ಕಾವ್ಯಯಾನ
ಬರೆಯದಿರಲಾರೆ…. ನಾಗರಾಜ ಹರಪನಹಳ್ಳಿ ಅಕ್ಷರಗಳು ಆತ್ಮಹತ್ಯೆ ಮಾಡಿಕೊಂಡಿವೆಕೆಲವರಿಗೆ ಮಾರಾಟವಾಗಿವೆ ಹಸಿ ಮಾಂಸಲ ದಂಧೆಗೆಗೊತ್ತಾ ನಿನಗೆ?ಕೆಲವೆಡೆ ಫತ್ವಾ ಇದೆ ಬೆಳಕಿಗೆ ಇನ್ನೇನಾಗಬಹುದು??ಪನ್ಸಾರೆ, ಕಲಬುರ್ಗಿ, ಗೌರಿ ಕೊಂದ ನಾಡಿನಲ್ಲಿ??ಬರೆವ ಕೈಗಳ,ನಿಜದ ಮಾತಿಗೆ ಬೀಗ ಜಡಿದ ಮೇಲೆ ??ಕೊಲೆಯಾಗಿದೆ ಅಭಿವ್ಯಕ್ತಿ! ಗೊತ್ತಾ ನಿನಗೆ ??ಅಮಾಸ, ಠೊಣ್ಣಿಯರ ಹಸಿವು ಹಿಂಗಿಲ್ಲಸಾಕವ್ವ ಬದುಕಿನ ಜಂಜಾಟ ನಿಂತಿಲ್ಲ; ಹರಕು ಸೀರೆ ,ಮುರಿದ ಮನೆ ಕಟ್ಟಲಾಗಿಲ್ಲಐತ ಪೀಂಚಲು ಬದುಕ ಕಟ್ಟಲು ಅಲೆದಾಡುತ್ತಿದ್ದಾರೆಚೋಮುನ ಭೂಮಿ ಹೊಂದುವ ಕನಸು ಕನಸಾಗಿಯೇ ಇದೆ…ನಾಡದೊರೆಯ ಕಣ್ಣು ಬದಲಾಗಿಲ್ಲ ಹೀಗಿರುವಾಗ…ನನಗೆ ನಾಚಿಕೆಯಾಗುತ್ತದೆಮಳೆ ನದಿ ಕಾಡು ಬೆಟ್ಟ ಕಡಲು ದಂಡೆ ಕಾಮನಬಿಲ್ಲನ ಬಗ್ಗೆ ಕವಿತೆ ಬರೆದದ್ದಕ್ಕೆ… ಇನ್ನು ಬರೆಯದಿರಲಾರೆ ಮನುಷ್ಯರ ಸಂಚುಗಳ ಬಗ್ಗೆಆತ್ಮವಂಚನೆಗಳ ಬಗ್ಗೆಹಸಿದವರ ಬಗ್ಗೆಬರೆಯದೇ ಇರಲಾರೆ ಹಾಗೆ ಬರೆಯದೇ ನಾಮೌನಿಯಾದರೆ ; ಅಕ್ಷರಗಳ ಯಜಮಾನಿಕೆಗೆ ಒತ್ತೆ ಇಡದೆಅಕ್ಷರಗಳ ಜೊತೆ ಬದುಕುತ್ತೇನೆಇಲ್ಲವೇ …… *****************************









