ಹಕ್ಕಿಯ ದುರಂತ
ಅನುವಾದಿತ ಕವಿತೆ ಹಕ್ಕಿಯ ದುರಂತ ವಿ.ಗಣೇಶ್ ಸಗ್ಗದ ಚೆಲುವಿನ ಹಕ್ಕಿಯು ಒಂದುಭಾನಂಗಳದಿಂದ ಧರೆಗಿಳಿದುಊರಿನ ಮನೆ ಮಂದಿರಗಳ ಮೇಲ್ಗಡೆಹಾರುತಲಿದ್ದಿತು ನಲಿನಲಿದು. ಚಿನ್ನದ ವರ್ಣದ ರನ್ನದ ರೆಕ್ಕೆಯನೀಲಿಯ ಕಂಗಳ ಆ ಹಕ್ಕಿಹಾರುತ ಬರುವುದ ನೋಡಿದ ಮಕ್ಕಳಎದೆಯಲಿ ಆನಂವೆ ಉಕ್ಕಿ ಹಕ್ಕಿಯು ಹಾರುತ ಸಾಗುವ ಜಾಡಲಿತಾವೂ ಓಡುತ ಕೆಳಗಿಂದಕೇಕೆಯ ಹಾಕುತ ನಲಿಯುತಲಿರಲುಜನ ಸೇರಿತು ಅಚ್ಚರಿಯಿಂದ ಎಂಥ ಚೆಂದದ ಚೆಲುವಿನ ಹಕ್ಕಿಏನದು ಚೆಂದ ಆ ಮೈ ಬಣ್ಣ!ಕೈಗದು ಸಿಕ್ಕರೆ ಮಾರಲು ಆಗಕೈತುಂಬ ಹಣ ಝಣ ಝಣ ಮಾರುವುದೇತಕೆ ನಾವೇ ಹಿಡಿದುಕೊಂದೇ ತಿಂದರೆ ಬಹಳ ಮಜಎನ್ನುತ ಬಾಯಲಿ ನೀರೂರಿಸುತಲಿಹೇಳಿದ ಅಲ್ಲಿಯ ಹಿರಿಯಜ್ಜ ಅಷ್ಟರೊಳಗಾಗಲೆ ಬಿಲ್ಲು ಬಾಣಗಳಹಿಡಿದು ಬಂದೊಬ್ಬ ತಲೆ ತಿರುಕಹಕ್ಕಿಯ ನೇರಕೆ ಗುರಿಯನು ಇಟ್ಟುಬಾಣವ ಬಿಟ್ಟನು ಆ ಕಟುಕ ಯಾವ ಪಾಪವನು ಯಾರ ಶಾಪವನುಹೊತ್ತು ಬಂದಿತ್ತೋ ಆ ಹಕ್ಕಿಬಾಣದ ಪೆಟ್ಟಿಗೆ ರಕ್ತವ ಕಾರುತಕೆಳಗಡೆ ಬಿದ್ದಿತು ಮಣ್ಮುಕ್ಕಿ ಚಿನ್ನದ ಬಣ್ಣದ ರನ್ನದ ರೆಕ್ಕೆಯಸುಂದರ ಹಕ್ಕಿಯ ಗತಿ ನೋಡಿನೆರೆದಿಹ ಮಕ್ಕಳು ಊರ ಕರುಣಾಳುಜನರು ಮರುಗಿದರು ಒಗ್ಗೂಡಿ ಬಾಣದ ರಭಸದ ಪೆಟ್ಟಿಗೆ ಹಕ್ಕಿಯುಪುಟ್ಟ ಹೊಟ್ಟೆ ಮಾಂಸವು ಸಿಡಿದುರಕ್ತವು ಚೆಲ್ಲಿ ಮಣ್ಣುಗೂಡಿರಲು‘ತಿನ್ನಲು ಬಾರದು ಇದು’ ಎಂದು ಕೊಂದಿಹ ಕಟುಕ ಸತ್ತ ಹಕ್ಕಿಯನುಎತ್ತಿ ಗಿರಗಿರನೆ ತಿರುಗಿಸುತದೂರಕೆ ಎಸೆಯಲು ಅದು ಅಲ್ಲಿನ ಹೊಳೆಸೇರಿತು ಮೌನವ ಸಾರುತ್ತ ಹೊಳೆಯನು ಅಪ್ಪಿದ ಹಕ್ಕಿಯ ಆತ್ಮವುಹೊಳೆಯ ಕಿವಿಗಳಲಿ ದುಃಖದಲಿಮಾನವ ಕ್ರೌರ್ಯದ ಪರಿಯನು ವರ್ಣಿಸಿಹೇಳುತ ಆ ಹೊಳೆ ಜೊತೆಯಲ್ಲಿ ಸಾಗುತಿರಲು ಆ ಹೊಳೆ ದೇವಿಯುಅಪ್ಪಿ ಅದನು ಸಂತೈಸಿತ್ತುಚೈತ್ರದ ಅಂದಿನ ಆಗಸ ಮೊಗದಲಿಕೆಂಬಣ್ಣದ ತೆರೆ ಮೂಡಿತ್ತು. ************************************************************ ಮೂಲ; In London Town By Mary E.Colridge









