾಗಿಸಿ ಬದುಕುತ್ತಿರುವವರು. “ಪಮ್ಮಿ”.. ಹರಿಣಿ ಹೆಸರಿನ ಹೆಂಡತಿಯನ್ನು ಪಮ್ಮಿಯಾಗಿಸಿ,ಆಗಾಗ ತಮಾಷೆಗೆ ಡುಮ್ಮಿ ಎನ್ನುತ್ತಾ,ಸಮಯಕ್ಕೆ ತಕ್ಕಂತೆ ನೀನೀಗ ಎರಡು ಮಕ್ಕಳ ಮಮ್ಮಿ ಎನ್ನುತ್ತಲೂ ತಮ್ಮ ದಾಂಪತ್ಯ ಜಗತ್ತನ್ನು ತೆರೆದಿಡುವ ದೇಸು ಅವರ ಚುಟುಕುಗಳು ಕಚಗುಳಿಯಿಡುವ ಮಾತ್ರೆಗಳು.ಪಮ್ಮಿ ಸಂಕಲನದ ಬಹುಪಾಲು ಹನಿಗವನಗಳು ಹಾಸ್ಯದ ಪಟಾಕಿಗಳೇ. ” ತವರಿನಲ್ಲಿದ್ದನನ್ನಾಕೆಗೆ ಕಾಗದ ಬರೆದೆ..ಪ್ರಿಯೆ,ಈ ಓಲೆ ತಲುಪಿದತಕ್ಷಣನಿನ್ನ ಕ್ಷೇಮದ ವಿಚಾರತಿಳಿಸತಕ್ಕದ್ದುಅತ್ತ ಕಡೆಯಿಂದ ಕಾಗದಬಂತು..ರೀ….ನಿಮ್ಮ ಕಾಗದ ಸಿಕ್ಕಿದೆ,ಆದರೆ…ವಾಲೆ ಮಾತ್ರ ಸಿಕ್ಕಿಲ್ಲ..” ಹೆಂಡತಿಯನ್ನು ಪೆದ್ದತನದಲಿ ಕಾಣಿಸುವ ಇವರ ಬಹಳಷ್ಟು ಚುಟುಕುಗಳು ಅವಳು ಮೊದ್ದು,ಪೆದ್ದು,ಮುದ್ದು,ಸಿಡುಕು,ಕ್ಯಾತೆ ತೆಗೆವಾಕೆ ಎನ್ನುತ್ತಲೇ ಅವಳಿಲ್ಲದೆ ಬಾಳಿಲ್ಲಾ.ಅವಳ ಮಾತು,ಮುನಿಸು,ಸಿಟ್ಟಿಲ್ಲದೆ ಇರಲಾಗುವುದಿಲ್ಲವೆಂಬ ಪ್ರೀತಿಯನ್ನೂ ತೋರುತ್ತದೆ. ” ಪಮ್ಮಿಗೂ..ನನಗೂ ನಿತ್ಯ ಕದನಕದನದಲ್ಲೂ ಹೊಳೆಯುವುದುನನ್ನವಳ ವದನ “ ಪಮ್ಮಿ ತುಂಬಾ ಒಳ್ಳೆಯವಳಂತೆ ಪಕ್ಕದ ಮನೆಯಾಕೆ ಹೇಳ್ತಿದ್ರು ಎನ್ನುವ ದೇಸು,ಮಡದಿಯನ್ನು ರೇಗಿಸುತ್ತಾ,ಕಿಚಾಯಿಸುತ್ತಾ,ನಗಿಸುತ್ತಾ ಇಬ್ಬರು ಮಕ್ಕಳೊಡನೆ ಬಾಳ ಕಡಲನ್ನು ನಗುತ್ತಲೇ ಈಜುತ್ತಿದ್ದಾರೆ. ‘ ಮಹಿಳೆ..ಮಧ್ಯದ ಅಕ್ಷರ ತೆಗೆದರೆ ಹೊಳೆ..ತೆಗೆಯದಿದ್ದರೆ ಮಹಿಳೆಮಳೆ ಪ್ರತೀ ಜೀವನಾಡಿಯ ಉಸಿರು..ಮಹಿಳೆ,ಗಂಡಿನ ಯಶಸ್ಸಿನ ಉಸಿರು.. “ ಎಂದೆನ್ನುತ್ತಾ ಪಮ್ಮಿಯೆ ಎಲ್ಲಾ ಎನ್ನುತ್ತಾರೆ. ” ಗತ್ತು..ಅದೇನು ಗತ್ತೇ ಹುಡುಗಿಆ ಮುಂಗುರುಳಿಗೆ..!ಬಾಚಿ ತಬ್ಬಿ ನಗುತಿದೆನಿನ್ನ ಕೊರಳಿಗೆ..” ” ಸಾಂಗತ್ಯ.. ಶೃಂಗಾರ ಸಂಗತ್ಯ,ನವರಸದ ನೇಪಥ್ಯಸಮರಸದ ದಾಂಪತ್ಯ, ಕಾಲನಿಗೂ ಅಭೇದ್ಯ..” ಎಂದು ದಾಂಪತ್ಯದ ಅರ್ಥ ತಿಳಿದವರು ದೇಸು.ಮಡದಿ,ಮಗಳ ಕಣ್ಣುಗಳೇ ಮನೆಯ ನಾಲ್ಕು ಕಣ್ಣುಗಳೆಂದು ಸಂಭ್ರಮಿಸಿ,ಸಂಬಂಧಗಳೇ ಸತ್ತ ಮೇಲೆ ಭಾವನೆಗಳಿಗೆ ಕೆಲಸವಿಲ್ಲವೆಂದು ಸಂಬಂಧಗಳ ಜೋಪಾನ ಮಾಡುವವರು. ” ಅಮ್ಮನ ಮಾತಿಗೆ ಮನಸು ನಗುತದೆಮುಂದೆ ಹೋಗುತಿಲ್ಲ ಅಪ್ಪನ ವಯಸ್ಸುಹತ್ತು ವರ್ಷದಿಂದ ಒಂದೇ ಮಾತುನಿಮ್ಮಪ್ಪನಿಗಿನ್ನೂ ಐವತ್ತು..” ಎನ್ನುತ್ತಲೇ ಅಗಲಿದ ಅಮ್ಮನನ್ನು ಆಕಾಶದ ಚುಕ್ಕಿಗಳಲ್ಲಿ ಕಾಣುತ್ತಾ,ಅಲ್ಲಿ ಚನ್ನಾಗಿರಮ್ಮಾ..ಇಲ್ಲಿ ನಾವು ಚನ್ನಾಗಿರುತ್ತೇವೆ ಎಂದು ಭಾವುಕರಾಗಿಬಿಡುತ್ತಾರೆ. ” ದೇಸು ಕನ್ನಡದ ಕೂಸು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಕನ್ನಡಮ್ಮನ ಮಗ,ಕನ್ನಡ ಸಾಹಿತ್ಯ ಸೇವೆಗೆ ಸದಾ ನಿಂತಿರುವ ಕನ್ನಡದ ಬಂಟ. ಏನಕ್ಕಾ ಸಮಾಚಾರ ಎಂದೆನ್ನುತ್ತಾ ಕಣ್ಣರಳಿಸಿ ನಗುಮೊಗದಲಿ ಎದುರಾಗುವ ಈ ತಮ್ಮನ ಮನೆ, ಮನ ಸದಾ ಹೀಗೇ ಸಂತಸದಿಂದಿರಲಿ..ಇವರಿಂದ ಇನ್ನಷ್ಟು ಮತ್ತಷ್ಟು ಹನಿಗವನಗಳೊಂದಿಗೆ ಗಂಭೀರ ಸೃಜನಶೀಲ ಸಾಹಿತ್ಯದ ಹಲವು ಪ್ರಕಾರಗಳ ಬೆಳೆ ಉಲುಸಾಗಿ ಬೆಳೆಯಲಿ. ” ಕಬ್ಬಿಗರೆದೆಯಲಿ ನಲಿದಿದೆಕನ್ನಡಹಿಗ್ಗಿದೆ ಕನ್ನಡ ಹಿರಿದಿದೆ ಕನ್ನಡಕನ್ನಡಿಗರ ಮನೆ ಮನದಲಿನೆಲೆಸಿದೆ ಕನ್ನಡ” ಕನ್ನಡಕ್ಕಾಗಿ ಮಿಡಿವ,ತುಡಿವ ದೇಸುರವರ ಕನ್ನಡ ಸೇವೆ ನಿರಂತರವಾಗಲಿ. |******* ಸುಜಾತಾ ಲಕ್ಷ್ಮೀಪುರ









