ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಅವರ ಕವಿತೆ “ಬಣ್ಣಗಳ ಬೆಡಗು”

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಬಣ್ಣಗಳ ಬೆಡಗು” ನಿನ್ನ ಪ್ರೀತಿಯ ಮಿನುಗು ಕೆಂಪು ಬಣ್ಣದಲಿ ಮಿಂದ ಮನ ನಂದನವಾಯಿತುನಿನ್ನ ಸ್ನೇಹದ ಜಿನುಗು ಹಳದಿ ಬಣ್ಣದಲಿ ಮಿಂದ ಜೀವ ಬಂಧನವಾಯಿತು ಮುಗಿಲ ನೀಲಿ ಬಣ್ಣ ಸೇರುವ ಕನಸುಗಳಲಿ ಮೀಯುತ ಜೀವನ ಚೆಂದವಾಯಿತುನಗುವ ಹಸಿರು ಸಾಗರದಲಿ ಬೆರೆಯುತ ಮೌನಭಾವ ಆನಂದವಾಯಿತು ಕರುಣೆಯ ಕಡಲಿನ ಕೇಸರಿಯ ಅಲೆಯಲಿ ತೇಲಿದ ಬಾಳು ಸಿರಿಗಂಧವಾಯಿತುಒಲವಿನ ಹಣತೆಯ ಶ್ವೇತ ಬೆಳಕಿನ ಹೊನಲಲಿ ಬದುಕು ಚಂದನವಾಯಿತು ಮಳೆಬಿಲ್ಲ ಬಣ್ಣಗಳ ಬಾಂದಳದಿ ನಿತ್ಯ ಸತ್ಯ ಸಾಕ್ಷಾತ್ಕಾರ ಮಂದಾನಿಲಯವಾಯಿತುದೃಷ್ಟಿ ಬೊಟ್ಟಿನಂತೆ ಕಪ್ಪು ನಮ್ಮೀರ್ವರ ಜೊತೆ ಹೆಜ್ಜೆಗಳಿಗೆ ಅಂದವಾಯಿತು ಬಣ್ಣದ ಗರಿಬಿಚ್ಚಿ ಕುಣಿವ ನವಿಲಾಗಿ ಹೋಳಿಯ ರಂಗಿಗೆ  ಕೆನ್ನೆ ಗುಲಾಬಿ ಸಿಂಧುವಾಯಿತುಕಾಮನಬಿಲ್ಲಾಗಿ ಬಾಗಿ ಬಣ್ಣ ಭುವಿಗೆ ಮುತ್ತಿಡುವ ರೀತಿ ಪ್ರೀತಿಯ ಬಿಂದುವಾಯಿತು ಶಶಿ ಚೆಲ್ಲಿದ ಬೆಳ್ಳನೆಯ ಬಿಳಿನೊರೆ ಹಾಲ ಪ್ರೇಮ ಬೆಳದಿಂಗಳಲಿ ಕಂಗಳ ಕಾಂತಿ ಮಂದವಾಯಿತುನಿನ್ನ ನೇಹ ಕರಗಳ ಕರೆಯೇ ಕರಿಕಪ್ಪು ಕತ್ತಲಲಿ ಇಂದುವಿನ ಎದೆ ಬೆಳಕ ಇಂಧನವಾಯಿತು  ಇಂದಿರಾ ಮೋಟೆಬೆನ್ನೂರ

ಇಂದಿರಾ ಮೋಟೆಬೆನ್ನೂರ ಅವರ ಕವಿತೆ “ಬಣ್ಣಗಳ ಬೆಡಗು” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಮೌನ ಸರೋವರ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಮೌನ ಸರೋವರ” ಬಾಲ್ಯದ ಬೆಳಗಿನ ಹೊತ್ತಿನಲ್ಲಿನೀಲಿ ನೀರಿನ ನಿಶ್ಶಬ್ದ,ಪ್ರಶ್ನೆಯೇ ಅರಳದ ದಿನಗಳು,ಉತ್ತರವೇ ಕೇಳದ ಕಾಲ. ಆಕಾಶ ತಬ್ಬಿದ ಸರೋವರ,ಆಟದ ಕಲ್ಲು ಬಿದ್ದರೂನಗು ತೇಲಿ ಹೋದಿತುಮಸುಕು ಮನದವರೆಗೂ ತಲುಪಲಿಲ್ಲ. ಕಾಲ ನಡೆದು ದಾರಿಯಾದಂತೆಹೆಜ್ಜೆಗಳು ಬಂತು ಹಲವು,ಕೆಲವು ನೀರು ತಂದವು,ಕೆಲವು ಮಣ್ಣು ಸುರಿದವು. ನೋವುಗಳು ಇಳಿದವುನೀರಿನ ಆಳದೊಳಗೆ,ಮಾತಿಲ್ಲದೆ ಕುಳಿತವುಸರೋವರದ ಹೃದಯದಲ್ಲಿ. ಭೇದದ ಮೊದಲ ಸ್ಪರ್ಶಅಲೆ ಎಬ್ಬಿಸಿತು,ಹೊರಗೆ ಕದಲಿಕೆ,ಒಳಗೆ ಮೌನ ಗಾಯ. ಸರೋವರ ಮಾತಾಡಲಿಲ್ಲ,ಮೌನವೇ ಅದರ ನಾಡಿ,ಧ್ವನಿಯಿಲ್ಲದ ನೋವೇನೀರಿನ ಭಾಷೆ. ಸಮಾಜ ಬಂದು ನಿಂತುಬಣ್ಣ ಮಾತ್ರ ನೋಡಿತು,ಆಳ ಕೇಳದೆ ತೀರ್ಪುನೀರಿನ ಮೇಲೆ ಬರೆದಿತು. ಬಿರುಗಾಳಿ ಬೀಸಿದರೂನೀರನ್ನೇ ತಪ್ಪೆಂದರೂ,ಮೇಲ್ಮೈ ಕದಡಿದರೂಆಳ ಮಾತ್ರ ನಿಂತಿತು. ಸಂಧ್ಯದ ಹೊತ್ತಿನಲ್ಲಿನೀರು ಕಡಿಮೆಯಾಯಿತು,ಆಳ ಹೆಚ್ಚಾಯಿತು,ಅರ್ಥಗಳು ಗಾಢವಾದವು. ಅಲೆಗಳು ಮೌನವಾಯಿತು,ಹೇಳದ ಕಥೆಗಳುನೀರಿನೊಳಗೆನೆಲೆಯಾದವು. ಆಕಾಶ ಬಿದ್ದರೆ ಹಿಡಿಯುವೆ,ಹೂ ಬಿದ್ದರೆ ಕಾಪಾಡುವೆ,ಕಲ್ಲು ಬಿದ್ದರೂನೀರಾಗಿಯೇ ಇರುವೆ. ಮೌನ ಸರೋವರಕಲ್ಲುಗಳನ್ನು ಕ್ಷಮಿಸಿದ ನೀರು,ಬಿರುಗಾಳಿಗೆ ಸಾಕ್ಷಿಯಾದ ಆಳ,ತೋರಿಸದೆ ಹೊತ್ತ ನೋವು. ಮಾತಿಲ್ಲದೆ ಉಳಿದ ಸಹನೆ,ಒಡೆಯದೆ ನಿಂತ ಶಕ್ತಿಅದೇ ಬದುಕಿನಮೌನ ಸಾರ. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಮೌನ ಸರೋವರ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಸುಳ್ಳಿನ ಬಲೆ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ “ಸುಳ್ಳಿನ ಬಲೆ” ಸುಳ್ಳಿನ ಬಾಯಿಗೆಸಿಗಬಾರದುಯಾಕೆಂದರೆ ಸುಳ್ಳುಮೆರವಣಿಗೆಯಲ್ಲಿರಾಜಾರೋಷವಾಗಿಹೊರಡುವುದು.ಸತ್ಯದ ಬಟ್ಟೆಯುಟ್ಟುಸುಳ್ಳನ್ನು ಮೂಲೆಗೆ ಸರಿಸಿಮುನ್ನೆಯುವುದು,,,ಆದರೆಸತ್ಯ ಒಂಟಿಯಾಗಿನಿಲ್ಲುವುದು.ಸತ್ಯದ ಬೆಳಕಲ್ಲಿ ಇರಲಿನಮ್ಮ ಜೀವನ ಪಥಮೋಸದ ನೆರಳಿಗೆಮನ ಸಾಯಬಾರದು,ನಂಬಿಕೆಯ ಹೂವಿಗೆಸುಳ್ಳಿನ ಮುಳ್ಳುತಾಗಬಾರದುಸುಳ್ಳು ಸಿಹಿ ಮಾತುಹೊದಿಸಿ ಬರುವುದುಕೆಲವೊಮ್ಮೆ,ಸತ್ಯದ ಕಾಠಿಣ್ಯಕಲ್ಲಿನಂತೆ ತೋರುವುದುಕೆಲವೊಮ್ಮೆ.ಆದರೂ ಸತ್ಯವೇದೀಪವಾಗಿ ದಾರಿತೋರಿಸಬೇಕುಆದರೆಸುಳ್ಳು ಮುಖವಾಡಧರಿಸಿ ಕೇಕೆ ಹಾಕುವುದುಅಸತ್ಯದ ಅಂಧಕಾರನಮ್ಮ ಹಾದಿಕೊನೆಯಾಗಬಾರದುಸುಳ್ಳಿನ ನಗುವಿಗೆಮನವುಮರುಳಾಗಬಾರದು,ಸ್ವಾರ್ಥದ ಸುಳಿಯಲ್ಲಿಸತ್ಯ ಮುಳುಗಬಾರದು.ನಿಷ್ಕಳಂಕ ಹೃದಯದಶುದ್ಧ ಶಪಥ ಇರಲಿ,ನೀತಿಯ ನಾದವುನಿತ್ಯ ನಮ್ಮೊಳಗೆ ಹರಡಲಿ.ಸುಳ್ಳು ಕ್ಷಣಿಕ ಮೋಡ,ಸತ್ಯ ಚಿರಂತನ ಆಕಾಶ,ಅದು  ಮುಸುಕಿದ  ಮರೆಸತ್ಯವೇ ಕೊನೆಯ ಪ್ರಕಾಶ.ಆದ್ದರಿಂದ ಜೀವದಪ್ರತಿಯೊಂದು ಹೆಜ್ಜೆಸುಳ್ಳಿನ ಬಾಯಿಗೆಸಿಗದಿರಲಿ ನಮ್ಮ  ಮಾತುಸತ್ಯ ಮೇವ ಜಯತೆ.ಸುಳ್ಳು ಸರಿಯಲಿಹಿಂದೆ ಹಿಂದೆ ಹಿಂದೆ… ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಸುಳ್ಳಿನ ಬಲೆ” Read Post »

ಕಾವ್ಯಯಾನ

ಮಮತಾ ಜಾನೆ ಅವರ ಕವಿತೆ “ಅಮ್ಮನ ಮಡಿಲು”

ಕಾವ್ಯ ಸಂಗಾತಿ ಮಮತಾ ಜಾನೆ “ಅಮ್ಮನ ಮಡಿಲು” ನವಮಾಸವ ಹೊರುವಳುಸಾಟಿ ಇಲ್ಲದ ಪ್ರೀತಿ ತೋರುವಳುಮಮತೆಯ ಸಾಗರದವಳುಕರುಣೆಯ ಗಣಿಯವಳು ಮೊದಲ ಗುರು ಆಗುವಳುಜೀವನ ದಾರಿ ತೋರಿಸುವಳುಧೈರ್ಯವ ತುಂಬುತ ನಡೆಸುವಳುಆತ್ಮವಿಶ್ವಾಸದಿ ಸದಾ ಸ್ಪರ್ಶಿಸುವಳು ಕಣ್ಣೀರು ಒರೆಸಿ ದುಃಖವ ಮರೆಸುವಳುಸಂತೋಷದ ಸಂಗಾತಿಯವಳುತಪ್ಪಿದರೆ ತಿದ್ದಿ ಬುದ್ಧಿ ಹೇಳುವಳುಬದುಕಿಗೆ ಅರ್ಥ ನೀಡುವಳು ಮಕ್ಕಳ ಜೀವನದ ಕನಸು ಕಟ್ಟುವಳುನನಸಾಗಲು ಪ್ರತಿ ಹೆಜ್ಜೆಗೂ ಹೋರಾಡುವಳುಸದಾ ತ್ಯಾಗದ ಮೂರ್ತಿಯವಳುತನ್ನ ಬದುಕೆ ಮುಡಿಪಾಗಿಟ್ಟವಳು ಕಷ್ಟವೋ ಸುಖವೋ ಲೆಕ್ಕಿಸದವಳುಸ್ವಾರ್ಥವ ಇಲ್ಲದ ನಿಸ್ವಾರ್ಥ ಗುಣದವಳುನಿತ್ಯ ಜೀವನದ ಶಕ್ತಿಯವಳುಹೊಗಳಲು ಪದಗಳೇ ಸಾಲದವಳು ಮಮತಾ ಜಾನೆ

ಮಮತಾ ಜಾನೆ ಅವರ ಕವಿತೆ “ಅಮ್ಮನ ಮಡಿಲು” Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ ಕವಿತೆ ” ಪ್ರೀತಿ”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ ” ಪ್ರೀತಿ” ಹೆರಿಗೆ ನೋವಮರೆತ ಅಮ್ಮನಂತೆಎದೆಗಪ್ಪಿ ಕೊಳ್ಳುತ್ತದೆ ಪ್ರೀತಿ ಮನಸಲ್ಲಿ ಹುಟ್ಟಿಕನಸಲ್ಲಿ ಸತ್ತುಮಾತನ್ನೇ ಮೌನವಾಗಿಸಿನಿದ್ದೆ ಇರದ ಕನಸುಕಾಣುವದು ಪ್ರೀತಿ.. ಭಾವನೆಗಳ ಬರಿದಾಗಿಸಿಭರವಸೆಗಳ ಹುಸಿಯಾಗಿಸಿದಿನಚರಿಯನ್ನೇಉಸಿರಾಗಿಸುವದು ಪ್ರೀತಿ…. ಗುರಿಯಿಲ್ಲದ ಪಯಣಬೆಳಕಿಲ್ಲದ ದಾರಿ.ಕಷ್ಟ.ಕಣ್ಣೀರು.ನಿಟ್ಟುಸಿರ ದಾಟಿಬಿಡುವೆನೆಂಬಹುಸಿನಂಬಿಕೆ ಪ್ರೀತಿ.. ಆಕಾಶದಿಹಾರಾಡಿಸಾಗರಗಳನೇ..ಜಾಲಾಡಿಮುತ್ತು.ರತ್ನ.ಹರಳು…ತಂದುಬಿಡುವೆನೆಂಬಮರುಳು..ಪ್ರೀತಿ ದ್ವೇಷದ ಅಗ್ಗಿಷ್ಠಿಕೆಯಲ್ಲಿಬೆಂದರೂಬೆವರದೇಸದ್ದು ಮಾಡದೇನುಗ್ಗಿ ಬರುವಾಗಎದೆಗುಂದ ದಿರುವದುಪ್ರೀತಿ ಭರವಸೆಗಳಿಗೆ ಬಣ್ಣತುಂಬಿಬಯಕೆಗಳಿಗೆಭಯವಾಗದಂತೆಉತ್ಸಾಹದ ಚಿಗುರುಚಿಮ್ಮಿಸುವದು ಪ್ರೀತಿ ತೆತ್ತು ಗಳಿಸುವದಿಲ್ಲಉತ್ತು ಬೆಳೆಸುವದು ಪ್ರೀತಿಮೂಡಣ ದಿಕ್ಕಿನಮೂಡುಗಾಳಿಯಲ್ಲ ಪ್ರೀತಿ ಕಪಟ ಪ್ರೇಮದ ಉಳಿ ಎಟಿಗೆಶಿಲೆಯಾದರೂಮನದಲ್ಲೆ ನಗುವದು ಪ್ರೀತಿ ರೆಕ್ಕೆ ಮುರಿದಹಕ್ಕಿಯಂತಾದರೂ..ಮುರಿದ ವೀಣೆಗೆಒಲವಿನ ಸ್ವರವಕಲಿಸುವದುಪ್ರೀತಿ ಗಡಿಗಳೆಲ್ಲೇ ಮೀರಿಅಡಿಯಿಡುವಪ್ರೀತಿಯ ದಾರಿಗೆ ಸುಂಕವಿಲ್ಲಸ್ವಾಭಿಮಾನದ ಬಿಂಕವಿಲ್ಲ ಬಲ್ಲವರು ಎಂಬುವರುಕಣ್ಣಿಲ್ಲ ಪ್ರೀತಿಗೆಅಂತರಂಗದ ಬೆಳಕಿರುವದುಸುಳ್ಳಲ್ಲ ಪ್ರೀತಿಗೆ ಬೊಗಸೆಯೊಡ್ಡಿ ಕಾಯುವದುಸಾವಿನ ತನಕಮಸಣದಲ್ಲೂಜೊತೆ ಯಾಗಿರುವದು ಪ್ರೀತಿ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಅವರ ಕವಿತೆ ” ಪ್ರೀತಿ” Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ “ಗಾಳಿ ಎಳೆಗೆ……….”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಗಾಳಿ ಎಳೆಗೆ……….” ಎಲ್ಲೋ ಕುಳಿತಕೋಗಿಲೆಯೊಂದು ಕೂಗುತ್ತಿತ್ತುಸುಮ್ಮನೇಮರದ ತುದಿಗೆ ಗಾಳಿ ಎಳೆಗೆಹೇಳುತ್ತಿತ್ತು ಹಾಡನೇಆಚೆ ನೋಡಿ ಈಚೆ ನೋಡಿಜಗವನ್ನೆಲ್ಲಾ ತಿರುಗಿ ನೋಡಿರಾಗದಲ್ಲಿ ತಾಳ ಬೆರೆಸಿಕೂಗುತ್ತಿತ್ತು ಮೆಲ್ಲನೆಜೀವದಲ್ಲೇ ಜೀವನಹಾಡಿನಲ್ಲೇ ಪಾವನಸಗ್ಗವೆಂಬ ಪ್ರೀತಿಗೆನೂರು ಭಾವ ರೀತಿಗೆಗಾಳಿಯೊಂದು ನಾಳೆಗೆಉಸಿರೊಂದು ಉಳಿವಿಗೆಹಾಡುತ್ತಿತ್ತು ಕೋಗಿಲೆತನ್ನ ದಿನದ ರೂಢಿಗೆನೋವನ್ನೆಲ್ಲಾ ಮರೆತುಬಾಳಿದರೆ ಒಳಿತುಬುವಿಯ ಒಳಗೆಜೀವವೊಂದು ಗುರುತು ನಾಗರಾಜ ಬಿ. ನಾಯ್ಕ ́

ನಾಗರಾಜ ಬಿ. ನಾಯ್ಕ “ಗಾಳಿ ಎಳೆಗೆ……….” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ‌ ಅವರ ಕವಿತೆ “ನಿನ್ನೀಮೌನ”

ಕಾವ್ಯಸಂಗಾತಿ ಕಲ್ಪನಾ ಎಸ್ ಪಾಟೀಲ‌ “ನಿನ್ನೀಮೌನ” ನೀ ತಾಳಿದ ಮೌನವು ಮಾತಿಗಿಂತ ಆಳವಾದ ಭಾಷೆ ನನಗಾಗಿದೆನನ್ನದೆ ಆಗಿದೆ ಸಖ ಅದನರಿವ ಆಸೆ ಅದು ಈ ಮನದೊಳಗೆ ಎದ್ದಿಹ ಸಾಗರದಲೆಗಳಶಾಂತಗೊಳಿಸುತ್ತಿದೆ ಶಬ್ದಕೆ ನಿಶ್ಯಬ್ಧವ ಕಲಿಸುತ್ತಿದೆ ಶಬ್ದಗಳು ನಿಂತಾಗ ಮೌನದೊಳಡಗಿದ ಅರ್ಥಗಳುಉಸಿರಾಡುತ್ತಿವೆ ಎಣಿಸಲು ತಪ್ಪುತ್ತಿಹ ಸಾಲುಗಳು ನಿನ್ನ ಕಣ್ಣಿನ ನೋಟವೇ ಕಥೆಯಾಗಿ ಹರಡುತ್ತದೆಎಂದೂ ಮಾಸದ ನೋವಿಗೆ ಆ ಮೌನವು ಮದ್ದಾಗಿದೆ ನನ್ನ ಸಂತೋಷಕ್ಕೂ ಸೌಮ್ಯ ವಸಂತವೂ ಹೌದುಗದ್ದಲದ ನಡುವೆ ಮೌನ ದೀಪದಂತೆ ಹೊಳೆವುದು ಹೃದಯದ ಸ್ಪಂದನಗಳನ್ನು ಕೇಳಲು ಕಲಿಸುತ್ತಿದೆಪ್ರಕೃತಿಯ ಪಾಠ ಮೌನದಲ್ಲೇ ಬರೆಯಲ್ಪಟ್ಟಿದೆ ಮರಗಳು ನದಿಗಳು ಸಹ ಅದನ್ನೇ ಜಪಿಸುತ್ತಿವೆಮೌನದಲ್ಲಿ ಆತ್ಮ ತನ್ನನ್ನು ತಾನು ಕಂಡುಕೊಳ್ಳುತ್ತಿದೆ ಅಹಂಕಾರ ಕರಗುವ ಕ್ಷಣವೂ ಅದೇ ಆಗಿದೆಮಾತುಗಳು ತಪ್ಪಿದಾಗ ಮೌನ ಸತ್ಯವ ಹೇಳುತ್ತಿದೆ ಕೋಪವ ಶಮನಗೊಳಿಸಿ ಬುದ್ಧಿಯ ಬೆಳಗಿಸುತ್ತಿದೆಮೌನವೇ ಶಕ್ತಿ ಮೌನವೇ ಶಾಂತಿ ಮೌನದಲೆ ಹೇಳಿದೆ ಮೌನದಲ್ಲಿ ಜೀವನ ತನ್ನ ಅರ್ಥವನ್ನು ಪತ್ತೆಹಚ್ಚುತ್ತಿದೆಆ ಜೀವನದ ಜೀವ ಸಖ ನೀನಾಗಿಹೆ ಎಂದೆ ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ‌ ಅವರ ಕವಿತೆ “ನಿನ್ನೀಮೌನ” Read Post »

ಕಾವ್ಯಯಾನ

ದೇವರಾಜ್ ಹುಣಸಿಕಟ್ಟಿ ಅವರ ಕವಿತೆ “ಮೂಡಬಹುದು ದೇವರು..”

ಕಾವ್ಯ ಸಂಗಾತಿ ದೇವರಾಜ್ ಹುಣಸಿಕಟ್ಟಿ “ಮೂಡಬಹುದು ದೇವರು..” ಹರೆಯದ ಕೈ ಗೊಂಬೆ..ಮೊನ್ನೆ ಮೊನ್ನೆಯಿಂದಅಂಗೈಯಲಿ ಆಡುತಿದೆ.. ಬಾಲ್ಯದಲಿ ಅಪ್ಪ ಕೊಡಿಸಿದ ಗೊಂಬೆ.. ಈಗ ಆಡಿಲ್ಲ..ಈಗೀಗ ಈ ಗೊಂಬೆ ಜೊತೆಗೆ ಆಡದಿರಲಾಗುವುದಿಲ್ಲ.. ಅರಸುತ್ತ ಹೆಜ್ಜೆ ಹೆಜ್ಜೆಗೂಕನಸುತ್ತ ಇರುಳಿರುಳಿಗೂಅರಳುವ ಮುದುಡುವಾಟದಲಿ…ತಲ್ಲಿನವಾಗಿ… ಆಗಸದ ನೆರಳುಸಾಗರದ ಅಲೆಗಳ ಮೇಲೆಮೂಡದಂತೆ ಒಂದೊಂದೇ..ನೀಲಿ ಚಿತ್ರಗಳು ತೆರೆದುಕೊಳ್ಳುತ್ತವೆ..ಕಣ್ಣು ತಟದಲಿ…ಬೆತ್ತಲಾದ ಚಿತ್ರಗಳು ಅಲೆಗಳಂತೆ..ದಡಕ್ಕೆ ಚಿಮ್ಮಿ ಮರಳುತ್ತವೆ..ಮತ್ತೊಂದು ಸರದಿಗೆ..ಕಾಯುತ್ತ ಕನಸುವವರೆಗೆ…ಮನದ ಪಟದಲಿ… ಒಂದೊಂದು ಆಟಕೂಮೋಜಿನ ಮಂಪರು…ಆರ್ಭಟ ಯುದ್ದೋನ್ಮಾದ..ಅರೆಗಳಿಗೆ..ಅಗ್ನಿ ಪರ್ವತ ದಿಂದಲಾವಾರಸ ಚಿಮ್ಮಿ ಹಾಗೆ.. ಹೊರಗೆ…ಬರಿದಾಗುವವರೆಗೆ.. ಆಗಾಗ ಲೊಮ್ಮೆ ಅಪರೂಪಕ್ಕೆರಕ್ತ ಚಂದನದಿ ಸ್ನಾನ ಮಾಡಿದ ಗರ್ಭ ಗುಡಿಯ ಹೊಕ್ಕು ಬರುವುದೂ ಇದೆ ಗೊಂಬೆ… ಅಲ್ಲಿ ಆಗ ಮೂಡಬಹುದು ದೇವರು..! ದೇವರಾಜ್ ಹುಣಸಿಕಟ್ಟಿ

ದೇವರಾಜ್ ಹುಣಸಿಕಟ್ಟಿ ಅವರ ಕವಿತೆ “ಮೂಡಬಹುದು ದೇವರು..” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿಯವರ ಕವಿತೆ “ಹೀಗಿರಲಿ ಬದುಕು”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಹೀಗಿರಲಿ ಬದುಕು” ಹೀಗಿರಲಿ ಬದುಕುಬಯಕೆಗಳ ಹೊರೆ ಹೊತ್ತುಸಾಗುವ ದಾರಿಯಲಿನನಸಾಗುವ ಕನಸುಗಳಿರಬೇಕು ಮನದ ಗೂಡಿನಲ್ಲಿಗೆಲುವಿನ ಹೆಜ್ಜೆ ಹಾಕುತ್ತಬಾನೆತ್ತರಕ್ಕೆ ಬೆಳೆಯಬೇಕು ಸೋಲು ಗೆಲುವಿನ ನಡುವೆಸವಾಲುಗಳ ಸೇತುವೆ ಕಟ್ಟಿಸಂತಸದಿ ಸಾಗಬೇಕು ಭಾವಗಳ ಬೆಸೆಯುತ್ತಹೊಸತನವ ಅರಸುತ್ತನಸುನಗುತ ನಲಿಯಬೇಕು ಸದ್ದಿಲ್ಲದೆ ಸಾಧಿಸುತಸುದ್ದಿಯಾಗಿ ಸಂಭ್ರಮಿಸಿಗದ್ದಲವಿಲ್ಲದೆ ಗದ್ದುಗೆ ಏರಬೇಕುಡಾ. ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿಯವರ ಕವಿತೆ “ಹೀಗಿರಲಿ ಬದುಕು” Read Post »

ಕಾವ್ಯಯಾನ

“ನನ್ನೊಳಗಿನ ನಾನು” ಸುಧಾ ಪಾಟೀಲ್

ಕಾವ್ಯ ಸಂಗಾತಿ ಸುಧಾ ಪಾಟೀಲ್ “ನನ್ನೊಳಗಿನ ನಾನು”   ನಾನೇ ನಗೆ, ನಾನೇ ಅಳುವ ನಿಶಬ್ದ ರಾತ್ರಿ ನಾನೇ  ಕತ್ತಲು ನಾನೇ ಬೆಳಕಿನ ಪಾತಿ ಹೊರಗಿನ ಹಾದಿಯಲಿ ನಾನು ಬೇರೆಯವರಂತೆ ಆದರೆ ಒಳಗಿನ ನಾನು ಇನ್ನೂ ಹುಡುಕುತ್ತಿರುವೆ  ಮನದ ಕಿಟಕಿಯಲಿ ಮೌನ ನಿಂತಿದೆಅಲ್ಲಿ ಹಳೆಯ ಕನಸು ಒಂದೇ ನಗುತ್ತಿದೆ ಹೃದಯದ ಕಣ್ಣಿನಲ್ಲಿ ಕಾಣುವ ಪ್ರತಿಬಿಂಬ  ಅದು ಯಾರು ? ನಾನೋ ?  ಇಲ್ಲ,  ನನ್ನೊಳಗಿನ  ನಾನು  ಒಮ್ಮೆ ಭಯ ಒಮ್ಮೆ ಧೈರ್ಯ ಒಮ್ಮೆ ಅಳಲು ಒಮ್ಮೆ ನಗುಈ ಎರಡರ ನಡುವಿನ ಸೇತುವೆಯಲಿನಾನೇ ನಿರ್ಮಾಪಕ ನಾನೇ ಸಂಚಾರಿ  ಹೊರಗಿನ ಲೋಕ ಬದಲಾದರೂ ಪರವಾಗಿಲ್ಲ ಒಳಗಿನ ನಾನು ಅರಳಬೇಕು ಅದು ನಿಜವಾದ ಸ್ವಾತಂತ್ರ್ಯಅದು ನಿಜವಾದ ಜೀವ ನಾದ ಸುಧಾ ಪಾಟೀಲ

“ನನ್ನೊಳಗಿನ ನಾನು” ಸುಧಾ ಪಾಟೀಲ್ Read Post »

You cannot copy content of this page

Scroll to Top