ನೆನಪುಗಳ ಸುತ್ತ” ರಿತೇಶ್ ಕಿರಣ್ ಕಾಟುಕುಕ್ಕೆ ಅಂದು..,ನನ್ನಪ್ಪ ಸೋರುವಮುಳಿ ಮಾಡಿನೆಡೆಗೆದೃಷ್ಟಿ ನೆಟ್ಟಿದ್ದ.,ನಾವೋ…..ಅಂಗಳದ ಬದಿಯಲ್ಲೋಹರಿವ ತೊರೆಯ ಬದಿಯಲ್ಲೋಉದುರುವ ಮಳೆಹನಿಗಳ ಜೊತೆಹರಿವ ನೀರಿನ ಜೊತೆಮೈ ಮರೆಯುತ್ತಿದ್ದೆವು…… ಅಮ್ಮನೂ..,ಅಷ್ಟೇ., ನೀರು ಹೀರಿದಸೌದೆಯ ಒಲೆಗಿರಿಸಿಕಣ್ಣು ಕೆಂಪಗಾಗಿಸಿಊದಿಸಿಕೊಂಡಿದ್ದಳು..,ಮೂರು ಹೊತ್ತುಹೊಟ್ಟೆ ತಣಿಯದಿದ್ದರೂಒಂದು ಹೊತ್ತಿಗಾದರೂಪಾತ್ರೆ ಪಗಡೆಗಳಸದ್ದಾಗುತಿತ್ತುಹೊಟ್ಟೆ ಸಮಾಧಾನಿಸುತ್ತಿತ್ತು……, ಹರಿದ.,ಅರಿವೆಗೆ ತೇಪೆ ಹಾಕಿಸಿವರುಷವಿಡಿ ಕಳೆದರೂಯಾವುದೇ ಸಂಕೋಚವಿರಲಿಲ್ಲಮನೆಯ ಒಳಗೂಹೊರಗಿನ ಜಗುಲಿಗೂ..,ದಾಟಿದರೆ ಅಂಗಳಕ್ಕೆ ಮಾತ್ರನಮ್ಮ ಮಾತುಗಳು ಕೇಳಿಸುತಿತ್ತು.ನಮ್ಮ ಕನಸುಗಳೂ ಅಷ್ಟೇ..!ಅಷ್ಟಕ್ಕೇ ಸೀಮಿತವೋ..?ತಿಳಿಯೆ ನಾ………., ಅಪ್ಪ ದಿನಾ.,ಮಳೆಯಲ್ಲಿ ತೋಯುತ್ತಿದ್ದಸಂಜೆಗೆ ನಮ್ಮಆತ್ಮೀಯ ಗೆಳೆಯನಾಗುತ್ತಿದ್ದ.ಒದ್ದೆಯಾದ ವಸ್ತ್ರದಅರಿವೂ ಅವನಿಗಿಲ್ಲ.,ಚಳಿಯ ಅನುಭವವೂ ಅವನಿಗಿಲ್ಲ.,ನಮ್ಮ ಮುಖವ ನೋಡಿಎಲ್ಲವ ಮರೆಯುತ್ತಿದ್ದಮುಖವರಳಿಸಿ ನಗುತ್ತಿದ್ದ...….., ಮನೆಯಮಾಡಿನ ಮೇಲೆಹೊಗೆ ಸುರುಳಿಯಾಡುವಾಗಇತ್ತ ನೇಸರನು ಓಡಿದ್ದ..,ಹೊರಗೆನಾಯಿ ಬೊಗಳಿದರೂಒಳಗೆಬೆಕ್ಕು ಸುತ್ತಿ ಸುತ್ತಿ ಬರುವಾಗಲೂಅಮ್ಮ ಮಾತ್ರಒಲೆಯ ಬಾಯಿಗೆ ಪಹರೆಯಾಗಿದ್ದಳು.!ಇಂದು..,ಅದೆಲ್ಲ ನೆನಪುಗಳು ಮಾತ್ರ………., ಹೊರಗೆಮೈ ಕೈಗೆ ಮಣ್ಣಮೆತ್ತಿಸಿಕೊಂಡ ಅಪ್ಪ.,ಒಳಗೆ ಬೂದಿಮೆತ್ತಿಸಿಕೊಂಡ ಅಮ್ಮ.,ಜ್ಞಾನ ದೇಗುಲದಬಾಗಿಲ ಕಾಣದಿದ್ದರೂ..,ಅನ್ನ.., ನೀರಿನಅರಿವೂ ಇತ್ತುಮಣ್ಣ ವಾಸನೆಯೂಮೈಗಂಟಿಯೇ ಇತ್ತು………. *************************