ಆಯ್ಕೆ
ಕವಿತೆ ಮಾಲತಿಹೆಗಡೆ ಹೆತ್ತವರ ಹುಟ್ಟೂರವ್ಯಾಮೋಹ ಬಿಟ್ಟವರು..ಕತ್ತರಿಸಿ ನೆಟ್ಟ ಗಿಡದಂಥವರುನಗರವಾಸಿಗಳಿಗೊಲಿದವರುಹೋದೆಡೆಯೆಲ್ಲ ಚಿಗುರುವಹಟದಲ್ಲಿ ಬೇರು ಬೆಳೆಸಿಕೊಂಡವರಲ್ಲವೇ ನಾವು ? ಅಂಗೈ ಗೆರೆ ಮಾಸುವಷ್ಟುಪಾತ್ರೆ ಬಟ್ಟೆ ಉಜ್ಜಿ ಉಜ್ಜಿಮುಂಬಾಗಿಲು ತೊಳೆದುರಂಗೋಲಿಯಿಕ್ಕಿಕಟ್ಟಡವನ್ನುಮನೆಯಾಗಿಸಿಯೂತವರು ಮನೆ ಯಾವೂರು?ಗಂಡನ ಮನಿ ಯಾವೂರು?ಪ್ರಶ್ನೆ ಎದುರಿಸುತ್ತಅಡುಗೆಮನೆ ಸಾಮ್ರಾಜ್ಯದಲಿಹೊಗೆಯಾಡುವ ಮನಕ್ಕೆತಣ್ಣೀರೆರೆಚಿ ಹೂನಗೆ ಬೀರುವವರಲ್ಲವೇನಾವು? ತೊಟ್ಟಿಲು ತೂಗಿ,ಹೆಮ್ಮೆಯಲಿ ಬೀಗಿವಿರಮಿಸಲೂ ಬಿಡುವಿರದೇಸಂಸಾರ ಸಾವರಿಸಿಹೀಗೆಯೇ ಸಾಗುವುದುಹಣೆಬರಹ ಎನ್ನುತ್ತಬದುಕುವ ನಗರವಾಸಿ ನಾರಿಯರಲ್ಲವೇ ನಾವು? *************









