ತಲ ಷಟ್ಪದಿಯಲ್ಲೊಂದು ಶಿಶುಗೀತೆ
ಪುಟ್ಟನ ಮನೆ ತೇಜಾವತಿ ಹೆಚ್.ಡಿ. ಒಮ್ಮೆ ಪುಟ್ಟಅಮ್ಮನೊಡನೆಸಾಗರ ನೋಡಲೋದರಾಶಿ ರಾಶಿಉಸುಕು ಕಂಡುಕುಣಿದು ಕುಣಿದು ಹಿಗ್ಗಿದ || ಪುಟ್ಟ ನುಣುಪುಉಸುಕಿನಲ್ಲಿಚಂದ ಮನೆಯ ಕಟ್ಟಿದಅಲೆಯು ಬಂದುಕೊಚ್ಚಿ ಹೊಯ್ದುಅಮ್ಮಾ! ಎಂದು ಕೂಗಿದ || ಅಮ್ಮ ಬಂದುಹೇಳು ಕಂದಏಕೆ ಅಳುವೆ ಎನ್ನಲುನೋವಿನಿಂದಉರುಳಿ ಬಿದ್ದಮನೆಯ ತೋರಿ ಹಲುಬಿದ || ಕೇಳು ಮಗನೆಏಕೆ ಅಳುವೆಮರಳ ಮನೆಯು ಕ್ಷಣಿಕವುನೀನು ಕಟ್ಟುಮನದ ಮನೆಯಆತ್ಮ ಛಲವು ಜೊತೆಗಿದೆ || ಒಡನೆ ಪುಟ್ಟಎದ್ದು ನಿಂತುಅಮ್ಮನಪ್ಪಿ ಹೇಳಿದಬಿಡೆನು ನಾನುನಿನ್ನ ಮಾತಒಪ್ಪಿಕೊಂಡೆ ಎಂದನು || ಮಗನ ನುಡಿಯಕೇಳಿ ಅಮ್ಮಪ್ರೀತಿ ಧಾರೆ ಎರೆದಳುಮಿಂದ ಪುಟ್ಟಮಡಿಲ ಸುಖದಿಹೊಸತು ಕನಸ ಕಂಡನು || ಊರಿನಲ್ಲಿಗೆಳೆಯರೊಡನೆಜೀವ ಭಾವ ಹುಡುಕಿದತಂದು ಎಲ್ಲಕೂಡಿ ಕಳೆದುಮನದ ಮನೆಯ ಕಟ್ಟಿದ || ಅಮ್ಮ ನೀನುಬಂದು ನೋಡುಎಂದು ಮುದದಿ ಓಡಿದನೋಡಿ ಅವಳುಶ್ರಮದ ಫಲವುದೊರೆವುದೆಂದು ನುಡಿದಳು || ಅಂದಿನಿಂದಪುಟ್ಟ ತಾನುಕೋಟಿ ಕನಸ ಕಂಡನುಬಿಡದೆ ಹಿಡಿದುತನ್ನ ಛಲವದೊಡ್ಡ ಜಾಣನಾದನು || *****************************
ತಲ ಷಟ್ಪದಿಯಲ್ಲೊಂದು ಶಿಶುಗೀತೆ Read Post »









