ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಆಶಾವಾದ ಹೊತ್ತು ಹರಿವ ‘ಜೀವಧಾರೆ’!!

ನೊಂದು ಅಪಮಾನಿತರಾಗಿ ಕುಗ್ಗಿದ ಹೆಣ್ಣುಮಕ್ಕಳು ಈ ಕಥಾ ಸಂಕಲನವನ್ನು ಆಪ್ತಸಂಗಾತಿಯ ಸಂತೈಕೆಯ ನುಡಿಗಳಂತೆ ಓದಿ ಸಮಾಧಾನ ಕಾಣಬಹುದು. ಡಾ. ಜಿ ಸುಧಾ ಅವರು ಸ್ವಲ್ಪವೇ ಪರಿಶ್ರಮ ಪಟ್ಟರೆ, ಅವರಿಂದ ಮತ್ತಷ್ಟು ಅನನ್ಯ ಕೃತಿಗಳನ್ನು ನಿರೀಕ್ಷಿಸಬಹುದು

ಆಶಾವಾದ ಹೊತ್ತು ಹರಿವ ‘ಜೀವಧಾರೆ’!! Read Post »

ಪುಸ್ತಕ ಸಂಗಾತಿ

ನುಡಿ- ಕಾರಣ.

“ಅನುವಾದದ ಹಿಂದೆ …….”. ಯಲ್ಲಿ ಬರುವ, ಅವರದೇ ಮಾತುಗಳಲ್ಲಿ, ” ಅವರ ಕವಿತೆಗಳಲ್ಲಿ ನವಿರಾದ ಒಲವು ಇದೆ ವಿರಹವಿದೆ , ಯುದ್ಧದ ಉನ್ಮಾದವಿದೆ, ಬಡವರ,ಬವಣೆಯಿದೆ.ದೇಶಾಭಿಮಾನ ವಿದೆ.ಕವಿತೆ ನಮ್ಮನ್ನು ಹಿಡಿದಿಡುತ್ತದೆ.ಕಾವ್ಯ ದೋಣಿಯ ಪಯಣಿಗರು”. ಎನ್ನುವ ಸಾಲುಗಳು, ಕವಿತೆಗಳನ್ನು ಓದುವ , ಓದುಗರ ಸಾಲುಗಳೂ ಆಗಿಬಿಡುತ್ತವೆ.

ನುಡಿ- ಕಾರಣ. Read Post »

ಪುಸ್ತಕ ಸಂಗಾತಿ

ʼಕನಸಿನದನಿʼ

ಪುಸ್ತತಕಪರಿಚಯ ʼಕನಸಿನದನಿʼ             ಸಾಹಿತ್ಯ ಲೋಕದ ಪಯಣ ಹಲವು ಅಚ್ಚರಿಗಳಿಗೆ ಕಾರಣ. ಹಾಗೆ ನೋಡಿದರೆ ಜೀವನವೇ ಒಂದು ಸುದೀರ್ಘ ಪ್ರಯಾಣ.ಈ ಪ್ರಯಾಣದಲ್ಲಿ ಪರಿಚಿತರು ಅಪರಿಚಿತರಾಗುವುದು ಅಪರಿಚಿತರು ಪರಿಚಿತರಾಗುವುದು ಒಂದು ಸಹಜ ಪ್ರಕ್ರಿಯೆ ಎನಿಸುತ್ತದೆ. ಆದರೆ ಇದು ಎಣಿಸಿದಷ್ಟು ಸುಲಭವೂ ಸಹಜವೂ ಅಲ್ಲ. ಇಲ್ಲಿ ಅನೂಹ್ಯವಾದುದು ಘಟಿಸುತ್ತದೆ ಊಹಿಸಿಕೊಂಡದ್ದು ನಡೆಯುವುದೇ ಇಲ್ಲ. ಪರಸ್ಪರ ಭೇಟಿಯಾಗದ ಎಷ್ಟೋ ಚೇತನಗಳು ಸ್ನೇಹ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಒಂದುವಿಶೇಷ ಪ್ರಕ್ರಿಯೆ. ಒಂದು ಸಹೃದಯ ಪರಿಚಯ ಹೇಗೆ ವಿಶ್ವಾಸವನ್ನು ಉಳಿಸಿಕೊಂಡು ಎಷ್ಟೇ ಅಂತರದಲ್ಲಿದ್ದರೂ ಸ್ನೇಹವನ್ನು ಕಾಪಿಟ್ಟುಕೊಂಡಿರುತ್ತದೆ ಎಂಬುದನ್ನು ನನಗೆ ಇಲ್ಲಿ ವಿವರಿಸಬೇಕಿತ್ತು. ಅದಕ್ಕಾಗಿ ಹೀಗೆ ಪಯಣ, ಪರಿಚಯ, ಪ್ರಕ್ರಿಯೆ ಎಂದೆಲ್ಲಾ ಕೊಂಕಣ ಸುತ್ತಿಮೈಲಾರಕ್ಕೆ ಬರಬೇಕಾಯ್ತು.             ಡಾ|| ಅಜಿತ್ ಹರೀಶಿ ಎಂಬ ಸಹೃದಯ ವ್ಯಕ್ತಿತ್ವ ನನಗೆ ಪರಿಚಯವಾದುದು ಆನ್ಲೈನ್ ಸಾಹಿತ್ಯ ವೇದಿಕೆ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ. ಪ್ರಾಮಾಣಿಕತೆಯ ಸೆಲೆ ಇರುವ ಬರವಣಿಗೆಗಳು ಮೂಲಕ ಅಜಿತರು ನನಗೆ ಪರಿಚಯವಾದರು. ಒಮ್ಮೆ ಶಿರಸಿಯಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾಗ ನೇರ ಕಾಣುವಂತಾಯಿತು.ಸಾಮಾನ್ಯ ಹಾಗೂ ಸಾಹಿತ್ಯದ ಪರಿಭಾಷೆಯಲ್ಲಿ ಹೇಳುವಂತೆ ಅಜಿತರದು ಸ್ಫುರದ್ರೂಪಿ ನಿಲವು. ಅಷ್ಟೇ ಗಾಂಭೀರ್ಯದ ನಡವಳಿಕೆ. ವಿನಯವಂತಿಕೆಬೆರೆತ ಜಾಣ್ಮೆ. ಸೌಜನ್ಯ ಪೂರ್ಣ ಸ್ನೇಹ. ಅಂದು ಮುಖಾಮುಖಿಯಾಗಿ ಭೇಟಿಯಾದ ಅನಂತರ ಫೋನಿನಲ್ಲಿ ಒಂದೆರಡು ಬಾರಿ ಮಾತನಾಡಿರಬಹುದು. ನಾಲ್ಕಾರು ಸಂದೇಶ ವಿನಿಮಯವಾಗಿರಬಹುದು. ಇಷ್ಟರ ಹೊರತು ಪರಿಸ್ಪರ ಪರಿಚಿತರಾದ ಅಪರಿಚಿತರು ನಾವಿಬ್ಬರು.             ಅಜಿತರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವುದು ನನಗೆ ಅವರ ಮೇಲಿನ ಮಮಕಾರವನ್ನು ಹೆಚ್ಚು ಮಾಡಲಿಕ್ಕೆ ಒಂದು ಕಾರಣ ಇರಬಹುದು. ಏಕೆಂದರೆ ನನ್ನ ತಂದೆಯವರೂ ಸಹ ವೈದ್ಯರೇ ಆಗಿದ್ದುದು ಅಜಿತರಲ್ಲಿ ಒಂದು ವಿಶ್ವಾಸ ಮೂಡಲು ಕಾರಣ ಇರಬಹುದು. ಉಳಿದಂತೆ ನಗರದ ಆಡಂಬರಕ್ಕೆ ಮೋಹಗೊಂಡು, ವ್ಯಾಪಾರೀ ತಂತ್ರವಾಗಿ ರೂಪಿಸಿಕೊಳ್ಳಬಹುದಾಗಿದ್ದ ತಮ್ಮ ವೃತ್ತಿಯನ್ನು ತನ್ನೂರಿನ ಜನರ ಸೇವೆಗೆ ಮೀಸಲಿರಿಸಿಕೊಂಡು ಸಹಜವಾಗಿ ಸರಳವಾಗಿ ಜೀವನ್ಮುಖಿಯಾಗಿ ಬದುಕುವ ವಿವೇಕವುಳ್ಳ ತರುಣರಾಗಿ ಕಂಡುಬರುವ ಡಾ|| ಅಜಿತರ ಬಗೆಗೆ ನನಗೆಒಂದು ಅಭಿಮಾನದ ಭಾವ ಮೂಡುತ್ತದೆ. ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಾಗಿ ಬರವಣಿಗೆ, ಓದಿನ ಹವ್ಯಾಸವನ್ನು ಹೊಂದಿರುವ ಇವರ ಸಾಹಿತ್ಯದ ಮೇಲಿನ ವ್ಯಾಮೋಹ ಸ್ವತಃ ಸಾಹಿತ್ಯದ ವಿದ್ಯಾರ್ಥಿಯಾಗಿರುವ ನನ್ನನ್ನು ಚಕಿತಗೊಳಿಸುತ್ತದೆ. ಇಂಥಾಸಾಹಿತ್ಯಪ್ರೇಮಿ, ಸಹೃದಯಿ ಸಾಹಿತಿ ಅವರ ಬರಹಗಳನ್ನು ನನಗೆ ಮರೆಯದೆ ಕಳುಹಿಸುವುದು ನನಗೆ ವಿಶೇಷ ಸಂತಸವನ್ನು ತಂದುಕೊಡುತ್ತದೆ. ಕಾವ್ಯ ರಚನೆಯಲ್ಲಿ ಆಸಕ್ತಿ ಇದ್ದ ನನ್ನನ್ನು ಕಥಾ ರಚನೆಯತ್ತಲೂ ಚಿತ್ತ ಹರಿಸುವಂತೆ ಪ್ರೋತ್ಸಾಹಿಸಿದ ಅಜಿತರು ಮೂಲತಃ ಸೊಗಸಾಗಿ, ಸಹಜ ಸರಳವಾಗಿ ಕಥೆ ಬರಯುತ್ತಾರೆ. ಕನ್ನಡ ನಾಡಿನಾದ್ಯಂತ ಬಹುತೇಕ ಎಲ್ಲ ಪ್ರಮುಖ ಪ್ರಸಿದ್ಧ ಆನ್ಲೈನ್ ಪತ್ರಿಕೆಗಳಲ್ಲಿ ಹಾಗೂ ಮುದ್ರಣ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟವಾಗಿದ್ದು, ತಮ್ಮದೇ ಆದ ಓದುಗ ವರ್ಗವನ್ನು ಅಜಿತರು ಹೊಂದಿರುತ್ತಾರೆ. ಹಾಗೆಯೇ ತಮಗೆ ದೊರೆತ ಎಲ್ಲರ ಪುಸ್ತಕಗಳನ್ನು ಓದಿ ಪ್ರತಿಕ್ರಿಯೆ ನೀಡುವ ಸಂಯಮ ಹಾಗೂ ಆರ್ದ್ರತೆ ಇರುವ ಇವರು ಈ ಕಾಲಕ್ಕೆ ಅಪರೂಪ ಎನಿಸುವಷ್ಟು ಸ್ನೇಹಜೀವಿ. ಅಜಿತರ ಬಗ್ಗೆ ಇಷ್ಟೆಲ್ಲಾ ಬರೆಯಲು ಕಾರಣ ಮೊನ್ನೆ ಅಚಾನಕ್ ಬಂದು ತಲುಪಿದ ಅವರ ಹೊಸ ಕವನ ಸಂಕಲನ ʻಕನಸಿನ ದನಿʼ.             ಒಟ್ಟು ೪೬ ಕವನಗಳುಳ್ಳ ʻಕನಸಿನ ದನಿʼಯ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆಯುತ್ತವೆ. ʻʻಕನಸು’ ಎಂದರೆ ಅದೊಂದು ಆಶಾಭಾವನೆಯೂ ಹೌದು. ಅದಕ್ಕೆ ಒಂದು ದನಿ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲʼʼ. ಎನ್ನುವ ಕವಿ ಕನಸಿನ ಮೌನದ ಸದ್ದನ್ನು ಹಿಡಿದು ಸಾಗಿಬರುವ ಹಾದಿಯಲ್ಲಿ ದೊರೆತ ಸಾಲುಗಳನ್ನೇ ಕಾವ್ಯವಾಗಿಸಿ ಈ ಕೃತಿಯಲ್ಲಿ ನೀಡಿದ್ದಾರೆ ಎನಿಸುತ್ತದೆ. ʻಹಳೆಯ ಟ್ರಂಕಿಗೂ ಮೆಟ್ರೋ ರೈಲಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ..!ʼ ಎನ್ನುವ ಸ್ವಗತವೇ ʼಕನಸಿನ ದನಿʼ ಕವನದ ಭಾವ. ಕಳೆದ ಭೂತಕಾಲ, ವಾಸ್ತವದ ವರ್ತಮಾನ ಹಾಗೂ ಕನಸಿನ ಭವಿಷ್ಯವನ್ನು ಒಂದೇ ಗುಕ್ಕಿನಲ್ಲಿ ಹಿಡಿದಿಡುವ ಕವನವಿದು. ೭೦ ರಿಂದ  ೯೦ರ ದಶಕವನ್ನು ಸಾವಕಾಶವಾಗಿ ಕಂಡ ಪೀಳಿಗೆಯವರು ಅತ್ಯಾಧುನಿಕ ಜಗತ್ತಿನೊಡನೆಯೂ ಕಲೆತು ಬದುಕುತ್ತಿದ್ದರೂ ಯಾವುದೋ ನಿಧಿಯನ್ನು ಕಳೆದು ಕೊಂಡಂತೆ, ಭವಿಷ್ಯದ ಅನಾಹುತಗಳ್ನು ನೆನೆದು ಬೆಚ್ಚಿಬೀಳುವ ಆತಂಕದ ತಲ್ಲಣದ ಚಿತ್ರಣವಿದೆ. ಜೊತೆಗೆ ಈ ಸಂಕಲನದಲ್ಲಿನ ಹಲವಾರು ಕವನಗಳು ಕವಿಯ ಹಳೆಯ ಸೊಗಸಿನ ಕನವರಿಕೆ ಹಾಗೂ ಭವ್ಯಭವಿಷ್ಯದ ಪರಿಕಲ್ಪನೆಗಳಂತೆ ಕಾಣುತ್ತದೆ. ಆಶಾವಾದಿ ಮನಸ್ಸಿನ ಅಜಿತರ ಸಾಕ್ಷಿ ಪ್ರಜ್ಞೆಯಂತೆ. ʼಹೇಳಿಕೆ ʼಕವನ ವಿಮರ್ಶೆಯನ್ನು ಒಪ್ಪದ ಜಿಗುಟು ಮನಃಸ್ಥಿತಿಯನ್ನು ಗೇಲಿ ಮಾಡುವಂತಿದೆ.                                     ʼʼಚೆನ್ನಾಗಿಲ್ಲ                                     ಅಂತಹೇಳುವಂತಿಲ್ಲ                                     ಕಳೆದುಹೋಯಿತು ಆ ಕಾಲ..ʼʼ             ಸಂಬಂಧ ಹಳಸುವುದು, ಹದಗೆಡುವುದು ದೃಷ್ಟಿಕೋನದ ಪ್ರತಿಫಲ. ಸಾವರಿಸಿಕೊಂಡು, ಸುಧಾರಿಸಿಕೊಂಡು ಹೋಗುವುದಾದರೆ ಜೀವನ ಸರಿ. ನಮ್ಮ ತಪ್ಪಿಲ್ಲದಿದ್ದರೂ ಸಾರಿ ಹೇಳಿ, ಎಲ್ಲಾ ಚೆಂದ ಎಲ್ಲಾ ಚೆಂದ ಎಂದರೆ ನೆಮ್ಮದಿ ಎನ್ನುವ ಜ್ಞಾನಮೀಮಾಂಸೆಯನ್ನು ಈ ಕಾವ್ಯ ಕಟ್ಟಿಕೊಡುತ್ತದೆ. ಸಮಾಜಕ್ಕೆ, ಸುತ್ತಲಿನ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾ ಹೋಗುವಾಗ ಒಮ್ಮೆ ಸರಿಕಂಡದ್ದನ್ನು ಮತ್ತೊಮ್ಮೆ ನಿರಾಕರಿಸುತ್ತಾ, ನಿರಾಕರಿಸಿದ್ದನ್ನು ಸ್ವೀಕರಿಸುತ್ತಾ ಕವಿ ಪರಸ್ಪರ ವೈರುಧ್ಯ ಭಾವ ಕವಿಗೆ ಸಹಜ ಎನಿಸುತ್ತಾನೆ. ʼಸವಾಲುʼ ಕವನದಲ್ಲಿ, ʼʼವಂಶವಾಹಿಯಾಗಿ ಹರಿದು ಬಂದ ಜೀವತಂತು ವಿನಕಾರಣಕ್ಕೆಲವು ನಡವಳಿಕೆ ಆತ್ಮವಿಮರ್ಶೆ ಮದ್ದು ಸ್ವಯಂಕೃತ ಅಪರಾಧಕೆ ಪಶ್ಚಾತ್ತಾಪಕ್ಕಿಂತ ಮಿಗಿಲಾದ ಶಿಕ್ಷೆಯಿಲ್ಲʼʼ ಎನ್ನುವುದು ಜೀವತಂತುವಿನ ಅಧ್ಯಯನಾ ವರದಿ ಮಾತ್ರವಲ್ಲ. ಸಾಬೀತಾದ ಸತ್ಯ! ಅಜಿತರ ಕವನಗಳು ಕೇವಲ ಕಾವ್ಯ ಭಾಷೆಯಲ್ಲಿ ಮಾತನಾಡುವ ಕ್ಲೀಷೆಗೆ ಸೇರುವುದಿಲ್ಲ. ಅವರ ವೃತ್ತಿ ಬದುಕಿನ ಪರಿಭಾಷೆಗಳು ಹಾಗೂ ಪಾರಿಭಾಷಿಕ ಪದಗಳು ಕವಿತೆಗೆ ವಿಶೇಷ ಜೀವ ತುಂಬುತ್ತವೆ. ಉದಾಹರಣೆಗೆ, ʼಭುಕ್ತಿʼ ಕವನದ ಈ ಸಾಲುಗಳು, ʼʼಎರಡು ಗೆರೆ ಬಿದ್ದಿದೆ ಡೆಲಿವರಿ ಸಂಕೇತ ಪ್ರೆಗ್ನೆನ್ಸಿ ಕಿಟ್ನಲ್ಲಲ್ಲ! ವಾಟ್ಸಾಪಿನ ವರಾತ ನೋಡಿದರೆ ನೀಲಿಗೆರೆ, ಆರೋಪ ಉತ್ತರಿಸದಿರೆ ಸಿಕ್ಕು ಸೆಟ್ಟಿಂಗ್ ಬದಲಿಸಿದರೆʼʼ ಹಾಗೂ ʼಸಾವಂಚಿನ ಕೂಗುʼ ಕವನದ, ʼʼಗಂಟಲೊಳಗೆ ತೂರಿಸಿದ ಆಳ ತೂಗಾಕಿದ ಡ್ರಿಪ್ಪು, ಕೈಗೆ ಚುಚ್ಚಿದ ಕ್ಯಾನುಲ ಆಷ್ಸಿಮೀಟರು, ಪಲ್ಸ– ಬಿಪಿಮಾನಿಟರು ಕಫದಸಕ್ಷನ್ನು, ಚೆಕ್ಕಾಗುವರಕ್ತ, ಶುಗರು ನರ್ಸು–ಇಂಟೆನ್ಸಿವಿಷ್ಟು, ಮೂತ್ರಕೆ ಕಾಥೆಟರು..ʼʼ ರೋಗಿಯೊಬ್ಬರ ವೈದ್ಯಕೀಯ ವರದಿಯನ್ನು ವೈದ್ಯರು ನೀಡುತ್ತಿರುವಂತೆ ಕಂಡರೂ, ಇದು ಕರಾಳ ಸತ್ಯದ ಅನಾವರಣ ಮಾಡುವ ಕವಿತೆಯಾಗಿದೆ. ಹೊರಗಿನ ಸೋಗು ಒಳಿನ ಕೂಗನ್ನು ಹೇಗೆ ಕಡೆಗಣಿಸಿದೆ ಎಂದು ಕವಿತೆ ವಿಶದಪಡಿಸುತ್ತದೆ. ಮಾಫಲೇಶು ಕದಾಚನ ಕವಿತೆ ನೋಡಿ, ʼʼನೋಡಿ ಪುಷ್ಪಗಳ ನೀಡುತ್ತವೆ ಉಚಿತವಾಗಿ ಪರಿಮಳ ಮಕರಂದಗಳ ಸುವಾಸನೆ ಬೀರಿ ಮುಗಿಸಿ ಕಾರ್ಯವ ತೊಟ್ಟು ಕಳಚಿ ಬಿದ್ದು ಮಾಯವಾಗಿ ಬಿಡುತ್ತವೆ ನಾವು ಹೊಲಸು ನಾರಿಯೇತೀರುತ್ತೇವೆ ತೀರಿದ ಮೇಲೂ ಹೊಲಸು ನಾರುತ್ತೇವೆ!ʼʼ ಇದನ್ನು ಕೇವಲ ನಾಕಾರು ಸಾಲಿನ ಕವಿತೆ ಎಂದು ಮೂಗು ಮುರಿಯಲಾದೀತೆ?! ಜೀವನ ಸಾರ್ಥಕತೆಯ ತತ್ತ್ವ ದರ್ಶನವನ್ನೇ ಇದು ಕಾಣಿಸುತ್ತದೆ.             ವಿದಳನ, ಊನ,  ವಜನು, ಐ ರಿಪೀಟ್, ಇಲಿ, ಬೋನು ಮತ್ತು ಸಾಬೂನು, ಶರಾವತಿಯ ಅಳಲು ಮೊದಲಾದವು ಜೀವನದ ವಿವಿಧ ಮಗ್ಗಲುಗಳ ವಿಮರ್ಶೆಯಂತಿವೆ. ಸಾಮಾನ್ಯದಂತೆ ಕಾಣುವ ಈ ಕೆಲವು ಕವಿತೆಗಳು ಗಹನವಾದ ಆಧ್ಯಾತ್ಮದ ಚಿಂತನೆಗೆ ತೊಡಗುವಂತೆ ಮಾಡತ್ತವೆ. ಮೇಲು ಮೇಲಿನ ಓದಿಗೆ ದಕ್ಕುವಂತೆ ಆಳ ವಿಶ್ಲೇಷಣೆಗೂ         ಡಾ|| ಅಜಿತರ ಕಾವ್ಯಗಳನ್ನು ಸಂಯೋಜಿಸಬಹುದು.             ಇಡೀ ಸಂಕಲನದ ಕವಿತೆಯ ವಸ್ತುಗಳಿಗಾಗಿ ಕವಿ ತಿಣುಕಾಡಿಲ್ಲ. ಸುತ್ತಲಿನ ಘಟನೆಗಳನ್ನೇ ತಮ್ಮ ಎಕ್ಸರೇ ಕಂಗಳಿಂದ ಪರೀಕ್ಷಿಸಿ ಕವಿತೆಗೆ ವಸ್ತುವಾಗಿಸಿ ಕೊಂಡಿದ್ದಾರೆ. ಇದು ಕಾವ್ಯ ರಚನೆಗೆ ಪೂರಕವಾಗಿದ್ದರೂ ಮತ್ತಷ್ಟು ವಸ್ತು ವೈವಿಧ್ಯತೆಯನ್ನು ಕವಿ ಸಮರ್ಥವಾಗಿ ಕೊಡಬಲ್ಲರೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ನಿಟ್ಟಿನಲ್ಲಿಡಾ|| ಅಜಿತರು ಹೆಚ್ಚಿನ ಗಮನ ಹರಿಸಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾ, ನನ್ನ ಒಂದು ಓದಿನ ಅಳವಿಗೆ ಸಿಕ್ಕ ಭಾವಗಳಿಗೆ, ಮಾತುಗಳಿಗೆ ಹೀಗೆ ಅಕ್ಷರ ರೂಪ ಕೊಟ್ಟಿರುತ್ತೇನೆ.             ತಮ್ಮ ಕತೆಗಳಲ್ಲಿ, ದೈನಂದಿನ ಘಟನಾವಳಿಗಳನ್ನು ಚಿತ್ತಿಸುತ್ತಲೇ ಅಚ್ಚರಿಯ ತಿರುವುಗಳನ್ನು ನೀಡುವ ಮೂಲಕ ಓದುಗರ ಗಮನವನ್ನು ಸೆಳೆಯುವ ಅಜಿತರು ಕವನ ರಚನೆಗೆ ಏಕಾಗ್ರಚಿತ್ತರಾದರೆ. ಅವರಿಂದ ಇನ್ನೂ ಮೌಲಿಖ ಕವನಗಳನ್ನು ನಿರೀಕ್ಷಿಸಬಹುದು. ಎಂದಿನಂತೆ,  ನನ್ನೊಂದಿಗಿರುವ ಅಜಿತರ ನಿರ್ಮಲ ಸ್ನೇಹಕ್ಕೆ ಹಾಗೂ ಬರಹದ ಮೇಲೆ ಅವರಿಗಿರುವ ಮೋಹಕ್ಕೆ ಖುಷಿಪಡುತ್ತಾ, ಒಂದೊಳ್ಳೆ ಕವನ ಸಂಕಲನ ಓದಿಸಿದ್ದಕ್ಕೆ ಧನ್ಯವಾದಗಳನ್ನು ಹೀಗೆ ಹೇಳಬಯಸುವೆ. . . . ************************** ವಸುಂಧರಾಕದಲೂರು.

ʼಕನಸಿನದನಿʼ Read Post »

ಪುಸ್ತಕ ಸಂಗಾತಿ

ಭಾವ ಜೀವಿ ಕಂಡ ಬಾಲ್ಕನಿಯ ನೋಟ- ಬಾಲ್ಕನಿ ಕಂಡ ಕವಿತೆಗಳು

ಪ್ರತಿಯಿರುಳು ಬೆಳದಿಂಗಳಾತ” ಈ ನುಡಿಯಲ್ಲಿ ತನ್ನೊಲವ ಪಡೆದ ಅವನನ್ನು ತಂಪು ಬೆಳದಿಂಗಳಿಗೆ ಹೋಲಿಸಿ ತನ್ನೆದೆಯ ಶುಭ್ರ ಮುಗಿಲನ್ನು ಆತ ಆವರಿಸಿಕೊಂಡ ಬಗೆಯನ್ನು ರಮ್ಯವಾಗಿಸಿದ್ದಾರೆ ವಿಭಾ. ಇಂತಹ ಮೋಹಕ ಕವಿತೆಗಳ ಜೊತೆಗೆ ಜೀವನದ ನೈಜ ವಾಸ್ತವತೆಯನ್ನು ಕಟ್ಟಿಕೊಡುವ ಕೆಲವು ಕವಿತೆಗಳು ಈ ಸಂಕಲನದಲ್ಲಿ ಕಾಣಸಿಗುತ್ತವೆ.

ಭಾವ ಜೀವಿ ಕಂಡ ಬಾಲ್ಕನಿಯ ನೋಟ- ಬಾಲ್ಕನಿ ಕಂಡ ಕವಿತೆಗಳು Read Post »

ಪುಸ್ತಕ ಸಂಗಾತಿ

ತರಹೀ ಎಂಬ ಹೆಜ್ಜೆಯ ನುಡಿಯ ಗೆಜ್ಜೆಯ ದನಿ

ಪುಸ್ತಕ ಸಂಗಾತಿ ತರಹೀಎಂಬಹೆಜ್ಜೆಯನುಡಿಯಗೆಜ್ಜೆಯದನಿ ಹಿರಿಯ ಗಜಲ್ಕಾರರಾದ ‘ಶ್ರೀಮತಿ. ಪ್ರಭಾವತಿ ಎಸ್. ದೇಸಾಯಿ’ ರವರು ಕನ್ನಡ ಗಜಲ್ ಸಾಹಿತ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡು, ಹಲವು ಕೃತಿಗಳನ್ನು ರಚಿಸಿ, ಕಿರಿಯರಿಗೆ ಮಾರ್ಗದರ್ಶನ ನೀಡುತ್ತ ಏನಗಿಂತ ಕಿರಿಯರಿಲ್ಲ ಎಂಬ ಶರಣರ ನುಡಿಯಂತೆ ನಡೆಯುತ್ತ,  ಇಳಿವಯಸ್ಸಿನಲ್ಲೂ ಹರೆಯದ ಹುಮ್ಮಸ್ಸು ತೋರುತ್ತ, ಪಕ್ವ ಮನಸ್ಸಿಗೆ ವಯಸ್ಸಿನ ಭೀತಿಯಿಲ್ಲ, ಆಸಕ್ತಿಗೆ  ಎಲ್ಲೆಗಳಿಲ್ಲ ಎಂಬುದನ್ನು “ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ಎಂಬ ‘ತರಹೀ ಗಜಲ್’ ಗಳ ಸಂಕಲನವನ್ನು ಹೊರತರುವುದರ ಮುಖಾಂತರ  ಸಾಬಿತು ಪಡಿಸಿದ್ದಾರೆ. “ಮೌನದ ಚೂರಿಯಿಂದಿರಿದು ಮಾಡಿದ ಗಾಯ ಎಂದು ಮಾಯದು ಹೃದಯಕ್ಕೆ ಚುಚ್ಚಿ ಆದ ನೋವು ಅಡಗಿಸುತ್ತ ನಡೆದು ಹೋದೆ” ಪ್ರಭಾವತಿ ದೇಸಾಯಿ ರವರು ಎಲ್ಲಿಯೂ ಹೆಜ್ಜೆ ತಪ್ಪದಂತೆ, ತುಂಬಾ ಜಾಗರೂಕತೆಯಿಂದ, ಮೂಲ ಗಜಲ್ಕಾರರ ಆಶಯಕ್ಕೆ ಚ್ಯುತಿ ಬಾರದಂತೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾರ್ಥಕತೆಯ ಕಡೆಗೆ ನಡೆದಿದ್ದಾರೆ. ಈಗಾಗಲೆ ಹಲವು ವರ್ಷಗಳ ಗಜಲ್ ಕೃಷಿಯ ಅನುಭವವುಳ್ಳ ಪ್ರಭಾವತಿ ರವರು ತರಹೀಗೆ ಆಯ್ದುಕೊಂಡ ಮಿಸ್ರಗಳ ಮಾದರಿಯಲ್ಲಿಯೇ ಸ್ವತಂತ್ರ ಗಜಲ್ಗಳನ್ನು ರಚಿಸಿ ಮತ್ತೊಂದು ಕೃತಿಯನ್ನು ತರಬಹುದಿತ್ತು. ಏಕೆಂದರೆ ಹತ್ತು ಹಲವು ಶೇರ್ಗಳನ್ನು ರಚಿಸುವ ಸಾಮರ್ಥ್ಯವಿರುವ ದೇಸಾಯಿರವರಿಗೆ  ಒಂದು ಮಿಸ್ರವನ್ನು ಬರೆಯುವುದು ಕಷ್ಟವೇನಲ್ಲ. ಆದರೆ ಹಾಗೆ ಮಾಡದೆ ಪ್ರಾಮಾಣಿಕತೆಯಿಂದ ತರಹೀಯನ್ನು ರಚಿಸಿರುವುದು ಅವರ ಮೇಲಿನ ಗೌರವ ಹೆಚ್ಚುವಂತೆ ಮಾಡಿದೆ. ಸಂಕಲನದ ಎಲ್ಲಾ ತರಹೀ ಗಜಲ್ಗಳು ಸಪ್ತ ಶೇರ್ಗಳನ್ನು ಹೊಂದಿದ್ದು, ಅವು ‘ದಾವ – ದಲೀಲ್’ ಕ್ರಮದಲ್ಲಿ, ಪ್ರಶ್ನೆಗೆ ಉತ್ತರವಾಗಿ, ನಕಾರಾತ್ಮಕ ಮತ್ತು ಸಕಾರಾತ್ಮಕವಾಗಿ, ಪರ-ವಿರುದ್ಧದ ರಚನೆಗೆ ಒಳಪಟ್ಟಿರುವುದರಿಂದ ತರಹೀಗಳಿಗೆ ಅಪ್ರತಿಮ ಶೋಭೆ ವರಿಸಿದೆ. ಇಂತಹ ಗಝಲ್ಗಳನ್ನು ಓದುವುದೇ ಒಂದು ಖುಷಿ. ಸಾಮಾನ್ಯವಾಗಿ ತರಹೀ ಮತ್ಲಾಗಳು ಹೆಚ್ಚು ಸಶಕ್ತತೆಯಿಂದ ಕೂಡಿರುತ್ತವೆ. ಆದರೆ ಅವುಗಳಿಗೆ ಅಷ್ಟೇ ಸಶಕ್ತವಾದ ಮಕ್ತಾಗಳನ್ನು ಹೊಂದಿಸುವುದು ಕಷ್ಟವೇ ಸರಿಯಾದರೂ ಪ್ರಭಾವತಿ ದೇಸಾಯಿರವರು ‘ಪ್ರಭೆ’ ಎಂಬ ತಕಲ್ಲೂಸ್ ನಾಮವನ್ನು ಇಲ್ಲಿನ ಗಜಲ್ಗಳಲ್ಲಿ ಸಮರ್ಪಕವಾಗಿ ಬಳಸಿ, ಲೌಕಿಕತೆಯಿಂದ ಪಾರಮಾರ್ಥಿಕತೆಯೆಡೆಗಿನ, ಮೂರ್ತತೆಯಿಂದ ಅಮೂರ್ತದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗಿನ ನಡಿಗೆ, ಆಧ್ಯಾತ್ಮಿಕ ಒಲವಿನ ಹೊಳಹುಗಳನ್ನು ಕಾಣುವಂತೆ ಮಾಡುತ್ತದೆ. ತರಹೀ ಎಂಬುದು ಭಾರತದ ನೆಲೆಯಲ್ಲಿ ಬೆಳಕು ಕಂಡ ಗಜಲ್ ಕಾವ್ಯದ ಒಂದು ಪ್ರಮುಖ ಪ್ರಕಾರವಾಗಿ ಗುರುತಿಸಿಕೊಂಡು,  ಗಜಲ್ ಗೋಷ್ಠಿ(ಮುಷಾಯಿರ)ಗಳ ಪರಂಪರೆಯಿಂದ ಬೆಳೆದು ಬಂದಿದೆ. ಮುಷಾಯಿರಗಳನ್ನು ‘ತರಹೀ ಮುಷಾಯಿರ’ (ತರಹಿ ಸಹಿತ)  ಮತ್ತು ಗೈರ್ ತರಹೀ ಮುಷಾಯಿರ’ (ತರಹೀ ರಹಿತ) ಎಂದು ಮುಖ್ಯವಾಗಿ ಎರಡು ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯವಾಗಿ ಮುಷಾಯಿರಗಳು ಇಳಿ ಸಂಜೆಯ ಸಮಯದಲ್ಲಿ ಏರ್ಪಡಿಸಲಾಗುತ್ತಿತ್ತು, ಅಲ್ಲಿ ‘ಸಾಹಿಬ್-ಎ-ಮುಷಾಯಿರ’ ರ ಉಪಸ್ಥಿತಿಯಲ್ಲಿ ಗಜಲ್ ಕವಿಗಳು ಎದುರು ಬದುರಾಗಿ ಇಲ್ಲವೇ ಒಂದು ವೃತ್ತಾಕಾರದಲ್ಲಿ   ಪೆಹೇಲೂನಲ್ಲಿ  ಕುಳಿತುಕೊಳ್ಳುವ ಪದ್ಧತಿ ಇದ್ದು, ಶಮಾವನ್ನು ಬೆಳಗುವುದರ ಮುಖೇನ ಈ ತೆರನಾದ ಗಜಲ್ ಗೋಷ್ಠಿಗಳನ್ನು ಆರಂಭಿಸಲಾಗುತ್ತಿತ್ತು ಎಂಬುದು ಗಜಲ್ನ ಇತಿಹಾಸದಿಂದ ತಿಳಿದುಬರುತ್ತದೆ. ಆವೊಂದು ಗೋಷ್ಠಿಯ ಅಧ್ಯಕ್ಷನಾದವನು ಪ್ರಸಿದ್ಧ ಗಜಲ್ಕಾರರೊಬ್ಬರ ಇಲ್ಲವೇ ಸ್ವರಚಿತ ಗಜಲ್ನ ಒಂದು ಮಿಸ್ರಾವನ್ನು ಮುಷಾಯಿರದಲ್ಲಿ  ಭಾಗವಹಿಸುವ ಕವಿಗಳಿಗೆ ನೀಡುವ ಸಾಂಪ್ರದಾಯವಿದ್ದು, ಒಮ್ಮೊಮ್ಮೆ ತರಹೀ ಮಿಸ್ರವನ್ನು  ಮುಷಾಯಿರಕ್ಕೂ ಮುಂಚಿತವಾಗಿಯೇ ನೀಡಲಾಗುತ್ತಿತ್ತು! ಮತ್ತೆ ಕೆಲವೊಮ್ಮೆ ಗೋಷ್ಠಿಯ ಸಂದರ್ಭದಲ್ಲಿಯೇ ನೀಡಲಾಗುತ್ತಿತ್ತು. ಹೀಗೆ ನೀಡಲಾದ ಮಿಸ್ರವನ್ನು  ಅದು ಒಳಗೊಂಡ ಕಾಫಿಯಾಕ್ಕೆ ಹೊಂದಿಕೆಯಾಗುವಂತೆ ಹಾಗು ಮೂಲ ಗಜಲ್ಕಾರ ಬಳಸಿದ ರದೀಫನ್ನೆ ಎಥಾವತ್ತಾಗಿ, ಬೆಹರನ್ನು ಅಷ್ಟೇ ಮಾತ್ರಗಣಗಳಲ್ಲಿ, ಛಂದಸ್ಸಿನ ರೂಪದಲ್ಲಿ ಶೇರ್ಗಳನ್ನು ಪೂರ್ಣಗೊಳಿಸುವುದರ ಮೂಲಕ ಆಶಅರ್ ಗಳನ್ನು ತನ್ನದೇ ಭಾವಭಿವ್ಯಕ್ತಿಯಲ್ಲಿ ಗಜಲನ್ನು ರಚಿಸುವ ಪ್ರಕ್ರಿಯೆಯನ್ನು ಕಾಣುತ್ತೇವೆ. ಯಾವ ಕವಿ ತರಹೀ ರಚಿಸಿ ತನ್ನ ಗಜಲನ್ನು ವಾಚಿಸುತ್ತಾನೊ ಆ ಕವಿಯ ಮುಂದೆ ಶಮಾವನ್ನು ಇರಿಸಲಾಗುತ್ತಿತ್ತು. ಗಜಲ್ಕಾರನ  ಗಜಲಿಗನುಗುಣವಾಗಿ ಸಭೆಯಲ್ಲಿ ವಾಹ್… ವಾಹ್… ಎಂಬಿತ್ಯಾದಿ ಉದ್ಗಾರಗಳು ಹೊರಡುವುದು, ಆ ಸಾಲುಗಳನ್ನು ಇತರರು ಪುನರಾವರ್ತಿಸಿ ಮೆಚ್ಚುಗೆ ಸೂಚಿಸುತ್ತ ಹುರಿದುಂಬಿಸುವುದು ಇಂತಹ ಮುಷಾಯಿರಗಳಲ್ಲಿ ಸರ್ವೆಸಾಮಾನ್ಯವಾದ ಸಂಗತಿಯಾಗಿತ್ತು. ಹೀಗೆ ಸರತಿಯಲಿ ಮುಷಾಯಿರ ಜಾರಿಯಲ್ಲಿರುತ್ತಿತ್ತು. ಈ ತೆರನಾಗಿ ಎರವಲು ಪಡೆದ, ಪ್ರಭಾವಿಸಿದ ಒಂದು ಮಿಸ್ರದಿಂದ ಹತ್ತು ಹಲವು ಗಜಲ್ಗಳು ಏಕಕಾಲದಲ್ಲಿ ರಚನೆಯಾಗುತ್ತಿದ್ದದ್ದು ನಿಜಕ್ಕೂ  ಪ್ರಸಂಶನೀಯ ಸಂಗತಿ. ಹೀಗೆ ಅಲ್ಲೊಂದು ರಸಕಾವ್ಯ ಸಂಜೆಯ ಮಾಹೋಲ್ ಸೃಷ್ಟಿಯಾಗುತ್ತಿತ್ತು! ಹಲವು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ತರಹೀ ಗಜಲ್ ಮುಷಾಯಿರ ಸಂಸ್ಕೃತಿ ಮೊಘಲರ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂದು ಹೇಳಬಹುದು. ಈ ತೆರನಾದ ಮುಷಾಯಿರಗಳನ್ನು ಆಯೋಜಿಸಲು ಪ್ರಮುಖ ಕಾರಣಗಳೆಂದರೆ, ಗಜಲ್ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಮುಖೀನ ಪ್ರೋತ್ಸಾಹಿಸುವುದರೊಂದಿಗೆ, ಸಮಕಾಲೀನ ಗಜಲ್ಕಾರರಲ್ಲಿ ಸಹೃದಯ ಮನೋಭಾವನೆಯನ್ನು ಹಾಗು ಸಮಾನ ಮನಸ್ಕತೆಯನ್ನು ಬೆಳೆಸುವುದರ ಜೊತೆಗೆ, ಗಜಲ್ ಕವಿಗಳ ನಡುವಿನ ಅಂತರವನ್ನು  ಮತ್ತು ಮನಸ್ತಾಪಗಳನ್ನು ಕಡಿತಗೊಳಿಸುವುದರೊಂದಿಗೆ ಅವರ ನಡುವೆ ಸ್ನೇಹದ ವಾತಾವರಣವನ್ನು ಸೃಷ್ಟಿಸಿ ಆರೋಗ್ಯಕರವಾದ ಸ್ಪರ್ಧೆ ಏರ್ಪಡುವಂತೆ ನೋಡಿಕೊಳ್ಳುವುದಾಗಿತ್ತು. ಆದರೆ ಕೆಲವೊಮ್ಮೆ ಇಂತಹ ಮುಷಾಯಿರಗಳಿಂದಲೇ ಮೇಲಿನ ಅಂಶಗಳಿಗೆ ವಿರುದ್ಧವಾದ ನಡೆಗೆ ಕಾರಣವಾಗುತ್ತಿತ್ತು ಎನ್ನಲಾಗುತ್ತದೆ. ಇಂತಹ ಗಜಲ್ ಗೋಷ್ಠಿಗಳು ಶ್ರೇಷ್ಠತೆಯ ಸಂಕೇತಗಳಾಗಿ ಅಂದಿನ ಸಮಾಜದಲ್ಲಿ ಬಿಂಬಿತವಾಗುತ್ತಿದ್ದವು. ಹಾಗೆಯೇ ಇದರೊಂದಿಗೆ ವಿಶೇಷ ಸಂದರ್ಭಗಳಲ್ಲಿ ವಿಶಿಷ್ಟವಾದ ಪಾನೀಯಗಳು ಹಾಗು ಭೋಜನಕೂಟಗಳನ್ನು ಸಹ ಅಯೋಜಿಸುವುದರೊಂದಿಗೆ ಕವಿಗಳನ್ನು ಸತ್ಕರಿಸಲಾಗುತ್ತಿತ್ತು. ಹೆಚ್ಚಿನ ಮಟ್ಟಿಗೆ ಆಸ್ಥಾನದ ಕವಿಗಳಿಂದಲೇ ಮುಷಾಯಿರಗಳನ್ನು ಜರುಗಿಸುತ್ತಿದ್ದದ್ದು ಇದೆ. ಇಲ್ಲಿ ‘ತರಹೀ ಎಂದರೆ’ ಪದಶಃ ಅದೇ ತರಹದ, ಆ ಮಾದರಿಯ ಅಥವಾ ಆ ಪ್ರಕಾರದ ಎಂದು ಸರಳಿಕರಿಸಬಹುದಾಗಿದೆ.  ತರಹೀ ಗಜಲನ್ನು ರಚಿಸ ಬಯಸುವವರು ಆಯ್ದುಕೊಳ್ಳುವ ಮಿಸ್ರಾದೊಂದಿಗೆ ಮೂಲ ಗಜಲ್ಕಾರನ ಹೆಸರನ್ನು ಉಲ್ಲೇಖಿಸುವುದರೊಂದಿಗೆ ಗೌರವ ಸಲ್ಲಿಸುವ, ಸ್ಮರಿಸುವ ಪರಂಪರೆಯೂ ಜಾರಿಯಲ್ಲಿರುವುದನ್ನು ಕಾಣುತ್ತೇವೆ. ಇಂತಹ ಒಂದು ವಿಶಿಷ್ಟವಾದ, ಅಪರೂಪವಾದ ಪರಂಪರೆ ಬೇರೆಲ್ಲೂ ಕಾಣಸಿಗುವುದಿಲ್ಲ! ಹಾಗಾಗಿ ತರಹೀ ಗಜಲ್ ಅದರದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. “ಗಾಲಿಬ್ ತೇರಿ ಜಮೀನ್ ಮೆ ಲಿಖಿ ತೊ ಹೈ ಗಜಲ್ ತೇರೆ ಕದ್-ಎ-ಸುಖ ಕೆ ಬರಾಬರ್ ನಹೀ ಹುಂ ಮೈ” ಒಬ್ಬ ಕವಿಯನ್ನು ಮತ್ತೊಬ್ಬ ಕವಿ, ಆತನ ಕಾವ್ಯದ ಸಾಲಿನೊಂದಿಗೆ ನೆನೆಯುವ, ಗೌರವ ಸೂಚಿಸುವ, ಪ್ರೀತಿ ವ್ಯಕ್ತಪಡಿಸುವ ಪರಿ ನಿಜಕ್ಕೂ ಅದರಣೀಯವಾದಂತಹುದು. “ಕವಿಯಾದವನು ತನ್ನದೇ ಅದ ದಾರಿಯೊಂದನ್ನು ಆಯ್ಕೆ ಮಾಡಿಕೊಂಡು ನಡೆದು ಹೆಜ್ಜೆ ಗುರುತುಗಳನ್ನು ಬಿಟ್ಟು ಸಾಗಿರುತ್ತಾನೆ; ಅಂತಹ ಹೆಜ್ಜೆಗುರುತುಗಳನ್ನು ಬಳಸಿ ಮತ್ತೊಬ್ಬ ಕವಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಯುವ ಪ್ರಯತ್ನವೇ ತರಹೀ ಎಂದು ವ್ಯಾಖ್ಯಾನಿಸಬಹುದು.” ಇಲ್ಲಿ ಮೀರುವುದಕ್ಕೆ ಅವಕಾಶಗಳಿದ್ದರೂ ಸಹ ವಿನಮ್ರತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಅದು ಗೌರವದ ಪ್ರತೀಕವಾಗಿದೆ. ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಇಡಿಯಾಗಿ ಯಾರೂ ಈವರೆಗೆ ಒಂದು ತರಹೀ ಗಜಲ್ ಸಂಕಲನವನ್ನು ತರದಿರುವುದು ಅಚ್ಚರಿ ಮೂಡಿಸುತ್ತದೆ. ‘ಶ್ರೀ. ಗಿರೀಶ್ ಜಕಾಪುರೆ’ ರವರು ಪ್ರಪ್ರಥಮವಾಗಿ ಕನ್ನಡದಲ್ಲಿ ತರಹೀ ಗಜಲ್ ಸಂಕಲನವನ್ನು ತಂದು, ಇಂತಹದ್ದೊಂದು ಪ್ರಯೋಗ ಮಾಡಿ ಯಶಸ್ವಿಯೂ ಆಗಿರುವುದು ಹೆಮ್ಮೆಯ ಸಂಗತಿ. ಗುರು – ಶಿಷ್ಯ(ಉಸ್ತಾದ್ – ಶಾಗಿರ್ದ್)ರ  ಪರಂಪರೆಯಲ್ಲಿ ತರಹೀ ಪ್ರಕಾರಕ್ಕೆ ಪ್ರಮುಖ ಸ್ಥಾನವಿದೆ. ಗುರು ಎನಿಸಿಕೊಂಡವನು ತನ್ನ ಶಿಷ್ಯನಿಗೆ ಪ್ರಸಿದ್ಧ ಗಜಲ್ಕಾರರ  ಮಿಸ್ರವೊಂದನ್ನು ನೀಡುವುದರ ಮುಖಾಂತರ ತರಹೀ ರಚಿಸಲು, ಅದನ್ನು ಕಲಿಕೆಯ ವಸ್ತುವಾಗಿಸಿ ಬಳಸಿರುವುದು, ಹಿರಿಯ ಗಜಲ್ಕಾರರನ್ನು ಮಟ್ಟ ಅವರ ಕಲಾಂನ್ನು ಆ ಮೂಲಕ ಪರಿಚಯಿಸುವುದು, ಅರ್ಥೈಸುವುದು, ಆ ನಿಟ್ಟಿನಲ್ಲಿ ಗಜಲ್ಗಳನ್ನು ರಚಿಸಲು ಪ್ರೋತ್ಸಾಹಿಸುವ ಪದ್ಧತಿ ಪೂರ್ವದಲ್ಲಿ ಇತ್ತಾದರೂ ಕಾಲಚಕ್ರ ಉರುಳಿದಂತೆ ಈ ತೆರನಾದ ಗುರು ಶಿಷ್ಯ ಪರಂಪರೆ, ಕಲಿಕೆ ನಿಷ್ಕ್ರಿಯಗೊಂಡಿದೆ. ತಿದ್ದಿ ಕಲಿಸುವ(ಇಸ್ಲಾಹ್) ಸಮರ್ಥ ಗುರುವಿಲ್ಲದ ಕಾರಣಕ್ಕೆ , ಸೂಕ್ತ ಮಾರ್ಗದರ್ಶನದ ಕೊರತೆಯಿಂದಾಗಿ ಹಲವಾರು ಕಲಿಕಾರ್ಥಿಗಳು ಈ ದಿನಗಳಲ್ಲಿ  ಗೊಂದಲಗಳಿಗೆ ಒಳಗಾಗಿ, ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಅರಿವಿಲ್ಲದೆ ಗಜಲ್ನ ಅಮಲೇರಿಸಿಕೊಂಡವರಂತೆ ನಿಯಮ ಬಾಹಿರವಾಗಿ, ಮೃದುತವಿಲ್ಲದೆ, ಗೇಯತೆ ತರದೆ, ಮಾತ್ರಗಣಗಳ ತಿಳುವಳಿಕೆ ಇಲ್ಲದೆ, ‘ನಾವು ಬರೆದದ್ದೆ ಸರಿ’ ಎನ್ನುವ ಮನೋಧೋರಣೆಯಲ್ಲಿ ಕುರುಡಾಗಿ ಸಾಗುತ್ತಿರುವುದು ಗಜಲ್ ಕಾವ್ಯ ಪ್ರಕಾರದ ಬೆಳವಣಿಗೆಗೆ ಮಾರಕವಾಗಿದೆ. ಕನ್ನಡದಲ್ಲಿ ಗುರುಶಿಷ್ಯರ ಈವೊಂದು ಪರಂಪರೆಯನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. “ಎಲ್ಲಾ ಬಲ್ಲವರಿಲ್ಲ, ಬಲ್ಲವರೂ ಬಹಳಿಲ್ಲ.” ಗಜಲ್ ಕಲಿಕಾರ್ಥಿ ಆದವನು ಮೊದಲು ಸಮರ್ಥ ಗುರುವನ್ನು ಹುಡುಕಿಕೊಳ್ಳಬೇಕು. ಗುರುವಿನ ಗುಲಾಮನಾಗುವ ತನಕ ಸಿಗದು ಮುಕ್ತಿ ಎಂಬ  ದಾಸಶ್ರೇಷ್ಠರ ನುಡಿಯಂತೆ, ಗುರುವಿನ  ಮಾರ್ಗದರ್ಶನದಲ್ಲಿ ಕಲಿಕೆಯನ್ನು ಆರಂಭಿಸಬೇಕು. ಆಗ ಮಾತ್ರ ಯಾವ ಗೊಂದಲಗಳಿಲ್ಲದೆ ಕಲಿಕೆ ಸುಗಮವಾಗಿ ಸಾಗಬಲ್ಲದು. ಆದರೇ ಇಲ್ಲಿ ದ್ರೋಣಾರ್ಜುನರು ಕಡಿಮೆ, ಏಕಲವ್ಯರೆ ಹೆಚ್ಚು ಎಂಬಂತಾಗಿದೆ. ಕಲಿಕಾರ್ಥಿಯೊಬ್ಬ ಸಮರ್ಥ  ಗುರುವನ್ನು ಹುಡುಕಿಕೊಳ್ಳುವ ಅಗತ್ಯವಿರುವಂತೆ, ಅದೇ ರೀತಿಯಲ್ಲಿ  ಗುರುವು ಸಹ ತನ್ನ ಜ್ಞಾನವನ್ನು ಧಾರೆ ಎರೆಯಲು ಸೂಕ್ತ ಶಿಷ್ಯನೊಬ್ಬನನ್ನು ಆಯ್ದುಕೊಳ್ಳುವ ಅವಶ್ಯಕತೆಯು ಇದೆ. ಹೀಗೆ ಗುರುವೊಬ್ಬ ಎಷ್ಟು ಮಂದಿ ಶಿಷ್ಯರನ್ನಾದರು ಆಯ್ದುಕೊಳ್ಳುವ ಸಾಮರ್ಥ್ಯ ಒಬ್ಬ ಗುರುವಿಗಿರುತ್ತದೆ. ತರಹೀ ಮಿಸ್ರದ ಆಯ್ಕೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿರುವುದನ್ನು ಕಾಣುತ್ತೇವೆ. ಹೆಚ್ಚಿನ ಮಟ್ಟಿಗೆ  ಮತ್ಲಾದ ಮಿಸ್ರಗಳನ್ನೆ ತರಹೀ ರಚನೆಗೆ ಆಯ್ಕೆ ಮಾಡಿಕೊಳ್ಳುವುದಿದೆ. ಹಾಗೆಯೇ ಗಜಲ್ನ ಯಾವುದಾದರೂ ಮಿಸ್ರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವೂ ಸಹ ಇದ್ದೆ ಇದೆ. ಅಷ್ಟೇ ಅಲ್ಲದೆ, ಗಜಲ್ನ ಹೊರತಾಗಿ ನಜಮ್, ನಾತ್ ಮತ್ತಿತರೆ ಕಾವ್ಯ ಪ್ರಕಾರಗಳಿಂದಲೂ ತಮ್ಮನ್ನು ಪ್ರಭಾವಿಸಿದ ಇಲ್ಲವೇ ಇಷ್ಟವಾದ ಸಾಲುಗಳನ್ನು ತರಹೀಗೆ ಆಯ್ಕೆ ಮಾಡಿಕೊಂಡು ಗಜಲ್ ರಚಿಸಿದವರು, ರಚಿಸುವವರೂ ಇದ್ದಾರೆ. ತರಹೀ ರಚಿಸುವವರು ಆಯ್ಕೆ ಆಡಿಕೊಂಡ ಮಿಸ್ರವನ್ನು ಎಲ್ಲಿ ಮತ್ತು ಹೇಗೆ ಬಳಸಬೇಕು ಎಂಬುದು ಜಿಜ್ಞಾಸೆಯಾಗಿ ಮಾರ್ಪಟ್ಟಿದೆ. ಸರ್ವೆ ಸಾಮಾನ್ಯವಾಗಿ ಆಯ್ಕೆಯ ಮಿಸ್ರವನ್ನು ತರಹೀ ಗಜಲ್ಕಾರ ತನ್ನ ಗಜಲ್ನ ಮತ್ಲಾದ ಸಾನಿ ಮಿಸ್ರವಾಗಿಸಿ ಬರೆಯುವುದು ವಾಡಿಕೆಯಲ್ಲಿದೆ. ಆದರೆ ಅದನ್ನು ಉಲಾ ಮಿಸ್ರವಾಗಿಸಬೇಕು ಎಂಬುದು ಕೆಲವರ ವಾದವಾಗಿದೆ. ಗಜಲ್ ಸಾಧಕರಾದ ‘ಅಲ್ಲಮ’ ಗಿರೀಶ್ ಜಕಾಪುರೆ ರವರು ಹೇಳುವಂತೆ, ತರಹೀ ರಚಿಸುವ ಗಜಲ್ಕಾರನ ಮಿಸ್ರ, ತರಹೀಗೆ ಆಯ್ಕೆ ಮಾಡಿಕೊಂಡ ಮಿಸ್ರಕ್ಕಿಂತ ಉತ್ಕೃಷ್ಟವಾಗಿದ್ದರೆ  ಅದನ್ನು ಉಲಾ ಮಿಸ್ರವಾಗಿ ಹಾಗು ತರಹೀ ಮಿಸ್ರವನ್ನು ಸಾನಿ ಮಿಸ್ರವಾಗಿಸಿ ಬಳಸುವುದು ಸೂಕ್ತ ಎಂದಿದ್ದಾರೆ. ಇದಲ್ಲದೆ, ತರಹೀ ಸಾಲನ್ನು ಗಜಲಿನ ಅಶಆರ್ ಗಳಲ್ಲಿ ಹಾಗೂ ಮಕ್ತಾದಲ್ಲೂ ಬಳಸುವವರನ್ನು ಸಹ ಕಾಣಬಹುದು. ಹಾಗಾಗಿಯೇ ಇದೊಂದು ಎಂದಿಗೂ ಬಗೆಹರಿಯದ ಸಮಸ್ಯೆಯಾಗಿ/ಗೊಂದಲವಾಗಿ ಪರಿಣಮಿಸಿದೆ. ಗಜಲ್ಕಾರನೊಬ್ಬ ಮತ್ತೊಬ್ಬ ಗಜಲ್ ಕವಿಯ ಮಿಸ್ರದ ಪ್ರಭಾವದಿಂದ ತರಹೀ ರಚಿಸಲು  ಯಾರ ಪರವಾನಾಗಿಯನ್ನು ಪಡೆಯುವ ಅವಶ್ಯಕತೆ ಇಲ್ಲ. ಆದರೆ ಮೂಲ ಕವಿಯ ಹೆಸರನ್ನು ಉಲ್ಲೇಖಿಸುವುದರ ಮೂಲಕ ಗೌರವ ಸೂಚಿಸುವುದು ತರಹೀ ಪರಂಪರೆಯ ಅದರ್ಶವಾಗಿದೆ. ಆದರೆ ಈ ಪರಂಪರೆಯನ್ನು ಕನ್ನಡದ ಗಜಲ್ಕಾರರು ಅಷ್ಟಾಗಿ ಸ್ವಾಗತಿಸಿದಂತೆ ಕಾಣುವುದಿಲ್ಲ. ಏಕೆಂದರೆ ಕನ್ನಡದ ಕೆಲವು ಗಜಲ್ಕಾರರು ತಮ್ಮ ಸಾಲನ್ನು ಕೇಳದೆ ಬಳಸಿದರೆಂದು, ಬಳಸುವ ಮೊದಲು ಅನುಮತಿ ಪಡೆಯ ಬೇಕಾಗಿತ್ತೆಂದು (ಮೂಲ ಕವಿಯ ಹೆಸರನ್ನು ಉಲ್ಲೇಖಿಸಿದ್ದರೂ ಸಹ), ನೀವು ನನ್ನ ಮಿಸ್ರಕ್ಕೆ ತರಹೀ ಬರೆಯಕೂಡದೆಂದು ನಿರ್ಬಂಧ ಹೇರುವ, ಆಕ್ಷೇಪ ವ್ಯಕ್ತಪಡಿಸುವ, ಕೃತಿಚೌರ್ಯದ ಪಟ್ಟ ಕಟ್ಟಿ ಹಿಯಾಳಿಸುವ ಇಂತಹ ಕಹಿ ಅನುಭವಗಳನ್ನು ಕೆಲವು ಗಜಲ್ಕಾರರು ನೊಂದ ಮನಸ್ಸಿನಿಂದ ಗಜಲ್ ಗುಂಪುಗಳಲ್ಲಿ ಹೇಳಿಕೊಂಡಿರುವುದು, ಚರ್ಚೆಯಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ವಿಷಾದ ಅನುಭವದಿಂದ ನಾನು ಸಹ ಹೊರತಾಗಿಲ್ಲ. ಹಾಗಾಗಿ ಇಂತಹ  ಅನುಭವಕ್ಕೆ ಮುಖಾಮುಖಿಯಾದವರು ತರಹೀ ಗಜಲ್ ರಚಿಸುವತ್ತ ಆಸಕ್ತಿಯನ್ನು ಕಳೆದುಕೊಂಡಿರುವುದು ವಿಷಾದನೀಯ ಸಂಗತಿಯಾಗಿದೆ. ಮತ್ತೆ ಕೆಲವರು ಉರ್ದು/ಹಿಂದಿ ಭಾಷೆಯ ಗಜಲ್ಗಳಿಂದ ತಮಗೆ ಇಷ್ಟವಾದ ಸಾಲನ್ನು ಕನ್ನಡಕ್ಕೆ ಅನುವಾದಿಸಿಕೊಂಡು ತರಹೀ ರಚಿಸುವತ್ತ ತಮ್ಮದೇ ಮಾರ್ಗವನ್ನು ಕಂಡುಕೊಂಡಿದ್ದಾರೆ. ಆದರೆ ಈ ತೆರನಾದ

ತರಹೀ ಎಂಬ ಹೆಜ್ಜೆಯ ನುಡಿಯ ಗೆಜ್ಜೆಯ ದನಿ Read Post »

ಪುಸ್ತಕ ಸಂಗಾತಿ

ಆತ್ಮಸಖಿ ಗಜಲ್ ಗಳು

ಕೃತಿ ಶೀಷಿ೯ಕೆ…. ಆತ್ಮಸಖಿ ಗಜಲ್ ಗಳು
ಲೇಖಕರ ಹೆಸರು…… ಅರುಣಾ ನರೇಂದ್ರ ಮೊ.೭೯೨೯೦೪೬೬೯೮
ಪ್ರಕಾಶನ……. ಸಿದ್ಧಾರ್ಥ ಪ್ರಕಾಶನ ನಂದಿನಗರ ಕೊಪ್ಪಳ ಮೊ೯೮೪೫೦೧೭೩೧೬
ಪ್ರಥಮ ಮುದ್ರಣ …೨೦೨೧. ಬೆಲೆ ೧೫೦₹

ಆತ್ಮಸಖಿ ಗಜಲ್ ಗಳು Read Post »

ಪುಸ್ತಕ ಸಂಗಾತಿ

“ರಾಕ್ಷಸನ ಹೃದಯ ಕದ್ದ ಮಕ್ಕಳು”.

ಪುಸ್ತಕ ಸಂಗಾತಿ “ರಾಕ್ಷಸನ ಹೃದಯ ಕದ್ದ ಮಕ್ಕಳು” “ರಾಕ್ಷಸನ ಹೃದಯ ಕದ್ದ ಮಕ್ಕಳು”.ಲೇಖಕರು:ಮತ್ತೂರು ಸುಬ್ಬಣ್ಣಪ್ರಕಟಷೆ:೨೦೨೧ಪ್ರಕಾಶನ:ಯುಗಪುರುಷ ಪ್ರಕಟಣಾಲಯ ಕಿನ್ನಿಗೋಳಿ.ಬೆಲೆ: 125 ರೂ. ಪುಟಗಳು:147 ಮತ್ತೂರು ಸುಬ್ಬಣ್ಣ ಕನ್ನಡದ ಮಕ್ಕಳಿಗೆ ಪರಿಚಿತ ಹೆಸರು. ಅವರು ಕಥೆಗಳ ಕಟ್ಟುಕಟ್ಟುಗಳನ್ನೇ ಸೃಷ್ಟಿಸುತ್ತಾರೆ. ಕಥೆಗಳನ್ನು ಮಕ್ಕಳ ಮುಂದೆ ಹೇಳುತ್ತ ರಂಜಿಸುತ್ತಾರೆ. ಉತ್ತಮ ಶಿಕ್ಷಕರಾಗಿರುವ ಸುಬ್ಬಣ್ಣ ರೇಡಿಯೊ ನಾಟಕ ಕಲಾವಿಧರೂ ಹೌದು.   ಸುಬ್ಬಣ್ಣ ಈಗ ‘ರಾಕ್ಷಸನ ಹೃದಯ ಕದ್ದ ಮಕ್ಕಳು’ ಎನ್ನುವ ಕಥಾ ಸಂಕಲನವನ್ನು ತಂದಿದ್ದಾರೆ. ಮಕ್ಕಳಿಗೆ ಕಥೆ ಬರೆಯುವುದೆಂದರೆ ಅದೊಂದು ರೀತಿಯ ಧ್ಯಾನ. ಸದಾ ಮಕ್ಕಳ ಕುರಿತಾಗಿ ಪ್ರೀತಿಯ ಆಲೋಚನೆಗೆ ಇಳಿಯುತ್ತಾ, ತನ್ನಲ್ಲಿ ಮಗುತನವನ್ನು ಆಹ್ವಾನಿಸಿಕೊಳ್ಳುತ್ತ… ಹೊಸ ಹೊಸ ಓದಿಗೆ ತೆರೆದುಕೊಳ್ಳುತ್ತ ಮಾಡಬೇಕಾದ ಕ್ರಿಯೆ. ಸುಬ್ಬಣ್ಣ ಇಂತಹ ಕ್ರಿಯೆಯಲ್ಲಿ ನಿರಂತರ ತೊಡಗಿದ್ದಾರೆ. ಅವರ ಈ ಸಂಕಲನದಲ್ಲಿ ಮೂವತ್ತು ಕಥೆಗಳಿವೆ. ಇದರಲ್ಲಿ ಅವರು ಬರೆದ 1984ರಷ್ಟು ಹಿಂದಿನ ಕಥೆಗಳೆಲ್ಲ ಸೇರಿರುವುದರಿಂದ ರಾಜರ ಕಥೆಗಳು, ಜಾನಪದ ಮಾದರಿಗಳು, ವಾಸ್ತವ ಕಥೆಗಳು ಎಲ್ಲವೂ ಸೇರಿಕೊಂಡಿವೆ. ಹಾಗಾಗಿ ಹಿಂದಿನ ಸಾಂಪ್ರದಾಯಕ ಚೌಕಟ್ಟಿನಲ್ಲಿಯೇ ಇರುವ ಹಲವಾರು ಕಥೆಗಳು ಇಲ್ಲಿವೆ. ಸುಬ್ಬಣ್ಣ ಅವರು ಇತ್ತೀಚೆಗೆ ಬರೆದ ಹೊಸಕಾಲದ ಕಥೆಗಳನ್ನೇ ಒಂದಾಗಿಸಿ ಸಂಕಲನ ತಂದಿದ್ದರೆ ಇನ್ನೂ ಹೆಚ್ಚು ಚನ್ನಾಗಿರುತ್ತಿತ್ತು  ಅಂತ ನನಗೆ ಅನಿಸುತ್ತದೆ. ಇರಲಿ, ಸುಬ್ಬಣ್ಣ ಆಗಲೇ ಹೇಳಿದ ಹಾಗೆ ಕಥೆ ಬರೆಯುವುದರಲ್ಲಿ ನುರಿತವರು. ಈ ಸಂಕಲನದಲ್ಲಿ ಇರುವ ‘ಬಲೂನು ನನ್ನದು’ ಎನ್ನುವ ಕಥೆ ತುಂಬಾ ಆಪ್ತವಾಗುವ ಹಾಗೆ ಇದೆ. ಪುಟ್ಟ ಶಾಲೆಯಿಂದ ಮರಳಿದಾಗ ಮನೆಯ ಗೇಟಿನ ಹತ್ತಿರ ಒಂದು ಬಲೂನು ಸಿಗುತ್ತದೆ. ಬಲೂನು ಯಾವ ಮಕ್ಕಳಿಗೆ ಇಷ್ಟವಲ್ಲ ಹೇಳಿ. ಅದನ್ನು ಮನೆಯ ಒಳಕ್ಕೆ ತಂದು ಆಡಲು ತೊಡಗುತ್ತಾನೆ. ಇದನ್ನು ನೋಡಿದ ಅವನ ಅಮ್ಮ ಯಾರದು ಎಂದು ವಿಚಾರಿಸಿ… ಬೇರೆಯವರ ಬಲೂನು ಅಂದ ಮೇಲೆ ಅಲ್ಲೇ ಇಟ್ಟು ಬಾ ಎಂದು ಹೇಳುತ್ತಾಳೆ. ಅಮ್ಮನ ಒತ್ತಾಯಕ್ಕೆ… ಹಿಂದೆ ಬಂದ ಪುಟ್ಟು ಗೇಟಿನ ಹೊರಗೆ ಬಂದು ಅಲ್ಲಿ ಬರುವವರನ್ನೆಲ್ಲ ಬಲೂನು ನಿಮ್ಮದಾ ಎಂದು ಕೇಳುತ್ತಿರುತ್ತಾನೆ. ಆದರೆ ಯಾರೂ ಬಲೂನು ತಮ್ಮದು ಎಂದು ಹೇಳದಿರಲಿ ಎನ್ನುವ ಆಸೆ ಅವನ ಮನದಲ್ಲಿ ತುಂಬಿಕೊಂಡಿರುತ್ತದೆ. ಕೊನೆಯಲ್ಲಿ ಅಜ್ಜಿಯೊಬ್ಬಳು ತನ್ನ ಮೊಮ್ಮಗನೊಂದಿಗೆ ಬಂದು ಬಲೂನು ತನ್ನ ಮೊಮ್ಮಗನದೂ ಎಂದು ಹೇಳಿ ತೆಗೆದುಕೊಂಡಾಗ… ಆಡುವ ಮನಸ್ಸಿನ ಪುಟ್ಟುವಿಗೆ ಸಂಕಟವಾಗುತ್ತದೆ. ಆದರೆ ಬಲೂನು ಮಾರುವವನೊಬ್ಬ ಅವನ ಮನೆಯ ಹತ್ತಿರ ಪ್ರತ್ಯಕ್ಷ ಆಗುವುದರೊಂದಿಗೆ ಕಥೆ ಸುಖಾಂತ್ಯವಾಗುತ್ತದೆ. ಈ ಕಥೆ ವಾಸ್ತವ ನೆಲೆಯಲ್ಲಿ ಮಕ್ಕಳ ಮನಸ್ಸಿನ ಅನಾವರಣ ಮಾಡಿಸುತ್ತದೆ.    ‘ಕಾವಲುಗಾರ ಮತ್ತು ಮೋಚಿ’ ಕಥೆಯಲ್ಲಿ ಮೋಚಿಯೊಬ್ಬ ಕಾಲೋನಿಯ ಒಳಗೆ ಹೋಗಿ ಕೆಲಸ ಮಾಡುವುದು ಇದೆ. ಈ ರೀತಿ ಒಳಗೆ ಹೋಗಿ ಕೆಲಸ ಮಾಡಲು ಕಾಲೋನಿಯ ಕಾವಲುಗಾರ ಮೋಚಿಯಿಂದ ಹಣ ಲಂಚವಾಗಿ ಪಡೆಯುತ್ತಾನೆ. ನಂತರ ಮೋಚಿಯಿಂದ ಕೆಲಸ ಮಾಡಿಸುತ್ತ ತಾನೇ ಅಂಗಡಿ ನಡೆಸುತ್ತಾನೆ. ನಂತರ ಮೋಚಿಯಿಂದ ಮತ್ತೆ ಮತ್ತೆ ಹಚ್ಚು ಹಣ ಕಬಳಿಸಲು ತೊಡಗಿದಾಗ ಮೋಚಿ ಅವನನ್ನು ಬಿಟ್ಟು ತಾನೇ ಸ್ವಂತ ಕೆಲ¸ಕ್ಕೆ ತೊಡಗುತ್ತಾನೆ. ದುರಾಸೆಯ ಕಾವಲುಗಾರ ಕಷ್ಟಕ್ಕೆ ಒಳಗಾಗುತ್ತಾನೆ ಎನ್ನುವ ಕಥೆ ಮಕ್ಕಳಿಗೆ ಸಹಜ ಸಂದೇಶ ಮುಟ್ಟಿಸುತ್ತದೆ. ಸಾವುಕಾರನ ಮನೆಯ ನಾಯಿ, ಆಳಿನ ಮನೆಯ ನಾಯಿಗಳ ಮುಖಾಮುಖಿ ‘ನರ ಬುದ್ಧಿ ನಾಯಿ ಬುದ್ಧಿ’ ಕಥೆಯಲ್ಲಿದೆ. ಸಾವುಕಾರನ ಮನೆಯ ನಾಯಿ ತನ್ನ ಸೌಲಭ್ಯಗಳ ಕುರಿತು ಕೊಚ್ಚಿಕೊಳ್ಳುವುದು ಹಾಗೂ ಆಳಿನ ಮನೆಯ ನಾಯಿಯನ್ನು ಹೀಯಾಳಿಸುವುದು ಇದೆ. ಆದರೆ ಆ ನಾಯಿ ಮುದುಕಾದಾಗ ಕಾಡಿಗೆ ಬಿಡಲು ಸಾವುಕಾರ ಆಲೋಚಿಸುತ್ತಾನೆ. ಆದರೆ ಆಳಿನ ಮನೆಯ ನಾಯಿ ಚನ್ನಾಗಿರುತ್ತದೆ. ಇದರಿಂದ ಶ್ರೀಮಂತಿಕೆಯ ಸೌಲಭ್ಯಕ್ಕಿಂತ ಪ್ರೀತಿಯೇ ಮುಖ್ಯ ಎಂಬ ಅರಿವು ಶೀಮಂತನ ಮನೆಯ ನಾಯಿಗಾಗುತ್ತ ಮಕ್ಕಳಿಗೆ ತಲುಪುತ್ತದೆ. ಸಂಪಾದನೆ ಎನ್ನುವ ಇನ್ನೊಂದು ಕಥೆಯಲ್ಲಿ ಮಣಿ ಎನ್ನುವ ಚಿಂದಿ ಆಯುವ ಹುಡುಗನ ಬಾಲ್ಯದ ಆಸೆ, ಬಡತನ, ಅಪ್ಪನ ಸಿಟ್ಟು ಎಲ್ಲ ವ್ಯಕ್ತವಾಗಿದೆ. ಮಣಿ ಬಣ್ಣದ ಆಟಿಗೆಗಾಗಿ ತಾನೇ ಕೂಲಿಮಾಡಿ ಸಂಗ್ರಹಿಸುವುದುÀ ಕಷ್ಟವಾದರೂ ಆಟಿಕೆ ಪಡೆಯಬೇಕೆಂಬ ಹಂಬಲದಲ್ಲಿ ಅದನ್ನು ಲಕ್ಷಿಸದೇ ಪ್ರಯತ್ನಿಸುವುದೆಲ್ಲ ಮಕ್ಕಳು ಎಂತಹ ಕಷ್ಟದಲ್ಲೂ ಮುನ್ನಡೆಯುವ ಉತ್ಸಾಹ ತೋರುವುದನ್ನು ಎತ್ತಿ ತೋರಿಸುತ್ತದೆ. ಪುಸ್ತಕದ ಶೀರ್ಷಿಕೆ ಕಥೆ ‘ರಾಕ್ಷಸನ ಹೃದಯ ಕದ್ದ ಮಕ್ಕಳು’ ಒಂದು ರೀತಿಯ ಜಾನಪದ ಮಾದರಿಯ ಕಥೆಯಾಗಿದೆ. ಮಕ್ಕಳನ್ನು ಕದ್ದು ತೊಂದರೆ ಕೊಡುತ್ತಿದ್ದ ರಾಕ್ಷಸನಿಗೆ ನಿನ್ನ ಹೃದಯ ಕಳ್ಳುತ್ತೇನೆ ಎಂದು ಬಾಲಕಿಯೊಬ್ಬಳು ಹೆದರಿಸುವುದು ಕುತೂಹಲ ಮೂಡಿಸುತ್ತದೆ. ನಂತರ ರಾಕ್ಷಸ ತನ್ನ ಗುಹೆಯಲ್ಲಿ ಇಟ್ಟು ಕೊಂಡಿದ್ದ ಮಕ್ಕಳೊಂದಿಗೆ ಸೇರಿಕೊಳ್ಳುವ ಬಾಲಕಿ ಅವರಿಗೆಲ್ಲ ‘ರಾಕ್ಷಸನ ಹೃದಯ ಕಳವುಮಾಡುತ್ತೇವೆ ಎಂದು ಹೇಳಿ’ ಅವನನ್ನು ಹೆದರಿಸುವ ಉಪಾಯ ಹೇಳುವುದು ಇದೆ. ಕೊ£ಂiÀÉಯಲ್ಲಿ ಮಕ್ಕಳು ತನ್ನ ಹೃದಯ ಕದ್ದರೆಂದು ಭಾವಿಸಿ ರಾಕ್ಷಸ ಬಿದ್ದು ಹೋಗುವುದು ಮಕ್ಕಳು ಬಿಡುಗಡೆಯಾಗುವುದು ಇದೆ. ಸುಬ್ಬಣ್ಣ ಇತ್ತೀಚೆಗೆ ಹೊಸಕಾಲದ ಪಟ್ಟಣದ ಮಕ್ಕಳ ಸುತ್ತಲಿನ ಕಥೆಗಳನ್ನು ಚುರುಕಾಗಿ ಬರೆಯುತ್ತಿದ್ದಾರೆ. ಅದರಲ್ಲಿ ಪಟ್ಟಣದ ಮಕ್ಕಳು ವಿವಿಧ ರೀತಿಯ ಕಷ್ಟಕ್ಕೀಡಾಗುವುದು ಹಾಗೂ ಮಕ್ಕಳು ತಮ್ಮ ಚುರುಕುತನ ಪ್ರದರ್ಶಿಸಿ ಕಷ್ಟದಿಂದ ಹೊರಗೆ ಬರುವುದೆಲ್ಲ ಇರುತ್ತದೆ. ಆಗಲೇ ಹೇಳಿದ ಹಾಗೆ ಹೊಸಕಾಲದ ಕಥೆಗಳದೇ ಸಂಕಲನವಾಗಿದ್ದಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು ಅನಿಸುತ್ತದೆ. ಆದರೆ ಇದರಲ್ಲಿರುವ ಮೂವತ್ತೂ ಕಥೆಗಳು ಮಕ್ಕಳಿಗೆ ಬೇರೆ ಬೇರೆ ರೀತಿಯಲ್ಲಿ ಕಚಗುಳಿ ಇಡುತ್ತ ಅವರ ಸಂತಸದ ಪರಿಧಿ ವಿಸ್ತರಿಸುವುದರಲ್ಕಿ ಸಂಶಯವಿಲ್ಲ. ಸುಬ್ಬಣ್ಣ ಅವರ ಪುಸ್ತಕ ಮಕ್ಕಳ ಮನಸ್ಸಿಗೆ ಪ್ರೀತಿಯ ಸ್ಪರ್ಶ ನೀಡಲಿ ಎಂದು ಆಶಿಸುತ್ತ ಹಿರಿಯ ಬರಹಗಾರ ಸುಬ್ಬಣ್ಣ ಅವರಿಗೆ ವಂದನೆಗಳು. ******************************* ತಮ್ಮಣ್ಣ ಬೀಗಾರ.

“ರಾಕ್ಷಸನ ಹೃದಯ ಕದ್ದ ಮಕ್ಕಳು”. Read Post »

ಪುಸ್ತಕ ಸಂಗಾತಿ

ಆತ್ಮಸಖಿಯ ಧ್ಯಾನದಲಿ

ಕೃತಿ ಶೀರ್ಷಿಕೆ…. ಆತ್ಮಸಖಿಯ ಧ್ಯಾನದಲಿ
ಲೇಖಕರ ಹೆಸರು.. ಸಿದ್ಧರಾಮ ಹೊನ್ಕಲ್ ಮೊ.೯೯೪೫೯೨೨೧೫೧
ಪ್ರಕಾಶಕರು… ಅಲ್ಲಮಪ್ರಭು ಪ್ರಕಾಶನ ಶಹಾಪೂರ
ಪ್ರಕಟಿತ ವರ್ಷ ೨೦೨೧. ಬೆಲೆ ೧೨೦₹

ಆತ್ಮಸಖಿಯ ಧ್ಯಾನದಲಿ Read Post »

You cannot copy content of this page

Scroll to Top