ಡಾ.ಅಜಿತ್ ಹರೀಶಿ ಕಾವ್ಯಗುಚ್ಛ
ಡಾ.ಅಜಿತ್ ಹರೀಶಿ ಕಾವ್ಯಗುಚ್ಛ ನಿರೀಕ್ಷೆ ಗೀಜಗನ ಗೂಡಿನಂತಿದ್ದ ಮನಮನೆಯೇ ಮುರಿದ ದಿನಬುಗಿಲೆದ್ದ ಹಗೆಗೆ ಸತ್ತುಒಡಹುಟ್ಟಿದವರ ನೆನೆದು ಅತ್ತುತಿಳಿಯಾದ ಮನವು ಋಜುಒಡೆದದ್ದು ನಾಜೂಕು ಗಾಜುಚೂರುಗಳ ಜೋಡಿಸಲೇಹೃದಯಗಳು ಬೆಸೆಯಲೇಬೇಕು ಸಂಬಂಧ ನಾಳೆಗೊಂದು. ನಕ್ಕು ಹಗುರಾಗುತ್ತಿದ್ದ ಬಾಳುಒಣ ಜಂಭದ ರೀತಿಗೆ ಹಾಳುಮಾತು ಮಸಣವಾಗಿದೆತುಮುಲ ಸರಿಪಡಿಸಲಾಗದೆಭಾವನೆಗಳು ಹೊಂದದೆಮುನಿಸು ಸರಿಸಿಸೋತರೇನಂತೆ ನಗಿಸಿಮರಳಿ ಬಂದರೆ ಮನ್ನಿಸಿಬಾರದಿದ್ದರೆ ಕ್ಷಮಿಸಿಕಾಯ್ದರೆ ನಗು ನಾಳೆಗೊಂದು. ಮೀನಿನ ಹೆಜ್ಜೆ ಕಡಲ ದಾರಿಗುಂಟ ಸಾಗಿದೆನೆಲ ನುಂಗುವವರೆಗೂ ನಡೆದೆಕಾಲ, ನಿನ್ನ ಹೆಜ್ಜೆ ಗುರುತೊಂದೆಅಳಿಸಿ ಸಾಗಿತ್ತು, ಕಾಣಗೊಡದೆ. ಕಾಮ ಮೋಹಾದಿಗಳ ಕಡಿಯಲುಬಹುದೂರದ ದಾರಿಯು ಗೋಜಲುಪ್ರೀತಿತ್ಯಾಗಕ್ಕೂ ಮುಳ್ಳಿನ ಹಾಸುಸಿಗದ ಹಾಗೆ ಕರಗಿದೆ ಮನಸು. ಹತ್ತಾರು ವರ್ಷಗಳ ಸವೆದುಒಂದೇ ಸೂರಿನಡಿ ಬಾಳಿದ್ದುಅರೆಕ್ಷಣದಲಿ ದೂರಾದದ್ದುಆಳವಿಲ್ಲದ ನಂಬುಗೆಯೊಂದು. ಅರಿತೆನೆಂದು ಅವನ ಬೆರೆತೆಅರಿಯಗೊಡದವನ ನಡತೆಇಷ್ಟು-ಎಷ್ಟು ಅರಿತರೇನಂತೆಮರೆಯಗೊಡದವನ ಚಿಂತೆ. ದಯವಿಟ್ಟು ಗಮನಿಸಿ… ಸಂಗಾತಿಯಲ್ಲದೇ ಇನ್ಯಾರೋಸುರತವೆಂದೂ ಸುರಕ್ಷಿತವಲ್ಲಬೇಕೆಂದಾಗ ಬಂಜೆತನಬೇಡವಾದಾಗ, ಆಸೆಬಿಟ್ಟಾಗ ಕಟ್ಟುವ ಗರ್ಭಬೆನ್ನಿಗಂಟುವ ರೋಗದಯವಿಟ್ಟು ಗಮನಿಸಿ… ಅಪಘಾತಗಳೆಲ್ಲ ಆಕಸ್ಮಿಕಗಳಲ್ಲಅಲಕ್ಷ್ಯ, ಆತುರ, ಔತ್ಸುಕ್ಯಕೂಡ ಕಾರಣವಿರಬಹುದಲ್ಲಎದುರಾಗುವವನ ಅಚಾತುರ್ಯಕೂಡ ಕಲ್ಪಿಸಿಕೊಳ್ಳಬೇಕಲ್ಲದಯವಿಟ್ಟು ಗಮನಿಸಿ… ಯುಗ ಬದಲಾಗಿದೆಸ್ವರ್ಗ ನರಕಗಳೆಲ್ಲವೂಇಲ್ಲೇ ಸೃಷ್ಟಿಯಾಗಿದೆಬದುಕಿನ ಕಂದಾಯ ಕಟ್ಟುವಕೌಂಟರ್ ಇಲ್ಲಿಯೇ ಇದೆದಯವಿಟ್ಟು ಗಮನಿಸಿ… ದಿವ್ಯದೃಷ್ಟಿ ಸೂರಿಗೆ ಮಾರಿಗೆಎಲ್ಲೆಲ್ಲೂ ಟವರ್ ಲೊಕೇಷನ್ಗೆಸುಲಭದ ಬೇಟೆ ಅಪರಾಧಕ್ಕೆಅಪರಾಧಿಯಾಗದ ಸೂತ್ರಸೀದಾ ಸಾದಾ ಸುಸೂತ್ರನೆಮ್ಮದಿಗೊಂದೇ ಮಂತ್ರದಯವಿಟ್ಟು ಗಮನಿಸಿ…
ಡಾ.ಅಜಿತ್ ಹರೀಶಿ ಕಾವ್ಯಗುಚ್ಛ Read Post »









