ಆತ್ಮಸಖಿ
ಮಾನವತೆ ಮೆರೆಸಿದ ಅವ್ವನ ಹುಡುಕಾಟದ ಗಜಲ್
(ಅರುಣಾ ನರೇಂದ್ರ ಅವರ ಗಜಲ್ ಕುರಿತು)
ಪುಸ್ತಕಸಂಗಾತಿ ನೊಂದವರ ಬಾಳಿಗೆ ಬೆಳಕಾದ ಬೆಳಕನಿಚ್ಚಣಿಕೆ ಗಜಲ್ ಎಂಬ ಮಾಯಾಂಗನೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯಪ್ರಕಾರವೇನೊ ಎನ್ನುವಷ್ಟರಮಟ್ಟಿಗೆ ಬರಹಗಾರರನ್ನು ಒಪ್ಪಿಸಿಕೊಂಡು, ಅಪ್ಪಿಕೊಂಡು ಬರಸಿಕೊಳ್ಳುತ್ತ ಸಾಗುತ್ತಿದೆ. ಗಜಲ್ ಗಾಯನ ಕೇಳುತ್ತಿದ್ದರೆ ನಾವು ಭಾವನಾ ಲೋಕದಲೊಮ್ಮೆ ವಿಹರಿಸಿ ಬರುತ್ತೇವೆ. ಅಷ್ಟರ ಮಟ್ಟಿಗೆ ನಮ್ಮನ್ನು ಸಮ್ಮೋಹನಗೊಳಿಸಿ ಭಾವಪರವಶಗೊಳಿಸಿ ಕೇಳುಗರು ಹಾಗೂ ಓದುಗರ ಮನದ ಭಿತ್ತಿಗೆ ಸಂತೃಪ್ತಿಯನ್ನು ಲೇಪಿಸುತ್ತವೆ. ಅನ್ಯ ಭಾಷೆಯಿಂದ ಕನ್ನಡಕ್ಕೆ ಬಂದರು ಕನ್ನಡದಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿ ಮುನ್ನುಗ್ಗುತ್ತ ಹೋಗುತ್ತಿರುವುದಕ್ಕೆ ಗಜಲ್ ಕಾರರ ಸಾಹಿತ್ಯ ಪ್ರೌಢಿಮೆಯೆ ಕಾರಣವಾಗಿದೆ ಎನ್ನಬಹುದು. ಯಾವುದೇ ವಿಜಯ ಸುಖಾ ಸುಮ್ಮನೆ ಲಭಿಸುವುದಿಲ್ಲ. ಅದಕ್ಕಾಗಿ ದೊಡ್ಡ ಧ್ಯಾನವನ್ನು ಮಾಡಬೇಕಾಗುತ್ತದೆ. ತನ್ನನ್ನೇ ತಾನು ಮರೆತು ಭಾವಲೋಕದಲ್ಲಿವಿಹರಿಸಬೇಕಾಗುತ್ತದೆ. ಆಗ ಮಾತ್ರ ಗಜಲ್ ಗಳಿಗೆ ಜೀವಂತಿಕೆ ದಕ್ಕುತ್ತದೆ. ಗಜಲ್ ಗಳ ಸೆಳೆತ ಎಷ್ಟರಮಟ್ಟಿಗೆ ಇರುತ್ತದೆ ಎಂದರೆ ನಾವು ಚಿಕ್ಕವರಿದ್ದಾಗ ಡಿ . ಡಿ ದೂರದರ್ಶನ ಚಂದನ ವಾಹಿನಿಯಲ್ಲಿ ಹಿಂದಿ ಗಜಲ್ ಗಳು ಪ್ರಸಾರವಾಗುತ್ತಿದ್ದವು. ಸಾಹಿತ್ಯ, ಸಂಗೀತದ ಗಂಧ ಗಾಳಿ ತಿಳಿಯದ ವಯಸ್ಸದು. ಆದರೂ ಗಜಲ್ ಗಾಯನ ಬಂತೆಂದರೆ ಸಾಕು ಅರ್ಥವಾಗದ ಭಾಷೆಯಾದರೂ ನಾವು ಅದನ್ನು ತದೇಕಚಿತ್ತದಿಂದ ಕೇಳಿ ಆಸ್ವಾದಿಸುತ್ತಿದ್ದೆವು. ಇಂದು ಕನ್ನಡದಲ್ಲಿಯೂ ಅಂತಹ ಅವಕಾಶಗಳು ಓದುಗರಿಗೆ, ಕೇಳುಗರಿಗೆ ದೊರೆಯುತ್ತಿರುವುದು ಹರ್ಷದ ಸಂಗತಿಯಾಗಿದೆ. ಗಜಲ್ ಎಂಬ ವೃಕ್ಷ ಇಂದು ಹೆಮ್ಮರವಾಗಿ ಬೆಳೆದು ನಾಡಿನೆಲ್ಲೆಡೆ ತನ್ನ ಕೊಂಬೆಗಳನ್ನು ಚಾಚಿ ಅದ್ಭುತವಾಗಿ ಸಾಹಿತ್ಯ ಕೃಷಿ ಮಾಡಿಸಿಕೊಂಡು ಜನರಿಗೆ ಆಪ್ಯಾಯಮಾನವಾಗಿದೆ. ಇಂದು ಗಜಲ್ ಯುವಕರಿಂದ ಹಿಡಿದು ವಯಸ್ಕರಾದಿಯಾಗಿ ವಯೋವೃದ್ಧರವರೆಗೂ ಎಲ್ಲರಿಗೂ ಆಪ್ತವಾಗಿ ಗಜಲ್ ಬರಹ ಸಾಗುತ್ತಿದೆ. ಗಜಲ್ ನಿನಾದಕೆ ತಲೆದೂಗದವರಿಲ್ಲ. ಅಂತಹ ಅದ್ಭುತ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಜಲ್ ಕಾವ್ಯ ಲೋಕಕ್ಕೆ ಎರಡು ಅದ್ಭುತ ಕೃತಿಗಳನ್ನು ಕೊಡುಗೆಯಾಗಿ ನೀಡಿರುವುದು ಚಂಪಾರವರ ಸಾಹಿತ್ಯಾಭಿರುಚಿಗೆ ಹಿಡಿದ ಕೈಗನ್ನಡಿಯಾಗಿದೆ. ಚಂಪೂ ಎಂಬ ಕಾವ್ಯನಾಮದಿಂದ ಸಾಹಿತ್ಯಲೋಕದಲ್ಲಿ ತಮ್ಮನ್ನು ಪರಿಚಯಿಸಿಕೊಂಡ ಚಂದ್ರಶೇಖರ ಯಲ್ಲಪ್ಪ ಪೂಜಾರ ಅವರ #ಬೆಳಕ #ನಿಚ್ಚಣಿಕೆ ಏರಿ ಬಂದ ನಂತರ ನಾನು ಗಜಲ್ ಕಾರರ ಮನೋಗತವನ್ನು ತಮ್ಮೆಲ್ಲರ ಮುಂದಿಡುವ ಪ್ರಯತ್ನ ಮಾಡುತ್ತಿರುವೆ. ಇವರ ಎರಡು ಗಜಲ್ ಸಂಕಲನಗಳನ್ನು ಓದಿರುವೆ. ಎರಡು ಹೊತ್ತಿಗೆಗಳು ಬೆಳಕನ್ನು ಅಸ್ತ್ರವನ್ನಾಗಿ ಮಾಡಿಕೊಂಡಿವೆ ಎಂದು ನಾವು ಬಹಳ ಸೂಕ್ಷ್ಮವಾಗಿ ಗುರುತಿಸಬಹುದು. ಇವರು ಕತ್ತಲೆಯಲ್ಲಿ ಇರುವವರಿಗೆ ಅಂದರೆ ಹತಾಶೆ,ದುಃಖ, ಶೋಷಣೆ, ಅನ್ಯಾಯ, ಅಸಮಾನತೆ, ಸಾಮಾಜಿಕ ತುಳಿತಕ್ಕೊಳಗಾಗಿ ಸಾಮಾಜಿಕ ಬದುಕಿನ ಕತ್ತಲೆಯಲ್ಲಿ ಜೀವಿಸುವ ಜನಗಳಿಗೆ ಭರವಸೆ, ಕನಸು, ನ್ಯಾಯ, ಸುಖ, ಸಂತೋಷದ ಬೆಳಕನ್ನು ನೀಡುವ ಚೈತನ್ಯದಾಯಕವಾಗಿ ಇವರ ಲೇಖನಿ ದುಡಿಸಿಕೊಂಡಿದೆ ಎಂಬುದು ನಮಗೆ ಇವರ ಗಜಲ್ ಗಳನ್ನು ಓದಿದ ನಂತರ ನಮಗೆ ಅರ್ಥವಾಗುತ್ತದೆ. ಈ #ಬೆಳಕ #ನಿಚ್ಚಣಿಕೆ# ಎಂಬ ಶೀರ್ಷಿಕೆಯೆ ವಿಶೇಷವಾಗಿದ್ದು ನಿಚ್ಚಣಿಕೆ ಎಂದರೆ ಏಣಿ. ಬೆಳಕ ನಿಚ್ಚಣಿಕೆ ಎಂದರೆ ಬೆಳಕನರಸುತ್ತ ಏರುವ ಏಣಿಯಾಗಿದೆ. ದುರಿತದ ಬೇಗುದಿಯಲ್ಲಿ ನೊಂದು ಬೆಂದು ಹೊರಬರಲು ದಾರಿಕಾಣದೆ ತೊಳಲಾಡುವ ಮನೆಗಳಿಗೆ, ಅಸಮಾನತೆಯ ಚಕ್ರವ್ಯೂಹದಲ್ಲಿ ಬಂಧಿಯಾದ ಜನಗಳಿಗೆ, ಶೋಷಿತರಿಗೆ, ಅಸಹಾಯಕರಿಗೆ, ದೀನದಲಿತರಿಗೆ, ಕತ್ತಲೆಯಿಂದ ಹೊರ ಬರಲು ಪರಿತಪಿಸುವ ಜೀವಗಳಿಗೆ, ಬೆಳಕಿನ ಸಾಧನೆಯ ಪಥದಲ್ಲಿ ಚಲಿಸಲು ಮಾರ್ಗದರ್ಶನ ನೀಡುವ ನೀಲಿನಕ್ಷೆಯಾಗಿದೆ. ಇವರೆಲ್ಲ ಕತ್ತಲೆಯೆಂಬ ಅಂಧಕಾರದಿಂದ ಹೊರಬರಲು ಬೆಳಕಿನ ಅನುಭವ ಪಡೆಯಲು ಬೆಳಕ ನಿಚ್ಚಣಿಕೆ ಏರಬೇಕು.ಈ ನಿಚ್ಚಣಿಕೆ ತಯಾರಿಸುವಲ್ಲಿ ಗಜಲ್ ಕಾರರು ಸಾಕಷ್ಟು ಪ್ರಯಾಸ ಪಟ್ಟಿದ್ದಾರೆ ಎಂಬುದು ಗಜಲ್ ಗಳನ್ನು ಓದಿದ ನಂತರವಷ್ಟೇ ಓದುಗ ಪ್ರಭುಗಳ ಅರಿವಿಗೆ ಬರುತ್ತದೆ. ಈ ಬೆಳಕ ನಿಚ್ಚಣಿಕೆ ಗಜಲ್ ಸಂಕಲನವು 66 ಗಜಲ್ ಗಳಿದ್ದು #ನೇರಿಶಾ #ಪ್ರಕಾಶ ನದಲ್ಲಿ ಪ್ರಕಟವಾಗಿದೆ. ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ವಿರಕ್ತಮಠ ದೇಶನೂರ್ ಅವರು ಶುಭ ಹಾರೈಸಿದ್ದಾರೆ. ಹಡಗಲಿಯ #ಇಮಾಮ್ #ಸಾಹೇಬ್ ಸೋತು ಸುಣ್ಣವಾದವರ ನಡುವೆ ಬಣ್ಣವಾದ ಚಂಪೂ ಎಂಬ ಮಿಸ್ರಾ ದೊಂದಿಗೆ ಮುನ್ನುಡಿ ಬರೆದು ಶುಭ ಹಾರೈಸಿದ್ದಾರೆ. ಇವರು ಗಜಲ್ ನ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸುತ್ತ, ರಾಜಾಶ್ರಯದಲ್ಲಿ ಗಜಲ್ ಕಾರರು ವಾದ ಪ್ರತಿವಾದದ ಮೂಲಕ ತಮ್ಮ ವಿದ್ವತ್ತನ್ನು ಪ್ರದರ್ಶಿಸುತ್ತಿದ್ದರು. ಉತ್ಪ್ರೇಕ್ಷೆ ಹಾಗೂ ರೂಪಕಗಳನ್ನು ಸೊಗಸಾಗಿ ಕಟ್ಟಿಕೊಟ್ಟ ಕವಿಗಳಿಗೆ ಸುಲ್ತಾನ, ನವಾಬರಿಂದ ಬಹುಮಾನ, ಸನ್ಮಾನ ಲಭಿಸುತ್ತಿದ್ದವು ಎಂಬ ವಿಚಾರಗಳನ್ನು ಓದುಗರ ಮುಂದಿಟ್ಟಿದ್ದಾರೆ. ಗಜಲ್ ಕಾರರಾದ ಚಂಪೂ ರವರ ಸಾಹಿತ್ಯ ಯಾನವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತ ದಶಕದ ಹತಾಶೆ, ನೋವು ಅವಮಾನಗಳ ನಂತರ ಸನ್ಮಾನದ ರೂಪದಲ್ಲಿ ಎರಡು ಕೃತಿಗಳು ಜನ್ಮತಾಳಿವೆ ಎಂದು ವಿವರಿಸಿದ್ದಾರೆ. ಚಂಪು ರವರ ಗಜಲ್ ಗಳನ್ನು ಜನಗಳು ಒಳಗಣ್ಣಿನಿಂದ ನೋಡುವ ಅಗತ್ಯತೆ ಇದ್ದು ಅಲ್ಲಿ ಅಡಕವಾಗಿರುವ ಗೂಡಾರ್ಥವನ್ನು ಅರಿತುಕೊಳ್ಳಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ. ಈ ಗಜಲ್ ಸಂಕಲನಕ್ಕೆ ಬಳ್ಳಾರಿಯ ಸಾಹಿತಿಗಳಾದ #ಅಬ್ದುಲ್ #ಹೈ #ತೋರಣಗಲ್ಲ ರವರು ಜಡಕ್ಕೆ ಜೀವತುಂಬಿ ಝಲಕಿಸುವ ಗಜಲ್ ಕಾರರಾದ ಚಂಪೂ ರವರು ನವಿರಾದ ರೂಪಕ, ಪ್ರತಿಮೆಗಳನ್ನು ಬಳಸಿಕೊಂಡು ತಾತ್ವಿಕ ಹಸಿವು ಅರಿವಿನ ಜಾಡು ಹಿಡಿದು ವಿಷಯನ್ನು ಬಗ್ಗಿಸಿ ಒಗ್ಗಿಸಿಕೊಳ್ಳುವ ಪ್ರಜ್ಞಾವಂತಿಕೆ, ಬದುಕು ಕಟ್ಟುವ, ಕ್ರಿಯೆಯನ್ನು ಘನಗೊಳಿಸುವ ತಂತ್ರಗಾರಿಕೆ ,ಲಘು ಸ್ವರೂಪದ ಭಾವಗಳನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವ ಕಲಾತ್ಮಕಕತೆ ಜೊತೆಗೆ ಸಮಾಜದಲ್ಲಿ ದಕ್ಕಿದ ಅನುಭವಗಳನ್ನು ಅಕ್ಷರಗಳ ಮುಖೇನ ನೇಯುವ ನೇಯ್ಗಾರಿಕೆ ಇವರಿಗೆ ಕರಗತವಾಗಿದೆ ಎಂದು ತುಂಬು ಮನದಿಂದ ಶ್ಲಾಘಿಸುತ್ತ ಭಾಷೆಯ ಹಂಗು ತೊರೆದು ಬರೆಯುವ ಗಜಲ್ಕಾರ ಎಂಬ ಮಿಸ್ರಾದೊಂದಿಗೆ ಬೆನ್ನುಡಿ ಬರೆದು ಶುಭ ಹಾರೈಸಿದ್ದಾರೆ. ಬೆಳಕ ನಿಚ್ಚಣಿಕೆಗೆ ನಾಡಿನ ಪ್ರಖ್ಯಾತ ಚಿತ್ರ ಕಲಾವಿದರಾದ #ಟಿ.#ಎಫ್.#ಹಾದಿಮನಿ ಅವರು ಬಹಳ ಆಕರ್ಷಕವಾದ ಹಾಗೂ ಅರ್ಥಪೂರ್ಣವಾದ ಮುಖಪುಟ ವಿನ್ಯಾಸವನ್ನು ರಚಿಸಿದ್ದು, ಈ ಗಜಲ್ ಶೀರ್ಷಿಕೆಯ ಮೆರಗನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಓದುಗರ ಮನದಲ್ಲಿ ಗಜಲ್ ಸಂಕಲನ ಹೊತ್ತು ತರುವ ವಿಚಾರಧಾರೆಗಳ ಒಳಗುಟ್ಟನ್ನು ಈ ಮುಖಪುಟ ವಿನ್ಯಾಸ ಸ್ಪಷ್ಟವಾಗಿ ಬಿಂಬಿಸುತ್ತದೆ. ಗಜಲ್ ಲೋಕದಲ್ಲಿ ನಿತ್ಯ ಭಾವಪರವಶರಾಗಿ ಮಿಂದೆದ್ದ ಬಳಿಕ ಬೆಳಕ ನಿಚ್ಚಣಿಕೆ ಪುಟಿದೆದ್ದಿದೆ ಎಂಬುದು ಸತ್ಯ ಸಂಗತಿಯಾಗಿದೆ. ಬಹು ಸೂಕ್ಷ್ಮ ಸಂವೇದನೆಗಳ ಮೂಲಕ ಅರಿವಿನ ಜಾಡಿನಲ್ಲಿ ಸಾಗಿ ತಲುಪಿಸಬೇಕಾದ ಸಂದೇಶವನ್ನು ಬಹಳ ಪ್ರಜ್ಞಾಪೂರ್ವಕವಾಗಿ ಹೆಣೆದು ಕಾವ್ಯ ಕಟ್ಟುವ ಪರಿ ಅನನ್ಯ ಹಾಗೂ ಅಮೋಘವಾಗಿದೆ. ಓದುಗರಿಗೆ ಇವರ ಗಜಲ್ಗಳು ನೋವಿನ ಬಿಸಿಯುಸಿರಲಿ ಬೇಯುತ್ತಿರುವವರಿಗೆ ಸಾಂತ್ವನದ ತಂಪನೆರೆಯುವ ವಿಶಾಲ ವೃಕ್ಷದಂತೆ ಭಾಸವಾಗುತ್ತದೆ. ಕಷ್ಟಗಳೆಂಬ ಮರಳುಗಾಡಿನಲ್ಲಿ ಪರಿತಪಿಸುತ್ತಿರುವ ಮಂದಿಗೆ ನೆಮ್ಮದಿ ನೀಡುವ ಭರವಸೆಯ ತುಂಬುವ ಒಯಸಿಸ್ ನಂತೆ ಕಾಣುತ್ತವೆ. ಇವರು ಬಳಸುವ ಅಭೂತಪೂರ್ವವಾದ ರೂಪಕಗಳಿಂದ ಮಿಸ್ರಾ ಗಳು ಓದುಗರಿಗೆ ವಾಚ್ಯವೆನಿಸದೆ ಗಜಲ್ ಓದಿನ ತೃಪ್ತಿಯನ್ನು ಓದುಗರೆದೆಗೆ ಬಿತ್ತುತ್ತವೆ. ಇವರ ಗಜಲ್ ಗಳು ಕೇವಲ ವ್ಯಕ್ತಿಗತ ರೂಪದಲ್ಲಿ ಮೂಡಿಬರದೆ ಸಾರ್ವತ್ರಿಕ ವಸ್ತುವಾಗಿ ಬಿಂಬಿತವಾಗಿವೆ. ಸಾವಿರಾರು ನೊಂದ ಮನಗಳ ಪ್ರತಿಭಟನೆಯ ಧ್ವನಿಯಾಗಿವೆ. ವೈಯಕ್ತಿಕ ನೆಲೆಯಲ್ಲಿ ನಿಲ್ಲದೆ ಸಾಮಾಜಿಕ ನ್ಯಾಯ ಕೇಳುವ ನ್ಯಾಯವಾದಿಯಾಗಿ, ಹಾಗೂ ಸಮಾಜದ ಓರೆಕೋರೆಗಳನ್ನು ತಿದ್ದುವ ಚಿಕಿತ್ಸೆಕನಾಗಿ ಕಂಡುಬರುತ್ತಾರೆ. ಇವರು ಓದುಗರಿಗೆ ಪ್ರೀತಿ ಪ್ರೇಮದ ರಸಪಾಕವನ್ನು ಉಣಬಡಿಸಲು ಸೈ, ಅನ್ಯಾಯವನ್ನು ಪ್ರತಿಭಟಿಸುವ ಸಾತ್ವಿಕ ಹೋರಾಟಕ್ಕೂ ಸೈ. ಬಡತನದ ರೋಧನೆ, ಹಸಿವಿನ ಆಕ್ರಂದನ ವಿವಿಧ ಮಜಲುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ನಿರಾಶೆಯ ಕಾರ್ಮೋಡ, ಅಸಹಾಯಕತೆಯ ಕಣ್ಣೀರು ಓದುಗರ ಕಂಗಳನ್ನು ಒದ್ದೆಯಾಗಿಸುತ್ತವೆ. ಕೆಲವು ಅನಿಷ್ಟ ಪದ್ಧತಿಯ ಕರಾಳ ದರ್ಶನ ಮಾಡಿಸುವ ಗಜಲ್ ಗಳ ಅಶ್ ಅರ್ ನೋಡಬಹುದು. ನಿರಾಸೆಯ ಬದುಕಲ್ಲಿ ಮುಂಬರುವ ಹೊಸ ದಿನಗಳಿಗಾಗಿ ಆಶಾವಾದದ ಹೊಂಗನಸುಗಳನ್ನು ಹೊತ್ತು, ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಜನರಿಗೆ, ನವ ನವೀನ ದಾರಿಗಳನ್ನು ತೋರುವ ಪ್ರಯತ್ನವನ್ನು ಬೆಳಕ ನಿಚ್ಚಣಿಕೆಯಲ್ಲಿ ಕಾಣಬಹುದು. ಜೀವನದಲ್ಲಿ ಜಿಗುಪ್ಸೆಗೊಂಡು ಬದುಕಿನ ಆಸೆಯನ್ನು ಕಳೆದುಕೊಂಡ ಮಂದಿಗೆ ಆಶಾವಾದದ ಚಿಲುಮೆಯನ್ನು ಸಿಂಪಡಿಸುತ್ತವೆ. ಮೌಲ್ಯಗಳ ಆಚರಣೆಯ ಜನರಿಗೆ ವೈಚಾರಿಕ ಹಾಗೂ ಪ್ರಗತಿಪರ ಚಿಂತನೆಗಳನ್ನು ಬಿತ್ತುವ ವಿಚಾರವಾದಿಗಳಾಗಿ ಈ ಗಜಲ್ ಗಳು ಮೂಡಿಬಂದಿವೆ. ಗಜಲ್ ಕ್ಷೇತ್ರದಲ್ಲಿ ವಿಶಿಷ್ಟ ಹಾಗೂ ವಿಭಿನ್ನವಾದ ರೂಪಕಗಳ ಮೂಲಕ ಗುರುತಿಸಿಕೊಂಡಿರುವ ಗಜಲ್ ಕಾರರುಗಳನೇಕ. ಅಂತಹವರ ಸಾಲಿನಲ್ಲಿ ಚಂಪೂ ಅವರು ಸಹ ಒಬ್ಬರು. ಒಂದು ಕಬ್ಬು ಗಾಣಕ್ಕೆ ಸಿಕ್ಕಿ ಚೆನ್ನಾಗಿ ರುಬ್ಬಿಸಿಕೊಂಡು ಸಿಹಿಯಾದ ಕಬ್ಬಿನರಸ ಕೊಡುವಂತೆ ಚಂಪೂವರ ಕೈಗೆ ಸಿಕ್ಕ ವಸ್ತು ಅಮೋಘವಾದ ರೂಪಕ, ಪ್ರತಿಮೆ, ಉಪಮಾನ ಗಳಿಂದ ಅಲಂಕರಿಸಲ್ಪಟ್ಟು ಓದುಗನಿಗೆ ಆಪ್ತವೆನಿಸುವ ಸಾಲುಗಳು ಗಜಲ್ ರೂಪ ಪಡೆದುಕೊಂಡು ಕಾಡಿಸಿಕೊಂಡು ಓದಿಸಿಕೊಳ್ಳುತ್ತವೆ. ಇವರ ಗಜಲ್ ಗಳು ಕೇವಲ ಶಬ್ದಾಲಂಕಾರಗಳ ವೈಭವೀಕರಣ ಮಾತ್ರವಲ್ಲ. ಅಮೋಘವಾದ ಭಾವದೊನಲು, ಅದ್ಭುತವಾದ ರೂಪಕಗಳನ್ನು ಒಳಗೊಂಡು ಓದುಗನ ಮನದಲ್ಲಿ ಅಚ್ಚಾಗಿ ಎಂದು ಮರೆಯದ ಕರ್ಣ ಕೊಳದಲ್ಲಿ ಸಂಗ್ರಹವಾಗಿ ಶಾಶ್ವತವಾದ ರೂಪಕ ಸಾಮ್ರಾಜ್ಯವನ್ನು ಸ್ಥಾಪಿಸುತ್ತದೆ. ನಮ್ಮ ನಾಡಿನ ಹೆಸರಾಂತ ಕವಿಗಳು ಕನ್ನಡ ಸಾಹಿತ್ಯದಲ್ಲಿ ಬಳಸಿರುವ ರೂಪಕಗಳಿಂದಾಗಿ ಅವರ ಸಾಲುಗಳು ಕಾವ್ಯಮಯವಾಗಿ ಸಿಂಗಾರಗೊಂಡು ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವುದನ್ನು ನಾವು ಕಾಣಬಹುದು. ಈ ನಿಟ್ಟಿನಲ್ಲಿ ಚಂಪೂ ಅವರು ರೂಪಕಗಳ ಹಿಮಾದ್ರಿ ಯನೇರುವ ಪ್ರಯತ್ನ ಮಾಡಿ ಗೆದ್ದಿದ್ದಾರೆ ಎನ್ನಬಹುದು. ಇವರು ಹೆಕ್ಕಿ ತರುವ ನವ ನವೀನ ಪದ ಪುಂಜಗಳಿಂದಾಗಿ ಕನ್ನಡ ಶಬ್ದ ಭಂಡಾರದಲ್ಲಿ ನಿಸ್ತೇಜವಾಗಿ ಇರುವ ಅಗಾಧ ಶಬ್ದಸಂಪತ್ತು ಉಪಯೋಗಿಸಲ್ಪಟ್ಟು ಇವು ಮುಖ್ಯವಾಹಿನಿಗೆ ಬಂದು ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗುತ್ತದೆ. ಓದುಗರಿಗೆ ಮತ್ತಷ್ಟು ಹೊಸ ಪದ ಪುಂಟಗಳ ಪರಿಚಯವಾಗುತ್ತದೆ. ಇವರು ನಾಡಿನ ಹೆಸರಾಂತ ಕವಿ ಶ್ರೇಷ್ಠ ರ ಕಥೆ ಕಾದಂಬರಿಗಳಲ್ಲಿ ಬರುವ ಪಾತ್ರಗಳನ್ನು ತಮ್ಮ ಗಜಲ್ ಗಳಲ್ಲಿ ರಧೀಪ್ ರೂಪದಲ್ಲಿ ಬಳಸಿಕೊಂಡಿರುವುದು ಅವರ ಅಧ್ಯಯನಶೀಲತೆ ಹಾಗೂ ಅಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉದಾಹರಣೆಗೆ ಚೋಮ, ಬಸವ, ಹೀಲಿ, ಹೂವಯ್ಯ,ಶರೀಫ್, ಸುರಗಿ, ನಳಿನಿ, ನಶೀಬ್,ಬೋಧಿ, ಬಸವಾ, ಉರ್ವಿ,ದೇಹಿ, ದೇವಾ, ರುಸ್ತುಂ, ಸುರಭಿ, ಬುಲ್ ಬುಲ್ , ಅಹಲ್ಯೆ , ತ್ಯಕ್ತನಾರಿ, ಮುಂತಾದ ಪದಗಳನ್ನು ಗಜಲ್ ಗಳನ್ನು ಮತ್ತಷ್ಟು ಮಗದಷ್ಟು ಸಾಣೆ ಹಿಡಿದಿವೆ. ಜೊತೆಗೆ ಇವರ ಗಜಲ್ ಗಳಲ್ಲಿ ಅನ್ಯ ಭಾಷೆಯ ಪದಗಳ ಅರ್ಥವನ್ನು ಕಾಣಬಹುದು. ಓದುಗರಿಗೆ ಗೊಂದಲ ಮೂಡದಂತೆ ಎಚ್ಚರವಹಿಸುವ ಗಜಲ್ ಕಾರರು ಅಪರಿಚಿತ ಪದಗಳ ಅರ್ಥವನ್ನು ವಿವರಿಸಿದ್ದಾರೆ. ದೇಶಿಯ ಸೊಗಡಿನಲ್ಲಿ ಮೂಡಿಬಂದ ಅವರ ಗಜಲ್ ಗಳು ಓದುಗ ಪ್ರಭುಗಳನ್ನು ತಮ್ಮೆಡೆಗೆ ಆಕರ್ಷಿಸುತ್ತವೆ. ಕವಿಯ ಸಾಹಿತ್ಯದ ಹೋರಾಟವು ಬಂಡಾಯವೆ ಆಗಿದ್ದರು ಎಲ್ಲೂ ಅಹಿಂಸೆಗೆ ಪ್ರೇರಣೆ ನೀಡದಂತೆ ಕ್ರೌರ್ಯ ಮೆರೆಯದಂತೆ ತಮ್ಮ ಹರಿತವಾದ ಲೇಖನಿಯ ಮೂಲಕ ಮಾರ್ಮಿಕವಾಗಿ ಛಡಿಯೇಟು ಬೀಸುತ್ತ ಸಾತ್ವಿಕವಾದ ಹಾಗೂ ಸೈದ್ಧಾಂತಿಕವಾದ ಪಥದಲ್ಲಿ ಸಾಗಿರುವುದು ಕವಿಯ ಸಾಮರಸ್ಯದ ನಡೆ ಹಾಗೂ ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಾಗಿದೆ. ಚಂಪೂರವರು ತಮ್ಮ ಸಾಹಿತ್ಯದಲ್ಲಿ ಧಮನಿತರ ಪರವಾಗಿ ಮಾತನಾಡುವಾಗ, ಉಳ್ಳವರ ಹುನ್ನಾರವನ್ನು ಬೆಳಕಿಗೆ ತರುವಲ್ಲಿ, ನಿರ್ಭಯದ ಹೆಜ್ಜೆಯಿಟ್ಟು, ನಿರ್ಧಾಕ್ಷಿಣ್ಯವಾಗಿ ಪ್ರತಿಭಟಿಸುವ ಪರಿ ಎಲ್ಲರಿಗೂ ಆಪ್ತವಾಗುತ್ತದೆ. ಇವರು ಸತ್ವಪೂರ್ಣ ಹಾಗೂ ಸತ್ಯಪೂರ್ಣ ಗಜಲ್ ಸಾಹಿತ್ಯ ಕೃಷಿಯ ಮೂಲಕ ತಮ್ಮದೇ ಆದ ವಿಶಿಷ್ಟವಾದ ಛಾಪು ಮೂಡಿಸುತ್ತಿದ್ದಾರೆ. ಸಾಹಿತ್ಯ ಪ್ರಕಾರ ಯಾವುದಾದರೂ ಅವುಗಳ ಪರಮಾರ್ಥ ಗುರಿಯೆಂದರೆ ಓದುಗನಿಗೆ ನ್ಯಾಯ ಒದಗಿಸುವುದು. ಅವನ ಮನಸ್ಸನ್ನು ಸಂತೋಷಪಡಿಸುವುದು. ಓದಿದ ಸಂತೃಪ್ತಿಯನ್ನು ಅವನೆದೆಗೆ ಬಿತ್ತುವುದು. ಬರೆದ ಬರಹದಿಂದ ಕಿಂಚಿತ್ತಾದರೂ ಸಕಾರಾತ್ಮಕ ಬದಲಾವಣೆಯಾದರೆ, ನೊಂದವರಿಗೆ ಬೆಳಕಾದರೆ ಅದು ಗೆದ್ದಂತೆ. ಈ ನಿಟ್ಟಿನಲ್ಲಿ ಅವರ ಪಯಣ ಆಶಾದಾಯಕವಾಗಿದೆ. ಇಲ್ಲಿ ಗಜಲ್ ಕಾರರು ತಮ್ಮ ಬದುಕಿನ ಕೆಲವು ಅನುಭವಗಳು, ತಾವು ಕಂಡಿದ್ದ ಘಟನೆಗಳನ್ನು, ನೋಡಿದ ದೃಶ್ಯಾವಳನ್ನು ಗಜಲ್ ರೂಪದಲ್ಲಿ ಭಟ್ಟಿ ಇಳಿಸಿದ್ದಾರೆ. ಜೊತೆಗೆ ಅವುಗಳ ಪರಿಹಾರದ ದಾರಿಯನ್ನು ಕೂಡ ಅವರೆ ತೋರುತ್ತಾ ಸಾಗಿದ್ದಾರೆ. ಇದನ್ನು ಅರ್ಥೈಸಿಕೊಂಡು ಸರಿಯಾದ
ಮುಖ್ಯಮಂತ್ರಿಗಳಿಂದ ಪ್ರೊ. ವಿಜಯಲಕ್ಷ್ಮಿ ಪುಟ್ಟಿ ವಿರಚಿತ ಕೃತಿ ಲೋಕಾರ್ಪಣೆ
ಮುಖ್ಯಮಂತ್ರಿಗಳಿಂದ ಪ್ರೊ. ವಿಜಯಲಕ್ಷ್ಮಿ ಪುಟ್ಟಿ ವಿರಚಿತ ಕೃತಿ ಲೋಕಾರ್ಪಣೆ Read Post »
ಪುಸ್ತಕ ಸಂಗಾತಿ ಕಾವೇರಿತೀರದಪಯಣ ಪುಸ್ತಕವೊಂದು ಓದಲು ಮಡಿಲಿಗೆ ಬಿದ್ದಾಗ ಅದು ಕಾವೇರಿಯದೆಂದು ತಿಳಿದು ಕಣ್ಣರಳಿತು. ಇದೊಂದು ಅನುವಾದ ಕೃತಿಯೆಂಬುದು ಮತ್ತಷ್ಟು ಖುಷಿಕೊಟ್ಟಿತು. ಮೂಲ ಮಲಯಾಳಂ ಆಗಿದ್ದು , ಮಲಯಾಳಂ ಸಾಹಿತಿಯೊಬ್ಬರೂ ಕಾವೇರಿಯ ಜತೆ ಹೆಜ್ಜೆಯಿಡುತ್ತಲೇ ಕಾವೇರಿ ತೀರದ ಇತಿಹಾಸದ ಅನಾವರಣ ಮಾಡಿದ್ದಾರೆ. ಕನ್ನಡ ಮಣ್ಣಲ್ಲೇ ಹುಟ್ಟಿ, ಕಾವೇರಿಯ ಬಗಲಲ್ಲೇ ಉಸಿರಾಡಿ ಈ ಕೃತಿಯನ್ನು ಓದುವ ಮೂಲಕವಾದರೂ ನಾನೂ ಕಾವೇರಿಯೊಡನೆ ಪ್ರಯಾಣ ಬೆಳೆಸಿದೆ. ಕೊಡಗಿನ ತಲಕಾವೇರಿಯಿಂದ ಹೊರಟ ಜೀವನದಿ ಪೂಂಪುಹಾರ್ ತಲುಪುವವರೆಗೂ ಅದೆಷ್ಟು ರೋಚಕ ಕಥೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟಿಲ್ಲ! ನದಿಗಳೆಂದೂ ಸಂಸ್ಕೃತಿಯ ತೊಟ್ಟಿಲೇ ತಾನೇ? ರಾಜ ಮನೆತನಗಳು, ಆಗಿನ ಜೀವನರೀತಿ , ಸಂಭ್ರಮ, ಸಂಕಟ ಎಲ್ಲವನ್ನೂ ಹೃದ್ಯವಾಗಿ ಮತ್ತು ಶಕ್ತವಾಗಿ ಕಾವೇರಿ ತೀರದ ಪಯಣ ಉಣಬಡಿಸಿದೆ. ಅದೆಷ್ಟೋ ಇತಿಹಾಸದ ಪುಟಗಳನ್ನು ಸಾವಾಧಾನವಾಗಿ ತಿರುವಿ ಕಲೆಹಾಕುತ್ತಲೇ ಮೌಲ್ಯಾಧಾರಗಳ ಕಂತೆಯನ್ನು ನಮ್ಮ ಮುಂದೆ ಸುರಿದಿದ್ದಾರೆ. ಕಾವೇರಿ ನದಿಯ ಉದ್ಭವ ತಾಣದಿಂದ ಹಿಡಿದು ಸಮುದ್ರ ಸೇರುವವರೆಗಿನ ಕಾವೇರಿಯ ವರ್ಣನೆ ನಿಜಕ್ಕೂ ತಲೆದೂಗುವಂತೆ ಮಾಡುತ್ತದಾದರೂ ಇಲ್ಲಿ ನದಿ ಹರಿದ ಆಸುಪಾಸಿನ ತಾಣಗಳ ಇತಿಹಾಸ ಮತ್ತು ವರ್ತಮಾನದ ವಿಶಿಷ್ಟ ಸಂಗತಿಗಳ ಜಗತ್ತನ್ನೇ ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಕಾವೇರಮ್ಮನ ಸನ್ನಿದಿಯನ್ನೇ ಉಸಿರಾಗಿಸಿಕೊಂಡಿರುವ ನಮಗೆ ಕೊಡಗಿನ ಇತಿಹಾಸವನ್ನು ತಿಳಿದುಕೊಳ್ಳುವಂತೆ ಹೇಳುತ್ತಾ ಕಿವಿಹಿಂಡಿದಂತಿದೆ. ಕನ್ನಡದಲ್ಲಿ ಕೊಡವ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿರುವುದು, ಕೊಡಗು ಪ್ರತ್ಯೇಕ ರಾಜ್ಯದ ಕೂಗು ,ಸ್ವಾತಂತ್ರ್ಯ ಬಯಸಿದ ಮಹಿಳೆಯೊಂದಿಗೆ ಕಾವೇರಿಯನ್ನು ಹೋಲಿಸುತ್ತಾ ಸೊಗಸಾದ ಕಥೆ ಹೆಣೆಯಲಾಗಿದೆ. ಬಲಮುರಿ ಸ್ಥಳಕ್ಕೆ ಯಾಕೆ ಆ ಹೆಸರು ಬಂತು? ಸೀರೆಯ ನೆರಿಗೆ ಹಿಂದಕ್ಕೆ ಆದುದರ ಹಿನ್ನೆಲೆ ಏನು? ಹೀಗೆ ಸಾಕಷ್ಟು ಕೊಡಗಿನ ಮಾಹಿತಿಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ. ಕೊಡಗು, ಕಾವೇರಿ ಮತ್ತು ಇದರ ಸಂಬಂಧ ಇತರ ಕಥೆಗಳ ಜತೆ ಭಾರತದಲ್ಲೇ ಟಿಬೆಟನ್ನರ ಅತಿದೊಡ್ಡ ಬೌದ್ಧ ಕೇಂದ್ರ ಬೈಲುಕುಪ್ಪೆಯಲ್ಲಿ ಬೆಳೆದ ಮಾಹಿತಿ ಎಲ್ಲರ ಗಮನ ಸೆಳೆಯುವಂತಿದೆ. ವಿಕ್ಟೋರಿಯಾ ಗೌರಮ್ಮ ಎಂಬ ದುರಂತ ನಾಯಕಿಯ ಕುತೂಹಲಕಾರಿ ಬದುಕಿನ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಬೇಕೆಂಬ ಒಳತುಡಿತ ಹುಟ್ಟುಹಾಕಿದೆ. ಬೌದ್ಧ -ಜೈನ ತತ್ವಗಳ ಪ್ರಭಾವ, ದೇವಾಲಯಗಳು, ಆಚಾರ ವಿಚಾರಗಳು, ಸ್ಥಳವಿಶೇಷಗಳು , ರಾಜ ಮನೆತನಗಳಿಂದ ಹಿಡಿದು ಕಾವೇರಿ ಹರಿಯುವ ಊರುಗಳ ಇತಿಹಾಸವನ್ನೇ ಹೇಳುತ್ತಾಕಾವೇರಿ ತೀರದ ಪಯಣ ಬೆರಗಿನ ಲೋಕಕ್ಕೆ ಕೊಂಡೊಯ್ಯುತ್ತದೆ. ‘ಹರಿಯುವ ನದಿಯಲ್ಲಿ ಕಾಲೂರಿದಾಗಲೆಲ್ಲ ಆದು ಹೊಸ ನದಿಯೆಂದೇ ಭಾಸವಾಗುತ್ತದೆ’ ಎಂದು ಚಿಂತಕ ಹೆರಕ್ಲೀಟಸ್ ಹೇಳಿದಂತೆ ತನ್ನ ಪಯಣವನ್ನು ಮೆಲುಕಿಸುತ್ತಾ ಕಾವೇರಿಯ ಜತೆ ಅನೇಕ ಜನ್ಮಗಳಿಂದಲೂ ನಾನು ಹೆಜ್ಜೆ ಹಾಕಿದ್ದೇನೆ ಎಂದು ಹೇಳುವ ಮೂಲ ಕೃತಿಕಾರ ಓ.ಕೆ.ಜೋಣಿ ಕೇರಳದವರು. ಇವರು ಜೀವನದಿಯ ಜಾಡು ಹುಡುಕುತ್ತಾ ಹೊರಟು ಸಾಕಷ್ಟು ಅಧ್ಯಯನ ಮಾಡಿರುವುದು ಹೆಮ್ಮೆ ಅನಿಸುತ್ತದೆ. ಮೂಲ ಕೃತಿಕಾರರಾದ ಓ.ಕೆ. ಜೋಣಿ ಕೇರಳದ ವಯನಾಡ್ ಜಿಲ್ಲೆಯವರಾಗಿದ್ದು ರಾಷ್ಟ್ರ್ ಪ್ರಶಸ್ತಿ ಪುರಸ್ಕೃತರು. ಕಾವೇರಿಯ ವರ್ಣನೆ ಮತ್ತು ವಸ್ತುನಿಷ್ಠ, ಗಂಭೀರ ನಿರೂಪಣೆಯೊಂದಿಗೆ ವಿವರಿಸುವ ಇವರು ಸಂಶೋಧಕನಾಗಿ ಕಾವೇರಿ ದಡದಲ್ಲಿ ಪಯಣಿಸುತ್ತಾ ಬೇರೆ ಬೇರೆ ಆಕರಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.. ಇದರಿಂದಲೇ ಕಾವೇರಿಯ ಹರಹನ್ನೂ, ಆಳವನ್ನೂ, ಹರಿವಿನ ಸಾನ್ನಿಧ್ಯವನ್ನೂ ಸಮೀಪಿಸಿ ಕ್ರೋಢೀಕರಿಸಲು ಹಾಗೂ ಇಷ್ಟು ಪರಿಣಾಮಕಾರಿಯಾದ ಅದ್ಭುತ ಕೃತಿಯ ಯಶಸ್ಸಿಗೆ ಸಾಧ್ಯವಾಯಿತು. ಕೃತಿಯನ್ನು ಓದುತ್ತಾ ಕನ್ನಡದೇ ಮೂಲ ಕೃತಿ ಎನ್ನುವಷ್ಟು ಆಪ್ತ ಭಾಷೆಯಲ್ಲಿ ಅನುವಾದಿಸಿ ಮಲಯಾಳಂ ಕೃತಿಯೊಂದನ್ನು ಓದಲು ಅವಕಾಶ ಮಾಡಿಕೊಟ್ಟಿದ್ದಾರೆ ಪತ್ರಕರ್ತ ವಿಕ್ರಂ ಕಾಂತಿಕೆರೆಯವರು. ಅನುವಾದವೆಂದರೆ ಹೀಗಿರಬೇಕು ಎಂಬುದಕ್ಕೆ ಮಾದರಿಯಾಗಿ ತಮ್ಮ ಪಕ್ವ ಭಾಷೆಯಲ್ಲಿ ಮೂಡಿರುವ ಅನುವಾದ ನಿಜಕ್ಕೂ ಕನ್ನಡದ್ದೇ ಎನ್ನುವಷ್ಟು ಅದ್ಭುತವಾಗಿದೆ. ಕಾವೇರಿ ತೀರದ ಪಯಣವನ್ನು ಹಲವು ಆಕರ ಗ್ರಂಥಗಳಿಂದ ಶೋಧಿಸಿರುವುದರಿಂದಲೂ, ಅಷ್ಟೇ ಪ್ರೌಢ ಅನುವಾದದಿಂದಲೂ ಇದೊಂದು ಅಧ್ಯಯನಯೋಗ್ಯ ಮತ್ತು ಸಂಗ್ರಹ ಯೋಗ್ಯ ಹೊತ್ತಗೆ ಎಂಬುದರಲ್ಲಿ ಎರಡು ಮಾತಿಲ್ಲ. ಇತಿಹಾಸ ಅದರಲ್ಲೂ ಜೀವನದಿಯ ಹೆಸರಲ್ಲಿ!. ನಾವೆಲ್ಲ ಈ ಕೃತಿಯನ್ನು ಓದಿಯೇ ಸವಿಯಬೇಕು. ಸುನೀತ ಕುಶಾಲನಗರ .
ಪುಸ್ತಕ ಸಂಗಾತಿ ಕನ್ನಡಿ ಮುಂದಿನ ನಗ್ನ ಚಿತ್ರಗಳು ನಗ್ನ ಚಿತ್ರಗಳ ಬಿಂಬ ಸೆರೆಹಿಡಿದ ಕವಿ ನೋಟದ ಕನ್ನಡಿ……. ಸಮಾಜ ವಿಷಮ ಘಟ್ಟದಲ್ಲಿದ್ದಾಗ ಅನೈತಿಕತೆ,ದುರಾಡಳಿತ, ಸ್ವೇಚ್ಛಾಚಾರ,ದಬ್ಬಾಳಿಕೆಯನ್ನು ಖಂಡಿಸಿ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿಯುವಲ್ಲಿ ಯುವಜನರಲ್ಲಿ ಮತ್ತೆ ಅವುಗಳನ್ನು ಮೂಡಿಸುವಲ್ಲಿ ಚಿಂತಕರ, ತತ್ವಜ್ಞಾನಿಗಳ, ಸಾಹಿತಿಗಳ ಪ್ರಯತ್ನ ನಿರಂತರ, ಇಂತಹದೇ ಪ್ರಯತ್ನವಾಗಿ ಇಲ್ಲಿನ ಗಜಲ್ ಗಳನ್ನು ವಿಶ್ಲೇಷಿಸಬಹುದು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದಂಡಳ್ಳಿಯ ಯುವಕ ಶ್ರೀ ಪ್ರಶಾಂತ ಅಂಗಡಿ, ಶ್ವೇತಪ್ರಿಯ ಎಂಬ ಕಾವ್ಯನಾಮದಿಂದ ತಮ್ಮ ಗಜಲ್ ಬರೆಹ ಯಾನದಲ್ಲಿರುವರು. ಇವರ ಈ ಕೃತಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಧನ ಸಹಾಯ ಪಡೆದಿದೆ. ಇಲ್ಲಿನ ಗಜಲ್ ಗಳು ಸಾಮಾಜಿಕ ಅಸಮಾನತೆ, ರಾಜಕೀಯ ವಿಡಂಬನೆ, ಕೃಷಿ ಬದುಕಿನ ಒಳನೋಟ, ಹೆತ್ತವರ ಬಗೆಗಿನ ಆಳವಾದ ಪ್ರೇಮ, ಮತ್ತು ಒಲವಿನ ರಂಗೋಲಿಯ ಗೆರೆಗಳನ್ನು ಒಳಗೊಂಡ ಸುಂದರ ಅರವತ್ತು ಗಜಲ್ ಗಳ ಗುಚ್ಚವಾಗಿ ನಮ್ಮ ಕೈಸೇರಿದೆ. “ಹತ್ತುಸಲ ಮರಣಯಾತನೆಯನ್ನು ಅನುಭವಿಸಬೇಕಾಗಿ ಬಂದರು ನನ್ನ ನಡತೆಯನ್ನೇನು ಬದಲಾಯಿಸಲಾಯಿಸುವದಿಲ್ಲ ಎಂಬುದನ್ನು ಮಾತ್ರ ತಿಳಿಯಿರಿ” ಎನ್ನುತ್ತಾನೆ ಗ್ರೀಸ್ ನ ತತ್ವಜ್ಞಾನಿ ಸಾಕ್ರೆಟಿಸ್.ಜೈಲಿನ ಸೇವಕ ಕೊಟ್ಟ “ಹೇಮ್ಲಾಕ್” ವಿಷ ಸೇವನೆಗೂ ಮುನ್ನ ಅವನ ತಪ್ಪೊಪ್ಪಿಗೆ ಹೇಳಿಕೆಗೆ ಆಗ್ರಹಿಸುವ ಜೈಲಿನ ಅಧಿಕಾರಿಗೆ ಹೇಳಿದ ಕೊನೆಯ ಮಾತಿದು. ಇಂತಹ ದಾಷ್ಟ್ಯತನ ಸಮಾಜ ಸುಧಾರಕ, ಲೋಕ ಚಿಂತಕ, ಲೋಕದ ಹಿತೈಷಿಗಳಿಗಲ್ಲದೆ ಭ್ರಷ್ಟ ಮನಸ್ಥಿತಿಯಲ್ಲಿ ಲೋಕ ದೇಳ್ಗೆ ಯ ವಿಚಾರಗಳು ಮೂಡಲಾರವು ಇಲ್ಲಿ ಇಂತಹದ್ದೇ ಪದಾಕ್ರೋಶ. ಇಲ್ಲಿನ ಬಹುತೇಕ ಗಜಲ್ ಗಳು ಭಾವಗೀತಾತ್ಮಕವಾದ ಮಧುರ ಬಂಧದಲ್ಲಿ ಕಟ್ಟಿ ಕೊಟ್ಟಿದ್ದರೂ ಅಭಿವ್ಯಕ್ತಿಯ ಸಿಡಿಲಾಗಿ ಕೋರೈಸುವ ಶೇರ್ ಗಳೇ ಹೆಚ್ಚಾಗಿವೆ. ತನ್ನ ಸುತ್ತ ಮುತ್ತಲಿನಲ್ಲಿ ನೋಡಿದ,ಅನುಭವಿಸಿದ ಕಷ್ಟ,ದಾರಿದ್ರ್ಯ,ತಾರತಮ್ಯ,ಬಡವರ ಬವಣೆ, ಆಡಳಿತಗಾರರ ಭ್ರಷ್ಟತೆ, ಜಾತಿ ಓಲೈಕೆ, ಒಡೆದಾಳುವ ಸಂಚು ಎಲ್ಲವನ್ನೂ ಕವಿ ಬಹು ನಿರ್ಭಿಡೆಯಿಂದ ತನ್ನ ಗಜಲ್ ಗಳಲ್ಲಿ ಉಲ್ಲೇಖಿಸಿ ಜಾಡಿಸಿದ್ದಾನೆ, ಖಟು ಪದಗಳಲ್ಲಿ ರೂಪಕಗಳಲ್ಲಿ ವಿಡಂಬಿಸಿ ಲೇವಡಿಯಾಡಿದ್ದಾನೆ.ಇಂತಹ ಒಂದಷ್ಟು ಶೇರ್ ಗಳನು ಉದಾಹರಣೆಗೆ ನೀಡುವುದಾದರೆ…. ಗಜಲ್ 01 “ಬೆದರುಗೊಂಬೆಗೆ ನೆದರು ಬಿದ್ದಿದೆ ನೆರಳು ಗದರಿ ನಿಲ್ಲುವಂತೆ ಹೆಜ್ಜೆ ಹೆಜ್ಜೆಗೂ ಜಾತಿಯ ಗಡಿ ರೇಖೆಗಳಿವೆ ಏನು ಮಾಡಲಿ“ ಹೊಲದಲ್ಲಿ ಹಕ್ಕಿ ಪಕ್ಷಿಗಳನ್ನು ಮೋಸಗೊಳಿಸಲು ತನ್ನ ಬೇಳೆ ಕಾಯ್ದುಕೊಳ್ಳಲು ರೈತಾಪಿ ಜನ ಮನುಷ್ಯನೊಬ್ಬ ಅಲ್ಲಿ ಸದಾ ಕಾವಲಿರುವಂತೆ ಕಾಣುವ ಬೆದರು ಬೊಂಬೆಯನ್ನು ಹೊಲದಲ್ಲಿ ನೆಡಾಕಿರುತ್ತಾರೆ ಅದರ ನೆರಳು ಕೂಡ ನಡುಗುವಂತೆ,ಅಂದರೆ ಜೀವವಿಲ್ಲದ ಬೊಂಬೆ ಮತ್ತದರ ನೆರಳು ಎಂಥ ರೂಪಕವಿದು ಈ ನೆರಳು ಹೆದರುವಂತೆ ಹೆಜ್ಜೆ ಹೆಜ್ಜೆಗೂ ಎಲ್ಲರಲ್ಲಿಯೂ, ಎಲ್ಲೆಂದರಲ್ಲಿ ಜಾತಿಯ ಗಡಿರೇಖೆಗಳನ್ನು ಎಳೆದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂದಿನ ವಿದ್ಯಮಾನದ ಕುರಿತು ಅಸಮಾಧಾನವಿದೆ. ಗಜಲ್ 4 “ಹುಟ್ಟು ಸಾವಿನ ಮಧ್ಯ ಮನುಷ್ಯತ್ವ ಹುಟ್ಟಲಿ ಅದುವೇ ಜೀವನ ಸತ್ತ ಹೃದಯ ಮೌನತಾಳಿ ಸೋಲುವದೇನು ಹೊಸತಲ್ಲ ಬಿಡು“ ಅಪಘಾತದಲ್ಲಿಯೋ, ದುರಂತದಲ್ಲಿಯೋ, ಜೀವಗಳು ನರಳುತ್ತಿದ್ದರೆ ಅವರನ್ನು ರಕ್ಷಿಸದೆ,ಉಪಚರಿಸದೆ ಅದನ್ನು ಚಿತ್ರಿಸಿ ಜಾಲತಾಣಗಳಿಗೆ ರವಾನಿಸುವ ಇಂದಿನ ಆಧುನಿಕರ ಸಂವೇದನಾಹೀನ ಮನ ಕಂಡು ಹುಟ್ಟು ಸಾವಿನ ನಡುವಲ್ಲಿ ಒಮ್ಮೆಯಾದರೂ ಅವರಲ್ಲಿ ಮನುಷ್ಯತ್ವ ಜಾಗೃತವಾಗಲಿ ಹೃದಯ ಒಳ್ಳೆಯದನ್ನು ಆಚರಿಸಲು ಮಿಡಿಯಲಿ ಅದುವೇ ಜೀವನ,ಆಗಲೇ ಬದುಕು ಗೆಲ್ಲುವುದು ಇಲ್ಲದಿದ್ದರೆ ಮಾನವನ ಬದುಕು ಸೋಲುವುದು ನಿಶ್ಚಿತ ಅದಾಗದಿದ್ದರೆ ಅದು ಸತ್ತ ಹೃದಯ ಅದು ಮೌನತಾಳುವುದು ಸಹಜ ಎನ್ನುವ ಅಂಬೋಣ. ಗಜಲ್ 8 “ಉಸಿರಿಗೆ ಬೆಲೆ ಕಟ್ಟಿ ಹರಾಜು ಕೂಗಿದ್ದಾರೆ ಅವನ ಗಜಲಿಗೆ ಬೆಲೆ ಇನ್ನೂ ನಿಗದಿಯಾಗಿಲ್ಲ“ “ರವಿ ಕಾಣದ್ದನ್ನು ಕವಿ ಕಾಣ್ವ” ಎನ್ನುವ ಮಾತಿದೆ ಇಂಥಹ ಕವಿಗೆ ಬೆಲೆ ಕಟ್ಟಿ ಅವನ ಬದುಕನ್ನು ಹಣ ಅಂತಸ್ತಿನಿಂದ ಅಳೆದು ಹರಾಜು ಕೂಗಿದ್ದಾರೆ ಆದರೆ ಅವನ ಗಜಲಿಗೆ ಇನ್ನೂ ಬೆಲೆ ನಿಗದಿಯಾಗಿಲ್ಲ, ಲೋಕ ಚಿಂತಕರ ವಿಚಾರಗಳನ್ನೂ, ಕಾಣಿಸಿದ ದಾರಿಯನು ಅನುಸರಿಸಬಹುದು, ಅಳವಡಿಸಿಕೊಳ್ಳಬಹುದೇ ಹೊರತು ಅಳಿಸಲು ನೋಡುವುದು ಬೆಲೆ ನಿಗದಿಮಾಡುವುದು ಮೂರ್ಖತನ . ಗಜಲ್ 9 “ಚರ್ಚು ಮಸೀದಿ ಗುಡಿಗಳಲ್ಲಿ ಬೆತ್ತಲಾಗಿ ಮಲಗಿದ್ದಾನೆ ಹೆಸರಿಡಬೇಡ ಅವನು ಗಜಲಿನ ನಶೆಗೆ ಮಧುಶಾಲೆಗೆ ಹೋದವನು ಹೇಗೆ ತಡೆಯಲಿ“ ಧರ್ಮಗಳ ಕಾರ್ಯಸ್ತಾನ ಅದರ ಪವಿತ್ರ ತಾಣಗಳು, ಅಲ್ಲಿಯೇ ಕವಿ ಇಂತಹ ಧರ್ಮದಿಂದ ಬಂದಿದ್ದಾನೆ ಎಂದು ತೋರುವ ಧರ್ಮದ ಬಟ್ಟೆ , ಲಾಂಛನ ಮೇಲು ವಸ್ತ್ರದ ಹಂಗು ತೊರೆದು ಬೆತ್ತಲಾಗಿದ್ದಾನೆ ಅಲ್ಲದೆ ಅವನು ಗಜಲ್ ನ ನಶೆಗಾಗಿ ಮಧುಶಾಲೆಗೆ ಹೋಗಿದ್ದಾನೆ ಅವನನ್ನು ನಾನು ತಡೆಯಲಾರೆ ಆಕ್ಷೇಪಿಸಲಾರೆ ಇದು ನಡೆಯ ಬೇಕಾದ ನಡೆ ಎನ್ನುತ್ತದೆ. ಮಧುಶಾಲೆ ಚಿಂತನಾ ಕೂಟವಾಗಿ ಗಜಲ್ ಅಲ್ಲಿಂದ ಹೊಮ್ಮಿದ ಪಾಕ ಪರಿಮಳ,ಈ ಶೇರ್ ಮನುಜ ಮತ ಸಾಗಬೇಕಾದ ಹಾದಿಯ ದಿಕ್ಸೂಚಿಯಾಗಿದೆ. ಗಜಲ್ 15 “ವ್ಯವಸಾಯಿಕ ಅಪ್ಪನ ಜೀವನವನ್ನು ವ್ಯವಸಾಯದ ಪರಿಕರ ಮತ್ತು ಪರಿಸ್ಥಿತಿಯ ಸಾದೃಶ್ಯಗಳೊಂದಿಗೆ ಹೋಲಿಸಿ ಬರೆದ ಮನಮಿಡಿಯುವ ಗಜಲ್ ಆಗಿದೆ“ ಗಜಲ್ 17 “ಕಲ್ಹೊಡೆದ ಕೈಗಳ ಬೊಬ್ಬೆಯ ಅಳಲಿಗೆ ಕಿವಿಗೊಡಬೇಕಿತ್ತು ಚೂರು ಸೂರಿಗೆ ಬೆಟ್ಟ ಗುಡ್ಡಗಳೇ ನೀರಾಗಿದೆ ಸಾಕಿ“ ಕಲ್ಲು ಹೊಡೆಯುವ ಕಲ್ಲು ಕುಟಿಕರ ಕೈಯಲ್ಲಿ ಎದ್ದ ಬೊಬ್ಬೆಯ ಅಳಲಿಗೆ ಕಿವಿಗೊಡಬೇಕಿತ್ತು ಅವರ ಸಣ್ಣ ಸೂರಿನ ಅಗತ್ಯತೆಗಳಿಗಾಗಿ ಬೆಟ್ಟ ಗುಡ್ಡಗಳು ಕೂಡ ಮಿದಿಡಿವೆ ಎನ್ನುವ ವಾಚ್ಛಾರ್ಥ ಕಂಡರೂ ಕಲ್ಲು ಎಸೆಯುವ ಸಮಾಜ ಘಾತುಕರಿಗಳಿಗು ಕಿವಿಗೊಡೋಣ ಅವರ ಸಣ್ಣ ಅತೃಪ್ತಿಗಾಗಿ ದೊಡ್ಡ ಬೆಟ್ಟವನ್ನೆ ಕರಗಿಸುತ್ತಾರೆ ಎನ್ನುವ ಎಚ್ಚರಿಕೆಯ ಮಾತು ಇಲ್ಲಿ ಅರ್ಥೈಸಬಹುದು. ಗಜಲ್ 21 “ಸರ್ವಜ್ಞ” ನ ಬಗ್ಗೆ ಗಜಲ್ ಗೋ ರಿಗೆ ಇರುವ ಅಭಿಮಾನ ಗಜಲ್ ಆಗಿ ಕಳೆಗಟ್ಟಿದೆ. ಗಜಲ್ 33 ಕರೋನಾದ ಭೀಕರತೆ,ಕಾರಣ ವಿವರಿಸುವ ಗಜಲ್ ಆಗಿದೆ. ಗಜಲ್ 29 “ಸತ್ಯದ ಮುಖ ಹುಡುಕದಿರು ನಿನ್ನುಸಿರ ಕಪ್ಪ ಕೇಳುತ್ತಾರೆ ಅವುಡುಗಚ್ಚಿದ ನಾಲಿಗೆಗಿಂದು ಕದನದ ಆಪತ್ತು ಒದಗಿದೆ“ ಸತ್ಯವನ್ನು ಆಚರಿಸುವುದು ಅದನ್ನು ಹುಡುಕಾಡುವಂತ ಸ್ಥಿತಿ ಈಗ ನಿರ್ಮಾಣವಾಗಿದೆ, ಒಂದುವೇಳೆ ಹುಡುಕಲು ಹೋದರು ಅದಕ್ಕಾಗಿ ಪ್ರಾಣವನ್ನೇ ತೆರಿಗೆಯಾಗಿ ಕಟ್ಟಬೇಕಾದ ಪರಿಸ್ಥಿತಿ ಒದಗಿದೆ ಅಲ್ಲದೆ ಇದೆಲ್ಲವನ್ನೂ ಬಾಯಿ ಮುಚ್ಚಿ ಸಹಿಸಿದರೂ ಎಂದಾದರೂ ಒಮ್ಮೆ ಇದು ತಮಗೆ ತಿರುಗುಬಾಣವಾಗುವ ಭಯದಿಂದ ಸಾಮಾನ್ಯರ ನಾಲಿಗೆಗೂ ಸಂಚಕಾರ ತರುವರು ಎನ್ನುವ ದ್ರೋಹಿಗಳ ಹುನ್ನಾರದ ವಾಸ್ತವ. ಗಜಲ್ 30 “ಅದೆಷ್ಟೋ ಬಾರಿ ಹಸಿದ ಹೊಟ್ಟೆಗೆ ಬಹಿಷ್ಕಾರ ಹಾಕಿದ್ದಳು ನನ್ನವ್ವ ಪಾದದ ಧೂಳಿಗೆ ಗಡಿಪಾರು ಹಾಕಲು ನನ್ನಪ್ಪನ ದುಬ್ಬ ಸೋತಿತ್ತು“ ಈ ಶೇರ್ ಅಪ್ಪ ಅವ್ವ ಸವೆಸುವ ಬದುಕಿನ ಹಾದಿಯ ಧಾರುಣತೆಯನ್ನು ತೋರುಗಾಣಿಸಿದಂತೆ ಕಂಡರೂ ಸ್ವತಂತ್ರ ಭಾರತದ ಬಹುಪಾಲು ಜನ ಅನ್ನವಿಲ್ಲದೆ ,ಸೂರಿಲ್ಲದೆ ಆಸರೆಯ ಬಲವಿಲ್ಲದೆ ಬದುಕುತ್ತಿರುವ ಬದುಕಿಗೆ ಸಾಕ್ಷಿಯಾಗಿ ಶೇರ್ ದಾಖಲಾಗಿದೆ. ಗಜಲ್ 35 “ಎಲುಬಿಲ್ಲದ ನಾಲಿಗೆ ದೇಶವಿರೋಧಿ ಜೈಕಾರ ಹಾಕಿದೆ ಸುಟ್ಟುಬಿಡು “ಶ್ವೇತಪ್ರಿಯ“ ಸಾವು ಬಯಸಿದರೆ ಮಸಣದ ಮೆಟ್ಟಿಲು ತಿರಸ್ಕರಿಸಿ ಹಾರೈಸುವಂತೆ ಇರಬೇಕು“ ಈ ಶೇರ್ ಕವಿಯ ದೇಶಪ್ರೇಮವನ್ನು ಸಾರುತ್ತಿದೆ ದೇಶವಿರೋಧಿ ಜೈಕಾರ ಹಾಕುವ ಎಲುಬಿಲ್ಲದ ನಾಲಿಗೆಯನ್ನು ಸುಟ್ಟುಬಿಡು ಅಲ್ಲದೆ ಮಸಣದ ಮೆಟ್ಟಿಲು ಕೂಡ ನಿನ್ನ ಸಾವನ್ನು ತಿರಸ್ಕರಿಸುವಂತೆ ಅಲ್ಲಿಯೇ ಬದುಕಿಬಿಡು ಎಂದು ಹೇಳುವ ಉತ್ಕಟ ದೇಶಪ್ರೇಮವಿದು ಅಪ್ಪಟ ದೇಶ ಭಕ್ತನ ಮನದಾಳದ ಹೆಬ್ಬಯಕೆಯಿದೆ ಇಲ್ಲಿ. ಗಜಲ್ 56 “ಆರಿಂಚಿನ ಎದೆ ಬಂಜರೆಂದು ತಿಳಿಯದೆ ಬೀಜ ಬಿತ್ತಿದ್ದಾನೆ ಶ್ವೇತಪ್ರಿಯ ತೆರಿಗೆಯ ಮಳೆ ಸುರಿದರೂ ಬರಗಾಲದ ವೈರಸ್ ಒಕ್ಕರಿಸಿ ಬಿಕ್ಕಳಿಸಿದೆ“ ಬಂಜರಿನಲ್ಲಿಯು ಕೂಡ ಬಿತ್ತನೆ ಮಾಡಿ,ತೆರಿಗೆಯ ಮಳೆ ಸುರಿದರೂ, ಬರಗಾಲದ ವೈರಸ್ ಆ ಬೆಳೆಯನ್ನು ನಾಶಪಡಿಸುತ್ತಿದೆ ಫಸಲಿಗಾಗಿ ಕಾಯುತ್ತ ಕೂತಿರುವ ರೈತನ ಪರಿಸ್ಥಿತಿಯ ಅರ್ಥದೊಂದಿಗೆ ಎದೆ ಬಂಜರು ಬಿತ್ತಬಾರದಾಗಿತ್ತು ತಾನು ನಂಬಬಾರದ್ದಲ್ಲಿ ನಂಬಿದ್ದನ್ನು ಅದು ಆಗಬಾರದ ಕೇಡಾಗಿ ಘಟಿಸಿದ್ದರ ವಿಷಾದ ಧ್ವನಿಸುತ್ತದೆ. ಆರಿಂಚಿನ ಇದೆ ಇನ್ನೊಂದು ವಾಸ್ತವಿಕವಾದ ಸಧ್ಯದ ಮತ್ತೊಂದು ಹೊಳವನ್ನು ನೀಡುತ್ತಿದೆ. ಪ್ರೇಮ, ವಿರಸ ,ದಾಂಪತ್ಯ ಸವಿಯ ಅನೇಕ ಗಜಲ್ ಗಳು ಇದ್ದರೂ ಸಮಕಾಲೀನ ವಿಷಯಗಳಲ್ಲಿನ ಸಂದಿಗ್ಧತೆ ಸೂಚಿಸುವ ಗಜಲ್ ಗಳ ಸದ್ದೆ ಇಲ್ಲಿ ಹೆಚ್ಚು ಕೇಳಿಬರುತ್ತದೆ. ಇಲ್ಲಿನ ಗಜಲ್ ಗಳು ಹತ್ತು ಹಲವಾರು ವಿಷಯಗಳನ್ನು ಧ್ವನಿಸಿದರು ಅದನ್ನೇ ಇನ್ನೂ ನಯವಾಗಿ,ಸೂಚ್ಯವಾಗಿ ತಿಳಿಸುವ ಉಮೇದು ಇದ್ದಂತಿಲ್ಲ ಹೊಸೆದ ಸಾಲು ಆಕಾಶಕ್ಕೆ ಗುರಿಯಾಗಿರಬೇಕು ಅದು ಸೂರ್ಯನಿಗೋ, ಚಂದ್ರನಿಗೊ,ನಕ್ಷತ್ರಗಳಿಗೋ ಇತ್ಯಾದಿ ಕಲ್ಪನೆ ಹೊಸ ಹೊಳವು ನೋಡುಗ, ಓದುಗರಲ್ಲಿ ಮೂಡಿಸಿದಾಗಲೇ ಕವಿತೆಗೆ ಸಮಾಧಾನ ಮುಂದೆ ಈ ಪ್ರಯತ್ನವಿರಲಿ. ಒತ್ತಕ್ಷರವಿರುವ ಪದಗಳನ್ನು ಕಡಿಮೆ ಗೊಳಿಸಿ ಇನ್ನೂ ಸರಳ ವಿರಳ ಪದಗಳ ಬಳಕೆಯಿಂದ ಗಜಲ್ ಇನ್ನೂ ಲಾಲಿತ್ಯಪೂರ್ಣ ವಾಗಿಸಬಹುದಿತ್ತು ಎನ್ನುವ ಅಂಬೋಣ ಮುಂದಿನ ಗಜಲ್ ಗಳಲ್ಲಿ ಕವಿ ಇದನ್ನು ಗಮನಿಸಲಿ. ಸಧ್ಯದ ಕಾಲದ ತಲ್ಲಣಗಳಿಗೆ ಧ್ವನಿಯಾಗಿ ಮೂಡಿಬಂದ ಈ ಗಜಲ್ ಆಲದ ಮರದ ಕೆಳಗೆ ಕುಳಿತು ನೀವು ಒಮ್ಮೆ ಇಲ್ಲಿನ ವಿಚಾರಗಳಿಗೆ ಕಿವಿಯಾಗಿ. ಪುಸ್ತಕ ಬೇಕಾದವರು ಸಂಪರ್ಕಿಸಿ ಶ್ರೀ.ಪ್ರಕಾಶ ಅಂಗಡಿ ಫೋನ್ ಸಂಖ್ಯೆ: 81474 03964 ಜ್ಯೋತಿ ಬಿ ದೇವಣಗಾವ
ಕನ್ನಡಿ ಮುಂದಿನ ನಗ್ನ ಚಿತ್ರಗಳು Read Post »
ಪುಸ್ತಕದ ಹೆಸರು : ಪಿಸುಗುಡುವ ಹಕ್ಕಿ
ಕೃತಿಕಾರರು : ಸರಸ್ವತಿ ಕೆ, ನಾಗರಾಜ್
ಪ್ರಕಾಶಕರು : ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.
ಪ್ರಕಟಣೆ : ಡಿಸೆಂಬರ್ ೨೦೨೧.
ಪುಟಗಳು: ೭೨, ಬೆಲೆ : ೯೦/-
ಪುಸ್ತಕಕ್ಕಾಗಿ ಸಂಪರ್ಕಿಸಿ : ೯೭೪೧೫೬೬೩೧೩
ಲೋಕದ ದನಿಗೆ ಕಿವಿಯಾದ ಗಾಳಿಗೆ ತೊಟ್ಟಿಲ ಕಟ್ಟಿ ಕವಿತೆಗಳು
ಲೋಕದ ದನಿಗೆ ಕಿವಿಯಾದ ಗಾಳಿಗೆ ತೊಟ್ಟಿಲ ಕಟ್ಟಿ ಕವಿತೆಗಳು Read Post »
ಕೃತಿ: ಕನ್ನಡಿ ಮುಂದಿನ ನಗ್ನ ಚಿತ್ರಗಳು (ಗಜಲ್ ಸಂಕಲನ)
ಲೇ: ಪ್ರಶಾಂತ ಅಂಗಡಿ (ಶ್ವೇತಪ್ರಿಯ)
ಪ್ರಕಾಶಕರು: ನೇರಿಶಾ ಪ್ರಕಾಶನ
ಪುಟಗಳು: ೧೦೪
ಬೆಲೆ: ೧೧೦/-
8147403964
ಕನ್ನಡಿ ಮುಂದಿನ ನಗ್ನ ಚಿತ್ರಗಳು Read Post »
ಜಾತಿ ಧರ್ಮಗಳನ್ನು ಮೀರಿದ ಚಿಂತನೆ ಅವಳದ್ದು.ಜಾತಿ.ಧರ್ಮ .ಲಿಂಗಗಳನ್ನು ಮೀರಿದ ಮಾನವೀಯತೆಯ ನ್ನು ತೋರಿಸುವ ಫಣಿಯಮ್ಮ ನಮ್ಮ ನಿಮ್ಮೆಲ್ಲರ ಗಮನ ಸೆಳೆಯುತ್ತಾಳೆ .ವಿಧವೆಯೆಂದು ಮೂಲೆಗೆ ತಳ್ಳಿದ ಒಬ್ಬ ಹೆಣ್ಣಿನಲ್ಲಿ ಅದೆಂತ ಶಕ್ತಿ ಇರಬಹುದು ಎನ್ನುವುದಕ್ಕೆ ಫಣಿಯಮ್ಮ ಸಾಕ್ಷಿಯಾಗಿ ನಿಲ್ಲುತ್ತಾಳೆ.
ಮಲೆನಾಡ ಆಚರಣೆಯ ಒಂದು ನೋಟ ” ಫಣಿಯಮ್ಮ “ Read Post »
You cannot copy content of this page