ವಸುಂಧರಾ ಕಾವ್ಯಗುಚ್ಛ
ವಸುಂಧರಾ ಕದಲೂರು ಕಾವ್ಯಗುಚ್ಛ ಮುಖ್ಯ- ಅಮುಖ್ಯ ಮೇಲುಕೀಳಾಟದ ಯಾವತ್ತೂಯುದ್ಧ ಬೇಕಿಲ್ಲ. ಈ ಹೊತ್ತಿನ ತುತ್ತು;ಎಂದಿಗೆ ಒಲೆ ಹೊತ್ತಿ ಅನ್ನವೋಗಂಜಿಯೋ ಬೆಂದರಾಗುತ್ತಿತ್ತು, ಈಸತ್ಯದ ಬಾಬತ್ತೇ ನಮಗೆ ಮುಖ್ಯ. ಚದುರಂಗದಾಟ ಎಂದೆಣಿಸಿ, ದಾಳಉದುರಿಸಿ, ಗಾಳ ಹಾಕಿ -ದಾಳಿಮಾಡಿ, ಕೋಟೆಗೋಡೆಗಳನು ಕಟ್ಟುತ್ತಾಕೆಡವುತ್ತಾ, ಸಿಂಹಾಸನಾರೋಹಣ,ಪದಾಘಾತ- ಅಧಃಪತನ ಯಾರಿಗಾದರೇನು?ನಮಗೆ ಅಮುಖ್ಯ. ಯುದ್ಧವೆಂದರೆ ಕಂದನ ತೊಟ್ಟಿಲಮೇಲೆ ತೂಗುಬಿದ್ದ ಘಟಸರ್ಪ; ಕಕ್ಕಿದರೂಕುಕ್ಕಿದರೂ ಆಪತ್ತೇ. ಬದುಕು ಕಸಿದಂತೆ,ಆಸೆ ಕುಸಿದಂತೆ ಮಾಡುವೀ ಅಜೀವನ್ಮುಖಿಯುದ್ಧ ನಮಗೆ ಅಮುಖ್ಯ. ಹೂವಿನೊಡಲ ಮಕರಂದಕೆ ಎರವಾಗುವದುಂಬಿಯಾಡುವ ಯುದ್ಧ; ಮಳೆಮೋಡದತಡೆಗೆ ಬೆಟ್ಟ ಸಾಲು ಹೂಡುವ ಹುಸಿ ಯುದ್ಧ,ಹಸಿದ ಒಡಲ ತಣಿಸಲು ಅವ್ವನಂತವರಒಡಲ ಬೇಗುದಿಯ ಯುದ್ಧ ; ದುಡಿಮೆಗಾರರನಿರಂತರ ರಟ್ಟೆ ಯುದ್ಧ ನಮಗೆ ಬಲು ಮುಖ್ಯ. ‘ಅರಿವೇ ಗುರು’ ದೀಪವಾರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ-ಕತ್ತಲು, ಒಳಹೊರಗೂ.. ಮೌನಕ್ಕೆ ಶರಣಾಗಿ ಕಿವುಡುಗಿವಿತೆರೆದಿದ್ದೆ, ಶಾಂತಿಯೆಂದರೆಶಾಂತಿ ಒಳಹೊರಗೂ.. ಇತಿಮಿತಿಯ ಅರಿವಾಯ್ತು ಈಗ,ನನ್ನದು ಮತ್ತೂ ಹೆಚ್ಚಾಗಿ ಅವರದು.ಜಾಗರೆಂದರೆ ಜಾಗರೂಕಳೀಗ.. ಮಮತೆ ಕಣ್ತೆರೆದು, ಒಲವಿನಲೆಶುಭನುಡಿಯ ಉಲಿದಾಗಹರುಷವೆಂದರೆ ಹರುಷವೀಗ.. ಮತ್ತೆ ಕಣ್ತೆರೆದುಕೊಂಡೆ, ಒಳಹೊರಗುಅರಿಯುವ ಹಂಬಲದಲಿ ಇರುಳಿನಿಂದೆದ್ದುಬರುವ ತಾಜಾಸೂರ್ಯ ಕಂಡ.ಬೆಳಕೆಂದರೆ ಬೆಳಕೀಗ!! ಪದ- ಪದಕ ಪದಗಳ ಗೀಳು ಹಿಡಿಸಿಕೊಂಡುಪದಗಡಲೊಳಗೆ ಮುಳುಗುಹಾಕಿಗಿರಕಿಹೊಡೆದದ್ದು ಸಾಕೆನಿಸಿ ಮೇಲೆದ್ದುಬಂದರೆ, ಪುನಃ ಪದಗಳೇ ರಾಶಿರಾಶಿದಂಡೆಯಲಿ ಬಿದ್ದಿದ್ದವು ಮರುಳಾಗಿ… ಸದ್ದುಗದ್ದಲದ ಗೂಡ ಹೊರಗೆ ಹಾರಿ,ನಡುಗುಡ್ಡೆ ಕಾನನದೆಡೆ ನೀರವ ಹುಡುಕಿ,ಹಾಗೇ ತಪಸಿಗೆ ಕುಳಿತರೆ ಪದಗಳೇವಿಸ್ತರಿಸಿದವು. ಧ್ಯಾನ ನಿಮೀಲಿತನೇತ್ರದೊಳು ಪದಪತ್ರ ಬಿಂದು!ಕರ್ಣದುಂಬಿತು ಪದೋಚ್ಚಾರಮಂತ್ರಪಠಣ!! ಪದನರಿದು ವಿಸ್ತರಿಸಲು ತೊಡಗಿ,ಅಪೂರ್ಣ ಪದವಾಗಿ, ಪೂರ್ಣಲಯಮೈದಳೆಯದ ಮರೀಚಿಕೆಯಾಗಿ,ಪದಗಳ ಹಳುವ ಸರಿಸಿ, ಕಾನನದಂಚಿನ ಮರುಭೂಮಿ ಎಡೆಗೆ ಓಡೋಡಿ ಬಂದರೂ,ಬೆನ್ನಹತ್ತಿತು ಪದ ಮಾಯಾಮೃಗವಾಗಿ… ಪದವೆಂದರೆ ಮಾಯೆ. ಬಿಟ್ಟ ಮಾಯೆಯಲ್ಲ ಬಿಡಿಸಿಕೊಳುವ ಹುಂಬತನವೂ ನನದಲ್ಲ.ಪದ-ಪದಕವಾಗಿ ಕೊರಳಿಗೆ ಬಿದ್ದು, ಬೆನ್ನಹತ್ತಿ ಬಂದರೆ, ಹೊರೆ ಎನದೆ ನಾ ಹೇಗೆಧರಿಸದಿರಲಿ..? ***************************************
ವಸುಂಧರಾ ಕಾವ್ಯಗುಚ್ಛ Read Post »









