ನೈವೇದ್ಯ
ಕವಿತೆ ನೈವೇದ್ಯ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಮೂರು ಕಲ್ಲುಗಳ ಒಲೆನನ್ನ ಮನಸ್ಸು!ಹಳದಿ ಮೈಯ ಕೆಂಪು ನಾಲಗೆಯನ್ನುಊರ್ಧ್ವಕ್ಕೆ ಕೊರಳುದ್ದಕ್ಕೂ ಚಾಚಿ ಚಾಚಿಕಾಯಮಡಕೆಯನ್ನು ನೆಕ್ಕುತ್ತಿರುತ್ತದೆಬೆಂಕಿಬಾಳು! ಒಂದು ದೀರ್ಘ ಕಾಯುವಿಕೆಯಲ್ಲಿಪ್ಲುತಕಾಲಗಳ ಬೇಯುವಿಕೆ…ಅಕ್ಕಿ ಗುಳುಗುಳು ಕುದಿಯುತ್ತ ಅಂಗುಳಅಗುಳು ಅಗುಳೂ ಅನ್ನವಾಗುತ್ತದೆಆಹಾ! ಉದುರುದುರು ಮಲ್ಲಿಗೆ ಹೂವು!ಬಟ್ಟಲು ತುಂಬ ಹರಿದಾಡುವ ಮುತ್ತು!ಅನ್ನ ಜೀವವಾಗುತ್ತದೆ… ಪರಮ ಅನ್ನ! ಬ್ರಹ್ಮ ವಿಷ್ಣು ಮಹೇಶ್ವರ ಪುಟುಪುಟುಅಂಬೆಗಾಲಿಡುತ್ತಿದ್ದಾರೆ…ಚಿಗುರು ಬೆರಳ ಚುಂಚದಲ್ಲಿ ಹೆಕ್ಕಿ ಹೆಕ್ಕಿಬಾಯಿ ಬ್ರಹ್ಮಾಂಡದಲ್ಲಿ ತುಂಬಿಕೊಳ್ಳಲು!ಒಬ್ಬನ ಕೈಯ ಕೆಂದಾವರೆಗೆಮತ್ತೊಬ್ಬನ ಹೊಕ್ಕುಳ ಕುಂಡದ ದಂಟಲ್ಲಿ ನಗುಹುಟ್ಟಿಗೆ ಬದುಕಿನ ನಂಟು!ಹೊಕ್ಕುಳಬಳ್ಳಿ… ಅಮೃತಬಳ್ಳಿ! ಮಗದೊಬ್ಬನ ನೊಸಲಲಿ ಒಲೆಯಬೂದಿಯೆ ವಿಭೂತಿ! ಕಾಯಮಡಕೆಯಲ್ಲಿನನ್ನ ಪ್ರಾಣವೀಗಅನ್ನ ನೈವೇದ್ಯ! ***************************









